------------------------------------------------------------------------------------ ------------------------------------------------------------------------------------- --------------------------------------------------------------------------------------------- ---------------------------------------------------------------------------------------------
Want to Learn More(ಹೆಚ್ಚಿನ ಕಲಿಕೆಗಾಗಿ) ... Click Here or Subscribe

ಪರಮದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಲ್ಲಿ
ಪ್ರವಾದಿ ಮುಹಮ್ಮದ್(ﷺ)ರವರನ್ನು ತಿಳಿಯಿರಿ

اعرف نبيك ﷺ

ಮರ್ದನೆಯ ಸಂದರ್ಭಗಳಲ್ಲಿ ಪ್ರವಾದಿ(ﷺ)ರವರ ಸಹನೆ:

ಧರ್ಮ ಬೋಧನೆಯೊಂದಿಗೆ ಮುನ್ನಡೆದಾಗ ಪ್ರವಾದಿ (ﷺ)ರವರು ತಮ್ಮ ಸ್ವಸಮುದಾಯದಿಂದಲೇ ಸಹಿಸ ಲಾಗದ ಮರ್ದನೆಗಳನ್ನು ಎದುರಿಸಬೇಕಾಯಿತು. ಆ ಸಂದರ್ಭಗಳಲ್ಲೆಲ್ಲಾ ಅಲ್ಲಾಹನಿಂದಿರುವ ಪ್ರತಿಫಲ ವನ್ನು ಉದ್ದೇಶಿಸಿ ಪ್ರವಾದಿ(ﷺ)ರವರು ಸಹನೆ ಕೈ ಗೊಂಡರು. ತಮ್ಮ ಮೇಲೆ ವಿಶ್ವಾಸವನ್ನಿಟ್ಟವರ ಮೇಲಿನ ಮರ್ದನೆ ಯು ಕಠಿಣವಾದಾಗ ಅನುಚರ ರೊಡನೆ ಅಬಿಸೀನಿ ಯಾ (ಯಥ್ಯೋಪ್ಯಾ)ಗೆ ವಲಸೆ (ಹಿಜಿರ) ಹೋಗಲು ಆದೇಶಿಸಿದರು. ಪ್ರವಾದಿ(ﷺ)ರವರ ಅದೇಶಕ್ಕನುಸಾರ ಅವರು ಅಬಿಸೀನಿಯಾಗೆ ವಲಸೆ ಹೋದರು.

ಇಬ್ನ್ ಇಸ್ಹಾಖ್ ಹೇಳುತ್ತಾರೆ: ಅಬೂತ್ವಾಲಿಬ್ ಮರಣ ಹೊಂದಿದಾಗ ಖುರೈಶಿಗಳು ಪ್ರವಾದಿ(ﷺ) ರವರನ್ನು ಅತ್ಯಧಿಕವಾಗಿ ಮರ್ದಿಸಲಾರಂಭಿಸಿದರು. ಅದನ್ನು ಪ್ರವಾದಿ(ﷺ)ರವರೇ ಹೀಗೆ ಹೇಳುತ್ತಾರೆ:

“ಚಿಕ್ಕಪ್ಪರವರೇ, ತಾವು ಇಷ್ಟು ಬೇಗ ವಿದಾಯ (ಮರಣ) ಹೇಳುವಿರೆಂದು ನಾನು ಭಾವಿಸಿರಲಿಲ್ಲ.’’ ಅಂದರೆ ಅಬೂತ್ವಾಲಿಬ್ ಮರಣ ಗೊಂಡ ಬಳಿಕ ಖುರೈಶಿಗಳು ಪ್ರವಾದಿ(ﷺ)ರವರನ್ನು ಅತ್ಯಧಿಕವಾಗಿ ಉಪದ್ರವಿಸಲಾರಂಭಿಸಿದರು.

