------------------------------------------------------------------------------------ ------------------------------------------------------------------------------------- --------------------------------------------------------------------------------------------- ---------------------------------------------------------------------------------------------
Want to Learn More(ಹೆಚ್ಚಿನ ಕಲಿಕೆಗಾಗಿ) ... Click Here or Subscribe
ಅರಿಯಲೇಬೇಕಾದ ಮನುಕುಲದ ಪ್ರವಾದಿ(ﷺ)ರ ಜೀವನ ಮತ್ತು ಸಂದೇಶ – 2

ಅರಿಯಲೇಬೇಕಾದ ಮನುಕುಲದ ಪ್ರವಾದಿ(ﷺ)ರ ಜೀವನ ಮತ್ತು ಸಂದೇಶ – 2

ಪರಮದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಲ್ಲಿ
ಪ್ರವಾದಿ ಮುಹಮ್ಮದ್(ﷺ)ರವರನ್ನು ತಿಳಿಯಿರಿ

اعرف نبيك ﷺ

ಪ್ರವಾದಿ(ﷺ)ರವರ ಜನನ

ರಬೀಉಲ್ ಅವ್ವಲಿನ ಸೋಮವಾರ ದಿನ ಜನಿಸಿದರು. ಅಬೀಉಲ್ ಅವ್ವಲ್ 2ರಂದು, 8ರಂದು, 10ರಂದು, 12ರಂದು ಮುಂತಾದ ಅಭಿಪ್ರಾಯಗಳಿವೆ. ಇಮಾಮ್ ಇಬ್ನ್ ಕಥೀರ್(ರ) ಹೇಳಿದರು: ಪ್ರವಾದಿ(ﷺ)ರವರು ಆನೆ ಕಳಹ ವರ್ಷದಲ್ಲಿ ಜನಿಸಿದ್ದಾರೆಂಬುವುದು ದೃಢಪಟ್ಟಿರುವುದೂ ಸರಿಯಾದ ಅಭಿಪ್ರಾಯವೂ ಆಗಿದೆ. ಇದನ್ನೇ ಇಮಾಮ್ ಬುಖಾರಿಯವರ ಅಧ್ಯಾಪಕರಾಗಿರುವ ಇಬ್ರಾಹೀಮ್ ಇಬ್ನ್ ಮುಂದಿರುಲ್ ಇಸಾಮಿ ಮತ್ತು ಖಲೀಫತ್ ಇಬ್ನ್ ಖಯ್ಯಾತ್‍ರವರು ಹೇಳಿದ್ದಾರೆ. ಪ್ರವಾದಿ(ﷺ) ರವರ ಪಿತರು ಅವರ ಜನನಕ್ಕೆ ಮುಂಚೆಯೇ ಇಹಲೋಕಕ್ಕೆ ವಿದಾಯ ಹೇಳಿದ್ದರು.

ಪ್ರವಾದಿ(ﷺ)ರವರ ಸ್ತನಪಾನ

ಅಬೂ ಲಹಬನ ದಾಸಳಾಗಿದ್ದ `ಥುವೈಬ’ ಕೆಲವು ದಿನ ಪ್ರವಾದಿ(ﷺ)ರವರಿಗೆ ಹಾಲುಣಿಸಿದ್ದಾಳೆ. ನಂತರ ಬನೂ ಸಅದ್ ಗೋತ್ರಕ್ಕೆ ಸ್ತನಪಾನಕ್ಕಾಗಿ ಪ್ರವಾದಿ ಯವರನ್ನು ಕಳುಹಿಸಲಾಗಿತ್ತು. ಅಲ್ಲಿ `ಹಲೀಮ ಸಅದಿಯ್ಯ’ ಎಂಬ ಹೆಸರಿನ ಮಹಿಳೆಯು ಪ್ರವಾದಿ( ﷺ) ರವರಿಗೆ ಹಾಲುಣಿಸಿದರು. ಸರಿಸುಮಾರು 4 ವರ್ಷದಷ್ಟು ಕಾಲ ಪ್ರವಾದಿ(ﷺ)ರವರು ಸಅದ್ ಗೋತ್ರದಲ್ಲಿ ಹಲೀಮರೊಂದಿಗೆ ಕಳೆದರು. ಪ್ರವಾದಿ(ﷺ)ರವರ ಹೃದಯವನ್ನು ಸೀಳಲಾದ ಘಟನೆ ನಡೆದಿರುವುದೂ ಅಲ್ಲೇ ಆಗಿದೆ. ಆ ಮೂಲಕ ಹೃದಯದಲ್ಲಿ ಶೈತಾನನಿಗಿದ್ದ ಭಾಗವನ್ನು ಅವರ ಹೃದಯದಿಂದ ತೆಗೆಯಲಾಯಿತು. ಈ ಘಟನೆಯ ಬಳಿಕ ಹಲೀಮರು ಮಗುವನ್ನು ತಾಯಿ ಆಮೀನಾರಿಗೆ ಒಪ್ಪಿಸಿದರು. ಮಕ್ಕಾದೆಡೆಗೆ ಮರಳುವಾಗ ದಾರಿಯಲ್ಲಿ `ಅಬವಾಅï’ ಎಂಬ ಸ್ಥಳದಲ್ಲಿ ತಾಯಿ ಆಮಿನಾರು ಕೊನೆಯು ಸಿರೆಳೆದರು. ಅಂದು ಪ್ರವಾದಿಯವರಿಗೆ ಆರು ವಯಸ್ಸು ಪ್ರಾಯವಾಗಿತ್ತು. ಮಕ್ಕಾ ವಿಜಯಕ್ಕಾಗಿ ಪ್ರವಾದಿ(ﷺ) ರವರು ಮಕ್ಕಾದ ಕಡೆಗಿರುವ ಯಾತ್ರೆಯ ನಡುವೆ `ಅಬವಾಅï’ ಎಂಬ ಸ್ಥಳಕ್ಕೆ ತಲುಪಿದಾಗ ತಮ್ಮ ಪ್ರಭುವಿನಲ್ಲಿ ತಾಯಿಯ ಖಬರನ್ನು ಸಂದರ್ಶಿಸಲು ಅನುಮತಿ ಕೇಳಿದರು, ಅಲ್ಲಾಹನಿಂದ ಅನುಮತಿ ಲಭಿಸಿತು. ಈ ಘಟನೆಯು ಹದೀಸ್‍ನಲ್ಲಿ ಹೀಗಿದೆ:

ಅಬೂಹುರೈರಃ(ರ)ರವರಿಂದ ವರದಿ: ಪ್ರವಾದಿ (ﷺ)ರವರು ತಮ್ಮ ತಾಯಿಯ ಖಬರನ್ನು ಸಂದರ್ಶಿ ಸಿದರು, ಆಗ ಅವರು ಅತ್ತರು, ಅವರ ಸುತ್ತಲೂ ಇದ್ದವರೂ ಅತ್ತರು, ನಂತರ ಪ್ರವಾದಿ(ﷺ) ರವರು ಹೇಳಿದರು: “ನಾನು ನನ್ನ ತಾಯಿಗೆ ಇಸ್ತಿಗ್ಫಾರನ್ನು (ಪಾಪವಿಮೋಚನೆಯನ್ನು) ಕೇಳಲು ಅಲ್ಲಾಹನಲ್ಲಿ ಅನುಮತಿ ಕೇಳಿದೆ. ಆದರೆ ಅಲ್ಲಾಹನು ಅನುಮತಿ ಕೊಡಲಿಲ್ಲ. ನಾನು ನನ್ನ ತಾಯಿಯ ಖಬರನ್ನು ಸಂದರ್ಶಿಸಲು ಅನುಮತಿ ಕೇಳಿದಾಗ ಅಲ್ಲಾಹನು ಅನುಮತಿ ಕೊಟ್ಟನು. ನೀವು ಖಬರನ್ನು ಸಂದರ್ಶಿಸಿರಿ ಅದು ಮರಣವನ್ನು ನೆನಪಿಸುತ್ತದೆ’’ (ಮುಸ್ಲಿಂ). ಪ್ರವಾದಿವರ್ಯರ ಪಿತರಿಂದ ವಾರಿಸಾಗಿ ಲಭಿಸಿದ ಉಮ್ಮು ಐಮನ್ ಎಂಬ ದಾಸಿಯು ತಾಯಿಯ ಮರಣಾ ನಂತರ ಪ್ರವಾದಿ(ﷺ)ರವನ್ನು ಆರೈಸಿದರು. ಹಾಗೆಯೇ ಪ್ರವಾದಿ(ﷺ)ರವರ ಪಿತಾಮಹ ರಾದ ಅಬ್ದುಲ್ ಮುತ್ತಲಿಬರು ಪ್ರವಾದಿ(ﷺ)ರವರ ಪರಿಪಾಲನೆ ಯನ್ನು ವಹಿಸಿ ಕೊಂಡರು. ಪ್ರವಾದಿ(ﷺ) ರವರ 8 ವಯಸ್ಸು ಪ್ರಾಯದಲ್ಲಿ ಪಿತಾಮ ಹರಾದ ಅಬ್ದುಲ್ ಮುತ್ತಲಿಬರೂ ನಿಧನರಾದರು. ಅಬ್ದುಲ್ ಮತ್ತಲಿಬರ ವಸ್ವಿಯತಿನ ಪ್ರಕಾರ ಅನಂತರ ಪ್ರವಾದಿ( ﷺ)ರವರ ಆರೈಕೆಯನ್ನು ಚಿಕ್ಕಪ್ಪರಾದ ಅಬೂ ತ್ವಾಲಿಬರು ವಹಿಸಿಕೊಂಡರು. ಅಬೂ ತ್ವಾಲಿಬರು ಪ್ರವಾದಿ(ﷺ) ರವರನ್ನು ಅತ್ಯಧಿಕ ಪ್ರೀತಿಸಿದರು ಮತ್ತು ಸಂರಕ್ಷಿಸಿದರು. ಪ್ರವಾದಿ(ﷺ)ರವರು ಪ್ರವಾದಿಯಾಗಿ ನಿಯುಕ್ತರಾದಾಗ ಲೂಪ್ರವಾದಿ(ﷺ)ರವರನ್ನು ಶತ್ರುಗಳಿಂದ ಸಂರಕ್ಷಿಸಿದ ರು, ಪ್ರಯಾಸದ ಮತ್ತು ಸಂಕಷ್ಟದ ಸಂದರ್ಭದಲ್ಲಿ ಅವರು ಅವಿಶ್ವಾಸದಲ್ಲಿದ್ದು ಕೊಂಡೇ ಪ್ರವಾದಿವರ್ಯರಿಗೆ ಸಹಾಯದ ಹಸ್ತವನ್ನು ಚಾಚಿ ನೆರಳಾದರು. ಆದರೆ ಅವರು ಅವಿಶ್ವಾಸದಲ್ಲೇ ಮರಣ ಗೊಂಡರು.

 (ಮುಂದುವರೆಯುತ್ತದೆ إن شاء الله‎‎)

ಅರಿಯಲೇಬೇಕಾದ ಮನುಕುಲದ ಪ್ರವಾದಿ(ﷺ)ರ ಜೀವನ ಮತ್ತು ಸಂದೇಶ – 1

ಅರಿಯಲೇಬೇಕಾದ ಮನುಕುಲದ ಪ್ರವಾದಿ(ﷺ)ರ ಜೀವನ ಮತ್ತು ಸಂದೇಶ – 1

ಪರಮದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಲ್ಲಿ
ಪ್ರವಾದಿ ಮುಹಮ್ಮದ್(ﷺ)ರವರನ್ನು ತಿಳಿಯಿರಿ.

اعرف نبيك ﷺ

ಜಗತ್ತು ಕಂಡ ಅತ್ಯುನ್ನತರೂ, ಮಾನವರಲ್ಲಿ ಮಹೋನ್ನತರೂ ಆದ ಪ್ರವಾದಿ ಮುಹಮ್ಮದ್(ﷺ) ರವರ ಬಗ್ಗೆ ತಿಳಿದಿರಬೇಕಾದುದು ಪ್ರತಿಯೋರ್ವ ಮನುಷ್ಯನ ಮೇಲಿರುವ ಬಾಧ್ಯತೆಯಾಗಿದೆ. ಕಾರಣ, ಸತ್ಯದೆಡೆಗೂ ಒಳಿತುಗಳೆಡೆಗೂ ಮಾರ್ಗದರ್ಶನ ನೀಡಲು ಸೃಷ್ಟಿಕರ್ತನು ಕಳುಹಿಸಿದ ಅಂತ್ಯ ಪ್ರವಾದಿ ಯಾಗಿದ್ದಾರೆ ಪ್ರವಾದಿ ಮುಹಮ್ಮದ್(ﷺ). ಜಗತ್ತಿಗೆ ಕಾರುಣ್ಯವಾಗಿ ನಿಯೋಗಿಸಲ್ಪಟ್ಟ ಕೊನೆಯ ಸಂದೇಶ ವಾಹಕರು. ಅಂತ್ಯ ದಿನದವರೆಗಿರುವ ಸರ್ವ ಮನುಷ್ಯರು ಅನುಸರಿಸಬೇಕಾದ ಪ್ರವಾದಿ. ಪ್ರವಾದಿ(ﷺ) ರವರನ್ನು ತಿಳಿಯುವುದು ಮತ್ತು ಅನುಸರಿಸುವುದು ಪ್ರಪಂಚದಲ್ಲೇ ಲಭಿಸುವ ಅತೀ ದೊಡ್ಡ ಅನುಗ್ರಹ ವಾಗಿದೆ, ಅದಕ್ಕಾಗಿ ವ್ಯಯಿಸುವ ಸಮಯವು ಅನುಗ್ರಹೀತವಾಗಿದೆ.

ಪ್ರವಾದಿ( ﷺ )ರವರ ಪರಂಪರೆ

ಅದ್‍ನಾನರ ಮಗನು, ಮಅದ್ದರ ಮಗನು, ನಿಸಾರರ ಮಗನು, ಮುಳರಿನ ಮಗನು, ಇಲ್ಯಾಸರ ಮಗನು, ಮುದ್‍ರಿಕರ ಮಗನು, ಖುಸೈಮರ ಮಗನು, ಕಿನಾನರ ಮಗನು, ನಳ್‍ರಿನ ಮಗನು, ಮಾಲಿಕರ ಮಗನು, ಫಿಅïರಿನ ಮಗನು, ಗ್ವಾಲಿಬರ ಮಗನು, ಲುಹೈರ ಮಗನು, ಕಅಬರ ಮಗನು, ಮುರ್ರರ ಮಗನು, ಕಿಲಾಬರ ಮಗನು, ಕುಸೈರ ಮಗನು, ಅಬ್ದುಮನಾಫರ ಮಗನು, ಹಾಶಿಮರ ಮಗನು, ಅಬ್ದುಲ್ ಮತ್ತಲಿಬರ ಮಗನು ಹಾಗೂ ಅಬ್ದುಲ್ಲಾಹರ ಪುತ್ರರೂ ಖಾಸಿಮರ ಪಿತರೂ ಆಗಿರುವರು ಅಂತ್ಯ ಪ್ರವಾದಿ ಮುಹಮ್ಮದ್(ﷺ). ಇದು ಪಂಡಿತರುಗಳ ನಡುವೆ ಒಮ್ಮಾತಾಭಿಪ್ರಾಯವಿರುವ ಪ್ರವಾದಿ ಪರಂಪರೆಯಾಗಿದೆ.

