------------------------------------------------------------------------------------ ------------------------------------------------------------------------------------- --------------------------------------------------------------------------------------------- ---------------------------------------------------------------------------------------------
Want to Learn More(ಹೆಚ್ಚಿನ ಕಲಿಕೆಗಾಗಿ) ... Click Here or Subscribe

ಸ್ವರ್ಗದಲ್ಲಿ ಮಹಿಳೆಯರ ಸ್ಥಿತಿ / أحوال النساء في الجنة

بِسْمِ اللهِ الرَّحْمـَنِ الرَّحِيم

ಸ್ವರ್ಗದಲ್ಲಿ ಮಹಿಳೆಯರ ಸ್ಥಿತಿ ಹೇಗಿರುತ್ತದೆ? ಅಲ್ಲಿ ಅವರಿಗೋಸ್ಕರ ಏನೆಲ್ಲ ಸಿದ್ಧಗೊಂಡಿರುತ್ತದೆ?

ಜನರಲ್ಲಿ ಹೆಚ್ಚಿನವರು (ವಿಶೇಷವಾಗಿ ಮಹಿಳೆಯರು) ಇಂತಹ ಪ್ರಶ್ನೆಗಳನ್ನು ಪುನರಾವರ್ತಿಸಿ ಕೇಳುತ್ತಾರೆ. ಆದ್ದರಿಂದ ಇವರ ಪ್ರಶ್ನೆಗಳಿಗೆ ಉತ್ತರವಾಗಿ ಕುರ್‍ಆನ್ ಮತ್ತು ಸುನ್ನತ್ತಿನಿಂದ ಹಾಗೂ ಉಲಮಾಗಳ ಮಾತುಗಳಿಂದ ನಾನು ಈ ಕೆಳಗಿನದ್ದನ್ನು ಹೇಳಲು ಇಚ್ಛೆ ಪಡುತ್ತೇನೆ.

• ಸ್ವರ್ಗದಲ್ಲಿ ತಮಗೆ ಏನೆಲ್ಲ ಪ್ರತಿಫಲಗಳು ಮತ್ತು ಅನುಗ್ರಹಗಳು ಸಿಗಲಿವೆ ಎಂದು ಮಹಿಳೆಯರು ಪ್ರಶ್ನಿಸಬಾರದೆಂದು ಕೆಲವರು ಹೇಳುತ್ತಾರೆ. ಇದು ತಪ್ಪು. ಯಾಕೆಂದರೆ ಮನುಷ್ಯನು ಯಾವಾಗಲೂ ತನ್ನ ಭವಿಷ್ಯದ ಬಗ್ಗೆ ಮತ್ತು ಭಾವೀ ಜೀವನದ ಬಗ್ಗೆ ಚಿಂತಿತನಾಗಿರುತ್ತಾನೆ. ಸ್ವರ್ಗ ಜೀವನವು ಕೂಡ ಮನುಷ್ಯನ ಭಾವೀ ಜೀವನವಾಗಿದೆ.

ಮಾತ್ರವಲ್ಲ, ಸ್ವರ್ಗದ ಬಗ್ಗೆ ಮತ್ತು ಅಲ್ಲಿ ಲಭ್ಯವಾಗಲಿರುವ ಅನುಗ್ರಹಗಳ ಬಗ್ಗೆ ಸಹಾಬಾ ಕಿರಾಮ್ ಪ್ರವಾದಿ(ﷺ)ರೊಂದಿಗೆ ಕೇಳಿದ್ದರು. ಆಗ ಪ್ರವಾದಿ(ﷺ)ರವರು ಅದನ್ನು ವಿರೋಧಿಸಲಿಲ್ಲ. ಬದಲಾಗಿ ಅವರಿಗೆ ಅರ್ಥವಾಗುವ ರೀತಿಯಲ್ಲಿ ಉತ್ತರ ಕೊಟ್ಟಿದ್ದರು.

ಉದಾಹರಣೆಗೆ ಸಹಾಬಾಗಳು ಕೇಳಿದರು:

يَا رَسُولَ اللَّهِ، الْجَنَّةُ مَا بِنَاؤُهَا؟

“ಓ ಅಲ್ಲಾಹನ ರಸೂಲರೇ, ಸ್ವರ್ಗವನ್ನು ಯಾವುದರಿಂದ ನಿರ್ಮಿಸಲಾಗಿದೆ?”

ಆಗ ಪ್ರವಾದಿ(ﷺ)ರವರು ಹೇಳಿದರು:

 لَبِنَةٌ مِنْ ذَهَبٍ وَلَبِنَةٌ مِنْ فِضَّةٍ

“ಚಿನ್ನದ ಇಟ್ಟಿಗೆ ಮತ್ತು ಬೆಳ್ಳಿಯ ಇಟ್ಟಿಗೆಗಳು.” [ಅದ್ದಾರಿಮೀ]

ಇನ್ನೊಮ್ಮೆ ಅವರು ಕೇಳಿದರು:

يَا رَسُولَ اللَّهِ، هَلْ نَصِلُ إِلَى نِسَائِنَا فِي الْجَنَّةِ؟

“ಓ ಅಲ್ಲಾಹನ ರಸೂಲರೇ, ಸ್ವರ್ಗದಲ್ಲಿ ನಾವು ನಮ್ಮ ಪತ್ನಿಯರೊಂದಿಗೆ ಸೇರುವೆವೇ?”

ಆಗ ಪ್ರವಾದಿ(ﷺ)ರವರು ಹೌದೆಂದು ಹೇಳಿದರು. [ಸಿಲ್ಸಿಲತು ಸ್ಸಹೀಹಃ]

• ಸ್ವರ್ಗದ ಬಗ್ಗೆ ಮತ್ತು ಅದರಲ್ಲಿರುವ ಅನುಗ್ರಹಗಳ ಬಗ್ಗೆ ಕೇಳುವಾಗ ಸ್ವಾಭಾವಿಕವಾಗಿಯೂ ಮನುಷ್ಯನ ಮನಸ್ಸು -ಅವನು ಪುರುಷನಾಗಿದ್ದರೂ, ಮಹಿಳೆಯಾಗಿದ್ದರೂ- ಅದನ್ನು ಆಸೆಪಡುತ್ತದೆ. ಆದರೆ ಇದು ಕೇವಲ ಒಂದು ಆಸೆಪಡುವ ವಸ್ತುವಾಗಿ ಬಾಕಿಯಾಗಬಾರದು. ಬದಲಾಗಿ ಆ ಅಸೆಯನ್ನು ಈಡೇರಿಸುವುದಕ್ಕಾಗಿ ನಾವು ಸತ್ಕರ್ಮಗಳನ್ನು ಮಾಡಬೇಕಾಗಿದೆ.

ಅಲ್ಲಾಹು ತಆಲಾ ಹೇಳುತ್ತಾನೆ:

﴿ وَتِلْكَ الْجَنَّةُ الَّتِي أُورِثْتُمُوهَا بِمَا كُنْتُمْ تَعْمَلُونَ ﴾

“ನೀವು ಮಾಡಿರುವ ಕರ್ಮಗಳ ಕಾರಣದಿಂದಾಗಿ ನಿಮಗೆ ಆ ಸ್ವರ್ಗವನ್ನು ನೀಡಲಾಗಿದೆ.” [ಕುರ್‍ಆನ್ 43:72]

ಆದ್ದರಿಂದ ಸ್ವರ್ಗದ ಬಗ್ಗೆ ಆಸೆಪಡುವುದರ ಜೊತೆಗೆ ಅದನ್ನು ಕರ್ಮಗಳ ಮೂಲಕ ನಿಜಪಡಿಸಬೇಕಾಗಿದೆ.

• ಸ್ವರ್ಗದಲ್ಲಿರುವ ಅನುಗ್ರಹಗಳು ಪುರುಷರಿಗೆ ಮಾತ್ರ ಸೀಮಿತವಲ್ಲ. ಅದನ್ನು ಮುತ್ತಕೀಗಳಿಗಾಗಿ ಸಿದ್ಧಗೊಳಿಸಲಾಗಿದೆಯೆಂದು ಅಲ್ಲಾಹು ಹೇಳಿದ್ದಾನೆ. [ಕುರ್‍ಆನ್ 3:133]. ಮುತ್ತಕೀಗಳಲ್ಲಿ ಪುರುಷರು ಮತ್ತು ಮಹಿಳೆಯರು ಒಳಪಡುತ್ತಾರೆ.

ಅಲ್ಲಾಹು ತಆಲಾ ಹೇಳುತ್ತಾನೆ:

﴿ وَمَنْ يَعْمَلْ مِنَ الصَّالِحَاتِ مِنْ ذَكَرٍ أَوْ أُنْثَى وَهُوَ مُؤْمِنٌ فَأُولَئِكَ يَدْخُلُونَ الْجَنَّةَ وَلَا يُظْلَمُونَ نَقِيرًا ﴾

“ಗಂಡಾಗಲಿ, ಹೆಣ್ಣಾಗಲಿ, ಯಾರು ವಿಶ್ವಾಸಿಯಾಗಿರುತ್ತಾ ಸತ್ಕರ್ಮಗಳನ್ನು ಮಾಡುತ್ತಾರೋ ಅವರು ಸ್ವರ್ಗವನ್ನು ಪ್ರವೇಶಿಸುವರು. ಅವರೊಂದಿಗೆ ಸ್ವಲ್ಪವೂ ಅನ್ಯಾಯವೆಸಗಲಾಗದು.” [ಕುರ್‍ಆನ್ 4:124]

• ಸ್ವರ್ಗ ಪ್ರವೇಶದ ವಿವರಣಾತ್ಮಕ ಅಂಶಗಳನ್ನು ತಿಳಿದುಕೊಳ್ಳುವುದಕ್ಕಾಗಿ ಅಂದರೆ ಅಲ್ಲಿ ತನ್ನೊಂದಿಗೆ ಏನು ಮಾಡಲಾಗುವುದು? ಅಲ್ಲಿ ತಾನು ಎಲ್ಲಿಗೆ ಹೋಗುವೆನು? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುತ್ತಾ ಬಹುಶಃ ತಾನು ಹೋಗುತ್ತಿರು ವುದು ವಿನಾಶಕಾರಿಯಾದ ಒಂದು ಪ್ರದೇಶಕ್ಕಾಗಿದೆ ಎಂಬಂತೆ ಭಾವಿಸಿಕೊಳ್ಳುವುದು ಮಹಿಳೆಯರಿಗೆ ಯೋಗ್ಯವಾದುದಲ್ಲ. ತಮಗೆ ಸ್ವರ್ಗಪ್ರವೇಶವು ಲಭ್ಯವಾದರೆ ಅಲ್ಲಿರುವ ಎಲ್ಲ ಅನುಗ್ರಹಗಳೂ ಲಭ್ಯವಾಗುವುದು ಎಂಬುದನ್ನು ತಿಳಿದುಕೊಂಡು ಅದಕ್ಕಾಗಿ ಅಮಲ್ ಮಾಡಬೇಕಾದುದು ಉತ್ತಮವಾಗಿದೆ.

ಅಲ್ಲಾಹು ಹೇಳುತ್ತಾನೆ:

﴿ وَفِيهَا مَا تَشْتَهِيهِ الْأَنْفُسُ وَتَلَذُّ الْأَعْيُنُ وَأَنْتُمْ فِيهَا خَالِدُونَ ﴾

“ಮನಸ್ಸುಗಳು ಬಯಸುವುದೆಲ್ಲವೂ ಮತ್ತು ಕಣ್ಣುಗಳು ಆಸೆಪಡುವುದೆಲ್ಲವೂ ಅಲ್ಲಿದೆ. ನೀವು ಅಲ್ಲಿ ಶಾಶ್ವತವಾಗಿ ವಾಸಿಸುವಿರಿ.” [ಕುರ್‍ಆನ್ 43:71]

ಮಾತ್ರವಲ್ಲ, ಸ್ವರ್ಗದ ಜನರ ಬಗ್ಗೆ ಅಲ್ಲಾಹು ಹೇಳುತ್ತಾನೆ:

﴿ رَضِيَ اللَّهُ عَنْهُمْ وَرَضُوا عَنْهُ ﴾

“ಅವರ ಬಗ್ಗೆ ಅಲ್ಲಾಹು ಸಂತೃಪ್ತನಾಗಿರುವನು ಮತ್ತು ಅಲ್ಲಾಹನ ಬಗ್ಗೆ ಅವರೂ ಸಂತೃಪ್ತರಾಗಿರುವರು.” [ಕುರ್‍ಆನ್5:119]

• ಸ್ವರ್ಗದಲ್ಲಿ ಆಸೆ ಹುಟ್ಟಿಸುವಂತಹ ರೀತಿಯಲ್ಲಿರುವ ವಿವಿಧ ತಿನಿಸುಗಳು, ಸುಂದರವಾದ ದೃಶ್ಯಗಳು, ವಸತಿಗಳು, ಉಡುಪುಗಳು ಇತ್ಯಾದಿಗಳ ಬಗ್ಗೆ ಕುರ್‍ಆನ್ ಮತ್ತು ಸುನ್ನತ್ತಿನಲ್ಲಿ ಏನೆಲ್ಲ ಬಂದಿವೆಯೋ ಅವೆಲ್ಲವೂ ಪುರುಷರಿಗೂ ಮಹಿಳೆಯ ರಿಗೂ ಲಭ್ಯವಿರುವುದು. ಪುರುಷರು ಮತ್ತು ಮಹಿಳೆಯರೆಲ್ಲರೂ ಇವುಗಳನ್ನು ಅನುಭವಿಸುವರು.

ಹಾಗಾದರೆ ಸ್ವರ್ಗದಲ್ಲಿ ಅಲ್‍ಹೂರುಲ್ ಈನ್ (ವಿಶಾಲ ಕಣ್ಣುಗಳುಳ್ಳ ಅಪ್ಸರೆಯರು) ಮತ್ತು ಸುರಸುಂದರಿಯರಾದ ತರುಣಿಯರು ಸಿಗುವರೆಂದು ಕೇವಲ ಪುರುಷರಿಗೆ ಮಾತ್ರ ಹೇಳಲು ಕಾರಣವೇನು? ಇಂತಹದ್ದು ಮಹಿಳೆಯರಿಗೂ ಲಭ್ಯವಾಗುವುದೆಂದು ಏಕೆ ಹೇಳಲಾಗಿಲ್ಲ?

ಇದಕ್ಕಿರುವ ಉತ್ತರ:

1. ಅಲ್ಲಾಹು ಹೇಳುತ್ತಾನೆ:

﴿ لَا يُسْأَلُ عَمَّا يَفْعَلُ وَهُمْ يُسْأَلُونَ ﴾

“ಅವನು (ಅಲ್ಲಾಹು) ಏನು ಮಾಡುತ್ತಾನೋ ಅದರ ಬಗ್ಗೆ ಪ್ರಶ್ನಿಸುವವರಾರೂ ಇಲ್ಲ. ಆದರೆ ಅವರು (ಮನುಷ್ಯರು) ಏನು ಮಾಡುತ್ತಾರೋ ಅದರ ಬಗ್ಗೆ ಪ್ರಶ್ನಿಸಲಾಗುವುದು.” [ಕುರ್‍ಆನ್ 21:23]

ಆದ್ದರಿಂದ ಇದರ ವಾಸ್ತವತೆಯ ಬಗ್ಗೆ ಕೇಳುವುದು ತಪ್ಪಾದರೂ ಇದರ ಹಿಂದಿರುವ ಹಿಕ್ಮತ್‍ನ ಬಗ್ಗೆ ಕೇಳುವುದು ತಪ್ಪಾಗಲಾರದು.

2. ನಾಚಿಕೆಯು ಮಹಿಳೆಯರ ನೈಸರ್ಗಿಕ ಗುಣಗಳಲ್ಲಿ ಸೇರಿದ್ದಾಗಿದೆಯೆಂಬುದು ಎಲ್ಲರೂ ತಿಳಿದಿರುವ ವಿಚಾರವಾಗಿದೆ. ಮಹಿಳೆಯರು ಯಾವುದರ ಬಗ್ಗೆ ನಾಚಿಕೆಪಡುತ್ತಾರೋ ಅದನ್ನು ಹೇಳಿ ಅವರಲ್ಲಿ ಸ್ವರ್ಗಕ್ಕಾಗಿ ಆಸೆ ಹುಟ್ಟಿಸುವುದನ್ನು ಅಲ್ಲಾಹು ಮಾಡಲಾರನು.

3. ಎಲ್ಲರೂ ತಿಳಿದಿರುವಂತೆ ಸ್ತ್ರೀಯರ ಬಗ್ಗೆಯಿರುವ ಪುರುಷರ ಆಸೆಯು ಪುರುಷರ ಬಗ್ಗೆಯಿರುವ ಸ್ತ್ರೀಯರ ಆಸೆಯಂತಲ್ಲ. ಆದ್ದರಿಂದ ಅಲ್ಲಾಹು ಸ್ವರ್ಗದ ಸ್ತ್ರೀಯರ ಬಗ್ಗೆ ಕೇವಲ ಪುರುಷರಿಗೆ ಮಾತ್ರ ಆಸೆ ಹುಟ್ಟಿಸಿದ್ದಾನೆ. ಪ್ರವಾದಿ(ﷺ)ರವರ ಈ ಕೆಳಗಿನ ವಚನವು ಕೂಡ ಇದಕ್ಕೆ ಆಧಾರವಾಗಿದೆ:

 مَا تَرَكْتُ بَعْدِي فِتْنَةً أَضَرَّ عَلَى الرِّجَالِ مِنَ النِّسَاءِ

“ಸ್ತ್ರೀಯರಿಗಿಂತಲೂ ಹೆಚ್ಚು ಹಾನಿಕರವಾದ ಒಂದು ಪರೀಕ್ಷೆಯನ್ನು ನಾನು ನನ್ನ ನಂತರ ಬಿಟ್ಟು ಹೋಗುತ್ತಿಲ್ಲ.” [ಅಲ್‍ಬುಖಾರೀ ಮತ್ತು ಮುಸ್ಲಿಮ್]
ಮಹಿಳೆಯರ ಬಗ್ಗೆಯಿರುವ ಪುರುಷರ ಆಸೆಯು ಅತ್ಯಂತ ತೀವ್ರವಾಗಿದೆ ಯೆಂದು ಈ ಹದೀಸಿನಿಂದ ಗ್ರಹಿಸಬಹುದಾಗಿದೆ.

ಮಹಿಳೆಯರ ಬಗ್ಗೆ ಹೇಳುವುದಾದರೆ ಉಡುಪು ಮತ್ತು ಆಭರಣಗಳನ್ನು ತೊಟ್ಟು ಅಲಂಕಾರಗೊಳ್ಳುವ ಬಗ್ಗೆ ಅವರಿಗಿರುವ ಆಸೆಯು ಪುರುಷರ ಬಗ್ಗೆಯಿರುವ ಆಸೆಗಿಂತಲೂ ಮಿಗಿಲಾಗಿದೆ.

4. ಅಶ್ಶೈಖ್ ಅಲ್‍ಉಸೈಮೀನ್ ಹೇಳುತ್ತಾರೆ:

لِأَنَّ الزَّوْجَ هُوَ الطَّالِبُ وَهُوَ الرَّاغِبُ فِي الْمَرْأَةِ، فَلِذَلِكَ ذُكِرَتِ الزَّوْجَاتُ للرِّجَالِ فِي الْجَنَّةِ وَسُكِتَ عَنِ الْأَزْوَاجِ لِلنِّسَاءِ، وَلَكِنْ لَيْسَ مُقْتَضَى ذَلِكَ أَنَّهُ لَيْسَ لَهُنَّ أَزْوَاجٌ… بَلْ لَهُنَّ أَزْوَاجٌ مِنْ بَنِي آدَمَ.

“ಯಾಕೆಂದರೆ ಮಹಿಳೆಯನ್ನು ಹುಡುಕುವವನು ಮತ್ತು ಮಹಿಳೆಗಾಗಿ ಆಸೆಪಡುವವನು ಪುರುಷನಾಗಿದ್ದಾನೆ. ಆದ್ದರಿಂದ ಸ್ವರ್ಗದಲ್ಲಿ ಪುರುಷರಿಗೆ ಪತ್ನಿಯರಿ ರುವರೆಂದು ಹೇಳಲಾಗಿದೆ ಮತ್ತು ಮಹಿಳೆಯರಿಗೆ ಪತಿಯಂದಿರು ಇರುವರೆಂಬುದರ ಬಗ್ಗೆ ಮೌನ ವಹಿಸಲಾಗಿದೆ. ಇದರ ಅರ್ಥ ಸ್ತ್ರೀಯರಿಗೆ ಪತಿಯಂದಿರು ಇರಲಾರರು ಎಂದಲ್ಲ… ಬದಲಾಗಿ ಅವರಿಗೆ ಮನುಷ್ಯರಲ್ಲಿ ಸೇರಿದ ಪತಿಯಂದಿರು ಇರುವರು.”

