------------------------------------------------------------------------------------ ------------------------------------------------------------------------------------- --------------------------------------------------------------------------------------------- ---------------------------------------------------------------------------------------------
Want to Learn More(ಹೆಚ್ಚಿನ ಕಲಿಕೆಗಾಗಿ) ... Click Here or Subscribe
ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ? ಭಾಗ-7

ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ? ಭಾಗ-7

ಪ್ರವಾದಿ(ﷺ)ರವರ ಮತ್ತು ಇನ್ನಿತರ ಔಲಿಯಾಗಳ ಜನ್ಮ ದಿನಾಚರಣೆ

ಪ್ರವಾದಿ(ﷺ)ರವರಾಗಲಿ ಸ್ವಹಾಬಿಗಳಾಗಲಿ ಜನ್ಮದಿನಾಚರಣೆಯನ್ನು (ಮಿಲಾದುನ್ನಬಿಯನ್ನು) ಆಚರಿಸಲಿಲ್ಲ. ಪ್ರವಾದಿ(ﷺ) ರವರು ನುಡಿದರು:

(من أحدث في أمرنا ما ليس منه فهو ردٌ (متفق عليه

“ನಮ್ಮ ಕಾರ್ಯದಲ್ಲಿ, ಅದರಲ್ಲಿ ಇಲ್ಲದ್ದನ್ನು ಯಾರಾದರೂ ನೂತನವಾಗಿ ನಿರ್ಮಿಸಿದರೆ ಅದು ತಳ್ಳಬೇಕಾದುದಾಗಿದೆ.’’(ಬುಖಾರಿ, ಮುಸ್ಲಿಂ).ಅರ್ಥಾತ್:

ಅವರ ಚರ್ಯೆಗೆ ನೂತನವಾಗಿನಿರ್ಮಿಸಲ್ಪಟ್ಟವುಗಳು ನವೀನಾಚಾರವೂ ಬಿದ್‍ಅತೂ ಆಗಿದೆ. ಪ್ರವಾದಿ ಜನ್ಮದಿನಾಚರಣೆ ಕಾರ್ಯಕ್ರಗಳಲ್ಲಿ ಸಂಗೀತ ವಾದ್ಯಗಳು ಮತ್ತು ಪ್ರವಾದಿ(ﷺ)ರವರಲ್ಲಿ ನೇರವಾಗಿ ಪ್ರಾರ್ಥಿಸುವ ಶಿರ್ಕ್‍ಗಳಿವೆ.ಅವರಲ್ಲಿ ಸಹಾಯ ಅಪೇಕ್ಷಿಸುವ ಮತ್ತುಅವರ ಜನ್ಮದಿನಾಚರಣೆ ಆಚರಿಸುವ ಮೂಲಕ, ಕ್ರೈಸ್ತರು ಅವರ ಉತ್ಸವಗಳಲ್ಲಿ ಮಾಡುವಂತೆ ಅವರ ಅನುಕರಣೆ ಮಾಡಲಾಗುತ್ತಿದೆ.

ಅಚ್ಚರಿ: ಮೀಲಾದುನ್ನಬಿ ದಿನಾಚರಣೆಗಳಲ್ಲಿ ಒಟ್ಟು ಸೇರುವ ಕೆಲವರಲ್ಲಿ ನಾವು ಕೇಳಿದರೆ: ಅವರು ಹೇಳುತ್ತಾರೆ: ಮೌಲಿದ್‍ನಲ್ಲಿ ನಾವು ಪ್ರವಾದಿ(ﷺ)ರವರನ್ನು ಸ್ಮರಿಸುವುದು ಮತ್ತು ಅವರ ಸೀರತ್(ಚರಿತ್ರೆ) ಪಠಿಸುವುದಾಗಿದೆ. ಅವರಲ್ಲಿ ನನಗೆ ಹೇಳಲಿಕ್ಕಿರುವುದು: ನೀವು ಸಾರ್ವಜನಿಕ ಸಭೆಗಳಲ್ಲೂ, ವೇದಿಕೆಗಳನ್ನೂ ಅವರ ಚರಿತ್ರೆಯನ್ನು ಹೇಳಿರಿ. ವರ್ಷದಲ್ಲೊಮ್ಮೆ ಮಾತ್ರ ಅದಕ್ಕಾಗಿ ನಿಶ್ಚಿತ ಸಮಯವನ್ನು ಯಾಕಾಗಿ ನಿರ್ಧರಿಸುತ್ತೀರಿ.

  ಹಾಗೆಯೇ ರಮದಾನ್ 27ರಂದು ಪ್ರತ್ಯೇಕ ಆಚರಣೆಗಳನ್ನು ಏರ್ಪಡಿಸುವುದು ಬಿದ್‍ಅತಾಗಿದೆ. ಆ ದಿನದಲ್ಲಿ ಪ್ರವಾದಿ ಚರ್ಯೆಯು ಆಚರಣೆಗಳಿಲ್ಲದೆ ಆರಾಧನೆಗಳಾಗಿತ್ತು.ಹಾಗೆಯೇ ಇಸ್ರಾಅï-ಮಿಅïರಾಜ್‍ನ ದಿನವನ್ನು ಆಚರಿಸುವುದೂ ಅನುವದನೀಯವಲ್ಲ. ಅದಕ್ಕೆ ಬೆಂಬಲವಾಗಿ ಯಾವುದೇ ಸ್ವಹೀಹಾದ ಹದೀಸ್‍ಗಳು ವರದಿಯಾಗಿಲ್ಲ. ಹಾಗೆಯೇ ಶಅಬಾನ್ 15ನ್ನು ವೃತಾನುಷ್ಠಿಸುವುದಕ್ಕಾಗಿ ಪ್ರತ್ಯೇಕಿಸುವುದು ಕೂಡಾ ಬಿದ್‍ಅತಿನಲ್ಲೊಳಪಟ್ಟಿದೆ.

