------------------------------------------------------------------------------------ ------------------------------------------------------------------------------------- --------------------------------------------------------------------------------------------- ---------------------------------------------------------------------------------------------
Want to Learn More(ಹೆಚ್ಚಿನ ಕಲಿಕೆಗಾಗಿ) ... Click Here or Subscribe

about-us-1

Our Approach

ಅಸ್ಸಲಾಮು ಅಲೈಕುಮ್…
Peaceful Mankind(ಪ್ರಶಾಂತಯುತ ಮಾನವಕುಲ) ಸಂಸ್ಥೆಯು ಒಂದು ಲಾಭ ರಹಿತ ಸಂಸ್ಥೆಯಾಗಿದ್ದು, ಪ್ರಪಂಚದ ಮೂಲೆ-ಮೂಲೆಯಲ್ಲಿರುವ ಸರ್ವ ಜೀವಿಗಾಗಿ ಉಂಟಾಗಿದ್ದು, ವಿಶೇಷವಾಗಿ ಕರ್ನಾಟಕದ ಹಾಗೂ ಕನ್ನಡ ಬಲ್ಲ ಪ್ರಪಂಚದ ಯಾವುದೇ ಮೂಲೆಯ ವ್ಯಕ್ತಿಗೆ ಶ್ರೇಷ್ಠ ಗ್ರಂಥದ ಆಳ ಹಾಗೂ ಅರಿವನ್ನು ಮೂಡಿಸಿ, ಉತ್ತಮ ಹಾಗೂ ನೀಚ ಕಾರ್ಯಗಳ ವ್ಯತ್ಯಾಸವನ್ನು ತಿಳಿಯ ಮಾಡಿ, ತನ್ನ ಸೃಷ್ಟಿಯ ಹಿಂದಿನ ಸದುದ್ದೇಶದ ಅರಿವನ್ನು ಉಂಟುಮಾಡಿ, ಅದಕ್ಕೆ ಕಾರಣವಾದ ಸೃಷ್ಟಿಕರ್ತನೊಬ್ಬನನ್ನೇ ಆರಾಧಿಸಿದಾಗ ಆಗುವ ವ್ಯಕ್ತಿಗತ, ಕೌಟುಂಬಿಕ ಅಥವಾ ಸಾಮಾಜಿಕ ಬದಲಾವಣೆಗಳನ್ನು ಅನುಭವಿಸುವಂತೆ ಮಾಡಿ, ಮಾನವ ಜನ್ಮವೇ ಶ್ರೇಷ್ಠವಾಗಿದ್ದು ಅದನ್ನು ಅರ್ಥಗರ್ಭಿತವಾಗಿ ಜೀವಿತದಲ್ಲಿ ಅಳವಡಿಸಿಕೊಳ್ಳುವ ಉದ್ದೇಶವನ್ನು ಹೊಂದಿದೆ. ಇದೆಲ್ಲವೂ ಕೂಡ ನಮ್ಮ ಸ್ವಂತ ನಿಲುವುಗಳಾಗಿಲ್ಲ ಬದಲಾಗಿ ನಮ್ಮನ್ನು ಸೃಷ್ಟಿಸಿದ ಸೃಷ್ಟಿಕರ್ತನ ನಿಲುವುಗಳಾಗಿದ್ದು ಅದನ್ನು ನಿಮ್ಮ ಮುಂದೆ ಇರಿಸುವ ಪ್ರಯತ್ನವನ್ನು ಮಾಡುತಿದ್ದೇವೆ.
ಸರ್ವವನ್ನು ಸೃಷ್ಟಿಸಿದ ಸೃಷ್ಟಿಕರ್ತನು ನಮ್ಮ ನಿಮ್ಮನ್ನು ಒಂದು ನಿರ್ಧಿಷ್ಟ ಉದ್ದೇಶಕ್ಕಾಗಿ ಸೃಷ್ಟಿಸಿ, ಸಕಲವನ್ನು ನಮ್ಮ ಹಸ್ತಗಳಲ್ಲಿ ನೀಡಿದ್ದಾನೆ, ಆದರೆ ಅದೂ ಕೂಡ ಒಂದು ನಿರ್ಧಿಷ್ಟ ಅವಧಿಯವರೆವಿಗೆ ಮಾತ್ರ. ಇದನ್ನರಿಯದ ಮಾನವನು ಜೀವನವನ್ನು ತನಗಿಷ್ಟ ಬಂದ ರೀತಿಯಲ್ಲಿ ಜೀವಿಸುತ್ತಾನೆ. ಇದೇ ಇಂದು ನಾವು ನೋಡುತ್ತಿರುವ ಸಕಲ ಅನಾಚಾರ, ಅವ್ಯವಸ್ಥೆ, ಹಾಗೂ ಗೊಂದಲಮಯ ವಾತಾವರಣಕ್ಕೆ ಕಾರಣ. ಈ ನಿಲುವಿನಲ್ಲಿ ಸಮಾಜದ ಸುಧಾರಣೆ ಬಹಳ ಅಗತ್ಯವಾಗಿದ್ದು, ಇದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ. ಇದನ್ನೇ ನಮ್ಮ ಸೃಷ್ಟಿಕರ್ತನು ನಮ್ಮ ಮೇಲೆ ಹೇರಿರುವ ನಿಯಮಗಳಲ್ಲಿ ಒಂದು ಮುಖ್ಯ ನಿಲುವಾಗಿದೆ.

