------------------------------------------------------------------------------------ ------------------------------------------------------------------------------------- --------------------------------------------------------------------------------------------- ---------------------------------------------------------------------------------------------
Want to Learn More(ಹೆಚ್ಚಿನ ಕಲಿಕೆಗಾಗಿ) ... Click Here or Subscribe

ಹಿಂದೂ ವ್ಯಕ್ತಿ ಕೇಳುತ್ತಾನೆ: ಯಾವುದು ಶ್ರೇಷ್ಠ? ಹಿಂದೂ ಧರ್ಮವೋ? ಇಸ್ಲಾಂ ಧರ್ಮವೋ? ಯಾಕೆ?

هندوسي يتساءل : أيهما أفضل الهندوسية أم الإسلام ، ولماذا ؟

ಪ್ರಶ್ನೆ: ನಾನು ಹಿಂದೂ ಮಹಾಸಾಗರದಲ್ಲಿರುವ ಮೌರೀಷಿಯಸ್ ದೇಶದವನು. ಧರ್ಮಗಳಲ್ಲಿ ಯಾವುದು ಶ್ರೇಷ್ಠ? ಹಿಂದೂ ಧರ್ಮವೋ ಅಥವಾ ಇಸ್ಲಾಂ ಧರ್ಮವೋ? ದಯವಿಟ್ಟು ನನಗೆ ತಿಳಿಸಿಕೊಡಿ. ನಾನು ಹಿಂದೂ ಧರ್ಮದವನು.

ಉತ್ತರ: ಸರ್ವಸ್ತುತಿ ಅಲ್ಲಾಹನಿಗೆ ಮೀಸಲು.

ಯಾವ ಧರ್ಮದ ಬಗ್ಗೆ ಸೃಷ್ಟಿಕರ್ತನು ತೃಪ್ತಿಪಟ್ಟಿದ್ದಾನೆಂದು ಪುರಾವೆಯಿದೆಯೋ, ಜನರಿಗೆ ಐಹಿಕ ಜೀವನದಲ್ಲಿ ಸೌಭಾಗ್ಯ ವನ್ನು ನೀಡುವುದಕ್ಕಾಗಿ ಯಾವ ಧರ್ಮವನ್ನು ಸೃಷ್ಟಿಕರ್ತನು ಒಂದು ಪ್ರಕಾಶವಾಗಿ ಇಳಿಸಿಕೊಟ್ಟಿರುವನೆಂದು ಪುರಾವೆ ಯಿದೆಯೋ ಮತ್ತು ಯಾವ ಧರ್ಮವು ಪರಲೋಕದಲ್ಲಿ ಜನರನ್ನು ಕೈಹಿಡಿದು ರಕ್ಷಿಸುತ್ತದೆಯೆಂದು ಪುರಾವೆಯಿದೆಯೋ ಅದೇ ಶ್ರೇಷ್ಠವಾದ ಧರ್ಮ. ಆದರೆ ಪುರಾವೆ ಅಥವಾ ಆಧಾರವು ಅತ್ಯಂತ ಸ್ಪಷ್ಟವಾಗಿರಬೇಕು. ಜನರಿಗೆ ಆ ವಿಷಯ ದಲ್ಲಿ ಸಂಶಯ ಮೂಡಬಾರದು. ಅಂತಹ ಪುರಾವೆಗಳನ್ನು ತರುವ ಶಕ್ತಿ ಮನುಷ್ಯರಿಗೆ ಇರಬಾರದು. ಮಿಥ್ಯವಾದಿಗಳು ತಮ್ಮ ಮಿಥ್ಯವನ್ನು ಸಮರ್ಥಿಸಲು ಸುಳ್ಳು ಮತ್ತು ಬಲಹೀನ ಪುರಾವೆಗಳನ್ನು ತರುತ್ತಾರೆಂದು ಅಲ್ಲಾಹನಿಗೆ ಗೊತ್ತಿದೆ. ಆದುದರಿಂದ ತಾನು ಕಳುಹಿಸಿದ ಪ್ರವಾದಿಗಳನ್ನು ಅವನು ಪ್ರಬಲ ಮತ್ತು ಸಮಗ್ರ ಪವಾಡಗಳ ಮೂಲಕ ಬೆಂಬಲಿಸಲು ನಿರ್ಧರಿಸಿದ್ದಾನೆ. ಅಲ್ಲಾಹನಿಂದ ಸಂದೇಶಗಳನ್ನು ಸ್ವೀಕರಿಸು ತ್ತಿರುವ ಈ ಪ್ರವಾದಿಗಳು ಹೇಳುತ್ತಿರುವುದು ಸತ್ಯವೆಂದು ಜನರಿಗೆ ಮನದಟ್ಟಾಗಿ, ಅವರು ಆ ಪ್ರವಾದಿಗಳಲ್ಲಿ ವಿಶ್ವಾಸವಿಟ್ಟು ಅವರನ್ನು ಅನುಸರಿಸುವುದಕ್ಕಾಗಿ ಅವನು ಹೀಗೆ ಮಾಡಿದ್ದಾನೆ.

ಇಸ್ಲಾಂನ ಪ್ರವಾದಿಯಾದ ಮುಹಮ್ಮದ್(ﷺ)ರವರು ದಿಗ್ಭ್ರಮೆಗೊಳಿಸುವಂತಹ ಹಲವಾರು ಪವಾಡಗಳೊಂದಿಗೆ ಬಂದಿದ್ದರು. ಆ ಪವಾಡಗಳ ಬಗ್ಗೆ ಬೃಹತ್ ಗ್ರಂಥಗಳನ್ನು ರಚಿಸಲಾಗಿದೆ. ಅವುಗಳಲ್ಲಿ ಅತಿಪ್ರಮುಖವಾದ ಮತ್ತು ಅತಿದೊಡ್ಡ ಪವಾಡ ಆದರಣೀಯ ಕುರ್‍ಆನ್. ಎಲ್ಲ ವಿಧದಲ್ಲೂ ಕುರ್‍ಆನನ್ನು ಹೋಲುವಂತಹ ಒಂದು ಗ್ರಂಥವನ್ನು ರಚಿಸಿ ತರಲು ಅರಬ್ಬರಿಗೆ ಸವಾಲು ಹಾಕಲಾಗಿದೆ. ಕಾರಣ, ಕುರ್‍ಆನ್‍ನಲ್ಲಿ ಭಾಷಿಕ ಪವಾಡವಿದೆ. ಕುರೈಶರಲ್ಲಿ ಅತಿಹೆಚ್ಚು ನಿರರ್ಗಳವಾಗಿ ಅರೇಬಿಕ್ ಮಾತನಾಡುವ ಜನರಿಗೂ ಕೂಡ ಕುರ್‍ಆನ್‍ನಂತೆ ಮಾತನಾಡಲು ಸಾಧ್ಯವಾಗಿಲ್ಲ. ಕುರೈಶರು ಅರೇಬಿಕ್ ಸಾಹಿತ್ಯದ ವಿಷಯದಲ್ಲಿ ಅತ್ಯಂತ ಉತ್ತುಂಗದಲ್ಲಿರುವವರೆಂದು ಎಲ್ಲ ಚರಿತ್ರೆಗಾರರೂ ಒಪ್ಪಿಕೊಳ್ಳುತ್ತಾರೆ. ಆದರೂ ಕುರ್‍ಆನ್‍ನಂತಹ ಒಂದು ಗ್ರಂಥ ರಚಿಸಲು ಅವರಿಗೆ ಸಾಧ್ಯವಾಗಲಿಲ್ಲ.