ಕೊನೆಯದಾಗಿ:ಮರಣ ಗೊಂಡಿರುವ ಮಯ್ಯತ್‍ನೊಂದಿಗೆ ಮತ್ತು ಖಬರ್‍ನೊಂದಿಗೆ ಪ್ರಾರ್ಥಿಸುವವರೇ, ಅಲ್ಲಾಹೇತರರಿಗೆ ಹರಕೆಗಳನ್ನು ಮತ್ತು ಬಲಿಗಳನ್ನು ಅರ್ಪಿಸುವವರೇ..ನೀೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ?ಎಂದು ನೀವು ನಿಮ್ಮ ಸ್ವಶರೀರದೊಡನೆ ಕೇಳಿರಿ.ನಿರಪೇಕ್ಷನಾದ ಅಲ್ಲಾಹನಿಗೆ ಉತ್ತರಿಸಿರಿ.ಅವನಿಗೆ ಇತರರನ್ನು ಸಹಭಾಗಿಯನ್ನಾಗಿ ಮಾಡುವುದನ್ನು ಅವನು ಇಷ್ಟಪಡುವುದಿಲ್ಲ.

ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ? ಭಾಗ-6

ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ? ಭಾಗ-6

ಸಿಹ್ರ್, ಮಾಟ, ಜೊತಿಷ್ಯ

ಅಲ್ಲಾಹನು ಹೇಳುತ್ತಾನೆ: وَلَا يُفْلِحُ السَّاحِرُ حَيْثُ أَتَىٰ“ಎಲ್ಲೇ ಹೋದರೂಮಾಂತ್ರಿಕನು ಯಶಸ್ಸು ಗೊಳ್ಳಲಾರು’’(ತ್ವಹಾ: 69). ಪ್ರವಾದಿ(ﷺ)ರವರು ಹೇಳಿದರು:

 الشِّرْكُ بِاللَّهِ  وَالسِّحْرُಹಿ: ವಿاجْتَنِبُواالسَّبْعَ الْمُوبِقَاتِ

“ಏಳು ಮಹಾ ಪಾಪಗಳನ್ನು ವರ್ಜಿಸಿರಿ, ಅವುಗಳು:ಒಂದುಶಿರ್ಕ್,ಎರಡು ಸಿಹ್ರ್…’’(ಬುಖಾರಿ)

ಒಮ್ಮೆ ಪಾರ್ಟಿಗಳಲ್ಲಿ ಜನರನ್ನು ತೃಪ್ತಿ ಗೊಳಿಸಲಿಕ್ಕಾಗಿಜಾದುಗಾರರು ಜಾದುಗಳನ್ನು ಮಾಡುತ್ತಿದ್ದರು.ಆ ಸಭೆಗೆ ಅಬೂ ದರ್ರ್(ರ)ರವರು ಪ್ರವೇಶಿಸಿದರು. ಆಗ ಸಾಹಿರ್ ಓರ್ವನ ತಲೆ ಕತ್ತರಿಸಿ ನಂತರ ಪುನಃ ಜೋಡಿಸಿದನು ! ಅಬೂ ದರ್ರ್(ರ) ರವರು ಅವರ ಬಳಿಗೆ ಹೋಗಿ ತಮ್ಮ ಖಡ್ಗದಿಂದ ಆ ಸಾಹಿರ್‍ನ(ಜಾದುಗಾರನ) ತಲೆ ವಿಚ್ಛೇದನ ಮಾಡಿದರು. ನಂತರ ಹೇಳಿದರು: ಈಗ ನೀನು ನಿನ್ನ ತಲೆಯನ್ನು ನಿನ್ನ ದೇಹಕ್ಕೆ ಹಿಂತಿರುಗಿಸಿ ಜೀವ ಗೊಳಿಸು! ನಂತರ ಹೇಳಿದರು:

ಪ್ರವಾದಿ(ﷺ)ರವರು ಹೇಳುವುದನ್ನು ನಾನು ಆಲಿಸಿದ್ದೇನೆ: حَدُّالسَّاحِرِ ضَرْبَةٌ بِالسَّيْفِ  ِ “ಸಾಹಿರ್‍ನ ಅಂತ್ಯವು ಖಡ್ಗದಿಂದ ಹೊಡೆಯುವ ಮೂಲಕವಾಗಿದೆ’’(ತಿರ್ಮಿದಿ, ದಾರಕುತ್ನೀ)

ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ? ಭಾಗ-5

ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ? ಭಾಗ-5

ಅದೃಶ್ಯ ಜ್ಞಾನ

ಅಲ್ಲಾಹನು ಹೇಳಿದರು:

