------------------------------------------------------------------------------------ ------------------------------------------------------------------------------------- --------------------------------------------------------------------------------------------- ---------------------------------------------------------------------------------------------
Want to Learn More(ಹೆಚ್ಚಿನ ಕಲಿಕೆಗಾಗಿ) ... Click Here or Subscribe

ದೇವ ಪರಿಕಲ್ಪನೆ ಸಿಖ್ ಧರ್ಮದಲ್ಲಿ

ಸಿಖ್ ಧರ್ಮವು ಸೆಮಿಟಿಕೇತರ, ಆರ್ಯ, ವೈದಿಕೇತರ ಧರ್ಮವಾಗಿದೆ. ಇದು ಜಗತ್ತಿನ ಪ್ರಮುಖ ಧರ್ಮವಲ್ಲದಿದ್ದರೂ 15ನೇ ಶತಮಾನದಲ್ಲಿ ಗುರು ನಾನಕರಿಂದ ಸ್ಥಾಪಿಸಲ್ಪಟ್ಟ ಹಿಂದೂ ಧರ್ಮದ ಒಂದು ಶಾಖೆ ಅಥವಾ ಅದರಿಂದ ಕವಲೊಡೆದ ಒಂದು ಧರ್ಮವಾಗಿದೆ. ಇದು ಪಾಕಿಸ್ಥಾನ ಮತ್ತು ವಾಯುವ್ಯ ಭಾರತದ ಪಂಜಾಬ್ ಎಂಬ ಪ್ರಾಂತ್ಯದಲ್ಲಿ ಉದ್ಭವಿಸಿದ್ದಾಗಿದೆ. ಪಂಜಾಬ್ ಎಂದರೆ ಐದು ನದಿಗಳ ನಾಡು ಎಂದರ್ಥ.  ಗುರು ನಾನಕರು ಹಿಂದೂ ಕ್ಷತ್ರಿಯ ಕುಟುಂಬದಲ್ಲಿ ಜನಿಸಿದ್ದರೂ ಇಸ್ಲಾಮ್ ಮತ್ತು ಮುಸ್ಲಿಮರಿಂದ ಬಹಳ ಪ್ರಭಾವಿತರಾಗಿದ್ದರು.

ಸಿಖ್ ಅಥವಾ ಸಿಖ್ ಧರ್ಮದ ಅರ್ಥ ನಿರೂಪಣೆ

ಸಿಖ್ ಎಂಬ ಪದವು ಶಿಷ್ಯ ಎಂಬ ಪದದಿಂದ ಉದ್ಭವಿಸಿದೆ. ಇದರರ್ಥ ವಿದ್ಯಾರ್ಥಿ ಅಥವಾ ಅನುಯಾಯಿ. ಸಿಖ್ ಧರ್ಮವು ಹತ್ತು ಗುರುಗಳ ಧರ್ಮವಾಗಿದೆ. ಗುರು ನಾನಕರು ಮೊದಲನೆಯ ಗುರು ಮತ್ತು ಗುರು ಗೋಬಿಂದ್ ಸಿಂಗ್ ಹತ್ತನೆಯ ಮತ್ತು ಕೊನೆಯ ಗುರುವಾಗಿದ್ದಾರೆ. ಶ್ರೀ ಗುರು ಗ್ರಂಥವು ಸಿಖ್ ಧರ್ಮೀಯರ ಪವಿತ್ರ ಗ್ರಂಥವಾಗಿದೆ. ಇದನ್ನು ‘ಆದಿ ಗ್ರಂಥ ಸಾಹಿಬ್’ ಎಂದೂ ಕರೆಯಲಾಗುತ್ತದೆ.

ಐದು ‘K’ ಗಳು

ಪ್ರತಿಯೋರ್ವ ಸಿಖ್ಖನ ಜೊತೆಗೆ ಐದು ‘K’ ಗಳಿರಬೇಕು. ಇದು ಅವನ ಗುರುತು ಕೂಡ ಹೌದು.