ಕುರ್‍ಆನ್‍ನಲ್ಲಿ -ಅದೇ ರೀತಿ ಪ್ರವಾದಿಚರ್ಯೆಯಲ್ಲಿ- ವೈಜ್ಞಾನಿಕ ಪವಾಡಗಳಿವೆ. ಇಂದು ವೈಜ್ಞಾನಿಕವಾಗಿ ರುಜುವಾತಾದ ಅನೇಕ ಸಂಗತಿಗಳು ಶತಮಾನಗಳ ಹಿಂದೆಯೇ ಕುರ್‍ಆನ್ ಮತ್ತು ಪ್ರವಾದಿಚರ್ಯೆಯಲ್ಲಿ ಪ್ರಸ್ತಾಪಿಸಲಾಗಿದೆ. ದೈವಿಕ ಸಂದೇಶಗಳ ಮೂಲಕವಲ್ಲದೆ ಆ ಕಾಲದಲ್ಲಿ ಅಂತಹ ಒಂದು ಗ್ರಂಥವನ್ನು ರಚಿಸಿ ತರಲು ಮನುಷ್ಯನಿಗೆ ಸಾಧ್ಯವೇ ಇಲ್ಲ.

ಮಾತ್ರವಲ್ಲ, ಅದರಲ್ಲಿ ಅನೇಕ ಅದೃಶ್ಯ ಪವಾಡಗಳಿವೆ. ಭೂತಕಾಲದಲ್ಲಿ ನಡೆದ ಘಟನೆಗಳು ಮತ್ತು ಭವಿಷ್ಯದಲ್ಲಿ ನಡೆಯುವ ಘಟನೆಗಳ ಸೂಚನೆಗಳಿವೆ. ಮುಹಮ್ಮದ್(ﷺ)ರಿಗೆ ಇತಿಹಾಸದ ಬಗ್ಗೆ ಯಾವುದೇ ಪೂರ್ವಜ್ಞಾನವಿರಲಿಲ್ಲ. ಅಥವಾ ಆ ಕಾಲದಲ್ಲಿ ಇಂತಹ ಜ್ಞಾನವಿದ್ದ ಯಾವುದೇ ವ್ಯಕ್ತಿಯೂ ಇರಲಿಲ್ಲ. ಏನಾದರೂ ಇದ್ದಿದ್ದರೆ ಅದು ಗ್ರಂಥದವರಲ್ಲಿ ಕೆಲವರ ಬಳಿಯಿದ್ದ ಅವಶೇಷಗಳು ಮಾತ್ರ.

ಕುರ್‍ಆನ್‍ನಲ್ಲಿ ಶಾಸನಕ್ಕೆ ಸಂಬಂಧಿಸಿದ ಪವಾಡಗಳಿವೆ. ಕುರ್‍ಆನ್‍ನ ಶಾಸನವು ವೈಯುಕ್ತಿಕ ಸ್ವಭಾವ ಮತ್ತು ಶಿಷ್ಟಾಚಾರಗಳನ್ನು, ಕೌಟುಂಬಿಕ ಮತ್ತು ವೈಯುಕ್ತಿಕ ವಿಷಯ ಗಳಿಗೆ ಸಂಬಂಧಿಸಿದ ಕಾನೂನುಗಳನ್ನು, ಅಂತರಾಷ್ಟ್ರೀಯ ಸಂಬಂಧಗಳಿಗೆ ಸಂಬಂಧಿಸಿದ ಕಾನೂನುಗಳನ್ನು, ಸಾಮಾಜಿಕ ವಿಷಯಗಳಿಗೆ ಸಂಬಂಧಿಸಿದ ಕಾನೂನುಗಳನ್ನು, ಹೀಗೆ ಮಾನವ ಬದುಕಿಗೆ ಸಂಬಂಧವಿರುವ ಎಲ್ಲ ಕಾನೂನುಗಳನ್ನೂ ಒಳಗೊಂಡಿದೆ. ಅದು ನ್ಯಾಯ ಮತ್ತು ಸ್ವಾತಂತ್ರ್ಯದ ತತ್ವಗಳಿಗೆ ಅಸ್ಥಿವಾರವನ್ನು ಹಾಕಿದೆ. ಐಹಿಕ, ಅಗೋಚರ ಮತ್ತು ಪಾರಲೌಕಿಕ ಪರಿಕಲ್ಪನೆಗಳನ್ನು ದೃಢೀಕರಿಸುತ್ತದೆ. ಸ್ವರ್ಗ ಮತ್ತು ನರಕದ ಪರಿಕಲ್ಪನೆಯನ್ನು ದೃಢೀಕರಿಸುತ್ತದೆ. ಇವೆಲ್ಲವೂ ಹೊರಹೊಮ್ಮಿದ್ದು ಓದಲೋ ಬರೆಯಲೋ ತಿಳಿಯದ ಒಬ್ಬ ಅನಕ್ಷರಸ್ಥ ವ್ಯಕ್ತಿಯಿಂದ. ಈ ವ್ಯಕ್ತಿಯ ಸತ್ಯಸಂಧತೆಯನ್ನು ಮತ್ತು ವಿಶ್ವಾಸಯೋಗ್ಯತೆಯನ್ನು ಅವರ ಮಿತ್ರರಿಗಿಂತ ಹೆಚ್ಚು ಅವರ ಶತ್ರುಗಳೇ ಒಪ್ಪಿಕೊಳ್ಳುತ್ತಾರೆ. ನಾಲ್ಕು ನೂರು ವರ್ಷಗಳಿಗಿಂತಲೂ ಹೆಚ್ಚು ಕಾಲ ಬಾಳಿದ ಒಂದು ಅದ್ಭುತ ಇಸ್ಲಾಮೀ ನಾಗರಿಕತೆಗೆ ಈ ಕುರ್‍ಆನ್ ಎಂಬ ಗ್ರಂಥವು ಸಾಕ್ಷಿಯಾಗಿದೆ.