   لَايَعْلَمُ مَنْ فِي السَّمَاوَاتِ وَالْأَرْضِ الْغَيْبَ إِلَّااللَّهُ

“(ಪ್ರವಾದಿಯವರೇ) ಹೇಳಿರಿ, ಭೂಮ್ಯಾಕಾಶದಲ್ಲಿ ಅಲ್ಲಾಹನ ಹೊರತು ಇನ್ನಾರಿಗೂ ಅದೃಶ್ಯ ಜ್ಞಾನವಿಲ್ಲ.’’ ಕೈಲಕ್ಷಣ ನೋಡುವ ಮೂಲಕ, ನಕ್ಷತ್ರದ ಮೂಲಕ ಯಾರಾದರೂ ಅವನಿಗೆ ಅದೃಶ್ಯ ಜ್ಞಾನ ತಿಳಿಯುತ್ತದೆಯೆನ್ನುವವನು ಸುಳ್ಳುಗಾರನೂ ಸತ್ಯನಿಷೇಧಿಯೂ ಆಗಿದ್ದಾನೆ. ಮಾಟಗಾರನು ಕೆಲವೊಮ್ಮೆ ಅದೃಶ್ಯ ಕಾರ್ಯಗಳನ್ನು ಹೇಳುವುದು ಶೈತಾನನ ಸಹಾಯದಿಂದಾಗಿದೆ. ಅದೃಶ್ಯ ವಿಷಯಗಳ ಜ್ಞಾನವಿದೆಯೆನ್ನುತ್ತಾ ಯಾರದಾರೂ ಅದೃಶ್ಯವನ್ನು ಹೇಳಿದರೆ ಮತ್ತು ಅವರು ಹೇಳುವುದರ ಮೇಲೆ ಯಾರಾದರೂ ವಿಶ್ವಸಿಸಿದರೆ ಅವರೆಲ್ಲರೂ ಪಥಭ್ರಷ್ಟರಾಗಿದ್ದಾರೆ.ಮ್ಯಾಗಝೀನ್‍ಗಳಲ್ಲಿ ಜೋತಿಷ್ಯರುಗಳು ಬರೆದ ಇಂತಹ ವಿಷಯಗಳನ್ನು ಓದುವುದು, ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ವಿಚಾರಿಸುವುದು ನಿಷಿದ್ಧವಾಗಿದೆ. ಪ್ರವಾದಿ(ﷺ)ರವರು ಹೇಳಿದರು:

مَنْ أَتَى كَاهِنًافَصَدَّقَهُ بِمَايَقُولُ فَقَدْكَفَرَ بِمَا أُنْزِلَ عَلَى مُحَمَّدٍصَلَّى اللَّهُ عَلَيْهِ وَسَلَّمَ.

“ಯಾರಾದರೂ ಜೊತಿಷ್ಯರನ್ನು ಭೇಟಿಯಾಗಿ ಅವನು ಹೇಳುವುದರ ಮೇಲೆ ವಿಶ್ವಸಿಸಿದರೆ ವಾಸ್ತವದಲ್ಲಿ ಅವನು ಪ್ರವಾದಿ ಮುಹಮ್ಮದ್(ﷺ)ರವರಿಗೆ ಅವತೀರ್ಣವಾಗಿರುವುದರ ಮೇಲೆ ಕುಫ್ರ್ ಕೈ ಗೊಂಡನು’’.

ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ? ಭಾಗ-4

ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ? ಭಾಗ-4

ಮಂತ್ರಿಸಿದ  ತಾಯಿತ ಮತ್ತು ನೂಲು ಕಟ್ಟುವುದು ಶಿರ್ಕ್‍ನಲ್ಲೊಳಪಟ್ಟಿದೆ.

ರೋಗ ಶಮನಕಾಗಿ ಅಥವಾ ಮನುಷ್ಯ ಶರೀರಕ್ಕೆ ಪ್ರವೇಶಿಸಿದ ಜಿನ್ನನ್ನು ಹೊರಗಟ್ಟಲು ತಾಯುತವನ್ನು ಕಟ್ಟುವುದು ಹರಾಮಾಗಿದೆ. ಅದರಲ್ಲಿ ಕುರ್‍ಆನಿನ ಆಯತ್ ಬರೆದಿರುವುದಾದರೂ ಇನ್ನಿತರ ಏನಾದರೂ ಬರೆದಿರುವುದಾದರೂ ಸಮಾನಾವಾಗಿದೆ.(ಉದಾ: ಜಿನ್ನ್‍ನ ಹೆಸರುಗಳು ಅಥವಾ ಮಾಟಗಾರನ ಚಿಹ್ನೆಗಳು).

ಹುದೈಫ(ರ)ರವರು ಒಬ್ಬರ ಕೈಯಲ್ಲಿ ಕಬ್ಬಿಣದ ಬಳೆಯನ್ನು ಕಂಡರು. ಆ ವ್ಯಕ್ತಿಯೊಡನೆ ಅವರು ಕೇಳಿದರು: ನಿನಗೆ ಏನಾಗಿದೆ…? ಇದು ನಿನ್ನರೋಗವನ್ನುವೃದ್ಧಿಸುವುದಲ್ಲದೆ ಇನ್ನೇನೂ ಮಾಡದು. ಇದು ನಿನ್ನ ಶರೀರದಲ್ಲಿರುವ ಸ್ಥಿತಿಯಲ್ಲಿ ನೀನು ಮರಣ ಗೊಂಡರೆ ನೀನು ಎಂದಿಗೂ ಯಶಸ್ಸು ಗೊಳ್ಳಲಾರೆ.ಖುರ್‍ಆನ್ ಆಯತ್‍ಗಳನ್ನು ದುಆಗಳನ್ನು ಚಿಕತ್ಸಾರ್ಥ(ರುಕಿಯ್ಯ) ರೋಗಿಯ ಮೇಲೆ ಓದುವುದು ಖುರ್‍ಆನ್ ಮತ್ತು ಹದೀಸ್‍ನಿಂದ ದೃಢೀಕರಿಸಲ್ಪಟ್ಟಿದೆ. (ಅನುವದನೀಯವಾಗಿದೆ) ಆದರೆ ಚಿಕಿತ್ಸಾರ್ಥ ಜಿನ್ನ್‍ಗಳ ಮತ್ತು ಸ್ವಾಲಿಹೀನ್‍ಗಳ ಹೆಸರುಗಳನ್ನುಬರೆದು ತಾಯಿತವಾಗಿ ಕಟ್ಟುವುದು ಮತ್ತು ರೋಗ ಶಮನಕ್ಕಾಗಿ ಅಲ್ಲಾಹೇತರರಲ್ಲಿ ಪ್ರಾರ್ಥಿಸುವುದು ಶಿರ್ಕಾಗಿದೆ.

ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ? ಭಾಗ-3

ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ? ಭಾಗ-3

ಖಬರ್‍ನೊಂದಿಗೆ ಅಂಟಿ ಕೊಂಡಿರುವವರಿಗೆ ನನಗೆ ಕೇಳಲಿಕ್ಕಿರುವುದು

  1. ಸ್ವಹಾಬಿಗಳು ಖಬರನ್ನು ಎತ್ತರಿಸಿ ಕಟ್ಟಿದ್ದರೇ ಅಥವಾ ಖಬರ್‍ನೊಳಗಿರುವವರೊಂದಿಗೆ ಪ್ರಾರ್ಥಿಸಿದ್ದರೇ ?
  2. ಅವರು ಪ್ರವಾದಿ(ﷺ)ರವರ ಖಬರಿನ ಬಳಿ ನಿಂತು ಪ್ರಾರ್ಥಿಸಿದ್ದರೇ ಅಥವಾ ಶಫಾಅತನ್ನು ಕೇಳಿದ್ದರೇ?
  3. ರಿಫಾಈ, ದಸೂಖೀ, ಜೀಲಾನೀ, ಬದವೀ ಮೊದಲಾದವರುಗಳ ಖಬರುಗಳು ಅಂಬಿಯಾಗಳ ಖಬರ್‍ಗಳಿಗಿಂತ ತವಸ್ಸುಲ್ ಮಾಡಲು ಶ್ರೇಷ್ಠತೆ ಮತ್ತು ಮಾನ್ಯತೆಯಿರುವುದೇ?

ಮದೀನಾದಲ್ಲಿ ಉಮರ್(ರ)ರವರ ಖಿಲಾಫತಿನ ಕಾಲದಲ್ಲಿ ಸ್ವಹಾಬಿಗಳ ವಿಶ್ವಾಸವನ್ನು ನೋಡಿರಿ: ಮಳೆ ಬರದೆ ಬರಗಾಲವುಂಟಾದಾಗ ಅವರು ಮಳೆಗಾಗಿರುವ ನಮಾಝ್ ನಿರ್ವಹಿಸಲು ಹೊರಟರು. ಉಮರ್(ರ)ರವರು ಪ್ರಾರ್ಥಿಸಿದರು: ಪ್ರವಾದಿ(ﷺ)ರವರ ಕಾಲದಲ್ಲಿ ಮಳೆ ಬರದೆ ಬರಗಾಲ ಉಂಟಾದರೆ ಪ್ರವಾದಿ(ﷺ)ರವರ ಪ್ರಾರ್ಥನೆಯ ಮೂಲಕ(ಪ್ರವಾದಿ(ﷺ)ರವರೊಂದಿಗೆ ಅಲ್ಲಾಹನಲ್ಲಿ ಪ್ರಾರ್ಥಿಸಲು ಹೇಳುವ ಮೂಲಕ) ನಾವು ತವಸ್ಸುಲ್ ಮಾಡುತ್ತಿದ್ದೆವು, ಆಗ ನೀನು ನಮಗೆ ಮಳೆ ಸುರಿಸುತ್ತಿದ್ದೆ. ಈಗ ನಾವು ಪ್ರವಾದಿ(ﷺ)ರವರ ನಿಕಟವರ್ತಿಯಾದ(ಅಮ್ಮ್) ಅಬ್ಬಾಸ್(ರ)ರವರ ಪ್ರಾರ್ಥನೆಯ ಮೂಲಕ ತವಸ್ಸುಲ್ ಮಾಡುತ್ತಿದ್ದೇವೆ. ಅದರ ಬಳಿಕ ಉಮರ್(ರ)ರವರು ಅಬ್ಬಾಸ್(ರ)ರವರೊಡನೆ ಏಳಿರಿ ಅಲ್ಲಾಹನಲ್ಲಿ ಮಳೆಗಾಗಿ ಪ್ರಾರ್ಥಿಸಿರಿ ಎಂದರು. ಅಬ್ಬಾಸ್(ರ)ರವರು ಎದ್ದು ಪ್ರಾರ್ಥಿಸಿದರು. ಆ ಪ್ರಾರ್ಥನೆಯ ಮೂಲಕವಾಗಿದೆ ಮಳೆ ಬಂದಿರುವುದೆಂದು ಅವರು ವಿಶ್ವಸಿಸಿದರು. ಅವರಿಗೇನಾದರೂ ಆವಶ್ಯಕತೆಯುಂಟಾದಾಗ ಬಳಿಯಲ್ಲೇ ಇದ್ದ ಪ್ರವಾದಿ(ﷺ)ರವರ ಖಬರಿನ ಬಳಿಗೆ ತೆರಳುತ್ತಿರಲಿಲ್ಲ. ಅಲ್ಲಾಹನ ರಸೂಲರೇ, ನಮಗೆ ಅಲ್ಲಾಹನ ಬಳಿ ಶಫಾಅತ್ ಮಾಡಿರಿ ಎಂದೂ ಅವರು ಪ್ರಾರ್ಥಿಸುತ್ತಿರಲಿಲ್ಲ. ಪ್ರವಾದಿ(ﷺ)ರವರ ಪವಿತ್ರ ಮೃತದೇಹವಾದರೂ ಸರಿಯೇ ಮಯ್ಯತ್‍ನೊಂದಿಗೆ ಪ್ರಾರ್ಥಿಸುವುದು ಅನುವದನೀಯವಲ್ಲ ಎಂದು ಅವರು ಸ್ಪಷ್ಟವಾಗಿ ತಿಳಿದಿದ್ದರು. ಅವರಿಗೇನಾದರೂ ಆವಶ್ಯಕತೆಗಳಿದ್ದರೆ ನೇರವಾಗಿ ಭೂಮ್ಯಾಕಾಶಗಳ ಪರಿಪಾಲಕನಾದ ಅಲ್ಲಾಹನಲ್ಲಿ ಕೇಳುತ್ತಿದ್ದರು.