  1. Kesh (ಕೇಶ): ಕತ್ತರಿಸದ ಕೂದಲು. ಎಲ್ಲ ಗುರುಗಳೂ ಇದನ್ನು ಇಟ್ಟಿದ್ದರು.
  2. Kangha (ಕಂಘ): ಬಾಚಣಿಗೆ. ಕೂದಲನ್ನು ಶುಚಿಯಾಗಿಡುವ ಸಲುವಾಗಿ.
  3. Kada (ಕಡ): ಲೋಹದ ಬಳೆ. ಬಲ ಮತ್ತು ಆತ್ಮನಿಗ್ರಹದ ಪ್ರತೀಕ.
  4. Kirpan (ಕೃಪಾಣ): ಸಣ್ಣ ಕತ್ತಿ. ಸ್ವರಕ್ಷಣೆಗಾಗಿ.
  5. Kaccha (ಕಚ್ಚ): ಮೊಣಕಾಲಿನವರೆಗಿರುವ ಒಳವಸ್ತ್ರ. ಚುರುಕಾಗುವುದಕ್ಕಾಗಿ.

ಮೂಲ ಮಂತ್ರ: ಸಿಖ್ ಧರ್ಮದ ಮೂಲ ವಿಶ್ವಾಸ

ಸಿಖ್ ಧರ್ಮದ ದೇವ ಪರಿಕಲ್ಪನೆಯ ಬಗ್ಗೆ ಒಬ್ಬ ಸಿಖ್ಖನು ನೀಡುವ ಅರ್ಥ ನಿರೂಪಣೆಯು ‘ಮೂಲ ಮಂತ್ರ’ವನ್ನು ಪಠಿಸುವುದಾಗಿದೆ. ಈ ಮೂಲ ಮಂತ್ರವು ಸಿಖ್ ಧರ್ಮದ ಮೂಲಭೂತ ವಿಶ್ವಾಸವಾಗಿದೆ. ಇದನ್ನು ಗುರು ಗ್ರಂಥದ ಆದಿಯಲ್ಲೇ ಕಾಣಬಹುದು.

ಶ್ರೀ ಗುರು ಗ್ರಂಥ ಸಾಹಿಬ್ ಭಾಗ 1 ಜಾಪೂಜಿ ಮೊದಲ ವಚನದಲ್ಲಿ ಹೀಗಿದೆ:

“ಏಕೈಕ ದೇವನು ಮಾತ್ರವೇ ಅಸ್ತಿತ್ವದಲ್ಲಿರುವನು. ಅವನು ಸತ್ಯ, ಸೃಷ್ಟಿಕರ್ತ, ಭಯ ಮತ್ತು ದ್ವೇಷದಿಂದ ಮುಕ್ತನಾಗಿರುವವನು, ಶಾಶ್ವತನು, ಜನಿಸಿದವನಲ್ಲ, ಸ್ವ ಅಸ್ತಿತ್ವವುಳ್ಳವನು, ಮಹಾನನು ಮತ್ತು ಕರುಣಾಮಯಿ.”

ಸಿಖ್ ಧರ್ಮವು ತನ್ನ ಅನುಯಾಯಿಗಳಿಗೆ ಏಕದೇವೋಪಾಸನೆಯನ್ನು ನಿಷ್ಠುರವಾಗಿ ಬೋಧಿಸುತ್ತದೆ. ಮಹೋನ್ನತನಾದ ಏಕೈಕ ದೇವನಲ್ಲಿ ಅದು ವಿಶ್ವಾಸವಿಡುತ್ತದೆ. ಅವನು ತನ್ನ ಅಪ್ರಕಟಿತ ರೂಪದಲ್ಲಿ ‘ಏಕ್ ಓಂಕಾರ’ ಎಂದು ಕರೆಯಲ್ಪಡುತ್ತಾನೆ ಮತ್ತು ತನ್ನ ಪ್ರಕಟಿತ ರೂಪದಲ್ಲಿ ‘ಓಂಕಾರ’ ಎಂದು ಕರೆಯಲ್ಪಡುತ್ತಾನೆ.