ನಮ್ಮ ಅಭಿಪ್ರಾಯ ಪ್ರಕಾರ ಶ್ರೇಷ್ಠ ಧರ್ಮವೆಂದರೆ, ನಿಮ್ಮನ್ನು ಒಂದು ಶಕ್ತಿಯೊಂದಿಗೆ ಬಂಧಿಸುವ ಧರ್ಮ. ಆ ಶಕ್ತಿಯು ನಿಮ್ಮನ್ನು ಸೃಷ್ಟಿಸಿ ಅನುಗ್ರಹಿಸಿದೆ. ಆ ಶಕ್ತಿ ಆಕಾಶಗಳನ್ನು ಮತ್ತು ಭೂಮಿಯನ್ನು ನಿಯಂತ್ರಿಸುತ್ತಿದೆ. ನೀವು ಆ ಶಕ್ತಿಯಲ್ಲಿ ವಿಶ್ವಾಸವಿಟ್ಟು ಸತ್ಕರ್ಮಗಳನ್ನು ಮಾಡಿದರೆ, ಆ ಶಕ್ತಿ ನಿಮ್ಮ ಮೇಲೆ ದಯೆ ತೋರಿಸಿ, ಪರಲೋಕದಲ್ಲಿ ನಿಮ್ಮೊಂದಿಗಿರುತ್ತದೆ. ಆ ಶಕ್ತಿಯೇ ಅಲ್ಲಾಹು. ಅವನು ಏಕೈಕನು, ಅದ್ವಿತೀಯನು, ಸ್ವಯಂಪರ್ಯಾಪ್ತನು ಮತ್ತು ಎಲ್ಲ ಸೃಷ್ಟಿಗಳನ್ನೂ ಸಂರಕ್ಷಿಸುವವನು. ಆ ಶ್ರೇಷ್ಠ ಧರ್ಮವು ನಿಮ್ಮನ್ನು ಅವನೊಂದಿಗಲ್ಲದೆ ಇನ್ನಾರೊಂದಿಗೂ ಬಂಧಿಸುವುದಿಲ್ಲ. ಕಾರಣ, ಅವನ ಹೊರತಾದವರೆಲ್ಲರೂ ಸೃಷ್ಟಿಗಳು ಮತ್ತು ಬಲಹೀನರು. ಅವನನ್ನು ಅವಲಂಬಿಸಿ ಕೊಂಡಿರುವವರು. ಹೀಗೆ ಇಸ್ಲಾಮಿನಲ್ಲಿ ವಿಶ್ವಾಸವಿಡುವ ಮೂಲಕ ಮನುಷ್ಯನು ಎಲ್ಲ ಬಂಧನಗಳಿಂದಲೂ, ದಾಸ್ಯತ್ವ ಗಳಿಂದಲೂ ಬಿಡುಗಡೆಗೊಳ್ಳುತ್ತಾನೆ. ಸತ್ಯದೇವನಿಗೆ ಮಾತ್ರ ದಾಸನಾಗುತ್ತಾನೆ. ಮನುಕುಲಕ್ಕೆ ಅಪಮಾನ, ಅನ್ಯಾಯ ಮತ್ತು ಶೋಷಣೆ ಮಾಡುವ ಸರ್ವ ಪ್ರಾಪಂಚಿಕ ಬಂಧನಗಳಿಂದಲೂ ಬಿಡುಗಡೆಗೊಳ್ಳುತ್ತಾನೆ. ಈ ಬಂಧನಗಳಲ್ಲೊಂದು ಜಾತಿಪದ್ಧತಿ. (ನೋಡಿ: ಡಾ. ಆಝಮೀ ಬರೆದ ‘ಹಿಂದೂ ಸಮಾಜದಲ್ಲಿ ಜಾತಿಪದ್ಧತಿ’ ಎಂಬ ಪುಸ್ತಕ – ಪುಟ 565). ಹಿಂದೂ ಧರ್ಮವು ಅಲ್ಲಾಹು ಅಲ್ಲದವರಿಗೆ ದಾಸ್ಯತ್ವವನ್ನು ದೃಢೀಕರಿ ಸುತ್ತದೆ. ಮಾತ್ರವಲ್ಲ ಗೋವು ಮೊದಲಾದ ಪ್ರಾಣಿಗಳಿಗೂ ದಾಸನಾಗುವುದನ್ನು ದೃಢೀಕರಿಸುತ್ತದೆ. ಆತ್ಮ ಮತ್ತು ಬುದ್ಧಿಯನ್ನು ನೀಡಿ ಅತ್ಯಂತ ಗೌರವಾನ್ವಿತ ಸ್ಥಿತಿಯಲ್ಲಿ ಅಲ್ಲಾಹು ಸೃಷ್ಟಿಸಿದ ಮನುಷ್ಯನು ಈ ಪ್ರಾಣಿಗಳನ್ನು ಆದರಿಸುವ ಮತ್ತು ಆರಾಧಿಸುವ ಮೂಲಕ ಅವುಗಳ ಸೆರೆಯಾಳಾಗಿ ಬದುಕುತ್ತಾನೆ. ವಾಸ್ತವವಾಗಿ ಮನುಷ್ಯನಿಗೆ ಪ್ರಯೋಜನವನ್ನು ನೀಡುವ ಅಥವಾ ಹಾನಿಯನ್ನು ನಿವಾರಿಸುವ ಯಾವುದೇ ಶಕ್ತಿ ಆ ಮೂಕ ಪ್ರಾಣಿಗಳಿಗಿಲ್ಲ. ಮಾತ್ರವಲ್ಲ, ಸ್ವತಃ ತಮಗೂ ಇಂತದ್ದು ಯಾವುದನ್ನೂ ಮಾಡುವ ಶಕ್ತಿ ಅವುಗಳಿಗಿಲ್ಲ.

ಇಹಲೋಕದಲ್ಲೂ ಪರಲೋಕದಲ್ಲೂ ಮನುಷ್ಯನನ್ನು ಮೋಕ್ಷದ ಕಡೆಗೆ ಸಾಗಿಸುವಂತಹ ಭರವಸೆಯನ್ನು ಹೊಂದಿರುವ ಧರ್ಮವೇ ಶ್ರೇಷ್ಠವಾದ ಧರ್ಮ. ಕಾರಣ, ಧರ್ಮದ ಉದ್ದೇಶವು ಮೋಕ್ಷವನ್ನು ದಯಪಾಲಿಸುವುದು. ಆದರೆ ಅಲ್ಲಾಹನ ಕಡೆಯ ಮಾರ್ಗದರ್ಶನದ ಮೂಲಕ ವಲ್ಲದೆ ಮೋಕ್ಷವನ್ನು ಪಡೆಯಲು ಸಾಧ್ಯವಿಲ್ಲ. ಇಸ್ಲಾಂ ಧರ್ಮದಲ್ಲಿ ನಾವು ಮನುಷ್ಯ ಜೀವನದ ಎಲ್ಲ ಮಗ್ಗಲುಗಳಲ್ಲೂ, ಅದು ಆರ್ಥಿಕ, ರಾಜಕೀಯ, ಸಾಮಾಜಿಕ, ಕೌಟುಂಬಿಕ ಅಥವಾ ಮಾನಸಿಕ ಮಗ್ಗುಲಗಳಲ್ಲಾದರೂ ಎಲ್ಲ ಕಡೆಯೂ ಮೋಕ್ಷವನ್ನು ಪಡೆಯುವುದಕ್ಕಿರುವ ಮಾರ್ಗ ನಿರ್ದೇಶನಗಳನ್ನು ಇಸ್ಲಾಂ ನೀಡುತ್ತದೆ. ಆರಂಭಿಕ ಕಾಲದಲ್ಲಿ ಮುಸ್ಲಿಮರು ಈ ಬೋಧನೆಗಳಿಗೆ ಅಂಟಿಕೊಂಡಿದ್ದಾಗ, ಅವರು ನ್ಯಾಯ ಮತ್ತು ನಿಷ್ಪಕ್ಷತೆಯ ಆಧಾರದಲ್ಲಿದ್ದ ಒಂದು ಸಮೃದ್ಧ ಜೀವನಕ್ಕೆ ಅಡಿಪಾಯ ಹಾಕಿದ್ದರು. ಆದರೆ ಮುಸ್ಲಿಮರು ಈ ಬೋಧನೆಗಳಿಂದ ಸರಿದಾಗ, ಅಲ್ಲಾಹು ಅವರಿಗೆ ದಯಪಾಲಿಸಿದ್ದ ಸಮೃದ್ಧಿಯನ್ನು ಅವರು ಕಳೆದುಕೊಂಡರು.

