------------------------------------------------------------------------------------ ------------------------------------------------------------------------------------- --------------------------------------------------------------------------------------------- ---------------------------------------------------------------------------------------------
Want to Learn More(ಹೆಚ್ಚಿನ ಕಲಿಕೆಗಾಗಿ) ... Click Here or Subscribe

ದೇವ ಪರಿಕಲ್ಪನೆ ಪಾರ್ಸಿ ಧರ್ಮದಲ್ಲಿ

ಪಾರ್ಸಿ ಅಥವಾ ಝರತುಷ್ಟ್ರ ಧರ್ಮವು 2500 ವರ್ಷಗಳ ಹಿಂದೆ ಪರ್ಶಿಯಾದಲ್ಲಿ ಉದ್ಭವಿಸಿದ ಪುರಾತನ ಆರ್ಯ ಧರ್ಮವಾಗಿದೆ. ಇದು ಜಾಗತಿಕವಾಗಿ 1,30,000ಕ್ಕಿಂತಲೂ ಕಡಿಮೆ ಸಂಖ್ಯೆಯ ಅನುಯಾಯಿಗಳನ್ನು ಹೊಂದಿರುವುದಾದರೂ ಜಗತ್ತಿನ ಅತಿಪುರಾತನ ಧರ್ಮಗಳಲ್ಲಿ ಒಂದಾಗಿದೆ. ಇರಾನಿನ ಪ್ರವಾದಿ ಝರತುಷ್ಟ್ರ (Zoroaster) ಈ ಧರ್ಮದ ಸ್ಥಾಪಕರು. ದಸಾತಿರ್ ಮತ್ತು ಅವೆಸ್ತಾ ಪಾರ್ಸಿಗಳ ಪವಿತ್ರ ಗ್ರಂಥಗಳಾಗಿವೆ.

ಪಾರ್ಸಿ ಧರ್ಮದಲ್ಲಿ ದೇವನು ‘ಅಹುರಾ ಮಝ್ದಾ’ ಎಂದು ಅರಿಯಲ್ಪಡುತ್ತಾನೆ. ಅಹುರಾ ಎಂದರೆ ‘ಪ್ರಭು’ ಮತ್ತು ಮಝ್ದಾ ಎಂದರೆ ‘ಚಾಣಾಕ್ಷ’. ಆದ್ದರಿಂದ ಅಹುರಾ ಮಝ್ದಾ ಎಂದರೆ ಚಾಣಾಕ್ಷ ಪ್ರಭು ಅಥವಾ ಚಾಣಾಕ್ಷ ದೇವ ಎಂದರ್ಥ. ಅಹುರಾ ಮಝ್ದಾ ಏಕಮೇವ ದೇವನಾಗಿದ್ದಾನೆ.

ದಸಾತೀರ್ ಪ್ರಕಾರ ದೇವನ ಗುಣವಿಶೇಷಣಗಳು

ದಸಾತೀರ್ ಪ್ರಕಾರ ಅಹುರಾ ಮಝ್ದಾನಿಗೆ ಈ ಕೆಳಗಿನ ವಿಶೇಷಣಗಳಿವೆ:

 1. ಅವನು ಏಕೈಕನು
 2. ಅವನಿಗೆ ಹೋಲಿಕೆಯಾಗಿ ಏನೊಂದೂ ಇಲ್ಲ
 3. ಅವನಿಗೆ ಆದಿಯೂ ಇಲ್ಲ ಅಂತ್ಯವೂ ಇಲ್ಲ
 4. ಅವನಿಗೆ ತಂದೆಯಾಗಲಿ, ತಾಯಿಯಾಗಲಿ, ಪತ್ನಿಯಾಗಲಿ, ಮಗನಾಗಲಿ ಇಲ್ಲ
 5. ಅವನಿಗೆ ಶರೀರವಾಗಲಿ ರೂಪವಾಗಲಿ ಇಲ್ಲ
 6. ಕಣ್ಣುಗಳು ಅವನನ್ನು ಕಾಣಲಾರದು, ಆಲೋಚನೆಯು ಅವನನ್ನು ಗ್ರಹಿಸಲಾರದು
 7. ನೀವು ಪರಿಭಾವಿಸುವ ಪ್ರತಿಯೊಂದಕ್ಕಿಂತಲೂ ಅವನು ಮಹೋನ್ನತ ನಾಗಿದ್ದಾನೆ
 8. ಅವನು ನಿಮ್ಮ ಆತ್ಮಕ್ಕಿಂತಲೂ ನಿಮಗೆ ಹತ್ತಿರದಲ್ಲಿದ್ದಾನೆ

ಅವೆಸ್ತಾ ಪ್ರಕಾರ ದೇವನ ವಿಶೇಷಣಗಳು

ಅವೆಸ್ತಾದ ಪ್ರಕಾರ ‘ಗಾಥಾ’ಗಳು ಮತ್ತು ‘ಯಸ್ನಾ’ಗಳು ಅಹುರಾ ಮಝ್ದಾನಿಗೆ ಅನೇಕ ವಿಶೇಷತೆಗಳನ್ನು ನೀಡುತ್ತವೆ:

 1. ಸೃಷ್ಟಿಕರ್ತ (ಯಸ್ನಾ 31/7, 31/11, 44/7, 50/11, 51,7)
 2. ಅತ್ಯಂತ ಪ್ರಬಲನು, ಮಹೋನ್ನತನು (ಯಸ್ನಾ 33/11, 45/6)
 3. ದಯಾಮಯನು – ಹುದಾಯಿ (ಯಸ್ನಾ 33/11, 48/3)
 4. ಉದಾರಿ – ಸ್ಪೆನ್ತಾ (ಯಸ್ನಾ 43/4, 5, 7, 9, 11, 13, 15, 44/2, 45/5, 46/9, 48/3)

Pin It on Pinterest

Please Share This

Share this post with your family & friends! ನಿಮ್ಮ ಕುಟುಂಬ ಹಾಗೂ ಗೆಳೆಯರೊಟ್ಟಿಗೆ ಈ ಸಂದೇಶವನ್ನು ಓದಲಿ!!

error: Alert: Content is protected !!
Subscribe To Our Newsletter
ನಮ್ಮ ವಾರ್ತಾಪತ್ರಕ್ಕೆ ಸದದ್ಯರಾಗಿರಿ.

Subscribe To Our Newsletter

ನಮ್ಮ ವಾರ್ತಾಪತ್ರಕ್ಕೆ ಸದದ್ಯರಾಗಿರಿ.

CONGRATS! YOU HAVE SUCCESSFULLY SUBSCRIBED. ಶುಭಾಷಯಗಳು! ನೀವು ಯಶಸ್ವಿಯಾಗಿ ಚಂದಾದಾರರಾಗಿದ್ದೀರಿ. Keep your eyes peeled for my next email! ನಮ್ಮ ಮುಂದಿನ ಇ-ಮೇಲ್‌ಗಳಿಗಾಗಿ ನಿಮ್ಮ ಕಣ್ನುಗಳನ್ನು ಕಾಯ್ದಿರಿಸಿಕೊಳ್ಳಿ!

body { font-family: “Poppins”, sans-serif; }