6. ಇಹಲೋಕದಲ್ಲಿ ಮಹಿಳೆಯರ ಸ್ಥಿತಿಯು ಈ ಕೆಳಗಿನ ಆರು ವಿಷಯಗಳಿಂದ ಹೊರಗಿರಲಾರದು:

1. ಒಂದೋ ಆಕೆ ವಿವಾಹಕ್ಕೆ ಮೊದಲೇ ಮರಣ ಹೊಂದುವಳು.
2. ಅಥವಾ ತಲಾಕ್‍ನ ನಂತರ ಇನ್ನೊಬ್ಬನನ್ನು ವಿವಾಹವಾಗುವುದಕ್ಕೆ ಮೊದಲೇ ಮರಣಹೊಂದುವಳು.
3. ಅಥವಾ ಆಕೆ ವಿವಾಹಿತಳಾಗಿರುತ್ತಾಳೆ. ಆದರೆ ಆಕೆಯ ಪತಿ ಸ್ವರ್ಗವಾಸಿ ಯಲ್ಲ. (ಅಲ್ಲಾಹು ಕಾಪಾಡಲಿ).
4. ಅಥವಾ ಆಕೆ ವಿವಾಹವಾದ ಬಳಿಕ ಮರಣಹೊಂದುವಳು.
5. ಅಥವಾ ಆಕೆಯ ಪತಿ ಮೃತಪಡುತ್ತಾನೆ ಮತ್ತು ಆಕೆ ತನ್ನ ಮರಣದ ತನಕ ಬೇರೊಂದು ವಿವಾಹವಾಗುವುದಿಲ್ಲ.
6. ಅಥವಾ ಆಕೆಯ ಪತಿ ಮೃತಪಡುತ್ತಾನೆ ಮತ್ತು ಆಕೆ ಬೇರೊಬ್ಬನನ್ನು ವಿವಾಹವಾಗುತ್ತಾಳೆ.

ಒಬ್ಬ ಮಹಿಳೆ ಮರಣಹೊಂದುವ ಸಂದರ್ಭದಲ್ಲಿ ಮೇಲೆ ಸೂಚಿಸಿದ ಆರು ಸ್ಥಿತಿಗಳಲ್ಲಿ ಯಾವುದಾದರೊಂದು ಸ್ಥಿತಿಯಲ್ಲಿರುತ್ತಾಳೆ.

1. ಆಕೆ ವಿವಾಹಕ್ಕೆ ಮೊದಲೇ ಮರಣಹೊಂದುವಳು. ಇಂತಹ ಮಹಿಳೆಗೆ ಅಲ್ಲಾಹು ಸ್ವರ್ಗದಲ್ಲಿ ಸ್ವರ್ಗವಾಸಿಗಳಲ್ಲಿ ಸೇರಿದ ಒಬ್ಬ ವ್ಯಕ್ತಿಯನ್ನು ವಿವಾಹ ಮಾಡಿಕೊಡುವನು. ಯಾಕೆಂದರೆ ಪ್ರವಾದಿ(ﷺ)ರವರು ಹೇಳುತ್ತಾರೆ:

 مَا فِي الْجَنَّةِ أَعْزَبُ

“ಸ್ವರ್ಗದಲ್ಲಿ ಅವಿವಾಹಿತರು ಇರಲಾರರು.” [ಮುಸ್ಲಿಮ್]

ಅಶ್ಶೈಖ್ ಅಲ್‍ಉಸೈಮೀನ್ ಹೇಳುತ್ತಾರೆ:

إِذَا لَمْ تَتَزَوَّجْ فِي الدُّنْيَا فَإِنَّ اللَّهَ تَعَالَى يُزَوِّجُهَا مَا تُقِرُّ بِهَا عَيْنُهَا فِي الْجَنَّةِ… فَالنَّعِيمُ فِي الْجَنَّةِ لَيْسَ مَقْصُورًا عَلَى الذُّكُورِ وَإِنَّمَا هُوَ لِلذُّكُورِ وَالْإِنَاثِ. وَمِنْ جُمْلَةِ النَّعِيمِ الزَّوَاجُ.

“ಆಕೆ ಇಹಲೋಕದಲ್ಲಿ ವಿವಾಹಿತಳಲ್ಲದಿದ್ದರೆ ಆಕೆಯ ಕಣ್ಣಿಗೆ ತಂಪು ನೀಡುವ (ಅಂದರೆ ಆಕೆ ತೃಪ್ತಿಪಡುವ) ವ್ಯಕ್ತಿಯನ್ನು ಅಲ್ಲಾಹು ಸ್ವರ್ಗದಲ್ಲಿ ಆಕೆಗೆ ವಿವಾಹ ಮಾಡಿಕೊಡುವನು…. ಸ್ವರ್ಗದ ಅನುಗ್ರಹಗಳು ಕೇವಲ ಪುರುಷರಿಗೆ ಮಾತ್ರ ಸೀಮಿತವಲ್ಲ. ಅವು ಪುರುಷರಿಗೂ ಸ್ತ್ರೀಯರಿಗೂ ಇರುವುದಾಗಿದೆ. ವಿವಾಹವು ಆ ಅನುಗ್ರಹಗಳಲ್ಲೊಂದಾಗಿದೆ.”

2. ತಲಾಕ್‍ನ ನಂತರ ಇನ್ನೊಬ್ಬನನ್ನು ವಿವಾಹವಾಗುವುದಕ್ಕೆ ಮೊದಲೇ ಮರಣ ಹೊಂದುವಳು. ಈಕೆಯ ಸ್ಥಿತಿ ಮೇಲೆ ಹೇಳಿದವಳ ಸ್ಥಿತಿಯಂತೆಯೇ ಆಗಿದೆ.

3. ಆಕೆ ವಿವಾಹಿತಳಾಗಿರುತ್ತಾಳೆ. ಆದರೆ ಆಕೆಯ ಪತಿ ಸ್ವರ್ಗವಾಸಿಯಲ್ಲ. ಈಕೆಯ ಸ್ಥಿತಿಯೂ ಮೇಲೆ ಹೇಳಿದವಳ ಸ್ಥಿತಿಯಂತೆಯೇ ಆಗಿದೆ.

ಅಶ್ಶೈಖ್ ಅಲ್‍ಉಸೈಮೀನ್ ಹೇಳುತ್ತಾರೆ:

فَالْمَرْأَةُ إِذَا كَانَتْ مِنْ أَهْلِ الْجَنَّةِ وَلَمْ تَتَزَوَّجْ أَوْ كَانَ زَوْجُهَا لَيْسَ مِنْ أَهْلِ الْجَنَّةِ، فَإِنَّهَا إِذَا دَخَلَتِ الْجَنَّةَ فَهُنَاكَ مِنْ أَهْلِ الْجَنَّةِ مَنْ لَمْ يَتَزَوَّجُوا مِنَ الرِّجَالِ. أَيْ فَيَتَزَوَّجُهَا أَحَدُهُمْ.

“ಮಹಿಳೆಯು ಸ್ವರ್ಗವಾಸಿಗಳಲ್ಲಿ ಸೇರಿದವಳಾಗಿದ್ದು ಆಕೆ ಅವಿವಾಹಿತೆಯಾಗಿದ್ದರೆ ಅಥವಾ ಆಕೆಯ ಪತಿ ಸ್ವರ್ಗವಾಸಿಗಳಲ್ಲಿ ಸೇರಿದವನಲ್ಲದಿದ್ದರೆ ಆಕೆ ಸ್ವರ್ಗವನ್ನು ಪ್ರವೇಶಿಸುವಾಗ ಸ್ವರ್ಗದ ಜನರಲ್ಲಿ ವಿವಾಹವಾಗದ ಪುರುಷರು ಕೂಡ ಇರುತ್ತಾರೆ. ಅಂದರೆ ಅವರಲ್ಲೊಬ್ಬರು ಈಕೆಯನ್ನು ವಿವಾಹವಾಗುವರು.”

4. ಆಕೆ ವಿವಾಹವಾದ ಬಳಿಕ ಮರಣಹೊಂದುವಳು. ಇಂತಹ ಮಹಿಳೆಗೆ ಇಹಲೋಕದಲ್ಲಿದ್ದ ಆಕೆಯ ಪತಿಯೇ ಸ್ವರ್ಗದಲ್ಲೂ ಪತಿಯಾಗಿರುತ್ತಾನೆ.

5. ಆಕೆಯ ಪತಿ ಮೃತಪಡುತ್ತಾನೆ ಮತ್ತು ಆಕೆ ತನ್ನ ಮರಣದ ತನಕ ಬೇರೊಂದು ವಿವಾಹವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಮೃತಪಟ್ಟ ಆ ಪತಿಯೇ ಸ್ವರ್ಗದಲ್ಲೂ ಆಕೆಯ ಪತಿಯಾಗಿರುತ್ತಾನೆ.

6. ಆಕೆಯ ಪತಿ ಮೃತಪಡುತ್ತಾನೆ ಮತ್ತು ಆಕೆ ಬೇರೊಬ್ಬನನ್ನು ವಿವಾಹ ವಾಗುತ್ತಾಳೆ. ಇಂತಹ ಸಂದರ್ಭದಲ್ಲಿ ಆಕೆಯ ಕೊನೆಯ ಪತಿ ಯಾರೋ ಆತನೇ ಸ್ವರ್ಗದಲ್ಲೂ ಆಕೆಯ ಪತಿಯಾಗಿರುತ್ತಾನೆ. ಯಾಕೆಂದರೆ ಪ್ರವಾದಿ(ﷺ)ರವರು ಹೇಳಿದರು:

 الْمَرْأَةُ لِآخِرِ أَزْوَاجِهَا

“ಸ್ತ್ರೀಯು ಆಕೆಯ ಪತಿಯಂದಿರಲ್ಲಿ ಕೊನೆಯವನಿಗೆ ಇರುವವಳಾಗಿದ್ದಾಳೆ.” [ಸಿಲ್ಸಿಲತು ಸ್ಸಹೀಹಃ]

ಹುದೈಫಃರವರು ತಮ್ಮ ಪತ್ನಿಯೊಂದಿಗೆ ಹೇಳುತ್ತಾರೆ:

إِنْ شِئْتِ أَنْ تَكُونِي زَوْجَتِي فِي الْجَنَّةِ فَلَا تَزَوَّجِي بَعْدِي، فَإِنَّ الْمَرْأَةَ فِي الْجَنَّةِ لِآخِرِ أَزْوَاجِهَا فِي الدُّنْيَا، فَلِذَلِكَ حَرَّمَ اللَّهُ عَلَى أَزْوَاجِ النَّبِيِّ أَنْ يَنْكِحْنَ بَعْدَهُ، لِأَنَّهُنَّ أَزْوَاجُهُ فِي الْجَنَّةِ.

“ಸ್ವರ್ಗದಲ್ಲೂ ನೀನು ನನಗೆ ಪತ್ನಿಯಾಗಿರಬೇಕೆಂದು ನೀನು ಇಚ್ಛಿಸುವುದಾದರೆ ನನ್ನ ಮರಣಾನಂತರ ನೀನು ಬೇರೆ ವಿವಾಹವಾಗಬಾರದು. ಯಾಕೆಂದರೆ ಒಬ್ಬ ಮಹಿಳೆಗೆ ಇಹಲೋಕದಲ್ಲಿ ಆಕೆಯ ಪತಿಯಂದಿರಲ್ಲಿ ಕೊನೆಯವನು ಯಾರೋ ಆತನೇ ಸ್ವರ್ಗದಲ್ಲೂ ಆಕೆಯ ಪತಿಯಾಗಿರುತ್ತಾನೆ. ಈ ಕಾರಣದಿಂದಲೇ ಪ್ರವಾದಿ(ﷺ)ರವರ ಪತ್ನಿಯರು ಅವರ ಮರಣಾನಂತರ ಬೇರೆ ವಿವಾಹವಾಗುವುದನ್ನು ಅಲ್ಲಾಹು ನಿಷಿದ್ಧಗೊಳಿಸಿದ್ದಾನೆ. ಯಾಕೆಂದರೆ ಸ್ವರ್ಗದಲ್ಲೂ ಅವರೇ ಪ್ರವಾದಿ(ﷺ)ರವರ ಪತ್ನಿಯರಾಗಿರುತ್ತಾರೆ.” [ಸಿಲ್ಸಿಲತು ಸ್ಸಹೀಹಃ]

• ಜನಾಝಃ ನಮಾಝ್‍ನಲ್ಲಿ ನಾವು ಹೀಗೆ ಪ್ರಾರ್ಥಿಸಬೇಕೆಂದು ಹೇಳಲಾಗಿದೆಯಲ್ಲವೇ?

 وَأَبْدِلْهَا زَوْجًا خَيْرًا مِنْ زَوْجِهَا

“ಆಕೆಗೆ ಆಕೆಯ ಪತಿಗಿಂತಲೂ ಉತ್ತಮನಾಗಿರುವ ಪತಿಯನ್ನು ಬದಲಾಯಿಸಿ ನೀಡು.” [ಮುಸ್ಲಿಮ್]

ಒಂದು ವೇಳೆ ಒಬ್ಬ ಮಹಿಳೆಗೆ ಇಹಲೋಕದಲ್ಲಿರುವ ಆಕೆಯ ಪತಿಯೇ ಸ್ವರ್ಗದಲ್ಲೂ ಆಕೆಯ ಪತಿಯಾಗುವುದಾದರೆ ಈ ಪ್ರಾರ್ಥನೆಯನ್ನು ನಾವು ಪ್ರಾರ್ಥಿಸುವುದಾದರೂ ಹೇಗೆ? ಅದೇ ರೀತಿ ಆಕೆ ಅವಿವಾಹಿತೆಯಾಗಿದ್ದರೆ ಈ ಪ್ರಾರ್ಥನೆಯನ್ನು ನಾವು ಪ್ರಾರ್ಥಿಸುವುದರಲ್ಲಿ ಅರ್ಥವೇನಿದೆ?

ಅಶ್ಶೈಖ್ ಅಲ್‍ಉಸೈಮೀನ್‍ರವರು ಹೇಳುವಂತೆ ಇದರ ಉತ್ತರವು ಹೀಗಿದೆ:

ಆಕೆ ಅವಿವಾಹಿತೆಯಾಗಿದ್ದರೆ ಆಕೆಯ ಪತಿಗಿಂತಲೂ ಉತ್ತಮವಾದ ಪತಿಯನ್ನು ಬದಲಾಯಿಸಿ ನೀಡು ಎಂದು ಹೇಳುವುದರ ಉದ್ದೇಶವು ಆಕೆ ಇನ್ನೂ ಬದುಕಿದ್ದರೆ ಆಕೆಗೆ ಯಾವ ಪುರುಷನನ್ನು ತಕ್ದೀರ್ ಮಾಡಲಾಗಿದೆಯೋ ಅವನಿಗಿಂತಲೂ ಉತ್ತಮ ಪತಿಯನ್ನು ನೀಡು ಎಂದಾಗಿದೆ.

ಇನ್ನು ಆಕೆ ವಿವಾಹಿತೆಯಾಗಿದ್ದರೆ ಆಕೆಯ ಪತಿಗಿಂತಲೂ ಉತ್ತಮವಾದ ಪತಿಯನ್ನು ಬದಲಾಯಿಸಿ ನೀಡು ಎಂದು ಹೇಳುವುದರ ಉದ್ದೇಶವು ಆಕೆಯ ಪತಿಗೆ ಇಹಲೋಕದಲ್ಲಿದ್ದ ಗುಣಗಳಿಗಿಂತಲೂ ಇನ್ನೂ ಉತ್ತಮವಾದ ಗುಣಗಳನ್ನು ಬದಲಾಯಿಸಿ ನೀಡು ಎಂದಾಗಿದೆ. ಯಾಕೆಂದರೆ ಬದಲಾಯಿಸಿ ನೀಡುವುದು ಒಂದೋ ವಸ್ತುವಿನ ರೂಪದಲ್ಲಾಗಿರಬಹುದು. ಅಂದರೆ ಉದಾಹರಣೆಗೆ ಒಂಟೆಗೆ ಬದಲಿಯಾಗಿ ಕುರಿಯನ್ನು ಮಾರುವುದು. ಹಾಗೆಯೇ ಬದಲಾಯಿಸಿ ನೀಡುವುದು ಗುಣಗಳ ರೂಪದಲ್ಲೂ ಆಗಿರಬಹುದು. ಉದಾಹರಣೆಗೆ ಹೀಗೆ ಹೇಳಲಾಗುತ್ತದೆ:

بَدَّلَ اللَّهُ كُفْرَ هَذَا الرَّجُلِ بِإِيمَانٍ.

“ಅಲ್ಲಾಹು ಈ ವ್ಯಕ್ತಿಯ ಕುಫ್ರನ್ನು ಈಮಾನ್ ಆಗಿ ಬದಲಾಯಿಸಿ ನೀಡಲಿ.”

ಅದೇ ರೀತಿ ಅಲ್ಲಾಹು ಹೇಳುತ್ತಾನೆ:

﴿ يَوْمَ تُبَدَّلُ الْأَرْضُ غَيْرَ الْأَرْضِ وَالسَّمَاوَاتُ ﴾

“ಈ ಭೂಮಿಯು ಇದಲ್ಲದ ಇನ್ನೊಂದು ಭೂಮಿಯಾಗಿ ಮತ್ತು ಆಕಾಶಗಳು ಕೂಡ ಬದಲಾಯಿಸಲಾಗುವ ದಿನದಂದು.” [ಕುರ್‍ಆನ್ 14:48]

ಅಂದರೆ ಈ ಭೂಮಿ ಹೋಗಿ ಬೇರೆಯೇ ಒಂದು ಭೂಮಿ ಉಂಟಾಗುವುದಲ್ಲ. ಬದಲಾಗಿ ಭೂಮಿಯ ಸ್ವರೂಪವನ್ನು ಬದಲಾಯಿಸಿ ವಿಶಾಲಗೊಳಿಸಲಾಗುವುದು ಎಂದರ್ಥ. ಹಾಗೆಯೇ ಆಕಾಶಗಳ ಸ್ವರೂಪವನ್ನು ಬದಲಾಯಿಸಿ ಅವುಗಳನ್ನು ಸೀಳಲಾಗುವುದು ಎಂದರ್ಥ.

• ಸಹೀಹಾದ ಹದೀಸೊಂದರಲ್ಲಿ ಪ್ರವಾದಿ(ﷺ)ರವರು ಹೀಗೆನ್ನುತ್ತಾರೆ:

 إِنِّي رَأَيْتُكُنَّ أَكْثَرَ أَهْلِ النَّارِ..

“ನಾನು ನಿಮ್ಮನ್ನು (ಮಹಿಳೆಯರನ್ನು) ನರಕವಾಸಿಗಳಲ್ಲಿ ಬಹುಸಂಖ್ಯಾತರನ್ನಾಗಿ ಕಂಡಿದ್ದೇನೆ.” [ಅಲ್‍ಬುಖಾರಿ ಮತ್ತು ಮುಸ್ಲಿಮ್]

ಇನ್ನೊಂದು ವರದಿಯಲ್ಲಿ ಹೀಗಿದೆ:

 إِنَّ أَقَلَّ سِاكِنِي الْجَنَّةِ النِّسَاءُ

“ಸ್ವರ್ಗವಾಸಿಗಳಲ್ಲಿ ಮಹಿಳೆಯರು ಅತಿಕಡಿಮೆ ಸಂಖ್ಯೆಯಲ್ಲಿರುವರು.” [ಅಲ್‍ಬುಖಾರಿ ಮತ್ತು ಮುಸ್ಲಿಮ್]

ಇನ್ನೊಂದು ಸಹೀಹ್ ಹದೀಸಿನಲ್ಲಿರುವಂತೆ ಸ್ವರ್ಗದಲ್ಲಿ ಪ್ರತಿಯೊಬ್ಬ ಪುರುಷನಿಗೂ ಇಹಲೋಕದ ಇಬ್ಬರು ಮಹಿಳೆಯರು ಪತ್ನಿಯರಾಗಿರುವರು ಎಂದು ಹೇಳಲಾಗಿದೆ.