ಹಲವು ಜನರ ದುರಾವಸ್ಥೇಯೇ, ಖಬರಿನೊಳಗಿರುವವರಿಂದ ಕಾರುಣ್ಯವನ್ನು ಕೇಳುತ್ತಾರೆ, ಅವರಲ್ಲಿ ಶಫಾಅತನ್ನು ಬೇಡಲಿಕ್ಕಾಗಿ ಅವರಿಗೆ ಅಲ್ಲಾಹನ ಬಳಿ ಜಾಹ್ ಇದೆ ಎನ್ನುತ್ತಾರೆ. ಅಲ್ಲಾಹನು ಅಂಬಿಯಾ ಔಲಿಯಾಗಳಿಗೆ,ಪರಲೋಕದಲ್ಲಿ ಶಫಾಅತ್ ಮಾಡಲು ಅನುಮತಿ ಕೊಡುವನು.ಆದರೆ ಅದಕ್ಕಾಗಿ ಅವರೊಂದಿಗೆ ಪ್ರಾರ್ಥಿಸುವುದನ್ನು ಮತ್ತು ಕೇಳುವುದನ್ನು ಇಸ್ಲಾಮ್ ವಿರೋಧಿಸಿದೆ.ಹಾಗೆಯೆ ಅವರ ಹೆಸರಿನಲ್ಲಾಗಲಿ ಅಥವಾ ಕಅಬಾದ ಹೆಸರಿನಲ್ಲಾಗಲಿ ಆಣೆ ಹಾಕುವುದನ್ನೂ ವಿರೋಧಿಸಿದೆ. ಅಮಾನತ್‍ನ ಹೆಸರಿನಲ್ಲಾಗಲಿ ಅಥವಾ ಜೀವಿಸುತ್ತಿರುವ ಯಾವುದಾದರೂ ವ್ಯಕ್ತಿಯ ಹೇಸರಿನಲ್ಲಾಗಲಿ ಪ್ರವಾದಿ(ﷺ)ರವರ ಜಾಹ್‍ನ ಹೆಸರಿನಲ್ಲಾಗಲಿ ಆಣೆ ಹಾಕುವುದು ಅನುವದನೀಯವಲ್ಲ. ಅಲ್ಲಾಹನ ಹೊರತು ಇತರ ಯಾರೊಬ್ಬರ ಹೆಸರಿನಲ್ಲಿ ಆಣೆ ಹಾಕಿದರೆ ಅದು ಸಹೀಹಾಗದು. ಪ್ರವಾದಿ(ﷺ)ರವರು ನುಡಿದರು:

 (ಅಬೂದಾವೂದ್) مَنْ حَلَف  بِغَيْرِاللَّهِ فَقَدْ أَشْرَكَ

“ಯಾರಾದರೂ ಅಲ್ಲಾಹೇತರರ ಹೆಸರಿನಲ್ಲಿ ಆಣೆ ಹಾಕಿದರೆ ಖಂಡಿತ ಅವನು ಶಿರ್ಕೆಸಗಿದನು’’ ಯಾರಾದರೂ ಮರೆತು ಅಲ್ಲಾಹೇತರರ ಹೆಸರಿನಲ್ಲಿ ಆಣೆ ಹಾಕಿದರೆ ಕೂಡಲೇ ಅವನು ಲಾ ಇಲಾಹ ಇಲ್ಲಲ್ಲಾಹ್ ಎಂದು ಹೇಳಬೇಕು.

ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ? ಭಾಗ-2

ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ? ಭಾಗ-2

ಶಿರ್ಕ್‍ನ ವಿವಿಧ ಮುಖಗಳು

1. ಖಬರ್‍ನಲ್ಲಿ ಧಫನ್ ಮಾಡಲ್ಪಟ್ಟವರಲ್ಲಿ ಪ್ರಾರ್ಥಿಸುವುದು.

2. ಖಬರ್‍ನಲ್ಲಿ ದಫನ್ ಮಾಡಲ್ಪಟ್ಟವರ ಹೆಸರಿನಲ್ಲಿ, ಜಿನ್ನಗಳ ಹೆಸರಿನಲ್ಲಿ ಮತ್ತು ಅಂಬಿಯಾಗಳ ಹೆಸರಿನಲ್ಲಿ ಬಲಿಯರ್ಪಿಸುವುದು.

3. ಅವರು ಉಪದ್ರವ ಮತ್ತು ರೋಗವನ್ನು ತರುವರು ಎಂದು ಅವರನ್ನು ಭಯಪಡುವುದು.ಖಬರ್ ಝಿಯಾರತ್ ಮಾಡಿದಾಗ ಖಬರಿನೊಳಗಿರುವವರಿಗಾಗಿ ಪ್ರಾರ್ಥಿಸಬೇಕು.