ಅಬ್ದುಲ್ಲಾಹ್ ಇಬ್ನ್ ಮಸ್‍ಊದ್(ರ)ರವರಿಂದ ವರದಿ: ಪ್ರವಾದಿ(ﷺ)ರವರು ಕಅಬಾಲಯದ ಸಮೀಪದಲ್ಲಿ ನಮಾಝ್ ನಿರ್ವಹಿಸುತ್ತಿದ್ದರು. ಆಗ ಅಬೂ ಜಹಲ್ ಮತ್ತು ಆತನ ಸಂಗಡಿಗರು ಅಲ್ಲಿ ಕುಳಿತು ಕೊಂಡಿದ್ದರು. ಅವರು ಪರಸ್ಪರ ಹೀಗೆನ್ನು ತ್ತಿದ್ದರು: ಇಂತಹ ವ್ಯಕ್ತಿಯ ಬಳಿಗೆ ಹೋಗಿ ಒಂಟೆಯ ಕೊಳೆತ ಕರಳನ್ನು ತಂದು ಮುಹಮ್ಮದ್(ﷺ) ಸುಜೂದಿಗೆ ಹೋದಾಗ ಅವರ ಕೊರಳಿನ ಮೇಲೆ ಹಾಕುವರ್ಯಾರು? ಆಗ ಅವರಲ್ಲಿ ದೌಭಾಗ್ಯವಂತರಾದ ಕೆಲವರು ಅದನ್ನು ತಂದು ಪ್ರವಾದಿ(ﷺ)ರವರು ಯಾವಾಗ ಸುಜೂದಿಗೆ ಹೋಗುತ್ತಾರೆಂಬುವುದನ್ನು ಕಾಯುತ್ತಾ ಸುಜೂದಿಗೆ ಹೋದಾಗ ಪ್ರವಾದಿ(ﷺ)ರವರ ಹೆಗಲ ಮತ್ತು ಕೊರಳಿನ ಮಧ್ಯೆ ಭಾಗಕ್ಕೆ ಅದನ್ನು ಆ ದುಷ್ಠರು ಹಾಕಿಯೇ ಬಿಟ್ಟರು. ಅಬ್ದುಲ್ಲಾಹ್ ಇಬ್ನ್ ಮಸ್‍ಊದ್()ರವರು ಹೇಳುತ್ತಾರೆ: ಆಗ ನನಗೆ ಏನನ್ನೂ ಮಾಡಲಿಕ್ಕೆ ಸಾಧ್ಯವಾಗಿಲ್ಲ. ಸಾಧ್ಯವಾಗಿರುತ್ತಿದ್ದರೆ ಕೂಡಲೇ ನಾನದನ್ನು ತೆಗೆಯುತ್ತಿದ್ದೆ. ಖುರೈಶರು ಪ್ರವಾದಿ(ﷺ) ರವರ ಪ್ರಯಾಸವನ್ನು ನೋಡಿ ಅವರು ಪರಸ್ಪರ ವ್ಯಂಗ್ಯ ಮಾಡಿ ನಗುತ್ತಲೂ ಆನಂದಿಸುತ್ತಲೂ ಇದ್ದರು. ಇನ್ನೂ ಪ್ರವಾದಿ(ﷺ)ರವರು ಏಳಲಿಕ್ಕಾಗದೆ ಸುಜೂದಿನಲ್ಲೇ ಇದ್ದಾರೆ. ತಕ್ಷಣ ಪುತ್ರಿ ಫಾತಿಮಾ (ರ)ರವರು ಅಲ್ಲಿಗೆ ಆಗಮಿಸಿದೊಡನೆ ಅದನ್ನು ತೆಗೆದು ಹಾಕಿದರು. ಆ ಬಳಿಕ ಪ್ರವಾದಿ(ﷺ)ರವರು ಸುಜೂದ್ ನಿಂದ ಎದ್ದು ಅವರಿಗೆ ವಿರುದ್ಧ ಪ್ರಾರ್ಥಿಸಿದರು: ಅಲ್ಲಾಹನೇ ನೀನು ಖುರೈಶಿಗಳನ್ನು ನಾಶ ಮಾಡು. ಹೀಗೆ ಮೂರು ಬಾರಿ ಪುನರಾವರ್ತಿಸಿದರು. ಪ್ರವಾದಿ (ﷺ)ರವರ ಪ್ರಾರ್ಥನೆಯನ್ನು ಅವರು ಆಲಿಸುತ್ತಿದ್ದರು. ಪವಿತ್ರ ಮಕ್ಕಾ ಪ್ರಾರ್ಥನೆಗೆ ಉತ್ತರ ಲಭಿಸುವ ಸ್ಥಳ. ಆದುದರಿಂದ ಅವರಿಗೆ ಅತ್ಯಧಿಕ ಮನಃಪ್ರಯಾಸವುಂ ಟಾಯಿತು. ಪ್ರವಾದಿ(ﷺ)ರವರು ಪ್ರಾರ್ಥನೆಯನ್ನು ಮುಂದುವರಿ ಸುತ್ತಾರೆ: ಅಲ್ಲಾಹನೇ, ಅಬೂ ಜಹ್‍ಲ್, ಉತ್‍ಬ ಬಿನ್ ರಬೀಅಃ, ಶೈಬ ಬಿನ್ ರಬೀಅಃ, ವಲೀದ್ ಬಿನ್ ಉತ್‍ಬ, ಉಮಯ್ಯ ಬಿನ್ ಖಲಫ್, ಉಖ್‍ಬ ಬಿನ್ ಅಬೀಮುಈತ್ವ್ ಮುಂತಾದವರನ್ನು ನೀನು ನಾಶ ಮಾಡು! ಹೀಗೆ ಏಳನೇ ವ್ಯಕ್ತಿಯ ಹೆಸರನ್ನೂ ಪ್ರವಾದಿ(ﷺ)ರವರು ಎಣಿಸಿದರು. ಆ ಹೆಸರು ನನಗೆ ಮರೆತು ಹೋಯಿತು. ಅಲ್ಲಾಹನ ಮೇಲಾಣೆ! ಪ್ರವಾದಿ(ﷺ)ರವರು ಅಂದು ಎಣಿಸಿ, ಎಣಿಸಿ ಹೇಳಿದ ಪ್ರತಿಯೊಬ್ಬರನ್ನೂ ಬದ್ರ್ ಯುದ್ಧದಲ್ಲಿ ಸತ್ತು ಮಾಲಿನ್ಯಭರಿತ ಬಾವಿಯೊಳಗೆ ಬಿದ್ದಿರುವುದನ್ನು ನಾನು ಕಂಡಿರುವೆನು.(ಬುಖಾರಿ, ಮುಸ್ಲಿಂ)

