------------------------------------------------------------------------------------ ------------------------------------------------------------------------------------- --------------------------------------------------------------------------------------------- ---------------------------------------------------------------------------------------------
Want to Learn More(ಹೆಚ್ಚಿನ ಕಲಿಕೆಗಾಗಿ) ... Click Here or Subscribe

ಭಯೋತ್ಪಾದನೆಯ ಬಗ್ಗೆ ಇಸ್ಲಾಮ್ ಏನೆನ್ನುತ್ತದೆ? / ماذا يقول الإسلام عن الإرهاب؟

بِسْمِ اللهِ الرَّحْمـَنِ الرَّحِيم

ಭಯೋತ್ಪಾದನೆಯ ಬಗ್ಗೆ ಇಸ್ಲಾಮ್ ಏನೆನ್ನುತ್ತದೆ?

ಪೀಠಿಕೆ

ನಾವು ಬದುಕುತ್ತಿರುವ ಈ ಕಾಲಘಟ್ಟದ ವಿಶಿಷ್ಟ ಲಕ್ಷಣಗಳಲ್ಲೊಂದು ನಮ್ಮ ಸಮಾಜದಲ್ಲಿ ಭೀಮಾಕಾರವಾಗಿ ಬೆಳೆದು ನಿಂತಿರುವ ಸ್ವಚ್ಛಂದ ಹಿಂಸೆಯ ನಡುವೆ ನಾವು ಬದುಕುತ್ತಿದ್ದೇವೆ ಎಂಬುದಾಗಿದೆ. ಅದು ಮಾರುಕಟ್ಟೆಯಲ್ಲಿ ಸ್ಫೋಟಗೊಳ್ಳುವ ಒಂದು ಬಾಂಬ್ ಆಗಿರಲಿ, ಒಂದು ವಿಮಾನಾಪಹರಣವಾಗಿರಲಿ, ಜನಾಂಗೀಯ ಹತ್ಯೆಗಳಾಗಿರಲಿ, ಅಥವಾ ಇನ್ನಿತರ ಏನೇ ಆಗಿರಲಿ, ಅಲ್ಲೆಲ್ಲ ರಾಜಕೀಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವುದಕ್ಕಾಗಿ ನಿರಪರಾಧಿ ಜೀವಗಳನ್ನು ನಿರಂತರ ಬಲಿ ತೆಗೆಯಲಾಗುತ್ತಿದೆ. ಕೊಲೆಗಳು ಸಾಮಾನ್ಯವಾಗಿರುವ, ಮನುಷ್ಯ ಜೀವಕ್ಕೆ ಬೆಲೆಯೇ ಇಲ್ಲದ ಮತ್ತು ಹಿಂಸೆಯು ವಿಶ್ವವ್ಯಾಪಕವಾಗಿರುವ ಜಗತ್ತಿನಲ್ಲಿ ನಾವು ಬದುಕುತ್ತಿದ್ದೇವೆ. ಇವೆಲ್ಲವುಗಳ ಮಧ್ಯೆ ಜಾಗತಿಕವಾಗಿ ತಾಂಡವವಾಡುತ್ತಿರುವ ಭಯೋತ್ಪಾದನೆಯು ಸಮಾಜದ ಶಾಂತಿ ಮತ್ತು ಸುರಕ್ಷಿತತೆಗೆ ಪ್ರಮುಖ ಬೆದರಿಕೆಯಾಗಿ ನಿಂತಿದೆ.

ಭಯೋತ್ಪಾದನೆ ಎಂಬ ಪದವು ವ್ಯಾಪಕವಾಗಿ ಬಳಕೆಗೆ ಬಂದಿದ್ದು ಕೆಲವು ದಶಕಗಳ ಹಿಂದೆ. ಈ ಹೊಸ ಪಾರಿಭಾಷಿಕ ಪದದ ವಿಪರ್ಯಾಸಕರ ಫಲಿತಾಂಶ ಗಳಲ್ಲೊಂದು ಏನೆಂದರೆ ಇದು ಭಯೋತ್ಪಾದನೆಯನ್ನು ಕೇವಲ ಕೆಲವು ನಿರ್ದಿಷ್ಟ ಗುಂಪುಗಳು ಅಥವಾ ಕೆಲವು ನಿರ್ದಿಷ್ಟ ವ್ಯಕ್ತಿಗಳಿಗೆ ಮಾತ್ರ ಸೀಮಿತಗೊಳಿಸಿದೆ ಎಂಬುದಾಗಿದೆ. ವಾಸ್ತವವಾಗಿ ಭಯೋತ್ಪಾದನೆಯು ಜಗತ್ತಿನಾದ್ಯಂತ ಹಬ್ಬಿಕೊಂಡಿದೆ ಮತ್ತು ಹಲವಾರು ರೂಪಗಳಲ್ಲಿ ಪ್ರಕಟಗೊಳ್ಳುತ್ತಿದೆ ಎಂಬುದಾಗಿದೆ ಸತ್ಯ. ಭಯೋತ್ಪಾದಕರು ಭಯೋತ್ಪಾದನೆಯನ್ನು ಒಂದು ನಿರ್ದಿಷ್ಟ ವಿಧಾನಕ್ಕೆ ಮಾತ್ರ ಸೀಮಿತಗೊಳಿಸಿಲ್ಲ.

ಮನುಷ್ಯ ಜೀವವನ್ನು ತುಚ್ಛವಾಗಿ ಕಾಣುವವರು, ಜನರ ಮೇಲೆ ಅಧಿಕಾರವನ್ನು ಹೊಂದಿರುವವರು, ಮಾನವೀಯತೆಯನ್ನು ಕಳೆದುಕೊಂಡವರು ನಮ್ಮ ಸಮಾಜಗಳ ಮಧ್ಯೆ ಹಲವಾರು ರೂಪಗಳಲ್ಲಿ ಭಯೋತ್ಪಾದಕರಾಗಿ ಪ್ರತ್ಯಕ್ಷರಾಗುತ್ತಾರೆ. ಯಜಮಾನನ ಮೇಲಿರುವ ಕೋಪವನ್ನು ಸಹೋದ್ಯೋಗಿಗಳ ಸಂಹಾರದ ಮೂಲಕ ತೀರಿಸುವುದು, ಹಕ್ಕು ವಂಚಿತರು ಸರಕಾರದ ಗಮನ ಸೆಳೆಯುವುದಕ್ಕಾಗಿ ಸಾರ್ವಜನಿಕ ಸ್ಥಳಗಳಲ್ಲಿ ಬಾಂಬ್ ಸ್ಫೋಟಿಸುವುದು, ಇಷ್ಟಪಟ್ಟ ಹುಡುಗಿ ದಕ್ಕದೆ ಹೋದಾಗ ಆಕೆಯನ್ನು ಬರ್ಬರವಾಗಿ ಕೊಲೆಗೈಯ್ಯುವುದು ಇತ್ಯಾದಿಗಳೆಲ್ಲವೂ ಜನರಲ್ಲಿ ಭಯಭೀತಿಯನ್ನು ಸೃಷ್ಟಿಸುವ ಭಯೋತ್ಪಾದನೆಗಳಾಗಿವೆ.

ಆದರೆ ಅಧಿಕಾರ ಕುರ್ಚಿಯನ್ನು ಭದ್ರಪಡಿಸುವುದಕ್ಕಾಗಿ ಪ್ರಜೆಗಳ ಮಧ್ಯೆ ಒಡೆದು ಆಳುವ ನೀತಿಯನ್ನು ಪಾಲಿಸುವವರು, ಸ್ವಹಿತಾಸಕ್ತಿಗಳ ರಕ್ಷಣೆಗಾಗಿ ಜಾತಿ ಜಾತಿಗಳ ಮಧ್ಯೆ ಶೀತಲ ಸಮರಗಳನ್ನು ಹುರಿದುಂಬಿಸುವವರು, ಅಧಿಕಾರ ಪಡೆಯುವುದಕ್ಕಾಗಿ ಜನಾಂಗೀಯ ಹತ್ಯೆ ಮಾಡುವವರು ಮುಂತಾದವರು ಕೂಡ ಭಯೋತ್ಪಾದಕರೇ ಆಗಿದ್ದಾರೆ. ಆದರೆ ಇವರಿಗೆ ಶಿಕ್ಷೆ ಸಿಗುವುದು ಮಾತ್ರ ಅಪರೂಪ.

ಭಯೋತ್ಪಾದನೆಯನ್ನು ಕೇವಲ ಒಂದು ನಿರ್ದಿಷ್ಟ ಗುಂಪು ಅಥವಾ ನಿರ್ದಿಷ್ಟ ವ್ಯಕ್ತಿಗಳಿಗೆ ಸೀಮಿತಗೊಳಿಸುವ ಈ ಅರ್ಥ ನಿರೂಪಣೆ (Definition)ಯಿಂದಾಗಿ ಇಂದು ಜಾಗತಿಕವಾಗಿ ಭಯೋತ್ಪಾದನೆಯನ್ನು ಹೆಚ್ಚಾಗಿ ಮುಸ್ಲಿಮರೊಂದಿಗೆ ಥಳಕು ಹಾಕಲಾಗುತ್ತಿದೆ. ಇಂಗ್ಲೀಷಿನಲ್ಲಿ ಒಂದು ಗಾದೆಯಿದೆ. Give a dog a bad name and hang it (ಒಂದು ನಾಯಿಗೆ ಒಂದು ಕೆಟ್ಟ ಹೆಸರನ್ನಿಟ್ಟು ಅದನ್ನು ನೇಣಿಗೆ ಹಾಕು). ಜಗತ್ತಿನಲ್ಲಿ ಎಲ್ಲಾದರೂ ಯಾವುದಾದರೂ ಭಯೋತ್ಪಾದನಾ ಕೃತ್ಯ ಜರುಗಿದರೆ ಅದಕ್ಕೆ ಮುಸ್ಲಿಮರನ್ನು ಹೊಣೆಗಾರರನ್ನಾಗಿ ಮಾಡಿ ಅವರನ್ನು ಕಟಕಟೆಯಲ್ಲಿ ನಿಲ್ಲಿಸುವುದು ಸರ್ವೇಸಾಮಾನ್ಯವಾಗಿದೆ. ಕೆಲವೊಮ್ಮೆ ಯಾವುದಾದರೂ ನಿರಪರಾಧಿಯ ಮೇಲೆ ಈ ಕೃತ್ಯದ ಹೊಣೆಯನ್ನು ಹೊರಿಸಿ ಆತನಿಗೆ ಭಯೋ ತ್ಪಾದನೆಯ ಹಣೆಪಟ್ಟಿಯನ್ನು ಕಟ್ಟಿ ಆತನನ್ನು ಗಲ್ಲಿಗೇರಿಸುವುದೂ ಇದೆ. ಕೆಲವು ಮಂದಿ ಮುಸ್ಲಿಮರು ಅಥವಾ ಕೆಲವೊಮ್ಮೆ ಮುಸ್ಲಿಮೇತರರು ನಡೆಸುವ ಭಯೋ ತ್ಪಾದನಾ ಕೃತ್ಯಗಳಿಗೆ ಇಸ್ಲಾಮ್ ಮತ್ತು ಸರ್ವ ಮುಸ್ಲಿಮರನ್ನು ಹೊಣೆಯಾಗಿಸುವುದೂ ಇದೆ.

ಆದರೆ ವಾಸ್ತವವಾಗಿ ಮಧ್ಯಯುಗದ ಕಾಲದಲ್ಲಿ ಯೂರೋಪಿನ ಅಂಧಕಾರ ಗಳನ್ನು ಒದ್ದೋಡಿಸಿ ಬೆಳಕನ್ನು ಬೆಳಗಿಸಿದ ಇಸ್ಲಾಮ್ ಭಯವನ್ನು ಪೋಷಿಸುವ ಒಂದು ಧರ್ಮವಾಗಿರಲು ಸಾಧ್ಯವೇ? ಜಗತ್ತಿನಾದ್ಯಂತ 1.2 ಬಿಲಿಯನ್ ಅನುಯಾಯಿ ಗಳನ್ನು ಹೊಂದಿರುವ, ಅಮೇರಿಕಾದಲ್ಲಿ 7 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಇಸ್ಲಾಮ್ ನಿರಪರಾಧಿಗಳನ್ನು ಹತ್ಯೆ ಮಾಡಲು ಬೋಧಿಸುವ ಧರ್ಮವಾಗಲು ಸಾಧ್ಯವೇ? ಇಸ್ಲಾಮಿನ ಹೆಸರೇ ಶಾಂತಿ ಮತ್ತು ಶರಣಾಗತಿ ಎಂದಾಗಿರುವಾಗ ಅದು ಕೊಲೆ ಮತ್ತು ನಿರ್ನಾಮಕ್ಕೆ ಕರೆ ನೀಡುವ ಧರ್ಮವಾಗಲು ಸಾಧ್ಯವೇ?

ನಾವು ಬಹಳ ಕಾಲದಿಂದ ಇಂತಹ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುತ್ತಿರುವುದು ಮಾಧ್ಯಮಗಳಲ್ಲಿ ಮತ್ತು ಹಾಲಿವುಡ್ ಸಿನಿಮಾಗಳಲ್ಲಾಗಿದೆ. ಆದರೆ ವಾಸ್ತವವಾಗಿ ಇಸ್ಲಾಮ್ ಹಿಂಸೆಯನ್ನು ಬೋಧಿಸುತ್ತದೆಯೇ ಎಂಬುದನ್ನು ಅರಿಯಲು ನಾವು ಉತ್ತರವನ್ನು ಹುಡುಕಬೇಕಾಗಿರುವುದು ಇಸ್ಲಾಮಿನ ಮೂಲಭೂತ ಆಧಾರ ಗ್ರಂಥಗಳನ್ನು ಮತ್ತು ಅದರ ಚರಿತ್ರೆಯನ್ನಾಗಿದೆ.

‘ಭಯೊತ್ಪಾದನೆಗೆ ಕಾರಣಕಾರರು ಯಾರು…..? Who is behind of Terrorism?’

‘ಭಯೊತ್ಪಾದನೆಗೆ ಕಾರಣಕಾರರು ಯಾರು…..? Who is behind of Terrorism?’

بسم الله الرحمن الرحيم

ಪರಮ ದಯಾಮಯನು ಕರುಣಾನಿಧಿಯು ಆದ ಅಲ್ಲಾಹನ ನಾಮದಿಂದ.

ಭಯೊತ್ಪಾದನೆಗೆ ಕಾರಣಕಾರರು ಯಾರು…..?

ಒಂದು ಊರಿನಲ್ಲಿ ಒಬ್ಬ ಬಲವಾದ ರೌಡಿ ಮತ್ತು ಅವನ ಗುಂಪು ಇದೆ ಎಂದುಕೊಳ್ಳಿ, ಅವರನ್ನು ತಡೆಯುವಂತಹಾ ಪ್ರತಿಸ್ಪರ್ಧಿ ಇನ್ನೊಬ್ಬರಿಲ್ಲ, ಅವನಿಗೆ ಅವನ ಗುಂಪಿಗೆ ಮುಟ್ಟುವವರಾರೂಇಲ್ಲ. ಅವನ ತೊಂದರೆಯಿಂದರಕ್ಷಣೆ ಪಡೆಯಲು ಆ ಊರಿನ ಜನರು ತಮ್ಮ ಸಂಪಾದನೆ ಮತ್ತು ತಮ್ಮ ಹೆಣ್ಣುಗಳ ಶೀಲಗಳನ್ನು ಕಪ್ಪಕಾಣಿಕೆಯಂತೆ ಕೊಟ್ಟು ತಮ್ಮನ್ನು ಕಾಪಾಡಿಕೊಳ್ಳುತ್ತಿದ್ದರು. ಅವರ ಕಣ್ಣೀರು ಮತ್ತು ದುಖಃಗಳ ಪರಿವೇಅವನಿಗಿರಲಿಲ್ಲ. ಪೊಲೀಸ್, ಕಾನೂನು ಸಹ ಇವನ ಮಧ್ಯದಲ್ಲಿ ತಲೆ ಹಾಕಲು ಹಿಂಜರಿಯುವಂತಹಾ ಅಧಿಪತ್ಯ ಸಾಧಿಸಿದ್ದನು. ಹೀಗಿರುವಾಗ ಅವನ ಅಳಿಸಲಾಗದ ಅಧಿಪತ್ಯಕ್ಕೆ ಒಂದು ದಿನ ಒಂದು ಕಾರಣಕ್ಕಾಗಿ ಆ ಊರೇ ಬಿಟ್ಟು ಹೋಗುವ ಪರಿಸ್ಧಿತಿ ಬಂದಿತು.