ಈ ಕರ್ತವ್ಯವನ್ನು ನೆನೆಸಿಕೊಳ್ಳುತ್ತಾ ಕಾರ್ಯ ನಿರ್ವಹಿಸುತ್ತಿರುವ ನಾವುಗಳೆಲ್ಲಾ ಸೇರಿ Peaceful Mankind(ಪ್ರಶಾಂತಯುತ ಮಾನವಕುಲ) ಸಂಸ್ಥೆಯನ್ನು ಹುಟ್ಟುಹಾಕಿದ್ದೇವೆ. ಇದಕ್ಕೆ ಕಾರಣಕರ್ತರಾಗಿರುವ ಕರ್ನಾಟಕದ ಕನ್ನಡದ ಒಲವು ಹೊಂದಿರುವ ಮುಸ್ಲೀಮ್ ಸಹೋದರ/ಸಹೋದರಿಯರಿಗೆ ಋಣಿಯಾಗಿದ್ದೇವೆ. ಅನೇಕ ವರ್ಷಗಳಿಂದ ಮುಹಮ್ಮದ್ ಇಸ್ಹಾಕ್ ರ ಕನಸಿನ ಕೂಸಾಗಿದ್ದ Internet Media(ಅಂತರ್ಜಾಲ ಮಾಧ್ಯಮ)ದ ಕನ್ನಡ ಇಸ್ಲಾಮಿಕ್ Website(ಜಾಲತಾಣ) ಈಗ ನಿಮ್ಮ ಮುಂದೆ ಅವರ ಸತತ ಪ್ರಯತ್ನದಿಂದಾಗಿ ನಿಮ್ಮ ಮುಂದಿದೆ.