ಕಾಲಗಣನಾಶಾಸ್ತ್ರದ ಪ್ರಕಾರ ಕೊನೆಯದಾಗಿ ಬಂದ ಧರ್ಮವೇ ಶ್ರೇಷ್ಠ ಧರ್ಮ. ಆ ಧರ್ಮವು ಅದರ ಹಿಂದೆ ಬಂದಂತಹ ಸತ್ಯ ಧರ್ಮಗಳನ್ನು ದೃಢೀಕರಿಸುತ್ತದೆ. ಆ ಧರ್ಮಗಳ ಕಾಲಕ್ಕೆ ಮಾತ್ರ ಸೀಮಿತವಾದಂತಹ ನಿಯಮಗಳು ಈ ಧರ್ಮವು ಬರುವ ಮೂಲಕ ರದ್ದಾಗುತ್ತದೆ. ಆ ಧರ್ಮಗಳ ಗ್ರಂಥಗಳಲ್ಲಿ ಪ್ರಸ್ತಾಪಿಸಲಾಗಿರುವ ಭವಿಷ್ಯಗಳನ್ನು ಈ ಧರ್ಮವು ನೈಜೀಕರಿಸುತ್ತದೆ. ಅಂದರೆ ಕೊನೆಯ ಕಾಲದಲ್ಲಿ ಒಬ್ಬ ಪ್ರವಾದಿಯನ್ನು ಕಳುಹಿಸಲಾಗುವುದು ಎಂದು ಆ ಧರ್ಮಗಳ ಗ್ರಂಥಗಳಲ್ಲಿ ಪ್ರಸ್ತಾಪಿಸಲಾಗಿರುವ ಭವಿಷ್ಯವು ನೆರವೇರುತ್ತದೆ. ಕುರ್‍ಆನ್ ಹೇಳುವ ಪ್ರಕಾರ ಪೂರ್ವ ಪ್ರವಾದಿಗಳೆಲ್ಲರಿಗೂ ಈ ಕೊನೆಯ ಪ್ರವಾದಿಯ ಬಗ್ಗೆ ತಿಳಿದಿತ್ತು. ಈ ಪ್ರವಾದಿಯನ್ನು ಕೊನೆಯ ಕಾಲದಲ್ಲಿ ಕಳುಹಿಸಲಾಗುವುದು ಮತ್ತು ಅವರ ಹೆಸರು ಮುಹಮ್ಮದ್ ಆಗಿರುವುದು ಹಾಗೂ ಆ ಪ್ರವಾದಿಯ ಮೂಲಕ ಅಲ್ಲಾಹು ಪ್ರವಾದಿಗಳನ್ನು ಕಳುಹಿಸುವುದನ್ನು ಸಮಾಪ್ತಿಗೊಳಿಸುವನು ಎಂದು ಅವರೆಲ್ಲರೂ ಅರಿತಿದ್ದರು. ಅಲ್ಲಾಹು ಹೇಳುತ್ತಾನೆ:

﴿ وَإِذۡ أَخَذَ ٱللَّهُ مِيثَٰقَ ٱلنَّبِيِّ‍ۧنَ لَمَآ ءَاتَيۡتُكُم مِّن كِتَٰبٖ وَحِكۡمَةٖ ثُمَّ جَآءَكُمۡ رَسُولٞ مُّصَدِّقٞ لِّمَا مَعَكُمۡ لَتُؤۡمِنُنَّ بِهِۦ وَلَتَنصُرُنَّهُۥۚ قَالَ ءَأَقۡرَرۡتُمۡ وَأَخَذۡتُمۡ عَلَىٰ ذَٰلِكُمۡ إِصۡرِيۖ قَالُوٓاْ أَقۡرَرۡنَاۚ قَالَ فَٱشۡهَدُواْ وَأَنَا۠ مَعَكُم مِّنَ ٱلشَّٰهِدِينَ ٨١ ﴾ [آل عمران : 81]

“ನಾನು ನಿಮಗೆ ಗ್ರಂಥ ಮತ್ತು ಯುಕ್ತಿಯನ್ನು ದಯಪಾಲಿಸಿ, ತರುವಾಯ ನಿಮ್ಮ ಬಳಿಯಿರುವುದನ್ನು ದೃಢೀಕರಿಸುತ್ತಾ ಒಬ್ಬ ಸಂದೇಶವಾಹಕರು ನಿಮ್ಮ ಬಳಿಗೆ ಬಂದರೆ ನೀವು ಅವರಲ್ಲಿ ವಿಶ್ವಾಸವಿಡಲೇಬೇಕು ಮತ್ತು ಅವರನ್ನು ಬೆಂಬಲಿಸಲೇಬೇಕು ಎಂದು ಅಲ್ಲಾಹು ಪ್ರವಾದಿಗಳಿಂದ ಕರಾರನ್ನು ಪಡೆದುಕೊಂಡ ಸಂದರ್ಭ(ವನ್ನು ಸ್ಮರಿಸಿರಿ). ಅವನು ಕೇಳಿದನು: ನೀವಿದನ್ನು ಒಪ್ಪಿಕೊಂಡು ನನ್ನ ಕರಾರನ್ನು ಪಾಲಿಸುವಿರಾ? ಅವರು ಹೇಳಿದರು: ನಾವು ಒಪ್ಪಿಕೊಂಡಿದ್ದೇವೆ. ಆಗ ಅವನು ಹೇಳಿದನು: ಹಾಗಾದರೆ ನೀವು ಸಾಕ್ಷಿವಹಿಸಿರಿ. ನಾನೂ ನಿಮ್ಮೊಂದಿಗೆ ಸಾಕ್ಷಿ ವಹಿಸುವೆನು.” [ಕುರ್‍ಆನ್ 3:81]

ಈ ಕಾರಣದಿಂದಲೇ ಪೂರ್ವ ಧರ್ಮಗಳ ಗ್ರಂಥಗಳಲ್ಲಿ ತಿದ್ದುಪಡಿ ಮತ್ತು ಬದಲಾವಣೆಗೆ ಒಳಗಾಗದ ಕೆಲವು ಭಾಗಗಳಲ್ಲಿ ಈ ಪ್ರವಾದಿಯ ಬಗ್ಗೆ ಮಾತನಾಡುವ ಸ್ಪಷ್ಟ ಭವಿಷ್ಯಗಳನ್ನು ನಾವು ಕಾಣುತ್ತೇವೆ. ತೋರಾ ಮತ್ತು ಸುವಾರ್ತೆಗಳಲ್ಲಿ ಅವು ಬೇಕಾದಷ್ಟಿವೆ. ಅವುಗಳನ್ನು ಇಲ್ಲಿ ಉದ್ಧರಿಸಿ ಪ್ರಯೋಜನವಿಲ್ಲ. ಬದಲಾಗಿ ನಾವು ಇಲ್ಲಿ ಉದ್ಧರಿಸಬೇಕಾದುದು ಹಿಂದೂ ಧರ್ಮದ ಗ್ರಂಥಗಳಲ್ಲಿ ಪ್ರವಾದಿ ಮುಹಮ್ಮದ್(ﷺ)ರವರ ಬಗ್ಗೆ ಭವಿಷ್ಯ ನುಡಿಯುವ ಭಾಗಗಳನ್ನು. ಈ ಭವಿಷ್ಯಗಳು ಆ ಗ್ರಂಥಗಳು ಅಪ್ಪಟ ವೆಂಬುದನ್ನು ದೃಢೀಕರಿಸಬೇಕೆಂದಿಲ್ಲ. ಬದಲಾಗಿ ಪೂರ್ವ ಪ್ರವಾದಿಗಳ ಬೋಧನೆಗಳಿಂದ ಸ್ವೀಕರಿಸಲಾದ ಸತ್ಯವಾದ ಕೆಲವು ಮಾತುಗಳು ಆ ಗ್ರಂಥಗಳಲ್ಲಿ ಬಾಕಿಯಾಗಿವೆ ಎಂಬುದನ್ನು ಇದು ಸೂಚಿಸುತ್ತದೆ.

ಈ ಉಲ್ಲೇಖಗಳನ್ನು ಡಾ. ಝಿಯಾವುರ್ರಹ್ಮಾನ್ ಆಝಮೀಯವರ ‘ಯಹೂದ, ಕ್ರೈಸ್ತ ಮತ್ತು ಭಾರತೀಯ ಧರ್ಮಗಳ ಅಧ್ಯಯನ’ ಎಂಬ ಕೃತಿಯಿಂದ (ಪುಟ 703-746) ತೆಗೆದುಕೊಳ್ಳಲಾಗಿದೆ. ಲೇಖಕರು ಭಾರತೀಯ ವೈದ್ಯರಾಗಿದ್ದು ಹಿಂದೂ ಧರ್ಮಗ್ರಂಥಗಳನ್ನು ಅಧ್ಯಯನ ಮಾಡಬಲ್ಲವರು. ನಮಗೆ ತಿಳಿದಂತೆ ಈ ಗ್ರಂಥಗಳಾವುವೂ ಈ ತನಕ ಅರೇಬಿಕ್ ಭಾಷೆಗೆ ಭಾಷಾಂತರವಾಗಿಲ್ಲ.

