------------------------------------------------------------------------------------ ------------------------------------------------------------------------------------- --------------------------------------------------------------------------------------------- ---------------------------------------------------------------------------------------------
Want to Learn More(ಹೆಚ್ಚಿನ ಕಲಿಕೆಗಾಗಿ) ... Click Here or Subscribe

ಪರಮದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಲ್ಲಿ
ಪ್ರವಾದಿ ಮುಹಮ್ಮದ್(ﷺ)ರವರನ್ನು ತಿಳಿಯಿರಿ

اعرف نبيك ﷺ

ಪ್ರವಾದಿ(ﷺ)ರವರಿಗೆ ಜಾಹಿಲಿಯ್ಯತಿನ ಕೆಡುಕಿನಿಂದ ಅಲ್ಲಾಹನ ಸಂರಕ್ಷಣೆ:

ಪ್ರವಾದಿ(ﷺ)ರವರನ್ನು ಅವರ ಕಿರಿಯ ಪ್ರಾಯದಲ್ಲೇ ಅಲ್ಲಾಹನು ಸರ್ವ ವಿಧಧ ನೀಚ ಕೃತ್ಯಗಳಿಂದ ಮತ್ತು ಜಾಹಿಲಿಯ್ಯಾ ಕಾಲದಲ್ಲಿ ನಡೆಯುತ್ತಿದ್ದ ಸರ್ವ ರೀತಿಯ ಶಿರ್ಕ್ ಹಾಗೂ ಅಂಧವಿಶ್ವಾಸಗಳಿಂದ ಸಂರಕ್ಷಿಸಿ, ಸರ್ವ ರೀತಿಯ ಸದ್ಗುಣಗಳನ್ನು ದಯಪಾಲಿಸಿದನು. ಆದುದರಿ ಂದ ಜನರ ಮಧ್ಯೆ ಅವರು `ಅಲ್ ಅಮೀನ್’(ವಿಶ್ವಸ್ತನು) ಎಂಬ ಬಿರುದಿನಿಂದ ಪ್ರಸಿದ್ಧರಾ ಗಿದ್ದರು. ಖುರೈಶರು ಕಅಬಾಲಯವನ್ನು ಪುನರ್ ನಿರ್ಮಾಣ ಮಾಡಲು ತೀರ್ಮಾನಿಸಿ ಅವರು ಅದರ ಕೆಲಸವನ್ನಾರಂಭಿಸಿದರು. ಹಜರುಲ್ ಅಸ್ವದನ್ನು ಇಡುವ ಸ್ಥಳದ ವಿಷಯದಲ್ಲಿ ಅಲ್ಲಿಯ ಗೋತ್ರಗಳ ಮಧ್ಯೆ ಭಿನ್ನಾಭಿಪ್ರಾಯ ತಲೆ ದೋರಿತು. ಪ್ರತಿಯೊಂದು ಗೋತ್ರದವರು ನಾವು ಅದನ್ನು ಇಡುತ್ತೇವೆ, ನಾವು, ನಾವು ಎನ್ನುತ್ತಾ ಹೀಗೆ ಭಿನ್ನಾಭಿಪ್ರಾಯ ತಲೆದೋರಿದಾಗ ಕೊನೆಗೆ ಅವರ ಮಧ್ಯೆ ಉಂಟಾದ ತೀರ್ಪು: ಮೊಟ್ಟಮೊದಲು ಅವರ ಕಡೆಗೆ ಹಾದು ಬರುವವರ್ಯಾರೋ ಅವರ ತೀರ್ಮಾನವನ್ನು ನಾವು ಸ್ವೀಕರಿಸೋಣ ಎಂದಾಗಿತ್ತು. ಹಾಗೆ ಅವರ ಬಳಿಗೆ ಮೊಟ್ಟಮೊದಲಾಗಿ ಪ್ರವಾದಿ(ﷺ)ರವರು ಹಾದು ಬಂದರು. ಅವರು ಸಂತೋಷ ಗೊಂಡರು. ವಿಶ್ವಸ್ತತೆಯಲ್ಲೂ, ಪಾವಿತ್ರ್ಯತೆಯಲ್ಲೂ, ಸತ್ಯಸಂಧತೆಯಲ್ಲೂ ಅವರ ಬಳಿಯಲ್ಲಿ ಉತ್ತುಂಗತೆಗೇರಿದ್ದ ಪ್ರವಾದಿ(ﷺ) ರವರನ್ನು ಕಂಡಾಗ ಅವರು ಘೋಷಣೆ ಕೂಗಿದರು:

