------------------------------------------------------------------------------------ ------------------------------------------------------------------------------------- --------------------------------------------------------------------------------------------- ---------------------------------------------------------------------------------------------
Want to Learn More(ಹೆಚ್ಚಿನ ಕಲಿಕೆಗಾಗಿ) ... Click Here or Subscribe

بسم الله الرحمن الرحيم

ಪರಮ ದಯಾಮಯನು ಕರುಣಾನಿಧಿಯು ಆದ ಅಲ್ಲಾಹನ ನಾಮದಿಂದ.

ಭಯೊತ್ಪಾದನೆಗೆ ಕಾರಣಕಾರರು ಯಾರು…..?

ಒಂದು ಊರಿನಲ್ಲಿ ಒಬ್ಬ ಬಲವಾದ ರೌಡಿ ಮತ್ತು ಅವನ ಗುಂಪು ಇದೆ ಎಂದುಕೊಳ್ಳಿ, ಅವರನ್ನು ತಡೆಯುವಂತಹಾ ಪ್ರತಿಸ್ಪರ್ಧಿ ಇನ್ನೊಬ್ಬರಿಲ್ಲ, ಅವನಿಗೆ ಅವನ ಗುಂಪಿಗೆ ಮುಟ್ಟುವವರಾರೂಇಲ್ಲ. ಅವನ ತೊಂದರೆಯಿಂದರಕ್ಷಣೆ ಪಡೆಯಲು ಆ ಊರಿನ ಜನರು ತಮ್ಮ ಸಂಪಾದನೆ ಮತ್ತು ತಮ್ಮ ಹೆಣ್ಣುಗಳ ಶೀಲಗಳನ್ನು ಕಪ್ಪಕಾಣಿಕೆಯಂತೆ ಕೊಟ್ಟು ತಮ್ಮನ್ನು ಕಾಪಾಡಿಕೊಳ್ಳುತ್ತಿದ್ದರು. ಅವರ ಕಣ್ಣೀರು ಮತ್ತು ದುಖಃಗಳ ಪರಿವೇಅವನಿಗಿರಲಿಲ್ಲ. ಪೊಲೀಸ್, ಕಾನೂನು ಸಹ ಇವನ ಮಧ್ಯದಲ್ಲಿ ತಲೆ ಹಾಕಲು ಹಿಂಜರಿಯುವಂತಹಾ ಅಧಿಪತ್ಯ ಸಾಧಿಸಿದ್ದನು. ಹೀಗಿರುವಾಗ ಅವನ ಅಳಿಸಲಾಗದ ಅಧಿಪತ್ಯಕ್ಕೆ ಒಂದು ದಿನ ಒಂದು ಕಾರಣಕ್ಕಾಗಿ ಆ ಊರೇ ಬಿಟ್ಟು ಹೋಗುವ ಪರಿಸ್ಧಿತಿ ಬಂದಿತು.

ಅವನು ಆ ಊರಿನಿಂದ ದೂರವಿದ್ದರೂ ಅವನಿಗೆ ಬರಬೇಕಾದ ಮಾಮೂಲಿಯನ್ನು ಕೊಡಿಸಿ ಕೊಡುವ ಅವನ ಹಿಂಬಾಲಕರು ಇದ್ದಾರೆ. ಅಂತಹವನು ಆ ಊರು ಬಿಟ್ಟು ಹೋಗುವಾಗ ಹೀಗೆ ಹೇಳಲು ಸಾಧ್ಯವೇ? “ಜನರೆ ಇಂದಿನಿಂದ ನೀವು ಸ್ವತಂತ್ರವಾಗಿ ಇರಬಹುದು, ಇಂದಿನಿಂದ ನೀವು ನನಗೆ ಕಪ್ಪ ಕಾಣಿಕೆ ಕೊಡುವ ಅವಶ್ಯಕತೆ ಇಲ್ಲ” ಎಂದು ಹೇಳಿದರೆ ನಾವು ಹೀಗಾಗಬಹುದು ಎಂದು ಕಲ್ಪನೆಯೂ ಕೂಡಾ ಮಾಡಲು ಸಾಧ್ಯವಿಲ್ಲತಾನೆ?