ಅವನು ಆ ಊರಿನಿಂದ ದೂರವಿದ್ದರೂ ಅವನಿಗೆ ಬರಬೇಕಾದ ಮಾಮೂಲಿಯನ್ನು ಕೊಡಿಸಿ ಕೊಡುವ ಅವನ ಹಿಂಬಾಲಕರು ಇದ್ದಾರೆ. ಅಂತಹವನು ಆ ಊರು ಬಿಟ್ಟು ಹೋಗುವಾಗ ಹೀಗೆ ಹೇಳಲು ಸಾಧ್ಯವೇ? “ಜನರೆ ಇಂದಿನಿಂದ ನೀವು ಸ್ವತಂತ್ರವಾಗಿ ಇರಬಹುದು, ಇಂದಿನಿಂದ ನೀವು ನನಗೆ ಕಪ್ಪ ಕಾಣಿಕೆ ಕೊಡುವ ಅವಶ್ಯಕತೆ ಇಲ್ಲ” ಎಂದು ಹೇಳಿದರೆ ನಾವು ಹೀಗಾಗಬಹುದು ಎಂದು ಕಲ್ಪನೆಯೂ ಕೂಡಾ ಮಾಡಲು ಸಾಧ್ಯವಿಲ್ಲತಾನೆ?

ಒಬ್ಬ ಊರಿನ ರೌಡಿಯ ಸ್ಥಿತಿಯೇ ಹೀಗಿದ್ದರೆ, ಏಶಿಯಾ, ಆಫ್ರಿಕಾ, ಯೂರೊಪ್ ಖಂಡಗಳ ಮೇಲೆ ಅಧಿಪತ್ಯವಿದ್ದು, ಅಲ್ಲಿರುವ ಸಂಪತ್ತುಗಳನ್ನು ಕೊಳ್ಳೆ ಹೊಡೆದು ಅನುಭವಿಸುತ್ತಿರುವ ವಸಾಹತುಶಾಹಿ ಶಕ್ತಿಗಳು ತನ್ನ ಅಧೀನದಲ್ಲಿದ್ದ ದೇಶಗಳನ್ನು ಸಂಪೂರ್ಣವಾಗಿ ಹಾಗೆ ಬಿಟ್ಟು ಬಿಡುತ್ತಾರೆಯೇ?… ಅದು ಅವರನ್ನು ಕೇಳುವವರು ಯಾರೂ ಇಲ್ಲ, ಕೇಳುವಂತಹಾ ದೇಶ ಇನ್ನಾವುದೂ ಇಲ್ಲ, ಇಂತಹವರು ಬಿಟ್ಟು ಹೋಗುತ್ತಾರೆಂದು ನಾವು ಪ್ರತಿಕ್ಷಿಸಲು ಸಾಧ್ಯವೇ….?

ಇದನ್ನು ಅರ್ಥ ಮಾಡಿಕೊಂಡರೆ ಇಂದು ಪ್ರಪಂಚದಲ್ಲಿ ನಡೆಯುತ್ತಿರುವ ಭೀತಿವಾದದ ಪ್ರಕ್ರಿಯೆಗಳ ಹಿಂದೆ ಇರುವವರು ಯಾರು ಎಂಬುದನ್ನು ಅರ್ಥೈಸಿಕೊಳ್ಳಲು ಸಾಧ್ಯ. ಆ ರೌಡಿ ನೇಮಿಸಿರುವ ಹಿಂಬಾಲಕರಂತೆಯೇ ಇಂದು ದೊಡ್ಡ ದೊಡ್ಡ ರಾಷ್ಟ್ರಗಳ ಆಡಳಿತಗಾರರು ಅವರೇ ಆಗಿದ್ದಾರೆ. ಹೆಚ್ಚಿನ ರಾಷ್ಟ್ರಗಳಲ್ಲಿ ರೌಡಿ ನೇಮಿಸಿರುವ ಹಿಂಬಾಲಕರಂತೆಯೇ ಅವರ ಹಂಬಾಲಕರಿದ್ದಾರೆ. ನಮ್ಮ ರಾಷ್ಟ್ರಗಳ ಆಡಳಿತಗಾರರು ತಮ್ಮ ನಾಯಕರುಗಳಿಗೆ ರಾಷ್ಟ್ರದ ಸಂಪತ್ತನ್ನು ವಿವಿಧ ರೀತಿಯಲ್ಲಿ ಸೇರಿಸುತ್ತಾರೆ. ಇದನ್ನು ವಿರೋಧಿಸುವವರಿಗೆ ತಡೆಯುವವರಿಗೆ ರೌಡಿಯ ಹಿಂಬಾಲಕರು ಗತಿ ಕಾಣಿಸುವಂತೆ ಈ ಅಧಿಪತ್ಯ ಶಕ್ತಿಗಳು ವ್ಯವಹರಿಸುತ್ತಿವೆ.

ಹೀಗೆ ಆ ರೌಡಿಯು ಕೆಲ ದಿನಗಳ ನಂತರ ಒಂದುರಾಜ್ಯದ ಮುಖ್ಯ ಮಂತ್ರಿಯಾದರೆ ಆ ರಾಜ್ಯದ ಸ್ಥಿತಿ ಏನಾಗಬಹುದು ಎಂದು ಚಿಂತಿಸಿ ನೋಡಿ….? ವಾರ್ತಾ ಮಾಧ್ಯಮಗಳು, ಪೊಲೀಸ್, ಕನೂನುಗಳು, ಎಲ್ಲವೂ ಅವನ ಅಧಿಪತ್ಯದಲ್ಲಿದ್ದರೆ ಏನಾಗಬಹುದು? ಇದೇ ರೀತಿ ಅವನಿಗೆ ವಿರುದ್ಧವಾಗಿ ನಿಲ್ಲುವವರಿಗೆ, ನಿಲ್ಲುವ ಶಕ್ತಿಗಳಿಗೆ ಅವನು ಜನರ ಮಧ್ಯೇಯೇ ಹೇಗೆ ಬೇಕಾದರೂ ಚಿತ್ರಿಸಬಹುದಲ್ಲವೆ.? ಇಂದು ಇಸ್ಲಾಮಿಯರನ್ನು ಭೀತಿವಾದಿಗಳಾಗಿ ಚಿತ್ರಿಸಲು, ಭೀತಿವಾದದ ಹೆಸರಿನಲ್ಲಿ ಅವರ ಮೇಲೆ ನಡೆಯುವ ಅಕ್ರಮಗಳು ಇಡೀ ಪ್ರಪಂಚದಾದ್ಯಂತ ನಡೆಯುತ್ತಿರುವ ಕುತಂತ್ರದ ಭಾಗಗಳೇ ಆಗಿವೆ. ಆಯುಧಗಳು, ತಂತ್ರಜ್ಞಾನ, ಮಾಧ್ಯಮಗಳನ್ನು ಇದಕ್ಕಾಗಿಯೇ ಸಮರ್ಪಕವಾಗಿ ಬಳಸಿ ಉಪಯೋಗಿಸುತ್ತಿದ್ದಾರೆ.

ಮಾಧ್ಯಮಗಳ ದ್ವಿಮುಖಧೊರಣೆ;- ಲಕ್ಷಾಂತರ ಜನರನ್ನು ರಾಶಿ ರಾಶಿಯಾಗಿ ಕೊಂದ ಹಿಟ್ಲರ್ ಆಗಲಿ, ಹಿರೊಶಿಮ-ನಾಗಸಾಕಿ ಮೇಲೆ ಅಣು ಬಾಂಬ್ ಹಾಕಿ ಕೊಟ್ಯಾಂತರ ಜನರನ್ನು ಕೊಂದದ್ದಲ್ಲದೇ ಅಂಗ ಹೀನರನ್ನಾಗಿ ಮಾಡಿದ ಅಮೇರಿಕವಾಗಲಿ, ಯದ್ಧ ಎಂಬ ಹೆಸರಿನಲ್ಲಿ ಮುಗ್ಧ ಜನರನ್ನು ಕೊಂದು ಹಾಕುವ ಇಸ್ರೆಹಿಲ್ ಆಗಲಿ, ತಮಿಳುಗರನ್ನು ಕೊಂದು ಹಾಕಿದ ಶ್ರೀಲಂಕವಾಗಲಿ, ಅವರಿಗೆ ವಿರುದ್ಧವಾಗಿ ಹೊರಾಡುತ್ತಿರುವ ಎಲ್,ಟಿ,ಟಿ,ಇ, ಆಗಲಿ, ಅವರು ಮಡಿರುವ ಅಕ್ರಮ ಕೊಲೆಗಳಿಗೆ ಅವರ ಮತಧರ್ಮದ ಹೆಸರು ಸೇರಿಸಲಾಗುವುದಿಲ್ಲ. ಅವರ ತತ್ವದ ಹೆಸರು ಇಟ್ಟು ಕರೆಯಲಾಗುವುದಿಲ್ಲ. ಆದರೆ ತನ್ನ ಸ್ವಂತ ರಾಷ್ಟ್ರವನ್ನು ಅಕ್ರಮಿಸುವ ಜನರನ್ನು ಕೊಂದು ಹಾಕುವ ಜನರಿಗೆ, ಅಮೇರಿಕಾ ವಿರುದ್ಧ ಹೊರಾಡುವ ಅಫಘನ್, ಇರಾಕ್ ಜನರನ್ನು ಮತ್ತು ಇಸ್ರೆಹಿಲ್‍ಗೆ ವಿರುದ್ಧವಾಗಿ ಹೊರಾಡುವ ಫಿಲಸ್ತೀನ್ ಜನರನ್ನು ಇಸ್ಲಾಮೀ ಭಯೋತ್ಫಾದಕರೆಂದು ವಾರ್ತಾ ಪತ್ರಿಕೆಗಳು, ದೂರ ದರ್ಶನಗಳು, ಅಂತರ್ಜಾಲಗಳು, ಹಾಗೂ ಇತರೆ ಎಲ್ಲಾ ಮಾಧ್ಯಮಗಳು ಬಿಂಬಿಸುವುದನ್ನು ನೀವು ನೋಡುತ್ತಿದ್ದೀರ.

ಇಸ್ಲಾಮಿನ ವಿರುದ್ಧವೇ ಯಾಕೆ ಈ ರೀತಿಯಾಗಿ ಪ್ರಪಂಚದಾದ್ಯಂತ ದ್ವೆಷಿಸುವಂತೆ ಮಾಡಲಾಗುತ್ತಿದೆ, ಹೀಗೆ ಯಾಕಾಗುತ್ತಿದೆ, ಯಾರು ಹೀಗೆ ಮಾಡುತ್ತಿದ್ದಾರೆ? ಎಂಬುದನ್ನೂ ಸಹ ನಾವು ನೋಡಬೇಕು. ಆದರೆ ಏನು ನಡೆಯುತ್ತಿದೆ? ಇಂದು ಮಾಧ್ಯಮಗಳ, ಹಾಗೂ ಕ್ರೂರ ಆಡಳಿತಗಾರರ ಪ್ರಭಾವದಿಂದ, ಶಾಂತಿ ಪ್ರಿಯರಾಗಿಯೂ ಕಳೆದು ಹೋಗಿರುವ ಹಕ್ಕು ಮತ್ತು ಒಡೆತನದ ಸಂಪತ್ತುಗಳನ್ನು ಪುನಃ ಪಡೆಯಲು ಶಾಂತಿ ಸಮಾಧಾನವನ್ನು ಸ್ಥಾಪಿಸಲು ಹೋರಾಡುವವರು ಭಯೊತ್ಪಾದಕರಾಗಿ ಚಿತ್ರಿಸಲ್ಪಡುತ್ತಿದ್ದಾರೆ.

ಒಟ್ಟಾರೆ ಪ್ರಪಂಚದಾದ್ಯಂತ ಅಮೇರಿಕಾ ಮತ್ತು ಜಿ8 ರಾಷ್ಟ್ರಗಳ ಮುಖ್ಯಆದಾಯ, ಆಯುಧಗಳನ್ನು ಮಾರುವುದರಿಂದಲೇ ಆಗಲಿದೆ. ಪ್ರಪಂಚದಲ್ಲೇ ಅತ್ಯಂತ ಸುಧಾರಿತ ತಂತ್ರಜ್ಞಾನ, ವೈಮಾನಿಕ ತಂತ್ರಜ್ಞಾನ, ಮಿಸಾಯಿಲ್‍ಗಳು, ಜಲ ಅಂತರ್ಗಾಮಿಗಳು, ಅಣು ಬಾಂಬ್‍ಗಳು, ಮಿಲಿಟರಿ ಅಥವ ಸೈನ್ಯ ಪಡೆಗಳ ಉತ್ಪಾದನೆ, ಇವರ ಕೈವಶವಿರುವಕಾರಣದಿಂಲೇ ಪ್ರಪಂಚದಾದ್ಯಂತ ಇರುವ ರಾಷ್ಟ್ರಗಳು ಅವರ ಅಧೀನದಲ್ಲಿವೆ. ಉದಾಹರಣೆಗೆ; ಮಧ್ಯ ರಾಷ್ಟ್ರಗಳು ಇವರು ನಿಯೋಜಿಸಿರುವಂತೆ ಕೈಗೊಂಬೆಗಳಾಗಿ ಆಡಳಿತ ನಡೆಸುತ್ತಿವೆ, ಮಾತ್ರವಲ್ಲ ಎಲ್ಲೆಲ್ಲಿ ಇವರ ಆಡಳಿತವಿತ್ತೋ ಆ ರಾಷ್ಟ್ರಗಳ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಾ ಬಂದರೂ ಆ ಎಲ್ಲಾ ದೇಶಗಳಿಗೆ ಇವರು ನೇರವಾಗಿ ಇಲ್ಲವೇ ಪರೊಕ್ಷವಾಗಿ ತಮ್ಮ ಅಧೀನದಲ್ಲಿಟ್ಟ್ಟಿದ್ದಾರೆ. ಆಯುಧಗಳನ್ನು ಅಂರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದಕ್ಕಾಗಿ, ಚಿಕ್ಕ ಚಿಕ್ಕ ದೇಶಗಳ ಮಧ್ಯದಲ್ಲಿ ದ್ವೇಶದ ಕಿಡಿ ಹಾಕಿ ಅವರು ಪರಸ್ಪರ ಹೋರಾಡುವಂತೆ ಮಾಡುತ್ತಾರೆ, ಅಥವ ಅವರ ರಾಷ್ಟ್ರದಲ್ಲೇ ಚಿಕ್ಕ ಚಿಕ್ಕಗುಂಪುಗಳಾಗಿ ತುಂಡು ಮಾಡಿ ಅಲ್ಲಿನ ಸರ್ಕಾರದ ವಿರುದ್ಧವೇ ಹೋರಾಡುವಂತೆ ಮಾಡುತ್ತಾರೆ. ಲಕ್ಷಾಂತರ ಮನುಷ್ಯ ಜೀವಿಗಳು ಸಾಯುವುದು ಇವರಿಗೆ ಪರಿವೇ ಇರುವುದಿಲ್ಲ.