ಪ್ರವಾದಿ(ﷺ)ರವರು ಹೇಳಿದರು:زُورُواالْقُبُورَ؛فَإِنَّهَاتُذَكِّرُكُمُ،الآخِرَةَ.(ನೀವು ಖಬರ್ ಸಂದರ್ಶಿಸಿರಿ, ಅದು ನಿಮ್ಮಲ್ಲಿ ಪರಲೋಕದ ನೆನಪನ್ನುಂಟು ಮಾಡುತ್ತದೆ) ಖಬರಿನೊಳಗಿರುವವರಲ್ಲಿ ಪ್ರಾರ್ಥಿಸುವುದು, ಅವರ ಹೆಸರಿನಲ್ಲಿ ಬಲಿಯರ್ಪಿಸುವುದು, ಅವರಿಂದ ಬರ್ಕತನ್ನು ಆಗ್ರಹಿಸುವುದು ಶಿರ್ಕಾಗಿದೆ.ಅದು ಅಂಬಿಯಾಗಳ ಖಬರಾಗಿರಲಿ ಔಲಿಯಾಗಳ ಖಬರಾಗಿರಲಿ ಸಮಾನವಾಗಿದೆ. ಅವಿವೇಕಿಗಳು; ಹುಸೈನ್(ರ), ಬದವಿ ಮತ್ತು ಜೀಲಾನಿಯವರ ಖಬರ್‍ನ ಬಳಿಯಲ್ಲಿ ಪ್ರಾರ್ಥನೆ ಮತ್ತು ಇಸ್ತಿಗಾಸಗಳನ್ನು ಮಾಡುವಂತೆ. ಇವುಗಳೆಲ್ಲವೂ ಮಿಥ್ಯವಾಗಿದೆ.ಅವರಿಂದ ಯಾವುದೇ ಉಪಕಾರವನ್ನಾಗಲಿ ಉಪದ್ರವವನ್ನಾಗಲಿ ತರಲು ಸಾಧ್ಯವಿಲ್ಲ. ಖಬರಿನೊಳಗಿರುವ ಮರಣ ಗೊಂಡವರು ನಿಮಗೆ ಹೇಗೆ ಸಹಾಯ ಮಾಡಲು ಸಾಧ್ಯ?ಅವರಿಗೆ ಅವರ ಸ್ಥಿತಿಯನ್ನೇ ಬದಲಿಸಲು ಸಾಧ್ಯವಾಗುತ್ತಿಲ್ಲ. ಹಾಗಿರುವವರಲ್ಲಿ ನಿಮ್ಮ ಸ್ಥಿತಿಯನ್ನು ಬದಲಿಸಲುಕೇಳುತ್ತಿದ್ದೀರಾ?!!

ಮರಣ ಹೊಂದಿದವರಲ್ಲಿ ಪ್ರಾರ್ಥಿಸುತ್ತಿರುವವರೊಡನೆ ನನ್ನ ಉಪದೇಶ: ಅವರ ಬಳಿಯಲ್ಲಿ ಅಳುವವರೇ ಮತ್ತುಅವರಿಂದ ಶಫಾಅತನ್ನುಆಗ್ರಹಿಸುವವರೇ,ಅವರು ನಿಮ್ಮಿಂದ ಮರಣ ಗೊಂಡವರು,ಅವರು ನಿಮ್ಮ ಪ್ರಾರ್ಥನೆಯನ್ನು ಆಲಿಸುವರೇ ಅಥವಾ ನಿಮಗೇನಾದರೂ ಉಪಕಾರವನ್ನು ಮಾಡುವರೇ? ಇಲ್ಲ, ಅವರು ನಿಮ್ಮ ಪ್ರಾರ್ಥನೆಯನ್ನು ಆಲಿಸಲಾರರು ಮತ್ತು ನಿಮಗೆ ಯಾವುದೇ ಉಪಕಾರವನ್ನೂ ಮಾಡಲಾರರು.

ಇಂದಿನ ಕಾಲದಲ್ಲಿ ದೇವಾಲಯಗಳು ಮತ್ತು ಕಟ್ಟಡಗಳುಕಟ್ಟಲ್ಪಟ್ಟ ಖಬರ್‍ಗಳು ಹರಡಿ ಕೊಂಡಿವೆ. ಕೆಲವರು ಅವುಗಳಿಗೆ ಹರಕೆಗಳನ್ನು ಅರ್ಪಿಸಿ ಅವುಗಳಿಂದ ಸಾಮಿಪ್ಯವನ್ನು ಆಗ್ರಹಿಸುತ್ತಾರೆ.ಇನ್ನು ಕೆಲವರು ಅವುಗಳಿಗೆ ತ್ವವಾಫ್ ಮಾಡುತ್ತಾರೆ ಮತ್ತು ಬೇಡಿಕೆಗಳನ್ನು ಅವುಗಳ ಮುಂದಿಡುತ್ತಾರೆ.