ನಾವೆಲ್ಲರೂ ಸಮಾನರು, ನಮ್ಮೆಲ್ಲರ ಮೂಲ ಒಂದೇ ಮತ್ತು ನಾವುಗಳು ಹೋಗಿ ತಲಪುವ ಅಂತಿಮ ಸ್ಥಳವೂ ಕೂಡ ಒಂದೇ ಆಗಿದೆ ಹಾಗೂ ಇವೆಲ್ಲ ಏಕತೆಗೆ ಕಾರಣವಾದ ನಮ್ಮ ಸೃಷ್ಟಿಕರ್ತನೂ ಆರಾಧನೆಗೆ ಏಕ ಮಾತ್ರ ಅರ್ಹನಾಗಿದ್ದಾನೆ ಎಂಬುದನ್ನು ದಿಟ್ಟ ಹೆಜ್ಜೆಗಳಿಂದ ಪ್ರತಿಪಾದಿಸುತ್ತಾ ಬಂದಿರುವ Peaceful Mankind(ಪ್ರಶಾಂತಯುತ ಮಾನವಕುಲ) ಸಂಸ್ಥೆಯು ಜನರ ನಡುವೆ ಶಾಂತಿ, ಸಮಾಧಾನ, ಸಮಾನತೆ, ಪ್ರೀತಿ, ಕರುಣೆ ಮತ್ತು ಪರಸ್ಪರ ಸ್ಪಂದನಾತ್ಮಕ ನಿಲುವು ಇತ್ಯಾದಿ ಇಸ್ಲಾಮಿನ ಉನ್ನತ ಧಾರಣೆಗಳನ್ನು ಜನರಿಗೆ ಪರಿಚಯಿಸುವ ಸಲುವಾಗಿ ಶ್ರಮಿಸುತ್ತಿದೆ. ಅದೇ ಹಾದಿಯಲ್ಲಿ ಇನ್ನೊಂದು ಹೆಜ್ಜೆ ಮುಂದೆ ಬಂದು, ಈಗ ಅಂತರ್ಜಾಲದಲ್ಲಿ ಕೂಡ ಅದರ ವಿವರಗಳನ್ನು ನೀಡುವ ಸಲುವಾಗಿ ನಿಮ್ಮ ಮುಂದಿದೆ. ಜಗತ್ತಿನಲ್ಲಿ ಅಟ್ಟಹಾಸ ಮಾಡುತ್ತಿರುವ ಹಿಂಸೆ, ಅಸ್ಪ್ರಶ್ಯತೆ, ವರ್ಗಬೇದ, ವರ್ಣಬೇದ, ಧರ್ಮ-ಜಾತಿ-ಕೋಮುಗಳ ಹೆಸರಿನಲ್ಲಿ ನಡೆಯುತ್ತಿರುವ ಪ್ರತಿನಿತ್ಯದ ಸಂಘರ್ಷ ನಿವಾರಣೆಗಾಗಿ ಮತ್ತು ಕುಲೀನರ ಹಾಗೂ ಹಿಂದುಳಿದವರ ಏಳಿಗೆಗಾಗಿ ಪಣ ತೊಟ್ಟು ಕಾರ್ಯ ನಿರ್ವಹಿಸುತ್ತಿದೆ.

Peaceful Mankind(ಪ್ರಶಾಂತಯುತ ಮಾನವಕುಲ) ಯಾವುದೇ ಸಾಮಾಜಿಕ ಅವ್ಯವಸ್ಥೆ ಅಥವಾ ಗೊಂದಲ ಹುಟ್ಟಿಸುವಂತಹ ನಿಲುವುಗಳನ್ನಾಗಲಿ ಅಥವಾ ಒಪ್ಪಂದಗಳನ್ನಾಗಲಿ ಹುಟ್ಟುಹಾಕುವುದಿಲ್ಲ ಹಾಗೂ ಅಂಗೀಕರಿಸುವುದಿಲ್ಲ.

Peaceful Mankind(ಪ್ರಶಾಂತಯುತ ಮಾನವಕುಲ) ಸಂಸ್ಥೆಯು T.V. ಮತ್ತು News Paper ನಂತಹ ಮಾಧ್ಯಮಗಳಲ್ಲಿ ಬರುವ ವಿಚಾರಗಳನ್ನೇ ಸತ್ಯವೆಂದು ಭಾವಿಸುತ್ತಾ, ಇಸ್ಲಾಮಿನ ಕುರಿತಾಗಿ ಕೆಟ್ಟ ನಿಲುವನ್ನು ಹೊಂದಿದವರಾಗಿದ್ದಾರೆ. ಇದರಿಂದಾಗಿ Peaceful Mankind(ಪ್ರಶಾಂತಯುತ ಮಾನವಕುಲ) ಸಂಸ್ಥೆಯು ಜನರ ನಡುವೆ ಹೋಗಿ ಅವರಿಗೆ ಇಸ್ಲಾಮಿನ ಕುರಿತಾಗಿ ಇರುವ ಸಕಲ ಸಂಶಯಗಳನ್ನು ಸುವ್ಯಕ್ತ ಖುರ್’ಆನ್ ಮೂಲಕ ನಿವಾರಿಸುವ ಹಾಗೂ ನೈಜ ಇಸ್ಲಾಮಿನ ಚಿತ್ರಣವನ್ನು ರೂಪಿಸುತ್ತಿದೆ. ಅಲ್ಲಲ್ಲಿ ಸಂಚರಿಸುತ್ತಾ ಬೀದಿಗಳಲ್ಲಿ ತಾತ್ಕಾಲಿಕ ಅಂಗಡಿಗಳನ್ನು(Mobile Dawah) ತರೆದು ಅಲ್ಲಿನ ಆಸಕ್ತರಿಗೆ ಇಸ್ಲಾಮಿನ ಕುರಿತಾಗಿ ಅರಿವನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಇಸ್ಲಾಮ್ ಭಯೋತ್ಪಾದನೆಗೆ ವಿರುದ್ಧವಾಗಿದೆ ಎಂದೂ, ಇಸ್ಲಾಮ್ ಕೂಡ ಭಯೋತ್ಪಾದನೆಯನ್ನು ನಿರ್ಮೂಲ ಮಾಡಲು ಪ್ರಯತ್ನಿಸುತ್ತಿರುವ ಕುರಿತಾಗಿಯೂ ವಿವರಿಸಲು ಪ್ರಯತ್ನಿಸುತ್ತಿದೆ. ಇದಕ್ಕೆ ಉತ್ತಮ ಜನ ಸ್ಪಂದನೆಯೂ ಸಿಕ್ಕಿದ್ದು, ನಾವು ಮಾಡುತ್ತಿರುವ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಮುಂದುವರಿಸಿಕೊಂಡು ಹೋಗುವಂತೆ ಜನ ಮನ್ನಣೆಯೂ ದೊರಕಿದೆ.