ಒಬ್ಬ ಊರಿನ ರೌಡಿಯ ಸ್ಥಿತಿಯೇ ಹೀಗಿದ್ದರೆ, ಏಶಿಯಾ, ಆಫ್ರಿಕಾ, ಯೂರೊಪ್ ಖಂಡಗಳ ಮೇಲೆ ಅಧಿಪತ್ಯವಿದ್ದು, ಅಲ್ಲಿರುವ ಸಂಪತ್ತುಗಳನ್ನು ಕೊಳ್ಳೆ ಹೊಡೆದು ಅನುಭವಿಸುತ್ತಿರುವ ವಸಾಹತುಶಾಹಿ ಶಕ್ತಿಗಳು ತನ್ನ ಅಧೀನದಲ್ಲಿದ್ದ ದೇಶಗಳನ್ನು ಸಂಪೂರ್ಣವಾಗಿ ಹಾಗೆ ಬಿಟ್ಟು ಬಿಡುತ್ತಾರೆಯೇ?… ಅದು ಅವರನ್ನು ಕೇಳುವವರು ಯಾರೂ ಇಲ್ಲ, ಕೇಳುವಂತಹಾ ದೇಶ ಇನ್ನಾವುದೂ ಇಲ್ಲ, ಇಂತಹವರು ಬಿಟ್ಟು ಹೋಗುತ್ತಾರೆಂದು ನಾವು ಪ್ರತಿಕ್ಷಿಸಲು ಸಾಧ್ಯವೇ….?

ಇದನ್ನು ಅರ್ಥ ಮಾಡಿಕೊಂಡರೆ ಇಂದು ಪ್ರಪಂಚದಲ್ಲಿ ನಡೆಯುತ್ತಿರುವ ಭೀತಿವಾದದ ಪ್ರಕ್ರಿಯೆಗಳ ಹಿಂದೆ ಇರುವವರು ಯಾರು ಎಂಬುದನ್ನು ಅರ್ಥೈಸಿಕೊಳ್ಳಲು ಸಾಧ್ಯ. ಆ ರೌಡಿ ನೇಮಿಸಿರುವ ಹಿಂಬಾಲಕರಂತೆಯೇ ಇಂದು ದೊಡ್ಡ ದೊಡ್ಡ ರಾಷ್ಟ್ರಗಳ ಆಡಳಿತಗಾರರು ಅವರೇ ಆಗಿದ್ದಾರೆ. ಹೆಚ್ಚಿನ ರಾಷ್ಟ್ರಗಳಲ್ಲಿ ರೌಡಿ ನೇಮಿಸಿರುವ ಹಿಂಬಾಲಕರಂತೆಯೇ ಅವರ ಹಂಬಾಲಕರಿದ್ದಾರೆ. ನಮ್ಮ ರಾಷ್ಟ್ರಗಳ ಆಡಳಿತಗಾರರು ತಮ್ಮ ನಾಯಕರುಗಳಿಗೆ ರಾಷ್ಟ್ರದ ಸಂಪತ್ತನ್ನು ವಿವಿಧ ರೀತಿಯಲ್ಲಿ ಸೇರಿಸುತ್ತಾರೆ. ಇದನ್ನು ವಿರೋಧಿಸುವವರಿಗೆ ತಡೆಯುವವರಿಗೆ ರೌಡಿಯ ಹಿಂಬಾಲಕರು ಗತಿ ಕಾಣಿಸುವಂತೆ ಈ ಅಧಿಪತ್ಯ ಶಕ್ತಿಗಳು ವ್ಯವಹರಿಸುತ್ತಿವೆ.

ಹೀಗೆ ಆ ರೌಡಿಯು ಕೆಲ ದಿನಗಳ ನಂತರ ಒಂದುರಾಜ್ಯದ ಮುಖ್ಯ ಮಂತ್ರಿಯಾದರೆ ಆ ರಾಜ್ಯದ ಸ್ಥಿತಿ ಏನಾಗಬಹುದು ಎಂದು ಚಿಂತಿಸಿ ನೋಡಿ….? ವಾರ್ತಾ ಮಾಧ್ಯಮಗಳು, ಪೊಲೀಸ್, ಕನೂನುಗಳು, ಎಲ್ಲವೂ ಅವನ ಅಧಿಪತ್ಯದಲ್ಲಿದ್ದರೆ ಏನಾಗಬಹುದು? ಇದೇ ರೀತಿ ಅವನಿಗೆ ವಿರುದ್ಧವಾಗಿ ನಿಲ್ಲುವವರಿಗೆ, ನಿಲ್ಲುವ ಶಕ್ತಿಗಳಿಗೆ ಅವನು ಜನರ ಮಧ್ಯೇಯೇ ಹೇಗೆ ಬೇಕಾದರೂ ಚಿತ್ರಿಸಬಹುದಲ್ಲವೆ.? ಇಂದು ಇಸ್ಲಾಮಿಯರನ್ನು ಭೀತಿವಾದಿಗಳಾಗಿ ಚಿತ್ರಿಸಲು, ಭೀತಿವಾದದ ಹೆಸರಿನಲ್ಲಿ ಅವರ ಮೇಲೆ ನಡೆಯುವ ಅಕ್ರಮಗಳು ಇಡೀ ಪ್ರಪಂಚದಾದ್ಯಂತ ನಡೆಯುತ್ತಿರುವ ಕುತಂತ್ರದ ಭಾಗಗಳೇ ಆಗಿವೆ. ಆಯುಧಗಳು, ತಂತ್ರಜ್ಞಾನ, ಮಾಧ್ಯಮಗಳನ್ನು ಇದಕ್ಕಾಗಿಯೇ ಸಮರ್ಪಕವಾಗಿ ಬಳಸಿ ಉಪಯೋಗಿಸುತ್ತಿದ್ದಾರೆ.

