------------------------------------------------------------------------------------ ------------------------------------------------------------------------------------- --------------------------------------------------------------------------------------------- ---------------------------------------------------------------------------------------------
Want to Learn More(ಹೆಚ್ಚಿನ ಕಲಿಕೆಗಾಗಿ) ... Click Here or Subscribe

ದೇವ ಪರಿಕಲ್ಪನೆ ಹಿಂದೂ ಧರ್ಮದಲ್ಲಿ

ಆರ್ಯ ಧರ್ಮಗಳಲ್ಲಿ ಹಿಂದೂ ಧರ್ಮವು ಅತ್ಯಂತ ಪ್ರಸಿದ್ಧವಾದ ಧರ್ಮವಾಗಿದೆ. ವಾಸ್ತವವಾಗಿ ‘ಹಿಂದೂ’ ಎಂಬುದು ಒಂದು ಪರ್ಶಿಯನ್ ಪದವಾಗಿದೆ. ಇದು ಸಿಂಧೂ ಕಣಿವೆಯ ಹಿನ್ನೆಲೆಯ ಪ್ರದೇಶದಲ್ಲಿ ವಾಸಿಸುತ್ತಿದ್ದವರನ್ನು ಸೂಚಿಸುವ ಪದವಾಗಿದೆ. ಹಿಂದೂ ಧರ್ಮವೆಂಬುದು ಹೆಚ್ಚಾಗಿ ವೇದಗಳು, ಉಪನಿಷತ್ತುಗಳು ಮತ್ತು ಭಗವದ್ಗೀತೆಯ ಮೇಲೆ ಅವಲಂಬಿತವಾಗಿರುವ ವಿವಿಧ ಧಾರ್ಮಿಕ ನಂಬಿಕೆಗಳನ್ನು ಸೂಚಿಸುವುದಕ್ಕಿರುವ ಒಂದು ಸಮುಚ್ಛಯ ಪ್ರಯೋಗವಾಗಿದೆ (blanket term).

ಹಿಂದೂ ಧರ್ಮದಲ್ಲಿ ಸಮಾನವಾಗಿರುವ ದೇವ ಪರಿಕಲ್ಪನೆ

ಸಾಮಾನ್ಯವಾಗಿ ಹಿಂದೂ ಧರ್ಮವನ್ನು ಬಹುದೇವವಿಶ್ವಾಸಿ ಧರ್ಮವೆಂದು ಅರ್ಥೈಸಲಾಗುತ್ತದೆ. ನಿಜ! ಅನೇಕ ದೇವ ದೇವತೆಗಳಲ್ಲಿರುವ ನಂಬಿಕೆಯನ್ನು ಪ್ರಕಟಿಸುವ ಮೂಲಕ ಹೆಚ್ಚಿನ ಹಿಂದೂಗಳು ಇದನ್ನು ಸಮರ್ಥಿಸುತ್ತಾರೆ. ಹಿಂದೂಗಳಲ್ಲಿ ಕೆಲವರು ಮೂರು ದೇವರುಗಳು ಎಂಬ ವ್ಯವಸ್ಥೆಯಲ್ಲಿ ನಂಬಿಕೆಯಿಟ್ಟರೆ ಇತರ ಕೆಲವರು ಮೂವತ್ತ ಮೂರು ಕೋಟಿ ದೇವರುಗಳ ಅಸ್ತಿತ್ವದಲ್ಲಿ ನಂಬಿಕೆಯಿಡುತ್ತಾರೆ. ಆದರೆ ವೇದಗಳನ್ನು ಚೆನ್ನಾಗಿ ಕಲಿತಿರುವ ಹಿಂದೂ ವಿದ್ವಾಂಸರು ಹೇಳುವ ಪ್ರಕಾರ ಒಬ್ಬ ಹಿಂದೂ ಏಕೈಕ ದೇವನಲ್ಲಿ ವಿಶ್ವಾಸವಿಡಬೇಕು ಮತ್ತು ಏಕೈಕ ದೇವನನ್ನು ಆರಾಧಿಸಬೇಕು.

