------------------------------------------------------------------------------------ ------------------------------------------------------------------------------------- --------------------------------------------------------------------------------------------- ---------------------------------------------------------------------------------------------
Want to Learn More(ಹೆಚ್ಚಿನ ಕಲಿಕೆಗಾಗಿ) ... Click Here or Subscribe

ದೇವ ಪರಿಕಲ್ಪನೆ ಯಹೂದ ಧರ್ಮದಲ್ಲಿ

ಯಹೂದ ಧರ್ಮವು ಪ್ರಮುಖ ಸೆಮಿಟಿಕ್ ಧರ್ಮಗಳಲ್ಲಿ ಒಂದಾಗಿದೆ. ಅದರ ಅನುಯಾಯಿಗಳನ್ನು ಯಹೂದಿಗಳೆಂದು ಕರೆಯಲಾಗುತ್ತದೆ. ಅವರು ಪ್ರವಾದಿ ಮೋಶೆ [ಮೂಸಾ(ಅ)]ರವರ ಪ್ರವಾದಿತ್ವದಲ್ಲಿ ವಿಶ್ವಾಸವಿಡುತ್ತಾರೆ.

ಧರ್ಮೋಪದೇಶಕಾಂಡದಲ್ಲಿರುವ ಈ ಕೆಳಗಿನ ವಚನವು ಪ್ರವಾದಿ ಮೋಶೆ [ಮೂಸಾ(ಅ)]ರವರ ಬೋಧನೆಯನ್ನು ಈ ರೀತಿ ಸೂಚಿಸುತ್ತದೆ:

“Shama Israelu adonai ila hayno adna ikhad”

“ಇಸ್ರಾಯೇಲ್ಯರೇ, ಕೇಳಿರಿ; ನಮ್ಮ ದೇವರಾದ ಕರ್ತನು ಒಬ್ಬನೇ ದೇವರು.” (ಧರ್ಮೋಪದೇಶಕಾಂಡ 6/4)

ಯೆಶಾಯನ ಪುಸ್ತಕದಲ್ಲಿರುವ ಈ ಕೆಳಗಿನ ವಚನಗಳನ್ನು ನೋಡಿರಿ:

“ನಾನೇ, ನಾನೇ ಕರ್ತನು; ನಾನು ಹೊರತು ಯಾವ ರಕ್ಷಕನೂ ಇಲ್ಲ.” (ಯೆಶಾಯ 43/11)

“ನಾನೇ ಕರ್ತನು, ಇನ್ನು ಯಾವನೂ ಅಲ್ಲ, ನಾನು ಹೊರತು ಯಾವ ದೇವರೂ ಇಲ್ಲ.” (ಯೆಶಾಯ 45/5)

“ನಾನೇ ದೇವರು, ಇನ್ನು ಯಾರೂ ಅಲ್ಲ; ನಾನೇ ಪರಮ ದೇವರು, ನನಗೆ ಸರಿಸಮಾನರಿಲ್ಲ.” (ಯೆಶಾಯ 46/9)

ಈ ಕೆಳಗಿನ ವಚನದಲ್ಲಿ ಯಹೂದ ಧರ್ಮವು ವಿಗ್ರಹಾರಾಧನೆಯನ್ನು ಕಠಿಣವಾಗಿ ವಿರೋಧಿಸುತ್ತದೆ:

“ನಾನಲ್ಲದೆ ನಿನಗೆ ಬೇರೆ ದೇವರುಗಳು ಇರಬಾರದು. ಯಾವ ಮೂರ್ತಿಯನ್ನೂ ಮಾಡಿಕೊಳ್ಳಬಾರದು. ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ಭೂಮಿಯ ಕೆಳಗಣ ನೀರಿನಲ್ಲಾಗಲಿ ಇರುವ ಯಾವದರ ರೂಪವನ್ನೂ ಮಾಡಿಕೊಳ್ಳಬಾರದು. ಅವುಗಳಿಗೆ ಅಡ್ಡಬೀಳಲೂ ಬಾರದು ಪೂಜೆ ಮಾಡಲೂ ಬಾರದು. ನಿನ್ನ ದೇವರಾದ ಕರ್ತನೆಂಬ ನಾನು ನನಗೆ ಸಲ್ಲತಕ್ಕ ಗೌರವವನ್ನು ಮತ್ತೊಬ್ಬನಿಗೆ ಸಲ್ಲಗೊಡಿಸದವನು.” (ವಿಮೋಚನಕಾಂಡ 20/3-5)

ಇದೇ ರೀತಿಯ ಸಂದೇಶವನ್ನು ಧರ್ಮೋಪದೇಶಕಾಂಡದಲ್ಲಿಯೂ ಪುನರಾವರ್ತಿಸಲಾಗಿದೆ.

“ನಾನಲ್ಲದೆ ನಿನಗೆ ಬೇರೆ ದೇವರುಗಳು ಇರಬಾರದು. ಯಾವ ಮೂರ್ತಿಯನ್ನೂ ಮಾಡಿಕೊಳ್ಳಬಾರದು. ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ಭೂಮಿಯ ಕೆಳಗಣ ನೀರಿನಲ್ಲಾಗಲಿ ಇರುವ ಯಾವದರ ರೂಪವನ್ನೂ ಮಾಡಿಕೊಳ್ಳಬಾರದು, ಅವುಗಳಿಗೆ ಅಡ್ಡಬೀಳಲೂ ಬಾರದು, ಪೂಜೆಮಾಡಲೂ ಬಾರದು. ನಿನ್ನ ದೇವರಾದ ಕರ್ತನೆಂಬ ನಾನು ನನಗೆ ಸಲ್ಲತಕ್ಕ ಗೌರವವನ್ನು ಮತ್ತೊಬ್ಬನಿಗೆ ಸಲ್ಲಗೊಡಿಸದವನು.” (ಧರ್ಮೋಪದೇಶಕಾಂಡ 5/7-9)

Pin It on Pinterest

Please Share This

Share this post with your family & friends! ನಿಮ್ಮ ಕುಟುಂಬ ಹಾಗೂ ಗೆಳೆಯರೊಟ್ಟಿಗೆ ಈ ಸಂದೇಶವನ್ನು ಓದಲಿ!!

error: Alert: Content is protected !!
Subscribe To Our Newsletter
ನಮ್ಮ ವಾರ್ತಾಪತ್ರಕ್ಕೆ ಸದದ್ಯರಾಗಿರಿ.

Subscribe To Our Newsletter

ನಮ್ಮ ವಾರ್ತಾಪತ್ರಕ್ಕೆ ಸದದ್ಯರಾಗಿರಿ.

CONGRATS! YOU HAVE SUCCESSFULLY SUBSCRIBED. ಶುಭಾಷಯಗಳು! ನೀವು ಯಶಸ್ವಿಯಾಗಿ ಚಂದಾದಾರರಾಗಿದ್ದೀರಿ. Keep your eyes peeled for my next email! ನಮ್ಮ ಮುಂದಿನ ಇ-ಮೇಲ್‌ಗಳಿಗಾಗಿ ನಿಮ್ಮ ಕಣ್ನುಗಳನ್ನು ಕಾಯ್ದಿರಿಸಿಕೊಳ್ಳಿ!

body { font-family: “Poppins”, sans-serif; }