ಮಾಧ್ಯಮಗಳ ದ್ವಿಮುಖಧೊರಣೆ;- ಲಕ್ಷಾಂತರ ಜನರನ್ನು ರಾಶಿ ರಾಶಿಯಾಗಿ ಕೊಂದ ಹಿಟ್ಲರ್ ಆಗಲಿ, ಹಿರೊಶಿಮ-ನಾಗಸಾಕಿ ಮೇಲೆ ಅಣು ಬಾಂಬ್ ಹಾಕಿ ಕೊಟ್ಯಾಂತರ ಜನರನ್ನು ಕೊಂದದ್ದಲ್ಲದೇ ಅಂಗ ಹೀನರನ್ನಾಗಿ ಮಾಡಿದ ಅಮೇರಿಕವಾಗಲಿ, ಯದ್ಧ ಎಂಬ ಹೆಸರಿನಲ್ಲಿ ಮುಗ್ಧ ಜನರನ್ನು ಕೊಂದು ಹಾಕುವ ಇಸ್ರೆಹಿಲ್ ಆಗಲಿ, ತಮಿಳುಗರನ್ನು ಕೊಂದು ಹಾಕಿದ ಶ್ರೀಲಂಕವಾಗಲಿ, ಅವರಿಗೆ ವಿರುದ್ಧವಾಗಿ ಹೊರಾಡುತ್ತಿರುವ ಎಲ್,ಟಿ,ಟಿ,ಇ, ಆಗಲಿ, ಅವರು ಮಡಿರುವ ಅಕ್ರಮ ಕೊಲೆಗಳಿಗೆ ಅವರ ಮತಧರ್ಮದ ಹೆಸರು ಸೇರಿಸಲಾಗುವುದಿಲ್ಲ. ಅವರ ತತ್ವದ ಹೆಸರು ಇಟ್ಟು ಕರೆಯಲಾಗುವುದಿಲ್ಲ. ಆದರೆ ತನ್ನ ಸ್ವಂತ ರಾಷ್ಟ್ರವನ್ನು ಅಕ್ರಮಿಸುವ ಜನರನ್ನು ಕೊಂದು ಹಾಕುವ ಜನರಿಗೆ, ಅಮೇರಿಕಾ ವಿರುದ್ಧ ಹೊರಾಡುವ ಅಫಘನ್, ಇರಾಕ್ ಜನರನ್ನು ಮತ್ತು ಇಸ್ರೆಹಿಲ್‍ಗೆ ವಿರುದ್ಧವಾಗಿ ಹೊರಾಡುವ ಫಿಲಸ್ತೀನ್ ಜನರನ್ನು ಇಸ್ಲಾಮೀ ಭಯೋತ್ಫಾದಕರೆಂದು ವಾರ್ತಾ ಪತ್ರಿಕೆಗಳು, ದೂರ ದರ್ಶನಗಳು, ಅಂತರ್ಜಾಲಗಳು, ಹಾಗೂ ಇತರೆ ಎಲ್ಲಾ ಮಾಧ್ಯಮಗಳು ಬಿಂಬಿಸುವುದನ್ನು ನೀವು ನೋಡುತ್ತಿದ್ದೀರ.

ಇಸ್ಲಾಮಿನ ವಿರುದ್ಧವೇ ಯಾಕೆ ಈ ರೀತಿಯಾಗಿ ಪ್ರಪಂಚದಾದ್ಯಂತ ದ್ವೆಷಿಸುವಂತೆ ಮಾಡಲಾಗುತ್ತಿದೆ, ಹೀಗೆ ಯಾಕಾಗುತ್ತಿದೆ, ಯಾರು ಹೀಗೆ ಮಾಡುತ್ತಿದ್ದಾರೆ? ಎಂಬುದನ್ನೂ ಸಹ ನಾವು ನೋಡಬೇಕು. ಆದರೆ ಏನು ನಡೆಯುತ್ತಿದೆ? ಇಂದು ಮಾಧ್ಯಮಗಳ, ಹಾಗೂ ಕ್ರೂರ ಆಡಳಿತಗಾರರ ಪ್ರಭಾವದಿಂದ, ಶಾಂತಿ ಪ್ರಿಯರಾಗಿಯೂ ಕಳೆದು ಹೋಗಿರುವ ಹಕ್ಕು ಮತ್ತು ಒಡೆತನದ ಸಂಪತ್ತುಗಳನ್ನು ಪುನಃ ಪಡೆಯಲು ಶಾಂತಿ ಸಮಾಧಾನವನ್ನು ಸ್ಥಾಪಿಸಲು ಹೋರಾಡುವವರು ಭಯೊತ್ಪಾದಕರಾಗಿ ಚಿತ್ರಿಸಲ್ಪಡುತ್ತಿದ್ದಾರೆ.