ಅವನಿಗೆ ಹಲವಾರು ವಿಶೇಷಣಗಳಿವೆ:

ಕರ್ತಾರ್ – ಸೃಷ್ಟಿಕರ್ತ

ಸಾಹಿಬ್ – ಪ್ರಭು

ಅಕಾಲ್ – ಶಾಶ್ವತ

ಸತ್ತನಾಮ – ಪವಿತ್ರ ನಾಮ

ಪರ್ವರ್ದಿಗಾರ್ – ಸಂರಕ್ಷಕ

ರಹೀಮ್ – ಕರುಣಾಮಯಿ

ಕರೀಮ್ – ದಯಾಮಯ

ಅವನನ್ನು ವಾಹೆ ಗುರು – ಏಕೈಕ ಸತ್ಯ ದೇವ ಎಂದೂ ಕರೆಯಲಾಗುತ್ತದೆ.

ಸಿಖ್ ಧರ್ಮವು ಕಟ್ಟಾ ಏಕದೇವ ಧರ್ಮವಾಗಿರುವುದರ ಜೊತೆಗೆ ಅದು ಅವತಾರ ವಾದವನ್ನು ನಿರಾಕರಿಸುವ ಧರ್ಮವೂ ಆಗಿದೆ. ದೇವನು ಅವತಾರ ತಾಳುವುದನ್ನು ಅದು ನಿರಾಕರಿಸುತ್ತದೆ. ಹಾಗೆಯೇ ಅದು ವಿಗ್ರಹ ಪೂಜೆಯನ್ನು ಕೂಡ ಪ್ರಬಲವಾಗಿ ವಿರೋಧಿಸುತ್ತದೆ.

ಗುರು ನಾನಕ್ ಕಬೀರ್‍ರಿಂದ ಪ್ರಭಾವಿತರಾಗಿದ್ದರು

ಗುರು ನಾನಕರು ಸಂತ ಕಬೀರರ ವಚನಗಳಿಂದ ಎಷ್ಟರ ಮಟ್ಟಿಗೆ ಪ್ರಭಾವಿತರಾಗಿದ್ದರೆಂದರೆ ಶ್ರೀ ಗುರು ಗ್ರಂಥ ಸಾಹಿಬ್‍ನಲ್ಲಿ ಸಂತ ಕಬೀರರ ಅನೇಕ ದ್ವಿಪದಿಗಳಿರುವ ಅನೇಕ ಅಧ್ಯಾಯಗಳನ್ನು ಕಾಣಬಹುದಾಗಿದೆ.

ಸಂತ ಕಬೀರರ ಪ್ರಸಿದ್ಧವಾದ ದ್ವಿಪದಿಗಳಲ್ಲಿ ಒಂದು ಹೀಗಿದೆ:

ದುಃಖ್ ಮೇ ಸುಮಿರಾನಾ ಸಬ್ ಕರೇ ಸುಖ್ ಮೇ ಕರೇ ನ ಕೋಯಿ

ಜೋ ಸುಖ್ ಮೇ ಸುಮಿರಾನಾ ಕರೇ ತೋ ದುಃಖ್ ಕಾಯೇ ಹುಯೇ

“ದುಃಖದ ಸಂದರ್ಭದಲ್ಲಿ ಎಲ್ಲರೂ ದೇವನನ್ನು ಸ್ಮರಿಸುತ್ತಾರೆ. ಆದರೆ ಸುಖದ ಸಂದರ್ಭದಲ್ಲಿ ಯಾರೂ ಅವನನ್ನು ಸ್ಮರಿಸುವುದಿಲ್ಲ. ಸುಖದ ಸಂದರ್ಭದಲ್ಲಿ ಯಾರು ದೇವನನ್ನು ಸ್ಮರಿಸುತ್ತಾನೋ ಅವನಿಗೆ ದುಃಖವುಂಟಾಗುವುದಾದರೂ ಹೇಗೆ?”