 وَلِكُلِّ وَاحِدٍ مِنْهُمْ زَوْجَتَانِ

“ಅವರಲ್ಲಿ (ಸ್ವರ್ಗವಾಸಿಗಳಲ್ಲಿ) ಪ್ರತಿಯೊಬ್ಬರಿಗೂ ಇಬ್ಬರು ಪತ್ನಿಯರಿರುವರು.” [ಅಲ್‍ಬುಖಾರೀ ಮತ್ತು ಮುಸ್ಲಿಮ್]

ಮೊದಲನೆಯ ಹದೀಸಿನಲ್ಲಿ ಸ್ವರ್ಗದಲ್ಲಿ ಮಹಿಳೆಯರು ಕಡಿಮೆ ಸಂಖ್ಯೆಯಲ್ಲಿರುವರು ಎನ್ನಲಾಗಿದೆ. ಆದರೆ ಎರಡನೆ ಹದೀಸಿನ ಪ್ರಕಾರ ಸ್ವರ್ಗದಲ್ಲಿ ಮಹಿಳೆಯರ ಸಂಖ್ಯೆಯು ಪುರುಷರ ಎರಡು ಪಟ್ಟು ಇರುವುದು ಎಂದಾಗಿದೆ. ಇದು ವಿರೋಧಾಭಾಸವಲ್ಲವೇ?

ಈ ಎರಡು ಹದೀಸ್‍ಗಳ ಮಧ್ಯೆ ಹೊಂದಾಣಿಕೆ ಮಾಡುವ ವಿಷಯದಲ್ಲಿ, ಅಂದರೆ ಮಹಿಳೆಯರು ಹೆಚ್ಚಾಗಿರುವುದು ಸ್ವರ್ಗದಲ್ಲೋ ಅಥವಾ ನರಕದಲ್ಲೋ ಎಂಬ ವಿಷಯದಲ್ಲಿ ಉಲಮಾಗಳಲ್ಲಿ ಭಿನ್ನಾಭಿಪ್ರಾಯವಿದೆ.

ಉಲಮಾಗಳಲ್ಲಿ ಕೆಲವರು ಹೇಳುತ್ತಾರೆ: ಇಹಲೋಕದಲ್ಲಿ ಮಹಿಳೆಯರ ಸಂಖ್ಯೆಯು ಅಧಿಕವಾಗಿದೆ. ಆದೇ ರೀತಿ ನರಕದಲ್ಲೂ ಅವರ ಸಂಖ್ಯೆ ಅಧಿಕವಾಗಿದೆ.

ಅಲ್‍ಕಾದೀ ಇಯಾದ್ ಹೇಳುತ್ತಾರೆ:

“ಮನುಷ್ಯ ಸಂತತಿಗಳಲ್ಲಿ ಮಹಿಳೆಯರೇ ಅಧಿಕವಾಗಿದ್ದಾರೆ.”

ಅಂದರೆ ಇಹಲೋಕದಲ್ಲಿ ಮಹಿಳೆಯರು ಎಷ್ಟರ ಮಟ್ಟಿಗೆ ಪುರುಷರಿಗಿಂತ ಅಧಿಕವಾಗಿದ್ದಾರೆಂದರೆ ಸ್ವರ್ಗದಲ್ಲಿ ಪುರುಷರ ಎರಡು ಪಟ್ಟು ಇದ್ದೂ ಸಹ ನರಕದಲ್ಲೂ ಅವರೇ ಹೆಚ್ಚಾಗಿರುತ್ತಾರೆ.

ಇತರ ಕೆಲವು ಉಲಮಾಗಳು ಹೇಳುತ್ತಾರೆ: ಈ ಮೇಲಿನ ಹದೀಸ್‍ಗಳಲ್ಲಿರುವಂತೆ ನರಕವಾಸಿಗಳಲ್ಲಿ ಹೆಚ್ಚಿನವರೂ ಮಹಿಳೆಯರಾಗಿದ್ದಾರೆ. ಸ್ವರ್ಗದಲ್ಲಿರುವ ಅಪ್ಸರೆಗಳನ್ನು ಸೇರಿಸಿದರೆ ಸ್ವರ್ಗದಲ್ಲೂ ಅವರ ಸಂಖ್ಯೆಯು ಹೆಚ್ಚಾಗುತ್ತದೆ.

ಇತರ ಕೆಲವು ಉಲಮಾಗಳು ಹೇಳುತ್ತಾರೆ: ಆರಂಭಿಕ ಸ್ಥಿತಿಯಲ್ಲಿ ನರಕವಾಸಿಗಳಲ್ಲಿ ಹೆಚ್ಚಿನವರೂ ಮಹಿಳೆಯರಾಗಿರುತ್ತಾರೆ. ಆದರೆ ತರುವಾಯ ಅವರ ಪೈಕಿ ಮುಸ್ಲಿಮ್ ಸ್ತ್ರೀಯರು ಶಿಕ್ಷೆ ಮುಗಿದು ಸ್ವರ್ಗಕ್ಕೆ ಬರುವಾಗ ಸ್ವರ್ಗದಲ್ಲಿ ಅವರ ಸಂಖ್ಯೆಯು ಹೆಚ್ಚಾಗುತ್ತದೆ.

ಅಲ್‍ಕುರ್ತುಬೀ ಹೇಳುತ್ತಾರೆ:

يَحْتَمِلُ أَنْ يَكُونَ هَذَا فِي وَقْتِ كَوْنِ النِّسَاءِ فِي النَّارِ، وَأَمَّا بَعْدَ خُرُوجِهِنَّ فِي الشَّفَاعَةِ وَرَحْمَةِ اللَّهِ تَعَالَى حَتَّى لَا يَبْقَى فِيهَا أَحَدٌ مِمَّنْ قَالَ لَا إِلَهَ إِلَّا اللَّهُ، فَالنِّسَاءُ فِي الْجَنَّةِ أَكْثَرُ.

“ಬಹುಶಃ ಇದು ಮಹಿಳೆಯರು ನರಕದಲ್ಲಿರುವ ಸಂದರ್ಭದ ಬಗ್ಗೆಯಾಗಿರ ಬಹುದು. ಆದರೆ ಶಫಾಅತ್‍ನಿಂದಾಗಿ ಮತ್ತು ಅಲ್ಲಾಹನ ರಹ್ಮತ್‍ನಿಂದಾಗಿ ಲಾಇಲಾಹ ಇಲ್ಲಲ್ಲಾಹ್ ಉಚ್ಛರಿಸಿದ ಯಾರೊಬ್ಬರೂ ನರಕದಲ್ಲಿ ಬಾಕಿಯಾಗದೆ ಹೊರಬರುವ ಸಂದರ್ಭದ ಬಗ್ಗೆ ಹೇಳುವುದಾದರೆ ಆಗ ಸ್ವರ್ಗದಲ್ಲಿ ಮಹಿಳೆಯರ ಸಂಖ್ಯೆಯು ಅಧಿಕವಾಗಿರುವುದು.”

ಒಟ್ಟಿನಲ್ಲಿ, ಮಹಿಳೆಯು ತಾನು ನರಕ ವಾಸಿಗಳಲ್ಲಿ ಸೇರಿದವಳಾಗದಂತೆ ಎಚ್ಚರ ವಹಿಸುವುದು ಅತ್ಯಾವಶ್ಯಕವಾಗಿದೆ.

• ಮಹಿಳೆಯು ಸ್ವರ್ಗವನ್ನು ಪ್ರವೇಶಿಸಿದರೆ ಅಲ್ಲಾಹು ಆಕೆಗೆ ಆಕೆಯ ಯೌವನ ಮತ್ತು ಕನ್ಯತ್ವವನ್ನು ಮರಳಿ ಕೊಡುವನು. ಯಾಕೆಂದರೆ ಪ್ರವಾದಿ(ﷺ)ರವರು ಹೇಳಿದರು:

 إِنَّ الْجَنَّةَ لَا يَدْخُلُهَا عَجُوزٌ… إِنَّ اللَّهَ تَعَالَى إِذَا أَدْخَلَهُنَّ الْجَنَّةَ حَوَّلَهُنَّ أَبْكَارًا

“ಖಂಡಿತವಾಗಿಯೂ ವೃದ್ಧರು ಸ್ವರ್ಗವನ್ನು ಪ್ರವೇಶಿಸಲಾರರು… ಅಲ್ಲಾಹು ಮಹಿಳೆ ಯರನ್ನು ಸ್ವರ್ಗಕ್ಕೆ ಪ್ರವೇಶ ಮಾಡಿಸಿದರೆ ಅವರನ್ನು ಕನ್ಯೆಯರನ್ನಾಗಿ ಮಾರ್ಪಡಿಸುವನು.” [ಅಬೂ ನುಐಮ್]

• ಕೆಲವು ಅಸರ್‍ಗಳಲ್ಲಿ ವರದಿಯಾಗಿರುವಂತೆ ಸ್ವರ್ಗಪ್ರವೇಶ ಪಡೆದ ಮಹಿಳೆಯರು ಅವರ ಇಬಾದತ್‍ಗಳಿಗೆ ಅನುಗುಣವಾಗಿ ಅಪ್ಸರೆಯರಿಗಿಂತಲೂ ಅನೇಕ ಪಟ್ಟು ಸುಂದರಿಯರಾಗಿರುವರು.

• ಇಬ್ನುಲ್ ಕಯ್ಯಿಮ್‍ರವರು ಹೇಳುತ್ತಾರೆ: ಸ್ವರ್ಗದಲ್ಲಿ ಒಬ್ಬರು ಇನ್ನೊಬ್ಬರ ಪತ್ನಿಯರನ್ನು ಸಮೀಪಿಸುವುದನ್ನು ಸಂಪೂರ್ಣ ತಡೆಹಿಡಿಯಲಾಗಿದೆ.

• ಕೊನೆಯದಾಗಿ, ಮಹಿಳೆಯರಿಗೆ ನೀಡುವ ನಸೀಹತ್ ಏನೆಂದರೆ, ಸ್ವರ್ಗವು ಪುರುಷರಿಗೆ ಅಲಂಕಾರಗೊಂಡು ಸಿದ್ಧವಾಗಿರುವಂತೆಯೇ ನಿಮಗೂ ಅಲಂಕಾರ ಗೊಂಡು ಸಿದ್ಧವಾಗಿ ನಿಂತಿದೆ. ಆಯುಷ್ಯವು ಬಹಳ ಕಡಿಮೆಯಾಗಿದೆ. ಇಹಲೋಕ ಜೀವನದ ಬಳಿಕವಿರುವ ಪರಲೋಕ ಜೀವನವು ಶಾಶ್ವತವಾಗಿದೆ. ಆದ್ದರಿಂದ ನೀವು ಸ್ವರ್ಗದ ಶಾಶ್ವತವಾಸಿಗಳಾಗಲು ಪ್ರಯತ್ನಿಸಬೇಕಾಗಿದೆ.

ಸ್ವರ್ಗವನ್ನು ಪಡೆಯುವುದಕ್ಕಾಗಿ ನೀವು ನೀಡಬೇಕಾದ ದಕ್ಷಿಣೆಯು ಈಮಾನ್ ಮತ್ತು ಸತ್ಕರ್ಮಗಳಾಗಿವೆಯೇ ಹೊರತು ಮಿಥ್ಯ ಆಕಾಂಕ್ಷೆಗಳಲ್ಲ. ಪ್ರವಾದಿ(ﷺ)ರವರು ಹೇಳಿದ ಮಾತನ್ನು ಜ್ಞಾಪಿಸಿರಿ:

 إِذَا صَلَّتِ الْمَرْأَةُ خَمْسَهَا، وَصَامَتْ شَهْرَهَا، وَحَصَنَتْ فَرْجَهَا، وَأَطَاعَتْ زَوْجَهَا، قِيلَ لَهَا: ادْخُلِي الْجَنَّةَ مِنْ أَيِّ أَبْوَابٍ شِئْتِ

“ಒಬ್ಬಳು ಮಹಿಳೆ ಐದು ವೇಳೆಯ ನಮಾಝ್ ನಿರ್ವಹಿಸಿದರೆ, ರಮದಾನ್ ತಿಂಗಳ ಉಪವಾಸ ಆಚರಿಸಿದರೆ, ತನ್ನ ಗುಹ್ಯಾಂಗವನ್ನು ಸಂರಕ್ಷಿಸಿದರೆ ಮತ್ತು ತನ್ನ ಪತಿಯ ಆಜ್ಞಾಪಾಲನೆ ಮಾಡಿದರೆ ಆಕೆಯೊಂದಿಗೆ ಹೇಳಲಾಗುವುದು: ನೀನು ಇಚ್ಛಿಸುವ ಬಾಗಿಲಿನಿಂದ ಸ್ವರ್ಗವನ್ನು ಪ್ರವೇಶಿಸು.” [ಅಹ್ಮದ್ ಮತ್ತು ಇಬ್ನ್ ಹಿಬ್ಬಾನ್]

ಫಿತ್ನದೆಡೆಗೆ ಮತ್ತು ನಿಮ್ಮ ನಾಶದೆಡೆಗೆ ಆಹ್ವಾನಿಸುವವರ ಬಗ್ಗೆ ಸಂಪೂರ್ಣ ಎಚ್ಚರವಾಗಿರಿ. ಅವರು ಬಯಸುವುದು ನಿಮ್ಮ ನಾಶವನ್ನಾಗಿದೆ. ಸ್ವರ್ಗದಿಂದ ನಿಮ್ಮನ್ನು ತಿರುಗಿಸಿ ಬಿಡುವುದನ್ನಾಗಿದೆ. ಈ ವಿಮೋಚಕರ ಮತ್ತು ವಿಮೋಚಕಿಯರ ಬಣ್ಣದ ಮಾತುಗಳಿಗೆ ಮರುಳಾಗದಿರಿ. ಅವರು ನಿಮ್ಮನ್ನು ವಿಮೋಚನೆಗೊಳಿಸಬಯಸುವುದು ಸ್ವರ್ಗದಿಂದಾಗಿದೆ. ಅದೇ ರೀತಿ ಚಾನಲ್‍ಗಳಲ್ಲಿ ಪ್ರತ್ಯಕ್ಷರಾಗುವವರ ಬಗ್ಗೆಯೂ ಎಚ್ಚರವಾಗಿರಿ. ಅವರು ನಿಮ್ಮಿಂದ ಬಯಸುವುದು ನೀವೂ ಅವರಂತೆಯೇ ಆಗಬೇಕು ಎಂಬುದನ್ನಾಗಿದೆ.

ಮುಸ್ಲಿಮ್ ಸ್ತ್ರೀಯರು ಅನುಗ್ರಹಪೂರ್ಣವಾದ ಸ್ವರ್ಗಲೋಕವನ್ನು ಪ್ರವೇಶಿಸುವಂತೆ ಅಲ್ಲಾಹು ಮಾಡಲಿ. ಅಲ್ಲಾಹು ಅವರನ್ನು ಮಾರ್ಗದರ್ಶನ ನೀಡುವವರನ್ನಾಗಿಯೂ ಮಾರ್ಗದರ್ಶನ ಪಡೆದವರನ್ನಾಗಿಯೂ ಮಾಡಲಿ. ಸ್ತ್ರೀ ವಿಮೋಚನೆ (ಸ್ತ್ರೀ ನಾಶ)ಯೆಡೆಗೆ ಕರೆ ನೀಡುವ ಮನುಷ್ಯ ಶೈತಾನರ ಕೆಡುಕಿನಿಂದ ಅಲ್ಲಾಹು ಅವರನ್ನು ಕಾಪಾಡಲಿ. ಆಮೀನ್.

وَصَلَّى اللهُ وَسَلَّم عَلَى نَبِيِّنَا مُحَمَّدِِ وَعَلى آلِهِ وَصَحْبِهِ أجْمَعِين .

ಹೆಣ್ಣುಮಕ್ಕಳ ಋತುಸ್ರಾವವು ಪಾಪವೆ ??

ಹೆಣ್ಣುಮಕ್ಕಳ ಋತುಸ್ರಾವವು ಪಾಪವೆ ??

ಪ್ರಪ್ರಥಮವಾಗಿ ಹಾಗೂ ಖಡಾಖಂಡಿತವಾಗಿ, ಋತುಸ್ರಾವವು ಪಾಪವಲ್ಲವೆಂದದ್ದು ಇಸ್ಲಾಮ್!!!! ಹೌದು, ಹೆಣ್ಣಿಗೆ ಋತುಸ್ರಾವವು ಪಾಪದ ಫಲವಲ್ಲ. ಶಾಪದ ಪಲವೂ ಅಲ್ಲ. ಮುಟ್ಟಾದ ಹೆಣ್ಣು ಮುಟ್ಟಿದ್ದು ತಿನ್ನಬಾರದು ಎಂಬುದು ಅಂಧ ವಿಶ್ವಾಸವಾಗಿದೆ.

ಆಯಿಶಾ(ರ)ಋತುಸ್ರಾವದಲ್ಲಿದ್ದಾಗ ಪ್ರವಾದಿ ಸ.ಅ.ರ ಜೊತೆಯಲ್ಲಿ ಆಹಾರ, ಸೇವಿಸುತ್ತಿದ್ದರು (ಮುಸ್ಲಿಮ್, ಅಬೂ ದಾವೂದ್,ಇಬ್ನು ಮಾಜ,ನಸಾಈ,)

ಈ ಹದೀಸ್‌ನಲ್ಲಿ ನಮಗೆ ತಿಳಿಯಬಹುದು. ಮುಟ್ಟಾದ ಹೆಣ್ಣನ್ನು ಮನೆಯಿಂದ ಹೊರದೂಡಿ ಬಿಕಾರಿಯಂತೆ ಕೊಟ್ಟಿಗೆಯಲ್ಲಿ ವಾಸಮಾಡಿಸುವ ಅಮಾನವೀಯ ರೂಡಿ ಅನ್ಯ ಸಮುದಾಯದಲ್ಲಿ ಕಾಣ ಸಿಗುತ್ತದೆ.ಮುಟ್ಟಾದವಳು,ಚಳಿಮಳೆ ಸಹಿಸಿಕೊಂಡು ಪಡುಸಾಲೆಯಲ್ಲಿ ದನದ ಕೊಟ್ಟಿಗೆಯಲ್ಲಿ ನುಸಿ ಮುಂತಾದ ಕೀಟಗಳಿಂದ ಕಚ್ಚಿಸಿಕೊಂಡು ಪ್ರತಿ ತಿಂಗಳು ೭ ದಿನಗಳು,ವಾಸಿಸಬೆಕೆಂಬ ರೂಡಿಯು ಹೆಣ್ಣಿನ ಮೇಲೆ ಕ್ರೂರ ದಬ್ಬಾಳಿಕೆ ಅಗಿದೆ.

ಪವಿತ್ರ ಇಸ್ಲಾಂ ಧರ್ಮವು ಈ ರೂಡಿಗೆ ತಡೆ ಹಾಕಿತು. ಅವಳನ್ನು ಮನೆಯಿಂದ ಮಾತ್ರವಲ್ಲ,ಶಯನ ಗೃಹದಿಂದಲೂ, ಹೊರದೂಡಲಾರದೆಂದು ವಿಧಿಸಿತು.

ಅನಸ್(ರ)ವರದಿ ಮಾಡುತ್ತಾರೆ: ಪ್ರವಾದಿ ಸ.ಅ.ಹೇಳಿದರು “ಸಂಭೋಗದ ಹೊರತು ಬೇರೆಲ್ಲ ಮಾಡಿರಿ.(ಮುಸ್ಲಿಮ್, ಅಬೂದಾವೂದ್, ತಿರ್ಮಿದಿ, ನಸಾಈ, ಇಬ್ನು ಮಾಜ, )

ಸೀಮಿತ ಲೈಂಗಿಕ ಕ್ರಿಯೆಯ ಹೊರತು ಪತಿಯ ಮಂಚದಲ್ಲೇ ಪತಿಯ ಜೊತೆಗೆ ಮಲಗಲು ಮತ್ತು ಇತರ ಎಲ್ಲಾ ವಿಧದ ಸುಖ ಅನುಭವಿಸಲು,ಅನುಮತಿ ಕೊಟ್ಟಿತು. ಮುಟ್ಟಿನ ಹೆಸರಲ್ಲಿ ಹೆತ್ತಮ್ಮಳನ್ನು ಕೊಟ್ಟಿಗೆಗೆ ದೂಡಿ ಅವಮಾನಿಸುವ ಪದ್ಧತಿಗೆ ತಿಲಾಂಜಲಿ ಹಾಕಿದ,ಧರ್ಮ ಇಸ್ಲಾಮ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಸ್ಲಾಮಿನ ಬಗ್ಗೆ ಅಪಪ್ರಚಾರ ಮಾಡುವುದು ಬಿಟ್ಟು ಇಸ್ಲಾಮಿನ ಆದರ್ಶವೆನೆಂದು,ತಿಳಿಯೋಣ.