ಕೇವಲ ತನ್ನ ಸಂಪತ್ತು ಮತ್ತು ಅಧಿಪತ್ಯದಲ್ಲಿ ಗುರಿಯನ್ನು ಹೊಂದಿದ್ದು, ಅದಕ್ಕೆ ಧಕ್ಕೆ ಬರಬಾರದೆಂಬುದೇ ಇವರ ಮುಖ್ಯ ಉದ್ದೇಶ. ಈ ಉದ್ದೇಶವನ್ನು ಪೂರೈಸಿಕೊಳ್ಳಲು, ಒಂದು ಕಡೆ ಮಿಲಿಟರಿ ಸೈನ್ಯದ ಅಕ್ರಮಣ ಮತ್ತು ಇನ್ನೊಂದು ಕಡೆ ತನ್ನ ಅಧೀನದಲ್ಲಿರುವ ಮಾಧ್ಯಮಗಳನ್ನು ಈ ಕುತಂತ್ರಕ್ಕೆ ಪ್ರಯೋಗಿಸುತ್ತಾರೆ. ಇವರ ಕೈ ಗೊಂಬೆಗಳಾಗದೆ ಸರ್ಕಾರದ ವಿರುದ್ಧವಾಗಿ ತಮ್ಮ ಹಕ್ಕುಗಳನ್ನು ಕೇಳಿ ಹೋರಾಡುವವರಿಗೆ ಭಯೋತ್ಪಾದಕರೆಂದು, ತೀವ್ರವಾದಿಗಳೆಂದು ಚಿತ್ರಿಸುತ್ತಾರೆ. ಇವರು ತನ್ನ ಅಧೀನದ ವಿರುದ್ಧವಾಗಿರುವ ರಾಷ್ಟ್ರಗಳ ಮಧ್ಯೆ ಅವರಲ್ಲಿಯೇ ಗುಂಪುಗಳನ್ನು ಸೃಷ್ಠಿಸಿ, ಒಡಕುಗಳನ್ನು ಸೃಷ್ಠಿಸಿ, ಆಯುಧಗಳನ್ನು ತಲುಪಿಸಿ, ಅವರ ವಿರುದ್ಧ ಹೊರಾಡಿದವರಲ್ಲಿ ಒಬ್ಬರಿಗೆ ನಾಯಕತ್ವವನ್ನು ಕೊಟ್ಟು ಅವರನ್ನೇ ರಾಷ್ಟ್ರದ ನಾಯಕರನ್ನಾಗಿ ನೇಮಿಸುತ್ತಾರೆ. (ಸಮೀಪದ ಉದಾಹರಣೆ ಎಂದರೆ ಇರಾಖ್ ಮತ್ತು ಅಫಘಾನಿಸ್ತಾನ್)

ಅನ್ಯಾಯಿಗಳ ವಿರೋಧಿ ಇಸ್ಲಾಮ್

ಎಲ್ಲಾ ವಂಶ, ಭಾಶೆ, ಬಣ್ಣ, ಕುಲ-ಗೂತ್ರ, ಎಂಬ ಮೇರೆ ಅಥವ ಎಲ್ಲೆಯನ್ನು ದಾಟಿ, ಎಲ್ಲರಲ್ಲೂ ಸ್ವೀಕರಿಸಲ್ಪಡುವ ಕಾರಣದಿಂದ, ಪ್ರಪಂಚದಾದ್ಯಂತ ಈ ತತ್ವವು ಅತಿವೇಗವಾಗಿ ಹೊಮ್ಮುತ್ತಿದೆ. ಈ ರೀತಿಯಾಗಿ ಹೊಮ್ಮುವಾಗ ಎಂದಿಗೂ ಜನರಲ್ಲಿ ಒಂದು ಚೈತನ್ಯವನ್ನು ತರುತ್ತಿದೆ. ಆ ಕಾರಣದಿಂದ ಅವರು ತನ್ನ ರಾಷ್ಟ್ರಗಳಲ್ಲಿ ನಡೆಯುತ್ತಿರುವ ದುಷ್ಟಶಕ್ತಿಗಳ ವಿರುದ್ಧ ನಿಲ್ಲುತ್ತಾರೆ. ಅಂತೆಯೆ ದುಷ್ಟ ಶಕ್ತಿಗಳು ಹೊಡೆಯುತ್ತಿರುವ ಕೊಳ್ಳೆಗಳಿಗೆ ವಿರುದ್ಧ ನಿಲ್ಲುತ್ತಾರೆ. ಹೌದು ಭೂಮಿಯಲ್ಲಿ ಅಧರ್ಮ ಅನ್ಯಾಯ ಅಕ್ರಮಿಗಳಿಗೆ ವಿರುದ್ಧವಾದ ಇಸ್ಲಾಮಿನ ನಿಲುವು ಶಕ್ತಿವಂತ ರಾಷ್ಟ್ರಗಳ ಅರಾಜಕತೆಗೆ ಕಠಿಣ ವಿರೊಧಿಯಾಗಿದೆ ಇಸ್ಲಾಮ್. ಹಾಗಾಗಿ ಹೊಮ್ಮುತ್ತಿರುವ ಇಸ್ಲಾಮ್‍ನ್ನು ತಡೆಯಲು ಭಯೊತ್ಪಾದಕವಾಗಿ ಚಿತ್ರಿಸಲಾಗಿತ್ತಿದೆ.

ಇಸ್ಲಾಮ್‍ ಎಂದರೇನು?

ಇಸ್ಲಾಮ್ ಎಂಬ ಅರಬೀ ಪದಕ್ಕೆ ಅರ್ಥ ಅನುಸರಿಸುವುದು ಅಥವಾ ಅನುಕರಣೆ ಎಂದಾಗಿದೆ. ಮತ್ತೊಂದು ಅರ್ಥದಲ್ಲಿ ಶಾಂತಿ ಎಂಬುದೇ ಆಗಿದೆ. ಅಂದರೆ ದೇವನಿಗೆ ವಿಧೇಯನಾಗಿ ಜೀವಿಸಿದರೆ ಈ ಲೋಕದಲ್ಲೂ ಪರಲೋಕದಲ್ಲಿಯೂ ಶಾಂತಿ ಸಿಗುತ್ತದೆ ಎಂಬುದೆ ಇಸ್ಲಾಮ್ ಧರ್ಮ ತಿಳಿಸುವ ತತ್ವ ಆಗಿದೆ. ಅಂದರೆ ಈ ಧರ್ಮದ ಪ್ರಕಾರ ಪ್ರಪಂಚದ ಒಡೆಯನಾದ ದೇವನು ಯಾವುದನ್ನು ಮಾಡಬೇಕೆಂದು ಆಜ್ಞೆ ಮಾಡುತ್ತಾನೋ ಅದನ್ನು ಮಾಡಬೇಕಾಗಿದೆ. ಅದರ ಹೆಸರೇ ಒಳಿತು ಅಥವಾ ಪುಣ್ಯ ಅಥವಾ ಧರ್ಮ ಎಂದಾಗಿದೆ. ಅವನು ಯಾವುದೆಲ್ಲಾ ಮಾಡಬಾರದೆಂದು ತಡೆಯಾಜ್ಞೆ ಮಾಡಿದ್ದಾನೆಯೋ ಆ ಎಲ್ಲಾ ವಿಷಯಗಳಿಂದ ದೂರವಿರಬೇಕು. ಅದೇ ಪಾಪ ಅಥವಾ ಕೆಡುಕು ಅಥವಾ ಅಧರ್ಮ ಎಂದಾಗಿದೆ, ಯಾರು ಈ ತತ್ವವನ್ನು ಒಪ್ಪಿಕೊಂಡುಅದರ ಪ್ರಕಾರ ಜೀವಿಸುವರೋ ಅವರನ್ನು ಅರಬಿ ಭಾಷೆಯಲ್ಲಿ ಮುಸ್ಲಿಂ (ಅನುಸರಿಸುವವನು) ಎಂದು ಹೇಳುವರು.

ಈ ತತ್ವವನ್ನು ಯಾರು ಬೇಕಾದರು ಒಪ್ಪಿಕೊಂಡು ಅನುಸರಿಸಬಹುದು. ಇದು ಯಾವುದೇ ಒಂದು ಪ್ರತ್ಯೇಕ ಕುಲಕ್ಕೆ, ದೇಶಕ್ಕೆ ಹಾಗೂ ವಂಶಕ್ಕೆ ಸೀಮಿತವಾದುದ್ದಲ್ಲ ಹಾಗೂ ಇದೊಂದು ಹೊಸ ಧರ್ಮವೂ ಅಲ್ಲ. ಎಲ್ಲಾ ಕಾಲದಲ್ಲಿಯೂ ಈ ಭೂಮಿಯ ವಿವಿಧ ಭಾಗಗಳಿಗೆ ಕಳುಹಿಸಲ್ಪಟ್ಟಿರುವ ದೇವನ ಸಂದೇಶವಾಹಕರು ಈ ತತ್ವವನ್ನೇ ಅವರವರ ಜನಾಂಗಕ್ಕೆ ಭೋಧಿಸಿದರು. ಇದೇ ತತ್ವವನ್ನೇ ಕೊನೆಯದಾಗಿ ಬಂದ ಸಂದೇಶವಾಹಕರಾದ ಮುಹಮ್ಮದ್ {ಸ} ಮೂಲಕ ಇಸ್ಲಾಮ್ ಎಂಬ ಹೆಸರಿನಲ್ಲಿ ಪುನಃ ಪರಿಚಯವಾಗಿದೆ.

ಯಾರೆಲ್ಲಾ ಈ ತತ್ವವನ್ನು ಒಪ್ಪಿಕೊಂಡು ಅಂದರೆ ಒಳಿತನ್ನು ಮಾಡಿ ಕೆಡುಕಿನಿಂದ ಮುಕ್ತರಾಗಿ ಜೀವಿಸುತ್ತಾರೋ ಅವರು ಪರಲೋಕದ ಜೀವನದಲ್ಲಿ ಸ್ವರ್ಗಕ್ಕೆ ಹೋಗುವರು. ಯಾರು ದೇವನನ್ನು ಮತ್ತು ಅವನು ಅನುಗ್ರಹಿಸಿರುವ ಮಾರ್ಗವನ್ನು ಅಲಕ್ಷಿಸಿ ತನ್ನಿಚ್ಛೆಯಂತೆ ಜೀವಿಸುತ್ತಾರೆಯೋ ಅವರು ನರಕ ಪ್ರವೇಶಿಸುವರು.

ಈ ತತ್ವದ ಮುಖ್ಯವಾದ ಮೂಲ ಅಂಶವೇನೆಂದರೆ ಈ ಪ್ರಪಂಚವನ್ನು ಸೃಷ್ಠಿಸಿ ಪರಿಪಾಲಿಸುತ್ತಿರುವ ದೇವನೇ ಅರಾಧನೆಗೆ ಅರ್ಹನು. ಅವನಲ್ಲದೆ ಇತರ ಯಾರೇ ಆಗಿರಲಿ ಅವರು ಎಷ್ಟು ದೊಡ್ಡ ವ್ಯಕ್ತಿಗಳೇ ಆಗಿರಲಿ ರಾಜನೇ ಆಗಿರಲಿ, ಅಧ್ಯಾತ್ಮಿಕ ನಾಯಕರೇ ಆಗಿರಲಿ, ಅವರನ್ನು ದೇವರು ಎಂದು ಹೇಳುವುದು, ಅವರನ್ನು ಆರಾಧಿಸುವುದಾಗಲೀ ಖಂಡಿತ ಮಾಡಬಾರದು. ದೇವನನ್ನೇ ನೇರವಾಗಿ ಯಾವುದೇ ಮಧ್ಯವರ್ತಿಗಳಿಗಲ್ಲದೆ ಆರಾಧಿಸಬೇಕು.

ಈ ತತ್ವದ ಮತ್ತೊಂದು ಮುಖ್ಯ ಅಂಶವೇನೆಂದರೆ ಮನುಷ್ಯರೆಲ್ಲರೂ ಒಂದು ಗಂಡು ಒಂದು ಹೆಣ್ಣಿನಿಂದ ಜನಿಸಿ ಪ್ರಪಂಚದಾದ್ಯಂತ ವ್ಯಾಪಿಸಿದ್ದಾರೆ. ಮನುಷ್ಯರೆಲ್ಲರೂ ಅವರು ಯಾವುದೇ ದೇಶದವರಾಗಲೀ ಯಾವುದೇ ಭಾಷೆ ಮಾತನಾಡಲಿ ಯಾವುದೇ ಬಣ್ಣದವರಾಗಲೀ ಒಂದೇ ಕುಟುಂಬಕ್ಕೆ ಸೇರಿರುವ ಪರಸ್ಪರ ಸಹೋದರ ಸಹೋದರಿಯರಾಗಿದ್ದಾರೆ. ಹಾಗಾಗಿ ಎಲ್ಲರೂ ಸಮಾನರು ಅವರ ಮಧ್ಯದಲ್ಲಿ ದೇಶ, ವಂಶ, ಭಾಷೆ, ಕುಲ, ಜಾತಿ, ಎಂಬ ಅಡಿಯಲ್ಲಿ ಭೇದ-ಭಾವ ಸಲ್ಲದು ಹಾಗೂ ಮಾಡಬಾರದು. ದೇವನ ಭಯ ಭಕ್ತಿಯಿಂದ ಮಾತ್ರವೇ ಅವರ ಸ್ಥಾನ ಉನ್ನತವಾಗಲಿದೆ ಎಂದು ಇಸ್ಲಾಮ್ ಹೇಳುತ್ತದೆ. ಈ ತತ್ವವನ್ನು ಒಪ್ಪಿಕೊಂಡಿರುವವರು ದೇವನಲ್ಲಿ ವಿಶ್ವಾಸವಿಡುವುದಲ್ಲದೆ ಒಳಿತನ್ನು ಮಾಡುವುದರೊಂದಿಗೆ ಒಳಿತನ್ನೆ ಬೋಧಿಸಬೇಕು. ಕೆಡುಕುಗಳಿಂದ ದೂರವಿರಬೇಕು ಹಾಗೂ ಕೆಡುಕನ್ನು ಕಂಡಲ್ಲಿ ಎಷ್ಟು ಸಾಧ್ಯವೋ ಅಷ್ಟು ಅದನ್ನು ತಡೆಯುವಲ್ಲಿ ಶ್ರಮಿಸಬೇಕು.

ಈ ಹಿಂದೆ ತಿಳಿಸಿದಂತೆ ಅತ್ಯಾಧುನಿಕ ಸೈನಿಕ ಆಯುಧಗಳೇ ಇವರ ಮುಖ್ಯವಾದ ಮಾರಾಟ ವಸ್ತು ಅದನ್ನು ಇತರೇ ರಾಷ್ಟ್ರಳಲ್ಲಿ ಮಾರಾಟ ಮಾಡ ಬೇಕಾದರೆ ಯದ್ಧಗಳ ಕಾರ್ಯ ದಕ್ಷತೆಯನ್ನು ಪ್ರಪಂಚದ ಜನರ ಮುಂದೆ ತೊರಿಸಲು, ಅದಕ್ಕಾಗಿ ಚಿಕ್ಕ ಚಿಕ್ಕ ರಾಷ್ಟ್ರಗಳ ಮಧ್ಯ ಕಿಡಿ ಹಾಕಿ ಯುದ್ಧಗಳು ಮಾಡಿಸುವುದು ಮಾತ್ರವಲ್ಲದೇ ಕನಿಷ್ಟ ಪ್ರತೀ 5 ವರ್ಷಕ್ಕೊಂದು ಬಾರಿ ದೊಡ್ಡ ಯುದ್ಧವನ್ನು ಮಾಡಿಸುತ್ತಾರೆ. ಎಲ್ಲಾ ಕಡೆ ಮಾಧ್ಯಮಗಳ ಮೂಲಕ ಜನರ ಮನವೊಲಿಸಿ ನ್ಯಾಯ ಕೊಡಿಸುವವರಂತೆ ನಂಬಿಸುತ್ತಾರೆ. ಈ ರೀತಿಯಾಗಿ ಮುಗ್ಧ ಜನರ ರಕ್ತವನ್ನು ನದಿಯಂತೆ ಹರಿಸಿ ಅದರ ಮೇಲೆ ಆಯುಧಗಳ ಪ್ರದರ್ಶನ ನಡೆಸುವುದು ಇವರ ಅಭ್ಯಾಸವಾಗಿದೆ. ಈ ಪ್ರದರ್ಶನವನ್ನು ನಡೆಸುವ ಮುಖಾಂತರ ಇವರಿಗೆ ಎರಡು ಲಾಭಗಳಿವೆ.