ಹಿಂದೂ ಮತ್ತು ಮುಸ್ಲಿಮರ ದೇವ ಪರಿಕಲ್ಪನೆಯಲ್ಲಿರುವ ಪ್ರಮುಖ ವ್ಯತ್ಯಾಸವು ಹೀಗಿದೆ:

ಸಾಮಾನ್ಯ ಹಿಂದೂಗಳು ಅದ್ವೈತ ಸಿದ್ಧಾಂತದಲ್ಲಿ (principle of pantheism) ವಿಶ್ವಾಸವಿಡುತ್ತಾರೆ. ಅದ್ವೈತ ಸಿದ್ಧಾಂತದ ಪ್ರಕಾರ ಜೀವವಿರುವ ಮತ್ತು ಜೀವವಿಲ್ಲದ ಸರ್ವವೂ ದೈವಿಕತೆಯನ್ನು ಹೊಂದಿರುವವುಗಳೂ ಪವಿತ್ರವೂ ಆಗಿವೆ. ಆದ್ದರಿಂದ ಹಿಂದೂಗಳು ಮರ, ಸೂರ್ಯ, ಚಂದ್ರ, ಪ್ರಾಣಿಗಳು ಮತ್ತು ಮನುಷ್ಯರನ್ನು ಕೂಡ ದೇವನ ಪ್ರಕಟನೆಗಳೆಂದು (manifestations of God) ನಂಬುತ್ತಾರೆ. ಆದ್ದರಿಂದ ಸಾಮಾನ್ಯ ಹಿಂದೂವಿನ ಪ್ರಕಾರ ಎಲ್ಲವೂ ದೇವರು (everything is God).

ಇದಕ್ಕೆ ವಿರುದ್ಧವಾಗಿ ಇಸ್ಲಾಮಿನ ಪ್ರಕಾರ, ಮನುಷ್ಯನು ಸ್ವತಃ ತನ್ನನ್ನು ಮತ್ತು ತನ್ನ ಪರಿಸರವನ್ನು, ಅವುಗಳು ದೇವರುಗಳಾಗಿವೆ ಎಂಬ ನಂಬಿಕೆಗೆ ಬದಲಾಗಿ ಅವುಗಳು ದೇವನ ಸೃಷ್ಟಿಗಿರುವ ಉದಾಹರಣೆಗಳಾಗಿವೆಯೆಂದು ಪರಿಗಣಿಸಬೇಕು. ಆದ್ದರಿಂದ ಮುಸ್ಲಿಮರು ನಂಬುವ ಪ್ರಕಾರ ಎಲ್ಲವೂ ದೇವನದ್ದಾಗಿವೆ (everything is God’s). ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ (ಮುಸ್ಲಿಮರಾದ) ನಾವು ನಂಬುವ ಪ್ರಕಾರ ಎಲ್ಲವೂ ದೇವನಿಗೆ ಸೇರಿದ್ದಾಗಿವೆ. ಮರ, ಸೂರ್ಯ, ಚಂದ್ರ ಮತ್ತು ಈ ವಿಶ್ವದಲ್ಲಿರುವ ಎಲ್ಲವೂ ದೇವನಿಗೆ ಸೇರಿದ್ದಾಗಿವೆ.

ಆದ್ದರಿಂದ ಹಿಂದೂ ಮತ್ತು ಮುಸ್ಲಿಮರ ನಂಬಿಕೆಯ ನಡುವೆಯಿರುವ ಪ್ರಮುಖ ವ್ಯತ್ಯಾಸವು ’s ಎಂಬ ವ್ಯತ್ಯಾಸವಾಗಿದೆ. ಹಿಂದೂಗಳ ಪ್ರಕಾರ ಎಲ್ಲವೂ ದೇವರು (everything is God). ಮುಸ್ಲಿಮರ ಪ್ರಕಾರ ಎಲ್ಲವೂ ದೇವನದ್ದು (everything is God’s).

ಆದರಣೀಯ ಕುರ್‍ಆನ್ ಹೇಳುತ್ತದೆ:

﴿ تَعَالَوْا إِلَى كَلِمَةٍ سَوَاءٍ بَيْنَنَا وَبَيْنَكُمْ ﴾

“ನಮ್ಮ ಮತ್ತು ನಿಮ್ಮ ಮಧ್ಯೆ ಸಮಾನವಾಗಿರುವ ವಚನದೆಡೆಗೆ ಬನ್ನಿರಿ.”

ಮೊಟ್ಟಮೊದಲ ಸಮಾನ ವಚನವು ‘ನಾವು ಅಲ್ಲಾಹನ ಹೊರತು ಇತರ ಯಾರನ್ನೂ ಆರಾಧಿಸಬಾರದು’ ಎಂಬುದಾಗಿದೆ. ಆದ್ದರಿಂದ ಹಿಂದೂ ಮತ್ತು ಮುಸ್ಲಿಮರ ಧರ್ಮಗ್ರಂಥಗಳನ್ನು ತುಲನಾತ್ಮಕವಾಗಿ ಅಧ್ಯಯನ ಮಾಡುವ ಮೂಲಕ ನಾವು ಈ ಸಮಾನತೆಯನ್ನು ಅರಿತುಕೊಳ್ಳಲು ಪ್ರಯತ್ನಿಸೋಣ.