ಇದನ್ನು ಈ ಕೆಳಗಿನ ಕುರ್‍ಆನ್ ವಚನದೊಂದಿಗೆ ಹೋಲಿಸಿ ನೋಡಿ:

﴿ وَإِذَا مَسَّ الْإِنْسَانَ ضُرٌّ دَعَا رَبَّهُ مُنِيبًا إِلَيْهِ ثُمَّ إِذَا خَوَّلَهُ نِعْمَةً مِنْهُ نَسِيَ مَا كَانَ يَدْعُو إِلَيْهِ مِنْ قَبْلُ وَجَعَلَ لِلَّهِ أَنْدَادًا لِيُضِلَّ عَنْ سَبِيلِهِ قُلْ تَمَتَّعْ بِكُفْرِكَ قَلِيلًا إِنَّكَ مِنْ أَصْحَابِ النَّارِ ﴾

“ಯಾವುದಾದರೂ ಹಾನಿಯು ಮನುಷ್ಯನನ್ನು ಸ್ಪರ್ಶಿಸಿದರೆ ಅವನು ತನ್ನ ಪ್ರಭುವಿನಲ್ಲಿ ಅವನೆಡೆಗೆ ಪಶ್ಚಾತಾಪಪಟ್ಟು ಮರಳುತ್ತಾ ಪ್ರಾರ್ಥಿಸುತ್ತಾನೆ. ತರುವಾಯ ಅವನು (ಅಲ್ಲಾಹು) ತನ್ನ ವತಿಯ ಒಂದು ಅನುಗ್ರಹವನ್ನು ಅವನಿಗೆ ಒದಗಿಸಿದಾಗ ತಾನು ಈ ಹಿಂದೆ ಪ್ರಾರ್ಥಿಸಿರುವುದನ್ನೇ ಅವನು (ಮನುಷ್ಯನು) ಮರೆತುಬಿಡುತ್ತಾನೆ ಮತ್ತು ಅಲ್ಲಾಹನೊಂದಿಗೆ (ಇತರರನ್ನು) ಪ್ರತಿಸ್ಪರ್ಧಿಗಳನ್ನಾಗಿ ಮಾಡಿಕೊಳ್ಳುತ್ತಾನೆ.” (ಆದರಣೀಯ ಕುರ್‍ಆನ್ 39/8)

(ಮುಂದುವರೆಯುತ್ತದೆ إن شاء الله‎‎)

Pin It on Pinterest

Please Share This

Share this post with your family & friends! ನಿಮ್ಮ ಕುಟುಂಬ ಹಾಗೂ ಗೆಳೆಯರೊಟ್ಟಿಗೆ ಈ ಸಂದೇಶವನ್ನು ಓದಲಿ!!

error: Alert: Content is protected !!
Subscribe To Our Newsletter
ನಮ್ಮ ವಾರ್ತಾಪತ್ರಕ್ಕೆ ಸದದ್ಯರಾಗಿರಿ.

Subscribe To Our Newsletter

ನಮ್ಮ ವಾರ್ತಾಪತ್ರಕ್ಕೆ ಸದದ್ಯರಾಗಿರಿ.

CONGRATS! YOU HAVE SUCCESSFULLY SUBSCRIBED. ಶುಭಾಷಯಗಳು! ನೀವು ಯಶಸ್ವಿಯಾಗಿ ಚಂದಾದಾರರಾಗಿದ್ದೀರಿ. Keep your eyes peeled for my next email! ನಮ್ಮ ಮುಂದಿನ ಇ-ಮೇಲ್‌ಗಳಿಗಾಗಿ ನಿಮ್ಮ ಕಣ್ನುಗಳನ್ನು ಕಾಯ್ದಿರಿಸಿಕೊಳ್ಳಿ!

body { font-family: “Poppins”, sans-serif; }