------------------------------------------------------------------------------------ ------------------------------------------------------------------------------------- --------------------------------------------------------------------------------------------- ---------------------------------------------------------------------------------------------
Want to Learn More(ಹೆಚ್ಚಿನ ಕಲಿಕೆಗಾಗಿ) ... Click Here or Subscribe

بِسْمِ اللهِ الرَّحْمـَنِ الرَّحِيم

ದೇವ ಪರಿಕಲ್ಪನೆ ಪ್ರಮುಖ ಧರ್ಮಗಳಲ್ಲಿ

ಪ್ರಸ್ತಾವನೆ:

ಅನೇಕ ಧರ್ಮಗಳು ಮತ್ತು ಆಧ್ಯಾತ್ಮಿಕ ಪದ್ಧತಿಗಳು ನಮ್ಮ ನಾಗರಿಕತೆಯ ವೈಶಿಷ್ಠ್ಯಗಳಲ್ಲಿ ಸೇರಿದ ಪ್ರಮುಖ ವೈಶಿಷ್ಠ್ಯವಾಗಿದೆ. ಸೃಷ್ಟಿಯ ಹಿನ್ನೆಲೆಯ ಕುರಿತು ಮತ್ತು ಅದರಲ್ಲಿ ತನ್ನ ಪಾತ್ರದ ಕುರಿತು ಅರಿತುಕೊಳ್ಳಲು ಮನುಷ್ಯನು ಸದಾ ಅನ್ವೇಷಿಸುತ್ತಲೇ ಇದ್ದಾನೆ.

ಯುಗಗಳನ್ನು ದಾಟಿ ಬಂದಿರುವ ಮಾನವೇತಿಹಾಸವನ್ನು ಅಧ್ಯಯನ ಮಾಡಿದ ಆರ್ನಾಲ್ಡ್ ಟಾಯ್ನ್‍ಬೀ (Arnold Toynbee) ತನ್ನ ಈ ಸಂಶೋಧನೆಗಳನ್ನು ಹತ್ತು ಭಾಗಗಳನ್ನು ಹೊಂದಿರುವ ಒಂದು ಭವ್ಯವಾದ ಗ್ರಂಥದ ರೂಪಕ್ಕೆ ಇಳಿಸಿದರು. ಅದರಲ್ಲಿ ಅವರು ಹೇಳುವ ಒಟ್ಟು ಸಾರಾಂಶವು ಹೀಗಿದೆ: ‘ಮಾನವೇತಿಹಾಸದಲ್ಲಿ ಧರ್ಮವು ಯಾವತ್ತೂ ಅದರ ಕೇಂದ್ರ ಬಿಂದುವಾಗಿಯೇ ನೆಲೆನಿಂತಿದೆ’. The Observer ಎಂಬ ಪತ್ರಿಕೆಯ (ಒಕ್ಟೋಬರ್ 24, 1954) ಲೇಖನವೊಂದರಲ್ಲಿ ಅವರು ಹೇಳುತ್ತಾರೆ:

“I have come back to the belief that religion holds the key to the mystery of existence.”

“ಧರ್ಮವು ಅಸ್ತಿತ್ವದ ನಿಗೂಢತೆಗಿರುವ ಕೀಲಿಕೈಯನ್ನು ಹೊಂದಿದೆ ಎಂಬ ನಂಬಿಕೆಗೆ ನಾನು ಮರಳಿ ಬಂದಿದ್ದೇನೆ.”

Oxford Dictionary ಪ್ರಕಾರ ‘ಧರ್ಮ’ (religion) ಎಂದರೆ:

“belief in a superhuman controlling power especially in a personal God or gods entitled to obedience and worship.”

“ಆಜ್ಞಾಪಾಲನೆ ಮಾಡಲು ಮತ್ತು ಆರಾಧಿಸಲು ಅರ್ಹವಾಗಿರುವ ಅತಿಮಾನುಷ ನಿಯಂತ್ರಣಾ ಶಕ್ತಿಯಲ್ಲಿ ವಿಶೇಷತಃ ಒಬ್ಬ ಖಾಸಗಿ ದೇವ ಅಥವಾ ದೇವರುಗಳಲ್ಲಿರುವ ನಂಬಿಕೆ.”