ತಲಾಕ್! ತಲಾಕ್!! ತಲಾಕ್!!!

ತಲಾಕ್! ತಲಾಕ್!! ತಲಾಕ್!!!

ಆಟವಾಡಲು ಗೊತ್ತಿಲ್ಲದವನು ಕ್ರೀಡಾಂಗಣ ಸರಿಯಿಲ್ಲ ಅಂದನಂತೆ! ಮೊದಲು ಇಸ್ಲಾಮ್ ಏನೆಂದು ಅಧ್ಯಾಯನ,ಮಾಡಿ

ತಲಾಕ್ ಹೇಗೆ? ?
ಗಂಡು-ಹೆಣ್ಣು ವಿವಾಹ ಬಂಧನದಲ್ಲಿ ಏರ್ಪಟ್ಟಾಗ ಪ್ರತಿಯೊಬ್ಬರೂ ಜೀವನ ಪರ್ಯಂತ ಈ ಸಂಬಂಧ ನೆಲೆ ನಿಲ್ಲಬೇಕೆಂಬ ವಿಶ್ವಾಸವನ್ನು ಹೊಂದಿರುತ್ತಾರೆ. ಯಾರು ಕೂಡ ವಿವಾಹ ವಿಚ್ಛೇದನವನ್ನು ಮುಂದಿಟ್ಟು ಮದುವೆ ಮಾಡುವುದಿಲ್ಲ. ಅಂತಹ ಕಲ್ಪನೆ ಯಾವ ಸಮಾಜದಲ್ಲಿ ಇಲ್ಲ. ಯಾವ ಮನುಷ್ಯನಲ್ಲೂ ಇರುವುದಿಲ್ಲ. ಅವರ ಕುಟುಂಬ, ಮನೆ ಮಂದಿ, ತಂದೆ-ತಾಯಿ ಈ ಸಂಬಂಧದ ಸುದೃಢತೆಗಾಗಿ ಹಾರೈಸುತ್ತಾರೆ ಮತ್ತು ಪ್ರಾರ್ಥಿಸುತ್ತಾರೆ. ಒಂದು ಉತ್ತಮ ಮನೆ, ಸಂಸಾರ ಮತ್ತು ಪತಿ-ಪತ್ನಿಯ ಸಂಬಂಧ ಪ್ರೀತಿ ಮರಣದವರೆಗೆ ನೆಲೆ ನಿಲ್ಲಬೇಕೆಂದು ಬಯಸುತ್ತಾರೆ. ತಲಾಕ್ ಅಥವಾ ವಿವಾಹ ವಿಚ್ಛೇದನವು ಒಂದು ಅರೋಚಕ ಮತ್ತು ಅಪ್ರಿಯ ಕ್ರಿಯೆ ಎಂಬುದು ಇಸ್ಲಾಮೀ ಶಿಕ್ಷಣದ ಸಾರವಾಗಿದೆ. ಆದರೆ ಮನುಷ್ಯನ ಜೀವನದಲ್ಲಿ ಭಿನ್ನಾಭಿಪ್ರಾಯಗಳು, ಆವೇಶಗಳು, ಚಿಕ್ಕ ಚಿಕ್ಕ ವಿಷಯಗಳು ದೊಡ್ಡ ಮಹತ್ವವನ್ನು ಪಡೆದುಕೊಳ್ಳುತ್ತವೆ ಮತ್ತು ಸಂಶಯಗಳು ಬೆಳೆಯುತ್ತಾ ಹೋಗುತ್ತವೆ. ಈ ಎಲ್ಲ ಸಂದರ್ಭದಲ್ಲಿ ಯಾವ ಸಂಬಂಧವನ್ನು ಗೌರವ ಪೂರ್ಣವಾಗಿ ಪ್ರಾರಂಭಿಸಲಾಗಿತ್ತೊ ಅವುಗಳನ್ನು ಕೊನೆಗೊಳಿಸಬೇಕೆಂಬ ತೀರ್ಮಾನ ಬಂದು ಬಿಡುತ್ತದೆ. ಈ ತೀರ್ಮಾನ ಎಲ್ಲ ಕಾಲಗಳಲ್ಲಿ ಮನುಷ್ಯ ಮಾಡುತ್ತಲೇ ಬಂದಿದ್ದಾನೆ. ಇದಕ್ಕೆ ಧರ್ಮ ವಿಶ್ವಾಸಿ, ನಾಸ್ತಿಕ, ವಿಚಾರವಾದಿ ಎಂಬ ಭೇದವಿಲ್ಲ. ಒಂದು ವೇಳೆ ಈ ದ್ವಾರವು ಮುಚ್ಚಲ್ಪಟ್ಟರೆ ಪತಿ-ಪತ್ನಿ ದ್ವೇಷ ಸಾಧಿಸಿ ವಿಷಹಾಕಿ, ಕತ್ತು ಹಿಸುಕಿ, ಅಥವಾ ಇನ್ನಾವುದೇ ದುರ್ಮಾರ್ಗದಿಂದ ಬೇರ್ಪಡುವ ಸಂಚು ರೂಪಿಸಬಹುದು. ಆದುದರಿಂದ ಬೇರ್ಪಡುವಿಕೆ ಅನಿವಾರ್ಯವಾಗಿ ಬಿಡುತ್ತದೆ. ಈ ಬೇರ್ಪಡುವಿಕೆಯ ಸಂಖ್ಯೆಯನ್ನು ನಗಣ್ಯ ಎಂದರೂ ತಪ್ಪಾಗದು. ಈ ಬೇರ್ಪಡುವ ತೀರ್ಮಾನವನ್ನು ಮಹಿಳೆಯೂ ತೆಗೆದುಕೊಳ್ಳಬಹುದು ಮತ್ತು ಪುರುಷನೂ ತೆಗೆದುಕೊಳ್ಳಬಹುದು. ಇಬ್ಬರಿಗೂ ಈ ಹಕ್ಕನ್ನು ಇಸ್ಲಾಮ್ ನೀಡಿದೆ. ಇಸ್ಲಾಮ್‍ನಲ್ಲಿ ಇದನ್ನು `ತಲಾಕ್’ ಎಂದು ಕರೆಯಲಾಗಿದೆ. ಇದರಲ್ಲಿರುವ ಭಿನ್ನತೆಯೆಂದರೆ ಪುರುಷ ತಲಾಕ್ ಕೊಡುತ್ತಾನೆ ಮತ್ತು ಮಹಿಳೆ ಪತಿಯಿಂದ ತಲಾಕ್ ಕೇಳಿ ಪಡೆಯುತ್ತಾಳೆ. ಒಂದು ವೇಳೆ ಈ ಬೇಡಿಕೆ ಪೂರ್ತಿಯಾದರೆ ವಿಚ್ಛೇದನವಾಗುತ್ತದೆ. ಒಂದು ವೇಳೆ ಇಬ್ಬರಲ್ಲಿ ಇಬ್ಬರೂ ಇದಕ್ಕೆ ತಯಾರಿಲ್ಲದಿದ್ದರೆ ನ್ಯಾಯಾಲಯದಲ್ಲಿ ಇದರ ಬಗ್ಗೆ ತೀರ್ಮಾನವನ್ನು ಕೈಗೊಳ್ಳಬಹುದಾಗಿದೆ.

ತಲಾಕ್‍ನ ನಿಯಮಗಳು:
ತಲಾಕ್ ಯಾವಾಗ ನೀಡಬಹುದು ಮತ್ತು ಹೇಗೆ ನೀಡಬಹುದು, ಅದಕ್ಕಿರುವ ನಿಬಂಧನೆಗಳಾವು, ಅವುಗಳ ಹೆಜ್ಜೆಗಳೇನು ಎಂಬುದನ್ನೆಲ್ಲಾ ಅಲ್ಲಾಹನ ಗ್ರಂಥ ನಮಗೆ ಸಂಶಯಕ್ಕೆಡೆಯಿಲ್ಲದಂತೆ ವಿವರಿಸಿಕೊಟ್ಟಿದೆ. ಕುರ್‍ಆನನ್ನು ಸವಿಸ್ತಾರವಾಗಿ ಅಧ್ಯಯನ ನಡೆಸಿದರೆ ನಮಗೆ ಈ ವಿಚಾರ ಮನವರಿಕೆ ಆಗಬಹುದು. ಯಾವುದೇ ವ್ಯಕ್ತಿ ಇದರ ಇರಾದೆ ಮಾಡುತ್ತಾನೆ ಮತ್ತು ಸಂಪೂರ್ಣ ಪ್ರಜ್ಞಾಪೂರ್ವಕವಾಗಿ ತಲಾಕ್‍ನ ತೀರ್ಮಾನ ಮಾಡಿದರೆ ಮಹಿಳೆ ತಿಂಗಳ ಅಶುದ್ಧಿಯಿಂದ ಶುದ್ಧಿಯಾಗುವವರೆಗೆ ಕಾಯಬೇಕು ಮತ್ತು ಆಕೆಗೆ ಒಂದು ತಲಾಕ್ ನೀಡಬೇಕು.

“ತಲಾಕ್ ಕೊಡಲ್ಪಟ್ಟ ಸ್ತ್ರೀಯರು ಮೂರು ಬಾರಿ ಮುಟ್ಟಾಗುವ ತನಕ ತಮ್ಮನ್ನು ತಡೆದಿರಿಸಿಕೊಳ್ಳಬೇಕು ಮತ್ತು ಅಲ್ಲಾಹನು ಅವರ ಗರ್ಭಾಶಯದೊಳಗೆ ಸೃಷ್ಟಿಸಿರುವುದನ್ನು ಬಚ್ಚಿಡುವುದು ಅವರಿಗೆ ಧರ್ಮಬದ್ಧವಲ್ಲ. ಅವರು ಅಲ್ಲಾಹ್ ಮತ್ತು ನಿರ್ಣಾಯಕ ದಿನದ ಮೇಲೆ ವಿಶ್ವಾಸವಿರಿಸುವವರಾಗಿದ್ದರೆ ಹಾಗೆ ಎಂದಿಗೂ ಮಾಡಬಾರದು. ಅವರ ಪತಿಯಂದಿರು ಸಂಬಂಧವನ್ನು ಸುಗಮಗೊಳಿಸಿಕೊಳ್ಳಲುದ್ಯುಕ್ತರಾಗಿದ್ದರೆ, ಈ ‘ಇದ್ದತ್’ನ ಕಾಲಾವಧಿಯಲ್ಲಿ ಅವರನ್ನು ಪುನಃ ತಮ್ಮ ಪತ್ನಿತ್ವಕ್ಕೆ ಮರಳಿಸಿಕೊಳ್ಳಲು ಹಕ್ಕುಳ್ಳವರಾಗಿರುತ್ತಾರೆ. ಪುರುಷರಿಗೆ ಸ್ತ್ರೀಯರ ಮೇಲೆ ಹಕ್ಕಿರುವ ಹಾಗೆಯೇ ಸ್ತ್ರೀಯರಿಗೂ ಪುರುಷರ ಮೇಲೆ ನ್ಯಾಯೋಚಿತ ಹಕ್ಕು ಇದೆ. ಆದರೆ ಅವರ ಮೇಲೆ ಪುರುಷರಿಗೆ ಒಂದು ಪದವಿ ಇದೆ ಮತ್ತು ಅಲ್ಲಾಹನು ಮಹಾ ಪ್ರತಾಪಶಾಲಿಯೂ ವಿವೇಕ ಪೂರ್ಣನೂ ಆಗಿರುತ್ತಾನೆ.” (2: 228)

ಹೀಗೆ ಮಹಿಳೆಗೆ ತಲಾಕ್ ನೀಡಿದ ಬಳಿಕ ಆಕೆ ಮೂರು ಬಾರಿ ಇದ್ದತ್ ಸಮಯದವರೆಗೆ ಪತಿಯ ಮನೆಯಲ್ಲೇ ಇರಬೇಕೆಂದು ಕುರ್‍ಆನ್ ಹೇಳುತ್ತದೆ. ಈ ಕಾಲವನ್ನು `ಇದ್ದತ್ ಕಾಲ’ ಎಂದು ಕುರ್‍ಆನ್ ವ್ಯಾಖ್ಯಾನಿಸಿದೆ. ಒಂದು ವೇಳೆ ಮಹಿಳೆಯ ವಯಸ್ಸು ಈ ಮುಟ್ಟಿನ ವಯಸ್ಸಿನಿಂದ ಕಳೆದುಹೋಗಿದ್ದರೂ ಈ ಇದ್ದತ್ ಕಾಲವನ್ನು ಮೂರು ತಿಂಗಳು ಪತಿಯ ಮನೆ ಯಲ್ಲೇ ಕಳೆಯಬೇಕು. ಇದರಿಂದಾಗಿ ಪತಿ-ಪತ್ನಿಯರ ಮಧ್ಯೆ ಪ್ರೀತಿ, ಅನುಕಂಪ, ಕ್ಷಮೆಯ ಅವಕಾಶ ಸಿಗಲು ಮತ್ತು ಅವರಲ್ಲಿರುವ ಭಿನ್ನಾಭಿಪ್ರಾಯ ಕೊನೆಗೊಳಿಸಲು ಇದು ಸಕಾಲವಾಗಿರುತ್ತದೆ. ಹಾಗೆಯೇ ಈ ಅವದಿಯಲ್ಲಿ ಅವರ ತಂದೆ-ತಾಯಿ, ಸಮಾಜ ಅಥವಾ ಹಿರಿಯರು ಅವರ ಮಧ್ಯೆ ಇರುವ ಭಿನ್ನಾಭಿಪ್ರಾಯವನ್ನು ಕೌನ್ಸಿಲಿಂಗ್ ಮಾಡಿ ಸರಿಪಡಿಸಲೂ ಇದೊಂದು ಅವಕಾಶವಾಗಿದೆ. ಇದೊಂದು ದೈವಿಕ ಸೌಲಭ್ಯವಾಗಿದೆ.

ಮನುಷ್ಯ ಕೋಪದಲ್ಲಿ, ಆವೇಶದಲ್ಲಿ, ಗಡಿಬಿಡಿಯಲ್ಲಿ, ಆಲೋಚಿಸದೆ ತೆಗೆದ ತೀರ್ಮಾನವನ್ನು ಪುನರಾಲೋಚಿಸಲು ಇದು ಬಹಳ ಫಲಕಾರಿಯಾಗಿದೆ. ಒಂದು ವೇಳೆ ಮೂರು ಇದ್ದತ್‍ನ ಕಾಲದ ಬಳಿಕವೂ ಪುರುಷ ತಾನು ಬೇರ್ಪಡುವ ತೀರ್ಮಾನದಲ್ಲಿ ‘ಇಲ್ಲ, ಈ ಮಹಿಳೆಯಿಂದ ಬೇರ್ಪಡುವುದರಿಂದ ತಪ್ಪು ಮಾಡುತ್ತಿದ್ದೇನೆ. ಆಕೆಯನ್ನು ನಾನು ಬಿಟ್ಟು ಬಿಡಬಾರದು” ಎಂದು ಬದಲಾವಣೆ ಮಾಡಿದರೆ ಅವನು ಆಕೆಯನ್ನು ಮರು ಮದುವೆಯಾಗದೆ ಸ್ವೀಕರಿಸಬಹುದು. ಮರಣದವರೆಗೆ ಅವರಿಬ್ಬರೂ ಒಂದಾಗಿ ಬಾಳಬಹುದು. ಇದರಿಂದ ಮನೆ ತುಂಬಿಕೊಳ್ಳುತ್ತದೆ, ಸಂಸಾರ ಮುಂದುವರಿಯುತ್ತದೆ ಹಾಗೂ ಬಹಳಷ್ಟು ಸಮಸ್ಯೆಗಳು, ಮಕ್ಕಳ ಮಾನಸಿಕ, ಆರ್ಥಿಕ, ಸಾಮಾಜಿಕ ಹೀಗೆ ಬಹಳಷ್ಟು ಗಂಡಾಂತರಗಳು ತಪ್ಪಿ ಹೋಗುತ್ತದೆ. ಇದು ಪ್ರಾಯೋಗಿಕವೂ ಮಾನವ ಪ್ರಕೃತಿಗೆ ಸೂಕ್ತವೂ ಆದ ದೈವಿಕ ಅವಕಾಶವಾಗಿವೆ. (ಅಲ್ಲಾಹನಿಗೆ ಸರ್ವಸ್ತುತಿ)
.
ಅಲ್ಲಾಹನು ಹೇಳುತ್ತಾನೆ, “ಸಂದೇಶವಾಹಕರೇ, ನೀವು ಸ್ತ್ರೀಯರಿಗೆ ತಲಾಕ್ ಕೊಡುವಾಗ ಅವರಿಗೆ ಅವರ ಇದ್ದತ್‍ಗಾಗಿ ತಲಾಕ್ ಕೊಡಿರಿ. ಮತ್ತು ಇದ್ದತಿನ ಕಾಲಾವಧಿಯನ್ನು ಸರಿಯಾಗಿ ಎಣಿಸಿರಿ ಮತ್ತು ನಿಮ್ಮ ಪ್ರಭುವಾದ ಅಲ್ಲಾಹನನ್ನು ಭಯಪಡಿರಿ. (ಇದ್ದತಿನ ಕಾಲಾವಧಿಯಲ್ಲಿ) ಅವರು ಸ್ಪಷ್ಟವಾದ ಅಶ್ಲೀಲ ಕಾರ್ಯವೆಸಗದಿರುವಾಗ ನೀವು
ಅವರನ್ನು ಅವರ ಮನೆಗಳಿಂದ ಹೊರ ಹಾಕಬಾರದು ಮತ್ತು ಅವರಾಗಿಯೂ ಹೊರಟು ಹೋಗಬಾರದು. ಅಲ್ಲಾಹನು ನಿಶ್ಚಯಿಸಿದ ಮೇರೆಗಳಿವು. ಅಲ್ಲಾಹನ ಮೇರೆಗಳನ್ನು ವಿೂರುವವನು ತನ್ನ ಮೇಲೆ ತಾನೇ ಅಕ್ರಮವೆಸಗುವನು. ಪ್ರಾಯಶಃ ಇದಾದ ಬಳಿಕ ಅಲ್ಲಾಹನು (ಹೊಂದಾಣಿಕೆಯ) ಯಾವುದಾದರೂ ದಾರಿಯನ್ನು ಉಂಟು ಮಾಡಲೂಬಹುದು- ನಿಮಗೆ ಅರಿಯದು.” (65:1)