ಉರ್ವತುಬಿನ್ ಝುಬೈರ್(ರ)ರವರು ಹೇಳುತ್ತಾರೆ: ಮುಶ್ರಿಕರು ಪ್ರವಾದಿ(ﷺ)ರವರ ಮೇಲೆ ಮಾಡಿದ ಪೀಡನೆಯ ಕಾಠಿಣ್ಯತೆಯ ಬಗ್ಗೆ ನಾನು ಅಬ್ದುಲ್ಲಾಹ್ ಬಿನ್ ಅಂರ್(ರ)ರವರಲ್ಲಿ ವಿಚಾರಿಸಿದೆ: ಅವರು ಹೀಗಂದರು: ಉಖ್‍ಬತ್‍ಬಿನ್ ಅಬೂ ಮುಈತ್ವನು ಒಮ್ಮೆ ನಮಾಝ್ ನಿರ್ವಹಿಸುತ್ತಿದ್ದ ಪ್ರವಾದಿ(ﷺ)ರವರ ಬಳಿಗೆ ಬಂದು ಅತನ ಕೈಯಲ್ಲಿದ್ದ ಟವಲಿನಿಂದ ಪ್ರವಾದಿ(ﷺ)ರವರ ಕೊರಳಿಗೆ ಸುತ್ತಿ ನೋವಿಸಿದನು. ಆಗ ಅಲ್ಲಿಗೆ ಆಗಮಿಸಿದ ಅಬೂಬಕರ್(ರ)ರವರು ಹೇಳಿದರು: “ನನ್ನ ಪ್ರಭು ಅಲ್ಲಾಹನು ಎಂದ ಕಾರಣಕ್ಕೊ ಇವರನ್ನು ನೀವು ಕೊಲ್ಲುತ್ತಿರುವುದು. ಅವರು ನಿಮ್ಮ ಪ್ರಭುವಿನ ಬಳಿಯಿಂದ ವ್ಯಕ್ತವಾದ ಆಧಾರ ಪ್ರಮಾಣವನ್ನು ತಂದಿರುವಾಗ’’(ಬುಖಾರಿ)

