------------------------------------------------------------------------------------ ------------------------------------------------------------------------------------- --------------------------------------------------------------------------------------------- ---------------------------------------------------------------------------------------------
Want to Learn More(ಹೆಚ್ಚಿನ ಕಲಿಕೆಗಾಗಿ) ... Click Here or Subscribe

بِسْمِ اللهِ الرَّحْمـَنِ الرَّحِيم

ಭಯೋತ್ಪಾದನೆಯ ಬಗ್ಗೆ ಇಸ್ಲಾಮ್ ಏನೆನ್ನುತ್ತದೆ?

ಪೀಠಿಕೆ

ನಾವು ಬದುಕುತ್ತಿರುವ ಈ ಕಾಲಘಟ್ಟದ ವಿಶಿಷ್ಟ ಲಕ್ಷಣಗಳಲ್ಲೊಂದು ನಮ್ಮ ಸಮಾಜದಲ್ಲಿ ಭೀಮಾಕಾರವಾಗಿ ಬೆಳೆದು ನಿಂತಿರುವ ಸ್ವಚ್ಛಂದ ಹಿಂಸೆಯ ನಡುವೆ ನಾವು ಬದುಕುತ್ತಿದ್ದೇವೆ ಎಂಬುದಾಗಿದೆ. ಅದು ಮಾರುಕಟ್ಟೆಯಲ್ಲಿ ಸ್ಫೋಟಗೊಳ್ಳುವ ಒಂದು ಬಾಂಬ್ ಆಗಿರಲಿ, ಒಂದು ವಿಮಾನಾಪಹರಣವಾಗಿರಲಿ, ಜನಾಂಗೀಯ ಹತ್ಯೆಗಳಾಗಿರಲಿ, ಅಥವಾ ಇನ್ನಿತರ ಏನೇ ಆಗಿರಲಿ, ಅಲ್ಲೆಲ್ಲ ರಾಜಕೀಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವುದಕ್ಕಾಗಿ ನಿರಪರಾಧಿ ಜೀವಗಳನ್ನು ನಿರಂತರ ಬಲಿ ತೆಗೆಯಲಾಗುತ್ತಿದೆ. ಕೊಲೆಗಳು ಸಾಮಾನ್ಯವಾಗಿರುವ, ಮನುಷ್ಯ ಜೀವಕ್ಕೆ ಬೆಲೆಯೇ ಇಲ್ಲದ ಮತ್ತು ಹಿಂಸೆಯು ವಿಶ್ವವ್ಯಾಪಕವಾಗಿರುವ ಜಗತ್ತಿನಲ್ಲಿ ನಾವು ಬದುಕುತ್ತಿದ್ದೇವೆ. ಇವೆಲ್ಲವುಗಳ ಮಧ್ಯೆ ಜಾಗತಿಕವಾಗಿ ತಾಂಡವವಾಡುತ್ತಿರುವ ಭಯೋತ್ಪಾದನೆಯು ಸಮಾಜದ ಶಾಂತಿ ಮತ್ತು ಸುರಕ್ಷಿತತೆಗೆ ಪ್ರಮುಖ ಬೆದರಿಕೆಯಾಗಿ ನಿಂತಿದೆ.

ಭಯೋತ್ಪಾದನೆ ಎಂಬ ಪದವು ವ್ಯಾಪಕವಾಗಿ ಬಳಕೆಗೆ ಬಂದಿದ್ದು ಕೆಲವು ದಶಕಗಳ ಹಿಂದೆ. ಈ ಹೊಸ ಪಾರಿಭಾಷಿಕ ಪದದ ವಿಪರ್ಯಾಸಕರ ಫಲಿತಾಂಶ ಗಳಲ್ಲೊಂದು ಏನೆಂದರೆ ಇದು ಭಯೋತ್ಪಾದನೆಯನ್ನು ಕೇವಲ ಕೆಲವು ನಿರ್ದಿಷ್ಟ ಗುಂಪುಗಳು ಅಥವಾ ಕೆಲವು ನಿರ್ದಿಷ್ಟ ವ್ಯಕ್ತಿಗಳಿಗೆ ಮಾತ್ರ ಸೀಮಿತಗೊಳಿಸಿದೆ ಎಂಬುದಾಗಿದೆ. ವಾಸ್ತವವಾಗಿ ಭಯೋತ್ಪಾದನೆಯು ಜಗತ್ತಿನಾದ್ಯಂತ ಹಬ್ಬಿಕೊಂಡಿದೆ ಮತ್ತು ಹಲವಾರು ರೂಪಗಳಲ್ಲಿ ಪ್ರಕಟಗೊಳ್ಳುತ್ತಿದೆ ಎಂಬುದಾಗಿದೆ ಸತ್ಯ. ಭಯೋತ್ಪಾದಕರು ಭಯೋತ್ಪಾದನೆಯನ್ನು ಒಂದು ನಿರ್ದಿಷ್ಟ ವಿಧಾನಕ್ಕೆ ಮಾತ್ರ ಸೀಮಿತಗೊಳಿಸಿಲ್ಲ.

ಮನುಷ್ಯ ಜೀವವನ್ನು ತುಚ್ಛವಾಗಿ ಕಾಣುವವರು, ಜನರ ಮೇಲೆ ಅಧಿಕಾರವನ್ನು ಹೊಂದಿರುವವರು, ಮಾನವೀಯತೆಯನ್ನು ಕಳೆದುಕೊಂಡವರು ನಮ್ಮ ಸಮಾಜಗಳ ಮಧ್ಯೆ ಹಲವಾರು ರೂಪಗಳಲ್ಲಿ ಭಯೋತ್ಪಾದಕರಾಗಿ ಪ್ರತ್ಯಕ್ಷರಾಗುತ್ತಾರೆ. ಯಜಮಾನನ ಮೇಲಿರುವ ಕೋಪವನ್ನು ಸಹೋದ್ಯೋಗಿಗಳ ಸಂಹಾರದ ಮೂಲಕ ತೀರಿಸುವುದು, ಹಕ್ಕು ವಂಚಿತರು ಸರಕಾರದ ಗಮನ ಸೆಳೆಯುವುದಕ್ಕಾಗಿ ಸಾರ್ವಜನಿಕ ಸ್ಥಳಗಳಲ್ಲಿ ಬಾಂಬ್ ಸ್ಫೋಟಿಸುವುದು, ಇಷ್ಟಪಟ್ಟ ಹುಡುಗಿ ದಕ್ಕದೆ ಹೋದಾಗ ಆಕೆಯನ್ನು ಬರ್ಬರವಾಗಿ ಕೊಲೆಗೈಯ್ಯುವುದು ಇತ್ಯಾದಿಗಳೆಲ್ಲವೂ ಜನರಲ್ಲಿ ಭಯಭೀತಿಯನ್ನು ಸೃಷ್ಟಿಸುವ ಭಯೋತ್ಪಾದನೆಗಳಾಗಿವೆ.

ಆದರೆ ಅಧಿಕಾರ ಕುರ್ಚಿಯನ್ನು ಭದ್ರಪಡಿಸುವುದಕ್ಕಾಗಿ ಪ್ರಜೆಗಳ ಮಧ್ಯೆ ಒಡೆದು ಆಳುವ ನೀತಿಯನ್ನು ಪಾಲಿಸುವವರು, ಸ್ವಹಿತಾಸಕ್ತಿಗಳ ರಕ್ಷಣೆಗಾಗಿ ಜಾತಿ ಜಾತಿಗಳ ಮಧ್ಯೆ ಶೀತಲ ಸಮರಗಳನ್ನು ಹುರಿದುಂಬಿಸುವವರು, ಅಧಿಕಾರ ಪಡೆಯುವುದಕ್ಕಾಗಿ ಜನಾಂಗೀಯ ಹತ್ಯೆ ಮಾಡುವವರು ಮುಂತಾದವರು ಕೂಡ ಭಯೋತ್ಪಾದಕರೇ ಆಗಿದ್ದಾರೆ. ಆದರೆ ಇವರಿಗೆ ಶಿಕ್ಷೆ ಸಿಗುವುದು ಮಾತ್ರ ಅಪರೂಪ.

ಭಯೋತ್ಪಾದನೆಯನ್ನು ಕೇವಲ ಒಂದು ನಿರ್ದಿಷ್ಟ ಗುಂಪು ಅಥವಾ ನಿರ್ದಿಷ್ಟ ವ್ಯಕ್ತಿಗಳಿಗೆ ಸೀಮಿತಗೊಳಿಸುವ ಈ ಅರ್ಥ ನಿರೂಪಣೆ (Definition)ಯಿಂದಾಗಿ ಇಂದು ಜಾಗತಿಕವಾಗಿ ಭಯೋತ್ಪಾದನೆಯನ್ನು ಹೆಚ್ಚಾಗಿ ಮುಸ್ಲಿಮರೊಂದಿಗೆ ಥಳಕು ಹಾಕಲಾಗುತ್ತಿದೆ. ಇಂಗ್ಲೀಷಿನಲ್ಲಿ ಒಂದು ಗಾದೆಯಿದೆ. Give a dog a bad name and hang it (ಒಂದು ನಾಯಿಗೆ ಒಂದು ಕೆಟ್ಟ ಹೆಸರನ್ನಿಟ್ಟು ಅದನ್ನು ನೇಣಿಗೆ ಹಾಕು). ಜಗತ್ತಿನಲ್ಲಿ ಎಲ್ಲಾದರೂ ಯಾವುದಾದರೂ ಭಯೋತ್ಪಾದನಾ ಕೃತ್ಯ ಜರುಗಿದರೆ ಅದಕ್ಕೆ ಮುಸ್ಲಿಮರನ್ನು ಹೊಣೆಗಾರರನ್ನಾಗಿ ಮಾಡಿ ಅವರನ್ನು ಕಟಕಟೆಯಲ್ಲಿ ನಿಲ್ಲಿಸುವುದು ಸರ್ವೇಸಾಮಾನ್ಯವಾಗಿದೆ. ಕೆಲವೊಮ್ಮೆ ಯಾವುದಾದರೂ ನಿರಪರಾಧಿಯ ಮೇಲೆ ಈ ಕೃತ್ಯದ ಹೊಣೆಯನ್ನು ಹೊರಿಸಿ ಆತನಿಗೆ ಭಯೋ ತ್ಪಾದನೆಯ ಹಣೆಪಟ್ಟಿಯನ್ನು ಕಟ್ಟಿ ಆತನನ್ನು ಗಲ್ಲಿಗೇರಿಸುವುದೂ ಇದೆ. ಕೆಲವು ಮಂದಿ ಮುಸ್ಲಿಮರು ಅಥವಾ ಕೆಲವೊಮ್ಮೆ ಮುಸ್ಲಿಮೇತರರು ನಡೆಸುವ ಭಯೋ ತ್ಪಾದನಾ ಕೃತ್ಯಗಳಿಗೆ ಇಸ್ಲಾಮ್ ಮತ್ತು ಸರ್ವ ಮುಸ್ಲಿಮರನ್ನು ಹೊಣೆಯಾಗಿಸುವುದೂ ಇದೆ.