 1. “ಆ ಕಾಲದಲ್ಲಿ ಶಂಭಾಲ (ಸುರಕ್ಷಿತ, ಶಾಂತಿಯುತ ನಾಡು) ನಗರದಲ್ಲಿ, ಸೌಮ್ಯ ಹೃದಯವನ್ನು ಹೊಂದಿರುವ ವಿಷ್ಣು ಭಗತ್ (ದೇವದಾಸ) ಎಂಬ ಹೆಸರಿನ ಒಬ್ಬ ವ್ಯಕ್ತಿಯ ಮನೆಯಲ್ಲಿ, ಕಲ್ಕಿ (ಪಾಪ ಮತ್ತು ದೋಷಗಳನ್ನು ಮಾಡದ ಶುದ್ಧ ವ್ಯಕ್ತಿ) ಹುಟ್ಟುವರು.” [ಭಾಗವತ ಪುರಾಣ 2/18]

ಪ್ರವಾದಿ ಮುಹಮ್ಮದ್(ﷺ)ರವರ ತಂದೆಯ ಹೆಸರು ಅಬ್ದುಲ್ಲಾಹ್. ಇದರ ಅರ್ಥ ದೇವದಾಸ, ಅಥವಾ ಅಲ್ಲಾಹನ ದಾಸ ಎಂದು. ಮಕ್ಕಃ ನಗರವನ್ನು ಕುರ್‍ಆನ್‍ನಲ್ಲಿ ಅಲ್‍ಬಲದುಲ್ ಅಮೀನ್ (ಸುರಕ್ಷಿತ ಮತ್ತು ಶಾಂತಿಯುತ ನಾಡು) ಎಂದು ಕರೆಯಲಾಗಿದೆ.

 1. “ಕಲ್ಕಿ ವಿಷ್ಣು ಭಗತ್‍ರ ಮನೆಯಲ್ಲಿ ಸುಮತಿ (ಸಮಾಧಾನ ಮತ್ತು ಶಾಂತಿಯ ಮಹಿಳೆ) ಎಂಬ ಪತ್ನಿಯ ಮೂಲಕ ಹುಟ್ಟುವರು.” [ಕಲ್ಕಿ ಪುರಾಣ 2/11]

ಪ್ರವಾದಿ ಮುಹಮ್ಮದ್(ﷺ)ರವರ ತಾಯಿಯ ಹೆಸರು ಆಮಿನಾ. ಇದರ ಅರ್ಥ ಶಾಂತಿಯ ಮಹಿಳೆ ಎಂದು.

 1. “ಅವರು ಮಾಧ್ವ ತಿಂಗಳ (ಅಥವಾ ಚೈತ್ರ ತಿಂಗಳ) ಹನ್ನೆರಡನೇ ದಿನದಂದು ಹುಟ್ಟುವರು.” [ಕಲ್ಕಿ ಪುರಾಣ 2/15]

ಮಾಧ್ವ ತಿಂಗಳು ಎಂದರೆ ಜನರಿಗೆ ಹೆಚ್ಚು ಇಷ್ಟವಾದ ತಿಂಗಳು. ಅಂದರೆ ವಸಂತದ ತಿಂಗಳು. ಅರೇಬಿಕ್ ಭಾಷೆಯಲ್ಲಿ ಈ ತಿಂಗಳನ್ನು ರಬೀಅï ಎಂದು ಕರೆಯ ಲಾಗುತ್ತದೆ. ಮುಸ್ಲಿಂ ಚರಿತ್ರೆಗಾರರ ಮಧ್ಯೆ ಭಿನ್ನಾಭಿಪ್ರಾಯ ವಿದ್ದರೂ ಕೂಡ ಹೆಚ್ಚಿನೆಲ್ಲಾ ವಿದ್ವಾಂಸರು ಪ್ರವಾದಿ ಮುಹಮ್ಮದ್(ﷺ)ರವರ ಜನ್ಮತಿಂಗಳನ್ನು ರಬೀಅï ಅಲ್ ಅವ್ವಲ್ ಎಂದಿದ್ದಾರೆ.

 1. “ಕಲ್ಕಿ ಎಂಟು ಗುಣಗಳನ್ನು ಹೊಂದಿರುವರು:
 • ಪ್ರಜ್ಞ (ಭವಿಷ್ಯವನ್ನು ಹೇಳುವವ)
 • ಕುಲೀನ (ಉತ್ತಮ ಮನೆತನದಿಂದ ಬಂದವ)
 • ಇಂದ್ರಿಯದಮನ (ಇಂದ್ರಿಯಗಳನ್ನು ನಿಯಂತ್ರಿಸುವವ)
 • ಶ್ರುತ (ದೈವಿಕ ಸಂದೇಶಗಳನ್ನು ಸ್ವೀಕರಿಸುವವ)
 • ಪರಾಕ್ರಮಿ (ದೈಹಿಕ ಶಕ್ತಿಯಿರುವವ)
 • ಅಭೂ ಭಾಷಿತ (ಕಡಿಮೆ ಮಾತನಾಡುವವ)
 • ದಾನಿ (ದಾನ ನೀಡುವವ)
 • ಕೃತಜ್ಞ (ಕೃತಜ್ಞತೆ ಸಲ್ಲಿಸುವವ)”

ಇವೆಲ್ಲವೂ ಪ್ರವಾದಿ ಮುಹಮ್ಮದ್(ﷺ)ರವರ ಗುಣಗಳಲ್ಲಿ ಕೆಲವು ಮಾತ್ರ. ಅವರನ್ನು ಅರಿತಿರುವ ಅರಬ್ಬರೆಲ್ಲರೂ, ಅವರು ಮುಸ್ಲಿಮರಾಗಿದ್ದರೂ ಅಲ್ಲದಿದ್ದರೂ, ಈ ಗುಣ ಗಳೆಲ್ಲವೂ ಪ್ರವಾದಿ ಮುಹಮ್ಮದ್(ﷺ)ರವರಿಗೆ ಇತ್ತೆಂದು ಒಪ್ಪಿಕೊಳ್ಳುತ್ತಿದ್ದರು.

 1. “ಅವರೊಂದು ಕುದುರೆಯ ಮೇಲೆ ಸವಾರಿ ಮಾಡುವರು. ಅದರಿಂದ ಬೆಳಕು ಹೊರಹೊಮ್ಮುವುದು. ಅವರ ಭಯಭಕ್ತಿ ಮತ್ತು ಸೌಂದರ್ಯಕ್ಕೆ ಸರಿಸಾಟಿಯಾಗಿ ಯಾರೂ ಇಲ್ಲ. ಅವರು ಸುನ್ನತಿ ಮಾಡಲ್ಪಟ್ಟಿರುವರು. ಅವರು ನೂರಾರು, ಸಾವಿರಾರು ಅಕ್ರಮಿಗಳನ್ನು ಮತ್ತು ಅವಿಶ್ವಾಸಿಗಳನ್ನು ನಾಶಮಾಡುವರು.” [ಭಾಗವತ ಪುರಾಣ 12-2-20]

ಹಿಂದೂಗಳು ಸುನ್ನತಿ ಮಾಡುವುದಿಲ್ಲ. ಇದು ಪ್ರವಾದಿ ಮುಹಮ್ಮದ್(ﷺ)ರವರ ಸಮುದಾಯದ ಪುರುಷರಿಗೆ ಕಡ್ಡಾಯವಾಗಿರುವ ಕಾರ್ಯ.