ಆಯುಧ ಮಾರಾಟ.

ಪ್ರಪಂಚದಾದ್ಯಂತ ಇರುವ ಇತರ ರಾಷ್ಟ್ರಗಳನ್ನು ಬೆದರಿಸಿ ತಮ್ಮ ಅಧೀನಕ್ಕೆ ಒಳಪಡಿಸಿಕೊಳ್ಳವುದು.

ಈಗ ಹೇಳಿ ಸಹೋದರ ಸಹೋದರಿಯರೇ ಯಾರು ಭಯೋತ್ಪಾದಕರು? ಇವರಾ ಅಥವ ತಮ್ಮ ಸ್ವಂತ ತಾಯಿನೆಲದಿಂದಲೇ ಆಚೆ ಓಡಿಸಲ್ಪಟ್ಟವರಾ? ತನ್ನ ರಾಷ್ಟ್ರವನ್ನು ಪುನಃ ಹಿಂಪಡೆಯಲು ರಕ್ಷಣೆಗಾಗಿ ಹೋರಾಡುವವರಾ? ಅಥವ ತಮ್ಮ ಹೆಂಡತಿ ಮಕ್ಕಳನ್ನು, ಸಂಭಂಧಿಕರನ್ನು ಕಳೆದುಕೊಂಡ ಕಾರಣದಿಂದ ತನ್ನ ಹಕ್ಕುಗಳಿಗಾಗಿ ಹೊರಾಟ ಮಾಡುವವರಾ? ಅಥವ ತನ್ನ ರಾಷ್ಟ್ರಗಳಲ್ಲಿ ಅವರ ಕೈಗೊಂಬೆಯಾಗಿರು ಅಧಿಕಾರಿಗಳ ವಿರುದ್ಧ ಹೊರಾಡಿ ತನ್ನ ರಾಷ್ಟ್ರದ ಸಂಪತ್ತನ್ನು ರಕ್ಷಣೆ ಮಾಡಿಕೊಳ್ಳಲು ಬಯಸುವವರಾ?

ಭಯೋತ್ಪಾದನೆಯ ಬಗ್ಗೆ ಇಸ್ಲಾಮ್ ಏನೆನ್ನುತ್ತದೆ?

ಭಯೋತ್ಪಾದನೆಯ ಬಗ್ಗೆ ಇಸ್ಲಾಮ್ ಏನೆನ್ನುತ್ತದೆ?

ಭಯೋತ್ಪಾದನೆಯ ಬಗ್ಗೆ ಇಸ್ಲಾಮ್ ಏನೆನ್ನುತ್ತದೆ?

ನಾವು ಬದುಕುತ್ತಿರುವ ಈ ಕಾಲಘಟ್ಟದ ವಿಶಿಷ್ಟ ಲಕ್ಷಣಗಳಲ್ಲೊಂದು ನಮ್ಮ ಸಮಾಜದಲ್ಲಿ ಭೀಮಾಕಾರವಾಗಿ ಬೆಳೆದು ನಿಂತಿರುವ ಸ್ವಚ್ಛಂದ ಹಿಂಸೆಯ ನಡುವೆ ನಾವು ಬದುಕುತ್ತಿದ್ದೇವೆ ಎಂಬುದಾಗಿದೆ. ಅದು ಮಾರುಕಟ್ಟೆಯಲ್ಲಿ ಸ್ಫೋಟಗೊಳ್ಳುವ ಒಂದು ಬಾಂಬ್ ಆಗಿರಲಿ, ಒಂದು ವಿಮಾನಾಪಹರಣವಾಗಿರಲಿ, ಜನಾಂಗೀಯ ಹತ್ಯೆಗಳಾಗಿರಲಿ, ಅಥವಾ ಇನ್ನಿತರ ಏನೇ ಆಗಿರಲಿ, ಅಲ್ಲೆಲ್ಲ ರಾಜಕೀಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವುದಕ್ಕಾಗಿ ನಿರಪರಾಧಿ ಜೀವಗಳನ್ನು ನಿರಂತರ ಬಲಿ ತೆಗೆಯಲಾಗುತ್ತಿದೆ. ಕೊಲೆಗಳು ಸಾಮಾನ್ಯವಾಗಿರುವ, ಮನುಷ್ಯ ಜೀವಕ್ಕೆ ಬೆಲೆಯೇ ಇಲ್ಲದ ಮತ್ತು ಹಿಂಸೆಯು ವಿಶ್ವವ್ಯಾಪಕವಾಗಿರುವ ಜಗತ್ತಿನಲ್ಲಿ ನಾವು ಬದುಕುತ್ತಿದ್ದೇವೆ. ಇವೆಲ್ಲವುಗಳ ಮಧ್ಯೆ ಜಾಗತಿಕವಾಗಿ ತಾಂಡವವಾಡುತ್ತಿರುವ ಭಯೋತ್ಪಾದನೆಯು ಸಮಾಜದ ಶಾಂತಿ ಮತ್ತು ಸುರಕ್ಷಿತತೆಗೆ ಪ್ರಮುಖ ಬೆದರಿಕೆಯಾಗಿ ನಿಂತಿದೆ.

ಭಯೋತ್ಪಾದನೆ ಎಂಬ ಪದವು ವ್ಯಾಪಕವಾಗಿ ಬಳಕೆಗೆ ಬಂದಿದ್ದು ಕೆಲವು ದಶಕಗಳ ಹಿಂದೆ. ಈ ಹೊಸ ಪಾರಿಭಾಷಿಕ ಪದದ ವಿಪರ್ಯಾಸಕರ ಫಲಿತಾಂಶ ಗಳಲ್ಲೊಂದು ಏನೆಂದರೆ ಇದು ಭಯೋತ್ಪಾದನೆಯನ್ನು ಕೇವಲ ಕೆಲವು ನಿರ್ದಿಷ್ಟ ಗುಂಪುಗಳು ಅಥವಾ ಕೆಲವು ನಿರ್ದಿಷ್ಟ ವ್ಯಕ್ತಿಗಳಿಗೆ ಮಾತ್ರ ಸೀಮಿತಗೊಳಿಸಿದೆ ಎಂಬುದಾಗಿದೆ. ವಾಸ್ತವವಾಗಿ ಭಯೋತ್ಪಾದನೆಯು ಜಗತ್ತಿನಾದ್ಯಂತ ಹಬ್ಬಿಕೊಂಡಿದೆ ಮತ್ತು ಹಲವಾರು ರೂಪಗಳಲ್ಲಿ ಪ್ರಕಟಗೊಳ್ಳುತ್ತಿದೆ ಎಂಬುದಾಗಿದೆ ಸತ್ಯ. ಭಯೋತ್ಪಾದಕರು ಭಯೋತ್ಪಾದನೆಯನ್ನು ಒಂದು ನಿರ್ದಿಷ್ಟ ವಿಧಾನಕ್ಕೆ ಮಾತ್ರ ಸೀಮಿತಗೊಳಿಸಿಲ್ಲ.

ಮನುಷ್ಯ ಜೀವವನ್ನು ತುಚ್ಛವಾಗಿ ಕಾಣುವವರು, ಜನರ ಮೇಲೆ ಅಧಿಕಾರವನ್ನು ಹೊಂದಿರುವವರು, ಮಾನವೀಯತೆಯನ್ನು ಕಳೆದುಕೊಂಡವರು ನಮ್ಮ ಸಮಾಜಗಳ ಮಧ್ಯೆ ಹಲವಾರು ರೂಪಗಳಲ್ಲಿ ಭಯೋತ್ಪಾದಕರಾಗಿ ಪ್ರತ್ಯಕ್ಷರಾಗುತ್ತಾರೆ. ಯಜಮಾನನ ಮೇಲಿರುವ ಕೋಪವನ್ನು ಸಹೋದ್ಯೋಗಿಗಳ ಸಂಹಾರದ ಮೂಲಕ ತೀರಿಸುವುದು, ಹಕ್ಕು ವಂಚಿತರು ಸರಕಾರದ ಗಮನ ಸೆಳೆಯುವುದಕ್ಕಾಗಿ ಸಾರ್ವಜನಿಕ ಸ್ಥಳಗಳಲ್ಲಿ ಬಾಂಬ್ ಸ್ಫೋಟಿಸುವುದು, ಇಷ್ಟಪಟ್ಟ ಹುಡುಗಿ ದಕ್ಕದೆ ಹೋದಾಗ ಆಕೆಯನ್ನು ಬರ್ಬರವಾಗಿ ಕೊಲೆಗೈಯ್ಯುವುದು ಇತ್ಯಾದಿಗಳೆಲ್ಲವೂ ಜನರಲ್ಲಿ ಭಯಭೀತಿಯನ್ನು ಸೃಷ್ಟಿಸುವ ಭಯೋತ್ಪಾದನೆಗಳಾಗಿವೆ.

ಆದರೆ ಅಧಿಕಾರ ಕುರ್ಚಿಯನ್ನು ಭದ್ರಪಡಿಸುವುದಕ್ಕಾಗಿ ಪ್ರಜೆಗಳ ಮಧ್ಯೆ ಒಡೆದು ಆಳುವ ನೀತಿಯನ್ನು ಪಾಲಿಸುವವರು, ಸ್ವಹಿತಾಸಕ್ತಿಗಳ ರಕ್ಷಣೆಗಾಗಿ ಜಾತಿ ಜಾತಿಗಳ ಮಧ್ಯೆ ಶೀತಲ ಸಮರಗಳನ್ನು ಹುರಿದುಂಬಿಸುವವರು, ಅಧಿಕಾರ ಪಡೆಯುವುದಕ್ಕಾಗಿ ಜನಾಂಗೀಯ ಹತ್ಯೆ ಮಾಡುವವರು ಮುಂತಾದವರು ಕೂಡ ಭಯೋತ್ಪಾದಕರೇ ಆಗಿದ್ದಾರೆ. ಆದರೆ ಇವರಿಗೆ ಶಿಕ್ಷೆ ಸಿಗುವುದು ಮಾತ್ರ ಅಪರೂಪ.

ಭಯೋತ್ಪಾದನೆಯನ್ನು ಕೇವಲ ಒಂದು ನಿರ್ದಿಷ್ಟ ಗುಂಪು ಅಥವಾ ನಿರ್ದಿಷ್ಟ ವ್ಯಕ್ತಿಗಳಿಗೆ ಸೀಮಿತಗೊಳಿಸುವ ಈ ಅರ್ಥ ನಿರೂಪಣೆ (Definition)ಯಿಂದಾಗಿ ಇಂದು ಜಾಗತಿಕವಾಗಿ ಭಯೋತ್ಪಾದನೆಯನ್ನು ಹೆಚ್ಚಾಗಿ ಮುಸ್ಲಿಮರೊಂದಿಗೆ ಥಳಕು ಹಾಕಲಾಗುತ್ತಿದೆ. ಇಂಗ್ಲೀಷಿನಲ್ಲಿ ಒಂದು ಗಾದೆಯಿದೆ. Give a dog a bad name and hang it (ಒಂದು ನಾಯಿಗೆ ಒಂದು ಕೆಟ್ಟ ಹೆಸರನ್ನಿಟ್ಟು ಅದನ್ನು ನೇಣಿಗೆ ಹಾಕು). ಜಗತ್ತಿನಲ್ಲಿ ಎಲ್ಲಾದರೂ ಯಾವುದಾದರೂ ಭಯೋತ್ಪಾದನಾ ಕೃತ್ಯ ಜರುಗಿದರೆ ಅದಕ್ಕೆ ಮುಸ್ಲಿಮರನ್ನು ಹೊಣೆಗಾರರನ್ನಾಗಿ ಮಾಡಿ ಅವರನ್ನು ಕಟಕಟೆಯಲ್ಲಿ ನಿಲ್ಲಿಸುವುದು ಸರ್ವೇಸಾಮಾನ್ಯವಾಗಿದೆ. ಕೆಲವೊಮ್ಮೆ ಯಾವುದಾದರೂ ನಿರಪರಾಧಿಯ ಮೇಲೆ ಈ ಕೃತ್ಯದ ಹೊಣೆಯನ್ನು ಹೊರಿಸಿ ಆತನಿಗೆ ಭಯೋ ತ್ಪಾದನೆಯ ಹಣೆಪಟ್ಟಿಯನ್ನು ಕಟ್ಟಿ ಆತನನ್ನು ಗಲ್ಲಿಗೇರಿಸುವುದೂ ಇದೆ. ಕೆಲವು ಮಂದಿ ಮುಸ್ಲಿಮರು ಅಥವಾ ಕೆಲವೊಮ್ಮೆ ಮುಸ್ಲಿಮೇತರರು ನಡೆಸುವ ಭಯೋ ತ್ಪಾದನಾ ಕೃತ್ಯಗಳಿಗೆ ಇಸ್ಲಾಮ್ ಮತ್ತು ಸರ್ವ ಮುಸ್ಲಿಮರನ್ನು ಹೊಣೆಯಾಗಿಸುವುದೂ ಇದೆ.

ಆದರೆ ವಾಸ್ತವವಾಗಿ ಮಧ್ಯಯುಗದ ಕಾಲದಲ್ಲಿ ಯೂರೋಪಿನ ಅಂಧಕಾರ ಗಳನ್ನು ಒದ್ದೋಡಿಸಿ ಬೆಳಕನ್ನು ಬೆಳಗಿಸಿದ ಇಸ್ಲಾಮ್ ಭಯವನ್ನು ಪೋಷಿಸುವ ಒಂದು ಧರ್ಮವಾಗಿರಲು ಸಾಧ್ಯವೇ? ಜಗತ್ತಿನಾದ್ಯಂತ 1.2 ಬಿಲಿಯನ್ ಅನುಯಾಯಿ ಗಳನ್ನು ಹೊಂದಿರುವ, ಅಮೇರಿಕಾದಲ್ಲಿ 7 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಇಸ್ಲಾಮ್ ನಿರಪರಾಧಿಗಳನ್ನು ಹತ್ಯೆ ಮಾಡಲು ಬೋಧಿಸುವ ಧರ್ಮವಾಗಲು ಸಾಧ್ಯವೇ? ಇಸ್ಲಾಮಿನ ಹೆಸರೇ ಶಾಂತಿ ಮತ್ತು ಶರಣಾಗತಿ ಎಂದಾಗಿರುವಾಗ ಅದು ಕೊಲೆ ಮತ್ತು ನಿರ್ನಾಮಕ್ಕೆ ಕರೆ ನೀಡುವ ಧರ್ಮವಾಗಲು ಸಾಧ್ಯವೇ?

ನಾವು ಬಹಳ ಕಾಲದಿಂದ ಇಂತಹ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುತ್ತಿರುವುದು ಮಾಧ್ಯಮಗಳಲ್ಲಿ ಮತ್ತು ಹಾಲಿವುಡ್ ಸಿನಿಮಾಗಳಲ್ಲಾಗಿದೆ. ಆದರೆ ವಾಸ್ತವವಾಗಿ ಇಸ್ಲಾಮ್ ಹಿಂಸೆಯನ್ನು ಬೋಧಿಸುತ್ತದೆಯೇ ಎಂಬುದನ್ನು ಅರಿಯಲು ನಾವು ಉತ್ತರವನ್ನು ಹುಡುಕಬೇಕಾಗಿರುವುದು ಇಸ್ಲಾಮಿನ ಮೂಲಭೂತ ಆಧಾರ ಗ್ರಂಥಗಳನ್ನು ಮತ್ತು ಅದರ ಚರಿತ್ರೆಯನ್ನಾಗಿದೆ.