ಭಗವದ್ಗೀತೆ

ಹಿಂದೂ ಧರ್ಮಗ್ರಂಥಗಳಲ್ಲಿ ಅತ್ಯಂತ ಪ್ರಸಿದ್ಧವಾದುದು ಭಗವದ್ಗೀತೆಯಾಗಿದೆ. ಅದರಲ್ಲಿರುವ ಈ ಕೆಳಗಿನ ವಚನವನ್ನು ನೋಡಿರಿ:

ಕಾಮೈಸ್ತೈಸ್ತೈರ್ಹೃತಜ್ಞಾನಾಃ ಪ್ರಪದ್ಯಂತೇSನ್ಯದೇವತಾಃ |

ತಂ ತಂ ನಿಯಮಮಾಸ್ಥಾಯಾ ಪ್ರಕೃತ್ಯಾ ನಿಯತಾಃ ಸ್ವಯಾ || 20 ||

“ಭೋಗಗಳ ಕಾಮನೆಯ ಮೂಲಕ ಯಾರ ಜ್ಞಾನವು ಅಪಹರಿಸಲ್ಪಟ್ಟಿದೆಯೋ ಅವರು ತಮ್ಮ ಸ್ವಭಾವಕ್ಕನುಸಾರವಾಗಿ ವ್ಯತ್ಯಸ್ತ ನಿಯಮಗಳನ್ನು ಅನುಸರಿಸಿ ವ್ಯತ್ಯಸ್ತ ದೇವರುಗಳನ್ನು ಪೂಜಿಸುತ್ತಾರೆ.” (ಭಗವದ್ಗೀತೆ 7/20)

ಇಲ್ಲಿ ಗೀತೆಯು ಸೂಚಿಸುವ ‘ಜ್ಞಾನವು ಅಪಹರಿಸಲ್ಪಟ್ಟ ಜನರು’ ಭೌತಿಕತೆಯಲ್ಲಿ ಮುಳುಗಿರುವ ಮತ್ತು ಏಕ ದೇವನ ಹೊರತು ವ್ಯತ್ಯಸ್ತ ದೇವರುಗಳನ್ನು ಪೂಜಿಸುವವರಾಗಿದ್ದಾರೆ.

ಉಪನಿಷತ್ತುಗಳು

ಉಪನಿಷತ್ತುಗಳು ಕೂಡ ಹಿಂದೂಗಳ ಪವಿತ್ರ ಗ್ರಂಥಗಳಾಗಿವೆ.

ಈ ಕೆಳಗಿನ ಉಪನಿಷದ್ ವಚನವನ್ನು ನೋಡಿರಿ:

ಏಕಮೇವಾದ್ವಿತೀಯಮ್ || 1 ||

“ಅವನು ಏಕನು ದ್ವಿತೀಯನಿಲ್ಲದವನು.” (ಛಾಂದೋಗ್ಯ 6/2/1)

ಈ ಕೆಳಗಿನ ವಚನವನ್ನು ನೋಡಿರಿ:

ನ ಚಾಸ್ಯ ಕಶ್ಚಿಜ್ಜನಿತಾ ನ ಚಾಧಿಪಃ || 6-9 ||

“ಅವನನ್ನು ಸೃಷ್ಟಿಸುವವನಾಗಲಿ ಅವನಿಗೆ ಯಜಮಾನನಾಗಲಿ ಇಲ್ಲ.” (ಶ್ವೇತಾಶತರ 6/9)

ಈ ಕೆಳಗಿನ ವಚನವನ್ನು ನೋಡಿರಿ:

ನ ತಸ್ಯ ಪ್ರತಿಮಾ ಅಸ್ತಿ ಯಸ್ಯ ನಾಮ ಮಹದ್ಯಶಃ || 4-19 ||

“ಅವನಿಗೆ ಯಾವುದೇ ರೂಪವಿಲ್ಲ. ಅವನ ನಾಮವು ಮಹತ್ತಾದ ಕೀರ್ತಿಯನ್ನು ಹೊಂದಿದೆ.” (ಶ್ವೇತಾಶತರ 4/19) (The Principal Upanishad by S Radhakrishnan page 736, 737)