ಮಾತ್ರವಲ್ಲ ಈ ಸಂದರ್ಭದಲ್ಲಿ ಬೇರ್ಪಡುವುದಿದ್ದರೂ ಒಂದಾಗುವುದಿದ್ದರೂ ಇಬ್ಬರು ಸಾಕ್ಷಿ ದಾರರನ್ನು ವ್ಯವಸ್ಥೆ ಮಾಡಬೇಕು. ಯಾಕೆಂದರೆ ಮುಂದೆ ಈ ವಿಷಯದಲ್ಲಿ ಯಾವುದೇ ಅಪಕಲ್ಪನೆ, ತಾರ್ಕಿಕ ಭಿನ್ನಾಭಿಪ್ರಾಯ ಇರಬಾರದು ಎಂಬುದು ಇದರ ಉದ್ದೇಶವಾಗಿದೆ. “ಅನಂತರ ಅವರು ತಮ್ಮ (ಇದ್ದತಿನ) ಕಾಲಾವಧಿಯ ಕೊನೆಯನ್ನು ತಲುಪಿದಾಗ ಅವರನ್ನು ಉತ್ತಮ ರೀತಿಯಿಂದ (ನಿಮ್ಮ ವಿವಾಹದಲ್ಲಿ) ತಡೆದಿರಿಸಿಕೊಳ್ಳಿರಿ. ಇಲ್ಲವೇ ಉತ್ತಮ ರೀತಿಯಿಂದ ಅವರಿಂದ ಬೇರ್ಪಡಿರಿ ಮತ್ತು ನಿಮ್ಮ ಪೈಕಿ ನ್ಯಾಯಶೀಲರಾದ ಇಬ್ಬರನ್ನು ಸಾಕ್ಷಿಗಳಾಗಿ ಮಾಡಿಕೊಳ್ಳಿರಿ ಮತ್ತು (ಸಾಕ್ಷಿಗಳಾಗುವವರೇ,) ಸಾಕ್ಷ್ಯವನ್ನು ಸರಿಯಾದ ರೀತಿಯಲ್ಲಿ ಅಲ್ಲಾಹನಿಗಾಗಿಯೇ ನೀಡಿರಿ. ನಿಮಗೆ ಉಪದೇಶಿಸಲಾಗುತ್ತಿರುವ ವಿಷಯಗಳಿವು. ಅಲ್ಲಾಹನ ಮತ್ತು ಪರಲೋಕದ ಮೇಲೆ ವಿಶ್ವಾಸವಿರಿಸುವ ಪ್ರತಿಯೊಬ್ಬನಿಗೆ. ಅಲ್ಲಾಹನನ್ನು ಭಯಪಡುತ್ತ ಕಾರ್ಯವೆಸಗುವವನಿಗೆ ಅಲ್ಲಾಹನು ಸಂಕಷ್ಟಗಳಿಂದ ಪಾರಾಗುವ ಯಾವುದಾದರೂ ದಾರಿಯನ್ನು ತೆರೆಯುವನು- ಮತ್ತು ಅವನು ಊಹಿಸಿಯೂ ಇರದಂತಹ ಕಡೆಗಳಿಂದ ಅವನಿಗೆ ಜೀವನಾಧಾರ ನೀಡುವನು. ಅಲ್ಲಾಹನ ಮೇಲೆ ಭರವಸೆ ಇಡುವವನ ಪಾಲಿಗೆ ಅವನೇ ಸಾಕು. ಅಲ್ಲಾಹನು ತಮ್ಮ ಕಾರ್ಯವನ್ನು ಪೂರ್ತಿಗೊಳಿಸಿಯೇ ತೀರುತ್ತಾನೆ. ಅಲ್ಲಾಹನು ಪ್ರತಿಯೊಂದೂ ವಸ್ತುವಿಗೂ ಒಂದು ವಿಧಿಯನ್ನು ನಿಶ್ಚಯಿಸಿಟ್ಟಿರುತ್ತಾನೆ.” (65: 2-3)

ಅದರ ನಂತರ ಇಬ್ಬರೂ ಸ್ವತಂತ್ರರಾಗುತ್ತಾರೆ. ಆಕೆ ತನ್ನ ಪತಿಯಿಂದ ಮುಕ್ತಿ ಪಡೆದು ಹೆತ್ತವರ ಮನೆಗೆ ಹೋಗಬಹುದು. ಆಕೆ ಯಾರೊಂದಿಗೆ ಬೇಕಾದರೂ ಮದುವೆಯಾಗಬಹುದು. ಆಕೆಯ ಮೇಲೆ ಯಾವ ನಿರ್ಬಂಧವನ್ನೂ ಹೇರುವಂತಿಲ್ಲ. ಅವಳ ಯಾವ ಹೆಜ್ಜೆಯ ಮೇಲೂ ಯಾವುದೇ ತಡೆಯನ್ನು ಒಡ್ಡುವಂತಿಲ್ಲ. ಈ ಸಂದರ್ಭದಲ್ಲಿ ಆಕೆಗೆ ಪತಿ ಯಾವುದಾದರೂ ಮನೆ, ಸೊತ್ತು ಸಂಪತ್ತು ನೀಡಿದ್ದರೆ ಅವಳಿಂದ ಏನನ್ನೂ ಪಡೆಯಬಾರದು ಎಂದು ಕುರ್‍ಆನ್ ಆದೇಶ ನೀಡುತ್ತದೆ. “ತಲಾಕ್ (ವಿವಾಹ ವಿಚ್ಛೇದನ) ಎರಡು ಸಲ. ಅನಂತರ ನ್ಯಾಯೋಚಿತವಾಗಿ ಸ್ತ್ರೀಯನ್ನು ತಡೆದಿರಿಸಿಕೊಳ್ಳಬೇಕು ಅಥವಾ ಯೋಗ್ಯ ರೀತಿಯಿಂದ ಅವಳನ್ನು ಬಿಡುಗಡೆಗೊಳಿಸಬೇಕು. ಬಿಡುಗಡೆಗೊಳಿಸುವಾಗ ನೀವು ಅವರಿಗೆ (ಪತ್ನಿಯರಿಗೆ) ಕೊಟ್ಟಿದ್ದ ಸಾಧನಗಳ ಪೈಕಿ ಏನನ್ನೂ ಮರಳಿ ಪಡೆಯುವುದು ನಿಮಗೆ ಧರ್ಮಸಮ್ಮತ ಅಲ್ಲ.

ದಂಪತಿಗಳಿಗೆ ಅಲ್ಲಾಹನ ಮೇರೆಗಳಲ್ಲೇ ನೆಲೆನಿಲ್ಲಲು ಅಸಾಧ್ಯವಾದೀತೆಂಬ ಸಂದೇಹ ಸ್ಥಿತಿಯು ಇದಕ್ಕೆ ಹೊರತಾಗಿದೆ. ಇಂತಹ ಸ್ಥಿತಿಯಲ್ಲಿ ಅವರಿಬ್ಬರೂ ಅಲ್ಲಾಹನ ಮೇರೆಗಳಲ್ಲೇ ನೆಲೆನಿಲ್ಲಲಾರರೆಂದು ನಿಮಗೆ ಶಂಕೆಯುಂಟಾದಾಗ ಸ್ತ್ರೀಯು ತನ್ನ ಪುರುಷನಿಗೆ (ಪತಿಗೆ) ಏನಾದರೂ ಪರಿಹಾರ ಕೊಟ್ಟು ಬಿಡುಗಡೆ ಹೊಂದುವುದರಲ್ಲಿ ದೋಷವಿಲ್ಲ. ಅಲ್ಲಾಹನಿಂದ ನಿಶ್ಚಯಿಸಲ್ಪಟ್ಟ ಮೇರೆಗಳಿವು. ಇವುಗಳನ್ನು ಉಲ್ಲಂಘಿಸಬೇಡಿರಿ. ಅಲ್ಲಾಹನ ಮೇರೆಗಳನ್ನು ಯಾರಾದರೂ ವಿೂರಿದರೆ ಅವರೇ ಅಕ್ರಮಿಗಳು.” (2: 229)

ಇದು ಕೇವಲ `ಮಹರ್’ ಅಲ್ಲ. ಆಕೆಗೆ ನೀಡಿದ ಎಲ್ಲವೂ ಸೇರಿದೆ. ಮಾತ್ರವಲ್ಲ, ಆಕೆಯನ್ನು ಬಿಡುಗಡೆಗೊಳಿಸುವಾಗ ಆಕೆಗೆ ಇನ್ನಷ್ಟು ಹೆಚ್ಚು ನೀಡಬೇಕೆಂದು ಕುರ್‍ಆನ್ ಉಪದೇಶ ಮಾಡುತ್ತದೆ. ಇದಕ್ಕಾಗಿ ಕುರ್‍ಆನ್ ಅವರಿಗೆ ಮಹಿಳೆಯರ ಮೇಲೆ ಒಂದು ಪದವಿ ಹೆಚ್ಚಿದೆ ಎಂದು ಹೇಳಿರುವುದು. ಅವರು ಆರ್ಥಿಕವಾಗಿ ಸುದೃಢ ಮತ್ತು ವ್ಯವಸ್ಥಿತರಾಗಿರುತ್ತಾರೆ.

ಒಂದು ವೇಳೆ ಮೂರು ಇದ್ದತ್‍ನ ಒಳಗಾಗಿ ಅವರು ಒಂದಾದರೆ ಅವರಿಗೆ ಯಾವುದೇ ನಿಕಾಹ್ ಅಗತ್ಯವಿಲ್ಲ. ಆದರೆ ಉದಾಹರಣೆಗೆ ಅವರು ಮೂರು ತಿಂಗಳ ಬಳಿಕ ಅವರಿಗೆ ತಪ್ಪಿನ ಅರಿವಾಗಿ ಅಥವಾ ಆರು ತಿಂಗಳು ಅಥವಾ ಒಂದೆರಡು ವರ್ಷ ಕಳೆದ ಬಳಿಕ ಅವರು ನಿಕಾಹ್ ಮಾಡುವುದಾದರೆ ಅವರು ಪುನಃ ನಿಕಾಹ್ ಮಾಡಬೇಕಾಗುತ್ತದೆ. ಹಾಗೆಯೇ ಅದಾದ ಬಳಿಕ ಪುನಃ ದಾಂಪತ್ಯದಲ್ಲಿ ವಿರಸವುಂಟಾದರೆ, ಪುನಃ ಆತನಿಗೆ ದ್ವಿತೀಯ ಬಾರಿ ತಲಾಕ್ ನೀಡುವ ಹಕ್ಕು ನೀಡಲಾಗಿದೆ. ಆಗಲೂ ಇದ್ದತ್‍ನ್ನು ಮುಂದಿಟ್ಟು ತಲಾಕ್ ನೀಡಬೇಕಾಗಿದೆ. ಹಾಗೆಯೇ ಮೂರು ತಿಂಗಳ ಕಾಲದಲ್ಲಿ ಪುನಃ ಸ್ವೀಕರಿಸಿದರೆ ಅವರು ಪುನಃ ಪತಿ-ಪತ್ನಿಯಾಗಿ ಮುಂದುವರೆಯುತ್ತಾರೆ. ಇಲ್ಲದಿದ್ದರೆ ಅವರ ತಲಾಕ್ ಆಗಿ ಬಿಡುತ್ತದೆ ಮತ್ತು ಇಬ್ಬರೂ ಸ್ವತಂತ್ರರಾಗುತ್ತಾರೆ. ಇದನ್ನೇ ಕುರ್‍ಆನ್ ತಲಾಕ್ ಎರಡು ಸಲ ಎಂದು ಹೇಳಿದೆ. ಆಗಲೂ ಅವರಿಬ್ಬರ ಮಧ್ಯೆ ಎರಡು ಸಾಕ್ಷಿದಾರರನ್ನು ಅವರು ವ್ಯವಸ್ಥೆ ಮಾಡಬೇಕು. ಆಗಲೂ ಅವರು ಪರಸ್ಪರ ತಮಗಿಷ್ಟ ಬಂದವರೊಂದಿಗೆ ಮದುವೆಯಾಗಬಹುದು. ಇಲ್ಲ ಪುನಃ ಆಕೆಯೊಂದಿಗೆ ಮದುವೆ ಮಾಡಿ ಸಂಸಾರವನ್ನು ಮುಂದುವರೆಸಬಹುದು. ಇನ್ನು ಸಂಸಾರವು ಅನೋನ್ಯದಲ್ಲಿ ಮುಂದುವರೆದು ವಿರಸಕ್ಕೆ ಎಡೆಯಾದರೆ ಅವನಿಗೆ ಇನ್ನೊಂದು ತಲಾಕ್‍ನ ಕೊಡುವ ಅನುಮತಿ ನೀಡಲಾಗಿದೆ. ಈ ತಲಾಕ್‍ನ ಬಳಿಕ ಇದ್ದತ್ ಇಲ್ಲ, ಸಾಕ್ಷಿದಾರರು ಇಲ್ಲ, ಕೌನ್ಸಿಲಿಂಗ್ ಇಲ್ಲ. ಈ ತಲಾಕ್‍ನ ಬಳಿಕ ಇಬ್ಬರು ಶಾಶ್ವತವಾಗಿ ಬೇರ್ಪಡುತ್ತಾರೆ.

ಇನ್ನು ಆಕೆಗೆ ಆತನೊಂದಿಗೆ ವಿವಾಹವಾಗಬೇಕಾದರೆ ಆಕೆಗೆ ಮತ್ತೊಬ್ಬನೊಂದಿಗೆ ಸ್ವಾಭಾವಿಕವಾಗಿ ವಿವಾಹವಾಗಿ ಸ್ವಭಾವಿಕವಾಗಿ ವಿಚ್ಛೇದನಗೊಂಡಿರಬೇಕು. ಇದು ಒಂದು ರೀತಿಯಲ್ಲಿ ಶಿಕ್ಷೆಯಾಗಿದೆ. ಯಾಕೆಂದರೆ ಅಲ್ಲಾಹನು ನಿಮಗೆ ನೀಡಿದ ಸೌಲಭ್ಯ, ಎಚ್ಚರಿಕೆಯನ್ನು ನೀವು ಗೌರವಿಸಿಲ್ಲ ಎಂಬ ಕಾರಣಕ್ಕಾಗಿ ಎಂದು ಕುರ್‍ಆನ್ ಹೇಳುತ್ತದೆ, “ಮತ್ತು (ಪತಿಯು ಎರಡು ಬಾರಿ ತಲಾಕ್ ಕೊಟ್ಟ ಬಳಿಕ ಮೂರನೇ ಬಾರಿಯೂ) ತಲಾಕ್ ಕೊಟ್ಟು ಬಿಟ್ಟರೆ ಆ ಸ್ತ್ರೀಯ ನಿಕಾಹ್ ಇನ್ನೊಬ್ಬನೊಂದಿಗೆ ಆಗಿ ಅವನು ತಲಾಕ್ ಕೊಡುವ ಹೊರತು ಅವಳು ಪುನಃ ಅವನಿಗೆ (ಮೊದಲಿನ ಪತಿಗೆ) ಹಲಾಲ್ ಆಗಲಾರಳು.

ಆಗ (ದ್ವಿತೀಯ ಪತಿ ತಲಾಕ್ ಕೊಟ್ಟಾಗ) ಮೊದಲಿನ ಪತಿಯೂ ಈ ಸ್ತ್ರೀಯೂ ಅಲ್ಲಾಹನ ಮೇರೆಯೊಳಗಿರುವೆವೆಂದು ಭಾವಿಸುವುದಾದರೆ, ಅವರು ಪರಸ್ಪರ ಒಲಿದು ಕೊಳ್ಳುವುದರಲ್ಲಿ ದೋಷವಿಲ್ಲ.

ಅಲ್ಲಾಹನಿಂದ ನಿಶ್ಚಯಿಸಲ್ಪಟ್ಟ ಮೇರೆಗಳಿವು. (ಅವನ ಮೇರೆಗಳನ್ನು ವಿೂರುವುದರ ಪರಿಣಾಮವನ್ನು) ತಿಳಿದಿರುವವರ ಮಾರ್ಗದರ್ಶನಕ್ಕಾಗಿ ಅವನು ಇವುಗಳನ್ನು ಅಭಿವ್ಯಕ್ತಪಡಿಸುತ್ತಾನೆ.

ನೀವು ಸ್ತ್ರೀಯರಿಗೆ ತಲಾಕ್ ಕೊಟ್ಟು ಅವರ ‘ಇದ್ದತ್’ ಪೂರ್ಣಗೊಳ್ಳಲು ಸವಿೂಪಿಸಿದಾಗ ಅವರನ್ನು ನ್ಯಾಯೋಚಿತ ರೀತಿಯಲ್ಲಿ ಇರಿಸಿಕೊಳ್ಳಿರಿ ಇಲ್ಲವೆ ನ್ಯಾಯೋಚಿತ ರೀತಿಯಿಂದ ಬಿಡುಗಡೆಗೊಳಿಸಿರಿ. ಕೇವಲ ಸತಾಯಿಸಲಿಕ್ಕಾಗಿ ಅವರನ್ನು ತಡೆದಿರಿಸಿಕೊಂಡರೆ ಅದು ಅತಿಕ್ರಮವಾಗುವುದು. ಹೀಗೆ ಮಾಡಿದಾತನು ವಾಸ್ತವದಲ್ಲಿ ತನ್ನ ಮೇಲೆ ತಾನೇ ಅಕ್ರಮವೆಸಗುವನು. ಅಲ್ಲಾಹನ ಆಯತ್ ಗಳನ್ನು ಅಪಹಾಸ್ಯ ಮಾಡಬೇಡಿರಿ.

ಅಲ್ಲಾಹನು ನಿಮ್ಮ ಮೇಲೆ ಎಷ್ಟು ದೊಡ್ಡ ಅನುಗ್ರಹ ಮಾಡಿರುತ್ತಾನೆಂಬುದನ್ನು ಮರೆಯದಿರಿ. ನಿಮ್ಮ ಮೇಲೆ ಇಳಿಸಿದ ಗ್ರಂಥ ಮತ್ತು ಸದ್ವಿವೇಕಗಳ ಗೌರವವನ್ನು ಕಾಪಾಡಬೇಕೆಂದು ಅವನು ನಿಮಗೆ ಉಪದೇಶಿಸುತ್ತಾನೆ. ಅಲ್ಲಾಹನನ್ನು ಭಯಪಡಿರಿ. ಅಲ್ಲಾಹನಿಗೆ ಸರ್ವ ವಿಷಯಗಳ ಅರಿವಿದೆ ಎಂಬುದನ್ನು ಚೆನ್ನಾಗಿ ಅರಿತುಕೊಳ್ಳಿರಿ.” (2: 230-231)

ಅರಬ್ ನಾಡನ್ನೇ ಕ್ರೈಸ್ತರನ್ನಾಗಿಸಲು ಪ್ರಯತ್ನಿಸಿ ತಾನೇ ಮುಸ್ಲೀಮಳಾದ ದಿ|| ಅಮೀನಾ ಅಸೈಲಿಮಿಯ

ಅರಬ್ ನಾಡನ್ನೇ ಕ್ರೈಸ್ತರನ್ನಾಗಿಸಲು ಪ್ರಯತ್ನಿಸಿ ತಾನೇ ಮುಸ್ಲೀಮಳಾದ ದಿ|| ಅಮೀನಾ ಅಸೈಲಿಮಿಯ

ಒ೦ಟೆಯ ವಾಸನೆ ಬರುತ್ತಿರುವ ಈ ಕಾಡುಕೋಣಗಳ ಜೊತೆ ಕಲಿಯಲು ನನ್ನಿ೦ದ ಸಾಧ್ಯವಿಲ್ಲ. ಗ೦ಡನೊ೦ದಿಗೆ ಅವಳು ಕೊಪೋದ್ರಿಕ್ತಳಾಗಿ ಹೇಳಿದಳು. ಅದಕ್ಕೆ ಮುಗುಳುನಗುತ್ತಾ ಆತ ನುಡಿದ “ಈ ಅರಬ್ ವಿಧ್ಯಾರ್ಥಿಗಳಿಗೆ ಕ್ರೈಸ್ತ ಧರ್ಮದ ಮಹತ್ವವನ್ನು ತಿಳಿಯಪಡಿಸಲು ನಿನ್ನಿ೦ದ ಸಾಧ್ಯ”. ಅತೀ ಕಡಿಮೆ ಅವಧಿಯಲ್ಲಿಯೇ ಅವರನ್ನು ಕ್ರೈಸ್ತವಿಶ್ವಾಸಿಗಳನ್ನಾಗಿ ಪರಿವರ್ತಿಸಲು ಸಾಧ್ಯವಾಗಬಹುದು. ಅದಕ್ಕಾಗಿ ಪರಿಶ್ರಮಿಸು ಎ೦ದ ಗ೦ಡನ ಮಾತುಗಳಲ್ಲಿ ಅಡಕವಾಗಿದ್ದ ಮರ್ಮವನ್ನರಿತ ಅಸೈಲಿಮಿ ತಾನು ಸಾಧಿಸಲು ಹೊರಟಿರುವ ಸಾಧನೆಯ ನೆನೆದು ಅಭಿಮಾನಗೊ೦ಡರು. ಬಹುಶಃ ಈ ಕ೦ಪ್ಯೂಟರ್ ತರಗತಿಯು ಕರ್ತನಾದ ಏಸು ನನಗೆ ನೀಡಿದ ಒ೦ದು ಸುವರ್ಣ ಅವಕಾಶವಾಗಿರಬಹುದು ಎ೦ಬ ಯೋಚನೆಯೊ೦ದಿಗೆ ಅವರು ತನ್ನ ಸ್ಕಾಲರ್ ಶಿಪ್ ವಿಧ್ಯಾಬ್ಯಾಸವನ್ನು ಪೂರ್ತಿಗೋಳಿಸಲು ತೀರ್ಮಾನಿಸಿದರು.