ಖೈರೋದಲ್ಲಿ ಸಯ್ಯದ್ ಹುಸೈನ್, ಸಯ್ಯಿದಃ ಝೈನಬ್, ಆಇಶಾ, ಸಕೀನಃ ಮತ್ತು ನಫೀಸರ ದರ್ಗಾಗಳಿವೆ ಹಾಗೂ ಇಮಾಮ್ ಶಾಫಿಈ, ದಸೂಖಿ, ಶಾದಿಲೀ, ಬದವಿ ಮೊದಲಾದವರ ಖಬರ್‍ನ ಮೇಲೆ ದರ್ಗಾಗಳನ್ನು ನಿರ್ಮಿಸಲಾಗಿದೆ.ಬದವಿಯವರ ದರ್ಗಾದಲ್ಲಿ ಕೆಲವೊಮ್ಮೆ ಹಜ್ಜ್‍ನ ಸಂದರ್ಭದಂತೆ ನೂಗು ನುಗ್ಗಲು ಉಂಟಾಗುತ್ತದೆ.ಜಲಾಲುದ್ದೀನ್ ರೂಮಿಯವರ ಖಬರಿನ ಮೇಲೆ ಈ ರೀತಿ ಬರೆದಿಡಲಾಗಿದೆ: صَالِح لِلْأدْيَان الثَّلاَثَة (ಮೂರು ಧರ್ಮದವರಿಗಾಗಿರುವ ಸಜ್ಜನರು) ಅರ್ಥಾತ್: ಮುಸ್ಲಿಮ್, ಯಹೂದಿ ಮತ್ತು ಕ್ರೈಸ್ತರು.

ದಮಸ್ಕಸ್‍ನ ಅಮವೀ ಮಸೀದಿಯಲ್ಲಿ ಯಹ್‍ಯಾ(ರ)ರವರ ದರ್ಗಾವಿದೆ. ಇನ್ನೊಂದು ಬದಿಯಲ್ಲಿ ಸ್ವಲಾಹುದ್ದೀನ್‍ರವರ ಮತ್ತು ಇಮಾದುದ್ದೀನ್ ಝಂಕಿರವರ ಖಬರಿದೆ.

ತುರ್ಕಿಯಲ್ಲಿ 481 ಜುಮುಅ ಮಸೀದಿಗಳಲ್ಲಿ ಹೆಚ್ಚಿನವುಗಳೊಂದಿಗೆ ಖಬರ್‍ಗಳು ಸೇರಿ ಕೊಂಡಿವೆ. ಅಲ್‍ಖಸ್ತಂತೀನಿಯಾದಲ್ಲಿ ಅಬೂ ಅಯ್ಯೂಬರ ಖಬರಿನ ಮೇಲೆ ಭದ್ರವಾದ ಆರಾಧನಾಲಯವನ್ನು ಕಟ್ಟಲಾಗಿದೆ.

ಬಗ್ದಾದ್‍ನಲ್ಲಿ 150 ಜುಮುಅ ಮಸೀದಿಗಳಲ್ಲಿ ಹೆಚ್ಚಿನವುಗಳೊಂದಿಗೆ ಖಬರ್‍ಗಳು ಸೇರಿ ಕೊಂಡಿವೆ.ಮೂಸ್ವಲ್‍ನಲ್ಲಿ (ಇರಾಕ್‍ನೊಂದು ಪಟ್ಟಣ) 76 ದರ್ಗಾಗಳು ಜುಮುಅ ಮಸೀದಿಗಳೊಳಗಿವೆ.

ಪ್ರವಾದಿ(ﷺ)ರವರು ಈ ವಿಷಯದಲ್ಲಿ ನುಡಿದ ನುಡಿಮುತ್ತನ್ನು ನೋಡಿರಿ:

لَعَنَاللَّهُ قَوْمًااتَّخَذُواقُبُورَأَنْبِيَائِهِمْ مَسَاجِدَ

“ಅವರ ಅಂಬಿಯಾಗಳ ಖಬರನ್ನು ಆರಾಧನಾಲಯವನ್ನಾಗಿಮಾಡಿದ ಜನತೆಯ ಮೇಲೆ ಅಲ್ಲಾಹನ ಶಾಪವಿದೆ.’’(ನಸಾಈ, ಅಹ್ಮದ್)