 1. “ತಮ್ಮ ನಾಲ್ಕು ಮಂದಿ ಸಹಚರರೊಂದಿಗೆ ಸೇರಿ ಅವರು ಸೈತಾನನನ್ನು ನಾಶ ಮಾಡುವರು. ಅವರಿಗೆ ಯುದ್ಧಗಳಲ್ಲಿ ಸಹಾಯ ಮಾಡಲು ದೇವದೂತರು ಆಕಾಶದಿಂದ ಇಳಿದು ಬರುವರು.” [ಕಲ್ಕಿ ಪುರಾಣ 2/5-7]

ನಾಲ್ಕು ಮಂದಿ ಸಹಚರರು ಎಂದರೆ ಪ್ರವಾದಿ ಮುಹಮ್ಮದ್(ﷺ)ರವರ ಮರಣಾನಂತರ ಆಡಳಿತ ನಡೆಸಿದ ನಾಲ್ಕು ಮಂದಿ ಖಲೀಫರು. ಇವರು ಪ್ರವಾದಿ ಮುಹಮ್ಮದ್ (ﷺ)ರವರ ಬಳಿಕ ಮನುಷ್ಯರಲ್ಲೇ ಅತಿಶ್ರೇಷ್ಠರೆಂದು ವಿದ್ವಾಂಸರು ಒಕ್ಕೊರಳಿನಿಂದ ದೃಢೀಕರಿಸಿದ್ದಾರೆ.

 1. “ಅವರು ಜನ್ಮ ತಾಳಿಕ ಬಳಿಕ ಪರಶುರಾಮ (ಅತಿದೊಡ್ಡ ಗುರು) ರಿಂದ ವಿದ್ಯೆ ಕಲಿಯಲು ಪರ್ವತಗಳಿಗೆ ಹೋಗುವರು. ನಂತರ ಅವರು ಉತ್ತರಕ್ಕೆ ಹೋಗುವರು ಮತ್ತು ನಂತರ ತಮ್ಮ ಜನ್ಮಸ್ಥಳಕ್ಕೆ ಮರಳುವರು.” [ಕಲ್ಕಿ ಪುರಾಣ]

ಪ್ರವಾದಿ ಮುಹಮ್ಮದ್(ﷺ)ರವರು ಹೀಗೆಯೇ ಇದ್ದರು. ಅವರು ಹಿರಾ ಗುಹೆಗೆ ತೆರಳಿ ಧ್ಯಾನನಿರತರಾಗುತ್ತಿದ್ದರು. ಕೊನೆಗೆ ಜಿಬ್ರೀಲ್ ಎಂಬ ದೇವದೂತ ದೈವಿಕ ಸಂದೇಶ ದೊಂದಿಗೆ ಅವರ ಬಳಿಗೆ ಬಂದರು. ಅವರು ಮಕ್ಕಾ ಪಟ್ಟಣದ ಉತ್ತರ ದಿಕ್ಕಿನಲ್ಲಿರುವ ಮದೀನಾ ಪಟ್ಟಣಕ್ಕೆ ವಲಸೆ ಹೋದರು. ನಂತರ ವಿಜಯಿಯಾಗಿ ಮಕ್ಕಾ ಪಟ್ಟಣಕ್ಕೆ ಮರಳಿದರು.

 1. “ಅವರ ದೇಹದಿಂದ ಹೊರಹೊಮ್ಮುವ ಪರಿಮಳದಿಂದ ಜನರು ವಶೀಕರಣಗೊಳ್ಳುವರು. ಆ ಪರಿಮಳ ಅವರ ದೇಹದಿಂದ ಬೇರ್ಪಟ್ಟು ಗಾಳಿಯಲ್ಲಿ ಮಿಶ್ರವಾದರೆ ಅದು ಆತ್ಮ ಮತ್ತು ಮನಸ್ಸುಗಳಿಗೆ ಉಲ್ಲಾಸವನ್ನು ನೀಡುವುದು.” [ಭಾಗವತ ಪುರಾಣ 2-2-21]

 1. “ಮೊತ್ತಮೊದಲು ಯಜ್ಞ ಮಾಡುವ ವ್ಯಕ್ತಿ ಅಹ್ಮದು ಆಗಿರುವರು. ಆ ವ್ಯಕ್ತಿ ಸೂರ್ಯನಂತಾಗುವರು.” [ಸಾಮವೇದ 3/6/8]

 1. “ಒಬ್ಬ ಆಧ್ಯಾತ್ಮಿಕ ಗುರು ತಮ್ಮ ಅನುಯಾಯಿಗಳೊಂದಿಗೆ ಬರುವರು. ಅವರು ಜನರ ಮಧ್ಯೆ ಚಿರಪರಿಚಿತರಾಗುವರು. ಅವರ ಹೆಸರು ಮಹಾಮದ ಎಂದಾಗಿರುವುದು. ಆಡಳಿತಗಾರನು ಅವರ ಮುಂದೆ ನಿಂತು ಹೇಳುವನು: ಓ ಮರುಭೂಮಿ ನಿವಾಸಿಯೇ, ಓ ಸೈತಾನನ ಸಂಹಾರಕನೇ, ಪವಾಡಗಳನ್ನು ಮಾಡುವವನೇ, ಕೆಡುಕು ಗಳಿಂದ ಮುಕ್ತನಾಗಿರುವವನೇ, ಸತ್ಯಕ್ಕೆ ಅಂಟಿಕೊಂಡಿರು ವವನೇ, ದೈವಿಕ ಜ್ಞಾನವನ್ನು ಮಾತನಾಡುವವನೇ, ದೇವರನ್ನು ಪ್ರೀತಿಸುವವನೇ, ತಮ್ಮ ಮೇಲೆ ಶಾಂತಿಯಿರಲಿ. ನಾನು ತಮ್ಮ ದಾಸ. ನಾನು ತಮ್ಮ ಪಾದಗಳ ಅಡಿಯಲ್ಲಿ ವಾಸಿಸುವೆನು.” [ಭವಿಷ್ಯಪುರಾಣ 3/3/5-8]

 1. “ಈ ಹಂತಗಳಲ್ಲಿ, ಸರ್ವ ಮನುಷ್ಯರಿಗೆ ಒಳಿತು ಹೊರಹೊಮ್ಮುವ ಸಮಯ ಬರುವಾಗ, ಮುಹಮ್ಮದರ ಉದ್ಭವದ ಮೂಲಕ ಸತ್ಯವು ಸ್ಥಾಪಿಸಲ್ಪಡುವುದು ಮತ್ತು ಅಂಧಕಾರವು ತೊಲಗುವುದು. ಜ್ಞಾನ ಮತ್ತು ಯುಕ್ತಿಯ ಬೆಳಕು ಬೆಳಗುವುದು.” [ಭಾಗವತ ಪುರಾಣ 2/76]

ಅವರ ಹೆಸರು ಮುಹಮ್ಮದ್ ಅಥವಾ ಅಹ್ಮದ್ ಎಂದು ಮೇಲಿನ ಉಲ್ಲೇಖಗಳು ಹೇಳುತ್ತವೆ. ಇವೆರಡೂ ಪ್ರವಾದಿ ಮುಹಮ್ಮದ್(ﷺ)ರವರ ಹೆಸರುಗಳು. ಅಲ್ಲಾಹು ಹೇಳುತ್ತಾನೆ:

﴿ وَمُبَشِّرَۢا بِرَسُولٖ يَأۡتِي مِنۢ بَعۡدِي ٱسۡمُهُۥٓ أَحۡمَدُۖ ﴾ [الصف : 6]

“ನನ್ನ ನಂತರ ಬರುವ ಒಬ್ಬ ಸಂದೇಶವಾಹಕರ ಬಗ್ಗೆ ಶುಭವಾರ್ತೆ ನೀಡುವವನಾಗಿ. ಅವರ ಹೆಸರು ಅಹ್ಮದ್ ಎಂದಾಗಿರುವುದು.” [ಕುರ್‍ಆನ್ 61:6]