 

ಮನುಷ್ಯ ಜೀವದ ಪಾವಿತ್ರ್ಯತೆ:

 

ಕುರ್‍ಆನ್ ಹೇಳುತ್ತದೆ:

﴿وَلَا تَقْتُلُوا النَّفْسَ الَّتِي حَرَّمَ اللَّهُ إِلَّا بِالْحَقِّ ذَلِكُمْ وَصَّاكُمْ بِهِ لَعَلَّكُمْ تَعْقِلُونَ ﴾

“ಅಲ್ಲಾಹು ಪವಿತ್ರಗೊಳಿಸಿದ ಜೀವವನ್ನು ನ್ಯಾಯಬದ್ಧವಾಗಿಯೇ ವಿನಾ ಕೊಲ್ಲದಿರಿ. ಇವು ನೀವು ಚಿಂತಿಸಿ ಗ್ರಹಿಸುವುದಕ್ಕಾಗಿ ಅವನು (ಅಲ್ಲಾಹು) ನಿಮಗೆ ನೀಡಿದ ಉಪದೇಶಗಳಾಗಿವೆ.” [ಕುರ್‍ಆನ್ 6:151]

ಇಸ್ಲಾಮ್ ಮನುಷ್ಯ ಜೀವವನ್ನು ಪವಿತ್ರವೆಂದು ಪರಿಗಣಿಸುತ್ತದೆ. ಇಸ್ಲಾಮಿನಲ್ಲಿ ಮನುಷ್ಯ ಜೀವದ ಪಾವಿತ್ರ್ಯತೆಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಮನುಷ್ಯನನ್ನು ಬದುಕಲು ಬಿಡುವುದು ಮನುಷ್ಯನ ಮೂಲಭೂತ ಹಕ್ಕುಗಳ ಪೈಕಿ ಅತಿ ಪ್ರಮುಖವಾದುದಾಗಿದೆ.

ಕುರ್‍ಆನ್ ಹೇಳುತ್ತದೆ:

﴿مَنْ قَتَلَ نَفْسًا بِغَيْرِ نَفْسٍ أَوْ فَسَادٍ فِي الْأَرْضِ فَكَأَنَّمَا قَتَلَ النَّاسَ جَمِيعًا وَمَنْ أَحْيَاهَا فَكَأَنَّمَا أَحْيَا النَّاسَ جَمِيعًا﴾

“ಒಬ್ಬನನ್ನು ಕೊಂದಿರುವುದಕ್ಕೆ ಪ್ರತಿಯಾಗಿ ಅಥವಾ ಭೂಮಿಯಲ್ಲಿ ಕ್ಷೋಭೆ ಮಾಡಿರುವುದಕ್ಕಾಗಿ ವಿನಾ ಒಬ್ಬ ವ್ಯಕ್ತಿಯನ್ನು ಯಾರಾದರೂ ಹತ್ಯೆ ಮಾಡಿದರೆ ಅದು ಸಂಪೂರ್ಣ ಮನುಷ್ಯಕುಲವನ್ನು ಹತ್ಯೆ ಮಾಡಿರುವುದಕ್ಕೆ ಸಮಾನವಾಗಿದೆ. ಒಬ್ಬ ವ್ಯಕ್ತಿಯ ಜೀವವನ್ನು ಯಾರಾದರೂ ಉಳಿಸಿದರೆ ಅದು ಸಂಪೂರ್ಣ ಮನುಷ್ಯಕುಲದ ಜೀವವನ್ನು ಉಳಿಸಿರುವುದಕ್ಕೆ ಸಮಾನವಾಗಿದೆ.” [ಕುರ್‍ಆನ್ 5:32]

ಇದು ಒಂದು ಮನುಷ್ಯ ಜೀವದ ಮೌಲ್ಯವಾಗಿದೆ. ಒಂದು ಮನುಷ್ಯನ ಜೀವವನ್ನು ಅಪಹರಣ ಮಾಡುವುದು ಸಂಪೂರ್ಣ ಮನುಕುಲದ ಜೀವವನ್ನು ಅಪಹರಣ ಮಾಡುವುದಕ್ಕೆ ಸಮಾನವೆಂದು ಕುರ್‍ಆನ್ ಹೇಳುತ್ತದೆ. ಆದ್ದರಿಂದ ಇಸ್ಲಾಮ್ ಮಾನವ ಹತ್ಯೆಯನ್ನು ಸ್ಪಷ್ಟವಾಗಿ ವಿರೋಧಿಸುತ್ತದೆ. ಆದರೆ ಸಮಾಜದಲ್ಲಿ ಶಾಂತಿ ಮತ್ತು ಸುರಕ್ಷಿತತೆಯನ್ನು ಖಾತ್ರಿಪಡಿಸುವುದಕ್ಕಾಗಿ ಮತ್ತು ನ್ಯಾಯವನ್ನು ಎತ್ತಿಹಿಡಿಯುವುದಕ್ಕಾಗಿ ಸರಕಾರವು ಅಪರಾಧಿಯೊಬ್ಬನನ್ನು ಕೊಲ್ಲುವುದು ಅನಿವಾ ರ್ಯವಾಗಿದೆ. ಇದರ ಹೊರತಾಗಿ ಯಾರಿಗೂ ಯಾರನ್ನೂ ಕೊಲ್ಲುವ ಅಧಿಕಾರವಿಲ್ಲ.

 

ಇಸ್ಲಾಮಿನ ಯುದ್ಧ ನೀತಿ:

 

ಯುದ್ಧದ ಸಂದರ್ಭಗಳಲ್ಲೂ ಕೂಡ ಇಸ್ಲಾಮ್ ಶತ್ರುಗಳೊಂದಿಗೆ ಗೌರವಾರ್ಹವಾಗಿ ವರ್ತಿಸುವಂತೆ ಕರೆ ನೀಡುತ್ತದೆ. ಶತ್ರುದೇಶದವರಲ್ಲಿ ಸೇರಿದ ಯುದ್ಧ ಮಾಡುವವರು ಮತ್ತು ಯುದ್ಧ ಮಾಡದವರನ್ನು ಇಸ್ಲಾಮ್ ಸ್ಪಷ್ಟವಾಗಿ ಬೇರ್ಪಡಿಸುತ್ತದೆ. ಮಹಿಳೆಯರು, ಮಕ್ಕಳು, ವೃದ್ಧರು, ಬಲಹೀನರು ಮೊದಲಾದ ಯುದ್ಧ ಮಾಡದವರಿಗೆ ಸಂಬಂಧಿಸಿದಂತೆ ಪ್ರವಾದಿ ಮುಹಮ್ಮದ್(ಸ)ರವರು ಸ್ಪಷ್ಟವಾದ ನಿರ್ದೇಶನಗಳನ್ನು ನೀಡಿದ್ದಾರೆ.

ಮುಹಮ್ಮದ್(ಸ)ರವರು ಹೇಳಿದರು:

“ವೃದ್ಧರನ್ನೋ, ಮಕ್ಕಳನ್ನೋ, ಮಹಿಳೆಯರನ್ನೋ ಕೊಲ್ಲಬಾರದು.” [ಅಬೂದಾವೂದ್]

“ದೇವಾಲಯಗಳಲ್ಲಿರುವ ಪುರೋಹಿತರನ್ನು ಕೊಲ್ಲಬಾರದು.” ಅಥವಾ “ದೇವಾಲಯಗಳಲ್ಲಿ ಪ್ರಾರ್ಥನಾ ನಿರತರಾಗಿರುವವರನ್ನು ಕೊಲ್ಲಬಾರದು.” [ಅಹ್ಮದ್]

ಒಂದು ಯುದ್ಧದ ಸಂದರ್ಭದಲ್ಲಿ ರಣರಂಗದಲ್ಲಿ ಒಬ್ಬ ಮಹಿಳೆಯ ಮೃತದೇಹವು ಅಂಗಾತ ಬಿದ್ದಿರುವುದನ್ನು ಕಂಡಾಗ ಪ್ರವಾದಿ()ರವರು ಕೇಳಿದರು: “ಆಕೆ ಯುದ್ಧ ಮಾಡುತ್ತಿರಲಿಲ್ಲವಲ್ಲವೇ? ಮತ್ತೇಕೆ ಆಕೆ ಕೊಲೆಯಾದಳು?”

ಶತ್ರುದೇಶವು ಇಸ್ಲಾಮೀ ದೇಶದೊಂದಿಗೆ ಯುದ್ಧ ಮಾಡುವಾಗ ಶತ್ರುದೇಶದಲ್ಲಿ ಸೇರಿದ ಯುದ್ಧ ಮಾಡದವರಿಗೆ ಇಸ್ಲಾಮ್ ಜೀವ ಸುರಕ್ಷಿತತೆಯ ಖಾತ್ರಿಯನ್ನು ನೀಡುತ್ತದೆ.

 

ಜಿಹಾದ್‍ನ ಬಗ್ಗೆ ತಪ್ಪುಕಲ್ಪನೆಗಳು:

 

ಇಸ್ಲಾಮ್ ಧರ್ಮವು ಸಂಪೂರ್ಣವಾಗಿ ತಪ್ಪುಕಲ್ಪನೆಗೊಳಗಾಗಿರುವುದರಿಂದ ಸಾಮಾನ್ಯವಾಗಿ ಜಿಹಾದ್ ಎಂಬ ಪದವು ಧರ್ಮಯುದ್ಧ ಅಥವಾ ಮುಸ್ಲಿಮೇತರರ ಕಗ್ಗೊಲೆ ಎಂಬ ಅರ್ಥಗಳನ್ನು ಪಡೆದುಕೊಂಡಿದೆ. ಹಿಂಸಾನಿರತ ಮುಸಲ್ಮಾನರು ಖಡ್ಗದ ಮೊನೆಯನ್ನು ತೋರಿಸಿ ಶರಣಾಗಲು ಆದೇಶಿಸುವಂತಹ ಚಿತ್ರಗಳನ್ನು ಬರೆಯುವ ಮೂಲಕ ಜಿಹಾದ್ ಎಂಬ ಪದವನ್ನು ಬಹಳ ಹೀನಾಯವಾಗಿ ಚಿತ್ರಿಸಲಾಗುತ್ತಿದೆ.

ವಾಸ್ತವವಾಗಿ, ಜಿಹಾದ್ ಎಂಬ ಪದವು ಜಾಹದ ಎಂಬ ಕ್ರಿಯಾ ಪದದಿಂದ ಉದ್ಭವವಾಗುತ್ತದೆ. ಜಾಹದ ಎಂದರೆ ಹೋರಾಡಿದನು, ಪರಿಶ್ರಮಿಸಿದನು ಎಂದರ್ಥ. ಆದ್ದರಿಂದ ಭಾಷಿಕವಾಗಿ ಜಿಹಾದ್ ಎಂದರೆ ಹೋರಾಟ ಮತ್ತು ಪರಿಶ್ರಮವಾಗಿದೆ. ಮನಸ್ಸು ಕೆಡುಕಿನೆಡೆಗೆ ವಾಲುವುದನ್ನು ತಡೆಗಟ್ಟಿ ಅದನ್ನು ಒಳಿತಿನೆಡೆಗೆ ಮುನ್ನಡೆಸುವ ನಿರಂತರ ಹೋರಾಟ ಅಥವಾ ಪರಿಶ್ರಮವಾಗಿದೆ ಅತಿದೊಡ್ಡ ಜಿಹಾದ್. ಆದ್ದರಿಂದ ಜಿಹಾದ್ ಎಂಬುದರ ಪ್ರಾಥಮಿಕ ಉದ್ದೇಶವು ಜೀವನದ ಎಲ್ಲ ರಂಗಗಳಲ್ಲೂ ಸೃಷ್ಟಿಕರ್ತನಿಗೆ ಶರಣಾಗುವುದಕ್ಕಾಗಿ ನಡೆಸುವ ಹೋರಾಟ ಮತ್ತು ಪರಿಶ್ರಮವಾಗಿದೆ.

ಎರಡನೆಯದಾಗಿ, ಜಿಹಾದ್ ಎಂಬುದು ಅನ್ಯಾಯದ ವಿರುದ್ಧ ನಡೆಸುವ ಹೋರಾಟವಾಗಿದೆ. ಇತರೆಲ್ಲ ಧರ್ಮಗಳಂತೆ ಇಸ್ಲಾಮ್ ಕೂಡ ಆತ್ಮರಕ್ಷಣೆ ಅಥವಾ ಸರ್ವಾಧಿಕಾರ, ಶೋಷಣೆ ಮತ್ತು ದಬ್ಬಾಳಿಕೆಯ ವಿರುದ್ಧ ಹೋರಾಡಲು ಅನುಮತಿ ನೀಡುತ್ತದೆ.

ಕುರ್‍ಆನ್ ಹೇಳುತ್ತದೆ:

﴿وَمَا لَكُمْ لَا تُقَاتِلُونَ فِي سَبِيلِ اللَّهِ وَالْمُسْتَضْعَفِينَ مِنَ الرِّجَالِ وَالنِّسَاءِ وَالْوِلْدَانِ الَّذِينَ يَقُولُونَ رَبَّنَا أَخْرِجْنَا مِنْ هَذِهِ الْقَرْيَةِ الظَّالِمِ أَهْلُهَا وَاجْعَلْ لَنَا مِنْ لَدُنْكَ وَلِيًّا وَاجْعَلْ لَنَا مِنْ لَدُنْكَ نَصِيرًا ﴾

“ನಮ್ಮ ಪ್ರಭೂ! ಅಕ್ರಮಿಗಳಾದ ಜನರು ನೆಲೆಸುವ ಈ ನಾಡಿನಿಂದ ನಮ್ಮನ್ನು ವಿಮೋಚನೆಗೊಳಿಸು. ನಿನ್ನ ವತಿಯ ಓರ್ವ ರಕ್ಷಕನನ್ನು ನಮಗೆ ನಿಶ್ಚಯಿಸಿಕೊಡು ಮತ್ತು ನಿನ್ನ ವತಿಯ ಓರ್ವ ಸಹಾಯಕನನ್ನು ನಮಗೆ ನಿಶ್ಚಯಿಸಿಕೊಡು’ ಎಂದು ಪ್ರಾರ್ಥಿಸುತ್ತಿರುವ ದಬ್ಬಾಳಿಕೆಗೊಳಗಾದ ಪುರುಷರು, ಸ್ತ್ರೀಯರು ಮತ್ತು ಮಕ್ಕಳಿಗಾಗಿ ಅಲ್ಲಾಹುವಿನ ಮಾರ್ಗದಲ್ಲಿ ಹೋರಾಟ ಮಾಡದಿರಲು ನಿಮಗೇನಾಗಿದೆ?” [ಕುರ್‍ಆನ್ 4:75]

ಆದ್ದರಿಂದ ಆತ್ಮ ಶುದ್ಧೀಕರಣಕ್ಕಾಗಿ ಮತ್ತು ಸಮಾಜದಲ್ಲಿ ಶಾಂತಿ, ಸಮಾಧಾನ ಮತ್ತು ನ್ಯಾಯವನ್ನು ಸ್ಥಾಪಿಸುವುದಕ್ಕಾಗಿ ಹೋರಾಡಲು ಇಸ್ಲಾಮ್ ಆದೇಶಿಸುತ್ತದೆ. ತನ್ನ ಸುತ್ತ ಅನ್ಯಾಯ ಮತ್ತು ದಬ್ಬಾಳಿಕೆಯನ್ನು ಕಾಣುವಾಗ ಕೈಕಟ್ಟಿ ಕೂರುವುದು ಮುಸ್ಲಿಮನಿಗೆ ಯೋಗ್ಯವಾದುದಲ್ಲ. ಮಾರ್ಟಿನ್ ಲೂಥರ್ ಹೇಳಿದಂತೆ:

“ನಾವು ಈ ತಲೆಮಾರಿನಲ್ಲೂ ಪಶ್ಚಾತ್ತಾಪ ಪಡಬೇಕಾಗಿದೆ; ದುಷ್ಕರ್ಮಿಗಳ ದ್ವೇಷಪೂರಿತ ಮಾತು ಮತ್ತು ಕೃತ್ಯಗಳಿಗಾಗಿ ಮಾತ್ರವಲ್ಲ, ಸಜ್ಜನರ ದಿಗಿಲುಗೊಳಿಸು ವಂತಹ ಮೌನಕ್ಕಾಗಿಯೂ ಸಹ.”