ಪ್ರವಾದಿ(ﷺ)ರವರ_ನಾಮಗಳು ಪ್ರವಾದಿ(ﷺ)ರವರಿಗೆ ಅನೇಕ ನಾಮಗಳಿರುವುದಾಗಿ ಹದೀಸ್‍ಗಳಿಂದ ತಿಳಿಯಬಹುದು. ಜುಬೈರ್ ಇಬ್ನ್ ಮುತ್‍ಇಂ(ರ)ರವರಿಂದ ವರದಿ: ಪ್ರವಾದಿ(ﷺ)ರವರು ಹೇಳುವುದನ್ನು ನಾನು ಆಲಿಸಿದ್ದೇನೆ. “ಖಂಡಿತವಾ ಗಿಯೂ ನನಗೆ ತುಂಬಾ ನಾಮಗಳಿವೆ. ನಾನು ಮುಹಮ್ಮದ್ ಆಗಿರುವೆನು, ಅಹ್ಮದ್ ಆಗಿರುವೆನು, ನಾನು ಅವಿಶ್ವಾಸವನ್ನು ಅಳಿಸಿ ಬಿಡುವ ಅಲ್ ಮಾಹಿ ಆಗಿರುವೆನು. ನಾನು ನನ್ನ ಸುತ್ತಲೂ ಜನರನ್ನು ಒಟ್ಟು ಸೇರಿಸುವ ಅಲ್‍ಹಾಶಿರ್ ಆಗಿರುವೆನು. ನಾನು, ಇನ್ನು ಯಾರೂ ಬರಲಿಕ್ಕಿಲ್ಲದ ಅಂತ್ಯದವನು(ಪ್ರವಾದಿ) ಆಗಿರುವೆನು.’’(ಬುಖಾರಿ,ಮುಸ್ಲಿಂ)

ಇನ್ನೊಂದು ಹದೀಸ್‍ನಲ್ಲಿ: ಅಬೂ ಮೂಸಲ್ ಅಶ್‍ಅರಿ(ರ)ರವರಿಂದ ವರದಿ: ಪ್ರವಾದಿ(ﷺ)ರವರೇ ಸ್ವಯಂ ತನಗೆ ಕೆಲವು ನಾಮಗಳಿವೆಯೆಂದು ನಮ್ಮೊಡನೆ ಹೇಳುತ್ತಿದ್ದರು. “ನಾನು ಮುಹಮ್ಮದ್ ಆಗಿರುವೆನು, ಅಹ್ಮದ್ ಆಗಿರುವೆನು, ನಾನು ಮುಖಫ್ಫ್(ಹೆಚ್ಚು ಜನರಿಂದ ಅನುಸರಿಸಲ್ಪಡುವ ದೂತನು) ಆಗಿರುವೆನು. ಅಲ್ ಹಾಶಿರ್ ಆಗಿರುವೆನು, ತೌಬಾದ ದೂತನಾಗಿ ರುವೆನು, ಕಾರುಣ್ಯದ ದೂತನಾಗಿರುವೆನು.’’(ಮುಸ್ಲಿಂ)

 (ಮುಂದುವರೆಯುತ್ತದೆ إن شاء الله‎‎)

ಅಂತಿಮ ಪ್ರವಾದಿಯ(ಸ) ವಿದಾಯ ಭಾಷಣ

ಅಂತಿಮ ಪ್ರವಾದಿಯ(ಸ) ವಿದಾಯ ಭಾಷಣ

ಅಂತಿಮ ಪ್ರವಾದಿಯ(ಸ) ವಿದಾಯ ಭಾಷಣ

ಸರ್ವಸ್ತುತಿಯು ಅಲ್ಲಾಹನಿಗೆ ಮೀಸಲು. ಆದ್ದರಿಂದ ನಾವು ಅವನನ್ನೇ ಸ್ತುತಿಸುತ್ತೇವೆ. ಅವನಲ್ಲೇ ಸಹಾಯ ಯಾಚಿಸುತ್ತೇವೆ. ಅವನಲ್ಲಿ ಪಶ್ಚಾತ್ತಾಪ ಪಡುತ್ತೇವೆ ಅವನತ್ತ ಮರಳುತ್ತೇವೆ. ನಾವು ನಮ್ಮ ಚಿತ್ತಗಳ ದುಷ್ಪ್ರೇರಣೆ ಹಾಗೂ ನಮ್ಮ ಕರ್ಮಗಳ ದುಷ್ಪರಿಣಾಮಗಳಿಂದ ಅಲ್ಲಾಹನ ಅಭಯ ಯಾಚಿಸುತ್ತೇವೆ. ಯಾರಿಗೆ ಅಲ್ಲಾಹನು ಸನ್ಮಾರ್ಗದರ್ಶನ ಮಾಡಿದನೋ ಅವನನ್ನು ಯಾರೂ ಪಥಭ್ರಷ್ಟಗೊಳಿಸಲಾರ. ಅಲ್ಲಾಹನು ಪಥಭ್ರಷ್ಟಗೊಳಿಸಿದವನಿಗೆ ಯಾರೂ ಸನ್ಮಾರ್ಗದರ್ಶನ ಮಾಡಲಾರ. ಅಲ್ಲಾಹನ ಹೊರತು ಅನ್ಯ ಆರಾಧ್ಯರಿಲ್ಲವೆಂದೂ ಅವನು ಏಕೈಕನೆಂದೂ ಅವನಿಗಾರೂ ಭಾಗೀದಾರರಿಲ್ಲವೆಂದೂ ನಾನು ಸಾಕ್ಷ್ಯವಹಿಸುತ್ತೇನೆ. ಮುಹಮ್ಮದ್(ಸ) ಅವನ ದಾಸನೆಂದೂ ಪ್ರವಾದಿಯೆಂದೂ ನಾನು ಸಾಕ್ಷ್ಯವಹಿಸುತ್ತೇನೆ. ಅಲ್ಲಾಹನದೇ ಪರಮಾಧಿಕಾರ. ಸ್ತುತಿಸ್ತೋತ್ರಗಳೆಲ್ಲವೂ ಅವನಿಗೇ ಮೀಸಲು. ಅವನೇ ಜೀವದಾನ ಮಾಡುತ್ತಾನೆ. ಅವನೇ ಸಾಯಿಸುತ್ತಾನೆ. ಅವನು ಸಕಲ ವಸ್ತುಗಳ ಮೇಲೆ ಸರ್ವಶಕ್ತಿಯುಳ್ಳವನಾಗಿದ್ದಾನೆ. ಅಲ್ಲಾಹನಲ್ಲದೆ ಅನ್ಯ ಆರಾಧ್ಯರಿಲ್ಲ. ಅವನು ಏಕೈಕನು. ಅವನು ತನ್ನ ವಗ್ದಾನವನ್ನು ಪೂರೈಸಿದನು. ತನ್ನ ದಾಸನಿಗೆ ವಿಜಯ ದಯಪಾಲಿಸಿದನು. ಅವನೊಬ್ಬನೆ ಶತ್ರು ಸೈನ್ಯಗಳನ್ನು ಪರಾಜಿತಗೊಳಿಸಿದನು.ಅಲ್ಲಾಹನ ದಾಸರೇ, ಅವನ ದಾಸ್ಯ ಆರಾಧನೆ ಮಾಡಬೇಕೆಂದು ನಾನು ನಿಮಗೆ ಉಪದೇಶಿಸುತ್ತೇನೆ ಮತ್ತು ಅದಕ್ಕೆ ಪ್ರೇರೇಪಿಸುತ್ತೇನೆ.
ಜನರೇ, ನನ್ನ ಮಾತುಗಳನ್ನು ಚೆನ್ನಾಗಿ ಆಲಿಸಿರಿ. ಈ ವರ್ಷದ ಬಳಿಕ ನಾವು ಪರಸ್ಪರ ಇಲ್ಲಿ ಬೇಟಿಯಾಗುತ್ತೇವೋ ಇಲ್ಲವೋ ಎಂದು ನನಗೆ ಗೊತ್ತಿಲ್ಲ. ಮುಂದಿನ ವರ್ಷದ ಹಜ್ಜ್ ನಿರ್ವಹಿಸಲು ನಾನಿರುತ್ತೇನೋ ಇಲ್ಲವೋ ಎಂದೂ ನನಗೆ ತಿಳಿಯದು. ಜನರೇ, ಖಂಡಿತವಾಗಿಯೂ ಅಲ್ಲಾಹನು ಈ ರೀತಿ ಹೇಳಿರುವನು: ಮನುಷ್ಯರೇ, ನಿಮ್ಮನ್ನು ನಾನು ಒಂದು ಗಂಡು ಮತ್ತು ಒಂದು ಹೆಣ್ಣಿನಿಂದ ಸೃಷ್ಟಿಸಿರುವೆನು. ನಾನು ನಿಮ್ಮನ್ನು ವಿವಿಧ ಕುಲ ಗೋತ್ರಗಳಾಗಿ ಮಾಡಿರುವುದು ನೀವು ಪರಸ್ಪರ ಪರಿಚಯ ಪಡುವಂತಾಗಲಿಕ್ಕಾಗಿದೆ. ಖಂಡಿತವಾಗಿಯು ಅಲ್ಲಾಹನ ಬಳಿ ನಿಮ್ಮ ಪೈಕಿ ಅತ್ಯಧಿಕ ಭಯಭಕ್ತಿಯುಳ್ಳವನೇ ಅತ್ಯಂತ ಗೌರವಾರ್ಹನಾಗಿರುವನು. ಅರಬನಿಗೆ ಅರಬೇತರನ ಮೇಲೆ ಯಾವುದೇ ಶ್ರೇಷ್ಠತೆ ಇಲ್ಲ. ಅರಬೇತರನಿಗೆ ಅರಬನ ಮೇಲೆ ಯಾವುದೇ ಶ್ರೇಷ್ಠತೆ ಇಲ್ಲ. ಕರಿಯನಿಗೆ ಬಿಳಿಯನ ಮೇಲೆ ಯಾವುದೇ ಮೇಲ್ಮೆ ಇಲ್ಲ. ಬಿಳಿಯನಿಗೆ ಕರಿಯ ಮೇಲೆ ಯಾವುದೇ ಮೇಲ್ಮೆ ಇಲ್ಲ. ಧರ್ಮನಿಷ್ಠೆ ಮತ್ತು ಧೇವಭಕ್ತಿಯ ಹೊರತು.ಮನುಷ್ಯರೆಲ್ಲರೂ ಆದಮರ ಮಕ್ಕಳು. ಆದಮರಾದರೋ ಮಣ್ಣಿನಿಂದ ಸೃಷ್ಟಿಸಲ್ಪಟ್ಟವರು. ತಿಳಿಯಿರಿ! ರಕ್ತ ಅಥವಾ ಸಂಪತ್ತಿನ ಆಧಾರದಲ್ಲಿರುವ ಎಲ್ಲ ಶ್ರೇಷ್ಠತೆಗಳನ್ನು ನಾನು ನನ್ನ ಕಾಲಿನಿಂದ ತುಳಿದಿರುವೆನು. ಕಅಬಾ ಭವನದ ಮೇಲ್ನೋಟ ಮತ್ತು ಹಜ್ಜ್ ಯಾತ್ರಿಕರಿಗೆ ಜಲಪಾನ ಮಾಡಿಸುವ ಕಾರ್ಯವು ಇದಕ್ಕೆ ಹೊರತಾಗಿದೆ. ಕುರೈಷ್ ಗೋತ್ರದವರೇ, (ನಿರ್ಣಾಯಕ ದಿನದಂದು ನಿಮ್ಮ ಪ್ರಭುವಿನ ಮುಂದೆ) ನಿಮ್ಮ ಕೊರಳ ಮೇಲೆ ಈ ಲೋಕದ ಭಾರವನ್ನು ಹೊತ್ತು ಹಾಜರಾಗದಿರಿ. ಇತರ ಜನರಾದರೋ ಅಂದು ಪರಲೋಕದ ಪುಣ್ಯಗಳನ್ನು ಹೊತ್ತು ಹಾಜರಾಗುವರು. ಅಂತಹ ಪರಿಸ್ಥಿತಿಯಲ್ಲಿ ಖಂಡಿತ ನಾನು ಅಲ್ಲಾಹನ ಮುಂದೆ ನಿಮಗೆ ನೆರವಾಗಲಾರೆ.

ತಿಳಿಯಿರಿ! ಅಜ್ಞಾನ ಕಾಲದ ಎಲ್ಲ ಸಂಪ್ರದಾಯಗಳು ನನ್ನ ಪಾದಗಳಡಿಯಲ್ಲಿವೆ. ಅಜ್ಞಾನ ಕಾಲದ ಎಲ್ಲ ಕೊಲೆಯ ಪ್ರತೀಕಾರಗಳನ್ನು ಅನೂರ್ಜಿತಗೊಳಿಸಲಾಗಿದೆ. ಆ ಪೈಕಿ ಮೊದಲ ಕೊಲೆಯ ಪ್ರತೀಕಾರವನ್ನು ಅನೂರ್ಜಿತಗೊಳಿಸಿರುವುದಾಗಿ ನಾನು ಘೋಷಿಸುತ್ತೇನೆ. ಅದು ‘ಸಅದ್’ ಗೋತ್ರಕ್ಕೆ ಸೇರಿದ ರಬೀಅ ಬಿನ್ ಹಾರಿಸ್‍ರ ಕೊಲೆಯ ಪ್ರತೀಕಾರವಾಗಿದೆ. ಅವರನ್ನು ಹುಝೈಲರು ಕೊಂದಿದ್ದರು. ಅಜ್ಞಾನ ಕಾಲದ ಎಲ್ಲ ಬಡ್ಡಿಗಳನ್ನು ಮನ್ನಾ ಮಾಡಲಾಗಿದೆ. ಆ ಪೈಕಿ ಮೊದಲನೆಯದಾಗಿ ನಾನು (ನನ್ನ ಪಿತೃ ಸಹೋದರ) ಅಬ್ಬಾಸ್ ಬಿನ್ ಅಬ್ದುಲ್ ಮುತ್ತಲಿಬ್ ಅವರಿಗೆ ಸಲ್ಲಬೇಕಾದ ಎಲ್ಲ ಬಡ್ಡಿಯನ್ನು ಮನ್ನಾ ಮಾಡಿರುವುದಾಗಿ ಘೋಷಿಸುತ್ತೇನೆ. ಖಂಡಿತವಾಗಿಯು ಅದು ಸಂಪೂರ್ಣ ಮನ್ನಾ ಆಯಿತು.

ಜನರೇ, ಖಂಡಿತವಾಗಿಯು ನಿಮ್ಮ ರಕ್ತ, ನಿಮ್ಮ ಸೊತ್ತು ಮತ್ತು ನಿಮ್ಮ ಮಾನವು ನೀವು ನಿಮ್ಮ ಪ್ರಭುವಿನ ಮುಂದೆ ಹಾಜರಾಗುವ ತನಕ ಪವಿತ್ರವೂ ಅನುಲ್ಲಂಘನೀಯವೂ ಆಗಿದೆ. ನಿಮ್ಮ ಈ ದಿನ, ನಿಮ್ಮ ಈ ತಿಂಗಳು ಮತ್ತು ನಿಮ್ಮ ಈ ನಗರವು ಪವಿತ್ರವೂ ನಿಷಿದ್ಧವೂ ಆಗಿರುವಂತೆ. ಖಂಡಿತವಾಗಿಯು ನೀವು ಸದ್ಯವೇ ನಿಮ್ಮ ಪ್ರಭುವನ್ನು ಭೇಟಿಯಾಗಲಿರುವಿರಿ. ಹೌದು! ನೀವು ನಿಮ್ಮ ಕರ್ಮಗಳಿಗಾಗಿ ಅಲ್ಲಿ ವಿಚಾರಣೆಗೊಳಗಾಗಲಿರುವಿರಿ.

ಮನುಷ್ಯರೇ, ನಿಮಗೆ ನಿಮ್ಮ ಪತ್ನಿಯರ ಮೇಲೆ ಕೆಲವು ಹಕ್ಕುಗಳಿವೆ ಮತ್ತು ನಿಮ್ಮ ಪತ್ನಿಯರಿಗೆ ನಿಮ್ಮ ಮೇಲೂ ಕೆಲವು ಹಕ್ಕುಗಳಿವೆ. ನಿಮ್ಮ ದಾಂಪತ್ಯ ಸಂಬಂಧದ ಪಾವಿತ್ರ್ಯವನ್ನು ಕಾಪಾಡಬೇಕಾದುದು ಮತ್ತು ನಿಮ್ಮ ಹೊರತು ಯಾರನ್ನೂ ನಿಮ್ಮ ಹಾಸಿಗೆಗೆ ಬರಗೊಡದಿರುವುದು ಅವರ ಮೇಲೆ ನಿಮ್ಮ ಹಕ್ಕಾಗಿದೆ. ಅದರಲ್ಲಿ ಅವರು ಚ್ಯುತಿ ಮಾಡಿದರೆ ಅವರನ್ನು ನಿಮ್ಮ ಹಾಸಿಗೆಯಿಂದ ಬೇರ್ಪಡಿಸಬಹುದು. ಗಾಯ ಅಥವಾ ಕಲೆ ಆಗದಂತಹ ರೀತಿಯಲ್ಲಿ ಅವರನ್ನು ಹೊಡೆಯಬಹುದು ಮತ್ತು ಅದರಿಂದ ಅವರು ತಮ್ಮನ್ನು ತಿದ್ದಿಕೊಂಡು ನಿಮಗೆ ವಿಧೇಯರಾದರೆ ಅವರಿಗೆ ನಿಮ್ಮ ಸಾಮರ್ಥ್ಯಾನುಸಾರ ಉಣಿಸಿರಿ ಹಾಗೂ ತೊಡಿಸಿರಿ.

ತಿಳಿಯಿರಿ! ಪತಿಯ ಸಂಪತ್ತಿನಿಂದ ಆತನ ಅನುಮತಿಯಿಲ್ಲದೆ ಏನನ್ನೂ ದಾನ ಮಾಡುವುದು ಪತ್ನಿಗೆ ಧರ್ಮಸಮ್ಮತವಲ್ಲ. ನಿಮ್ಮ ಮಹಿಳೆಯರೊಂದಿಗೆ ಕರುಣೆಯಿಂದ ವರ್ತಿಸಿರಿ. ಅವರು ನಿಮ್ಮ ಸಹಾಯಕಿಯರಾಗಿದ್ದಾರೆ, ಅವರು ತಮ್ಮ ವ್ಯವಹಾರಗಳನ್ನು ತಾವೇ ನೋಡಿಕೊಳ್ಳಲು ಶಕ್ತರಲ್ಲ. ನಿಮ್ಮ ಪತ್ನಿಯರ ಬಗ್ಗೆ ಅಲ್ಲಾಹನನ್ನು ಭಯಪಡಿರಿ. ನೀವು ಅಲ್ಲಾಹನ ಜಾಮೀನಿನೊಂದಿಗೆ ಅವರನ್ನು ವರಿಸಿರುವಿರಿ. ಅಲ್ಲಾಹನ ವಚನದಂತೆ ಅವರನ್ನು ನಿಮಗೆ ಧರ್ಮಸಮ್ಮತವಾಗಿ ಮಾಡಿಕೊಂಡಿರುವಿರಿ.

ಮನುಷ್ಯರೇ, ಸರ್ವಶಕ್ತನೂ ಮಹಾನನೂ ಆದ ಅಲ್ಲಾಹನು ಪ್ರತಿಯೊಬ್ಬನಿಗೂ (ವಾರೀಸು ಸೊತ್ತಿನಲ್ಲಿ) ಅವನ ಪಾಲನ್ನು ನಿಶ್ಚಯಿಸಿರುವನು. ಆದ್ದರಿಂದ ಒಬ್ಬ ವಾರೀಸುದಾರನಿಗೆ (ಶರೀಅತ್ ನಿಯಮಗಳನ್ನು ಮೀರಿ) ವಿಶೇಷ ಉಯಿಲು ಮಾಡುವ ಹಕ್ಕಿಲ್ಲ.