 1. “ಅಗ್ನಿ ದೇವ, ಬೆಳಗುವ ಕಾನೂನುಗಳನ್ನು ತರುವವನೇ, ನಾವು ತಮ್ಮನ್ನು ಭೂಮಿಯ ಮಧ್ಯಭಾಗದಲ್ಲಿ ನೆಲೆಸುವಂತೆ ಮಾಡಿದ್ದೇವೆ. ತಾವು ಯಜ್ಞಗಳನ್ನು ಮಾಡುವುದಕ್ಕಾಗಿ.” [ಋಗ್ವೇದ 3/29/4]

 1. ಅಥರ್ವವೇದ ಮತ್ತು ಋಗ್ವೇದದ ಕೆಲವು ಪುಟಗಳಲ್ಲಿ ನರಾಶಂಸ ಎಂಬ ವ್ಯಕ್ತಿಯ ಬಗ್ಗೆ ಪ್ರಸ್ತಾಪವಿದೆ. ಆತ ಭೂಮಿಯಲ್ಲೇ ಅತಿಸುಂದರ ವ್ಯಕ್ತಿಯೆಂದು ವಿವರಿಸಲಾಗಿದೆ. ಅವನ ಬೆಳಕು ಎಲ್ಲ ಮನೆಗಳನ್ನು ಪ್ರವೇಶಿಸುವುದು. ಅವನು ಜನರನ್ನು ಪಾಪ ಮತ್ತು ದೋಷಗಳಿಂದ ಶುದ್ಧೀಕರಿಸುವನು. ಅವನು ಒಂಟೆಗಳ ಮೇಲೆ ಸವಾರಿ ಮಾಡುವನು. ಅವನಿಗೆ ಹನ್ನೆರಡು ಪತ್ನಿಗಳಿರುವರು. “ಓ ಜನರೇ, ಕೇಳಿರಿ. ನರಾಶಂಸನಿಗೆ ಉನ್ನತ ಕೀರ್ತಿಯಿದೆ… ನರಾಶಂಸ ಪ್ರಶಂಸಿಸಲ್ಪಡುವನು. ಅವನು ಅರವತ್ತು ಸಾವಿರದ ತೊಂಬತ್ತು ಜನರೊಂದಿಗೆ ವಲಸೆ ಹೋಗುವನು… ನಾನು ಮಾಮಹನಿಗೆ ಒಂದು ನೂರು ಚಿನ್ನದ ನಾಣ್ಯಗಳನ್ನು, ಹತ್ತು ಹಾರಗಳನ್ನು ಮತ್ತು ಮುನ್ನೂರು ಕುದುರೆಗಳನ್ನು ನೀಡಿರುವೆನು.”

ಪ್ರವಾದಿಚರಿತ್ರೆಯಲ್ಲಿ ಕಾಣುವಂತೆ ಪ್ರವಾದಿ ಮುಹಮ್ಮದ್ (ﷺ)ರ ಪತ್ನಿಯರ ಸಂಖ್ಯೆ ಹನ್ನೆರಡು.

 1. “ಸಾತ್ವಿಕ ಜೀವನ ನಡೆಸುವ ಒಬ್ಬ ವ್ಯಕ್ತಿ ಕಾರಿರುಳಿನಲ್ಲಿ ಸಿಂಧ್ ಪ್ರಾಂತ್ಯದ ದೊರೆ ಭೋಜರಾಜನ ಬಳಿ ಬಂದು ಹೇಳುವರು: ಎಲೈ ರಾಜನೇ, ನಿನ್ನ ಧರ್ಮ (ಆರ್ಯಧರ್ಮ) ಭಾರತದ ಎಲ್ಲ ಧರ್ಮಗಳನ್ನು ಮೀರಿ ಹೋಗುವುದು. ಆದರೆ ಪರಮಾತ್ಮನ ವಿಧಿಯ ಪ್ರಕಾರ, ಒಬ್ಬ ವ್ಯಕ್ತಿಯ ಧರ್ಮವನ್ನು ನಾನು ಉಳಿಯುವಂತೆ ಮಾಡುವೆನು. ಆ ವ್ಯಕ್ತಿ ಒಳ್ಳೆಯದನ್ನು ಮಾತ್ರ ತಿನ್ನುವರು. ಅವರು ಸುನ್ನತಿ ಮಾಡಲ್ಪಟ್ಟಿರುವರು. ಅವರು ಜಡೆ ಕಟ್ಟುವುದಿಲ್ಲ. ಅವರಿಗೆ ಉದ್ದದ ದಾಡಿಯಿರುವುದು. ಅವರು ಬಹುದೊಡ್ಡ ಕ್ರಾಂತಿಯನ್ನು ತರುವರು. ಅವರು ಜನರನ್ನು ಗಟ್ಟಿಯಾಗಿ ಕರೆಯುವರು. ಅವರು ಹಂದಿಮಾಂಸ ಬಿಟ್ಟು ಎಲ್ಲ ಒಳ್ಳೆಯ ವಸ್ತುಗಳನ್ನು ತಿನ್ನುವರು. ಅವರ ಧರ್ಮವು ಎಲ್ಲ ಧರ್ಮಗಳನ್ನು ರದ್ದುಗೊಳಿಸುವುದು. ನಾವು ಅವರನ್ನು ಮುಸಲೀಗಳೆಂದು ಕರೆಯುವೆವು. ಪರಮಾತ್ಮನೇ ಅವರಿಗೆ ಈ ಧರ್ಮವನ್ನು ಅವತೀರ್ಣಗೊಳಿಸುವನು.” [ಭವಿಷ್ಯ ಪುರಾಣ 3/3/3/23-27]

ನಮಾಝ್‍ಗಾಗಿ ಗಟ್ಟಿಯಾಗಿ ಕರೆಯುವುದು ಮತ್ತು ಹಂದಿ ಮಾಂಸವನ್ನು ತಿನ್ನದಿರುವುದು ಇಸ್ಲಾಂ ಧರ್ಮದ ವೈಶಿಷ್ಟ್ಯಗಳು. ಅದರ ಅನುಯಾಯಿಗಳನ್ನು ಮುಸ್ಲಿಮರೆಂದು ಕರೆಯಲಾಗುವುದು.

ಹಿಂದೂ ಋಷಿಗಳ ಈ ಮಾತುಗಳು ನೀವು ಇಸ್ಲಾಂನ ಬೋಧನೆಗಳಲ್ಲಿ ಮತ್ತು ಪ್ರವಾದಿ ಮುಹಮ್ಮದ್(ﷺ)ರವರು ತಂದ ಧರ್ಮದಲ್ಲಿ ವಿಶ್ವಾಸವಿಡಲು ಅನುಮತಿ ನೀಡುತ್ತವೆ. ಕಾರಣ, ಹಿಂದೂ ಪಂಡಿತರು ಹೇಳುವಂತೆ, ಹಿಂದೂ ಧರ್ಮದಲ್ಲಿ ಪಕ್ಷಪಾತವಿಲ್ಲ. ಅದು ಸತ್ಯಾನ್ವೇಷಣೆ ಮಾಡಬೇಕೆಂದು ಹೇಳುತ್ತದೆ. ಆದುದರಿಂದ ನೀವು ದೇವರಲ್ಲಿ ವಿಶ್ವಾಸವಿಟ್ಟರೂ ವಿಶ್ವಾಸವಿಡದಿದ್ದರೂ ಅದರಿಂದ ತಮ್ಮ ಹಿಂದೂ ಧರ್ಮಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ತಾವು ಮಾಡಬೇಕಾದುದು ಸತ್ಯವನ್ನು ಅನ್ವೇಷಿಸುವ ಕೆಲಸ ಮಾತ್ರ.