ಪ್ರವಾದಿ(ﷺ)ರವರು ಖಬರಿನ ಮೇಲೆ ಗಾರೆ ಹಚ್ಚುವುದನ್ನು, ಕುಳಿತು ಕೊಳ್ಳುವುದನ್ನು, ಕಟ್ಟಡ ಕಟ್ಟುವುದನ್ನು ಮತ್ತು ಬರೆಯುದನ್ನು ವಿರೋಧಿಸಿದ್ದಾರೆ. ಹಾಗೆಯೇ ಖಬರ್‍ನ ಮೇಲೆ ಮಸೀದಿ ಕಟ್ಟುವುದನ್ನು ಮತ್ತು ಅದರ ಮೇಲೆ ಬೆಳಕು ಇಡುವುದನ್ನೂ ಅವರು ವಿರೋಧಿಸಿದ್ದಾರೆ. ಸ್ವಹಾಬಿಗಳಾಗಲಿ ಅವರನ್ನು ಹಿಂಬಾಲಿಸಿದವರಾಗಲಿ ಖಬರ್‍ಗಳ ಮೇಲೆ ಮಸೀದಿಗಳನ್ನು ಕಟ್ಟಲೇ ಇಲ್ಲ. ಹೀಗಿರುವಾಗ ಆ ಮೂಲಕ ಜನರು ದಾರಿತಪ್ಪಿರುವುದು ಅಚ್ಚರಿ ಮೂಡಿಸುತ್ತಿದೆ.ಹೆಚ್ಚಿನ ದರ್ಗಾಗಳು(ಖಬರ್‍ಗಳು) ಸುಳ್ಳು ದರ್ಗಾಗಳಾಗಿವೆ. ಖೈರೋದಲ್ಲಿ ಹುಸೈನ(ರ)ರ ಹೆಸರಿನಲ್ಲಿ ಖಬರಿದೆ, ಅದರಿಂದ ಜನರು ಸಾಮಿಪ್ಯವನ್ನು ಆಗ್ರಹಿಸುತ್ತಿದ್ದಾರೆ. ಅವರ ಹೆಸರಿನಲ್ಲಿ ಅಸ್ಕಲಾನ್(ಫಲಸ್ತೀನಲ್ಲಿರುವೊಂದು ಊರು)ನಲ್ಲೂ, ಮದೀನಾ ಮುನವ್ವರದಲ್ಲೂ ಖಬರಿದೆ!! ಡಮಸ್ಕಸ್‍ನಲ್ಲಿ, ಇರಾಕ್‍ನಲ್ಲಿರುವ ಅಲ್‍ಹನ್ನಾನದಲ್ಲಿ, ಕರ್ಬಲಾದಲ್ಲಿ ಮತ್ತು ನಜ್‍ಫ್‍ನಲ್ಲಿ ಹುಸೈನ್(ರ)ರವರ ಹೆಸರಿನಲ್ಲಿ ಖಬರಿದೆ.(ಇಲ್ಲಿ ಇವರ ಪಿತರ ಖಬರ್ ಇದೆಯೆಂದೂ ಹೇಳಲಾಗುತ್ತಿದೆ). ಇರಾಖ್‍ನ ನಜ್‍ಫ್‍ನಲ್ಲಿ ಅಲೀ(ರ)ರವರ ಹೆಸರಿನಲ್ಲಿ ಅರಿಯಲ್ಪಡುವ ಗೋರಿ ಸುಳ್ಳು ಗೋರಿಯಾಗಿದೆ….ಬಸ್ವರ(ಇರಾಕಿನಲ್ಲಿರುವೊಂದು ಪಟ್ಟಣ)ದಲ್ಲಿ ಅಬ್ದುರ್ರಹ್ಮಾನ್ ಇಬ್ನ್ ಔಫ್(ﷺ)ರವರ ಹೆಸರಿನಲ್ಲಿ ಖಬರಿದೆ. ಆದರೆ ಅವರು ಮದೀನಾದಲ್ಲಿ ವಫಾತಾಗಿ ಅವರನ್ನು ಬಖೀಅದಲ್ಲಿ ದಫನ್ ಮಾಡಲ್ಪಟ್ಟಿದೆ ಎಂಬ ವಾದವೂ ಇದೆ.ಅಲೀರ ಮಗಳು ಝೈನಬ್‍ರವರು ಮದೀನಾದಲ್ಲಿ ವಫಾತಾಗಿ ಬಖೀಅದಲ್ಲಿ ದಫನ್ ಮಾಡಲ್ಪಟ್ಟಿದೆ, ಆದರೆ ಅವರ ಹೆಸರಿನಲ್ಲಿ ಶಿಯಾಗಳು ಡಮಸ್ಕಸ್‍ನಲ್ಲಿಖಬರ್ ನಿರ್ಮಿಸಿದ್ದಾರೆ.ಹಾಗೆಯೇ ಖೈರೋದಲ್ಲೂ ಅವರ ಹೆಸರಿನಲ್ಲಿ ಖಬರಿದೆ. ವಾಸ್ತವದಲ್ಲಿ ಅವರು ಈಜಿಪ್ಟ್‍ಗೆ ಪ್ರವೇಶಿಸಲೇ ಇಲ್ಲ!!

ಶಾಮ್‍ನಲ್ಲಿ ಪ್ರವಾದಿ(ﷺ)ರವರ ಹೆಣ್ಮಕ್ಕಳಾದ ಉಮ್ಮು ಕುಲ್ಸೂಮ್(ರ) ಮತ್ತು ರುಕಿಯ್ಯ(ರ)ರವರ ಹೆಸರಿನಲ್ಲಿ ಖಬರಿದೆ. ಅವರಿಬ್ಬರು ಉಸ್ಮಾನ್(ರ)ರವರ ಪತ್ನಿಯಂದಿರುಗಳು. ವಾಸ್ತವದಲ್ಲಿ ಅವರುಮದೀನಾದಲ್ಲಿ ವಫಾತಾಗಿ ಅವರನ್ನುಬಖೀಅದಲ್ಲಿ ದಫನ್ ಮಾಡಲ್ಪಟ್ಟಿದೆ. ಶಾಮ್(ಸಿರಿಯಾ)ನಲ್ಲಿ ದಿಮಶ್ಕ್ ಜುಮುಅ ಮಸೀದಿಯಲ್ಲಿ ಹೂದ್(ರ)ರವರಖಬರಿದೆ.

ಆದರೆ ಹೂದ್(ರ)ರವರು ಶಾಮಿಗೆ ಪ್ರವೇಶಿಸಲೇ ಇಲ್ಲ. ಅವರದೇ ಹೆಸರಿನಲ್ಲಿ ಯಮನಿನ ಹದರಮೌತ್‍ನಲ್ಲೂಖಬರಿದೆ ! ಹಾಗೆಯೇ ಹದರಮೌತ್‍ನಲ್ಲಿ ಸ್ವಾಲಿಹ್(ರ)ರವರ ಖಬರ್ ಇದೆಯೆಂದೂ ಅವರು ವಾದಿಸುತ್ತಾರೆ. ಆದರೆ ಅವರು ವಾಪಾತಾಗಿರುವುದು ಹಿಜಾಝ್‍ನಲ್ಲಾಗಿದೆ. ಅವರದೇ ಹೆಸರಿನಲ್ಲಿ ಫಲಸ್ತೀನ್‍ನ ಯಾಫಾದಲ್ಲೂ ಖಬರಿದೆ !

Pin It on Pinterest

error: Alert: Content is protected !!
body { font-family: “Poppins”, sans-serif; }