`ಅಲ್ ಅಮೀನ್’ ಬಂದಿದ್ದಾರೆ ಅವರ ತೀರ್ಮಾನವನ್ನು ನಾವು ಸ್ವೀಕರಿಸೋಣ. ಹಾಗೆ ಅವರು ತೃಪ್ತರಾದರು. ಆ ಮೇಲೆ ಪ್ರವಾದಿ(ﷺ)ರವರ ಬೇಡಿಕೆಯಂತೆ ಒಂದು ಬಟ್ಟೆಯನ್ನು ತರಲಾಯಿತು. ಆ ಬಟ್ಟೆಯ ಮೇಲೆ ತಮ್ಮ ಪವಿತ್ರವಾದ ಕೈಯಲ್ಲಿ ಹಜರುಲ್ ಅಸ್ವದನ್ನು ಇಟ್ಟ ಬಳಿಕ ಆ ಬಟ್ಟೆಯ ತುದಿಗಳನ್ನು ಪ್ರತಿಯೊಂದು ಗೋತ್ರದ ಮುಖಂಡರೊಡನೆ ಹಿಡಿಯಲು ಸೂಚಿಸಿದರು. ಹಾಗೆ ಅದರ ಸ್ಥಾನಕ್ಕೆ ತಲುಪಿದಾಗ ಪ್ರವಾದಿ(ﷺ)ರವರು ತಮ್ಮ ಕೈಯಿಂದಲೇ ಹಜರುಲ್ ಅಸ್ವದನ್ನು ಅದರ ಸೂಕ್ತ ಭಾಗದಲ್ಲಿಟ್ಟರು. ಇದನ್ನು ಕಂಡ ಖುರೈಶರು ತುಂಬಾ ಸಂತೋಷಭರಿತರಾದರು. ಯುದ್ಧದ ವರೆಗೂ ತಲುಪಿದ್ದ ಸಮಸ್ಯೆಯನ್ನು ಅತ್ಯಂತ ಸರಳವಾದ ರೀತಿಯಲ್ಲಿ ಪರಿಹರಿಸಿ ಕೊಟ್ಟ ಪ್ರವಾದಿ(ﷺ)ರವರ ಬುದ್ಧಿಯನ್ನು ಕಂಡು ಅವರು ಅಚ್ಚರಿ ಗೊಂಡರು. ಈ ಘಟನೆಯು ಇಮಾಮ್ ಅಹ್ಮದರ ಮುಸ್ನದ್‍ನಲ್ಲೂ ಮತ್ತು ಹಾಕಿಮ್‍ನಲ್ಲೂ ವರದಿಯಾಗಿದೆ.

ಪ್ರವಾದಿ(ﷺ)ರವರ ವಿವಾಹ:

25ನೇ ವಯಸ್ಸು ಪ್ರಾಯದಲ್ಲಿ ಪ್ರವಾದಿ(ﷺ)ರವರು ಖದೀಜ(ರ)ರವರನ್ನು ವಿವಾಹವಾದರು. ಖದೀಜ(ರ) ರವರ ದಾಸರಾದ ಮೈಸರರೊಂದಿಗೆ ಖದೀಜ(ರ) ರವರ ನಿರ್ದೇಶನದ ಪ್ರಕಾರ ಪ್ರವಾದಿ(ﷺ)ರವರು ಶಾಮಿಗೆ(ಸಿರಿಯಾ) ವ್ಯಾಪಾರಕ್ಕಾಗಿ ತೆರಳಿದರು. ಹಾಗೆ ಮೈಸರ ಪ್ರವಾದಿ(ﷺ)ರವರ ವಿಶ್ವಸ್ತತೆಯನ್ನೂ, ಸೌಮ್ಯತೆ ಯನ್ನೂ, ಸದ್ಗುಣವನ್ನೂ ದರ್ಶಿಸಿ ಅದನ್ನು ತನ್ನ ಯಜಮಾನರಾದ ಖದೀಜರಿಗೆ ವಿವರಿಸಿ ಕೊಟ್ಟಾಗ ಅವರು ಪ್ರವಾದಿವರ್ಯರನ್ನು ವಿವಾಹವಾಗಲು ಇಚ್ಛೆ ಯನ್ನು ವ್ಯಕ್ತಪಡಿಸಿದರು. ಅಂದು ಅವರಿಗೆ 40 ವಯಸ್ಸು ಪ್ರಾಯ ಮತ್ತು ವಿಧವೆಯೂ ಆಗಿದ್ದರು.