ಪ್ರವಾದಿ(ﷺ)ರವರಿಗೆ ತನ್ನ ಸಮೂಹದೊಂದಿಗಿದ್ದ ಕಾರುಣ್ಯ:

ಖದೀಜ(ರ) ಮತ್ತು ಅಬೂತ್ವಾಲಿಬ್‍ರ ಮರಣಾ ನಂತರ ಪ್ರವಾದಿ(ﷺ)ರವರ ಮೇಲೆ ಶತ್ರುಗಳ ಮರ್ದನೆ ಗಳು ಇನ್ನಷ್ಟು ವೃದ್ಧಿಸಿತು. ಅವರು ಅತಿ ಕಠಿಣವಾಗಿ ಪೀಡಿಸ ತೊಡಗಿದರು. ಆ ವೇಳೆಯಲ್ಲಿ ತಮ್ಮ ಸಂಬಂ ಧಿಕರಿರುವ ತ್ವಾಇಫಿನೆಡೆಗೆ ಸ್ವಲ್ಪ ಆಶ್ವಾಸನೆಗಾಗಿಯೂ ಬೋಧನೆಗಾಗಿಯೂ ತೆರಳಿದರು. ಅಲ್ಲಿದ್ದ ಥಲೀಫ್ ಗೋತ್ರವನ್ನು ಇಸ್ಲಾಮಿನೆಡಗೆ ಆಹ್ವಾನಿಸಿದರು. ಆದರೆ ಅವರ ಪ್ರತಿಕ್ರಿಯೆಯು ಅನಿರೀಕ್ಷಿತವಾದ ರೀತಿಯಲ್ಲಾ ಗಿತ್ತು. ಅವರು ಪ್ರವಾದಿ(ﷺ)ರವರನ್ನು ಕಠಿಣವಾಗಿ ಉಪದ್ರವಿಸಲಾರಂಭಿಸಿದರು. ಪ್ರವಾದಿ(ﷺ)ರವರನ್ನು ಭೀಕರವಾಗಿ ಪೀಡಿಸಿದರು, ಕಲ್ಲೆಸೆದು ಓಡಿಸಿದರು. ಆ ಕಾರಣದಿಂದ ಪ್ರವಾದಿ(ﷺ)ರವರ ಕಾಲಿಗೆ ಗಾಯವಾಗಿ ರಕ್ತ ಹರಿಯಲಾರಂಭಿಸಿತು. ಹಾಗೆ ಅವರು ಮಕ್ಕಾದೆ ಡೆಗೇ ಮರಳಲು ನಿರ್ಬಂಧಿತರಾದರು. ಈ ವಿಷಯ ವನ್ನು ಸ್ವಯಂ ಪ್ರವಾದಿ(ﷺ)ರವರೇ ವಿವರಿಸುವುದನ್ನು ಬುಖಾರಿ ಮತ್ತು ಮುಸ್ಲಿಂ ಉಲ್ಲೇಖಿಸುತ್ತಾರೆ: “ತುಂಬಾ ದುಃಖದಿಂದ ನಾನು ಅಲ್ಲಿಂದ ಮರಳಿ ಬಂದೆ. ದುಃಖದ ಕಾರಣದಿಂದ ನನಗೆ ಮಾನಸಿಕವಾಗಿ ಪ್ರಯಾ ಸವುಂಟಾಯಿತು. ಹಾಗೆ ಮಕ್ಕಾದ ಪಕ್ಕದಲ್ಲಿರುವ ಖರ್‍ನುಸಆಲಿಬ್ ಎಂಬ ಸ್ಥಳಕ್ಕೆ ತಲುಪಿದಾಗ ನಾನು ನನ್ನ ತಲೆ ಎತ್ತಿ ನೋಡಿದೆ. ಆಗ ಮೋಡವು ನನಗೆ ನೆರಳನ್ನು ಹಾಸಿದೆ. ನಂತರ ನಾನು ಕಣ್ಣೆತಿ ಮೇಲೆ ನೋಡಿದೆ, ಆಗ ಜಿಬ್ರೀಲ್() ನನ್ನನ್ನು ಕರೆದು ಹೇಳುತ್ತಿದ್ದಾರೆ: ತಮ್ಮೊಂದಿಗೆ ನಿಮ್ಮ ಸಮೂಹ ಹೇಳಿರು ವುದನ್ನು ಖಂಡಿತ ಅಲ್ಲಾಹನು ಆಲಿಸಿದ್ದಾನೆ. ತಮಗೆ ಅವರು ಉತ್ತರ ಕೊಡಲಿಲ್ಲ. ಆದುದರಿಂದ ತಾವು ಹೇಳುವ ಶಿಕ್ಷೆಯನ್ನು ಅವರ ಮೇಲೆ ಎರಗಲು ಅಲ್ಲಾಹನು ಪರ್ವತದ ಮಲಕನ್ನು ಕಳುಹಿಸಿದ್ದಾನೆ. ತಕ್ಷಣ ಪರ್ವತಗಳ ಮಲಕ್ ಕರೆದು ಸಲಾಂ ಹೇಳಿ ನಂತರ ಹೀಗೆಂದಿತು: ಮುಹಮ್ಮದರೇ, ತಾವು ಉದ್ದೇಶಿ ಸುವುದನ್ನು ಅಪ್ಪಣೆ ಕೊಡಿರಿ. ತಾವು ಉದ್ದೇಶಿಸು ವುದಾದರೆ ಅಖ್‍ಶಬೈನಿಯ(ಮಕ್ಕಾದ ಎರಡು ಪರ್ವತ ಗಳು) ಆಚೆ ಕಡೆಯಲ್ಲಿ ಅವರನ್ನು ನಾಶ ಗೊಳಿಸಲಾ ಗುವುದು. ಆಗ ಕಾರುಣ್ಯದ ಪ್ರವಾದಿ(ﷺ) ರವರು ಹೇಳುತ್ತಾರೆ: ಬೇಡ, ಒಂದು ವೇಳೆ ಅವರ ಬೆನ್ನಿನಿಂದ ಅಲ್ಲಾಹನನ್ನು ಮಾತ್ರ ಆರಾಧಿಸುವ ಮತ್ತು ಅವನಿಗೆ ಯಾರನ್ನೂ ಸಹಭಾಗಿಯನ್ನಾಗಿ ಸೇರಿಸದ ವರನ್ನು ಅಲ್ಲಾಹನು ಸೃಷ್ಟಿಸಬಹುದು. ಅದನ್ನು ನಾನು ಬಯಸುತ್ತೇನೆ.’’(ಬುಖಾರಿ).