ಮಗುವು ದಂಪತಿಗಳಿಗೆ ಸೇರಿದ್ದು. ದಾಂಪತ್ಯದ ಪಾವಿತ್ರ್ಯವನ್ನು ಮುರಿಯುವ ವ್ಯಕ್ತಿಯನ್ನು ಕಲ್ಲು ಹೊಡೆದು ಸಾಯಿಸಲಾಗುವುದು. ಅವರ ವಿಚಾರಣೆಯು ಅಲ್ಲಾಹನ ಹೊಣೆಯಾಗಿದೆ. ತನ್ನ ವಂಶ ಪರಂಪರೆಯನ್ನು ತನ್ನ ತಂದೆಯ ಹೊರತು ಇತರರೊಂದಿಗೆ ಜೋಡಿಸುವವನ ಅಥವಾ ತನ್ನ ಯಜಮಾನನ ಹೊರತು ಇತರರನ್ನು ತನ್ನ ಒಡೆಯನೆಂದು ಸಾರುವವನ ಮೇಲೆ ಅಲ್ಲಾಹನ ಶಾಪವಿದೆ.

ಎಲ್ಲ ಸಾಲಗಳನ್ನು ಮರು ಪಾವತಿಸಬೇಕು, ಸಾಲ ರೂಪದಲ್ಲಿ ಪಡೆದ ಎಲ್ಲ ಸೊತ್ತುಗಳನ್ನು ಹಿಂದಿರುಗಿಸಬೇಕು. ಉಡುಗೊರೆಗಳಿಗೆ ಪ್ರತಿ ಉಡುಗೊರೆ ನೀಡಬೇಕು. ಜಾಮೀನುಗಾರನು ಜಾಮೀನು ನೀಡಿದಾತನಿಗೆ ಆದ ನಷ್ಟವನ್ನು ಭರಿಸಬೇಕು.

ಎಚ್ಚರಿಕೆ! ಅಪರಾಧಕ್ಕೆ ಅಪರಾದವೆಸಗಿದವನ ಹೊರತು ಬೇರೆ ಯಾರು ಹೊಣೆಯಲ್ಲ. ಮಗು ತನ್ನ ತಂದೆಯ ಅಪರಾಧಕ್ಕೆ ಹೊಣೆಯಲ್ಲ. ತಂದೆಯು ತನ್ನ ಮಗನ ಅಪರಾಧಕ್ಕೂ ಹೊಣೆಯಲ್ಲ.
ತನ್ನ ಸೋದರನು ಸ್ವ ಇಚ್ಛೆಯಿಂದ ನೀಡಿದ ಹೊರತು ಒಬ್ಬ ಮುಸ್ಲಿಮನಿಗೆ ಆತನ ಸಂಪತ್ತಿನಲ್ಲಿ ಯಾವುದೂ ಧರ್ಮ ಸಮ್ಮತವಲ್ಲ. ಆದ್ದರಿಂದ ನಿಮ್ಮ ಮೇಲೆ ನೀವೇ ಅಕ್ರಮವೆಸಗಿಕೊಳ್ಳಬೇಡಿರಿ.

ಮನುಷ್ಯರೇ, ಪ್ರತಿಯೊಬ್ಬ ಮುಸ್ಲಿಮನು ಮುಸ್ಲಿಮನ ಸೋದರನಾಗಿರುವನು. ಎಲ್ಲ ಮುಸ್ಲಿಮರೂ ಒಂದು ಸಾಹೋದರ್ಯ ಬಂಧನದಲ್ಲಿರುವವರಾಗಿದ್ದಾರೆ. ಇನ್ನು ನಿಮ್ಮ ಜೀತದಾಳುಗಳ ವಿಷಯ! ನೀವು ಉಣ್ಣುವುದನ್ನೇ ಅವರಿಗೂ ಉಣಿಸಿರಿ. ನೀವು ಉಡುವುದನ್ನೇ ಅವರಿಗೂ ಉಡಿಸಿರಿ.

ನನ್ನ ಕಾಲಾನಂತರ ಪಥಭ್ರಷ್ಟರಾಗಿ ಹೋಗದಂತೆ ಹಾಗೂ ಒಬ್ಬರು ಇನ್ನೊಬ್ಬರ ಕತ್ತು ಕೊಯ್ಯುವವರಾಗಿ ಹೋಗದಂತೆ ಜಾಗರೂಕತೆ ವಹಿಸಿರಿ. ನಮ್ಮ ಪೈಕಿ ಯಾರ ಬಳಿಯಾದರೂ ಒಂದು ಅಮಾನತ್(ವಿಶ್ವಸ್ಥ ನಿಧಿ) ಇದ್ದರೆ ಅವನು ಅದನ್ನು ಅದರ ಮಾಲಿಕನಿಗೆ ಹಿಂದಿರುಗಿಸಬೇಕು.

ಜನರೇ, ಇತಿಯೋಪಿಯಾದ ಒಬ್ಬ ಕರಿಯ ಗುಲಾಮನನ್ನು ನಿಮ್ಮ ನಾಯಕನಾಗಿ ನೇಮಿಸಿದರೂ ಆತನು ನಿಮ್ಮ ಮಧ್ಯೆ ಅಲ್ಲಾಹನ ಗ್ರಂಥಕ್ಕೆ ಅನುಗುಣವಾಗಿ ಆಜ್ಞಾಪಿಸುವ ತನಕ ಅವನನ್ನು ಆಲಿಸಿರಿ ಮತ್ತು ಅನುಸರಿಸಿರಿ.

ಜನರೇ, ನನ್ನ ನಂತರ ಯಾವ ಪ್ರವಾದಿಯು ನಿಯುಕ್ತನಾಗಲಿಕ್ಕಿಲ್ಲ. ನಿಮ್ಮ ನಂತರ ಯಾವ ಸಮುದಾಯವೂ ರಚಿಸಲ್ಪಡಲಿಕ್ಕಿಲ್ಲ.
ಖಂಡಿತ ನಾನು ನಿಮ್ಮ ಬಳಿ ನಿಮ್ಮನ್ನೆಂದೂ ದಾರಿತಪ್ಪಿಸದಂತಹ ವಸ್ತುವನ್ನು ಬಿಟ್ಟಗಲುತ್ತೇನೆ. ಅಲ್ಲಾಹನ ಗ್ರಂಥ ಮತ್ತು ಆತನ ಪ್ರವಾದಿಯ ಸುನ್ನತ್(ಜೀವನ ವಿಧಾನ), ಅವುಗಳನ್ನು ನೀವು ಬಿಗಿ ಹಿಡಿದರೆ ನೀವೆಂದು ದಾರಿತಪ್ಪಲಾರಿರಿ.

ಜಾಗ್ರತೆ! ಧರ್ಮದ ವಿಷಯದಲ್ಲಿ ಅತಿರೇಕ ಎಸಗಬೇಡಿರಿ, ಧಾರ್ಮಿಕ ವಿಷಯದಲ್ಲಿ ಅತಿರೇಕವೆಸಗಿಯೇ ನಿಮ್ಮ ಪೂರ್ವಜರಲ್ಲಿ ಅನೇಕರು ನಾಶ ಹೊಂದಿದರು.

ಖಂಡಿತವಾಗಿಯು ನಿಮ್ಮ ಈ ಭೂಮಿಯಲ್ಲಿ ಶೈತಾನನು ತನ್ನನ್ನು ಜನರು ಆರಾಧಿಸುವ ಬಗ್ಗೆ ಶಾಶ್ವತವಾಗಿ ನಿರಾಶನಾಗಿರುವನು, ಆದರೆ ಆತನನ್ನು ನೀವು ಅನುಸರಿಸುವಿರೆಂಬ ಭಯವಿದ್ದರೆ ಅದು ನೀವು ಕ್ಷುಲ್ಲಕವೆಂದು ಪರಿಗಣಿಸು ವಿಷಯಗಳಲ್ಲಿ ಮಾತ್ರ. ಆದ್ದರಿಂದ ನಿಮ್ಮ ಧರ್ಮದ ಬಗ್ಗೆ ಆತನಿಂದ ಜಾಗರೂಕರಾಗಿರಿ.

ಜನರೇ(ನಿಷಿದ್ಧ) ಮಾಸಗಳನ್ನು ಅದಲು ಬದಲು ಮಾಡುವುದು ಸತ್ಯನಿಷೇಧದ ಕಾರ್ಯವಾಗಿದೆ. ತನ್ಮೂಲಕ ಸತ್ಯನಿಷೇಧಿಗಳು ಇನ್ನಷ್ಟು ಪಥಭ್ರಷ್ಟತೆಯಲ್ಲಿ ಬೀಳುತ್ತಾರೆ. ಒಂದು ವರ್ಷ ಯಾವುದಾದರೂ ತಿಂಗಳನ್ನು ಹಲಾಲ್( ಧರ್ಮಬದ್ಧ)ಗೊಳಿಸುತ್ತಾರೆ. ಇನ್ನೊಂದು ವರ್ಷ ಅದನ್ನು ಹರಾಮ್(ನಿಷಿದ್ಧ)ಗೊಳಿಸುತ್ತಾರೆ. ಈ ರೀತಿ(ಹಿಂದೆ-ಮುಂದೆ ಮಾಡಿ) ಅಲ್ಲಾಹನು ನಿಷಿದ್ಧಗೊಳಿಸಿದ ತಿಂಗಳುಗಳ ಸಂಖ್ಯೆಯನ್ನು ಪೂರ್ತಿಗೊಳಿಸುತ್ತಾರೆ.

ನಿಶ್ಚಯವಾಗಿಯೂ ಕಾಲಚಕ್ರವು ಉರುಳುತ್ತಾ ಇಂದು ಮತ್ತೆ ಅಲ್ಲಾಹನು ಭೂಮಿಯನ್ನು ಸೃಷ್ಟಿಸಿದಂದು ಇದ್ದ ಅದೇ ಸ್ಥಿತಿಗೆ ತಲುಪಿದೆ. ಅರ್ಥಾತ್ ಅಲ್ಲಾಹನ ಬಳಿ ತಿಂಗಳುಗಳ ಸಂಖ್ಯೆ ಹನ್ನೆರಡಾಗಿದೆ. ಅಲ್ಲಾಹನು ಆಕಾಶ-ಭೂಮಿಗಳನ್ನು ಸೃಷ್ಟಿಸಿದಂದೇ ಈ ಸಂಖ್ಯೆಯು(ವಿಧಿ ಲಿಖಿತದಲ್ಲಿ) ಉಲ್ಲೇಖಿಸಲ್ಪಟ್ಟಿದೆ. ಅವುಗಳ ಪೈಕಿ ನಾಲ್ಕು ತಿಂಗಳು ನಿಷಿದ್ಧವಾಗಿದೆ. ಮೂರು ನಿರಂತರ ಬರುವ ತಿಂಗಳುಗಳು. ಅರ್ಥಾತ್-ದುಲ್ ಕಅದ್, ದುಲ್ ಹಜ್ಜ್ ಮತ್ತು ಮುಹರ್ರಮ್. ಒಂದು ಒಂಟಿ ತಿಂಗಳು. ಅರ್ಥಾತ್-ಜುಮಾದಿಲ್ ಆಖಿರ್ ಮತ್ತು ಶಅಬಾನ್‍ಗಳ ಮಧ್ಯೆ ಬರುವ ರಜಬ್ ತಿಂಗಳು.

ಕೇಳಿರಿ! ನಿಮ್ಮ ಪ್ರಭುವನ್ನು ಆರಾಧಿಸಿರಿ. ದಿನಕ್ಕೆ ಐದು ಬಾರಿ ನಮಾಝ್ ನಿರ್ವಹಿಸಿರಿ. ರಮಝಾನ್ ತಿಂಗಳಲ್ಲಿ ಉಪವಾಸ ಆಚರಿಸಿರಿ. ನಿಮ್ಮ ಸಂಪತ್ತಿನ ಮೇಲಿನ ಝಕಾತನ್ನು ಸಂತೋಷದಿಂದ ಪಾವತಿ ಮಾಡಿರಿ. ಅಲ್ಲಾಹನ ಭವನದ ಹಜ್ಜ್ ಯಾತ್ರೆ ಕೈಗೊಳ್ಳಿರಿ. ನಿಮ್ಮ ಆಜ್ಞಾಧಿಕಾರಿಗಳನ್ನು ಅನುಸರಿಸಿರಿ. ನೀವು ನಿಮ್ಮ ಪ್ರಭುವಿನ ಸ್ವರ್ಗದಲ್ಲಿ ಪ್ರವೇಶಿಸಲ್ಪಡುವಿರಿ.

ಕೇಳಿರಿ! ಇಲ್ಲಿ ಹಾಜರಿರುವವರು ಹಾಜರಿಲ್ಲದವರಿಗೆ ಇದನ್ನು ತಲುಪಿಸಬೇಕು. ನೀವು ಸಂದೇಶ ತಲುಪಿಸುವವರ ಪೈಕಿ ಅನೇಕ ಜನರು ಅದರ ಬಗ್ಗೆ ನಿಮಗಿಂತ ಹೆಚ್ಚು ಕಾಳಜಿಯುಳ್ಳವರಾಗಿರಬಹುದು. ನನ್ನ ಬಗ್ಗೆ ನಿಮ್ಮನ್ನು ವಿಚಾರಿಸಿದಾಗ ನೀವು ಏನೆಂದು ಹೇಳುವಿರಿ. ಜನರು ಹೇಳಿದರು: ನೀವು ಧರ್ಮದ ಅಮಾನತನ್ನು ತಲಿಪಿಸಿರುವಿರೆಂದೂ ನಿಮ್ಮ ಪ್ರವಾದಿತ್ವ ರಾಯಭಾರವನ್ನು ಸಂಪೂರ್ಣ ನಿರ್ವಹಿಸಿರುವಿರೆಂದೂ ನಮ್ಮ ಕಲ್ಯಾಣದ ಬಗ್ಗೆ ಕಾಳಜಿ ವಹಿಸಿರುವಿರೆಂದೂ ನಾವು ಸಾಕ್ಷ್ಯವಹಿಸುತ್ತೇವೆ.

ಆಗ ಅಲ್ಲಾಹನ ಸಂದೇಶವಾಹಕರು ತಮ್ಮ ತೋರ್ಬೆರಳನ್ನು ಆಕಾಶದತ್ತ ತೋರಿಸುತ್ತಾ ಜನರೆಡೆಗೆ ಸೂಚಿಸಿ ಹೀಗೆ ಹೇಳಿದರು:
ಓ ಅಲ್ಲಾಹ್! ನೀನು ಸಾಕ್ಷಿಯಾಗಿರು.
ಓ ಅಲ್ಲಾಹ್! ನೀನು ಸಾಕ್ಷಿಯಾಗಿರು.
ಓ ಅಲ್ಲಾಹ್! ನೀನು ಸಾಕ್ಷಿಯಾಗಿರು.

ಈಸಾ (ಅ) ಅಥವ ಯೇಸುವಿನ ಪ್ರಕಾರ ದೇವನೆಂದರೆ ಯಾರು ?

ಈಸಾ (ಅ) ಅಥವ ಯೇಸುವಿನ ಪ್ರಕಾರ ದೇವನೆಂದರೆ ಯಾರು ?

ಪರಮದಯಾಮಯನು ಕರುಣಾನಿಧಿಯೂ ಆದ ಅಲ್ಲಾಹ್‍ನ ನಾಮದಿಂದ

ನೈಜ ದೇವನೊಬ್ಬನೇ ಎಂಬ ನಂಬಿಕೆ ಮತ್ತು ಕಲ್ಪನಾ ಭಾವನೆಯೇ ವಿಭಿನ್ನಗೊಂಡಿರುವ ಮಾನವ ಕುಲವನ್ನು ಒಗ್ಗೂಡಿಸುವ ಮಾಧ್ಯಮ.

ಈಸಾ (ಅ) ಅಥವ ಯೇಸುವಿನ ಪ್ರಕಾರ ದೇವನೆಂದರೆ ಯಾರು ?