ಒಟ್ಟಾರೆ ಪ್ರಪಂಚದಾದ್ಯಂತ ಅಮೇರಿಕಾ ಮತ್ತು ಜಿ8 ರಾಷ್ಟ್ರಗಳ ಮುಖ್ಯಆದಾಯ, ಆಯುಧಗಳನ್ನು ಮಾರುವುದರಿಂದಲೇ ಆಗಲಿದೆ. ಪ್ರಪಂಚದಲ್ಲೇ ಅತ್ಯಂತ ಸುಧಾರಿತ ತಂತ್ರಜ್ಞಾನ, ವೈಮಾನಿಕ ತಂತ್ರಜ್ಞಾನ, ಮಿಸಾಯಿಲ್‍ಗಳು, ಜಲ ಅಂತರ್ಗಾಮಿಗಳು, ಅಣು ಬಾಂಬ್‍ಗಳು, ಮಿಲಿಟರಿ ಅಥವ ಸೈನ್ಯ ಪಡೆಗಳ ಉತ್ಪಾದನೆ, ಇವರ ಕೈವಶವಿರುವಕಾರಣದಿಂಲೇ ಪ್ರಪಂಚದಾದ್ಯಂತ ಇರುವ ರಾಷ್ಟ್ರಗಳು ಅವರ ಅಧೀನದಲ್ಲಿವೆ. ಉದಾಹರಣೆಗೆ; ಮಧ್ಯ ರಾಷ್ಟ್ರಗಳು ಇವರು ನಿಯೋಜಿಸಿರುವಂತೆ ಕೈಗೊಂಬೆಗಳಾಗಿ ಆಡಳಿತ ನಡೆಸುತ್ತಿವೆ, ಮಾತ್ರವಲ್ಲ ಎಲ್ಲೆಲ್ಲಿ ಇವರ ಆಡಳಿತವಿತ್ತೋ ಆ ರಾಷ್ಟ್ರಗಳ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಾ ಬಂದರೂ ಆ ಎಲ್ಲಾ ದೇಶಗಳಿಗೆ ಇವರು ನೇರವಾಗಿ ಇಲ್ಲವೇ ಪರೊಕ್ಷವಾಗಿ ತಮ್ಮ ಅಧೀನದಲ್ಲಿಟ್ಟ್ಟಿದ್ದಾರೆ. ಆಯುಧಗಳನ್ನು ಅಂರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದಕ್ಕಾಗಿ, ಚಿಕ್ಕ ಚಿಕ್ಕ ದೇಶಗಳ ಮಧ್ಯದಲ್ಲಿ ದ್ವೇಶದ ಕಿಡಿ ಹಾಕಿ ಅವರು ಪರಸ್ಪರ ಹೋರಾಡುವಂತೆ ಮಾಡುತ್ತಾರೆ, ಅಥವ ಅವರ ರಾಷ್ಟ್ರದಲ್ಲೇ ಚಿಕ್ಕ ಚಿಕ್ಕಗುಂಪುಗಳಾಗಿ ತುಂಡು ಮಾಡಿ ಅಲ್ಲಿನ ಸರ್ಕಾರದ ವಿರುದ್ಧವೇ ಹೋರಾಡುವಂತೆ ಮಾಡುತ್ತಾರೆ. ಲಕ್ಷಾಂತರ ಮನುಷ್ಯ ಜೀವಿಗಳು ಸಾಯುವುದು ಇವರಿಗೆ ಪರಿವೇ ಇರುವುದಿಲ್ಲ.