ಮಹಾತ್ಮ ಗಾಂಧಿ ಹೇಳುತ್ತಾರೆ: “ಹಿಂದೂ ಧರ್ಮದ ಒಂದು ವೈಶಿಷ್ಟ್ಯವೇನೆಂದರೆ ಅದಕ್ಕೆ ನಿರ್ದಿಷ್ಠ ನಂಬಿಕೆಗಳಿಲ್ಲ. ಹಿಂದೂ ಧರ್ಮದ ನಂಬಿಕೆಗಳ ಬಗ್ಗೆ ಕೇಳಲಾದರೆ ನಾನು ಹೀಗೆ ಹೇಳುವೆನು: ಹಿಂದೂ ಧರ್ಮದ ನಂಬಿಕೆ ಪಕ್ಷಪಾತವಿಲ್ಲದೆ ವರ್ತಿಸುವುದು ಮತ್ತು ಉತ್ತಮ ವಿಧಾನಗಳ ಮೂಲಕ ಸತ್ಯವನ್ನು ಅನ್ವೇಷಿಸುವುದು. ಸೃಷ್ಟಿಕರ್ತನ ಅಸ್ತಿತ್ವದಲ್ಲಿ ನಂಬಿಕೆಯಿಡುವುದು ಬಿಡುವುದು ಅವರವರಿಗೆ ಬಿಟ್ಟ ವಿಚಾರ. ಒಬ್ಬ ಹಿಂದೂ ವ್ಯಕ್ತಿ ಸೃಷ್ಟಿಕರ್ತನ ಅಸ್ತಿತ್ವದಲ್ಲಿ ನಂಬಿಕೆಯಿಡಬೇಕಾದುದು ಕಡ್ಡಾಯವಲ್ಲ. ನಂಬಿಕೆಯಿಟ್ಟರೂ ಇಡದಿದ್ದರೂ ಅವನು ಹಿಂದುವೇ ಆಗಿದ್ದಾನೆ.”

ಅವರು ಮುಂದುವರಿದು ಹೇಳುತ್ತಾರೆ: “ಹಿಂದೂ ಧರ್ಮದ ಇನ್ನೊಂದು ವೈಶಿಷ್ಟ್ಯವೇನೆಂದರೆ ಅದು ಎಲ್ಲ ನಂಬಿಕೆಗಳಿಂದಲೂ ಮುಕ್ತವಾಗಿದೆ. ಆದರೆ ಅದು ಎಲ್ಲ ಪ್ರಮುಖ ನಂಬಿಕೆಗಳನ್ನು ಮತ್ತು ಇತರ ಧರ್ಮಗಳ ಮೂಲಭೂತ ತತ್ವಗಳನ್ನು ಒಳಗೊಂಡಿದೆ.” [ಹಿಂದೂ ಧರ್ಮ, ಡಾ. ಆಝಮೀಯವರ ಯಹೂದ, ಕ್ರೈಸ್ತ ಮತ್ತು ಭಾರತೀಯ ಧರ್ಮಗಳ ಅಧ್ಯಯನ ಎಂಬ ಕೃತಿಯಿಂದ ಉಧೃತ ಪುಟ 529-530]

ಇಸ್ಲಾಮನ್ನು ಅಧ್ಯಯನ ಮಾಡಲು, ಅದರ ವೈಶಿಷ್ಟ್ಯಗಳನ್ನು ಮತ್ತು ಶ್ರೇಷ್ಠತೆಗಳನ್ನು ಅಧ್ಯಯನ ಮಾಡಲು, ಇತರ ಧರ್ಮಗಳಿಂದ ಅದು ವ್ಯತಿರಿಕ್ತವಾಗುವ ವಿಚಾರಗಳನ್ನು ಸಂಶೋಧನೆ ಮಾಡಲು ತಾವೇಕೆ ಇದನ್ನೊಂದು ಕಾರಣವನ್ನಾಗಿ ಮಾಡಕೂಡದು? ಇಸ್ಲಾಂ ಧರ್ಮವು ಹಿಂದಿನ ಎಲ್ಲ ಧರ್ಮಗಳನ್ನು ರದ್ದುಗೊಳಿಸಿದೆ. ಇಸ್ಲಾಂನ ಪ್ರವಾದಿ ಮುಹಮ್ಮದ್(ﷺ)ರವರ ಬಗ್ಗೆ ಅವರಿಗಿಂತ ಮುಂಚೆ ಬಂದ ಎಲ್ಲ ಪ್ರವಾದಿಗಳು ಭವಿಷ್ಯ ಹೇಳಿದ್ದಾರೆ. ವಿಷಯವು ಅತ್ಯಂತ ಗಂಭೀರವಾಗಿದೆ. ಕಾರಣ, ಮೋಕ್ಷವನ್ನು ಪಡೆಯಲು ಏಕದೇವವಿಶ್ವಾಸದ ಧರ್ಮವಾದ ಇಸ್ಲಾಂ ಧರ್ಮದ ಮೂಲಕವಲ್ಲದೆ ಬೇರೆ ಧರ್ಮಗಳ ಮೂಲಕ ಸಾಧ್ಯವಿಲ್ಲ ಎಂದು ಕುರ್‍ಆನ್ ಹೇಳುತ್ತದೆ:

﴿ وَمَن يَبۡتَغِ غَيۡرَ ٱلۡإِسۡلَٰمِ دِينٗا فَلَن يُقۡبَلَ مِنۡهُ وَهُوَ فِي ٱلۡأٓخِرَةِ مِنَ ٱلۡخَٰسِرِينَ ٨٥ ﴾ [آل عمران : 85]

“ಇಸ್ಲಾಂ ಅಲ್ಲದ್ದನ್ನು ಯಾರಾದರೂ ಧರ್ಮವನ್ನಾಗಿ ಮಾಡಿಕೊಂಡರೆ, ಅವರಿಂದ ಅದನ್ನು ಸ್ವೀಕರಿಸಲಾಗದು. ಪರಲೋಕದಲ್ಲಿ ಅವರು ಎಲ್ಲವನ್ನೂ ಕಳಕೊಂಡವರಲ್ಲಿ ಸೇರುವರು.” [ಕುರ್‍ಆನ್ 3:85]

ಹೆಚ್ಚು ಬಲ್ಲವನು ಅಲ್ಲಾಹು.

Pin It on Pinterest

Please Share This

Share this post with your family & friends! ನಿಮ್ಮ ಕುಟುಂಬ ಹಾಗೂ ಗೆಳೆಯರೊಟ್ಟಿಗೆ ಈ ಸಂದೇಶವನ್ನು ಓದಲಿ!!

error: Alert: Content is protected !!
Subscribe To Our Newsletter
ನಮ್ಮ ವಾರ್ತಾಪತ್ರಕ್ಕೆ ಸದದ್ಯರಾಗಿರಿ.

Subscribe To Our Newsletter

ನಮ್ಮ ವಾರ್ತಾಪತ್ರಕ್ಕೆ ಸದದ್ಯರಾಗಿರಿ.

CONGRATS! YOU HAVE SUCCESSFULLY SUBSCRIBED. ಶುಭಾಷಯಗಳು! ನೀವು ಯಶಸ್ವಿಯಾಗಿ ಚಂದಾದಾರರಾಗಿದ್ದೀರಿ. Keep your eyes peeled for my next email! ನಮ್ಮ ಮುಂದಿನ ಇ-ಮೇಲ್‌ಗಳಿಗಾಗಿ ನಿಮ್ಮ ಕಣ್ನುಗಳನ್ನು ಕಾಯ್ದಿರಿಸಿಕೊಳ್ಳಿ!

body { font-family: “Poppins”, sans-serif; }