`ಮರ್ಯಮರ ಪುತ್ರ ಮಸೀಹನೇ ಅಲ್ಲಾಹ್‍ನೆಂದು ಹೇಳಿದವರು ಖಂಡಿತವಾಗಿಗೂ `ಸತ್ಯನಿಷೇಧ’ ಕೈಗೊಂಡರು. ವಸ್ತುತಃ ಮಸೀಹರು `ಓ ಬನೀ ಇಸ್ರಾಈಲರೇ ನನ್ನ ಪ್ರಭುವೂ ನಿಮ್ಮ ಪ್ರಭುವೂ ಆಗಿರುವ ಅಲ್ಲಾಹ್‍ನ ದಾಸ್ಯ ಆರಾಧನೆ ಮಾಡಿರಿ’ ಎಂದು ಹೇಳಿದ್ದರು. ಅಲ್ಲಾಹ್‍ನೊಂದಿಗೆ ಇನ್ನಾರನ್ನಾದರೂ ಸಹಭಾಗಿಗಳನ್ನಾಗಿ ಮಾಡಿದವನಿಗೆ ಅಲ್ಲಾಹ್‍ನು ಸ್ವರ್ಗವನ್ನು `ನಿಷಿದ್ಧ’ಗೊಳಿಸಿರುತ್ತಾನೆ ಮತ್ತು ಅವನ ವಾಸಸ್ಥಾನವೂ `ನರಕ’ ಆಗಿರುತ್ತದೆ. ಇಂತಹ ಅಕ್ರಮಿಗಳಿಗೆ ಯಾರೂ ಸಹಾಯಕರಿಲ್ಲ. ಪವಿತ್ರ ಕುರ್‍ಆನ್ 5:72

1. ಯೇಸುಕ್ರಿಸ್ತರು ಸ್ವತಃ ಜನರನ್ನು ದೇವರ ಸನ್ನಿಧಿಗೆ ಹೀಗೆ ಕರೆಯುವ ರೂಢಿಯಿತ್ತು (ಅಲ್ಲಾಹ್/ಒಡೆಯ/ಯಹೋವ)

1) ಯೇಸುಕ್ರಿಸ್ತರು ಹೀಗೆ ಹೇಳುತ್ತಿದ್ದರು : `ಓ ಇಸ್ರಯೀಲ್ ಜನವೇ ಕೇಳಿ ನಮ್ಮ ದೇವರಾದ ಕರ್ತನು ಒಬ್ಬನೇ ದೇವರು’ ಎಂಬುದು ಮಾರ್ಕ್ 12 : 20
2) ಯಾವ ವ್ಯಕ್ತಿಯೂ ಇಬ್ಬರು ಒಡೆಯರ ಸೇವೆಯನ್ನು ಏಕಕಾಲದಲ್ಲಿ ಮಾಡಲಾರ. ಅವನು ಒಬ್ಬನನ್ನು ಪ್ರೀತಿ ನಿಷ್ಠೆಯಿಂದ, ಇನ್ನೊಬ್ಬರನ್ನು ವಿರೋಧದಿಂದ ಸೇವೆ ಸಲ್ಲಿಸಬಹುದಾಗಿದೆ. ಒಬ್ಬ ಮಾಲೀಕನಿಗೆ ವಿಧೇಯನಾಗಿಯೂ ಇನ್ನೊಬ್ಬನಿಗೆ ಹೀನಯಿಸುವ (ತಾತ್ಸಾರದಿಂದ) ವಿಧದಲ್ಲಿ ಸೇವೆ ಸಲ್ಲಿಸಬಹುದು. ಮತ್ತಾಯ 6 : 24

3) ಯೇಸುಕ್ರಿಸ್ತನು, ತನ್ನ ತಾಯಿಯ ಕುರಿತು ಹೀಗೆ ಸಂಬೋಧಿಸುತ್ತಾನೆ. `ನನಗೆ ಹೀಗೆ ನಿರ್ಭಂದಿಸಬೇಡ ನಾನು ಇನ್ನೂ ಆ ದೇವ ಸನ್ನಿಧಾನಕ್ಕೆ ತಲುಪಿಲ್ಲ ಆದರೆ ನಾನು ನನ್ನ ಮಾನವ ಸಹೋದರೆಡೆಗೆ ಹೋಗಬೇಕಾಗಿದೆ ಆ ದೇವ (ತಂದೆ) ನನ್ನ ಮತ್ತು ಅವರ ದೇವ. ಜಾನ್ 20 : 17

ಯೇಸು ಕ್ರಿಸ್ತನು ಸರ್ವರಿಗೂ ದೇವರೊಬ್ಬನೆ ಎಂದು ಹೇಳಿರುವುದು ಮಾತ್ರವಲ್ಲ. ತಾನೂ ಆ ದೇವರನ್ನು ಆರಾಧಿಸುತ್ತಿದ್ದನು. ತಾನು ಬೋಧಿಸಿದ್ದನ್ನು ಸ್ವತಃ ಅನುಸರಿಸುತ್ತಿದ್ದನು.

2) ಯೇಸುಕ್ರಿಸ್ತರು ನೈಜವಾಗಿ ಏಕದೇವ ಯಹೋವ(ಅಲ್ಲಾಹ್)ನನ್ನು ಮಾತ್ರ ಆರಾಧಿಸುತ್ತಿದ್ದರು.

ಆ ಮಹತ್ತರ ಘಳಿಗೆಯಲ್ಲಿ ಯೇಸುಕ್ರಿಸ್ತರು ಪ್ರಾರ್ಥಿಸಲು ಬೆಟ್ಟದ ಮೇಲೇರಿ ಹೋಗಿ ಇಡೀ ರಾತ್ರಿ ದೇವರನ್ನು ಪ್ರಾರ್ಥಿಸುತ್ತಾ ಕಳೆದರು. ಲೂಕ್ 6 : 12
3) ಯೇಸುಕ್ರಿಸ್ತರು ತಮ್ಮ ಪವಾಡಗಳನ್ನು ಮಾಡುವಾಗ ಯಹೋವಾ(ಅಲ್ಲಾಹ್) ನನ್ನು ಪ್ರಾರ್ಥಿಸುತ್ತಿದ್ದರು.

ಯೇಸುಕ್ರಿಸ್ತರು ಜನರಿಗೆ ಉತ್ತರಿಸುತ್ತಿದ್ದರು. `ಕೇವಲ ಪ್ರಾರ್ಥನೆಯಿಂದ ಮಾತ್ರ ಇಂತಹ ಪವಾಡಗಳು ಜರುಗುತ್ತವೆ ಹೊರತು ಬೇರಾವುದರಿಂದಲೂ ಅಲ್ಲ. ಮಾರ್ಕ್ 9 : 29

4) ಯೇಸುಕ್ರಿಸ್ತರು ತಮ್ಮ ಕಠಿಣ, ಕಷ್ಟಕಾರ್ಪಣ್ಯ ಕಾಲದಲ್ಲಿ ಯಹೋವ(ಅಲ್ಲಾಹ್) ನನ್ನು ಪ್ರಾರ್ಥಿಸುತ್ತಿದ್ದರು. (ಆರ್ಥರಾಗಿ ಆಲಾಪಿಸುತ್ತಿದ್ದರು)
ಅವರು ಸ್ವಲ್ಪ ದೂರ ಮುಂದೆ ಹೋಗಿ ತಮ್ಮ ದೇಹವನ್ನು ನೆಲದ ಮೇಲೆ ಚೆಲ್ಲಿ ಯಾತನೆಯ ಕಾಲದಲ್ಲಿ ತಾವು ನರಳುವ ಸ್ಥಿತಿ ಸಾಧ್ಯವಾಗುತ್ತಿದ್ದರೆ ಬರುತ್ತಿರಲಿಲ್ಲ ಎಂದು ಪ್ರಾರ್ಥಿಸುತ್ತಿದ್ದರು. ಮಾರ್ಕ್ 14 : 35

5) ಯೇಸುಕ್ರಿಸ್ತರು, ತಮ್ಮ ಅನುಯಾಯಿಗಳಿಗೆ ಏಕದೇವ ಯಹೂದ(ಅಲ್ಲಾಹ್) ನನ್ನು ಆರಾಧಿಸಲು ಬೋಧಿಸಿದರು.
ನೀವು ದೇವರನ್ನು ಪ್ರಾರ್ಥಿಸುವಾಗ(ಬೇಕಾದರೆ) ನಿಮ್ಮ ಏಕಾಂತ ಕೋಣೆಗೆ ಹೋಗಿರಿ. ಕೋಣೆಯ ಬಾಗಿಲನ್ನು ಮುಚ್ಚಿ ಕೊಂಡು ಸರ್ವರಿಗೂ ತಂದೆಯಾದ ಅಗೋಚರವಾದ ಆ ಪರಮಾತ್ಮನನ್ನು ಆತ್ಮೀಯವಾಗಿ ಪ್ರಾರ್ಥಿಸಿರಿ. ಖಂಡಿತವಾಗಿಯೂ ನಮಗೆ ಅಗೋಚರವಾಗಿರುವ ಆ ದೇವರಿಗೆ ನಾವು ಏಕಾಂತದಲ್ಲಿಯೂ ಯಾರಿಗೂ ಕಾಣದಂತೆಯೂ ಮಾಡುವ ಪ್ರತಿ ಕೃತ್ಯವೂ ಮತ್ತು ಪ್ರಾರ್ಥನೆಯ ಪ್ರತಿಪದವು ನಮ್ಮ ಸ್ಥಿತಿಯೂ, ಮನಸ್ಸಿನ ವಾಣಿಯೂ ಅವನಿಗೆ ಕಾಣಿಸುತ್ತದೆ ಮತ್ತು ಕೇಳಿಸುತ್ತದೆ. ಆ ಕರುಣಾಮಯಿಯು ಖಂಡಿತವಾಗಿಯೂ ಅವುಗಳಿಗೆ ಸ್ಪಂದಿಸಿ ಆತನ ದಯೆ ಕರುಣಿಸುತ್ತಾನೆ ಮತ್ತು ಪ್ರತಿಫಲ ನೀಡುತ್ತಾನೆ. ಮ್ಯಾಥೊವ್ 6 : 6

6) ಯೇಸುಕ್ರಿಸ್ತರು ಕೇವಲ ಏಕೈಕ ಅಲ್ಲಾಹ್‍ನನ್ನೇ ಮಾತ್ರ ಸ್ತುತಿಸುತ್ತಿದ್ದರು ಮತ್ತು ಕೃತಜ್ಞತಾಪೂರ್ವಕವಾಗಿ ಸಾಷ್ಟಾಂಗವೆರಗುತ್ತಿದ್ದರು.
ಆ ಸಮಯದಲ್ಲಿ(ಪ್ರಾರ್ಥನಾಕಾಲ) ಯೇಸುಕ್ರಿಸ್ತರ ಮನ ಪವಿತ್ರ ಚೇತನ ಹಾಗೂ ಆನಂದದಿಂದ ತುಂಬುತ್ತಿತ್ತು ಹಾಗೂ ಹೀಗೆ ಉಚ್ಚರಿಸುತ್ತಿದ್ದರು. `ಓ ಭೂಮಿ ಆಕಾಶಗಳ ಒಡೆಯನಾದ ತಂದೆಯೇ ನನ್ನ ಕೃತಜ್ಞತೆ(ಶರಣತೆ)ಯನ್ನು ಸ್ವೀಕರಿಸು ಏಕೆಂದರೆ
(ಕಾರಣ) ನೀನು ಈ ಅಜ್ಞಾನಿಗೆ ವಿದ್ಯಾವಂತರಿಂದ ಮತ್ತು ಬಲ್ಲವರಿಂದ ಅಡಗಿಸಿಟ್ಟಿದ್ದ ಅಮೂಲ್ಯವಾದದ್ದನ್ನು ನನಗೆ ಕರುಣಿಸಿರುವೆ. ಓ ತಂದೆಯೇ ಇದು ನಿನ್ನ ಇಚ್ಛೆಯಾಗಿತ್ತು. ಹಾಗೆಯೇ ನೀನು ಮಾಡಿರುವೆ. ಲೂಕ್ 10 : 21

7) ಜನರು ಯೇಸುಕ್ರಿಸ್ತರು ಮಾಡಿ ತೋರಿಸಿದ ಪವಾಡಗಳನ್ನು ನೋಡಿ ದೇವರನ್ನು ಸ್ತುತಿಸಿದರು.
ಜನರು ಒಬ್ಬ ಮೂಕ ಮಾತನಾಡಲು ಪ್ರಾರಂಭಿಸಿದ್ದನ್ನು ಒಬ್ಬ ಅಂಗವಿಕಲ ತನ್ನ ಅಂಗವಿಕಲತೆಯಿಂದ ಮುಕ್ತನಾಗಿ ಅ ಒಬ್ಬ ಕುಂಟ ನಡೆದಾಡುವುದನ್ನು ನೋಡಿ ಹಾಗೂ ಒಬ್ಬ ಕುರುಡ ನೋಡುವಂತಹ ನೇತ್ರಶಕ್ತಿಯನ್ನು ಪಡೆದ ಮೇಲೆ ಆಶ್ಚರ್ಯ ಮತ್ತು ಭಕ್ತಿಯಿಂದ ಇಸ್ರೇಲಿನ ಏಕದೇವರನ್ನು ಸ್ತುತಿಸಿದರು. ಮ್ಯಾಥೋವ್ : 15 : 3

8) ಯೇಸುಕ್ರಿಸ್ತರು ಸಾಮಾನ್ಯವಾಗಿ ಎಲ್ಲರಿಗೂ ಕೇಳಿಸುವಂತೆ `ತಂದೆ ಮಹಾನನು’ (ಅಲ್ಲಾಹು ಅಕ್ಬರ್) ಎಂದು ಕೂಗುತ್ತಿದ್ದರು.
1) ನಾನು ಸ್ಪಷ್ಟವಾಗಿ ಸತ್ಯವಾಗಿ ಘೋಷಿಸುತ್ತೇನೆ. ಯಾವ ಗುಲಾಮನು ತನ್ನ ಧಣಿಗಿಂತ ದೊಡ್ಡವನಲ್ಲ. ಕಳುಹಿಸಲ್ಪಟ್ಟವನು ಕಳುಹಿಸಿದವನಿಗಿಂತ ದೊಡ್ಡವನಲ್ಲ ಅಥವಾ ಸಂದೇಶವಾಹಕನನ್ನು ಕಳುಹಿಸುವಂತಹ ಆ ಮಹಾನ್ ಪ್ರಭುವಿಗಿಂತ ದೊಡ್ಡವನಿಲ್ಲ. ಜಾನ್ 13 : 16

2) ಯೇಸುಕ್ರಿಸ್ತರ ಈ ನುಡಿಗಳನ್ನು ಕೇಳಿದಾಗ ನೆರೆದ ಜನರಲ್ಲಿ ಇದ್ದ ಒಬ್ಬ ಮಹಿಳೆ ಅವರಿಗೆ ಹೀಗೆ ಹೇಳಿದಳು. `ನಿನ್ನನ್ನು ಜನ್ಮಕೊಟ್ಟು ಪಾಲಿಸಿ ಪೆÇೀಷಿಸಿದ ಆ ತಾಯಿ ಎಂತಹಾ ಅದೃಷ್ಟ ಮತ್ತು ಧನ್ಯಳು’. ಆದರೆ ಯೇಸುಕ್ರಿಸ್ತರು ಉತ್ತರಿಸಿದರು. `ತಾಯಿ…. ಆ ಜನ ಎಷ್ಟು ಧನ್ಯರು ಆ ದೇವರ ಅಮೃತವಾಣಿಯನ್ನು ಕೇಳುವವರು ಮತ್ತು ಅದರಂತೆ ಪಾಲಿಸುವವರು. ಲೂಕ್ 11 : 27-28

9) ಯೇಸುಕ್ರಿಸ್ತರ ಬೋಧನೆಯ ತಡೆಯಿಂದ ಆದ ಪರಿಣಾಮಗಳು (ಫಲಿತಾಂಶಗಳು)
1) ಜನರನ್ನು ಕುರಿತು ಯೇಸುಕ್ರಿಸ್ತರು `ನನ್ನ ಮಾತುಗಳನ್ನು ನೀವು ಪಾಲಿಸದಿದ್ದರೆ ಏಕೆ ನನ್ನನ್ನು ಒಡೆಯ(ಸ್ವಾಮಿ) ಒಡೆಯನೇ (ಸ್ವಾಮಿಯೇ) ಎಂದು ಕರೆಯುತ್ತೀರಿ. ಲೂಕ್ 6 : 46
2) ಯಾರು ನನ್ನ ಹಿತವಚನಗಳನ್ನು ಆಲಿಸುವರೋ ಮತ್ತು ಅದರಂತೆ ನಡೆಯದೇ ಇರುವರೋ ಮರಳುಭೂಮಿಯ ಮೇಲೆ ಮನೆ ಕಟ್ಟಿದಂತೆಯೇ ಸರಿ’ ಎಂದಿದ್ದಾರೆ. ಮ್ಯಾಥೋವ 7 : 26

10) ಜನರು ಅತಿ ಮುಖ್ಯವಾಗಿ ಅಪಾರ್ಥ ಮಾಡಿಕೊಂಡಿರುವ ಹಿತವಚನಗಳು
1) ಆ ತಂದೆ (ದೇವರು) ಮತ್ತು ನಾನು ಒಂದೇ ಆಗಿದ್ದೇವೆ.
2) ಜನರೆ ನಾನು ತಂದೆ(ದೇವ)ಯಲ್ಲಿ ಇದ್ದೇನೆ. ತಂದೆ(ದೇವ)ಯು ನನ್ನಲ್ಲಿ ಇದ್ದಾನೆಂಬುವ ನನ್ನ ಮಾತನ್ನು ನಂಬಿ. ಇಲ್ಲವೇ, ನಾನು ಮಾಡುವ ಸುಕೃತ್ಯಗಳಿಂದಾದರೂ ವಿಶ್ವಾಸವಿರಿಸಿ. ಜಾನ್ 14 : 11

ಆದರೆ ವಾಸ್ತವವಾಗಿ ಈ ಭೌತ ಜಗತ್ತಿನಲ್ಲಿ ಯೇಸುಕ್ರಿಸ್ತರು ಹೇಳಿದಂತೆ ಯೇಸುಕ್ರಿಸ್ತರು ಮತ್ತು ದೇವರು ಒಂದೇ ಆಗಿರುವುದಿಲ್ಲ. ಆದರೆ ಅವರಿಬ್ಬರು ಆಧ್ಯಾತ್ಮಿಕವಾಗಿ ಹಾಗೂ ನಮ್ಮ ಆಲೋಚನಾ ತಿಳುವಳಿಕೆಯಲ್ಲಿ ಒಂದೇ ಆಗಿರುವರು.