ಪ್ರವಾದಿ(ﷺ)ರವರು, ಅವರಿಗೆ ಶಿಕ್ಷೆ ಕೊಡಿರಿ ಎಂದರೆ ಸಾಕಾಗುತ್ತಿತ್ತು, ತಕ್ಷಣ ಅಲ್ಲಾಹನ ಶಿಕ್ಷೆ ಎರಗುತ್ತಿತ್ತು ಖಚಿತ. ಆದರೆ ಕಾರುಣ್ಯದ ಪ್ರವಾದಿ(ﷺ)ರವರು ತಮ್ಮ ಸಮೂಹದ ಮೇಲೆ ಅತ್ಯಧಿಕ ಕಾರುಣ್ಯವನ್ನು ತೋರುವವರಾಗಿದ್ದಾರೆ. ಆದುದರಿಂದ ಆ ಪ್ರಯಾಸ ಘಟ್ಟದಲ್ಲೂ ಕಾರುಣ್ಯದ ಅಪ್ರತಿಮ ಮಾದರಿಯನ್ನು ಅವರಲ್ಲಿ ಕಾಣಲು ಸಾಧ್ಯವಾಯಿತು.

ಪ್ರವಾದಿ(ﷺ)ರವರು ಪ್ರತಿಯೊಂದು ಹಜ್ಜ್‍ನ ಮತ್ತು ಇನ್ನಿತರ ಸಂದರ್ಭದಲ್ಲಿ ಪ್ರತಿ ಗೋತ್ರವನ್ನು ಸಮೀಪಿಸಿ ಹೇಳುತ್ತಿದ್ದರು: “ನನಗೆ ಅಭಯ ನೀಡಲು ಯಾರಿದ್ದಾರೆ, ನನಗೆ ಸಹಾಯ ಮಾಡಲು ಯಾರಿದ್ದಾರೆ, ಕಾರಣ ಖುರೈಶಿಗಳು ನನ್ನ ಪ್ರಭುವಿನ ಸೂಕ್ತಿಗಳನ್ನು ಉಚ್ಛರಿ ಸುವುದರಿಂದ ನನ್ನನ್ನು ತಡೆಯುತ್ತಿದ್ದಾರೆ.’’

ಹಾಗೆ ಒಂದು ಹಜ್ಜ್‍ನ ವೇಳೆಯಲ್ಲಿ ಮಕ್ಕಾದಲ್ಲಿರುವ ಅಖಬಾಕ್ಕೆ ಸಮೀಪದಲ್ಲಿ ಆರು ವ್ಯಕ್ತಿಗಳನ್ನು ಕಂಡರು. ಬಳಿಕ ಅವರನ್ನು ಇಸ್ಲಾಮಿಗೆ ಆಹ್ವಾನಿಸಿದರು. ಅವರು ಆ ಆಹ್ವಾನವನ್ನು ಸ್ವೀಕರಿಸಿ ಇಸ್ಲಾಮ್‍ಗೆ ಪ್ರವೇಶಿಸಿ ಮುಸ್ಲಿಮರೊಂದಿಗೆ ಸೇರಿದರು. ನಂತರ ಮುಸ್ಲಿಮರಾದ ಆ ಆರು ಮಂದಿ ಮದೀನಾಕ್ಕೆ ಮರಳಿದರು. ನಂತರ ಅಲ್ಲಿ ಅವರ ಸಮೂಹವನ್ನು ಅವರು ಇಸ್ಲಾಮಿನೆಡೆಗೆ ಆಹ್ವಾನಿಸಿದರು. ಹಾಗೆ ಅವರ ಮೂಲಕ ಇಸ್ಲಾಮ್ ವ್ಯಾಪಿಸಿತು. ಹೀಗೆ ರಹಸ್ಯವಾದ ಒಂದನೆಯ ಮತ್ತು ಎರಡನೆಯ ಅಖಬ ಒಪ್ಪಂದ ನಡೆಯಿತು. ಆ ಮೇಲೆ ಪ್ರವಾದಿ(ﷺ)ರವರ ಆದೇಶಕ್ಕನುಸಾರ ಕಿರಿಯ ಕಿರಿಯ ಗುಂಪುಗಳಾಗಿ ವಿಶ್ವಾಸಿಗಳು ಮದೀನಾಗೆ ವಲಸೆ(ಹಿಜಿರ) ಹೋದರು.

 (ಮುಂದುವರೆಯುತ್ತದೆ إن شاء الله‎‎)

Pin It on Pinterest

Please Share This

Share this post with your family & friends! ನಿಮ್ಮ ಕುಟುಂಬ ಹಾಗೂ ಗೆಳೆಯರೊಟ್ಟಿಗೆ ಈ ಸಂದೇಶವನ್ನು ಓದಲಿ!!

error: Alert: Content is protected !!
Subscribe To Our Newsletter
ನಮ್ಮ ವಾರ್ತಾಪತ್ರಕ್ಕೆ ಸದದ್ಯರಾಗಿರಿ.

Subscribe To Our Newsletter

ನಮ್ಮ ವಾರ್ತಾಪತ್ರಕ್ಕೆ ಸದದ್ಯರಾಗಿರಿ.

CONGRATS! YOU HAVE SUCCESSFULLY SUBSCRIBED. ಶುಭಾಷಯಗಳು! ನೀವು ಯಶಸ್ವಿಯಾಗಿ ಚಂದಾದಾರರಾಗಿದ್ದೀರಿ. Keep your eyes peeled for my next email! ನಮ್ಮ ಮುಂದಿನ ಇ-ಮೇಲ್‌ಗಳಿಗಾಗಿ ನಿಮ್ಮ ಕಣ್ನುಗಳನ್ನು ಕಾಯ್ದಿರಿಸಿಕೊಳ್ಳಿ!

body { font-family: “Poppins”, sans-serif; }