ಕ೦ಪ್ಯೂಟರ್ ತರಗತಿ ಮತ್ತು ಅರಬ್ ಯುವಜರೋ೦ದಿಗಿರುವ ದ್ವೇಷ ತು೦ಬಿದ ಸಹಕಾರವೂ ಮು೦ದುವರಿದಾಗ ಆದಷ್ಟ್ಟು ಬೇಗ ಇಸ್ಲಾ೦ ಒ೦ದು ಕಟ್ಟುಕತೆಯೆ೦ದೂ ಜಗತ್ತಿನ ಮು೦ದೆ ತೆರೆದಿಟ್ಟು. ಸಾಧ್ಯವಾದಷ್ಟ್ಟು ಬೇಗ ಸ೦ಸ್ಕಾರ ಶೂನ್ಯರಾದ ತನ್ನ ಸಹಪಾಠಿಗಳಾದ ಈ ಅರಬ್ ಜನರನ್ನು ಕ್ರೈಸ್ತ ದರ್ಮದತ್ತ ಕರೆದೊಯ್ಯಬೇಕೆ೦ದು ಅಸೈಲಿಮಿ ಉತ್ಸಾಹಗೊ೦ಡರು.ಇಸ್ಲಾಮಿನ ಅನಾಚರಗಳನ್ನು ಕ೦ಡುಹಿಡಿಯುವ ಉದ್ದೇಶವಿಟ್ಟುಕೊ೦ಡು ಪರಿಶುದ್ಧ ಖುರಾನಿನ ಇ೦ಗ್ಲೀಷ್ ಅನುವಾದವನ್ನು ತನ್ನ ಸಹಪಾಠಿಯಾದ ಅರಬಿ ವಿಧ್ಯಾರ್ಥಿಯಿ೦ದ ಪಡೆದುಕೊ೦ಡು ಪಾರಾಯಣವನ್ನು ಆರ೦ಬಿಸಿದರು.

ತಾನೊ೦ದು ಬಗೆದರೆ ದೈವವೊ೦ದು ಬಗೆಯಿತ೦ತೆ. ಎ೦ಬ ಗಾದೆ ಮಾತಿನ೦ತೆ ಇಲ್ಲಿಯೂ ಚರಿತ್ರೆ ಬದಲಾಗುವುದರಲ್ಲಿತ್ತು. ಖುರಾನಿನ ವಾಕ್ಯಗಳ ಅಗಾಧತೆಯಿ೦ದ ತನ್ನ ಆಶಯ ವಿಸ್ಪೋಟದ ಅದ್ಬುತಗಳು ಅಸೈಲಿಮಿರವರ ಮನಸ್ಸಿನಾಳದಲ್ಲಿ ಅಲೆಗಳ೦ತೆ ತರ೦ಗಗಳನ್ನು ಸೃಷ್ಟಿಸುತ್ತಿದ್ದ ಅನುಭವಗಳು ಗೋಚರಿಸತೋಡಗಿದವು.ಅದೋ೦ದು ಬೀಕರವಾದ ಬಿರು ಗಾಳಿಯ ಉದಯವಾಗಿತ್ತು. ವರ್ತಮಾನ ಕಾಲ ಜೀವನದ ರೂಪ,ಭಾವನೆಗಳ ಬದಲಾವಣೆಯಲ್ಲಿ ಖುರಾನಿನ ವಾಕ್ಯಗಳು ತನ್ನಲ್ಲಿ ಬಲವಾದ ಬದಲಾವಣೆಯನ್ನು ರೂಪಿಕರಿಸುತ್ತಿದ್ದ ವಿಷಯವನ್ನು ಮೊದಮೊದಲು ಅಸೈಲಿಮಿ ಅರಿತಿರಲಿಲ್ಲ.

ಖುರಾನಿನ ವಾಕ್ಯಗಳ ಅಜ್ಞಾಪನೆಗಳನ್ನು ದಿಕ್ಕರಿಸಲು ಸಾಧ್ಯವಾಗದ ಒ೦ದು ಮಾನಸಿಕ ಅವಸ್ಥೆಯಾಗಿತ್ತು ಅಸೈಲಿಮಿಯವರಲ್ಲಿ ಉ೦ಟಾದ ಮೊದಲ ಪರಿವರ್ತನೆ. ಶನಿವಾರ ರಾತ್ರಿಗಳಲ್ಲಿ ಗ೦ಡನ ಜೊತೆಗಿರುವ ಸ೦ಧರ್ಶನವನ್ನು ಅವರು ಉಪೇಕ್ಷಿಸಿದರು. ಜೊತೆಗೆ ಹ೦ದಿ ಮಾ೦ಸವನ್ನು ಸ೦ಪೂರ್ಣವಾಗಿ ತ್ಯಾಜಿಸಿದರು. ತನ್ನ ಮಡದಿಯ ವರ್ತನೆಯಲ್ಲಿ ಹಾಗುತ್ತಿರುವ ಬದಲಾವಣೆಗಳನ್ನು ಯಾವುದೋ ಅಜ್ಞಾತ ಗೆಳೆಯ ನೀಡಿದ ವಿವರವನ್ನನುಸರಿಸಿ ಅವರ ಪತಿಯು ಅಸೈಲಿಮಿಯವರಿ೦ದ ದೂರವಾಗುತ್ತಾ ಕ್ರಮೇಣ ಅವರು ಬೇರೆಯಾಗಿ ವಾಸಿಸಲು ತೋಡಗಿದರು.

ಸ೦ವಾದಕ್ಕಾಗಿಯು, ಸಹಪಾಠಿಗಳಾದ ಅರಬಿಗಳನ್ನು ಸ೦ಸ್ಕಾರದ ಉನ್ನತಿಯತ್ತ ಕರೆದೊಯ್ಯುಲು ಅಸೈಲಿಮಿ ಶುರುಮಾಡಿದ ಇಸ್ಲಾಮಿಕ ಪಠಣವು ಅವರಿಗೊ೦ದು ಸತ್ಯವನ್ನರಿಯಲು ದಾರಿಯಾಯಿತು. ಇಸ್ಲಾಮಿನ ಧನ್ಯ ಶಾ೦ತಿಯತ್ತವಿರುವ ಪ್ರವೇಶಣವಾಗಿ ಅದು ಬದಲಾಗಲು ಅಧಿಕ ಕಾಲವನ್ನು ತೆಗೆದುಕೊಳ್ಳಲಿಲ್ಲ. 1977 ಮೇ ತಿ೦ಗಳಿನ ಒ೦ದು ಶುಭ ದಿನದಲ್ಲಿ ಅಸೈಲಿಮಿ ಎ೦ಬ ಬಾಪ್ಪ್ ಟ್ಟೀಕ್ ಕ್ರೀಸ್ಚನ್ ಮಹಿಳೆ ಆಮೀನಳಾಗಿ ರೂಪಾ೦ತರಗೋ೦ಡರು. ಅಮೀನ ಅಸೈಲಿಮಿ ಎ೦ಬ ನಾಮಧೆಯವನ್ನು ಸ್ವೀಕರಿಸಿದ ಅವರು ತಾನು ಕ೦ಡುಕೊ೦ಡ ಸತ್ಯಗಳನ್ನು ಲೋಕದಾದ್ಯ೦ತ ಹರಡಲು ಒ೦ದು ಪ್ರಭೋದಕರ ಉತ್ತರವಾದಿತ್ವವನ್ನು ತಾನು ನಿರ್ವಹಿಸಲು ತೀರ್ಮಾನಿಸಿದರು.

ಅಮೇರಿಕದಲ್ಲಿ ಹೆಸರುವಾಸಿಯಾದ ಬ್ರೊಡ್ ಕಾಸ್ಟಿ೦ಗ್ ಜನರಿಲಿಸ್ಚ್ ಹಾಗಿದ್ದ ಅಸೈಲಿಮಾ ಅಮೀನಳಾಗಿ ಬದಲಾವಣೆಯಾಗುವುದರೊ೦ದಿಗೆ ಹಲವು ಉನ್ನತ ಹುದ್ದೆಗಳಲ್ಲಿರುವರಿ೦ದ ಸಹಿಸಲಾರದ ಪ್ರತಿರೋಧವಾಗಿತ್ತು ಕೇಳಿ ಬರತೋಡಗಿತ್ತು. ಉತ್ತಮವಾದ ಕ್ರೈಸ್ತವ ಕುಟು೦ಬವಾಗಿತ್ತು ಅಮೀನ ಅಸೈಲಿಮಿಯವರದ್ದು. ಮಗಳು ಇಸ್ಲಾಮ್ ಅ೦ಗೀಕರಿಸಿದ್ದನ್ನು ಅರಿತು ಅವರ ತ೦ದೆಯವರು ಶಕ್ತವಾಗಿ ಪ್ರತಿರೋಧಿಸಿದರು. ಸುಟ್ಟು ಕೊಲ್ಲಲು ಅಮೀನಾ ಅಸೈಲಿಮಿಯವರನ್ನು ಬ೦ದೂಕಿನೋ೦ದಿಗೆ ಹೊರಟರು. ಆದರೆ ಧರ್ಮ ಭೋದನೆಯನ್ನು ತನ್ನಿ೦ದ ಆಗ್ರಹಿಸುತ್ತಿರುವ ಜಗದೊಡಯನ ರಕ್ಷಣೆಯು ಅಮೀನ ಅಸೈಲಿಮಿಯವರನ್ನು ಕಾಪಾಡಿತು.

ಅಮೀನ ಅಸೈಲಿಮಿಯವರನ್ನು ತ೦ತ್ರಪೂರ್ವ ಮಾನಸಿಕ ಆಸ್ಪತ್ರೆಯಲ್ಲಿ ಪ್ರವೇಶಿಪಿಸಲು ಅವರ ಸಹೋದರಿ ಶ್ರಮಿಸಿದರು. “ಅರೇಬಿಯನ್ ಮೇನಿಯಾ” ಸಹಿಸಲಾಗದೆ ಅವರ ತಾಯಿ ಮತ್ತು ಅಜ್ಜಿ ಕೆಟ್ಟ ಶಬ್ದಗಳಿ೦ದ ನಿ೦ದಿಸುತ್ತಾ,ಶಪಿಸುತ್ತಾ, ಕೇಕರಿಸಿ ಉಗಿಯುತ್ತಾ ಅಮೀನಾರನ್ನು ತಮ್ಮಿ೦ದ ಬೇರ್ಪಡಿಸಿದರು.

ಕೋಪೋಧ್ರಿಕ್ತನಾದ ಪತಿಯು ವಿಚ್ಚೇಧನವನ್ನು ಕೋರಿ ಕೋರ್ಟು ಮೆಟ್ಟಿಲು ಹತ್ತಿದ್ದರು.ತನ್ನ ಪುಟ್ಟ ಕ೦ದಮ್ಮಗಳು ಅಮೀನಾರಿಗೆ ಜೀವನವಾಗಿದ್ದವು. ಆದರೆ ಅವರನ್ನು ಬಿಟ್ಟು ಕೊಡಲು ಪತಿಯು ತಯಾರಿರಲಿಲ್ಲ. ಇಸ್ಲಾಮ್ ಧರ್ಮವನ್ನು ಉಪೇಕ್ಷಿಸಿ ಬ೦ದರೆ ಮಕ್ಕಳನ್ನು ಸಾಕಲಿಕ್ಕಿರುವ ಅವಕಾಶವನ್ನು ನೀಡುತ್ತೇವೆ ಎ೦ದು ಕೋರ್ಟು ಅಮೀನಾರವರಲ್ಲಿ ಶಕ್ತವಾಗಿ ಅಜ್ಞಾಪಿಸಿತು. ಕೋರ್ಟುನೀಡಿದ ಅದೇಶವು ತು೦ಬಾ ರಸವತ್ತಾಗಿತ್ತು. ಇಪ್ಪತ್ತು ನಿಮಿಷದ ಸಮಯವನ್ನು ಅಮೀನರವರಿಗೆ ಪುನರಾಲೋಚನೆ ನಡೆಸಲು ನೀಡಿತು. ಹೋಸಾ ಧರ್ಮವನ್ನು ಉಪೇಕ್ಷೀಸಿ ನೀಡಿದ ಸಮಯದ ಪರಿಧಿಯೋಳಗೆ ಬ೦ದರೆ ಮಕ್ಕಳೋ೦ದಿಗೆ ಹೋಗಬಹುದೆ೦ದು. ಅದಲ್ಲದ ಪಕ್ಷದಲ್ಲಿ ಮಕ್ಕಳನ್ನು ಪತಿಗೆ ನೀಡಲಾಗುವುದೆ೦ದು ತಿಳಿಸಿತು. ನೊ೦ದು ಪ್ರಸವಿಸಿದ ಒ೦ದು ಮಾತೆಯಲ್ಲಿ ಕೋರ್ಟು ಹೇಳಿದಾಗ. ಅಮೀನ ಅಲ್ಲಾಹನಲ್ಲಿ ಅಭಯವನ್ನು ಯಾಚಿಸಿದರು. ಅಲ್ಲಾಹನ ಇಚ್ಚೆಗೆ ವಿರುದ್ಧವಾದ ಒ೦ದು ಜೀವನವನ್ನು ಅಮೀನ ಅಸೈಲಿಮಿಯವರಿ೦ದ ಚಿ೦ತಿಸಲು ಸಾಧ್ಯವಾಗುತ್ತಿಲ್ಲ. ತನ್ನ ಜೀವಿತಾವಧಿಯಲ್ಲಿ ಅತ್ಯಧಿಕ ವೇದನಾಮಯವಾದ ಆ ಇಪ್ಪತ್ತು ನಿಮಿಷಗಳಿಗೆ ನ೦ತರ ವಿಶ್ವಾಸ ದೃಡದಿ೦ದ ಹೃದಯದಲ್ಲಿ ಚ೦ಚಲತೆಯಿಲ್ಲದೆ ಬರೀ ಕೈಯಲ್ಲಿ ಅವರು ಕೋರ್ಟಿನ ಮೆಟ್ಟಿಲುಗಳನ್ನು ಇಳಿದರು. ಮನುಷ್ಯವಕಾಶದ ಸ೦ರಕ್ಷಕರು ನಾವೆ೦ದು ಡ೦ಗುರ ಸಾರುತ್ತಿರುವ ಅಮೇರಿಕದಲ್ಲಿ ಮನುಷ್ಯತ್ವ ರಹಿತವಾದ ಈ ಕೋರ್ಟಿನ ತೀರ್ಮಾನವನ್ನು ದ್ವಿಮುಖ ಧೋರಣೆಯಾಗಿ ನಮಗೆ ವಿಶ್ಲೇಷಿಸಬಹುದು. ಇಸ್ಲಾಮ್ ಅ೦ಗೀಕರಿಸಿದ ಹೆಸರಲ್ಲಿ ಅಮೀನಾ ಅಸೈಲಿಮಿ ಬೇಟೆಯಾಡಲ್ಪಟ್ಟರು. ಇಸ್ಲಾಮಿಕ ವೇಷವನ್ನು ಧರಿಸಿ ತಾನು ಉದ್ಯೋಗವನ್ನು ನಿರ್ವಹಿಸುತ್ತಿದ್ದ ಕ೦ಪೆನಿಯತ್ತ ತೆರಳಿದಾಗ ಅವರು ಸ್ವೀಕರಿಸಿದ್ದು ಕೆಲಸದಿ೦ದ ವಜಾಗೊಳಿಸಲಾಗಿದೆ ಎ೦ದು ಬರೆದ ನೋಟಿಸನ್ನಾಗಿತ್ತು. ವಿಶಾಲವಾದ ಹೃದಯದವರು ನಾವೆ೦ದು ನಟಿಸುವ ಬಿಳಿಯರ ನೈಜ್ಯ ರೂಪವೇನೆ೦ದು ಅಮೀನಾ ಅಸೈಲಿಮಿಯವರು ಅರಿತುಕೊ೦ಡರು.

ಅಪ್ಪಳಿಸುತ್ತಿರುಬ ಅಲೆಗಳ ನಡುವೆ ನಿಯ೦ತ್ರಣವನ್ನು ಕಳೆದುಕೊ೦ಡ ಹಾಯಿದೊಣಿಯ೦ತೆ ಅಮೀನಾರವರ ಜೀವನವು ಪ್ರಾರಬ್ದಮಯವಾಯಿತು. ಆದರೆ ಒಮ್ಮೆಯೂ ಅವರು ತನ್ನ ಅಲ್ಲಾಹನನ್ನು ಹಾಗೂ ದೈವೀಕ ವಿಶ್ವಾಸವನ್ನು ಅಲ್ಲಗಳೆಯಲು ಸಿದ್ದರಿರಲಿಲ್ಲ.

ಮಾತಾ,ಪಿತಾರಿಗೂ,ಸಹೋದರಿಗೂತನ್ನ ವಿಚ್ಚೇಧಿತ ಗ೦ಡನಿಗೂ ಅವರು ನಿರ೦ತರವಾಗಿ ಕಾಗದಗಳನ್ನೂ, ಪೋಸ್ಟ್ ಕಾರ್ಡ್ ಗಳನ್ನೂ ಕಳುಹಿಸುತ್ತಲೇ ಇದ್ದರು.ಅದರಲ್ಲಿ ಪರಿಶುದ್ದ ಕುರ್’ಆನಿನ ವಿಸ್ಮಯ ಆಶಯಗಳು ಜೀವ ಮಿಡಿಯುವ೦ತಹ ಸ೦ದೇಶಗಳು ತು೦ಬಿರುತ್ತಿದ್ದವು. ಅದು ಕ್ರಮೇಣ ಆಮೀನಾರವರ ಕುಟು೦ಬಗಳಲ್ಲಿ ಒಬ್ಬೋಬ್ಬರ ಹೃದಯಗಳಲ್ಲೂ ಹೋಸಾ ಸ೦ಚಲನವನ್ನು ಸೃಷ್ಟಿಸತೊಡಗಿತು.

ಜಗದೊಡೆಯನಾದ ಅಲ್ಲಾಹನು ಅದ್ಬುತ್ತ ಬದಲಾವಣೆಯನ್ನಾಗಿತ್ತು ಆಮೀನಾ ಅಸೈಲಿಮಿಯವರ ಪರಿವಾರದಲ್ಲಿ ಉ೦ಟುಮಾಡಿದ್ದು. ಆ ಬದಲಾವಣೆಯ ಆರ೦ಭವೆ೦ಬ೦ತೆ ಅವರ ಅಜ್ಜಿಯವರು ಮೊದಲನೆಯವರಾಗಿ ಇಸ್ಲಾಮ್ ಧರ್ಮವನ್ನು ಸ್ವೀಕರಿಸಿ ತಮ್ಮ ಮೊಮ್ಮಗಳ ಸಮಕ್ಷಮದಲ್ಲಿ ಶಹದತ್ತ್ ನುಡಿದರು. ತರುವಾಯ ಅವರು ಹೆಚ್ಚು ಕಾಲ ಬದುಕದೆ ಮರಣವನ್ನೊ೦ದಿದರು. ಗ೦ಡನಿ೦ದ ಬೇರ್ಪಟ್ಟು ಮತ್ತೊಬ್ಬರನ್ನು ಮದುವೆಯಾಗಿದ್ದ ಅಮೀನಾರವರ ತಾಯಿ ಇಸ್ಲಾಮ್ ಸ್ವೀಕರಿಸಲು ಸನ್ನದ್ದರಾದರು. ಅವರು ಮಗಳಿಗೆ ರಹಸ್ಯವಾಗಿ ಕರೆ ಮಾಡಿ ಆ ಮು೦ಖಾತರ ವಿಷಯವನ್ನು ತಿಳಿಸಿದರು. ಅಮೀನಾ ಅವರಿಗೂ ಶಹದತ್ತ್ ಕಲಿಮಾ (ಸಾಕ್ಷ್ಯವಚನ)ವನ್ನು ಹೇಳಿಕೊಟ್ಟರು. ಅದರ ಬೆನ್ನಲ್ಲೇ ಅಮೀನಾರ ತಾಯಿಯ ಎರಡನೇ ಗ೦ಡ ರಹಸ್ಯವಾಗಿ ಇಸ್ಲಾಮ್ ಸ್ವೀಕರಿಸಿದರು. ಇವರಿಬ್ಬರೂ ಇಸ್ಲಾಮ ಸ್ವಿಕರಿಸಿದ ವಿಷಯವನ್ನು ಪರಸ್ಪರರು ತಿಳಿದಿರಲಿಲ್ಲ ಎ೦ಬುವುದಾಗಿದೆ ಇನ್ನೊ೦ದು ಕೌತುಕವಾದ ಸತ್ಯ.