ಈ ಮೇಲಿನ ಉಪನಿಷದ್ ವಚನಗಳನ್ನು ಆದರಣೀಯ ಕುರ್‍ಆನ್‍ನ ವಚನಗಳೊಂದಿಗೆ ಹೋಲಿಸಿ ನೋಡಿರಿ:

﴿ وَلَمْ يَكُنْ لَهُ كُفُوًا أَحَدٌ ﴾

“ಅವನಿಗೆ ಸರಿಸಾಟಿಯಾಗಿ ಯಾರೂ ಇಲ್ಲ.” (ಕುರ್‍ಆನ್ 112/4)

﴿ لَيْسَ كَمِثْلِهِ شَيْءٌ ﴾

“ಅವನಿಗೆ ಹೋಲಿಕೆಯಾಗಿ ಯಾವುದೂ ಇಲ್ಲ.” (ಕುರ್‍ಆನ್ 42/11)

ದೇವನನ್ನು ಒಂದು ವಿಶೇಷ ರೂಪದಲ್ಲಿ ಭಾವಿಸಿಕೊಳ್ಳಲು ಮನುಷ್ಯನು ಅಶಕ್ತನಾಗಿರುವುದನ್ನು ಸೂಚಿಸುವ ಈ ಕೆಳಗಿನ ವಚನವನ್ನು ನೋಡಿರಿ:

ನ ಸಂದೃಶೇ ತಿಷ್ಠತಿ ರೂಪಮಸ್ಯ ನ

ಚಕ್ಷುಷಾ ಪಶ್ಯತಿ ಕಶ್ಚ ನೈನಮ್ |

ಹೃದಾ ಹೃದಿಸ್ಥಂ ಮನಸಾ ಯ ಏನ

ಮೇವಂ ವಿದುರಮೃತಾಸ್ತೇ ಭವನ್ತಿ || 4-20 ||

“ಅವನ ರೂಪವು ದೃಶ್ಯವಲ್ಲ ಅರ್ಥಾತ್ ಕಾಣುವಂತದ್ದಲ್ಲ. ಯಾರೂ ಅವನನ್ನು ಕಣ್ಣಿನಿಂದ ನೋಡಲಾರನು. ಯಾರು ಅವನನ್ನು ಹೃದಯದ ಬುದ್ಧಿಯಿಂದ ಅವನು ತನ್ನ ಹೃದಯದಲ್ಲಿ ನೆಲೆಸಿದ್ದಾನೆಂದು ಅರಿಯುತ್ತಾನೋ ಅವನು ಅಮರನಾಗುವನು.” (ಶ್ವೇತಾಶತರ 6/9)

ಇದೇ ವಿಷಯವು ಆದರಣೀಯ ಕುರ್‍ಆನ್‍ನಲ್ಲಿ ಹೀಗಿದೆ:

﴿ لَا تُدْرِكُهُ الْأَبْصَارُ وَهُوَ يُدْرِكُ الْأَبْصَارَ وَهُوَ اللَّطِيفُ الْخَبِيرُ ﴾

“ದೃಷ್ಟಿಗಳು ಅವನನ್ನು ತಲುಪಲಾರವು. ಅವನು ದೃಷ್ಟಿಗಳನ್ನು ತಲುಪುವನು. ಅವನು ಸೂಕ್ಷವಾಗಿ ವೀಕ್ಷಿಸುವವನೂ ಸೂಕ್ಷ್ಮಜ್ಞಾನಿಯೂ ಆಗಿರುವನು.” (ಕುರ್‍ಆನ್ 6/103)

ವೇದಗಳು:

ವೇದಗಳು ಕೂಡ ಹಿಂದೂಗಳ ಪವಿತ್ರ ಗ್ರಂಥಗಳಾಗಿವೆ. ಮುಖ್ಯವಾಗಿ ನಾಲ್ಕು ವೇದಗಳಿವೆ. ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ.

ಯಜುರ್ವೇದ

ಯಜುರ್ವೇದದ ಈ ಕೆಳಗಿನ ವಚನವನ್ನು ನೋಡಿರಿ:

“ಅವನಿಗೆ ಯಾವುದೇ ರೂಪವಿಲ್ಲ.” (ಯಜುರ್ವೇದ 32/3)

ನಂತರ ಅದರಲ್ಲಿ ಹೀಗಿದೆ:

“ಅವನು ಜನನವಿಲ್ಲದವನಾಗಿರುವುದರಿಂದ ಅವನು ನಮ್ಮ ಆರಾಧನೆಗಳಿಗೆ ಅರ್ಹನಾಗಿದ್ದಾನೆ.”