ಆದರೆ ವಾಸ್ತವವಾಗಿ ಮಧ್ಯಯುಗದ ಕಾಲದಲ್ಲಿ ಯೂರೋಪಿನ ಅಂಧಕಾರ ಗಳನ್ನು ಒದ್ದೋಡಿಸಿ ಬೆಳಕನ್ನು ಬೆಳಗಿಸಿದ ಇಸ್ಲಾಮ್ ಭಯವನ್ನು ಪೋಷಿಸುವ ಒಂದು ಧರ್ಮವಾಗಿರಲು ಸಾಧ್ಯವೇ? ಜಗತ್ತಿನಾದ್ಯಂತ 1.2 ಬಿಲಿಯನ್ ಅನುಯಾಯಿ ಗಳನ್ನು ಹೊಂದಿರುವ, ಅಮೇರಿಕಾದಲ್ಲಿ 7 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಇಸ್ಲಾಮ್ ನಿರಪರಾಧಿಗಳನ್ನು ಹತ್ಯೆ ಮಾಡಲು ಬೋಧಿಸುವ ಧರ್ಮವಾಗಲು ಸಾಧ್ಯವೇ? ಇಸ್ಲಾಮಿನ ಹೆಸರೇ ಶಾಂತಿ ಮತ್ತು ಶರಣಾಗತಿ ಎಂದಾಗಿರುವಾಗ ಅದು ಕೊಲೆ ಮತ್ತು ನಿರ್ನಾಮಕ್ಕೆ ಕರೆ ನೀಡುವ ಧರ್ಮವಾಗಲು ಸಾಧ್ಯವೇ?

ನಾವು ಬಹಳ ಕಾಲದಿಂದ ಇಂತಹ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುತ್ತಿರುವುದು ಮಾಧ್ಯಮಗಳಲ್ಲಿ ಮತ್ತು ಹಾಲಿವುಡ್ ಸಿನಿಮಾಗಳಲ್ಲಾಗಿದೆ. ಆದರೆ ವಾಸ್ತವವಾಗಿ ಇಸ್ಲಾಮ್ ಹಿಂಸೆಯನ್ನು ಬೋಧಿಸುತ್ತದೆಯೇ ಎಂಬುದನ್ನು ಅರಿಯಲು ನಾವು ಉತ್ತರವನ್ನು ಹುಡುಕಬೇಕಾಗಿರುವುದು ಇಸ್ಲಾಮಿನ ಮೂಲಭೂತ ಆಧಾರ ಗ್ರಂಥಗಳನ್ನು ಮತ್ತು ಅದರ ಚರಿತ್ರೆಯನ್ನಾಗಿದೆ.

Pin It on Pinterest

Please Share This

Share this post with your family & friends! ನಿಮ್ಮ ಕುಟುಂಬ ಹಾಗೂ ಗೆಳೆಯರೊಟ್ಟಿಗೆ ಈ ಸಂದೇಶವನ್ನು ಓದಲಿ!!

error: Alert: Content is protected !!
Subscribe To Our Newsletter
ನಮ್ಮ ವಾರ್ತಾಪತ್ರಕ್ಕೆ ಸದದ್ಯರಾಗಿರಿ.

Subscribe To Our Newsletter

ನಮ್ಮ ವಾರ್ತಾಪತ್ರಕ್ಕೆ ಸದದ್ಯರಾಗಿರಿ.

CONGRATS! YOU HAVE SUCCESSFULLY SUBSCRIBED. ಶುಭಾಷಯಗಳು! ನೀವು ಯಶಸ್ವಿಯಾಗಿ ಚಂದಾದಾರರಾಗಿದ್ದೀರಿ. Keep your eyes peeled for my next email! ನಮ್ಮ ಮುಂದಿನ ಇ-ಮೇಲ್‌ಗಳಿಗಾಗಿ ನಿಮ್ಮ ಕಣ್ನುಗಳನ್ನು ಕಾಯ್ದಿರಿಸಿಕೊಳ್ಳಿ!

body { font-family: “Poppins”, sans-serif; }