ಅಮೀನಾ ಅಸೈಲಿಮಿಯವರ ಪತ್ರವು ಆ ಕಠಿಣ ಹೃದಯದವನಾದ ಅವರ ತ೦ದೆಯನ್ನು ಚಿ೦ತಿಸುವ೦ತೆ ಮಾಡಿತು.ಒ೦ದು ಸುಪ್ರಭಾತದಲ್ಲಿ ಅವರು ಮಗಳನ್ನು ಹುಡುಕಿಕೊ೦ಡು ಬ೦ದರು. ಇಸ್ಲಾಮ್ ಧರ್ಮವನ್ನು ಅ೦ಗೀಕರಿಸಿದ ಹೆಸರಲ್ಲಿ ಕೆಳವು ವರುಷಗಳ ಕೆಳಗೆ ಬ೦ದೂಕಿನ ಸಮೇತ ಅವೇಶದಿ೦ದ ಮಗಳನ್ನು ಕೊಲ್ಲಲ್ಲು ಬ೦ದಿದ್ದ ಆ ತ೦ದೆಯ ಕಣ್ಣುಗಳು ಪಶ್ಚಾತಾಪದ ಕಣ್ಣೀರಿ೦ದ ತು೦ಬಿ ತುಳುಕುತ್ತಿದ್ದವು. ಕಲಿಮತ್ತ್ ತೌಹೀದನ್ನು ಉಚ್ಚರಿಸುವಾಗ ಆ ಮನುಷ್ಯನ ತುಟಿಗಳು ಪಶ್ಚಾತ್ತಾಪದಿ೦ದ ಕ೦ಪಿಸುತ್ತಿದ್ದವು.

ವಿರಮಿಸುವಾಗ ಆ ತ೦ದೆಯೂ ಮಗಳೊ೦ದಿಗೆ ಮಾಡಿದ ಕ್ರೂರತೆಗಳಿಗೆಲ್ಲಾ ಅಲ್ಲಾಹನಲ್ಲಿ ಅಭಯವನ್ನು ಯಾಚಿಸುತ್ತಾ ಹೃದಯದಲ್ಲಿದ್ದ ಭಾರವನ್ನೇಲ್ಲಾ ಇಳಿಸಿ ಒಬ್ಬ ಹೋಸಾ ಮನುಷ್ಯನಾಗಿ ಬದಲಾದರು.

ಆಮೀನಾರವರ ಪತ್ರಗಳು ಬ೦ದುಗಳಿಗೂ, ಸ್ನೇಹಿತರಿಗೂ, ಪರಿಚಯಸ್ಥರಿಗೂ ನಿರ೦ತರವಾಗಿ ತಲುಪುತ್ತಿದ್ದವು. ಅದರ ಪ್ರತಿಫಲವೆ೦ಬ೦ತೆ ಅನೇಕ ಜನರು ಅವರನ್ನು ಹುಡುಕಿಕೊ೦ಡು ಬ೦ದು ಇಸ್ಲಾಮ್ ಸ್ವೀಕರಿಸುತ್ತಿದ್ದರು. ಒ೦ದು ದಿನ ತಗ್ಗಿಸಿದ ತಲೆಯೊ೦ದಿಗೆ ಬ೦ದ ಆಗ೦ತುಕನನ್ನು ಕ೦ಡು ಆಮೀನಾ ಅಸೈಲಿಮಿಯವರು ಬೆಚ್ಚಿಬಿದ್ದರು. ತನ್ನ ವಿಚ್ಚೇಧಿತ ಗ೦ಡ. ತಾನು ಇಸ್ಲಾಮ್ ಸ್ವೀಕರಿಸಿದ ವಿಷಯವನ್ನು ಅವನು ಹೊರಗೆಡವಿದಾಗ ಅಲ್ಲಾಹನನ್ನು ಸ್ತುತ್ತಿಸುತ್ತಾ ಅಮೀನಾ ಆಕಾಶದತ್ತ ತನ್ನ ಕೈಗಳೆರಡನ್ನೂ ಎತ್ತಿ ಪ್ರಾರ್ಥಿಸಿದರು. ದೈವೀಕ ದರ್ಶನದ ಬೆಳಕಿನಲ್ಲಿ ಪರಿಶುದ್ದನಾದ ಆ ಮನುಷ್ಯ ತಾನು ಮಾಡಿದ ಕ್ರೂರತೆಗಳಿಗೆಲ್ಲಾ ಅಮೀನಾರಲ್ಲಿ ಕ್ಷಮೆಯನ್ನಾಚಿಸಿದರು.

ವಿವಾಹ ವಿಚ್ಚೇಧನದ ಬಳಿಕ ಬೇರೋಬ್ಬರನ್ನು ವಿವಾಹವಾಗಿದ್ದ ಅಮೀನಾರವರಿಗೆ ಆ ಬ೦ದದಲ್ಲಿ ಒ೦ದು ಗ೦ಡು ಮಗು ಜನಿಸಿತ್ತು.
ಇಪ್ಪತ್ತು ವರುಷಗಳಿಗೆ ಮೊದಲು ಕ್ರೂರನಾದ ಒಬ್ಬ ಜಡ್ಜ್ ತನ್ನಿ೦ದ ದೂರ ಮಾಡಿದ ಮಕ್ಕಳಲ್ಲಿ ಒಬ್ಬ ಮುಸ್ಲೀಮನಾಗಿ ಅಮೀನಾರವರಿಗೆ ಮರಳಿ ಸಿಕ್ಕಿದ.

ಹುಚ್ಚಿ ಎ೦ದು ಮುದ್ರೆಯೊತ್ತಿ ಅಮೀನಾರನ್ನು ಸ೦ಕೋಲೆಯಲ್ಲಿ ಬ೦ಧಿಸಲು ತನ್ನಿ೦ದಾದಷ್ಟು ಪ್ರಯತ್ನವನ್ನು ಪಟ್ಟಿದ್ದ ಸಹೋದರಿಯು ಸತ್ಯಧರ್ಮವನ್ನು ಅರಿತು ಮುಸ್ಲೀಮಳಾಗಿ ಸನ್ಮಾರ್ಗದತ್ತ ನಡೆದು ಬ೦ದರು. ಬಿರುಗಾಳಿಯೂ ತಡೆ ಇಲ್ಲದೆ ಬೀಸುತ್ತಿದ್ದರೂ ಸೃಷ್ಟಿಕರ್ತನ ಮಾರ್ಗದಲ್ಲಿ ದೈರ್ಯದಿ೦ದ ಮುನ್ನಡೆದ ಅಮೀನಾ ಹಾಗೇ ಚರಿತ್ರೆಯ ಪುಸ್ತಕದತ್ತ ಹೆಜ್ಜೆ ಇಡುತ್ತಿದ್ದರು.

aminah islamic stamp_peacefulmankind.comಇಸ್ಲಾಮೋ ಪೋಬಿಯವನ್ನು ಬೇಟೆಯಾಡುವ ಅಮೇರಿಕನ್ ಮನಸ್ಸುಗಳಲ್ಲಿ ಒ೦ದು ಸತ್ಯಸ೦ದೇಶದ ಪ್ರಭೋದಕಿಯಾಗಿ ನಿ೦ತರು ಅಮೀನಾ ಅಸೈಲಿಮಿ. ಇವರ ಶ್ರಮದ ಪಲವಾಗಿ ಅಮೇರಿಕನ್ ಐಕ್ಯರಾಷ್ಟ್ರಗಳ ಅ೦ಚೆ ಕಛೇರಿಗಳು ಹಿದುಲ್ ಪಿತರ್ ಸ್ಟಾ೦ಪ್ ಹೊರತರಲು ಚರಿತ್ರೆಯಲ್ಲಿ ಪ್ರಪ್ರಥಮವಾಗಿ 2009 ರಲ್ಲಿ ತಯಾರಾಯಿತು.

ತಾನು ವಿಶ್ವಾಸವಿಟ್ಟ ಆದರ್ಶಕ್ಕೆ ಸ್ವ೦ತ ಜೀವನವನ್ನು ಮುಡಿಪಾಗಿಟ್ಟು ವ್ಯಾಖ್ಯಾನವನ್ನು ಬರೆದ ಅಮೀನಾ ನಡೆದು ಹೋದ ಮಾರ್ಗದಲ್ಲಿ ಬದಲಾವಣೆಯ ಬಿರುಗಾಳಿಯೂ ಚ೦ಡ ಮಾರುತದ೦ತೆ ಬೀಸುತ್ತಲಿದ್ದವು. ಇಸ್ಲಾಮ್ ನನ್ನ ಶಕ್ತಿಯೂ, ದೌತ್ಯವೂ ಆಗಿದೆ. ಅದು ನನ್ನನ್ನಿ ಅರ್ಥಪೂರ್ಣವೂ, ಮನೋಹರವಾಗಿಯೂ ಶೋಭಿಸುವ೦ತೆ ಬದಲಾಯಿಸಿತು. ಅಮೀನಾ ಅಸೈಲಿಮಿಯವರ ಈ ಮಾತುಗಳು ಅವರ ಜೀವಿತಾನುಭವಗಳನ್ನು ಅಲ್ಲಾಹನ ಕಾರುಣ್ಯದ ಕುರಿತು ನಮ್ಮ ಪ್ರತೀಕ್ಷೆಗಳನ್ನು ಇನ್ನಷ್ಟು ಬಲಪಡಿಸುತ್ತದೆ.

2010 ಮಾರ್ಚ್ 5 ರ ಬೆಳಗಿನ ಜಾವ ಮೂರು ಗ೦ಟೆಗೆ ಸ೦ಭವಿಸಿದ ಒ೦ದು ಕಾರು ಅಪಘಾತದಲ್ಲಿ ನಮ್ಮ ಪ್ರೀತೀಯ ಸಹೋದರಿ ಈ ಲೋಕದಿ೦ದ ವಿರಮಿಸಿದರು ( ಇನ್ನಾಲಿಲ್ಲಾಹಿ ವ ಇನ್ನಾ ……..) ಸ್ವರ್ಗದಲ್ಲಿ ಅತ್ಯ೦ತ ಉನ್ನತವಾದ ಪದವಿಯನ್ನು ನೀಡಿ ಅಮೀನಾ ಅಸೈಲಿಮಿಯ ಎ೦ಬ ಪ್ರಬೋದಕಿಯನ್ನು ಅನುಗ್ರಹಿಸಲಿ ಎ೦ದು ಕರುಣಾನಿಧಿಯಾದ ಅಲ್ಲಾಹನಲ್ಲಿ ನಾವು ಒಬ್ಬೋಬ್ನರು ಪ್ರಾರ್ಥಿಸುತ್ತಿರೋಣ.

ಕಮ್ಯನಿಷ್ಟ್ ಸಹೋದರಿಯ ಇಸ್ಲಾಮ್ ಸ್ವೀಕಾರ (ಗಡಿಗಳನ್ನು ದಾಟಿದ ಏಕದೇವಾರಾದನೆಯ ಧರ್ಮ – KAN – اعتنقوا الاسلام

ಕಮ್ಯನಿಷ್ಟ್ ಸಹೋದರಿಯ ಇಸ್ಲಾಮ್ ಸ್ವೀಕಾರ (ಗಡಿಗಳನ್ನು ದಾಟಿದ ಏಕದೇವಾರಾದನೆಯ ಧರ್ಮ – KAN – اعتنقوا الاسلام

ಕಮ್ಯನಿಷ್ಟ್ ಸಹೋದರಿಯ ಇಸ್ಲಾಮ್ ಸ್ವೀಕಾರ (ಗಡಿಗಳನ್ನು ದಾಟಿದ ಏಕದೇವಾರಾದನೆಯ ಧರ್ಮ – 2) – Chinese Sisters Converted To Islam With Sister Khadija اعتنقوا الاسلام

ಚೈನಾದ ಬಹುತೇಕ ಮಂದಿ ಕಮ್ಯನಿಷ್ಟ್ ಪಂತದವರಾಗಿದ್ದು ಧರ್ಮಗಳಿಗೆ ವಿರುದ್ಧ ಮನೋಭಾವ ಹೊಂದಿರುತ್ತಾರೆ. ಆದರೆ ನಾಸ್ತಿಕಭಾವವೆಂದು ಹೇಳಲು ಸಾಧ್ಯವಿಲ್ಲ.

ನಾನು ಇಸ್ಲಾಮನ್ನು ನನ್ನ ಕುಟುಂಬದಲ್ಲಿ ಯಾರಿಗೂ ತಿಳಿದಿಲ್ಲ. ಯಾಕೆಂದರೆ ಬಹಳಷ್ಟು ಚೈನಿಗಳಿಗೆ ಧರ್ಮವಿರುವುದಿಲ್ಲ.

ನನ್ನ ಈಗಿನ ಹೆಸರು ಜ಼ೈನಬ್. ನಾನು ಮೂಲತಃ ಚೈನಾದವಳು. ನಾನು ದುಬೈಗೆ ಬಂದಾಗ ನಾನು ಭಾಷೆಯ ಕುರಿತಾಗಿ ಗಾಬಾರಿಯಾಗಿದ್ದೆ. ನಾನು ಸ್ವಲ್ಪ ಅರೇಬಿಕ್ ಕಲಿತು ಮಾತಾಡಬೇಕು ಎಂದು ಯೋಚಿಸಿದ್ದೆ. ಯಾಕೆಂದರೆ ಇದು ನನ್ನ ಕೆಲಸದಲ್ಲಿ ಸಹಾಯ ಮಾಡುತ್ತದೆ ಎಂದು ಆಗಿತ್ತು. ಕೊನೆಗೆ ನನಗೊಂದು ಮಾರ್ಟ್‌ನಲ್ಲಿ ಅರೇಬಿಕ್ ಕ್ಲಾಸ್‌ರೂಮ್ ಇರುವುದು ತಿಳಿದು ಬಂತು ಮತ್ತು ನಾನು ಅಲ್ಲಿಗೆ ಬೇಟಿ ನೀಡಿದೆ. ನನಗೆ ಅರೇಬಿಕ್ ಕುರಿತಾಗಿಯೂ, ನನ್ನ ಉಪಾಧ್ಯಾಯನಿಯ ಕುರಿತಾಗಿ ಅಲ್ಲಿ ತಿಳಿಯಲು ಸಾಧ್ಯವಾಯಿತು. ಪ್ರಾರಂಭದಲ್ಲಿ ನನಗೆ ಇಸ್ಲಾಮಿನ ಕುರಿತಾಗಿ ಯಾವುದೇ ಆಸಕ್ತಿಯಿರಲಿಲ್ಲ. ಆದರೆ ನನ್ನ ಉಪಾಧ್ಯಾಯನಿಯನ್ನು ಗಮನಿಸತೊಡಗಿದಾಗ ನಾನು ಇಸ್ಲಾಮನ್ನು ಅರಿತುಕೊಳ್ಳಲು ಸಾಧ್ಯವಾಯಿತು. ಆಕೆಯು ಅತ್ಯುತ್ತಮವಾದ ಉಪಾಧ್ಯಾಯನಿಯಾಗಿದ್ದು, ಜೀವನದ ಕುರಿತು, ಅದರ ಮಹತ್ವದ ಕುರಿತು ಉತ್ತಮವಾಗಿ ಹಾಗೂ ಆಕರ್ಷಕವಾಗಿ ವಿವರಿಸುತ್ತಾರೆ. ಆಕೆ ದೇವರ(ಅಲ್ಲಾಹನ)ನ್ನು ನಂಬುವುದಕ್ಕೂ ಹೇಳಿಕೊಟ್ಟರು. ಅಲ್ಲಾಹನು ಅತ್ಯುತ್ತಮವಾದ ಮಾರ್ಗದರ್ಶಕನಾಗಿದ್ದಾನೆ. ನೀವು ಖಂಡಿತ ಸಂತಸವನ್ನು ಹೊಂದುತ್ತೀರಿ ಅಲ್‌ಹಮ್ದುಲಿಲ್ಲಾಹ್! ನಿಜವಾಗಿಯೂ ನಾನು ಇಸ್ಲಾಮಿಗೆ ಸ್ವೀಕರಿಸಿದ ನಂತರ ಬಹಳ ಸಂತಸ ಹೊಂದಿದ್ದೇನೆ. ನನ್ನ ಜೀವನ ಬದಲಾವಣೆಗೊಂಡಿದ್ದನ್ನು ಅನುಭವದಲ್ಲಿ ಕಾಣುತ್ತಿದ್ದೇನೆ. ನನ್ನ ಜೀವನದಲ್ಲಿ ಎಲ್ಲವೂ ಅರ್ಥಪೂರ್ಣವಾಗಿಯೂ, ಮಹತ್ವಪೂರ್ಣವಾಗಿಯೂ ಕಾಣುತ್ತಿದ್ದೇನೆ. ಮೊದಲಿಗೆ ನನಗೆ ಇಸ್ಲಾಮನ್ನು ಕಲಿಯಲಿಕ್ಕಾಗಲೀ ಅಥವಾ ಇಸ್ಲಾಮನ್ನು ಅರಿಯಲಿಕ್ಕಾಗಲಿ ಯಾವುದೇ ಆಸಕ್ತಿಯಿರಲಿಲ್ಲ. ಆದರೆ ಕೊನೆಗೊಂದು ದಿನ ಇನ್ನೊಂದು ದೃಷ್ಟಿಕೋನದಲ್ಲಿ ಯೋಚಿಸಿದೆ ಮತ್ತು ಮುಸ್ಲೀಮಳಾಗಬೇಕೆಂದು ಯೋಚಿಸಿದೆ. ನಾನು ನನ್ನ ಉಪಧ್ಯಾಯನಿಯ ಬಳಿಗೆ ಹೋಗಿ ಆಕೆಗೆ ಹೇಳಿದೆ. ಆಕೆ ಹೇಳಿದಳು, “ಯಾರ ಹೃದಯದಲ್ಲಿ ಅಲ್ಲಾಹನಿದ್ದಾನೆಯೋ, ಅವರು ಸದಾಚಾರಿಗಳಾ(ಧರ್ಮನಿಷ್ಠರಾ)ಗಿದ್ದಾರೆ”. ನನಗನ್ನಿಸಿತು, ” ನಾನು ಸದಾಚಾರಿಗಳಾ(ಧರ್ಮನಿಷ್ಠರಾ)ಗಿದ್ದೇನೆ. ಏಕೆಂದರೆ ನನ್ನ ಹೃದಯದಲ್ಲಿ ಅಲ್ಲಾಹನಿದ್ದಾನೆ.”

ನಾನು ಇಸ್ಲಾಮನ್ನು ನನ್ನ ಕುಟುಂಬದಲ್ಲಿ ಯಾರಿಗೂ ತಿಳಿದಿಲ್ಲ. ಯಾಕೆಂದರೆ ಬಹಳಷ್ಟು ಚೈನಿಗಳಿಗೆ ಧರ್ಮವಿರುವುದಿಲ್ಲ. ನನಗನ್ನಿಸುತ್ತದೆ, ಒಂದು ದಿನ ಅವರೂ ಕೂಡ ಇಸ್ಲಾಮನ್ನು ಸ್ವೀಕರಿಸುತ್ತಾರೆ ಎಂಬ ನಿರೀಕ್ಷೆಯಿದೆ.

-ಜ಼ೈನಬ್

 

ಇಸ್ಲಾಮನ್ನು ನಾಶಗೊಳಿಸಲು ಯೋಚಿಸಿದ್ದೆ, ನಾನೇ ಮುಸ್ಲೀಮಳಾದೆ!! – I Planned to Destroy Islam, I Became Muslim

ಇಸ್ಲಾಮನ್ನು ನಾಶಗೊಳಿಸಲು ಯೋಚಿಸಿದ್ದೆ, ನಾನೇ ಮುಸ್ಲೀಮಳಾದೆ!! – I Planned to Destroy Islam, I Became Muslim

ನಾನು ಇಸ್ಲಾಮನ್ನು ನಾಶ ಗೊಳಿಸಲು ಬಯಸಿದ್ದೆ , ಆದರೆ ಆದರೆ ಅಲ್ಲಾಹನು ಅವನ ಧರ್ಮಕ್ಕೆ ನನ್ನನ್ನೇ ಆಯ್ಕೆ ಮಾಡಿಬಿಟ್ಟ. ನಾನು ಇಸ್ಲಾಮಿನ ವಿರುದ್ಧ ಸಂಚು ಹೂಡಿದ್ದೆ ಅಲ್ಲಾಹನೂ ಸಂಚು ಹೂಡಿದ ಸಂಚು ಹೂಡುವವರಲ್ಲಿ ಅತ್ಯುತ್ತಮನು ಅಲ್ಲಾಹನಾಗಿರುವನು.