ಕೇವಲ ತನ್ನ ಸಂಪತ್ತು ಮತ್ತು ಅಧಿಪತ್ಯದಲ್ಲಿ ಗುರಿಯನ್ನು ಹೊಂದಿದ್ದು, ಅದಕ್ಕೆ ಧಕ್ಕೆ ಬರಬಾರದೆಂಬುದೇ ಇವರ ಮುಖ್ಯ ಉದ್ದೇಶ. ಈ ಉದ್ದೇಶವನ್ನು ಪೂರೈಸಿಕೊಳ್ಳಲು, ಒಂದು ಕಡೆ ಮಿಲಿಟರಿ ಸೈನ್ಯದ ಅಕ್ರಮಣ ಮತ್ತು ಇನ್ನೊಂದು ಕಡೆ ತನ್ನ ಅಧೀನದಲ್ಲಿರುವ ಮಾಧ್ಯಮಗಳನ್ನು ಈ ಕುತಂತ್ರಕ್ಕೆ ಪ್ರಯೋಗಿಸುತ್ತಾರೆ. ಇವರ ಕೈ ಗೊಂಬೆಗಳಾಗದೆ ಸರ್ಕಾರದ ವಿರುದ್ಧವಾಗಿ ತಮ್ಮ ಹಕ್ಕುಗಳನ್ನು ಕೇಳಿ ಹೋರಾಡುವವರಿಗೆ ಭಯೋತ್ಪಾದಕರೆಂದು, ತೀವ್ರವಾದಿಗಳೆಂದು ಚಿತ್ರಿಸುತ್ತಾರೆ. ಇವರು ತನ್ನ ಅಧೀನದ ವಿರುದ್ಧವಾಗಿರುವ ರಾಷ್ಟ್ರಗಳ ಮಧ್ಯೆ ಅವರಲ್ಲಿಯೇ ಗುಂಪುಗಳನ್ನು ಸೃಷ್ಠಿಸಿ, ಒಡಕುಗಳನ್ನು ಸೃಷ್ಠಿಸಿ, ಆಯುಧಗಳನ್ನು ತಲುಪಿಸಿ, ಅವರ ವಿರುದ್ಧ ಹೊರಾಡಿದವರಲ್ಲಿ ಒಬ್ಬರಿಗೆ ನಾಯಕತ್ವವನ್ನು ಕೊಟ್ಟು ಅವರನ್ನೇ ರಾಷ್ಟ್ರದ ನಾಯಕರನ್ನಾಗಿ ನೇಮಿಸುತ್ತಾರೆ. (ಸಮೀಪದ ಉದಾಹರಣೆ ಎಂದರೆ ಇರಾಖ್ ಮತ್ತು ಅಫಘಾನಿಸ್ತಾನ್)

ಅನ್ಯಾಯಿಗಳ ವಿರೋಧಿ ಇಸ್ಲಾಮ್

ಎಲ್ಲಾ ವಂಶ, ಭಾಶೆ, ಬಣ್ಣ, ಕುಲ-ಗೂತ್ರ, ಎಂಬ ಮೇರೆ ಅಥವ ಎಲ್ಲೆಯನ್ನು ದಾಟಿ, ಎಲ್ಲರಲ್ಲೂ ಸ್ವೀಕರಿಸಲ್ಪಡುವ ಕಾರಣದಿಂದ, ಪ್ರಪಂಚದಾದ್ಯಂತ ಈ ತತ್ವವು ಅತಿವೇಗವಾಗಿ ಹೊಮ್ಮುತ್ತಿದೆ. ಈ ರೀತಿಯಾಗಿ ಹೊಮ್ಮುವಾಗ ಎಂದಿಗೂ ಜನರಲ್ಲಿ ಒಂದು ಚೈತನ್ಯವನ್ನು ತರುತ್ತಿದೆ. ಆ ಕಾರಣದಿಂದ ಅವರು ತನ್ನ ರಾಷ್ಟ್ರಗಳಲ್ಲಿ ನಡೆಯುತ್ತಿರುವ ದುಷ್ಟಶಕ್ತಿಗಳ ವಿರುದ್ಧ ನಿಲ್ಲುತ್ತಾರೆ. ಅಂತೆಯೆ ದುಷ್ಟ ಶಕ್ತಿಗಳು ಹೊಡೆಯುತ್ತಿರುವ ಕೊಳ್ಳೆಗಳಿಗೆ ವಿರುದ್ಧ ನಿಲ್ಲುತ್ತಾರೆ. ಹೌದು ಭೂಮಿಯಲ್ಲಿ ಅಧರ್ಮ ಅನ್ಯಾಯ ಅಕ್ರಮಿಗಳಿಗೆ ವಿರುದ್ಧವಾದ ಇಸ್ಲಾಮಿನ ನಿಲುವು ಶಕ್ತಿವಂತ ರಾಷ್ಟ್ರಗಳ ಅರಾಜಕತೆಗೆ ಕಠಿಣ ವಿರೊಧಿಯಾಗಿದೆ ಇಸ್ಲಾಮ್. ಹಾಗಾಗಿ ಹೊಮ್ಮುತ್ತಿರುವ ಇಸ್ಲಾಮ್‍ನ್ನು ತಡೆಯಲು ಭಯೊತ್ಪಾದಕವಾಗಿ ಚಿತ್ರಿಸಲಾಗಿತ್ತಿದೆ.

ಇಸ್ಲಾಮ್‍ ಎಂದರೇನು?