ಈ ಧ್ಯೇಯ ಸಾಧನೆಗಾಗಿ ನಾನು, ಮುಹಮ್ಮದ್ ಇಸ್ಹಾಕ್(Neat Girish) ಕನ್ನಡ ಭಾಷೆಗಳಲ್ಲಿ ಅಂತಿಮ ದೇವವಾಣಿಯಾದ ಸುವ್ಯಕ್ತ ಖುರ್’ಆನ್ ನ ಭಾಷಾಂತರದ ಅನುವಾದ ಗ್ರಂಥವನ್ನು ಹೌಸ್ ಆಫ್ ಪೀಸ್ ನೊಟ್ಟಿಗೆ ಸೇರಿ ಭಾಷಾಂತರಿಸಿ, HOPE(ಹೋಪ್) ಪ್ರಕಾಶನದ ಹೆಸರಿನಲ್ಲಿ ಪ್ರಕಟಿಸಿರುವೆ. ಅದೇ ರೀತಿ ಕನ್ನಡದಲ್ಲಿ ಇಸ್ಲಾಮಿನ ಅನೇಕ ಕರಪತ್ರಗಳನ್ನು ಹಾಗೂ ಚಿಕ್ಕ ಪುಸ್ತಕಮಾಲೆಯನ್ನೂ ಕನ್ನಡ ಜನತೆಗೆ ಪ್ರಸ್ತುತ ಪಡಿಸಿರುವೆ. ಹಾಗೆಯೇ ಇತರ ಭಾಷಿಗರಿಗೂ ಕೂಡ ಉಚಿತವಾಗಿ ಕೊನೆಯ ವೇದಗ್ರಂಥವನ್ನು ತಲುಪಿಸುವ ಕಾರ್ಯವನ್ನು ನಾನು ನನ್ನ ತಂಡದ[Peaceful Mankind(ಪ್ರಶಾಂತಯುತ ಮಾನವಕುಲ)] ಒಟ್ಟಿಗೆ ಸಫಲವಾಗಿ ನಿರ್ವಹಿಸುತ್ತಾ ಬಂದಿದೆ. ಅದರಿಂದ ಮುಸ್ಲಿಮರೂ ಮುಸ್ಲಿಮೇತರರೂ ಅಪಾರ ಪ್ರಯೋಜನ ಪಡೆಯುತ್ತಿದ್ದಾರೆ. ಹಾಗೆಯೇ ಇನ್ನೂ ಮುಂದೆಯೂ ಪ್ರವಾದಿ ಮುಹಮ್ಮದ್ (ಸ)ರವರ ಜೀವನ ಚರಿತ್ರೆಯ ಮೇಲೆ ಬೆಳಕು ಚೆಲ್ಲುವಂತಹ ಲೇಖನಗಳನ್ನೂ ಹಾಗೂ ಅವರ ಅನುಚರರ(ರ) ಜೀವನ ಕಥನಗಳನ್ನು ಹಾಗೂ ಇತರ ಇಸ್ಲಾಮಿನ ಮಹಾನ್ ಸಾಹಿತ್ಯ ಸಾಲುಗಳನ್ನು ಜನರ ಮುಂದೆ ಇದುವ ಉದ್ದೇಶವನ್ನು ಹೊಂದಿದೆ ಇನ್ಷಾ ಅಲ್ಲಾಹ್(ಅಲ್ಲಾಹನ ಇಚ್ಛೆ ಇದ್ದಲ್ಲಿ).