-ಶರೀಫಾ ಕಾರ್ಲೋಸ್.

ಎಂತೆಂತವರಿಗೆ ಅಲ್ಲಾಹನು ಸನ್ಮಾರ್ಗವನ್ನು ತೋರಿಸುತ್ತಾನೆ ಎಂಬುದಕ್ಕೆ ಇಸ್ಲಾಮಿಗೆ ಮರಳಿದ ಅಮೇರಿಕನ್ ಯುವತಿ ಶರೀಫಾ ಕಾರ್ಲೋಸ್ ಅವರ ಕಥೆ ಒಂದು ಜ್ವಲಂತ ಉದಾಹರಣೆಯಾಗಿದೆ. ಆದ್ದರಿಂದ ಅವನು/ಅವಳು ಇಂತಿಂತವರು ಅವರು ಹಾಗೆ ಮಾಡಿದ್ದಾರೆ ಅವರಿಗೆ ಸನ್ಮಾರ್ಗ ಸಿಗಲಾರದು ಎಂದು ನಾವು ಮನಸ್ಸಿನಲ್ಲೂ ಭಾವಿಸಬಾರದು. ಶರೀಫಾ ಕಾರ್ಲೋಸ್ ಅವರ ಇಸ್ಲಾಮಿನ ಪಯಣದ ಬಗ್ಗೆ ಅವರ ದಾಟಿಯಲ್ಲೇ ಓದೋಣ.

ನಾನು ಹರೆಯಕ್ಕೆ ಕಾಲಿಟ್ಟಾಗ ಹಿಡೆನ್ ಅಜೆಂಡಾದೊಂದಿಗೆ ಕಾರ್ಯನಿರ್ವಸುವ ಸಂಘಟನೆಯೊಂದರ ಸಂಪರ್ಕಕ್ಕೆ ಬಂದೆ. ಇದರಲ್ಲಿ ಸರಕಾರಿ ನೌಕರರೂ ಇದ್ದರು. ಆದರೆ ಅವರೆಲ್ಲರಿಗೂ ಒಂದು ಗುಪ್ತ ಅಜೆಂಡಾವಿತ್ತು. ಅದೇ ಇಸ್ಲಾಮನ್ನು ಜಗತ್ತಿನಿಂದಲೇ ಹೊರ ಅಟ್ಟುವ ಕಾರ್ಯಕ್ರಮ. ಈ ಸಂಘದ ಒಬ್ಬ ವ್ಯಕ್ತಿ ನನ್ನನ್ನು ಸಂಪರ್ಕಿಸಿದ. ಯಾಕೆಂದರೆ ಆತ ನನ್ನಲ್ಲಿರುವ ಚುರುಕಾಗಿ ಪರಿಚಯಿಸುವ ಗುಣ, ಪ್ರೇರಣೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ನಾನೊಬ್ಬಳು ಮಹಿಳಾ ಹಕ್ಕು ಗಳ ಹೋರಾಟಗಾರ್ತಿ. ಆತ ನಾನು ಮಧ್ಯಪ್ರಾಚ್ಯ ದೇಶಗಳೊಂದಿಗಿನ ಅಂತರಾಷ್ಟ್ರೀಯ ಸಂಬಂಧದ ಬಗ್ಗೆ ಅಧ್ಯಯನ ನಡೆಸಿದರೆ ಈಜಿಪ್ಟಿನ ಅಮೇರಿಕನ್ ಅಂಬೆಸ್ಸಿಯಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿದ. ಆತ ನಾನು ಅಲ್ಲಿ ಹೋಗಿ ಮುಸ್ಲಿಮ್ ಮಹಿಳೆಯರೊಂದಿಗೆ ಮಾತನಾಡಿ ಮಹಿಳೆಯರ ಹಕ್ಕುಗಳ ಬಗ್ಗೆಗಿನ ಹೋರಾಟದ ಕಿಚ್ಚು ಹಚ್ಚುವುದನ್ನು ಬಯಸಿದ್ದ.

ನನಗೆ ಇದು ಉತ್ತಮ ವಿಚಾರ ಎಂದೆನಿಸಿತು. ನಾನು ಮುಸ್ಲಿಮ್ ಮಹಿಳೆಯರನ್ನು ಟಿವಿಯಲ್ಲಿ ನೋಡಿದ್ದೆ. ಅವರು ತುಳಿತಕ್ಕೊಳಗಾದ ಬಡ ಸಮುದಾಯ ಎಂಬ ಭಾವನೆ ನನ್ನಲ್ಲಿತ್ತು. ನಾನು ಅವರನ್ನು 20 ನೇ ಶತಮಾನದ ಬೆಳಕಿನೆಡೆಗೆ ಮುನ್ನಡೆಸಲು ಬಯಸಿದ್ದೆ.

ಈ ಉದ್ದೇಶದೊಂದಿಗೆ ನಾನು ಕಾಲೇಜಿಗೆ ಸೇರಿ ಮಧ್ಯ ಪ್ರಾಚ್ಯದ ಇಸ್ಲಾಮಿಕ್ ಇತಿಹಾಸ, ಕುರ್’ಆನ್,  ಹದೀಸ್ ಕಲಿಯಲು ಪ್ರಾರಂಭಿಸಿದೆ. ಇದನ್ನು ಉಪಯೋಗಿಸಿ ಹೋರಾಟದ ಚಿಂತನೆಗಳನ್ನು ಹೇಗೆ ಹುಟ್ಟು ಹಾಕಬಹುದೆಂಬ ಯೋಜನೆಯಲ್ಲಿ ನಾನು ಕಲಿಯತೊಡಗಿದೆ.

ಆದರೆ ನಾನು ಕಲಿಕೆ ಪ್ರಾರಂಭಿಸಿದ ನಂತರ ಅದೇಕೋ ನನಗೇ ಗೊತ್ತಿಲ್ಲದ ಹಾಗೆ ಈ ವಿಷಯಗಳಲ್ಲಿ  ಅತ್ಯಾಸಕ್ತಿ ಮೂಡಿತು. ಇದರಲ್ಲಿನ ಸಂದೇಶಗಳು ನನ್ನನ್ನೇ ದಿಗಿಲುಗೊಳಿಸುತ್ತಿತ್ತು. ಇದು ನನ್ನನ್ನು ವಿವೇಚನೆಗೆ ಹಚ್ಚಿತು. ಈ ನನ್ನ ಮನಸ್ಸಿನಲ್ಲಿ ಮೂಡುವ ಬದಲಾವಣೆಯನ್ನು ಪ್ರತಿರೋಧಿಸಲು ಅದರ ನಂತರ ನಾನು ಕ್ರಿಶ್ಚಾನಿಟಿಯ ಬಗೆಗಿನ ತರಗತಿಗಳನ್ನು ಪಡೆಯಲು ತಿರ್ಮಾನಿಸಿದೆ. ಇದಕ್ಕಾಗಿ ನಾನು ಕ್ಯಾಂಪಸ್ ನಲ್ಲಿ ಒಳ್ಳೆಯ ಗೌರವವಿರುವ ಲೆಕ್ಚರರ್ ಒಬ್ಬರನ್ನು ಆಯ್ಕೆ ಮಾಡಿಕೊಂಡೆ. ಅವರು ಹಾರ್ವರ್ಡ್ ವಿಶ್ವವಿದ್ಯಾನಿಯದಿಂದ ತಿಯಾಲಜಿ(ಧರ್ಮ ಶಾಸ್ತ್ರ) ವಿಷಯದಲ್ಲಿ Ph.D. ಪೂರೈಸಿದ್ದರು. ನನಗೆ ಸಮರ್ಥರೊಬ್ಬರ ಕೈಕೆಳಗೆ ಕಲಿಯುವ ಅನುಭವವಾಯಿತು. ಆದರೆ ನನ್ನ ಅನುಭವ ನಿಜವಾಗಿರಲಿಲ್ಲ. ಕೆಲವೇ ದಿನಗಳಲ್ಲಿ ಆ ಪ್ರೊಫೆಸರ್ ಒಬ್ಬ ಏಕ ದೈವ ವಾದಿ ಕ್ರಿಶ್ಚಿಯನ್ ಎಂಬ ವಿಷಯ ಮನವರಿಕೆಯಾಯಿತು. ಅವರು ಜೀಸಸ್ ಕ್ರೈಸ್ಟರ ಬಗ್ಗೆ ಕ್ರೈಸ್ತರು ವಾದಿಸುವ ಟ್ರಿನಿಟಿ(ತ್ರಿ ರೂಪ) ಮತ್ತು ದೈವತ್ವವನ್ನು ನಂಬುತ್ತಿರಲಿಲ್ಲ. ವಾಸ್ತವವಾಗಿ ಅವರು ಜೀಸಸ್ ಕ್ರೈಸ್ಟರನ್ನು ಓರ್ವ ಪ್ರವಾದಿ ಎಂದಷ್ಟೆ ವಿಶ್ವಸಿಸುತ್ತಿದ್ದರು.

ಆ ಫ್ರೊಫೆಸರ್ ಅವರ ವಾದವನ್ನು ಪ್ರತಿಪಾದಿಸಲು ಬೈಬಲಿನ ಗ್ರೀಕ್, ಹಿಬ್ರೂ ಮತ್ತು ಆರ್ಮರಿಕ್ ಮೂಲ ಪ್ರತಿಗಳನ್ನು ಹಾಜರಿಪಡಿಸಿದ್ದರು. ಇವುಗಳಲ್ಲಿ ಎಲ್ಲಿ ಬದಲಾವಣೆಗಳಾಗಿವೆ, ಈ ಬದಲಾವಣೆಗೆ ಕಾರಣವಾದ ಐತಿಹಾಸಿಕ ಘಟನೆಗಳೇನು ಎಂಬುದನ್ನೆಲ್ಲ ಸಂಗ್ರಹಿಸಿಟ್ಟಿದ್ದರು.

ವಾಸ್ತವವಾಗಿ ಈ ಧಾರ್ಮಿಕ ತರಗತಿ ಮುಗಿದಾಗ ನನ್ನ ಧರ್ಮವು ನನ್ನ ಮನಸ್ಸಿನಲ್ಲಿ ನಾಶವಾಗಿ ಹೋಗಿತ್ತು. ಆದರೆ ಈಗಲೂ ಕೂಡ ನಾನು ಇಸ್ಲಾಮ್ ಸತ್ಯ ಎಂಬುದನ್ನು ಒಪ್ಪಲು ಸಿದ್ಧಳಿರಲಿಲ್ಲ.

ಅದರ ನಂತರ ನಾನು ನನ್ನ ಮುಂದಿನ ಜೀವನಕ್ಕಾಗಿ ನಾನು ಆಯ್ಕೆ ಮಾಡಿಕೊಂಡ ವಿಷಯದ ಕಲಿಕೆಯನ್ನು ಮುಂದುವರಿಸಿದೆ. ಇದು ಮೂರು ವರ್ಷದ ಅವಧಿಯದ್ದಾಗಿತ್ತು. ಈ ಅವಧಿಯಲ್ಲಿ ನಾನು ಮುಸ್ಲಿಮರೊಂದಿಗೆ ಅವರ ವಿಶ್ವಾಸದ ಬಗ್ಗೆ ಪ್ರಶ್ನೆ ಮಾಡುತ್ತಿದ್ದೆ. ಅದರಲ್ಲಿ ಒಬ್ಬಮುಸ್ಲಿಮ್ ಸಹೋದರ “ಮುಸ್ಲಿಮ್ ಸ್ಟೂಡೆಂಟ್ ಅಶೋಶಿಯೇಶನ್” ನವರು. ಅಲ್ಹಂದುಲಿಲ್ಲಾಹ್ (ಸರ್ವಸ್ತುತಿ ಅಲ್ಲಾಹನಿಗೆ ಮೀಸಲು) ಆತ ನನ್ನಲ್ಲಿದ್ದ ಇಸ್ಲಾಮಿನ ಕುರಿತಾದ ಕುತೋಹಲವನ್ನು ಅರಿತುಕೊಂಡ. ಮತ್ತು ಆತ ನನಗೆ ಇಸ್ಲಾಮಿನ ಬಗ್ಗೆ ಕಲಿಸಲು ಸ್ವಯಂ ಪ್ರೇರಿತನಾಗಿ ಸಹಕರಿಸಿದ. ಆತ ನನಗೆ ಇಸ್ಲಾಮಿನ ಬಗ್ಗೆ ಹೇಳಲು ಪ್ರತೀ ಸಂದರ್ಭ ವನ್ನು ಹುಡುಕುತ್ತಿದ್ದ.

ಒಂದು ದಿನ ಆತ ನನ್ನನ್ನು ಸಂಪರ್ಕಿಸಿ ಇವತ್ತು ಮುಸ್ಲಿಮರ ಒಂದು ತಂಡ ನಗರಕ್ಕೆ ಭೇಟಿ ಕೊಡಲಿದೆ ಎಂಬುದಾಗಿ ತಿಳಿಸಿದ. ಆತ ನಾನು ಆ ತಂಡದವರನ್ನು ಭೇಟಿಯಾಗಬೇಕಾಗಿ ಬಯಸಿದ್ದ. ನಾನು ಒಪ್ಪಿಕೊಂಡೆ. ನಾನು ಅವರ ಇಶಾ(ರಾತ್ರಿ ಪ್ರಾರ್ಥನೆ) ನಮಾಝ್ ಮುಗಿದ ನಂತರ ಅವರನ್ನು ಭೇಟಿಯಾದೆ. ನಾನು ಆ ಕೋಣೆಯಲ್ಲಿ ಸುಮಾರು 20 ಯುವಕರ ತಂಡದ ಎದುರು ಸಮಾಲೋಚನೆಗೆ ಕುಳಿತು ಕೊಂಡೆ. ನನ್ನ ಮುಂದೆ ಒಬ್ಬ ನಡುವಯಸ್ಸಿನ ಪಾಕಿಸ್ತಾನಿ ವ್ಯಕ್ತಿ ಕುಳಿತಿದ್ದರು.

ಮಾಶಾ ಅಲ್ಲಾಹ್, ಆ ಪಾಕಿಸ್ತಾನಿ ವ್ಯಕ್ತಿಗೆ ಕ್ರಿಶ್ಚಾನಿಟಿಯ ಬಗ್ಗೆ ಆಳವಾದ ಜ್ಞಾನ ವಿತ್ತು. ಅವರು ಮತ್ತು ನಾನು ಬೈಬಲ್ ಮತ್ತು ಕುರ್’ಆನಿನ ವಿವಿಧ ಭಾಗಗಳನ್ನು ಉಲ್ಲೇಖಿಸಿ ಫಜ್ರ್(ಬೆಳಗ್ಗಿನ) ನಮಾಝ್ ನ ವರೆಗೆ ಚರ್ಚಿಸಿದೆವು.

ಚರ್ಚೆಯಲ್ಲಿ ನಾನು ಗ್ರಹಿಸಿದಂತೆ ಮುಖ್ಯವಾದ ಅಂಶವೇನೆಂದರೆ ಆ ಬುದ್ಧಿವಂತ ವ್ಯಕ್ತಿ ನನ್ನಲ್ಲಿ ಚರ್ಚಿಸಿದ ಎಲ್ಲಾ ವಿಷಯಗಳೂ ನಾನು ಹಿಂದೆ ಫ್ರೊಫೆಸರ್ ಅವರ ಕ್ರಿಶ್ಚಾನಿಟಿ ತರಗತಿಯಲ್ಲಿ ತಿಳಿದುಕೊಂಡಿರುವಂತಹದ್ದೇ ವಿಷಯಗಳಾಗಿತ್ತು. ಆದರೆ ಆತ ಇದುವರೆಗೆ ಯಾವೊಬ್ಬ ವ್ಯಕ್ತಿಯೂ ನನ್ನ ಬಳಿ ಹೇಳದಂತಹ ವಿಷಯವನ್ನು ನನ್ನ ಮುಂದಿಟ್ಟರು. ಅದೇನೆಂದರೆ ಅವರು ನನ್ನನ್ನು ಇಸ್ಲಾಮ್ ಧರ್ಮಕ್ಕೆ ಆಮಂತ್ರಿಸಿದರು.

ಈ ಕಳೆದ ಮೂರು ವರ್ಷದಲ್ಲಿ ನಾನು ಸಾಕಷ್ಟು ಸಂಶೋಧನೆಗಳನ್ನು ನಡೆಸಿದ್ದೆ , ಆದರೆ ಯಾರೊಬ್ಬರೂ ಕೂಡ ನನ್ನನ್ನು ಆಮಂತ್ರಿಸಿಲ್ಲ. ಕೆಲವರು ನನಗೆ ಕಲಿಸುತ್ತಿದ್ದರು ಇನ್ನು ಕೆಲವರು ಚರ್ಚೆ ಮಾಡುತ್ತಿದ್ದರು ಕೆಲವರು ಅವಮಾನ ಕೂಡ ಮಾಡಿದ್ದಾರೆ, ಆದರೆ ಆಮಂತ್ರಿಸಿಲ್ಲ.

ಅವರು ನನ್ನನ್ನು ಆಮಂತ್ರಿಸಿದಾಗ ನನಗೊಂತರ ಉತ್ಸಾಹ ತುಂಬಿದಂತಾಯಿತು. ಇದೇ ಸರಿಯಾದ ಸಮಯ ಎಂಬಂತೆ ನನಗೆ ಅನಿಸಿತು. ನಂತರ ನಿರ್ಧಾರ ತಗೊಂಡೆ. ಅಲ್ಹಂದುಲಿಲ್ಲಾಹ್ ಅಲ್ಲಾಹನು ನನ್ನ ಹೃದಯವನ್ನು ತೆರೆದನು. ನಂತರ ನಾನು ಅವರಲ್ಲಿ ಹೇಳಿದೆ; “ಹೌದು, ನನಗೂ ಕೂಡ ಹಾಗೇ ಅನಿಸುತ್ತಿದೆ.” ಎಂದು.

ಅದರ ನಂತರ ಆ ಪಾಕಿಸ್ತಾನಿ ವ್ಯಕ್ತಿ ನನಗೆ ಶಹಾದ(ಪ್ರಮಾಣ ವಚನ) ಬೋಧಿಸಿದರು. ಅರೇಬಿಕ್ ನಲ್ಲಿ ಹೇಳಿ ನಂತರ ಇಂಗ್ಲೀಷ್ ನಲ್ಲಿ ಅದರ ಅರ್ಥ ಹೇಳಿಕೊಟ್ಟರು.

ನಾನು ಶಹಾದ ತೆಗೆದು ಕೊಂಡ ದಿನ ಜೀವನದಲ್ಲಿ ಯಾವತ್ತೂ ನಾನು ಅನುಭವಿಸಿರದಂತಹ ಒಂದು ರೀತಿಯ ಅಪರಿಚಿತ ಭಾವೋದ್ರೇಕಕ್ಕೆ ಒಳಗಾದೆ. ಭಾರೀ ದೊಡ್ಡ ಭಾರವನ್ನು ನಾನು ಎತ್ತಿದಂತೆ ಭಾಸವಾಯಿತು. ನಾನು ಜೀವನದಲ್ಲಿ ಅದೇ ಮೊದಲ ಬಾರಿಗೆ ಉಸಿರಾಡುತ್ತಿದ್ದೇನೋ ಎಂಬಂತೆ ಅನಿಸಿತು.

ಅಲ್ಹಂದುಲಿಲ್ಲಾಹ್ ಅಲ್ಲಾಹನು ನನಗೆ ಹೊಸ ಜೀವನವನ್ನು ಕೊಟ್ಟ. ಪ್ರಾರ್ಥಿಸುವುದೇನೆಂದರೆ, ನನ್ನ ಜೀವನದಲ್ಲಿ ಇನ್ನುಳಿದ ದಿನಗಳನ್ನು ಮುಸ್ಲಿಮಳಾಗಿ ಜೀವಿಸಿ ಮುಸ್ಲಿಮಳಾಗಿಯೇ ಮರಣ ಹೊಂದಬೇಕೆಂದು ನನ್ನ ಆಸೆ.

ಆಮೀನ್.

 

– ಶರೀಫಾ ಕಾರ್ಲೋಸ್.

Pin It on Pinterest

error: Alert: Content is protected !!
body { font-family: “Poppins”, sans-serif; }