ಇಸ್ಲಾಮ್ ಎಂಬ ಅರಬೀ ಪದಕ್ಕೆ ಅರ್ಥ ಅನುಸರಿಸುವುದು ಅಥವಾ ಅನುಕರಣೆ ಎಂದಾಗಿದೆ. ಮತ್ತೊಂದು ಅರ್ಥದಲ್ಲಿ ಶಾಂತಿ ಎಂಬುದೇ ಆಗಿದೆ. ಅಂದರೆ ದೇವನಿಗೆ ವಿಧೇಯನಾಗಿ ಜೀವಿಸಿದರೆ ಈ ಲೋಕದಲ್ಲೂ ಪರಲೋಕದಲ್ಲಿಯೂ ಶಾಂತಿ ಸಿಗುತ್ತದೆ ಎಂಬುದೆ ಇಸ್ಲಾಮ್ ಧರ್ಮ ತಿಳಿಸುವ ತತ್ವ ಆಗಿದೆ. ಅಂದರೆ ಈ ಧರ್ಮದ ಪ್ರಕಾರ ಪ್ರಪಂಚದ ಒಡೆಯನಾದ ದೇವನು ಯಾವುದನ್ನು ಮಾಡಬೇಕೆಂದು ಆಜ್ಞೆ ಮಾಡುತ್ತಾನೋ ಅದನ್ನು ಮಾಡಬೇಕಾಗಿದೆ. ಅದರ ಹೆಸರೇ ಒಳಿತು ಅಥವಾ ಪುಣ್ಯ ಅಥವಾ ಧರ್ಮ ಎಂದಾಗಿದೆ. ಅವನು ಯಾವುದೆಲ್ಲಾ ಮಾಡಬಾರದೆಂದು ತಡೆಯಾಜ್ಞೆ ಮಾಡಿದ್ದಾನೆಯೋ ಆ ಎಲ್ಲಾ ವಿಷಯಗಳಿಂದ ದೂರವಿರಬೇಕು. ಅದೇ ಪಾಪ ಅಥವಾ ಕೆಡುಕು ಅಥವಾ ಅಧರ್ಮ ಎಂದಾಗಿದೆ, ಯಾರು ಈ ತತ್ವವನ್ನು ಒಪ್ಪಿಕೊಂಡುಅದರ ಪ್ರಕಾರ ಜೀವಿಸುವರೋ ಅವರನ್ನು ಅರಬಿ ಭಾಷೆಯಲ್ಲಿ ಮುಸ್ಲಿಂ (ಅನುಸರಿಸುವವನು) ಎಂದು ಹೇಳುವರು.

ಈ ತತ್ವವನ್ನು ಯಾರು ಬೇಕಾದರು ಒಪ್ಪಿಕೊಂಡು ಅನುಸರಿಸಬಹುದು. ಇದು ಯಾವುದೇ ಒಂದು ಪ್ರತ್ಯೇಕ ಕುಲಕ್ಕೆ, ದೇಶಕ್ಕೆ ಹಾಗೂ ವಂಶಕ್ಕೆ ಸೀಮಿತವಾದುದ್ದಲ್ಲ ಹಾಗೂ ಇದೊಂದು ಹೊಸ ಧರ್ಮವೂ ಅಲ್ಲ. ಎಲ್ಲಾ ಕಾಲದಲ್ಲಿಯೂ ಈ ಭೂಮಿಯ ವಿವಿಧ ಭಾಗಗಳಿಗೆ ಕಳುಹಿಸಲ್ಪಟ್ಟಿರುವ ದೇವನ ಸಂದೇಶವಾಹಕರು ಈ ತತ್ವವನ್ನೇ ಅವರವರ ಜನಾಂಗಕ್ಕೆ ಭೋಧಿಸಿದರು. ಇದೇ ತತ್ವವನ್ನೇ ಕೊನೆಯದಾಗಿ ಬಂದ ಸಂದೇಶವಾಹಕರಾದ ಮುಹಮ್ಮದ್ {ಸ} ಮೂಲಕ ಇಸ್ಲಾಮ್ ಎಂಬ ಹೆಸರಿನಲ್ಲಿ ಪುನಃ ಪರಿಚಯವಾಗಿದೆ.

ಯಾರೆಲ್ಲಾ ಈ ತತ್ವವನ್ನು ಒಪ್ಪಿಕೊಂಡು ಅಂದರೆ ಒಳಿತನ್ನು ಮಾಡಿ ಕೆಡುಕಿನಿಂದ ಮುಕ್ತರಾಗಿ ಜೀವಿಸುತ್ತಾರೋ ಅವರು ಪರಲೋಕದ ಜೀವನದಲ್ಲಿ ಸ್ವರ್ಗಕ್ಕೆ ಹೋಗುವರು. ಯಾರು ದೇವನನ್ನು ಮತ್ತು ಅವನು ಅನುಗ್ರಹಿಸಿರುವ ಮಾರ್ಗವನ್ನು ಅಲಕ್ಷಿಸಿ ತನ್ನಿಚ್ಛೆಯಂತೆ ಜೀವಿಸುತ್ತಾರೆಯೋ ಅವರು ನರಕ ಪ್ರವೇಶಿಸುವರು.