ನಿದರ್ಶನಕ್ಕಾಗಿ : ಈ ಕೆಳಗಿನ ಉಲ್ಲೇಖಗಳನ್ನು ಗಮನಿಸೋಣ (ನೋಡೋಣ)
1) ಆ ನಿರ್ಣಾಯಕ ದಿನದಂದು ನಿಮಗೆ ತಿಳಿಯುವುದು ನಾನು ಆ ನನ್ನ ತಂದೆ ದೇವರಲ್ಲಿರುವುದು ಮತ್ತು ನೀವು ನನ್ನಲ್ಲಿರುವುದು. ನಾನು ದೃಢವಾಗಿ ನಿಮ್ಮಲ್ಲಿ ಇರುವಂತೆ ನೀವು ನನ್ನಲ್ಲಿರುವಿರಿ. ಜಾನ್ 14 : 20
2) ಯೇಸುಕ್ರಿಸ್ತರು ಹೀಗೆ ಅರಿಕೆ ಮಾಡಿಕೊಳ್ಳುತ್ತಿದ್ದರು `ಇನ್ನು ನಾನು ಲೋಕದಲ್ಲಿ ಇರುವುದಿಲ್ಲ. ಇವರು ಲೋಕದಲ್ಲಿ ಇರುತ್ತಾರೆ. ಪವಿತ್ರನಾದ ತಂದೆಯೇ ದಯವಿಟ್ಟು ಇವರನ್ನು ನಿನ್ನ ದಯೆ ಕೃಪೆಯಿಂದ ಕ್ಷೇಮವಾಗಿ ಇಡು. ನಿನ್ನ ನಾಮದ ಬಲದಿಂದ ನೀನು ಕೊಟ್ಟ ನನ್ನ ನಾಮದ ಕರುಣೆಯಿಂದ ಅವರೆಲ್ಲರು ಒಂದಾಗಿ ಬಾಳಲಿ ನಾನು ನೀನು ಒಂದಾಗಿರುವಂತೆ. (ನನ್ನ ನಿನ್ನ ಚೇತನ ಒಂದಾಗಿರುವಂತೆ) ಜಾನ್ 17 : 11
3) `ನಾನು ನಿನ್ನಲ್ಲಿರುವೆ ನೀನು ನನ್ನಲ್ಲಿರುವೆ, ಹಾಗೆಯೇ ಈ ಜನರೆಲ್ಲ ಒಂದಾಗಬಹುದು ಈ ಜಗತ್ತೆಲ್ಲ ಒಂದಾಗಲಿಕ್ಕಾಗಿ ಮತ್ತು ನಿನ್ನನ್ನು ಅರಿಯಲಿಕ್ಕಾಗಿ ಹಾಗೂ ನೀನು ನನ್ನನ್ನು ಅವರಲ್ಲಿಗೆ ಕಳುಹಿಸಿರುವುದನ್ನು ಮತ್ತು ನನ್ನನ್ನು ನೀನು ಪ್ರೀತಿಸು ವಂತೆ ಅವರನ್ನೂ ಸಹ ಪ್ರೀತಿಸುತ್ತಿರುವ ಅಂಶ ತಿಳಿಯಲಿ. ಜಾನ್ 17 : 27

ಮೇಲಿನ ಉಲ್ಲೇಖಗಳಿಂದ ದೇವರು ಯೇಸುಕ್ರಿಸ್ತ್ರ ಅವರ ಶಿಷ್ಯಂದಿರು ಭೌತಿಕವಾಗಿ ಒಂದೇ ಹಾಗೂ ಅವರ ಶಿಷ್ಯಂದಿರೂ ಸಹ ಯೇಸುಕ್ರಿಸ್ತರಂತೆ ದೇವರಲ್ಲಿರುವ ಅಂಶಗಳು ಆಗಿರಬೇಕು. ಹೀಗೆ ನಿಜವಾಗಿ ಆಧ್ಯಾತ್ಮಿಕ ಭಾವನೆಗಳಿಂದ ಮಾನಸಿಕವಾಗಿ ಅವರೆಲ್ಲಾ ಒಂದೇ ಹೊರತು ಭೌತದೇಹಾಧಾರಿಗಳಾಗಿ ಅಲ್ಲ.

11. ಯಹೋವಾ(ಅಲ್ಲಾಹ್) ನನ್ನು ಬಿಟ್ಟು ಇತರೆ ದೇವತೆಗಳನ್ನು ಪೂಜಿಸುವುದು ಮಹಾಪಾಪ ಮತ್ತು ವ್ಯಭಿಚಾರವಲ್ಲದೆ ಇನ್ನೇನು?
1) ಒಡೆಯ (ಅಲ್ಲಾಹ್/ಯಹೋವ) ಹೇಳುತ್ತಾನೆ `ನಾನು ನನ್ನಿಂದ ದೂರವಾಗಿ ಇತರಲ್ಲಿ ನಶ್ವರ ಮತ್ತು ಶಕ್ತನಾಗಿದ್ದೆ ಮಾನವನಿಗೆ ನÀಂಬಿಕೆ ಇಟ್ಟು ಅಧಃಪತನಕ್ಕೆ ತಳ್ಳುತ್ತೇನೆ. ಜರಿಮಿಹಾಃ 17 : 5
2) ನೀನು ಮತ್ತು ನೀವು ಸರ್ವಶಕ್ತಿ ಆ ದೇವನಿಂದ ದೂರವಾಗಿ ವಿಶ್ವಾಸ ದ್ರೋಹಿಗಳಾಗಿದ್ದೀರಿ. ಹೊಸಿಅ 17 : 5

ಪ್ರಿಯ ವಾಚಕರೆ, ಹೀಗೆ ಯೇಸುಕ್ರಿಸ್ತರ ಬೋಧನೆಗಳ ಬೆಳಕಿನಲ್ಲಿ ನಮಗೆ ಯಹೋವಾ, ಅಲ್ಲಾಹ್, ಒಡೆಯ, ತಂದೆ, ಎಲ್ಲರೂ ಒಂದೇ ಎಂಬುದು ಅರ್ಥವಾಗಿದೆ. ಇನ್ನಾದರೂ ನಾವು ವ್ಯರ್ಥಕಾಲವೇಕೆ ಕಾಯಬೇಕು? ಇಂದೇ ಮನಃಪೂರ್ವಕವಾಗಿ ಪಶ್ಚಾತ್ತಾಪ ದಿಂದ ದೇವರಲ್ಲಿ ಕ್ಷಮಾದಾನ ಪಡೆಯಲು ಮತ್ತು ಆತನ ದೈವವಾಣಿಗಳನ್ನು ಕೇಳಿ ಪಾಲಿಸಲು ಅವನಲ್ಲಿ ಶರಣಾಗೋಣ ಬನ್ನಿ.

12. ಯೇಸುರವರ ಕೊನೆಯ ಎಚ್ಚರಿಕೆ :
1) ಕೇವಲ ನನ್ನನ್ನು ಸ್ವಾಮಿ, ಒಡೆಯ, ದೇವ ಎಂದು ಕರೆಯುವುದರಿಂದ ಅಥವಾ ಸಂಬೋಧಿಸುವುದರಿಂದ ಸ್ವರ್ಗ ಸಿಗುವುದಿಲ್ಲ, ಆದರೆ ಆ ಸರ್ವಜ್ಞನಾದ ಸೃಷ್ಟಿಕರ್ತ ಅಪೇಕ್ಷಿಸುವಂತೆ ಪುಣ್ಯಕಾರ್ಯಗಳನ್ನು ಮಾಡಿದರೆ ಮಾತ್ರ ಸಾಧ್ಯ. ಮ್ಯಾಥೋವ್ 7 : 21
2) ಪವಿತ್ರ ಕುರ್‍ಆನ್: ಅಲಾಹ್‍ನೊಂದಿಗೆ ಇನ್ನಾರನ್ನಾದರೂ ಸಹಭಾಗಿಗಳಾಗಿ ಮಾಡಿದವನಿಗೆ ಅಲ್ಲಾಹನು ಸ್ವರ್ಗವನ್ನು `ನಿಷಿದ್ಧ’ ಗೊಳಿಸಿರುತ್ತಾನೆ ಮತ್ತು ಅವನ ವಾಸಸ್ಥಾನವು `ನರಕ’ ಆಗಿರುತ್ತದೆ. ಇಂತಹ ಆ ಕ್ರಿಮಿಗಳಿಗೆ ಯಾರೂ ಸಹಾಯಕರಿಲ್ಲ.

ಯೇಸುಕ್ರಿಸ್ತನ ಬೋಧನೆಯಲ್ಲಿ ರುಜುವಾತಾದ ವಾಸ್ತವಾಂಶಗಳು :
ಇದರಿಂದ ಸ್ಪಷ್ಟವಾಗಿ ತಿಳಿಯುವುದೇನೆಂದರೆ ಯಾವ ವ್ಯಕ್ತಿ ಏಕೈಕ ಸೃಷ್ಟಿಕರ್ತನಾದ ಅಲ್ಲಾಹ್ ಅಥವಾ ಯಹೋವನೇ ಆರಾಧನೆಗೆ ಅರ್ಹನಾದವನು. ಅವನನ್ನು ಆರಾಧಿಸದೆ ಇತರೆ ಯಾವ ದೇವ ದೇವತೆಯನ್ನು ಆರಾಧಿಸಿದರೋ ಅವನು ನರಕವಲ್ಲದೆ ಸ್ವರ್ಗ ಪ್ರವೇಶಿಸಲಾರನು.

ಪ್ರವಾದಿ ಮುಹಮ್ಮದ್‍ರವರ ಬೋಧನೆಗಳಿಂದ ಆಯ್ದ 70 ಸಂದೇಶಗಳು

ಪ್ರವಾದಿ ಮುಹಮ್ಮದ್‍ರವರ ಬೋಧನೆಗಳಿಂದ ಆಯ್ದ 70 ಸಂದೇಶಗಳು

ಪ್ರವಾದಿ ಮುಹಮ್ಮದ್‍ರವರ ಬೋಧನೆಗಳಿಂದ ಆಯ್ದ 70 ಸಂದೇಶಗಳು

ಸಕಲ ಜೀವಿಗಳ ಸೃಷ್ಟಿಕರ್ತ ಮತ್ತು ಕಣ್ಣಿಗೆ ಕಾಣದಿರುವ ಸರ್ವಶಕ್ತ ದೇವನು, ಮನುಜಕುಲದ ಚರಿತ್ರೆಯುದ್ದಕ್ಕೂ ಅವರ ಮಾರ್ಗದರ್ಶನ ಮತ್ತು ಅವರು ತಮ್ಮ ಜೀವನದ ನಿಜ ಉದ್ದೇಶವನ್ನು ಅರಿತು, ಮುಕ್ತಿ ಹೊಂದಲೆಂದು ತನ್ನ ಪ್ರವಾದಿಗಳನ್ನು ಕಳುಹಿಸಿದ್ದಾನೆ. (ಮುಕ್ತಿಯೆಂದರೆ, ಸಾವಿನ್ನಪ್ಪಿದ ನಂತರ ಪ್ರಪಂಚದ ಕೊನೆಯೊಂದಿಗೆ ನಮ್ಮನ್ನೂ ಸೇರಿದಂತೆ ಸಕಲ ಜೀವಿಗಳನ್ನು ಪುನಃ ಸೃಷ್ಟಿಸಿ, ಭೂಮಿಯಲ್ಲಿನ ನಮ್ಮ ಜೀವನದ ಬಗ್ಗೆ ಪ್ರಶ್ನಿಸಿ, ದೇವನ ಮಾರ್ಗದರ್ಶನದ ಪ್ರಕಾರ ನಡೆದವರಿಗೆ ಸ್ವರ್ಗ ಕೊಡಲಾಗುವುದು. ಅಂತೆಯೇ, ದೇವನನ್ನು ನಿರಾಕರಿಸಿ ಅಥವಾ ಅವನಿಗೆ ಸಮಾನರನ್ನು ಹೋಲಿಸಿ ಅಥವಾ ಆಕಾರ ನೀಡಿ ಅವನ ಮಾರ್ಗದರ್ಶನದ ವಿರುದ್ಧ ಹೋದವರಿಗೆ ನರಕ ಕೊಡಲಾಗುವುದು). ಈ ರೀತಿ ಮಾರ್ಗದರ್ಶನಕ್ಕೆಂದು ಕಳುಹಿಸಲಾದ ಪ್ರವಾದಿಗಳ ಸಾಲಿನಲ್ಲಿ ಕಟ್ಟ ಕಡೆಯವರೇ, ಪ್ರವಾದಿ ಮುಹಮ್ಮದ್ (ಅ.ಶಾ.ಇ – ಅವರ ಮೇಲೆ ಅಲ್ಲಾಹನ ವತಿಯಿಂದ ಶಾಂತಿ, ಅನುಗ್ರಹ ಇರಲಿ). ಅವರು ಸುಮಾರು 1400 ವರ್ಷಗಳ ಹಿಂದೆ ಬಾಳ್ವೆ ನಡೆಸಿದ್ದವರು ಮತ್ತು ದೇವನ ವತಿಯಿಂದ ಅವರಿಗೆ ಖುರಾನ್ ಅವತೀರ್ಣ ಮಾಡಲಾಗಿತ್ತು. ಪ್ರವಾದಿ (ಅ.ಶಾ.ಇ)ಯವರ ನಡೆ, ನುಡಿ, ಬೋಧನೆಗಳು (ಹದೀತ್‍ಗಳು) ಮತ್ತು ಅವುಗಳ ಆಧಾರಿತ ಆಚರಣೆಗಳನ್ನು ‘ಸುನ್ನಾಹ್’ ಎಂದು ಕರೆಯಲಾಗುತ್ತದೆ; ಸುಮಾರು 10000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ದೃಢೀಕೃತ ಸುನ್ನಾಹ್‍ಗಳಲ್ಲಿ ಕೆಲವರ ಮೌಲ್ಯಾಧಾರಿತ ಬೋಧನೆಗಳನ್ನು ನಾವು ಇಲ್ಲಿ, ನಲ್ಮೆಯ ಕೊಡುಗೆಯ ರೂಪದಲ್ಲಿ, ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತೇವೆ. ವಿವಿಧ ಸಂದರ್ಭಗಳಲ್ಲಿ ಪ್ರವಾದಿ ಮುಹಮ್ಮದ್‍ರವರು (ಅ.ಶಾ.ಇ) ನುಡಿದಂತಹ ಮುತ್ತುಗಳು ಇಂತಿವೆ:

1. (ತಾಯಿಯ ಪ್ರಾಮುಖ್ಯತೆ) ಪ್ರವಾದಿಯವರನ್ನು ಒಮ್ಮೆ ಕೇಳಲಾಗಿ: ‘ಓ ದೇವನ ಸಂದೇಶವಾಹಕರೇ, ಜನರಲ್ಲಿ ಯಾರು ನನ್ನ ಉತ್ತಮ ನಡತೆ ಮತ್ತು ಒಡನಾಟದ ಅತ್ಯಂತ ಹೆಚ್ಚು ಹಕ್ಕುದಾರರು?’ ಅವರು ಹೇಳಿದರು, ‘ನಿಮ್ಮ ತಾಯಿ’. ಆ ವ್ಯಕ್ತಿ ಮತ್ತೆ ಕೇಳಿದರು, ‘ನಂತರ ಯಾರು?’ ಅವರು ಹೇಳಿದರು, ‘ನಿಮ್ಮ ತಾಯಿ’. ಆ ವ್ಯಕ್ತಿ ಮತ್ತೆ ಕೇಳಿದರು, ‘ನಂತರ ಯಾರು?’ ಅವರು ಹೇಳಿದರು, ‘ನಿಮ್ಮ ತಾಯಿ’. ಆ ವ್ಯಕ್ತಿ ಮತ್ತೆ ಕೇಳಿದರು, ‘ನಂತರ ಯಾರು?’ ಅವರು ಹೇಳಿದರು, ‘ನಿಮ್ಮ ತಂದೆ’.

2. (ಹೆಣ್ಣು ಮಕ್ಕಳ ಆರೈಕೆ) “(ಸತ್ಯ ವಿಶ್ವಾಸಿಗಳಲ್ಲಿ) ಯಾರಿಗಾದರು ಮೂರು ಹೆಣ್ಣು ಮಕ್ಕಳಿದ್ದು, ಅವರು ಆ ಮಕ್ಕಳ ಆರೈಕೆ ಮತ್ತು ಅವರ ಅವಶ್ಯಕತೆಗಳನ್ನು ನೋಡಿಕೊಂಡು, ಅವರೆಡೆಗೆ ಮಮತೆಯನ್ನು ತೋರುತ್ತಾರೋ ಅವರು ಸ್ವರ್ಗ ಪ್ರವೇಶಿಸುವರು”. ಎರಡು ಹೆಣ್ಣು ಮಕ್ಕಳಿರುವವರ ಬಗ್ಗೆ ಕೇಳಲಾದಾಗ, ಅಂತಹ ತಂದೆ ತಾಯಿಗಳ ಬಗೆಗೂ ಅವರು ಹೌದೆಂದು (ಸ್ವರ್ಗ ಪ್ರವೇಶಿಸುವರೆಂದು) ಉತ್ತರಿಸಿದರು.