ನಮ್ಮ ಈ ಎಲ್ಲಾ ಪರಿಶ್ರಮಗಳಿಗೆ ಫಲ ದೊರೆಯುವುದು ನೀವುಗಳು ಈ ಉದ್ದೇಶವನ್ನು ಅರಿತುಕೊಂಡಾಗ ಮಾತ್ರ. ಅಲ್ಲಿಯವರೆಗೆ ನಾವು ಕಾರ್ಯ ನಿರ್ವಹಿಸುವ ಅಚಲ ಮನೋಭಾವನೆಗೆ ಸಿದ್ಧರಿದ್ದೇವೆ. ನೀವು ನೀಡುತ್ತಿರುವ ಎಲ್ಲಾ ಸ್ಪಂದನೆಗಳಿಗೆ ಬಾರಕಲ್ಲಾಹು ಫೀಕುಮ್ (ಅಲ್ಲಾಹನು ನಿಮ್ಮೆಲ್ಲರನ್ನು ಆಶೀರ್ವದಿಸಲಿ).

ಮುಹಮ್ಮದ್ ಇಸ್ಹಾಕ್ (neatgirish)

You could also call this heading “Our philosophy” or “Our vision.” This is the place to talk about what drives you and your business and what’s unique about your process. What you write here should be something distinct and interesting about your business that sets it apart from others in the same industry.

Our Story

Every business has a beginning, and this is where you talk about yours. People want to know what opportunity you saw or how your passion led to the creation of something new. Talk about your roots–people wanna know you have some.

Meet the Team

Write something about the people who make your business go or your philosophy behind customer service.
Why? Because people want to know who they’re doing business with. It’s a human thing.

about-us-headshot-1

Regan McCook

Founder & CEO

Include a short bio with an interesting fact about the person.

about-us-headshot-2

Eric Teagan

Vice President

Include a short bio with an interesting fact about the person.

about-us-headshot-3

Timothy Barrett

CFO

Include a short bio with an interesting fact about the person.

Next Steps…

This is should be a prospective customer’s number one call to action, e.g., requesting a quote or perusing your product catalog.


Call to Action

Pin It on Pinterest

Please Share This

Share this post with your family & friends! ನಿಮ್ಮ ಕುಟುಂಬ ಹಾಗೂ ಗೆಳೆಯರೊಟ್ಟಿಗೆ ಈ ಸಂದೇಶವನ್ನು ಓದಲಿ!!

error: Alert: Content is protected !!
Subscribe To Our Newsletter
ನಮ್ಮ ವಾರ್ತಾಪತ್ರಕ್ಕೆ ಸದದ್ಯರಾಗಿರಿ.

Subscribe To Our Newsletter

ನಮ್ಮ ವಾರ್ತಾಪತ್ರಕ್ಕೆ ಸದದ್ಯರಾಗಿರಿ.

CONGRATS! YOU HAVE SUCCESSFULLY SUBSCRIBED. ಶುಭಾಷಯಗಳು! ನೀವು ಯಶಸ್ವಿಯಾಗಿ ಚಂದಾದಾರರಾಗಿದ್ದೀರಿ. Keep your eyes peeled for my next email! ನಮ್ಮ ಮುಂದಿನ ಇ-ಮೇಲ್‌ಗಳಿಗಾಗಿ ನಿಮ್ಮ ಕಣ್ನುಗಳನ್ನು ಕಾಯ್ದಿರಿಸಿಕೊಳ್ಳಿ!

body { font-family: “Poppins”, sans-serif; }