ಈ ತತ್ವದ ಮುಖ್ಯವಾದ ಮೂಲ ಅಂಶವೇನೆಂದರೆ ಈ ಪ್ರಪಂಚವನ್ನು ಸೃಷ್ಠಿಸಿ ಪರಿಪಾಲಿಸುತ್ತಿರುವ ದೇವನೇ ಅರಾಧನೆಗೆ ಅರ್ಹನು. ಅವನಲ್ಲದೆ ಇತರ ಯಾರೇ ಆಗಿರಲಿ ಅವರು ಎಷ್ಟು ದೊಡ್ಡ ವ್ಯಕ್ತಿಗಳೇ ಆಗಿರಲಿ ರಾಜನೇ ಆಗಿರಲಿ, ಅಧ್ಯಾತ್ಮಿಕ ನಾಯಕರೇ ಆಗಿರಲಿ, ಅವರನ್ನು ದೇವರು ಎಂದು ಹೇಳುವುದು, ಅವರನ್ನು ಆರಾಧಿಸುವುದಾಗಲೀ ಖಂಡಿತ ಮಾಡಬಾರದು. ದೇವನನ್ನೇ ನೇರವಾಗಿ ಯಾವುದೇ ಮಧ್ಯವರ್ತಿಗಳಿಗಲ್ಲದೆ ಆರಾಧಿಸಬೇಕು.

ಈ ತತ್ವದ ಮತ್ತೊಂದು ಮುಖ್ಯ ಅಂಶವೇನೆಂದರೆ ಮನುಷ್ಯರೆಲ್ಲರೂ ಒಂದು ಗಂಡು ಒಂದು ಹೆಣ್ಣಿನಿಂದ ಜನಿಸಿ ಪ್ರಪಂಚದಾದ್ಯಂತ ವ್ಯಾಪಿಸಿದ್ದಾರೆ. ಮನುಷ್ಯರೆಲ್ಲರೂ ಅವರು ಯಾವುದೇ ದೇಶದವರಾಗಲೀ ಯಾವುದೇ ಭಾಷೆ ಮಾತನಾಡಲಿ ಯಾವುದೇ ಬಣ್ಣದವರಾಗಲೀ ಒಂದೇ ಕುಟುಂಬಕ್ಕೆ ಸೇರಿರುವ ಪರಸ್ಪರ ಸಹೋದರ ಸಹೋದರಿಯರಾಗಿದ್ದಾರೆ. ಹಾಗಾಗಿ ಎಲ್ಲರೂ ಸಮಾನರು ಅವರ ಮಧ್ಯದಲ್ಲಿ ದೇಶ, ವಂಶ, ಭಾಷೆ, ಕುಲ, ಜಾತಿ, ಎಂಬ ಅಡಿಯಲ್ಲಿ ಭೇದ-ಭಾವ ಸಲ್ಲದು ಹಾಗೂ ಮಾಡಬಾರದು. ದೇವನ ಭಯ ಭಕ್ತಿಯಿಂದ ಮಾತ್ರವೇ ಅವರ ಸ್ಥಾನ ಉನ್ನತವಾಗಲಿದೆ ಎಂದು ಇಸ್ಲಾಮ್ ಹೇಳುತ್ತದೆ. ಈ ತತ್ವವನ್ನು ಒಪ್ಪಿಕೊಂಡಿರುವವರು ದೇವನಲ್ಲಿ ವಿಶ್ವಾಸವಿಡುವುದಲ್ಲದೆ ಒಳಿತನ್ನು ಮಾಡುವುದರೊಂದಿಗೆ ಒಳಿತನ್ನೆ ಬೋಧಿಸಬೇಕು. ಕೆಡುಕುಗಳಿಂದ ದೂರವಿರಬೇಕು ಹಾಗೂ ಕೆಡುಕನ್ನು ಕಂಡಲ್ಲಿ ಎಷ್ಟು ಸಾಧ್ಯವೋ ಅಷ್ಟು ಅದನ್ನು ತಡೆಯುವಲ್ಲಿ ಶ್ರಮಿಸಬೇಕು.