3. (ಹೆಂಡತಿಯೆಡೆಗೆ ಪ್ರೀತಿ, ದಯೆ ಮತ್ತು ಉತ್ತಮ ನಡತೆ) “ಯಾರು ತಮ್ಮ ಹೆಂಡತಿಯೊಡನೆ ಉತ್ತಮ ರೀತಿಯಲ್ಲಿ ನಡೆದುಕೊಳ್ಳುತ್ತಾರೋ ಅವರೇ (ದೇವನಲ್ಲಿ) ನಂಬಿಕೆಯಿರಿಸಿರುವವರಲ್ಲಿ ಅತ್ಯುತ್ತಮರು.” “ಈ ಪ್ರಪಂಚದಲ್ಲಿ ಅತ್ಯುತ್ತಮವಾದದ್ದೆಂದರೆ ಉತ್ತಮ ಹೆಂಗಸು (ಹೆಂಡತಿ).” “ಯಾವುದೇ ಸತ್ಯ ವಿಶ್ವಾಸಿ ಪುರುಷ ಒಬ್ಬ ಸತ್ಯ ವಿಶ್ವಾಸಿ ಸ್ತ್ರೀಯನ್ನು (ತನ್ನ ಹೆಂಡತಿಯನ್ನು) ದ್ವೇಷಿಸಬಾರದು, ಏಕೆಂದರೆ ಆಕೆಯ ಯಾವುದೋ ಒಂದು ಗುಣವನ್ನು ಅವನು ಇಷ್ಟಪಡದಿರಬಹುದು, ಆದರೆ ಆಕೆಯ ಇತರೆ ಗುಣಗಳಿಂದ ಅವನು ಪ್ರಸನ್ನನಾಗಿರುವನು.” “ಈ ಪ್ರಪಂಚ ಒಂದು (ವೇಗವಾಗಿ ಕಳೆಯುತ್ತಿರುವ) ಮೋಜು; ಹಾಗು ಈ ಪ್ರಪಂಚದ ಅತ್ಯುತ್ತಮ ಮೋಜು ಒಬ್ಬ ಧರ್ಮಶ್ರದ್ಧೆಯುಳ್ಳ ಹೆಂಡತಿ”.

4. (ದಾನ) “ನೀವು ಆರೋಗ್ಯಕರವಾಗಿದ್ದಾಗ, ಜಿಪುಣತನ ಅನುಭವಿಸುತ್ತಿರುವಾಗ, ಬಡತನವನ್ನು ಹೆದರುತ್ತಾ ಮತ್ತು ಸಂಪತ್ತಿನ ನಿರೀಕ್ಷಣೆಯಲ್ಲಿ ದಾನ ಮಾಡಿ. ಸಾವಿನ ಘಳಿಗೆ ಸಮೀಪಿಸಿ, ಅದಾಗಲೇ ಅವರಿಗೇ ಸೇರಿರುವುದನ್ನು ಇಂತವರಿಗೆ ಇಷ್ಟು ಕೊಡಿ ಎನ್ನುವ ತನಕ ಕಾಯದಿರಿ.” “ನರಕದ ಬೆಂಕಿಯಿಂದ ನಿಮ್ಮನ್ನು ನೀವು ಅರ್ಧ ಖರ್ಜೂರದ ದಾನದೊಂದಿಗಾದರೂ ಕಾಪಾಡಿಕೊಳ್ಳಿ”. “ದಾನದಿಂದಾಗಿ ಸಂಪತ್ತು ಕುಗ್ಗದು”. “ಪುನರುತ್ಥಾನ ದಿನದಂದು ಸತ್ಯ ವಿಶ್ವಾಸಿಯ ನೆರಳು ಅವನ ದಾನವಾಗಿರುತ್ತದೆ”. “ದಾನವನ್ನು ತಡಮಾಡದೆ ಕೊಡಿ, ಏಕೆಂದರೆ ಅದು ವಿಪತ್ತಿನ ದಾರಿಯಲ್ಲಿ ತಡೆಯಾಗಿ ನಿಲ್ಲುತ್ತದೆ”.

5. (ತಂದೆ ತಾಯಿ) “ಅವನು ನಿರ್ನಾಮವಾದನು, ಅವನು ನಿರ್ನಾಮವಾದನು, ಅವನು ನಿರ್ನಾಮವಾದನು” ಕೇಳಲಾದಾಗ, “ಯಾರು, ಓ ದೇವನ ಸಂದೇಶವಾಹಕರೆ?” ಅವರು ಹೇಳಿದರು, “ಯಾರ ತಂದೆ ತಾಯಿಯಲ್ಲಿ ಒಬ್ಬರು ಅಥವಾ ಇಬ್ಬರೂ, ಅವನ ಜೀವನದಲ್ಲಿ ಇಳಿವಯಸ್ಸು ತಲುಪಿದರಾದರೂ, ಅವನು (ಅವರ ಸೇವೆ ಮಾಡುವ ಮೂಲಕ) ಸ್ವರ್ಗ ಪ್ರವೇಶಿಸಲಿಲ್ಲ”. ಸಹವರ್ತಿಯೊಬ್ಬರು ಪ್ರವಾದಿಯನ್ನು ಕೇಳಿದರು: “ತಂದೆ ತಾಯಿಯರು ತಮ್ಮ ಮಕ್ಕಳಿಂದ ಯಾವುದರ ಹಕ್ಕುಗಳನ್ನು ನಿರೀಕ್ಷಿಸಬಹುದು?” ಪ್ರವಾದಿ ಉತ್ತರಿಸಿದರು, “ಅವರು (ಅಥವಾ ಅವರೊಂದಿಗಿನ ನಿಮ್ಮ ಸಂಬಂಧ) ನಿಮ್ಮ ಸ್ವರ್ಗ ಅಥವಾ ನರಕ (ನಿರ್ಧರಿಸುತ್ತದೆ)”.

ಸಹವರ್ತಿಯೊಬ್ಬರು ಪ್ರವಾದಿಯನ್ನು ಕೇಳಿದರು, “ಸರ್ವಶಕ್ತ ದೇವನ ಬಳಿ ಅತ್ಯಂತ ಕೆಡುಕಿನ ಪಾಪಗಳು ಯಾವುವು?” ಪ್ರವಾದಿ ಉತ್ತರಿಸಿದರು: “ಅವು, ಸರ್ವಶಕ್ತ ದೇವನೊಂದಿಗೆ ಬೇರೆ ಯಾರನ್ನಾದರೂ/ಏನನ್ನಾದರೂ ಸಮನಾಗಿಸುವುದು, ತನ್ನ ತಂದೆ ತಾಯಿಯೆಡೆಗಿನ ಕರ್ತವ್ಯಗಳನ್ನು ನಿಭಾಯಿಸದಿರುವುದು, ಮನುಷ್ಯನೊಬ್ಬನನ್ನು ಕೊಲ್ಲುವುದು ಮತ್ತು ಸುಳ್ಳು ಸಾಕ್ಷಿ ಕೊಡುವುದು”. “ಸರ್ವಶಕ್ತ ದೇವನು ತಂದೆ ತಾಯಿಯೆಡೆಗಿನ ಅವಿಧೇಯತೆಯನ್ನು ಹೊರತುಪಡಿಸಿ ಬೇರೆಲ್ಲ ಪಾಪಗಳನ್ನು ಕ್ಷಮಿಸುವನು ಹಾಗು ತಂದೆ ತಾಯಿಗೆ ಅವಿಧೇಯರಾಗಿರುವವರಿಗೆ ಈ ಜೀವನದಲ್ಲಿ (ಅತಿ ಶೀಘ್ರವಾಗಿ ಶಿಕ್ಷೆ ನೀಡುವುದರಲ್ಲಿ) ತ್ವರಿತಗೊಳಿಸುತ್ತಾನೆ”. ಪ್ರವಾದಿಯವರನ್ನು ಒಮ್ಮೆ ಕೇಳಲಾಗಿ, “ಓ ದೇವನ ಸಂದೇಶವಾಹಕರೆ, ಅವರ ಸಾವಿನ ನಂತರ ನನ್ನ ತಂದೆ ತಾಯಿಗೆ ನನ್ನ ಮೇಲೆ ಯಾವುದಾದರು ಹಕ್ಕಿದೆಯೇ?” ಪ್ರವಾದಿ ಉತ್ತರಿಸಿದರು, “ಹೌದು! ನೀವು, ದೇವನು ತನ್ನ ದಯೆ ಮತ್ತು ಕ್ಷಮೆಯೊಂದಿಗೆ ಅವರಿಗೆ ಅನುಗ್ರಹಿಸಲಿ ಎಂದು ಅವನಲ್ಲಿ ಬೇಡಿಕೊಳ್ಳಬೇಕು, ಹಾಗು ಅವರು ಮಾಡಿರುವ ವಾಗ್ದಾನಗಳನ್ನು ಪೂರೈಸುವುದರ ಜೊತೆಗೆ ಅವರ ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಸೂಕ್ತ ರೀತಿಯಲ್ಲಿ ನಡೆದುಕೊಳ್ಳಬೇಕು”.

6. (ವರ್ಣ ಭೇದ ಮತ್ತು ಜಾತಿ ವ್ಯವಸ್ಥೆ) “ಸಕಲ ಮನುಜಕುಲ ಆದಮ್ ಮತ್ತು ಈವ್‍ನಿಂದ ಬಂದವರು, ಒಬ್ಬ ಅರಬಿ ಅರಬೇತರನಿಗಿಂತ ಉತ್ತಮನಲ್ಲ, ಅಂತೆಯೇ ಅರಬೇತರ ಅರಬಿಗಿಂತ ಉತ್ತಮನಲ್ಲ; ಹಾಗೆಯೇ, ಬಿಳಿಯ ವರ್ಣದವನು ಕಪ್ಪು ವರ್ಣದವನಿಗಿಂತ ಶ್ರೇಷ್ಟನಲ್ಲ ಮತ್ತು ಕಪ್ಪು ವರ್ಣದವನು ಬಿಳಿಯ ವರ್ಣದವನಿಗಿಂತ ಶ್ರೇಷ್ಟನಲ್ಲ, (ಆ ಮನುಷ್ಯನಲ್ಲಿನ) ದೇವರ ಭಯ, ಭಕ್ತಿ ಮತ್ತು ಉತ್ತಮ ಕರ್ಮಗಳ ಹೊರತುಪಡಿಸಿ”.

7. (ಕರುಣೆ) “ಕರುಣೆ ತೋರುವವರಿಗೆ, ಅತ್ಯಂತ ಕರುಣಾಮಯಿ (ದೇವನು) ಕರುಣೆ ತೋರುವನು”. “ಭೂಮಿಯಲ್ಲಿರುವವರಿಗೆ ಕರುಣಾಮಯಿಯಾಗಿರಿ ಹಾಗು ಸ್ವರ್ಗದ ಮೇಲಿರುವವನು (ದೇವನು) ನಿಮ್ಮ ಮೇಲೆ ಕರುಣೆ ತೋರುವನು”. ಪ್ರವಾದಿ ತಿಳಿಸಿದರು, “ದೇವನು ಹೇಳುತ್ತಾನೆ: ‘ನಾನು ಅರ್ರಹ್ಮಾನ್ (ಅತ್ಯಂತ ಕರುಣಾಮಯಿ) ಮತ್ತು ಈ ರಹ್ಮ್ (ತಾಯಿಯ ಗರ್ಭ) ನನ್ನ ಹೆಸರಿನಿಂದ ತನ್ನ ಹೆಸರನ್ನು ಪಡೆಯುತ್ತದೆ. ಯಾರು ಇದನ್ನು ಬಾಕಿ ಉಳಿಸಿಕೊಳ್ಳುತ್ತಾರೋ, ನಾನು ಅವರ ಆರೈಕೆ ಮಾಡುವೆನು ಹಾಗು ಯಾರು ಅದನ್ನು ತೊರೆಯುತ್ತಾರೋ (ತಾಯಿಯೊಂದಿಗಿನ ಸಂಬಂಧ ಕಡೆಯುವುದು), ನಾನು ಅವರನ್ನು ತೊರೆಯುತ್ತೇನೆ”.

8. (ದೇವನ ಅಪರಿಮಿತ ಕರುಣೆ) “ಅಲ್ಲಾಹನು ಕರುಣೆಯನ್ನು ಒಂದು ನೂರು ಭಾಗಗಳಾಗಿ ವಿಭಾಗಿಸಿದನು ಹಾಗು ತೊಂಬತ್ತೊಂಭತ್ತು ಭಾಗಗಳನ್ನು ತನ್ನ ಬಳಿ ಇರಿಸಿಕೊಂಡನು ಮತ್ತು ಒಂದು ಭಾಗವನ್ನು ಭೂಮಿಗಿಳಿಸಿದನು; ಈ ಒಂದು ಭಾಗದಿಂದಾಗಿಯೇ, ಅವನ ಸೃಷ್ಟಿಯು ಪರಸ್ಪರ ಕರುಣಾಮಯಿಯಾಗಿದೆ, ಹೆಣ್ಣು ಕುದುರೆಯೊಂದು ತುಳಿದು ಬಿಡಬಹುದೆಂದು ತನ್ನ ಕಾಲನ್ನು ತನ್ನ ಮಗುವಿನಿಂದ ದೂರ ಸರಿಸುತ್ತದೆ”.

9. (ಪಾಣಿಗಳೆಡೆಗೆ ಕರುಣೆ ಮತ್ತು ಅದರ ಪರಿಣಾಮ) “ಸಾವಿನ ನಂತರ ಒಬ್ಬ ಮಹಿಳೆಯನ್ನು ಶಿಕ್ಷಿಸಲಾಯಿತು, ಏಕೆಂದರೆ ಬೆಕ್ಕೊಂದನ್ನು ಆಕೆ ಅದರ ಸಾವಿನವರೆಗೆ ಸೆರೆಯಲ್ಲಿಟ್ಟಿದ್ದಳು, ಹಾಗು ಈ ಕಾರಣಕ್ಕೆ ಆಕೆ ಬೆಂಕಿ ಪ್ರವೇಶಿಸಿದಳು. ಆಕೆ ಆ ಬೆಕ್ಕಿಗೆ ಊಟವಾಗಲಿ, ನೀರಾಗಲಿ ಕೊಡದೆ ಸೆರೆಯಲ್ಲಿಟ್ಟಿದ್ದಷ್ಟೇ ಅಲ್ಲದೆ ಅದನ್ನು ಭೂಮಿಯ ಜೀವಿಗಳನ್ನು ತಿನ್ನಲಾದರೂ ಸೆರೆಯಿಂದ ಹೊರಬಿಟ್ಟಿರಲಿಲ್ಲ”.

10. (ಸಾವಿನ ನಂತರದ ಜೀವನದ ಪ್ರಾಮುಖ್ಯತೆ) “(ತಾತ್ಕಾಲಿಕವಾದ) ಈ ಲೌಕಿಕ ಜೀವನ ಸಾವಿನ ನಂತರದ ಜೀವನದ ತುಲನೆಯಲ್ಲಿ, ನಿಮ್ಮಲ್ಲಿ ಯಾರಾದರೂ ತಮ್ಮ ಬೆರಳನ್ನು ಸಮುದ್ರದಲ್ಲಿ ಅದ್ದಿದಾಗ ಅದರೊಂದಿಗೆ ಏನು ಹೊರಬರುವುದೋ, ಅದರಂತಿದೆ”.

11. (ಕಣ್ಣಿಗೆ ಕಾಣದಿರುವ ಸರ್ವಶಕ್ತ ದೇವನೊಂದಿಗೆ ಯಾರನ್ನಾದರೂ ಸಮಾನರಾಗಿಸುವುದು) “ಯಾರು ಅಲ್ಲಾಹನೊಂದಿಗೆ ಯಾರನ್ನೂ ಸಮಾನರಾಗಿಸದೇ ಇರುವಂತಹ ಸ್ಥಿತಿಯಲ್ಲಿ ಅಲ್ಲಾಹನನ್ನು ಭೇಟಿಮಾಡುವರೋ, ಅವರು ಸ್ವರ್ಗ ಪ್ರವೇಶಿಸುವರು; ಹಾಗು ಯಾರು ಅಲ್ಲಾಹನೊಂದಿಗೆ ಯಾರನ್ನಾದರೂ ಸಮಾನರಾಗಿಸಿದ ಸ್ಥಿತಿಯಲ್ಲಿ ಭೇಟಿಮಾಡುವರೋ, ಅವರು ನರಕದ ಬೆಂಕಿಯನ್ನು ಪ್ರವೇಶಿಸುವರು.”

12. (ಕೋಪ) “ಕುಸ್ತಿಪಟುಗಳು ಶಕ್ತಿಶಾಲಿಗಳಲ್ಲ. ಖಂಡಿತವಾಗಿಯೂ, ಯಾರು ತಮ್ಮ ಕೋಪವನ್ನು ಹಿಡಿತದಲ್ಲಿ ತರಬಲ್ಲರೋ ಅವರೇ ಶಕ್ತಿಶಾಲಿಗಳು”. “ನ್ಯಾಯಾಧೀಶರು ಕೋಪದಲ್ಲಿರುವಾಗ ಇಬ್ಬರ ನಡುವೆ ನ್ಯಾಯ ತೀರ್ಮಾನ ಮಾಡಬಾರದು”. “ನಿಮ್ಮಲ್ಲಿ ಯಾರಾದರು ನಿಂತಿರುವಾಗ ಕೋಪಗೊಂಡರೆ, ಅವರು ಕುಳಿತುಕೊಳ್ಳಬೇಕು. ಕೋಪ ತಣ್ಣಗಾದಲ್ಲಿ ಒಳಿತು; ಇಲ್ಲವೇ ಅವರು ಮಲಗಬೇಕು”. ಒಮ್ಮೆ ಒಬ್ಬ ಸಹವರ್ತಿ ಕೇಳಿದರು, “ದೇವನ ಪ್ರವಾದಿಯವರೇ, ನನಗೆ ಸಲಹೆ ನೀಡಿ!” ಪ್ರವಾದಿ ಹೇಳಿದರು, “ಕೋಪಗೊಳ್ಳಬೇಡ ಮತ್ತು ಉಗ್ರತೆಯನ್ನು ತಾಳಬೇಡ”. ಆ ವ್ಯಕ್ತಿ ಪದೇ ಪದೇ ಕೇಳಲು, ಪ್ರವಾದಿಯವರು ಪ್ರತಿ ಬಾರಿಯೂ, “ಕೋಪಗೊಳ್ಳಬೇಡ ಮತ್ತು ಉಗ್ರತೆಯನ್ನು ತಾಳಬೇಡ” ಎಂದೇ ಹೇಳಿದರು.