ಸರ್ವಶಕ್ತನೂ ಸರ್ವಜ್ಞನೂ ಆಗಿರುವ ಸಾರ್ವತ್ರಿಕವಾದ ಒಬ್ಬ ದೇವನಲ್ಲಿ ಅಥವಾ ಪರಮಶ್ರೇಷ್ಠವಾದ ದೈವಿಕ ಅಧಿಕಾರವೊಂದರಲ್ಲಿ ನಂಬಿಕೆಯಿಡುವುದು ಎಲ್ಲ ಧರ್ಮಗಳಲ್ಲಿಯೂ ಸಮಾನವಾಗಿರುವ ಒಂದು ವೈಶಿಷ್ಟ್ಯತೆಯಾಗಿದೆ. ತಾವು ಆರಾಧಿಸುವ ದೇವನೇ ತಮಗೂ ಮತ್ತು ಇತರ ಧರ್ಮದವರಿಗೂ ಇರುವ ದೇವನು ಎಂದು ಎಲ್ಲ ಪ್ರಮುಖ ಧರ್ಮಗಳ ಅನುಯಾಯಿಗಳೂ ನಂಬುತ್ತಾರೆ.

ಮಾರ್ಕ್ಸಿಝಂ (Marxism), ಫ್ರಾಯ್ಡಿಯನಿಝಂ (Freudianism) ಹಾಗೂ ಮತ್ತಿತರ ‘ಧರ್ಮೇತರ’ ನಂಬಿಕೆಗಳು ವ್ಯವಸ್ಥಿತವಾಗಿರುವ ಧರ್ಮಗಳ ಬೇರುಗಳನ್ನು ಆಕ್ರಮಿಸಲು ಪ್ರಯತ್ನಿಸಿದ್ದವು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ತರುವಾಯ ಅವುಗಳೇ ಸ್ವತಃ ವಿವಿಧ ನಂಬಿಕೆಗಳಾಗಿ ಮಾರ್ಪಟ್ಟವು. ಉದಾಹರಣೆಗೆ, ಕಮ್ಯೂನಿಝಂ ಹಲವಾರು ದೇಶಗಳಲ್ಲಿ ಅಸ್ತಿತ್ವದಲ್ಲಿದ್ದಾಗ ಧರ್ಮಗಳನ್ನು ಯಾವ ರೀತಿಯಲ್ಲಿ ಬೋಧಿಸಲಾಗುತ್ತದೋ ಅದೇ ರೀತಿಯಲ್ಲಿ ಕಟ್ಟುಪಾಡು ಮತ್ತು ತೀವ್ರತೆಗಳೊಂದಿಗೆ ಕಮ್ಯೂನಿಝಂ ಅನ್ನು ಕೂಡ ಬೋಧಿಸಲಾಗುತ್ತಿತ್ತು.

ಆದ್ದರಿಂದ ಧರ್ಮವು ಮನುಷ್ಯಾಸ್ತಿತ್ವದ ಒಂದು ಬಹುಮುಖ್ಯ ಅಂಗವಾಗಿದೆ. ಆದರಣೀಯ ಕುರ್‍ಆನ್ ಹೇಳುತ್ತದೆ:

﴿ قُلْ يَا أَهْلَ الْكِتَابِ تَعَالَوْا إِلَى كَلِمَةٍ سَوَاءٍ بَيْنَنَا وَبَيْنَكُمْ أَلَّا نَعْبُدَ إِلَّا اللَّهَ وَلَا نُشْرِكَ بِهِ شَيْئًا وَلَا يَتَّخِذَ بَعْضُنَا بَعْضًا أَرْبَابًا مِنْ دُونِ اللَّهِ فَإِنْ تَوَلَّوْا فَقُولُوا اشْهَدُوا بِأَنَّا مُسْلِمُونَ﴾

“ಹೇಳಿರಿ, ಓ ಗ್ರಂಥದವರೇ, ನಮ್ಮ ಮತ್ತು ನಿಮ್ಮ ಮಧ್ಯೆ ಸಮಾನವಾಗಿರುವ ಒಂದು ವಚನದೆಡೆಗೆ ಬನ್ನಿರಿ. (ಅದೇನೆಂದರೆ) ನಾವು ಅಲ್ಲಾಹನ ಹೊರತು ಇತರ ಯಾರನ್ನೂ ಆರಾಧಿಸಬಾರದು, ಅವನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡಬಾರದು ಮತ್ತು ನಮ್ಮಲ್ಲಿ ಯಾರೊಬ್ಬರೂ ಇತರರನ್ನು ಅಲ್ಲಾಹನ ಹೊರತಾಗಿರುವ ಪ್ರಭುಗಳನ್ನಾಗಿ ಮಾಡಿಕೊಳ್ಳಬಾರದು. ಅವರೇನಾದರೂ ತಿರುಗಿ ನಡೆದರೆ ಹೇಳಿರಿ: ನಾವು ಮಸ್ಲಿಮರಾಗಿರುವೆವು ಎಂಬುದಕ್ಕೆ ನೀವು ಸಾಕ್ಷ್ಯವಹಿಸಿರಿ.” (ಕುರ್‍ಆನ್ 3:64)