“There is no image of Him whose glory verily is great. He sustains within Himself all luminous objects like the sun etc. May He not harm me, this is my prayer. As He is unborn He deserves our worship.” (The Yajurveda by Devi Chand M A page 377)

 “ಯಾರ ಕೀರ್ತಿಯು ಮಹತ್ತಾಗಿದೆಯೋ ಅವನಿಗೆ ಯಾವುದೇ ರೂಪವಿಲ್ಲ. ಅವನು ತನ್ನಲ್ಲಿಯೇ ಸೂರ್ಯ ಮುಂತಾದ ಎಲ್ಲ ಪ್ರಕಾಶಮಯ ವಸ್ತುಗಳನ್ನು ಸಂರಕ್ಷಿಸುತ್ತಾನೆ. ಅವನು ನನಗೆ ಕೆಡುಕನ್ನುಂಟುಮಾಡದಿರಲಿ, ಇದೇ ನನ್ನ ಪ್ರಾರ್ಥನೆ. ಅವನು ಜನನವಿಲ್ಲದವನಾಗಿರುವುದರಿಂದ ಅವನು ನಮ್ಮ ಆರಾಧನೆಗಳಿಗೆ ಅರ್ಹನಾಗಿದ್ದಾನೆ.”

ಯಜುರ್ವೇದ 40/8ರಲ್ಲಿ ಹೀಗಿದೆ:

“He hath attained unto the bright, bodyless, woundless, sinewless, the pure which evil hath not pierced. Far-sighted, wise, encompassing, He self-existent hath prescribed aims, as propriety demands, unto the everlasting years.” (Yajurveda Samhita by Ralph I H Griffith page 538)

“ಪ್ರಕಾಶಮಯ, ಅಶರೀರಿ, ಗಾಯವಿಲ್ಲದವನು, ಸ್ನಾಯುಗಳಿಲ್ಲದವನು, ದುಷ್ಟಶಕ್ತಿಯು ಚುಚ್ಚಿರದ ಪರಿಶುದ್ಧತೆಯನ್ನು ಪಡೆದವನು. ದೂರದೃಷ್ಟಿಯಿರು ವವನು, ಚಾಣಾಕ್ಷನು, ಸುತ್ತುವರಿಯುವವನು, ಸ್ವ ಅಸ್ತಿತ್ವವಿರುವ ಅವನಿಗೆ ನಿರಂತರ ವರ್ಷಗಳವರೆಗೆ ಅವನ ಅಧಿಪತ್ಯವು ಬಯಸುವಂತಹ ನಿರ್ದೇಶಿತ ಗುರಿಗಳಿವೆ.”

ಅದರಲ್ಲಿರುವ ಇನ್ನೊಂದು ವಚನವು ಹೀಗಿದೆ:

ಅನ್ಧಂ ತಮಃ ಪ್ರವಿಶಂತಿಯೇSಸಮ್ಭೂತಿಮುಪಾಸತೇ |

ತತೋ ಭೂಯ ಇವ ತೇ ತಮೋ ಯ ಉ ಸಮ್ಭೂತ್ಯಾಗ್ಮ್ ರತಾಃ || 40-9 ||

“ಯಾರು ಅಸಂಭೂತಿಯನ್ನು ಉಪಾಸನೆ ಮಾಡುತ್ತಾರೋ ಅವರು ಕುರುಡು ಗತ್ತಲೆಯನ್ನು ಪ್ರವೇಶಿಸುವರು. ಯಾರು ಸಂಭೂತಿಯಲ್ಲಿ ರತರಾಗಿರುತ್ತಾರೋ ಅವರು ಅದಕ್ಕಿಂತಲೂ ಹೆಚ್ಚಿನ ಕತ್ತಲೆಯನ್ನು ಪ್ರವೇಶಿಸುವರು.” (ಯಜುರ್ವೇದ 40/9)

ಅಸಂಭೂತಿ ಎಂದರೆ ವಾಯು, ಜಲ, ಅಗ್ನಿ ಮುಂತಾದ ನೈಸರ್ಗಿಕ ವಸ್ತುಗಳು. ಸಂಭೂತಿ ಎಂದರೆ ಮೇಜು, ಕುರ್ಚಿ, ವಿಗ್ರಹ ಮುಂತಾದ ಕೃತಕ ವಸ್ತುಗಳು.