13. (ಸಣ್ಣದೆಂದು ಪರಿಗಣಿಸಲಾಗುವ ಕೆಲಸಗಳು) “ಯಾವುದೇ ಸತ್ಕರ್ಮವನ್ನು ತೃಣಸಮಾನವೆಂದು ತಿಳಿಯಬೇಡಿ, ನಿಮ್ಮ ಸೋದರನನ್ನು ಹಸನ್ಮುಖಿಯಾಗಿ ಭೇಟಿಯಾಗುವುದೂ ಸೇರಿದಂತೆ”.

14. (ಸದ್ಗುಣ ಮತ್ತು ಪಾಪದ ತಿಳುವಳಿಕೆ) “ಸದ್ಗುಣವೆಂಬುದು ಉತ್ತಮ ನಡುವಳಿಕೆ ಹೊಂದಿರುವುದು ಹಾಗು ಪಾಪವೆಂಬುದು ನಿಮ್ಮ ಮನಸ್ಸಿನಲ್ಲಿ ಕುಟುಕುವಂಥದ್ದು ಮತ್ತು ಜನರು ಅದರ (ನಿಮ್ಮ ಪಾಪದ) ಬಗ್ಗೆ ತಿಳಿಯುವುದನ್ನು ನೀವು ದ್ವೇಷಿಸುವಂಥದ್ದಾಗಿದೆ”.

15. (ಸತ್ಯ ವಿಶ್ವಾಸ/ಈಮಾನ್) ಪ್ರವಾದಿಯವರನ್ನು ಒಮ್ಮೆ ಕೇಳಲಾಯಿತು, ‘ಈಮಾನ್ ಎಂದರೇನು?’, ಅವರು ಉತ್ತರಿಸಿದರು, ‘ಅದು, ದೇವನಲ್ಲಿ, ಅವನ ದೇವದೂತರಲ್ಲಿ, ಅವನ (ಅವತೀರ್ಣಗೊಳಿಸಲಾದ) ಗ್ರಂಥಗಳಲ್ಲಿ, ಅವನ ಸಂದೇಶವಾಹಕರಲ್ಲಿ ಮತ್ತು ಪುನರುತ್ಥಾನ ದಿನ, ಮತ್ತು ಅದರಲ್ಲಿನ ಒಳಿತು ಹಾಗು ಕೆಡುಕು ಸೇರಿದಂತೆ ಕದರ್‍ನಲ್ಲಿ (ದೈವ ನಿರ್ಧಾರಿತ ವಿಧಿಯಲ್ಲಿü) ನಂಬಿಕೆ ಇರಿಸುವುದು’. ಅಂತೆಯೇ ಅವರು ಹೇಳಿದ್ದಾರೆ, “ಸತ್ಯ ವಿಶ್ವಾಸದ 60 ಅಥವಾ 70 ಶಾಖೆಗಳಿವೆ. ಅವುಗಳಲ್ಲಿ ಅತ್ಯುನ್ನತವಾದದ್ದು, ‘ಅಲ್ಲಾಹನ ಹೊರತಾಗಿ ಬೇರೆ ಯಾರು ಆರಾಧನೆಗೆ ಯೋಗ್ಯ ದೈವವಿಲ್ಲ ಹಾಗು ಮುಹಮ್ಮದ್ ಅಲ್ಲಾಹನ ಸಂದೇಶವಾಹಕ’ನೆಂದು ಸಾಕ್ಷಿ ನೀಡುವುದು; ಅಂತೆಯೇ ಅತೀ ಕೆಳಗಿನದ್ದು, ರಸ್ತೆಯಲ್ಲಿನ ಕೆಡುಕನ್ನು ತಗೆದು ಹಾಕುವುದು. ಸರಳತೆಯೂ ಸತ್ಯವಿಶ್ವಾಸದ ಒಂದು ಭಾಗವಾಗಿದೆ”. ಒಮ್ಮೆ ಪ್ರವಾದಿಯವರು, “ಅಲ್ಲಾಹನ ಪ್ರಮಾಣವಾಗಿಯೂ, ಅವನು ಸತ್ಯವಿಶ್ವಾಸಿಯಲ್ಲ! ಅಲ್ಲಾಹನ ಪ್ರಮಾಣವಾಗಿಯೂ, ಅವನು ಸತ್ಯವಿಶ್ವಾಸಿಯಲ್ಲ! ಅಲ್ಲಾಹನ ಪ್ರಮಾಣವಾಗಿಯೂ, ಅವನು ಸತ್ಯವಿಶ್ವಾಸಿಯಲ್ಲ!” ಎಂದರು; ಅವರನ್ನು ಕೇಳಲಾಗಿ, ‘ಓ ಅಲ್ಲಾಹನ ಸಂದೇಶವಾಹಕರೇ, ಯಾರದು?’, ಅವರು ಹೇಳಿದರು, ‘ಯಾರ ಕೇಡಿನಿಂದ ಅವನ ನೆರೆಹೊರೆಯವರು ಸುರಕ್ಷಿತವೆಂದು ಭಾವಿಸುವುದಿಲ್ಲವೋ ಅವರು’. ಒಬ್ಬ ವ್ಯಕ್ತಿ ಪ್ರವಾದಿಯವರನ್ನು ಕೇಳಿದರು, ‘ಸತ್ಯ ವಿಶ್ವಾಸವೆಂದರೇನು?’ ಪ್ರವಾದಿ ಉತ್ತರಿಸಿದರು: ‘ಯಾವಾಗ ಒಂದು ಸತ್ಕರ್ಮ ನಿಮಗೆ ಆಹ್ಲಾದಕರವೆನಿಸುತ್ತದೆ ಮತ್ತು ಕೇಡಿನ ಕೆಲಸ ಅಸಹ್ಯ ಹುಟ್ಟಿಸುತ್ತದೋ, ಆಗ ನೀವೊಬ್ಬ ಸತ್ಯ ವಿಶ್ವಾಸಿಯೆಂದು ಅನಿಸಿಕೊಳ್ಳುತ್ತೀರಾ”.

16. (ಸಮಯ ಮತ್ತು ಆರೋಗ್ಯ) “ಬಹಳಷ್ಟು ಜನರು ವ್ಯರ್ತ ಮಾಡುವಂತಹ ಎರಡು ಕೊಡುಗೆಗಳಿವೆ: ಆರೋಗ್ಯ ಮತ್ತು ಬಿಡುವಿನ ಸಮಯ”. “ಐದು ವಿಷಯಗಳ ಮುಂಚೆ ಐದು ವಿಷಯಗಳ ಲಾಭ ಪಡೆಯಿರಿ: ಮುದಿತನದ ಮುಂಚೆ ಯೌವನ; ಅನಾರೋಗ್ಯದ ಮುಂಚೆ ಆರೋಗ್ಯ; ಬಡತನದ ಮುಂಚೆ ಐಶ್ವರ್ಯ; ಬಿಡುವಿಲ್ಲದಂತಾಗುವುದರ ಮುಂಚೆ ಬಿಡುವಿನ ಸಮಯ ಹಾಗು ಸಾವಿನ ಮುಂಚೆ ನಿಮ್ಮ ಜೀವನ”.

17. (ಅನಾಥರಡೆಗಿನ ಪ್ರೇಮ) “ನಿಮ್ಮ ಹೃದಯ ಮೆದುವಾಗಬೇಕು ಹಾಗು ನಿಮ್ಮ ಬಯಕೆಗಳನ್ನು ಗಳಿಸುವಂತಾಗಬೇಕೆ? ಹಾಗಿದ್ದಲ್ಲಿ ಅನಾಥರೆಡೆಗೆ ಕರುಣೆ ತೋರಿಸಿ, ಅವರ ತಲೆ ಸವರಿರಿ ಮತ್ತು ನಿಮ್ಮ (ಸ್ವಂತ) ಊಟವನ್ನು ಅವರಿಗೆ ಉಣಿಸಿ. ಈ ಮೂಲಕ ನಿಮ್ಮ ಹೃದಯಗಳನ್ನು ಮೆದು ಮಾಡಿಕೊಳ್ಳಬಹುದು ಮತ್ತು ನಿಮ್ಮ ಬಯಕೆಗಳನ್ನು ಗಳಿಸಬಹುದು”.

18. (ಪಾಪವನ್ನು ಗುರುತಿಸುವುದು) “ಪಾಪವೆಂಬುದು, ನಿಮ್ಮ ಹೃದಯದಲ್ಲಿ (ಅಪರಾಧಪ್ರಜ್ಞೆಯ ಭಾವನೆಯೊಂದಿಗೆ) ತಲ್ಲಣ ಉಂಟು ಮಾಡುವಂಥದ್ದು, ಅದರ ಬಗೆಗೆ ಇತರರು ತಿಳಿಯಬಾರದೆಂದು ನೀವು ಬಯಸುವಿರಿ”. ಪ್ರವಾದಿಯವರು ಹೀಗೂ ಹೇಳಿದ್ದಾರೆ: “ಯಾವುದು ನಿಮ್ಮ ಮನಸ್ಸಾಕ್ಷಿಯನ್ನು ಕೊರೆಯುತ್ತದೋ, ಅದನ್ನು ಬಿಟ್ಟುಬಿಡಿ (ಏಕೆಂದರೆ ಅದು ಪಾಪವಾಗಿರುತ್ತದೆ)”.

19. (ರಕ್ತ ಸಂಬಂಧಗಳನ್ನು ಕಾಪಾಡಿಕೊಳ್ಳುವುದು) “ಯಾರು ತಮ್ಮ ಅಗತ್ಯದ ಸಾಮಗ್ರಿಗಳು ಯತೇಚ್ಛವಾಗಿರಬೇಕು ಮತ್ತು ಅವರ ಆಯಸ್ಸು ಹೆಚ್ಚಾಗಿರಬೇಕೆಂದು ಬಯಸುತ್ತಾರೋ, ಅವರು ತಮ್ಮ ರಕ್ತ ಸಂಬಂಧಿಗಳೊಂದಿಗೆ ಉತ್ತಮ ಸಂಬಂಧವಿರಿಸಬೇಕು”.

20. (ಕಾರ್ಮಿಕರ ಹಕ್ಕುಗಳು) “ಕಾರ್ಮಿಕನ ಬೆವರು ಆರುವ ಮೊದಲು, ಅವನ ಸಂಬಳವನ್ನು ನೀಡಿ”.

21. (ಅಹಂಕಾರ) “ಪುನರುತ್ಥಾನ ದಿನದಂದು ಅಹಂಕಾರಿ ಜನರನ್ನು ಮನುಷ್ಯ ರೂಪದಲ್ಲಿ ಇರುವೆಗಳಂತೆ ಒಟ್ಟುಗೂಡಿಸಲಾಗುತ್ತದೆ. ಎಲ್ಲಾ ಬದಿಗಳಿಂದಲೂ ಅವರ ಮೇಲೆ ಅವಮಾನ ಬೀರಲಾಗುತ್ತದೆ. ಅವರನ್ನು ನರಕದಲ್ಲಿನ ಒಂದು ಜೈಲಾದ (ಬಂಧೀಖಾನೆ) ಬವ್ಲಾಸ್‍ಗೆ ದೂಡಲಾಗುವುದು, ಅದು ಅತ್ಯಂತ ತಾಪದ ಬೆಂಕಿಯನ್ನು ಅವರ ಮೇಲೇರುತ್ತದೆ ಹಾಗು ಅಲ್ಲಿ ಅವರಿಗೆ ನರಕವಾಸಿಗಳ ಪಾನೀಯವಾದ ತೀನತ್ ಅಲ್-ಖಬಾಲ್ ಕೊಡಲಾಗುವುದು”. “ಯಾರ ಹೃದಯದಲ್ಲಿ ಒಂದು ಕಣುವಿನ ತೂಕದ ಅಹಂಕಾರ ಇರುವುದೋ, ಅವರು ಸ್ವರ್ಗ ಪ್ರವೇಶಿಸುವುದಿಲ್ಲ.”

22. (ಸ್ವಚ್ಛತೆ) “ಸ್ವಚ್ಛತೆ ಸತ್ಯ ವಿಶ್ವಾಸದ ಅರ್ಧ ಭಾಗ”. “ಸ್ವರ್ಗದ ಕೀಲಿಕೈ ಸಲಾತ್ (ದಿನನಿತ್ಯ ಸಮಯಕ್ಕೆ ಸರಿಯಾಗಿ ಅರ್ಪಿಸುವ ಪ್ರಾರ್ಥನೆ) ಹಾಗು ಸಲಾತ್‍ನ ಕೀಲಿಕೈ ಸ್ವಚ್ಛತೆಯಾಗಿದೆ”.
23. (ಸ್ನೇಹಿತರು ಮತ್ತು ಅವರ ಪ್ರಭಾವ) “ಒಬ್ಬ ಒಳ್ಳೆಯ ಹಾಗು ಕೆಟ್ಟ ಸ್ನೇಹಿತನ ಹೋಲಿಕೆ, ಕಸ್ತೂರಿಯನ್ನು ಹೊತ್ತೊಯ್ಯುತಿರುವವನು ಹಾಗು ಕಮ್ಮಾರನಂತೆ. ಕಸ್ತೂರಿಯನ್ನು ಹೊತ್ತೊಯ್ಯುತಿರುವವನು ನಿಮಗೆ ಸ್ವಲ್ಪ ಕೊಡುವನು, ಇಲ್ಲವೇ ನೀವು ಒಂದಿಷ್ಟು ಖರೀದಿಸುವಿರಿ, ಇಲ್ಲವೇ ಸುಗಂಧವನ್ನು ಗಮನಿಸುವಿರಿ; ಅದೇ ಕಮ್ಮಾರನು, ನಿಮ್ಮ ಬಟ್ಟೆಗಳನ್ನು ಸುಟ್ಟುಹಾಕುವನು, ಇಲ್ಲವೇ ಕೆಟ್ಟ ವಾಸನೆಯನ್ನು ಗಮನಿಸುವಿರಿ”.

24. (ಇತರರ ಕುಂದು ಕೊರತೆಗಳನ್ನು ಮುಚ್ಚಿಡುವುದು) “ಈ ಪ್ರಪಂಚದಲ್ಲಿ ಇತರರ ಕುಂದು ಕೊರತೆಗಳನ್ನು ಮುಚ್ಚಿಡುವುವಂತಹವರ ಕೊರತೆಗಳನ್ನು ದೇವನು ಪುನರುತ್ಥಾನ ದಿನದಂದು ಮುಚ್ಚಿಡುವನು”. “ಯಾರು ಕೊರತೆಯನ್ನು ಕಂಡು, ಅದನ್ನು ಮುಚ್ಚಿಡುತ್ತಾರೋ ಅವರು ಜೀವಂತ ಹೂತಲಾದ ಹೆಣ್ಣು ಮಗುವನ್ನು ಮರಳಿ ಜೀವಂತ ಮಾಡಿದವರಂತೆ”.
25. (ಮದ್ಯಪಾನ) “ಖಮರ್ (ಮದ್ಯ) ಸೇವಿಸಬೇಡಿ, ಏಕೆಂದರೆ ಅದು ಪ್ರತಿಯೊಂದು ಕೆಡುಕಿನ ಮೂಲವಾಗಿದೆ”.

26. (ಪ್ರೀತಿ ಮತ್ತು ಶಾಂತಿ ಹರಡುವುದು) “ನನ್ನ ಆತ್ಮ ಯಾರ ಕೈಯಲ್ಲಿದೆಯೋ (ದೇವನ) ಅವನ ಪ್ರಮಾಣವಾಗಿ, ನೀವು ಸ್ವರ್ಗ ಪ್ರವೇಶಿಸುವುದಿಲ್ಲ, (ಆರಾಧನೆಗೆ ಯೋಗ್ಯನಾದವನು ದೇವನೊಬ್ಬನೇ ಎಂಬ) ಸತ್ಯ ವಿಶ್ವಾಸದ ಹೊರತಾಗಿ, ಹಾಗು ನೀವು ನಿಜವಾಗಿಯೂ ವಿಶ್ವಾಸಿಗಳಾಗುವುದಿಲ್ಲ, ಪರಸ್ಪರ ಪ್ರೀತಿಸುವುದರ ಹೊರತಾಗಿ. ನೀವು ಪರಸ್ಪರ ಪ್ರೀತಿಸುವುದಕ್ಕೆ ಸಹಾಯ ಮಾಡುವಂಥದ್ದನ್ನು ತಿಳಿಸಲೇನು? ಪರಸ್ಪರ ಶಾಂತಿಯ ವಂದನೆಗಳನ್ನು ಹರಡಿ”.