ಎಲ್ಲ ವಿಷಯಗಳಲ್ಲೂ ಅಲ್ಲಾಹು ಸೃಷ್ಟಿಸಿದ ಸಮತೋಲನವನ್ನು ಕಾಪಾಡು ವುದಕ್ಕಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸಲು ಇಸ್ಲಾಮ್ ಎಲ್ಲ ಮುಸ್ಲಿಮರಿಗೂ ಕರೆ ನೀಡುತ್ತದೆ. ಕಾರಣವು ಎಷ್ಟೇ ನ್ಯಾಯಬದ್ಧವಾಗಿದ್ದರೂ ಸಹ ನಿರಪರಾಧಿಯನ್ನು ಕೊಲ್ಲುವುದನ್ನು ಇಸ್ಲಾಮ್ ವಿರೋಧಿಸುತ್ತದೆ. ನಾಗರಿಕರಲ್ಲಿ ಭಯ ಮೂಡಿಸುವುದು ಎಂದೂ ಜಿಹಾದ್ ಆಗಲಾರದು ಮತ್ತು ಅದು ಎಂದೂ ಇಸ್ಲಾಮಿನ ಬೋಧನೆಗಳೊಂದಿಗೆ ಹೊಂದಾಣಿಕೆಯಾಗದು.

 

ಸಹಿಷ್ಣುತೆಯ ಚರಿತ್ರೆ:

 

ಮುಸ್ಲಿಮರು ಅನ್ಯಧರ್ಮೀಯರನ್ನು ಬಲವಂತವಾಗಿ ಮತಾಂತರ ಮಾಡುತ್ತಾರೆ ಎಂಬ ಕಟ್ಟುಕಥೆಯನ್ನು ಪಾಶ್ಚಾತ್ಯ ಮೇಧಾವಿಗಳು ಕೂಡ ಖಂಡಿಸಿದ್ದಾರೆ.

ಪ್ರಸಿದ್ಧ ಇತಿಹಾಸಕಾರರಾದ De Lacy O’Leary ಹೇಳುತ್ತಾರೆ:

“ಮತಾಂಧ ಮುಸ್ಲಿಮರು ಜಗತ್ತಿನಾದ್ಯಂತ ತಾವು ವಶಪಡಿಸಿದ ಜನಾಂಗಗಳನ್ನು ಖಡ್ಗದ ಮೊನೆಯನ್ನು ತೋರಿಸುವ ಮೂಲಕ ಬಲವಂತವಾಗಿ ಮತಾಂತರ ಮಾಡಿದರು ಎಂಬ ಇತಿಹಾಸಕಾರರು ಪದೇ ಪದೇ ಪುನರಾವರ್ತಿಸುವ ಅಸಂಬದ್ಧವು ಒಂದು ಕಟ್ಟುಕತೆಯಾಗಿದೆಯೆಂದು ಇತಿಹಾಸವು ರುಜುವಾತುಪಡಿಸಿದೆ.” [Islam At Crossroads, London, 1923, pg. 8]

ಮುಸ್ಲಿಮರು ಸ್ಪೈನ್ ದೇಶವನ್ನು 800 ವರ್ಷಗಳ ಕಾಲ ಆಳಿದರು. ಈ ಸುದೀರ್ಘ ಕಾಲಘಟ್ಟದಲ್ಲೂ ಮತ್ತು ಮುಸ್ಲಿಮರನ್ನು ಅಲ್ಲಿಂದ ಬಲವಂತವಾಗಿ ಹೊರದಬ್ಬಲಾದ ಬಳಿಕವೂ ಅಲ್ಲಿನ ಪ್ರಜೆಗಳಾದ ಮುಸ್ಲಿಮೇತರರು ಜೀವಂತ ವಾಗಿದ್ದರು ಮತ್ತು ಬೆಳವಣಿಗೆ ಹೊಂದುತ್ತಿದ್ದರು. ಮಧ್ಯಪೂರ್ವ ಮುಸ್ಲಿಮ್ ರಾಷ್ಟ್ರಗಳಲ್ಲಿ ಶತಮಾನಗಳಿಂದ ಅಲ್ಲಿನ ಅಲ್ಪಸಂಖ್ಯಾತರಾದ ಯಹೂದ ಮತ್ತು ಕ್ರೈಸ್ತರು ಬದುಕುತ್ತಲೇ ಇದ್ದಾರೆ. ಈಜಿಪ್ಟ್, ಮೊರೊಕ್ಕೊ, ಪ್ಯಾಲಸ್ತೀನ್, ಲೆಬನಾನ್, ಸಿರಿಯಾ, ಜೋರ್ಡಾನ್ ಮೊದಲಾದ ದೇಶಗಳಲ್ಲಿ ಯಹೂದ ಮತ್ತು ಕ್ರೈಸ್ತರ ಗಮನಾರ್ಹ ಜನಸಂಖ್ಯೆಯಿದೆ.

ಕುರ್‍ಆನ್ ಹೇಳುತ್ತದೆ:

﴿لَا إِكْرَاهَ فِي الدِّينِ قَدْ تَبَيَّنَ الرُّشْدُ مِنَ الْغَيِّ فَمَنْ يَكْفُرْ بِالطَّاغُوتِ وَيُؤْمِنْ بِاللَّهِ فَقَدِ اسْتَمْسَكَ بِالْعُرْوَةِ الْوُثْقَى لَا انْفِصَامَ لَهَا وَاللَّهُ سَمِيعٌ عَلِيمٌ ﴾

“ಧರ್ಮದ ವಿಷಯದಲ್ಲಿ ಯಾವುದೇ ಬಲಾತ್ಕಾರವಿಲ್ಲ. ಸನ್ಮಾರ್ಗವು ದುರ್ಮಾರ್ಗದಿಂದ ಸ್ಪಷ್ಟವಾಗಿ ಬೇರ್ಪಟ್ಟು ನಿಂತಿದೆ. ಆದ್ದರಿಂದ ಯಾರು ತಾಗೂತ (ಮಿಥ್ಯಾರಾಧ್ಯರ)ನ್ನು ನಿμÉೀಧಿಸಿ ಅಲ್ಲಾಹುವಿನಲ್ಲಿ ವಿಶ್ವಾಸವಿಡುವನೋ ಅವನು ಅತ್ಯಂತ ಬಲಿಷ್ಠವಾದ ಹಗ್ಗವನ್ನು ಹಿಡಿದಿರುವನು. ಅದೆಂದೂ ಕಡಿದು ಹೋಗಲಾರದು. ಅಲ್ಲಾಹು (ಎಲ್ಲವನ್ನು) ಆಲಿಸುವವನೂ ಅರಿಯುವವನೂ ಆಗಿರುವನು.” [ಕುರ್‍ಆನ್ 2:256]

 

ಇಸ್ಲಾಮ್ –  ವಿಶ್ವಭಾತೃತ್ವದ ಸಂಕೇತ:

 

ಉಗ್ರಗಾಮಿ ಚಿಂತನೆಗಳನ್ನು ಬಿತ್ತುವ ಪ್ರತಿಗಾಮಿ ಧರ್ಮವಾಗಿರುವುದರ ಬದಲು ಇಸ್ಲಾಮ್ ಎಂಬುದು ಮಾನವೀಯತೆಯನ್ನು ಎತ್ತಿಹಿಡಿಯುವ ಮತ್ತು ಜಾತಿ, ಕುಲ ಮತ್ತು ಜನಾಂಗೀಯತೆಯನ್ನು ಮೆಟ್ಟಿನಿಲ್ಲುವ ಒಂದು ಸಂಪೂರ್ಣ ಜೀವನ ಪದ್ಧತಿಯಾಗಿದೆ.

ಕುರ್‍ಆನ್ ಹೇಳುತ್ತದೆ:

﴿يَا أَيُّهَا النَّاسُ إِنَّا خَلَقْنَاكُمْ مِنْ ذَكَرٍ وَأُنْثَى وَجَعَلْنَاكُمْ شُعُوبًا وَقَبَائِلَ لِتَعَارَفُوا إِنَّ أَكْرَمَكُمْ عِنْدَ اللَّهِ أَتْقَاكُمْ إِنَّ اللَّهَ عَلِيمٌ خَبِيرٌ ﴾

“ಓ ಮನುಷ್ಯರೇ! ಖಂಡಿತವಾಗಿಯೂ ನಾವು ನಿಮ್ಮನ್ನು ಒಂದು ಗಂಡು ಮತ್ತು ಒಂದು ಹೆಣ್ಣಿನಿಂದ ಸೃಷ್ಟಿಸಿರುವೆವು. ನೀವು ಪರಸ್ಪರ ಗುರುತಿಸುವುದಕ್ಕಾಗಿ ನಾವು ನಿಮ್ಮನ್ನು ವಿವಿಧ ಸಮುದಾಯ ಮತ್ತು ಜನಾಂಗಗಳನ್ನಾಗಿ ಮಾಡಿರುವೆವು. ಖಂಡಿತವಾಗಿಯೂ ಅಲ್ಲಾಹುವಿನ ಬಳಿ ನಿಮ್ಮ ಪೈಕಿ ಅತ್ಯಂತ ಗೌರವಾನ್ವಿತನು ನಿಮ್ಮ ಪೈಕಿ ಅತಿಹೆಚ್ಚು ಭಯಭಕ್ತಿ ಪಾಲಿಸುವವನಾಗಿರುವನು. ಖಂಡಿತವಾಗಿಯೂ ಅಲ್ಲಾಹು ಸರ್ವಜ್ಞನೂ ಸೂಕ್ಷ್ಮಜ್ಞಾನಿಯೂ ಆಗಿರುವನು.” [ಕುರ್‍ಆನ್ 49:13]

ಇಸ್ಲಾಮೀ ಶಿಕ್ಷಣಗಳ ಸಾರ್ವತ್ರಿಕತೆಯಿಂದಾಗಿ ಇಂದು ಇಸ್ಲಾಮ್ ಜಗತ್ತಿನಲ್ಲೇ ಅತಿವೇಗವಾಗಿ ಬೆಳೆಯುತ್ತಿರುವ ಒಂದು ಧರ್ಮವಾಗಿ ಮಾರ್ಪಟ್ಟಿದೆ. ಮನುಷ್ಯ ಮನುಷ್ಯರ ನಡುವೆ ಬಡಿದಾಟ, ಕಾಳಗ, ಯುದ್ಧಗಳು ವಿಪರೀತ ಹೆಚ್ಚಾಗಿರುವ ಹಾಗೂ ವ್ಯಕ್ತಿ ಮತ್ತು ಸಾಮ್ರಾಜ್ಯಗಳಿಂದ ಭಯೋತ್ಪಾದನೆಯ ಬೆದರಿಕೆಯನ್ನು ಎದುರಿಸುತ್ತಿರುವ ಜಗತ್ತಿಗೆ ಇಸ್ಲಾಮ್ ಭವ್ಯ ಭವಿಷ್ಯತ್ತಿನ ನಿರೀಕ್ಷೆ ಹುಟ್ಟಿಸುವ ಒಂದು ಬೆಳಕಾಗಿದೆ.

 

وَصَلَّى اللهُ وَسَلَّم عَلَى نَبِيِّنَا مُحَمَّدِِ وَعَلى آلِهِ وَصَحْبِهِ أجْمَعِين .

 

*********

ಇಸ್ಲಾಮ್ ಭಯೋತ್ಪಾದನೆಗೆ ವಿರುದ್ಧವಾಗಿದೆ.

ಇಸ್ಲಾಮ್ ಭಯೋತ್ಪಾದನೆಗೆ ವಿರುದ್ಧವಾಗಿದೆ.

ಇಸ್ಲಾಮ್ ಭಯೋತ್ಪಾದನೆಗೆ ವಿರುದ್ಧವಾಗಿದೆ.

ಅಪ್ಪ: “ಆನಂದ್! ಮಳೆ ಜೋರಾಗಿ ಬರುತ್ತಿದೆ. ಹೊರಗೆ ಹೋಗಿ ಆಡಬೇಡ.”

ಓಹೋ! ಆನಂದನ ತಂದೆ “ಹೊರಗೆ ಹೋಗಿ ಆಡಬೇಡ” ಹೇಳಿದ್ದಾರೆ. ಹಾಗಾದರೆ ಇದರ ಅರ್ಥ ಆತನ ತಂದೆ, ಆತನನ್ನು ಎಂದೆಂದಿಗೂ ಹೊರಗೆ ಹೋಗಿ ಆಡುವುದನ್ನೇ ನಿಷೇಧಿಸಿದ್ದಾರೆ ಎಂದಾಯ್ತು. ಇದರ ಅರ್ಥ, ತಂದೆಯು ಆಜ್ಞಾಪಿಸಿದ್ದರಾದ್ದರಿಂದ ಆನಂದನು ಯಾವುದೇ ಆಟವನ್ನು ಇನ್ನೆಂದಿಗೂ ಆಡಲಾರ ಎಂದಾಯ್ತು.

ಓದುಗರೇ, ದಯವಿಟ್ಟು ನನ್ನ ಅನುಚಿತವಾದ ಅಂತ್ಯದ ಕುರಿತಾಗಿ ನನ್ನ ಮೇಲೆ ಕೋಪಿಸಿಕೊಳ್ಳಬೇಡಿ. ನಾನು ಯಾವುದೇ ಸಂದರ್ಭ ಹಾಗೂ ಹಿನ್ನಲೆಯನ್ನು ಸಂಪೂರ್ಣವಾಗಿ ನೀಡದೆ ಸನ್ನಿವೇಶ ಬಾಹಿರವಾಗಿ ಪಸ್ತಾಪಿಸುತ್ತಿದ್ದೇನೆ. ನನ್ನ ಮೇಲಿನ ವಿವರಣೆಯು ತಪ್ಪಾಗಿದೆ. ಸರಿಯಾದ ವಿವರಣೆಯು “ಆನಂದನ ತಂದೆಯು ಆತನಿಗೆ ಮಳೆಯ ಕಾರಣದಿಂದಾಗಿ ಆಡಬಾರದೆಂದು ತಿಳಿಸಿರುತ್ತಾರೆ (ಯಾಕೆಂದರೆ, ಆತನು ಮಳೆಯ ಕಾರಣದಿಂದ ಜ್ವರಕ್ಕೆ ತುತ್ತಾಗ ಬಹುದು ಎಂಬುದು ಸ್ಪಷ್ಟವಿಚಾರ). ಸಾಮಾನ್ಯ ದಿನಗಳಲ್ಲಿ ಆತನು ಆಡಬಹುದು” ಎಂದಾಗಿದೆ.

ಅಂತೆಯೇ, ಹಿಂಸೆ ಹಾಗೂ ಭಯೊತ್ಪಾದನೆಯನ್ನು ಉತ್ತೇಜಿಸುವ ವಿಚಾರದಲ್ಲಿ ಇಸ್ಲಾಮ್ನ ಮೇಲಿರುವ ಆರೋಪಗಳು ಅದೇ ರೀತಿಯಾಗಿದೆ(ಅರ್ಥರಹಿತವಾಗಿದೆ). ಬನ್ನಿ, ಈ ವಿಚಾರವನ್ನು ನಿಷ್ಪಕ್ಷಪಾತ ಮನಸ್ಸಿನಿಂದ ಒಮ್ಮೆ ಗಮನಿಸೋಣ. ನಾವು ಸುತ್ತಮುತ್ತಲಿನಿಂದ ಕಲಿತ ವಿಚಾರವನ್ನು ಬದಿಗಿರಿಸಿ, ಮೂಲವಿಚಾರದ ಮೇಲೆ ಗಮನ ಹರಿಸೋಣ.