ಅದರಲ್ಲಿರುವ ಇನ್ನೊಂದು ವಚನವು ಹೀಗಿದೆ:

“ನಮ್ಮನ್ನು ನೇರವಾದ ಮಾರ್ಗದಲ್ಲಿ ಮುನ್ನಡೆಸು. ನಮ್ಮನ್ನು ದಾರಿಗೆಡಿಸುವ ಮತ್ತು ಅಲೆಯುವಂತೆ ಮಾಡುವ ಪಾಪವನ್ನು ನಿವಾರಿಸು.” (ಯಜುರ್ವೇದ 40/16)

ಅಥರ್ವವೇದ

ಅಥರ್ವವೇದದಲ್ಲಿರುವ ಈ ವಚನವನ್ನು ನೋಡಿರಿ:

ದೇವ ಮಹಾ ಒಸಿ |

“ದೇವನು ಮಹಾನನಾಗಿದ್ದಾನೆ.” (ಅಥರ್ವವೇದ 20/58/3)

“Verily, Surya, thou art great; truly, Aditya, thou art great; As thou art great indeed thy greatness is admire; yeah, verily, great art thou, O God.” (Atharvaveda Samhita vol. 2 William Dmight Whitney page 910)

 “ಖಂಡಿತವಾಗಿಯೂ ಸೂರ್ಯನೇ  ನೀನು ಮಹಾನನಾಗಿರುವೆ, ಖಂಡಿತ ವಾಗಿಯೂ ಆದಿತ್ಯನೇ ನೀನು ಮಹಾನನಾಗಿರುವೆ, ನೀನು ಮಹಾನನಾಗಿರು ವುದರಿಂದ ಸತ್ಯವಾಗಿಯೂ ನಿನ್ನ ಮಹಿಮೆಯು ಮೆಚ್ಚುವಂತದ್ದು. ಹೌದು, ನೀನು ಮಹಾನನು, ಓ ದೇವನೇ.”

ಇಂತಹುದೇ ಸಂದೇಶವು ಆದರಣೀಯ ಕುರ್‍ಆನ್‍ನಲ್ಲಿ ಹೀಗಿದೆ:

﴿ الْكَبِيرُ الْمُتَعَالِ ﴾

“ಅವನು ಮಹಾನನೂ ಅತ್ಯುನ್ನತನೂ ಆಗಿದ್ದಾನೆ.” (ಕುರ್‍ಆನ್ 13/9)

ಋಗ್ವೇದ

ಇದು ವೇದಗಳಲ್ಲೇ ಅತ್ಯಂತ ಪುರಾತನವಾದುದು. ಹಿಂದೂಗಳು ಇದನ್ನು ಕೂಡ ಪವಿತ್ರವೆಂದು ನಂಬುತ್ತಾರೆ.

ಋಗ್ವೇದದಲ್ಲಿರುವ ಒಂದು ವಚನವು ಹೀಗಿದೆ:

“ವಿಪ್ರರು (ವಿದ್ವತ್ತಿರುವ ಸಂತರು) ಏಕ ದೇವನನ್ನು ಅನೇಕ ಹೆಸರುಗಳಿಂದ ಕರೆಯುತ್ತಾರೆ.” (ಋಗ್ವೇದ 1/164/46)

ಸರ್ವಶಕ್ತನಾದ ದೇವನಿಗೆ ಋಗ್ವೇದವು 33 ವ್ಯತ್ಯಸ್ತ ವಿಶೇಷಣಗಳನ್ನು ನೀಡಿದೆ. ಅವುಗಳಲ್ಲಿ ಅಧಿಕವೂ ಋಗ್ವೇದದ ಪುಸ್ತಕ 2 ಶ್ಲೋಕ 1 ರಲ್ಲಿ ನೀಡಲಾಗಿದೆ.