ನುಬುವತ್ತಿನ ನಂತರÀ ಪ್ರವಾದಿ(ﷺ)ರವರು ಮದೀನಾ ಗೆ ಹಿಜಿರ ಹೋಗುವುದಕ್ಕಿಂತ ಮೂರು ವರ್ಷ ಮುಂಚೆ ಖದೀಜ(ರ)ರವರು ಮರಣ ಹೊಂದಿದರು. ಖದೀಜ (ರ)ರವರು ಮರಣ ಹೊಂದುವ ವರೆಗೆ ಪ್ರವಾದಿ (ﷺ)ರವರು ಇನ್ನೊಂದು ವಿವಾಹವಾಗಿರಲಿಲ್ಲ ಖದೀಜ (ರ)ರವರ ವಫಾತಿನ ಬಳಿಕ ಪ್ರವಾದಿ(ﷺ)ರವರು `ಸಂಅಃರ ಮಗಳು ಸೌದಃ(ರ)ರವರನ್ನು ವಿವಾಹವಾ ದರು. ಆ ಮೇಲೆ ಅಬೂಬಕರ್ ಸಿದ್ದೀಖ್(ರ) ರವರ ಪುತ್ರಿ ಆಇಶಾ(ರ)ರವರನ್ನು ವಿವಾಹವಾದರು. ಪ್ರವಾದಿ (ﷺ)ರವರು ಆಇಶಾ(ರ)ರನ್ನಲ್ಲದೆ ಕನ್ಯೆಯಾಗಿ ಇತರ ಯಾರನ್ನೂ ವಿವಾಹವಾಗಿರಲಿಲ್ಲ. ಅದರ ಬಳಿಕ ಉಮರ್ ಇಬ್ನ್ ಖತ್ತಾಬ್(ರ)ರವರ ಪುತ್ರಿ ಹಫ್ಸ(ರ) ರವರನ್ನು ವಿವಾಹವಾದರು. ನಂತರ ಹಾರಿಸರ ಮಗಳು ಖುಸೈಮರ ಪುತ್ರಿಯಾದ ಝೈನಬ(ರ) ರವರನ್ನು ವಿವಾಹವಾದರು. ಆ ಬಳಿಕ ಉಮಯ್ಯರ ಪುತ್ರಿಯಾದ ಉಮ್ಮು ಸಲಮ ಎಂಬ ಕುನಿಯತ್ತಿನಿಂದ ಕರೆಯಲ್ಪಡುವ ಹಿಂದರನ್ನು ವಿವಾಹವಾದರು. ಅದರ ನಂತರ ಜಹ್‍ಶಿಯ ಮಗಳು ಝೈನಬ(ರ)ರನ್ನು ಪ್ರವಾದಿವರ್ಯರು ವಿವಾಹವಾದರು. ಆ ಮೇಲೆ ಹಾರಿಸರ ಮಗಳು ಜುವೈರಿಯ್ಯಾ ರನ್ನು ವಿವಾಹ ವಾದರು. ನಂತರ ಉಮ್ಮು ಹಬೀಬರಾದ ಅಬೂ ಸುಫಿಯಾನರ ಮಗಳು ರಮ್ಲಃ(ರ)ರನ್ನು ವಿವಾಹವಾ ದರು. ಖೈಬರ್ ಯುದ್ಧದ ವೇಳೆಯಲ್ಲಿ ಉಯೈಯ್ ಇಬ್ನ್ ಅಹ್‍ತ್ವಬರ ಪುತ್ರಿಯಾದ ಸ್ವಫಿಯ್ಯಾ(ರ) ರವರನ್ನು ವಿವಾಹವಾದರು. ಕೊನೆಯದಾಗಿ ಹಾರಿಸರ ಪುತ್ರಿಯಾದ ಮೈಮೂನ(ರ)ರವರನ್ನು ವಿವಾಹವಾ ದರು.

 (ಮುಂದುವರೆಯುತ್ತದೆ إن شاء الله‎‎)

Pin It on Pinterest

Please Share This

Share this post with your family & friends! ನಿಮ್ಮ ಕುಟುಂಬ ಹಾಗೂ ಗೆಳೆಯರೊಟ್ಟಿಗೆ ಈ ಸಂದೇಶವನ್ನು ಓದಲಿ!!

error: Alert: Content is protected !!
Subscribe To Our Newsletter
ನಮ್ಮ ವಾರ್ತಾಪತ್ರಕ್ಕೆ ಸದದ್ಯರಾಗಿರಿ.

Subscribe To Our Newsletter

ನಮ್ಮ ವಾರ್ತಾಪತ್ರಕ್ಕೆ ಸದದ್ಯರಾಗಿರಿ.

CONGRATS! YOU HAVE SUCCESSFULLY SUBSCRIBED. ಶುಭಾಷಯಗಳು! ನೀವು ಯಶಸ್ವಿಯಾಗಿ ಚಂದಾದಾರರಾಗಿದ್ದೀರಿ. Keep your eyes peeled for my next email! ನಮ್ಮ ಮುಂದಿನ ಇ-ಮೇಲ್‌ಗಳಿಗಾಗಿ ನಿಮ್ಮ ಕಣ್ನುಗಳನ್ನು ಕಾಯ್ದಿರಿಸಿಕೊಳ್ಳಿ!

body { font-family: “Poppins”, sans-serif; }