ಈ ಹಿಂದೆ ತಿಳಿಸಿದಂತೆ ಅತ್ಯಾಧುನಿಕ ಸೈನಿಕ ಆಯುಧಗಳೇ ಇವರ ಮುಖ್ಯವಾದ ಮಾರಾಟ ವಸ್ತು ಅದನ್ನು ಇತರೇ ರಾಷ್ಟ್ರಳಲ್ಲಿ ಮಾರಾಟ ಮಾಡ ಬೇಕಾದರೆ ಯದ್ಧಗಳ ಕಾರ್ಯ ದಕ್ಷತೆಯನ್ನು ಪ್ರಪಂಚದ ಜನರ ಮುಂದೆ ತೊರಿಸಲು, ಅದಕ್ಕಾಗಿ ಚಿಕ್ಕ ಚಿಕ್ಕ ರಾಷ್ಟ್ರಗಳ ಮಧ್ಯ ಕಿಡಿ ಹಾಕಿ ಯುದ್ಧಗಳು ಮಾಡಿಸುವುದು ಮಾತ್ರವಲ್ಲದೇ ಕನಿಷ್ಟ ಪ್ರತೀ 5 ವರ್ಷಕ್ಕೊಂದು ಬಾರಿ ದೊಡ್ಡ ಯುದ್ಧವನ್ನು ಮಾಡಿಸುತ್ತಾರೆ. ಎಲ್ಲಾ ಕಡೆ ಮಾಧ್ಯಮಗಳ ಮೂಲಕ ಜನರ ಮನವೊಲಿಸಿ ನ್ಯಾಯ ಕೊಡಿಸುವವರಂತೆ ನಂಬಿಸುತ್ತಾರೆ. ಈ ರೀತಿಯಾಗಿ ಮುಗ್ಧ ಜನರ ರಕ್ತವನ್ನು ನದಿಯಂತೆ ಹರಿಸಿ ಅದರ ಮೇಲೆ ಆಯುಧಗಳ ಪ್ರದರ್ಶನ ನಡೆಸುವುದು ಇವರ ಅಭ್ಯಾಸವಾಗಿದೆ. ಈ ಪ್ರದರ್ಶನವನ್ನು ನಡೆಸುವ ಮುಖಾಂತರ ಇವರಿಗೆ ಎರಡು ಲಾಭಗಳಿವೆ.

ಆಯುಧ ಮಾರಾಟ.

ಪ್ರಪಂಚದಾದ್ಯಂತ ಇರುವ ಇತರ ರಾಷ್ಟ್ರಗಳನ್ನು ಬೆದರಿಸಿ ತಮ್ಮ ಅಧೀನಕ್ಕೆ ಒಳಪಡಿಸಿಕೊಳ್ಳವುದು.

ಈಗ ಹೇಳಿ ಸಹೋದರ ಸಹೋದರಿಯರೇ ಯಾರು ಭಯೋತ್ಪಾದಕರು? ಇವರಾ ಅಥವ ತಮ್ಮ ಸ್ವಂತ ತಾಯಿನೆಲದಿಂದಲೇ ಆಚೆ ಓಡಿಸಲ್ಪಟ್ಟವರಾ? ತನ್ನ ರಾಷ್ಟ್ರವನ್ನು ಪುನಃ ಹಿಂಪಡೆಯಲು ರಕ್ಷಣೆಗಾಗಿ ಹೋರಾಡುವವರಾ? ಅಥವ ತಮ್ಮ ಹೆಂಡತಿ ಮಕ್ಕಳನ್ನು, ಸಂಭಂಧಿಕರನ್ನು ಕಳೆದುಕೊಂಡ ಕಾರಣದಿಂದ ತನ್ನ ಹಕ್ಕುಗಳಿಗಾಗಿ ಹೊರಾಟ ಮಾಡುವವರಾ? ಅಥವ ತನ್ನ ರಾಷ್ಟ್ರಗಳಲ್ಲಿ ಅವರ ಕೈಗೊಂಬೆಯಾಗಿರು ಅಧಿಕಾರಿಗಳ ವಿರುದ್ಧ ಹೊರಾಡಿ ತನ್ನ ರಾಷ್ಟ್ರದ ಸಂಪತ್ತನ್ನು ರಕ್ಷಣೆ ಮಾಡಿಕೊಳ್ಳಲು ಬಯಸುವವರಾ?

Pin It on Pinterest

Please Share This

Share this post with your family & friends! ನಿಮ್ಮ ಕುಟುಂಬ ಹಾಗೂ ಗೆಳೆಯರೊಟ್ಟಿಗೆ ಈ ಸಂದೇಶವನ್ನು ಓದಲಿ!!

error: Alert: Content is protected !!
Subscribe To Our Newsletter
ನಮ್ಮ ವಾರ್ತಾಪತ್ರಕ್ಕೆ ಸದದ್ಯರಾಗಿರಿ.

Subscribe To Our Newsletter

ನಮ್ಮ ವಾರ್ತಾಪತ್ರಕ್ಕೆ ಸದದ್ಯರಾಗಿರಿ.

CONGRATS! YOU HAVE SUCCESSFULLY SUBSCRIBED. ಶುಭಾಷಯಗಳು! ನೀವು ಯಶಸ್ವಿಯಾಗಿ ಚಂದಾದಾರರಾಗಿದ್ದೀರಿ. Keep your eyes peeled for my next email! ನಮ್ಮ ಮುಂದಿನ ಇ-ಮೇಲ್‌ಗಳಿಗಾಗಿ ನಿಮ್ಮ ಕಣ್ನುಗಳನ್ನು ಕಾಯ್ದಿರಿಸಿಕೊಳ್ಳಿ!

body { font-family: “Poppins”, sans-serif; }