 1. ಇಸ್ಲಾಮ್ ಅಂದರೆ ಶಾಂತಿ.

ಇಸ್ಲಾಮ್, ದೇವರ ಧರ್ಮದ ಹೆಸರೇ ಹೊರತು ಇನ್ನೇನು ಅಲ್ಲ. ಸರ್ವಶಕ್ತನಾದ ದೇವನು ಮಾನವನಿಗೆ ಅನೇಕ ಅವತೀರ್ಣಗಳ ಮೂಲಕ ಮಾರ್ಗದರ್ಶನ ನೀಡಿದ್ದಾನೆ. ಆ ಸಾಲಿನಲ್ಲಿ ಖುರ್ ಆನ್ ಕೊನೆಯದಾಗಿದೆ. ಯಾರು ದೇವನ ಧರ್ಮವನ್ನು ಅನುಸರಿಸುತ್ತಾನೋ ಅವನಿಗೆ ಮುಸ್ಲಿಮನೆಂದು ಅರೇಬಿಕ್ ಭಾಷೆಯಲ್ಲಿ ಕರೆಯುತ್ತಾರೆ. ಇಸ್ಲಾಮಿನ ಉದ್ದೇಶ ಶಾಂತಿಯನ್ನು ಹರಡುವುದು. ಇಸ್ಲಾಮ್ ಬರಿ ಶಾಂತಿಯನ್ನಷ್ಟೇ ಅಲ್ಲದೆ, ಶಾಂತಿಯನ್ನು ಸ್ಥಾಪಿಸುತ್ತದೆ. ಇಸ್ಲಾಮ್ ನಿರಂಕುಶ ಪ್ರಭುತ್ವವನ್ನು, ದಬ್ಬಾಳಿಕೆಗಳನ್ನು ಮತ್ತು ಸುಳ್ಳನ್ನು ತೆಗೆದುಹಾಕುವ ಗುರಿಯನ್ನು ಹೊಂದಿದೆ. ಆದರೆ ದುರಾದೃಷ್ಟ ವಿಷಯವೇನೆಂದರೆ, ಕೆಲವು ಕಾರಣಾಂತರಗಳಿಂದ ಜನರು, ಇಸ್ಲಾಮ್ ಹಿಂಸೆಯನ್ನು ಹಾಗೂ ದಬ್ಬಾಳಿಕೆಯನ್ನು ಮಾಡುತ್ತದೆ ಎಂಬ ತಪ್ಪಾದ ಭಾವನೆಗಳನ್ನು ಹೊಂದಿದ್ದಾರೆ.

 1. ಇಸ್ಲಾಮ್ ವಿಶ್ವಾಸಕ್ಕೆ ಸಂಪೂರ್ಣ ಸ್ವತಂತ್ರವನ್ನು ನೀಡುತ್ತದೆ.

ದೇವನ ಬೋಧನೆಯನ್ನು ಸ್ವಿಕರಿಸುವುದಕ್ಕೆ ಹಾಗೂ ನಿರಾಕರಿಸುವುದಕ್ಕೆ ಪ್ರತಿಯೊಬ್ಬ ಮಾನವನಿಗೆ ಸಂಪೂರ್ಣ ಸ್ವತಂತ್ರವಿದೆ ಎಂದು ಇಸ್ಲಾಮ್ ವಿಶ್ವಾಸಿಸುತ್ತದೆ. ಇಸ್ಲಾಮ್ ನಲ್ಲಿ ವಿಶ್ವಾಸವಿಡಲು ಯಾರನ್ನೂ ಕೂಡ ಒತ್ತಾಯಪಡಿಸುವುದಕ್ಕೆ ಇದರಲ್ಲಿ ಯಾವುದೇ ಅವಕಾಶಗಳಿಲ್ಲ. ಮಾನವನಿಗೆ ತನ್ನ ಸುತ್ತಮುತ್ತ ಹುಡುಕುವುದಕ್ಕೂ ಹಾಗೂ ಇಸ್ಲಾಮ್ ಸ್ವಿಕರಿಸುವ ಅಥವಾ ನಿರಾಕರಿಸುವುದಕ್ಕೂ ವಿಚಾರವಂತಿಕೆ ಹಾಗೂ ಜ್ಞಾನ ಹೊಂದಿದ್ದಾನೆ.

“ಧರ್ಮದಲ್ಲಿ ಯಾವುದೇ ಒತ್ತಾಯಗಳಿಲ್ಲ.”  ಖುರ್ ಆನ್ 2ನೇ ಅಧ್ಯಾಯ 256ನೇ ವಚನ.

ಘೋಷಿಸು: ಈ ಸಂಪೂರ್ಣ ಸತ್ಯವಾದ ಖುರ್‍ಆನ್ ನಿಮ್ಮ ಪಾಲಕ ಪ್ರಭುವಿನ ಕಡೆಯಿಂದಾಗಿರುತ್ತದೆ.  ಇನ್ನು ಇಷ್ಟವಿದ್ದವರು ಸತ್ಯವಿಶ್ವಾಸವಿಡಲಿ ಮತ್ತು ಇಷ್ಟವಿದ್ದವರು ನಿಷೇಧಿಸಲಿ. ಖುರ್ ಆನ್  18ನೇ ಅಧ್ಯಾಯ 29ನೇ ವಚನ.

ನಿಸ್ಸಂದೇಹವಾಗಿಯೂ ಇದೊಂದು ಉಪದೇಷವಾಗಿದೆ. ಆದ್ದರಿಂದ ಇಚ್ಚಿಸುವವನು ತನ್ನ ಪ್ರಭುವಿನತ್ತ ಮಾರ್ಗ ಹಿಡಿಯಲಿ. ಖುರ್ ಆನ್ 73ನೇ ಅಧ್ಯಾಯ.19 ನೇ ವಚನ

ಆದರಿಂದ ಎಲ್ಲೂ ಕೂಡ ಯಾರೊಬ್ಬರ ಮೇಲೂ ಇಸ್ಲಾಮ್ ಹೇರುವುದಕ್ಕೆ ಅವಕಾಶಗಳಿಲ್ಲ. ಇಸ್ಲಾಮ್ ಅನ್ನು ಇತರರಿಗೆ ಒತ್ತಯಪೂರ್ವಕವಾಗಿ ನಂಬುವಂತೆ ಮಾಡುವುದು ಇಸ್ಲಾಮ್ ಗೆ ವಿರುದ್ಧವಾದ ಕಾರ್ಯವಾಗಿದೆ.

 1. ಜೀವನವು ಪವಿತ್ರವಾಗಿದೆ – ನಿಷ್ಕಳಂಕ(ಮುಗ್ಧ)ರನ್ನು ಕೊಲ್ಲುವುದು ಮಾನವತೆಗೆ ವಿರುದ್ಧವಾದ ಅಪರಾಧವಾಗಿದೆ.
 2. ಇಸ್ಲಾಮ್ ನ ಗೃಹದಲ್ಲಿ ಮಾನವನ ಜೀವನವನ್ನು ಅತಿಶ್ರೇಷ್ಠ ಪವಿತ್ರವೆಂದು ಪರಿಗಣಿಸಿದೆ. ಒಂದು ಮುಗ್ದ ಜೀವವನ್ನು ತೆಗೆಯುವುದು ಕೂಡ ಮಾನವತೆಗೆ ವಿರುದ್ಧ ಗೈದ ಅಪರಾಧವಾಗಿರುತ್ತದೆ.

ಖುರ್ ಆನ್ 5 ನೇ ಅಧ್ಯಾಯ 32ನೇ ವಚನ – ಯಾವ ವ್ಯಕ್ತಿಯು ಓರ್ವನು ಕೊಲೆಗಾರನಾಗಿರುವುದಕ್ಕಾಗಿಯಲ್ಲದೆ ಅಥವಾ ಭೂಮಿಯಲ್ಲಿ ಕ್ಷೋಭೆಗಾರನಾಗಿರುವುದಕ್ಕಾಗಿಯಲ್ಲದೆ ಹೊರತುಪಡಿಸಿ ಯಾರನ್ನಾದರೂ ಕೊಂದರೆ ಅದು ಇಡೀ ಮನುಷ್ಯಕುಲವನ್ನು ಕೊಂದದ್ದಕ್ಕೆ ಸಮಾನವಾಗಿದೆ ಮತ್ತು ಯಾವ ವ್ಯಕ್ತಿಯು ಯಾರದೇ ಜೀವವನ್ನು ರಕ್ಷಿಸಿದರೆ ಅದು ಇಡೀ ಮನುಷ್ಯಕುಲವನ್ನು ರಕ್ಷಿಸಿದ್ದಕ್ಕೆ ಸಮಾನವಾಗಿದೆ.

 1. ಇಸ್ಲಾಮ್ ಗೃಹದಲ್ಲಿ ಯುದ್ಧ

ಇಸ್ಲಾಮ್ ಜೀವನದ ಪರಿಪೂರ್ಣ ವ್ಯವಸ್ಥೆಯಾಗಿದೆ. ಇದು ಕೇವಲ ಕೆಲವು ಧಾರ್ಮಿಕ ಸಂಸ್ಕಾರ ಹಾಗೂ ಸಂಪ್ರದಾಯದ ಹೆಸರುಗಳಂತಲ್ಲ. ಇದು ಜೀವನದ ಎಲ್ಲ ದೃಷ್ಟಿಕೋನಗಳನ್ನು ಆವರಿಸಿದೆ. ಅವುಗಳೆಂದರೆ, ಅಧ್ಯಾತ್ಮಿಕ, ವೈಯಕ್ತಿಕ, ಆರ್ಥಿಕ, ರಾಜಕೀಯ. ಸಮಾಜದಲ್ಲಿ ಶಾಂತಿಯನ್ನು ಸ್ಥಾಪಿಸಲು ಹಾಗೂ ನಿಯಂತ್ರಿಸಲಿಕ್ಕಾಗಿ ಕೆಲವೊಮ್ಮೆ ಬಲಪ್ರಯೋಗ ಅನಿವಾರ್ಯವಾಗುತ್ತದೆ. ಅದಕ್ಕಾಗಿಯೇ ನಮ್ಮಲ್ಲಿ ಸೇನಾಬಲ, ರಾಜಕೀಯ ವ್ಯವಸ್ಥೆ, ನ್ಯಾಯಾಂಗ, ಕಾರಾಗೃಹ ಮುಂತಾದವುಗಳನ್ನು ಹೊಂದಿರುವೆವು. ಹಾಗೇನಾದರೂ ನಾವು ನಿರಂಕುಶ ಪ್ರಭುತ್ವವನ್ನು, ದಬ್ಬಾಳಿಕೆಗಳನ್ನು, ಹಾಗೂ ಕೆಟ್ಟ ಕಾರ್ಯಗಳನ್ನು ತಡೆಯದೇ ಹೋದಾಗ, ಅದು ಮಾನವನ ಜೀವನವನ್ನು ವಿನಾಶದೆಡೆಗೆ ತಳ್ಳುತ್ತದೆ.

ಪ್ರತಿಯೊಬ್ಬರೂ ಶಾಂತಿಯುತ ಜೀವನವನ್ನು ಜೀವಿಸಲಿಕ್ಕೂ, ಪ್ರತಿಪಾದಿಸಲಿಕ್ಕೂ ಆಸಕ್ತರಾಗಿರುವುದಿಲ್ಲ. ಪ್ರಾಪಂಚಿಕವಾದುವುಗಳನ್ನು ಸಂಪಾದಿಸುವುದಕ್ಕೂ ಅನ್ಯ ಮಾರ್ಗಗಳನ್ನು ಉಪಯೋಗಿಸುವ ಜನರನ್ನೂ ನಾವು ಕಾಣಬಹುದು. ಕೊಲೆ, ಸುಲಿಗೆ, ದರೋಡೆ, ದೇಶಗಳ ಮೇಲೆ ದಾಳಿಗಳು ಮಾನವರು ಕೈಗೊಳ್ಳುವ ಕೆಲವು ಅಪರಾಧಗಳಾಗಿವೆ. ಇದಕ್ಕೆ ಇರುವ ಪರಿಹಾರೋಪಾಯಗಳೆನು? ನಾವು ಇದನ್ನು ತಡೆಯದೇ ಹೋದರೆ ಈ ಒತ್ತಡಗಳು ಮುಂದುವರೆಯುತ್ತವೆ. ಮಾನವನ ಜೀವನ ಪರಿಶುದ್ಧವಾಗಿದೆ, ಇದು ಸುರಕ್ಷಿತವಾಗಿರಬೇಕು. ಈ ಕಾರಣಗಳಿಗಾಗಿ ಯುದ್ಧವು ಅನಿವಾರ್ಯವಾಗಿ ಪರಿಗಣಿಸುತ್ತದೆ.

ತೈಲ, ಚಿನ್ನ, ಸ್ವಾಭಾವಿಕ ಅನಿಲ, ಉದ್ಯೋಗ, ದೇಶ ವಿಸ್ತರಣೆ ಮುಂತಾದವುಗಳ ವಿಚಾರದಲ್ಲಿ ರಾಜ್ಯಗಳು, ದೇಶಗಳು ಯುದ್ಧ ಮಾಡುವುದನ್ನು ನಾವು ಈ ಸಮಯದಲ್ಲಿ ಕಾಣಬಹುದು. ಆದರೆ ಇಸ್ಲಾಮಿನ ವ್ಯವಸ್ಥೆ ಇರುವ ರಾಜ್ಯವು ಯುದ್ಧಕ್ಕೆ ಹೋಗಬೇಕಾದರೆ ಮೂರು ಪರಿಸ್ಥಿತಿಗಳು ಮಾತ್ರ ಕಾರಣವಾಗಿರುತ್ತದೆ.

a.       ರಕ್ಷಣಾತ್ಮಕ ಯುದ್ದ

ಯಾರ ಮೇಲಾದರೂ ದಬ್ಬಾಳಿಕೆ ನಡೆಯುವಾಗ ಅದನ್ನು ತಡೆಗಟ್ಟುವುದು ಒಬ್ಬನ/ಳ ಮೇಲಿರುವ ಸಹಜ ಹಕ್ಕಾಗಿದೆ. ಇದು ಸ್ವಾಭಾವಿಕ ಕೂಡ ಮತ್ತು ಇದಕ್ಕಾಗಿ ಹೋರಾಡುವುದು ಕೂಡ ಆತನ/ಆಕೆಯ ಹಕ್ಕಾಗಿದೆ. ಅದೇ ರೀತಿಯಾಗಿ ಒಂದು ದೇಶ ಇನ್ನೊಂದು ಇಸ್ಲಾಮಿಯ ರಾಷ್ಟ್ರದ ಮೇಲೆ ದಾಳಿ ಮಾಡುವಾಗ ಮತ್ತು ದಬ್ಬಾಳಿಕೆ, ಮುತ್ತಿಗೆ ಹಾಕಿದಾಗ ಮತ್ತು ಕ್ರೂರತೆಗೆ ಸಿಲುಕಿದಾಗ, ಆ ರಾಷ್ಟ್ರಕ್ಕೆ ಅದನ್ನು ವಿರೋಧಿಸುವ ಎಲ್ಲಾ ಹಕ್ಕುಗಳೂ ಇವೆ. ಹಾಗೆಯೇ ಈ ಪರಿಸ್ಥಿತಿಯಲ್ಲಿ ಯುದ್ದವು ಅನುಮತಿಸಲ್ಪಟ್ಟಿದೆ. ಈ ಪರಿಸ್ಥಿತಿಯಲ್ಲಿ ಯಾವುದೇ ದೇಶವೂ ಕೂಡ ಯುದ್ದಕ್ಕೆ ಹೋಗುತ್ತದೆ. ಈ ಯುದ್ದದ ಉದ್ದೇಶ, ದಬ್ಬಾಳಿಕೆಯನ್ನು ತಡೆಯುವುದು ಹಾಗೂ ಶಾಂತಿಯನ್ನು ಪ್ರತಿಸ್ಥಾಪಿಸುವುದು.