ವಿವಿಧ ಧರ್ಮಗಳ ಅಧ್ಯಯನವು ನನ್ನ ಪಾಲಿಗೆ ಅತ್ಯಂತ ಪ್ರತಿಫಲಾತ್ಮಕವಾದ ಒಂದು ಅನುಭವವಾಗಿದೆ. ದೇವನು ಪ್ರತಿಯೊಂದು ಮನುಷ್ಯಾತ್ಮವನ್ನು ತನ್ನ ಅಸ್ತಿತ್ವದ ಕುರಿತು ಕೆಲವು ಮಾಹಿತಿಗಳನ್ನಿಟ್ಟು ಸೃಷ್ಟಿಸಿದ್ದಾನೆ ಎಂಬ ವಿಶ್ವಾಸವನ್ನು ಅದು ಪುನರ್‍ದೃಡೀಕರಿಸಿದೆ. ಮನುಷ್ಯನ ಮಾನಸಿಕ ಪ್ರಕೃತಿಯು ಸೃಷ್ಟಿಕರ್ತನ ಅಸ್ತಿತ್ವವನ್ನು ನಿಬಂಧನಾರಹಿತವಾಗಿ ಅಂಗೀಕರಿಸುವ ವಿಧದಲ್ಲಿ ನಿರ್ಮಿಸಲ್ಪಟ್ಟಿದೆ. ಅನ್ಯಥಾ ಮನುಷ್ಯನು ವಿರುದ್ಧವಾದ ರೀತಿಯಲ್ಲಿ ನಂಬಿಕೆಯಿಡುವಂತೆ ನಿರ್ಬಂಧಿತನಾಗಿರುತ್ತಿದ್ದನು. ಬೇರೆ ಮಾತುಗಳಲ್ಲಿ ಹೇಳುವುದಾದರೆ, ದೇವನಲ್ಲಿರುವ ನಂಬಿಕೆಗೆ ಯಾವುದೇ ನಿಬಂಧನೆಯೂ ಬೇಕಾಗಿಲ್ಲ, ಆದರೆ ಅವನ ಅಸ್ತಿತ್ವವನ್ನು ನಿರಾಕರಿಸುವುದಕ್ಕೆ ನಿಬಂಧನೆ ಬೇಕಾಗುತ್ತದೆ.

(ಮುಂದುವರೆಯುತ್ತದೆ إن شاء الله‎‎)

Pin It on Pinterest

Please Share This

Share this post with your family & friends! ನಿಮ್ಮ ಕುಟುಂಬ ಹಾಗೂ ಗೆಳೆಯರೊಟ್ಟಿಗೆ ಈ ಸಂದೇಶವನ್ನು ಓದಲಿ!!

error: Alert: Content is protected !!
Subscribe To Our Newsletter
ನಮ್ಮ ವಾರ್ತಾಪತ್ರಕ್ಕೆ ಸದದ್ಯರಾಗಿರಿ.

Subscribe To Our Newsletter

ನಮ್ಮ ವಾರ್ತಾಪತ್ರಕ್ಕೆ ಸದದ್ಯರಾಗಿರಿ.

CONGRATS! YOU HAVE SUCCESSFULLY SUBSCRIBED. ಶುಭಾಷಯಗಳು! ನೀವು ಯಶಸ್ವಿಯಾಗಿ ಚಂದಾದಾರರಾಗಿದ್ದೀರಿ. Keep your eyes peeled for my next email! ನಮ್ಮ ಮುಂದಿನ ಇ-ಮೇಲ್‌ಗಳಿಗಾಗಿ ನಿಮ್ಮ ಕಣ್ನುಗಳನ್ನು ಕಾಯ್ದಿರಿಸಿಕೊಳ್ಳಿ!

body { font-family: “Poppins”, sans-serif; }