ಬ್ರಹ್ಮ ಎಂಬುದು ಋಗ್ವೇದದಲ್ಲಿ ನೀಡಲಾದ ಅನೇಕ ವಿಶೇಷಣಗಳಲ್ಲಿ ಮತ್ತು ಸುಂದರವಾದ ಹೆಸರುಗಳಲ್ಲಿ ಒಂದಾಗಿದೆ. ಬಹ್ಮ ಎಂದರೆ ‘ಸೃಷ್ಟಿಕರ್ತ’ ಎಂದರ್ಥ. ಇದನ್ನು ಅರಬಿ ಭಾಷೆಗೆ ಭಾಷಾಂತರಿಸಿದರೆ ‘ಖಾಲಿಕ್’ ಎಂದಾಗುತ್ತದೆ. ಸರ್ವಶಕ್ತನಾದ ದೇವನನ್ನು ಖಾಲಿಕ್ ಅಥವಾ ಸೃಷ್ಟಿಕರ್ತ ಅಥವಾ ಬ್ರಹ್ಮ ಎಂದು ಕರೆಯುವುದರಲ್ಲಿ ಮುಸ್ಲಿಮರಿಗೆ ಅಭ್ಯಂತರವಿಲ್ಲ.  ಆದರೆ ಬ್ರಹ್ಮ ಎಂಬುದರ ಅರ್ಥ ಅವನು ‘ನಾಲ್ಕು ತಲೆಗಳಿರುವವನು’ ಎಂದಾದರೆ ಮುಸ್ಲಿಮರು ಖಂಡಿತವಾಗಿಯೂ ಆ ದೃಷ್ಟಿಕೋನವನ್ನು ಬೆಂಬಲಿಸಲಾರರು. ಅವರು ಖಂಡಿತವಾಗಿಯೂ ಅದನ್ನು ವಿರೋಧಿಸುವರು. ಸರ್ವಶಕ್ತನಾದ ದೇವನಿಗೆ ಮನುಷ್ಯತ್ವಾರೋಪಣೆ (anthropomorphism) ಮಾಡುವುದು ಯಜುರ್ವೇದದ ಈ ಕೆಳಗಿನ ವಚನಕ್ಕೆ ವಿರುದ್ಧವಾಗಿದೆ:

“ಅವನಿಗೆ ಯಾವುದೇ ರೂಪವಿಲ್ಲ.” (ಯಜುರ್ವೇದ 32/3)

ವಿಷ್ಣು ಎಂಬುವುದು ಋಗ್ವೇದದಲ್ಲಿ (2/1/3) ನೀಡಲಾಗಿರುವ ಇನ್ನೊಂದು ವಿಶೇಷಣವಾಗಿದೆ. ವಿಷ್ಣು ಎಂದರೆ ‘ಸಂರಕ್ಷಕ’ ಎಂದರ್ಥ. ಇದನ್ನು ಅರಬಿಗೆ ಭಾಷಾಂತರಿಸಿದರೆ ‘ರಬ್ಬ್’ ಎಂದಾಗುತ್ತದೆ. ಸರ್ವಶಕ್ತನಾದ ದೇವನನ್ನು ರಬ್ಬ್ ಅಥವಾ ಸಂರಕ್ಷಕ ಅಥವಾ ವಿಷ್ಣು ಎಂದು ಕರೆಯುವುದರಲ್ಲಿ ಮುಸ್ಲಿಮರಿಗೆ ಅಭ್ಯಂತರವಿಲ್ಲ. ವಿಷ್ಣು ಎಂದರೆ ‘ನಾಲ್ಕು ಕೈಗಳಿರುವ, ಬಲಗೈಯೊಂದರಲ್ಲಿ ಚಕ್ರವನ್ನು ಹಿಡಿದಿರುವ, ಎಡಗೈಯೊಂದರಲ್ಲಿ ಶಂಖವನ್ನು ಹಿಡಿದಿರುವ, ಹಕ್ಕಿಯೊಂದರ ಮೇಲೆ ಚಲಿಸುವ ಮತ್ತು ಹಾವೊಂದರ ಮೇಲೆ ಒರಗಿರುವ’ ಚಿತ್ರವೆಂದಾದರೆ ಮುಸ್ಲಿಮರು ಸರ್ವಶಕ್ತನಿಗೆ ಅಂತಹ ರೂಪವಿರುವುದನ್ನು ಅಂಗೀಕರಿಸಲಾರರು. ಅದೇ ರೀತಿ ಅದು ಈ ಹಿಂದೆ ವಿವರಿಸಿದ ಯಜುರ್ವೇದ 32/3 ವಚನಕ್ಕೆ ವಿರುದ್ಧವಾಗಿದೆ.

ಋಗ್ವೇದದ ಈ ಕೆಳಗಿನ ವಚನಗಳನ್ನು ನೋಡಿರಿ:

“O friends, do not worship anybody but Him, the divine one” (Rigveda 8/1/1) [Rigveda Samhita vol ix page 1& 2 by Swami Satyaprakash Saraswati & Satyakam Vidyalankar]

“ಓ ಗೆಳೆಯರೇ! ದೈವತ್ವವಿರುವ ಅವನ ಹೊರತು ಇತರ ಯಾರನ್ನೂ ನೀವು ಆರಾಧಿಸಬಾರದು.”