ಖುರ್-ಆನ್ 22:39. – ಯಾರ ವಿರುದ್ಧವಾಗಿ ಯುದ್ಧ ಮಾಡಲಾಗುತ್ತಿದೆಯೋ ಅವರಿಗೂ ಕೂಡ ಪ್ರತಿಯುದ್ಧಕ್ಕೆ ಅನುಮತಿಸಲಾಗಿದೆ. ಏಕೆಂದರೆ ಅವರು ಅಕ್ರಮಣಕ್ಕೊಳಗಾದವರಾಗಿದ್ದಾರೆ. ನಿಸ್ಸಂಶಯವಾಗಿಯೂ ಅವರ ನೆರವಿಗೆ ಅಲ್ಲಾಹನು ಸರ್ವಸಮರ್ಥನಾಗಿರುವನು.

b.      ಆಕ್ರಮಣಕಾರಿ ಯುದ್ದ

ಕೆಲವು ನಾಡಿನ ಜನರು ದಾಳಿಗೊಳಗಾದಾಗ, ಕೊಲ್ಲಲ್ಪಡುತ್ತಿರುವಾಗ, ಹಿಂಸೆಗೊಳಗಾಗುತ್ತಿರುವಾಗ ಮತ್ತು ದಬ್ಬಾಳಿಕೆಗೆ ಒಳಗಾಗಲ್ಪಟ್ಟಾಗ ಅವರ ಮೇಲಿನ ಕಿರುಕುಳವನ್ನು ತಡೆಯಲಿಕ್ಕಾಗಿ ಯುದ್ದವು ಅವರ ಮೇಲೆ ಅನುಮತಿಸಲ್ಪಟ್ಟಿದೆ. ಇಲ್ಲಿ ಕೂಡ ಇದರ ಅವಶ್ಯಕತೆಯು ಶಾಂತಿ ಹಾಗೂ ನ್ಯಾಯವನ್ನು ಹೊಂದಲಿಕ್ಕಾಗಿದೆ.

ಖುರ್-ಆನ್ 4:75-76. ಮರ್ದಿತರಾದ ಪುರುಷರು, ಸ್ತ್ರೀಯರು ಮತ್ತು ಪುಟ್ಟ ಪುಟ್ಟ ಮಕ್ಕಳ ರಕ್ಷಣೆಗಾಗಿ ನೀವು ಅಲ್ಲಾಹುವಿನ ಮಾರ್ಗದಲ್ಲಿ ಯುದ್ಧ ಮಾಡದಿರಲು ಕಾರಣವಾದರೂ ಏನು? ಅವರು ಹೀಗೆ ಪ್ರಾರ್ಥಿಸುತ್ತಿದ್ದಾರೆ: ‘ಓ ನಮ್ಮ ಪ್ರಭೂ, ಈ ಅಕ್ರಮಿಗಳ ನಾಡಿನಿಂದ ನಮ್ಮನ್ನು ಪಾರುಮಾಡು ಮತ್ತು ನೀನು ನಿನ್ನ ವತಿಯ ರಕ್ಷಕನನ್ನು ನಮಗೋಸ್ಕರ ನಿಶ್ಚಯಿಸಿಕೊಡು ಹಾಗೂ ನಮಗಾಗಿ ನಿನ್ನ ವತಿಯ ಸಹಾಯಕನನ್ನು ಮಾಡು’. ಯಾರು ಸತ್ಯವಿಶ್ವಾಸವಿಟ್ಟಿರುವರೋ ಅವರು ಅಲ್ಲಾಹುವಿನ ಮಾರ್ಗದಲ್ಲಿ ಯುದ್ಧ ಮಾಡುತ್ತಾರೆ ಮತ್ತು ಯಾರು ಸತ್ಯನಿಷೇಧಿಸಿರುವರೋ ಅವರು ಅಲ್ಲಾಹುವಿನ ಹೊರತಾದ ಇತರರ ಮಾರ್ಗದಲ್ಲಿ ಯುದ್ಧ ಮಾಡುತ್ತಿದ್ದಾರೆ. ಆದ್ದರಿಂದ ನೀವು ಶೈತಾನನ ಮಿತ್ರರೊಂದಿಗೆ ಯುದ್ಧ ಮಾಡಿರಿ. ಖಂಡಿತವಾಗಿಯೂ ಶೈತಾನೀ ಕುತಂತ್ರವು (ಸಂಪೂರ್ಣ ನಿಷ್ಫ್ರಭ ಹಾಗೂ)ಅತ್ಯಂತ ದುರ್ಬಲವಾಗಿದೆ.

c.       ಮುಂಬರುವ ಆಕ್ರಮಣಗಳನ್ನು ತಡೆಯಲಿಕ್ಕಾಗಿ ಯುದ್ದ

ಇಸ್ಲಾಮಿಯ ರಾಷ್ಟ್ರವು ಇತರ ರಾಷ್ಟ್ರಗಳೊಟ್ಟಿಗೆ ಶಾಂತಿಯ ಒಡಂಬಡಿಕೆ ಮಾಡಿಕೊಂಡಿದ್ದೂ; ಆ ಒಡಂಬಡಿಕೆಯನ್ನು ಯುದ್ದಕ್ಕಾಗಿ ಹಾಗೂ ಕ್ಷೋಬೆಯನ್ನು ಹರಡುವ ಮನೋಭಾವದಿಂದ ಮುರಿದದ್ದೇ ಆದಲ್ಲಿ ಯುದ್ದ ಮಾಡಲಿಕ್ಕಾಗಿ ಅವಕಾಶವಿದೆ. ಇಲ್ಲಿ ಕೂಡ ಯುದ್ದವು ಮುಂಬರುವ ನಿರಂಕುಶ ಪ್ರಭುತ್ವ ಮತ್ತು ಹಿಂಸೆಯಿಂದ ರಕ್ಷಿಸಿಕೊಳ್ಳಲು ಅವಶ್ಯಕವಾಗಿರುವ ಕೆಡುಕಾಗಿದೆ. ಖುರ್-ಆನ್ ನ 9ನೇ ಅಧ್ಯಾಯದ ಆರಂಭದಲ್ಲಿ ಇಂತಹ ಯುದ್ದಗಳ ಕುರಿತು ಮಾತನಾಡುತ್ತದೆ.

ಮೇಲೆ ಉಲ್ಲೇಖಿಸಲ್ಪಟ್ಟ ಪರಿಸ್ಥಿತಿಗಳು ಯುದ್ದ ಅನುಮತಿಸಲ್ಪಡುವ ಪರಿಸ್ಥಿತಿಗಳು ಮಾತ್ರವಾಗಿದೆ ಮತ್ತು ಇದನ್ನು ಯಾರೇ ಆಗಲಿ ಅಥವಾ ಯಾವುದೇ ಶಾಂತಿಯುತ ರಾಷ್ಟ್ರವಾಗಲಿ ಇಂತಹ ಪರಿಸ್ಥಿತಿಯಲ್ಲಿ ಯುದ್ದವು ಅನಿವಾರ್ಯ ಎಂಬುದನ್ನು ಅಂಗೀಕರಿಸುತ್ತದೆ.

ಆದರೂ ಯುದ್ದವು ಅನಿಚ್ಛೆಯಾಗಿದ್ದು, ಒಟ್ಟಾರೆಯಾಗಿ ಶಾಂತಿಯನ್ನು ಸ್ಥಾಪಿಸಲಿಕ್ಕಾಗಿ ಮಾತ್ರ ವಿವರಿಸಲ್ಪಡಬಹುದಾದ ಸಂದರ್ಭಗಳಲ್ಲಿ ಯುದ್ದವನ್ನು ಅನುಮತಿಸಲ್ಪಟ್ಟಿದೆ. ಆದರೆ ಅದೇ ಅಂತ್ಯವಲ್ಲ. ಯುದ್ದದಲ್ಲೂ ಕೂಡ ಅನೇಕ ಪರಿಶೀಲನೆಗಳು ಮತ್ತು ಸಮತೋಲನಗಳಿವೆ.

 1. ಯುದ್ದದ ಸಂದರ್ಭದಲ್ಲಿ ಯಾರು ಯುದ್ದ ಮಾಡುತ್ತಿರುವರೋ ಅವರ ಮೇಲೆ ಮಾತ್ರ ಆಕ್ರಮಣ ಮಾಡಬಹುದು.
 2. ಮಹಿಳೆಯರು, ಮಕ್ಕಳು ಹಾಗೂ ವೃದ್ದರ ಮೇಲೆ ಆಕ್ರಮಣ ನಡೆಸಕೂಡದು.
 3. ಯಾವುದೇ ಧಾರ್ಮಿಕ ಸ್ಥಳಗಳನ್ನು ಹಾಳುಗೆಡವಬಾರದು.
 4. ಮರಗಳನ್ನು ಸುಡಬಾರದು ಮತ್ತು ಪ್ರಾಣಿಗಳನ್ನು ಹಿಂಸಿಸಬಾರದು.
 5. ವಿರೋಧಿಗಳು ಶಾಂತಿಯನ್ನು ಬಯಸಿದಲ್ಲಿ (ನಿಜವಾಗಿಯೂ ಅವರಿಗೆ ಶಾಂತಿಯ ಅವಶ್ಯಕತೆ ಇಲ್ಲದೇ, ಸಮಯಸಾಧನೆಗಾಗಿ ಹಾಗೆ ಮಾಡಿದಲ್ಲಿಯೂ ಸಹ, ನೀವು ಶಾಂತಿಯನ್ನು ದಯಪಾಲಿಸಬೇಕು) ಯುದ್ದವನ್ನು ನಿಲ್ಲಿಸಬೇಕು.
 6. ವಿರೋಧಿಗಳು ಆಶ್ರಯವನ್ನು ಬಯಸಿದಲ್ಲಿ, ರಕ್ಷಣಾತ್ಮಕ ಪ್ರದೇಶಕ್ಕೆ ಸ್ಥಳಾಂತರಿಸಬೇಕು. ಇದರಿಂದ ಹಾನಿಗೊಳಗಾಗುವುದಿಲ್ಲ.
 7. ಖುರ್-ಆನ್ ಸಮಯಕ್ಕೆ ತಕ್ಕಂತೆ ಆಧಾರಗಳನ್ನು ನೀಡುತ್ತದೆ. ಹಾಗೆಯೇ ಯುದ್ದದಲ್ಲಿ ಯಾರೂ ಕೂಡ ಹದ್ದನ್ನು ಮೀರಬಾರದೆಂಬ ದೇವರ ಆಜ್ಞೆಯಾಗಿದೆ. ಇದರ ಅರ್ಥ ಯುದ್ದದ ಉದ್ದೇಶ ದಬ್ಬಾಳಿಕೆಯನ್ನು ತಡೆಯುವುದೂ ಹಾಗೆಯೇ ಶಾಂತಿಯನ್ನು ಪ್ರತಿಪಾದಿಸುವುದು ಮಾತ್ರವಾಗಿದೆ.

ಮುಖ್ಯ ಟಿಪ್ಪಣಿ:

ಕೆಲವರು ಗೊತ್ತಿದ್ದೋ ಗೊತ್ತಿಲ್ಲದೆಯೋ ಖುರ್-ಆನ್ ನ  ಆಯಃಗಳನ್ನು(ಸೂಕ್ತಗಳನ್ನು) ಇಸ್ಲಾಮ್ ಭಯೋತ್ಪಾದನೆ ಹಾಗೂ ಹಿಂಸೆಯನ್ನು ಪ್ರಚೋಧಿಸುತ್ತದೆ ಎಂಬ ಯೋಜನೆಯಡಿಯಲ್ಲಿ ಮಾಡಿಕೊಂಡು ಪರಿಸ್ಥಿತಿಗಳನ್ನು ಉಲ್ಲೇಖಿಸದೆ ವಿಷಯಬಾಹಿರವಾಗಿ ವಿವರಿಸುತ್ತಾರೆ. ಎಲ್ಲಾ  ಆಯಃ (ಸೂಕ್ತ)ಗಳು ಮೇಲಿನ ಮೂರು ಶೀರ್ಷಿಕೆಯಡಿಯಲ್ಲೇ ಬರುವಂತಹವುಗಳಾಗಿದೆ. ವಿಷಯಬಾಹಿರ ಉಲ್ಲೇಖಿಸುವುದರಿಂದ ಜನರು ತಪ್ಪಾದ ನಿರ್ಧಾರಗಳಿಗೆ ತಲುಪುತ್ತಾರೆ. ಹೇಗೆ ನಾನು ಪ್ರಾರಂಭದಲ್ಲಿ ಆನಂದನ ತಂದೆಯ ಮಾರ್ಗದರ್ಶನವನ್ನು ವಿವರಿಸಿದ್ದೇನೆಯೋ ಹಾಗೆ!

ಮುಕ್ತಾಯ

 1. ವಿಷಯಬಾಹಿರವಾಗಿ ಉಲ್ಲೇಖಿಸುವುದರಿಂದ ದೃಶ್ಯಕ್ಕೆ ಸಂಪೂರ್ಣವಾಗಿ ಬೇರೆ ಅರ್ಥವನ್ನೇ ನೀಡಬಹುದು.
 2. ಇಸ್ಲಾಮ್ ನ್ಯಾಯ ಹಾಗೂ ಶಾಂತಿಯನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ.
 3. ಇಸ್ಲಾಮ್ ನ್ನು ಪ್ರಚುರಪಡಿಸಲಿಕ್ಕಾಗಿ ಸೇನೆಯನ್ನು ಉಪಯೋಗಿಸುವುದಕ್ಕೆ ಯಾವುದೇ ಆಸ್ಪದವಿಲ್ಲ.
 4. ಇಸ್ಲಾಮ್ ಜೀವನವನ್ನು ಅತೀ ಪವಿತ್ರವೆಂದು ಪರಿಗಣಿಸುತ್ತದೆ. ಮುಗ್ಧರನ್ನು ಕೊಲ್ಲುವುದು ಮಾನವತೆಗೆ ವಿರುದ್ಧವಾದ ಅಪರಾಧವಾಗಿದೆ.
 5. ಗಂಭೀರ ಪರಿಸ್ಥಿತಿಗಳಲ್ಲಿ ಮಾತ್ರ ಅಂದರೆ ದಬ್ಬಾಳಿಕೆ, ನಿರಂಕುಶ ಪ್ರಭುತ್ವ, ಜೀವಹಾನಿ ತಡೆಯಲಿಕ್ಕಾಗಿ ಹಾಗೂ ಶಾಂತಿಯನ್ನು, ನ್ಯಾಯವನ್ನು ಪುನರ್ ಸ್ಥಾಪಿಸಲಿಕ್ಕಾಗಿ ಯುದ್ದವು ಅನುಮತಿಸಲ್ಪಟ್ಟಿದೆ.
 6. ಯಾರು ಮೇಲಿನ ಆಜ್ಞೆಗಳನ್ನು ಅನ್ವಯಿಸಿಕೊಳ್ಳುವುದಿಲ್ಲವೋ, ಅವರು ಖುರ್-ಆನ್ ನ ಅಡಿಯಲ್ಲಿ ಇಸ್ಲಾಮ್ ಅನ್ನು ಅನುಸರಿಸುತ್ತಿಲ್ಲ.

ಇದನ್ನು ನೀವು ಒಪ್ಪಿಕೊಳ್ಳದೆ, ಮಾರ್ಗಭ್ರಷ್ಟತೆ/ಕುಫ್ರ/ಶಿರ್ಕ್/ಬಿದ’ಅ ಎಂಬ ಫತ್ವಾಗಳನ್ನು ಹೊರಡಿಸುದಕ್ಕಿಂತ- ಅಲ್ಲಾಹನ ಮೇಲೆ ಭರವಸೆ ಇರಿಸಿ ಮತ್ತು ತೀರ್ಮಾನವನ್ನು ಅವನಿಗೇ ಬಿಡಿ.

Pin It on Pinterest

error: Alert: Content is protected !!
body { font-family: “Poppins”, sans-serif; }