ಋಗ್ವೇದದಲ್ಲಿರುವ ಇನ್ನೊಂದು ವಚನವು ಹೀಗಿದೆ:

“The wise yogis concentrate their minds, and concentrate their thoughts as well in the Supreme Reality, which is Omnipresent, Great and Omniscient. He alone, knows their functions, assigns to the sense organs their respective tasks. Verily, great is the glory of the Divine Creator.” (Rigveda 5/81) [Rigveda Samhita vol vi page 1802& 1803 by Swami Satyaprakash Saraswati & Satyakam Vidyalankar]

“ಚಾಣಾಕ್ಷರಾದ ಯೋಗಿಗಳು ತಮ್ಮ ಮನಸ್ಸನ್ನು ಕೇಂದ್ರೀಕರಿಸುತ್ತಾರೆ ಮತ್ತು ತಮ್ಮ ಚಿಂತನೆಗಳನ್ನು ಕೂಡ ಕೇಂದ್ರೀಕರಿಸುತ್ತಾರೆ, ಒಂದು ಅತ್ಯುನ್ನತವಾದ ವಾಸ್ತವಿಕತೆಯಲ್ಲಿ, ಅದು ಸರ್ವವ್ಯಾಪಿಯಾಗಿದೆ, ಮಹೋನ್ನತವಾಗಿದೆ ಮತ್ತು ಸರ್ವಜ್ಞವಾಗಿದೆ. ಅವನೊಬ್ಬನೇ ಅವರ ಕಾರ್ಯಗಳನ್ನು ಅರಿಯುತ್ತಾನೆ, ಅವರ ಇಂದ್ರಿಯಗಳಿಗೆ ಅದರ ನಿಶ್ಚಿತ ಕಾರ್ಯಗಳನ್ನು ಒಪ್ಪಿಸುತ್ತಾನೆ. ಖಂಡಿತ ವಾಗಿಯೂ, ಸೃಷ್ಟಿಕರ್ತನಾದ ದೇವನ ಮಹಿಮೆಯು ಮಹೋನ್ನತವಾಗಿದೆ.”

ಹಿಂದೂ ವೇದಾಂತದ ಬ್ರಹ್ಮಸೂತ್ರ

ಹಿಂದೂ ವೇದಾಂತದ ಬ್ರಹ್ಮಸೂತ್ರವು ಹೀಗಿದೆ:

ಏಕಮ್ ಬ್ರಹ್ಮಃ ದ್ವಿತೀಯ ನಾಸ್ತಿ ನಃ ನ ನಾಸ್ತಿ ಕಿಂಚನ್ |

“ದೇವನು ಒಬ್ಬನೇ ಆಗಿರುವನು. ಎರಡನೆಯದ್ದು ಇಲ್ಲ. ಇಲ್ಲ. ಸ್ವಲ್ಪವೂ ಇಲ್ಲ.”

ಹಿಂದೂ ಧರ್ಮಗ್ರಂಥಗಳ ಪಕ್ಷಪಾತರಹಿತವಾದ ಅಧ್ಯಯನದಿಂದ ಮಾತ್ರ ಹಿಂದೂ ಧರ್ಮದ ದೇವ ಪರಿಕಲ್ಪನೆಯನ್ನು ಅರಿತುಕೊಳ್ಳಲು ಸಾಧ್ಯ.

(ಮುಂದುವರೆಯುತ್ತದೆ إن شاء الله‎‎)

Pin It on Pinterest

Please Share This

Share this post with your family & friends! ನಿಮ್ಮ ಕುಟುಂಬ ಹಾಗೂ ಗೆಳೆಯರೊಟ್ಟಿಗೆ ಈ ಸಂದೇಶವನ್ನು ಓದಲಿ!!

error: Alert: Content is protected !!
Subscribe To Our Newsletter
ನಮ್ಮ ವಾರ್ತಾಪತ್ರಕ್ಕೆ ಸದದ್ಯರಾಗಿರಿ.

Subscribe To Our Newsletter

ನಮ್ಮ ವಾರ್ತಾಪತ್ರಕ್ಕೆ ಸದದ್ಯರಾಗಿರಿ.

CONGRATS! YOU HAVE SUCCESSFULLY SUBSCRIBED. ಶುಭಾಷಯಗಳು! ನೀವು ಯಶಸ್ವಿಯಾಗಿ ಚಂದಾದಾರರಾಗಿದ್ದೀರಿ. Keep your eyes peeled for my next email! ನಮ್ಮ ಮುಂದಿನ ಇ-ಮೇಲ್‌ಗಳಿಗಾಗಿ ನಿಮ್ಮ ಕಣ್ನುಗಳನ್ನು ಕಾಯ್ದಿರಿಸಿಕೊಳ್ಳಿ!

body { font-family: “Poppins”, sans-serif; }