27. (ಕೆಟ್ಟ ಸಂಬಂಧಿಗಳಿಗೂ ಒಳ್ಳೆತನ ತೋರುವುದು) ಒಮ್ಮೆ ಒಬ್ಬ ಸಹವರ್ತಿ ಕೇಳಿದರು: “ಓ ದೇವನ ಸಂದೇಶವಾಹಕರೇ, ನಾನು ನನ್ನ ಸಂಬಂಧಿಗಳೊಂದಿಗೆ ನೆಂಟು ಬಾಕಿಯುಳಿಸಲು ಪ್ರಯತ್ನಿಸುತ್ತೇನೆ, ಆದರೆ ಅವರು ಅದನ್ನು ಮುರಿಯುತ್ತಾರೆ; ನಾನು ಅವರೊಂದಿಗೆ ಉತ್ತಮವಾಗಿ ನಡೆದುಕೊಳ್ಳುತ್ತೇನೆ, ಆದರೆ ಅವರು ನನ್ನನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ; ನಾನು ಅವರಿಗೆ ದಯಾಳುವಾಗಿರಲು ಪ್ರಯತ್ನಿಸುತ್ತೇನೆ, ಆದರೆ ಅವರು ನನ್ನೊಂದಿಗೆ ಕಠೋರವಾಗಿ ನಡೆದುಕೊಳ್ಳುತ್ತಾರೆ”. ಅವರು ಹೇಳಿದರು: “ನೀವು ಹೇಳಿದಂತೆಯೇ ನೀವಿದ್ದಲ್ಲಿ, ನೀವು ಅವರ (ಆ ಸಂಬಂಧಿಗಳ) ಬಾಯಿಗಳಿಗೆ ಬಿಸಿ ಬೂದಿ ಹಾಕ್ಕುತ್ತಿರುವಂತೆ. ನೀವು ಈ ರೀತಿ ಎಲ್ಲಿಯವರೆಗೆ ನಡೆದುಕೊಳ್ಳುತ್ತೀರೋ ಅಲ್ಲಿಯವರೆಗೆ ನಿಮಗೆ ಅವರ ವಿರುದ್ಧ ದೇವನ ಸಹಾಯವಿರುತ್ತದೆ”.

28. (ಪ್ರಮುಖ ಪಾಪಗಳು) ಒಮ್ಮೆ ಪ್ರವಾದಿಯವರನ್ನು ಪ್ರಧಾನ ಪಾಪಗಳ ಬಗ್ಗೆ ಕೇಳಲಾಗಿ, ಅವರು ಹೇಳಿದರು, “ಅವು: ದೇವನೊಂದಿಗೆ ಎನನ್ನಾದರೋ ಸಮಾನನಾಗಿಸುವುದು, ತನ್ನ ತಂದೆತಾಯಿಯ ಅಪ್ಪಣೆ ಮೀರುವುದು ಮತ್ತು ಅವರಿಗೆ ನೋವು ಅಥವಾ ಅಪಚಾರವೆಸಗುವುದು, ಯಾರನ್ನಾದರೂ ಅನ್ಯಾಯವಾಗಿ ಕೊಲ್ಲುವುದು ಹಾಗು ಸುಳ್ಳು ಸಾಕ್ಷಿ ನೀಡುವುದು”.

29. (ಅತಿಥಿüಗಳು, ನೆರೆ ಹೊರೆಯವರು ಮತ್ತು ಉತ್ತಮ ನುಡಿ) “ದೇವನಲ್ಲಿ ಮತ್ತು ಪುನರುತ್ಥಾನ ದಿನದಲ್ಲಿ ನಂಬಿಕೆಯಿರಿಸಿರುವವನು ತನ್ನ ಅತಿಥಿಗಳನ್ನು ಗೌರವಿಸಬೇಕು; ದೇವನಲ್ಲಿ ಮತ್ತು ಪುನರುತ್ಥಾನ ದಿನದಲ್ಲಿ ನಂಬಿಕೆಯಿರಿಸಿರುವವನು ತನ್ನ ನೆರೆ ಹೊರೆಯವರಿಗೆ ಕಿರಿಕಿರಿ ಉಂಟುಮಾಡಬಾರದು; ಹಾಗು ದೇವನಲ್ಲಿ ಮತ್ತು ಪುನರುತ್ಥಾನ ದಿನದಲ್ಲಿ ನಂಬಿಕೆಯಿರಿಸಿರುವವನು ಯಾವುದು ಒಳಿತೋ ಅದನ್ನು ನುಡಿಯಬೇಕು, ಇಲ್ಲವೇ ಸುಮ್ಮನಿರಬೇಕು”.

30. (ಸಾವು) “ಒಬ್ಬ ಸತ್ಯ ವಿಶ್ವಾಸಿಯ ಕೊಡುಗೆ ಸಾವು”. “ಓ ಜನರೇ!, ಆಹ್ಲಾದಗಳ ವಿನಾಶಕ, ಸಾವನ್ನು ಹೆಚ್ಚು ನೆನೆಯಿರಿ (ಅಂದರೆ ದೇವನೆದುರು ಅವನ ಮಾರ್ಗದರ್ಶನ ಪಾಲಿಸಿದೆರೋ ಇಲ್ಲವೋ ಎಂದು ಉತ್ತರಿಸುವುದಕ್ಕೆ ಸಿದ್ಧರಾಗಿರಿ!!)”.

31. (ಮದುವೆಯ ಪ್ರಾಮುಖ್ಯತೆ) “ಓ ಯುವಕರೇ, ನಿಮ್ಮಲ್ಲಿ ಯಾರು ಒಬ್ಬ ಹೆಂಡತಿಯನ್ನು ನೋಡಿಕೊಳ್ಳಬಲ್ಲರೋ ಅವರು ಮದುವೆಯಾಗಬೇಕು, ಏಕೆಂದರೆ ಇದು ನಿಮ್ಮ ಕಣ್ಣುಗಳು ಇತರೆ ಹೆಂಗಸರನ್ನು ದಿಟ್ಟಿಸಿ ನೋಡುವುದರಿಂದ (ಆ ಮೂಲಕ ಸಮಾಜದಲ್ಲಿ ಅನೀತಿ ವ್ಯಾಪಿಸುವುದು) ಕಾಪಾಡುತ್ತದೆ ಹಾಗು ನಿಮ್ಮನ್ನು ಅನೈತಿಕತೆಯಿಂದಲೂ ಕಾಪಾಡುತ್ತದೆ. ಯಾರು ಮದುವೆ ಮಾಡಿಕೊಳ್ಳಲಾಗುವುದಿಲ್ಲವೋ, ಅವರು ಉಪವಾಸ ನಿರತರಾಗಬೇಕು, ಅದು ಅವರ (ದೈಹಿಕ) ಆಸೆಗಳನ್ನು ಹಿಡಿತದಲ್ಲಿಡಲು ಸಹಕರಿಸುತ್ತದೆ”.

32. (ಉತ್ತಮ ನಡುವಳಿಕೆ) ಪ್ರವಾದಿಯವರು ಹೇಳಿದರು, “ಒಬ್ಬ ತಂದೆ ತನ್ನ ಮಗುವಿಗೆ, ಉತ್ತಮ ನಡುವಳಿಕೆಗೂ ಮೀರಿ ಏನನ್ನೂ ನೀಡಲಾರನು”. “ಇಬ್ಬರು ಮೂರನೆಯವನನ್ನು ಹೊರತುಪಡಿಸಿ ಮಾತನಾಡಬಾರದು, ಏಕೆಂದರೆ ಅದು ಖಂಡಿತವಾಗಿಯೂ ಅವನನ್ನು ದುಃಖಿತನಾಗಿಸುತ್ತದೆ”.

33. (ಸಹೋದರತ್ವ) “ನೀವು ಎಲ್ಲಿಯವರೆಗೆ ಸ್ವಂತಕ್ಕೆ ಇಷ್ಟಪಡುವುದನ್ನೇ ನಿಮ್ಮ ಸಹೋದರನಿಗೂ ಬಯಸುವುದಿಲ್ಲವೋ, ಅಲ್ಲಿಯವರೆಗೆ ನಿಮ್ಮಲ್ಲಿ ಯಾರೂ ಸತ್ಯವಿಶ್ವಾಸ ಹೊಂದಿರುವುದಿಲ್ಲ”.

34. (ಕೇಡುಂಟು ಮಾಡುವುದು) “ಕೇಡುಂಟು ಮಾಡಬೇಡಿ ಹಾಗು (ಮೊದಲಿಗೆ) ನಿಮಗೆ ಮಾಡಲಾದ ಕೇಡಿಗಿಂತ ಹೆಚ್ಚಾಗಿ ಪ್ರತೀಕಾರ ತಗೆದುಕೊಳ್ಳಬೇಡಿ”.

35. (ಸದ್ಗುಣ ಹಾಗು ಅದರ ಪ್ರತಿಫಲ) “ನಿಮ್ಮ ವತಿಯಿಂದ ನೀವು ಆರು ವಿಷಯಗಳ (ಏಕೆ ದೈವನಲ್ಲಿ ಸತ್ಯ ವಿಶ್ವಾಸವನ್ನು ಒಳಗೂಡಿಸಿದ ಮೇಲಿನ ಸದ್ಗುಣಗಳು) ಬಗ್ಗೆ ಖಾತ್ರಿ ಕೊಡುವುದಾದಲ್ಲಿ, ನಾನು ನಿಮಗೆ ಸ್ವರ್ಗದ ಖಾತ್ರಿ ಕೊಡುವೆನು: ಮಾತನಾಡಿದಾಗ ಸತ್ಯವನ್ನು ನುಡಿಯಿರಿ, ಮಾಡಿದ ಪ್ರಮಾಣದ ಪ್ರಕಾರ ನಡೆದುಕೊಳ್ಳಿರಿ, ನಿಮಗೆ ಏನಾದರನ್ನು ನೋಡಿಕೊಳ್ಳುವ ಜವಾಬ್ದಾರಿ ಕೊಟ್ಟಲ್ಲಿ ಅದನ್ನು ಪೂರ್ತಿಗೊಳಿಸಿರಿ, ಲೈಂಗಿಕ ಅಸಭ್ಯತೆಯಿಂದ ದೂರವಿರಿ, ನಿಮ್ಮ ನೋಟವನ್ನು ನಮ್ರತೆಯೊಂದಿಗೆ ಕೆಳಬಾಗಿಸಿರಿ ಮತ್ತು ಅನ್ಯಾಯದಿಂದ ನಿಮ್ಮ ಕೈಗಳನ್ನು ದೂರವಿಡಿ”.

36. (ಕೃತಜ್ಞತಾ ಮನೋಭಾವ) “ದೇವನ ಅನುಗ್ರಹ ಅತ್ಯಲ್ಪವೆಂಬಂತೆ ಕಾಣಲಿರಲೆಂದು, ನಿಮಗಿಂತ ಕೆಳ ದರ್ಜೆಯಲ್ಲಿರುವವರನ್ನು ನೋಡಿ ಹಾಗು ನಿಮಗಿಂತ ಎತ್ತರದ ದರ್ಜೆಯಲ್ಲಿರುವವರನ್ನು ನೋಡಬೇಡಿ”.

37. (ಸ್ವರ್ಗ) “ನಿಮ್ಮಲ್ಲಿ ಯಾರೂ ತಮ್ಮ ಸ್ವಂತ ಕರ್ಮಗಳಿಂದಾಗಿಯೇ ಸ್ವರ್ಗ ಪ್ರವೇಶಿಸುವುದಿಲ್ಲ.” ಅವರು (ಸಹವರ್ತಿಗಳು) ಕೇಳಿದರು, “ಓ ಅಲ್ಲಾಹನ ಸಂದೇಶವಾಹಕರೇ, ನೀವು ಕೂಡ?”. ಅವರು ಕೇಳಿದರು, ನಾನು ಕೂಡ ಇಲ್ಲ, ಅಲ್ಲಾಹನು ತನ್ನ ಕೃಪೆ ಮತ್ತು ಕರುಣೆಯಲ್ಲಿ ನನ್ನನ್ನು ಹೊದಿಸದ ಹೊರತಾಗಿ”. ಪ್ರವಾದಿಯವರು ಒಮ್ಮೆ ದೇವನು ಹೇಳಿದನೆಂದು ತಿಳಿಸಿದರು, “ನಾನು ನನ್ನ ಸೇವಕರಿಗಾಗಿ. ಯಾವ ಕಣ್ಣೂ ಕಂಡಿರದ, ಯಾವ ಕಿವಿಯೂ ಕೇಳಿರದ ಮತ್ತು ಯಾವ ಮನುಷ್ಯನ ಮನಸ್ಸೂ ಕಲ್ಪಿಸಿಕೊಂಡಿರದಂಥದ್ದನ್ನು ಸಿದ್ಧಗೊಳಿಸಿದ್ದೇನೆ”. “ಯಾರು ಅಹ್ಲ್-ಅಲ್-ಧಿಮ್ಮಹ್‍ನ (ಇಸ್ಲಾಮಿ ರಾಜ್ಯದ ಆಡಳಿತ ಮತ್ತು ಅದರ ರಕ್ಷಣೆಯಲ್ಲಿರುವ ಮುಸ್ಲಿಮೇತರರು) ಒಬ್ಬ ವ್ಯಕ್ತಿಯನ್ನು ಕೊಲ್ಲುತ್ತಾರೋ – ನಲವತ್ತು ವರ್ಷಗಳ ಪ್ರಯಾಣದಷ್ಟು ದೂರದವರೆಗೂ ಅದರ ಸುಗಂಧ ತಲುಪುವ ಹೊರತಾಗಿಯೂ – ಅವರು ಸ್ವರ್ಗದ ಸುಗಂಧವನ್ನು ಸೇವಿಸಲಾರರು”.

38. (ಪ್ರೀತಿ ಮತ್ತು ದಯೆ) ಅಲ್-ಅಕ್ರಾರವರು (ಪ್ರವಾದಿಯ ಒಬ್ಬ ಸಹವರ್ತಿ) ಪ್ರವಾದಿಯವರೊಂದಿಗೆ ಕುಳಿತಿರುವಾಗ, ಪ್ರವಾದಿಯವರು ತಮ್ಮ ಮೊಮ್ಮಗನಿಗೆ ಮುತ್ತಿಟ್ಟರು. ಅಲ್-ಅಕ್ರಾ ಹೇಳಿದರು, “ನನಗೆ ಹತ್ತು ಮಕ್ಕಳಿವೆ ಹಾಗು ನಾನು ಅವರಲ್ಲಿ ಒಬ್ಬರನ್ನೂ ಎಂದೂ ಚುಂಬಿಸಿಲ್ಲ”. ಪ್ರವಾದಿಯವರು ಅವರತ್ತ ನೋಡಿ, ನುಡಿದರು, “ಯಾರು ಇತರರತ್ತ ದಯೆ ತೋರುವುದಿಲ್ಲವೋ, ಅವರನ್ನು ದಯೆಯೊಂದಿಗೆ ನಡೆಸಿಕೊಳ್ಳಲಾಗುವುದಿಲ್ಲ”. “ದೇವನು ಕುಟುಂಬದ ಸದಸ್ಯರಿಗೆ ಒಳಿತನ್ನು ಇಚ್ಛಿಸಿದಾಗ, ಅವರ ನಡುವೆ ಕರುಣೆಯನ್ನು ಇರಿಸುತ್ತಾನೆ”. “ನಿಮ್ಮ ಸೋದರನೆಡೆಗೆ ನಿಮ್ಮಲ್ಲಿ ಸೋದರ ಪ್ರೀತಿಯಿದ್ದಲ್ಲಿ, ಅದನ್ನು ಅವರಿಗೆ ತಿಳಿಸಿ”. “ದಯಾಮಯಿಯಾಗಿರಿ, ಏಕೆಂದರೆ, ದಯೆಯು ಯಾವುದಾದರ ಭಾಗವಾದಾಗ, ಅದರ ಸೌಂದರ್ಯ ಹೆಚ್ಚಿಸುತ್ತದೆ. ಅದರಿಂದ ದಯೆಯನ್ನು ತೆಗೆದುಬಿಟ್ಟಾಗ, ಅದು ಕಳಂಕಿತವಾಗಿ ಬಿಡುತ್ತದೆ”. ಅಂತೆಯೇ, ಪ್ರವಾದಿಯವರು ಹೇಳಿದ್ದಾರೆ, “ಜನರಿಗೆ ಜೀವನ ಸುಲಭ ಮಾಡಿಕೊಡಿ ಹಾಗು ಅದನ್ನು ಕ್ಲಿಷ್ಟಕರ ಮಾಡಬೇಡಿ. ಜನರನ್ನು ಶಾಂತಗೊಳಿಸಿ ಮತ್ತು ಅವರನ್ನು ದೂರಗೊಳಿಸಬೇಡಿ”. “ದೇವನು ನನ್ನನ್ನು ಕಟುವಾಗಿರಲು ಅಥವಾ ಕೇಡು ತಲುಪಿಸಲು ಕಳುಹಿಸಲಿಲ್ಲ, ಆದರೆ ನನ್ನನ್ನು (ಒಳ್ಳೆತನ) ಬೋಧಿಸಲು ಮತ್ತು ಜೀವನ ಸುಲಭಗೊಳಿಸಲು ಕಳುಹಿಸಿದನು”. “ಯಾರು ದಯೆಯಿಂದ ವಂಚಿಸಲ್ಪಟ್ಟರೋ, ಅವರು ಒಳ್ಳೆತನದಿಂದ ವಂಚಿಸ್ಪಟ್ಟವರು”.

39. (ಖರ್ಚು ಮಾಡದಿರುವುದು) “ಯಾರ ಮೇಲೆ ಖರ್ಚು ಮಾಡುವುದು ಕಟ್ಟುಪಾಡಾಗಿದೆಯೋ (ಅಂದರೆ ಕುಟುಂಬ) ಅವರ ಮೇಲೆ ಖರ್ಚು ಮಾಡದಿರುವುದು, ಒಬ್ಬ ಮನುಷ್ಯನು ಪಾಪವೆಸಗಲು ಸಾಕಾಗಿದೆ”.

40. (ಅನಾರೋಗ್ಯದಲ್ಲಿರುವವರ ಸಂದರ್ಶನ) “ಒಬ್ಬ ಮುಸ್ಲಿಮ್ ತನ್ನ (ಅನಾರೋಗ್ಯ ಪೀಡಿತ) ಮುಸ್ಲಿಮ್ ಸೋದರನನ್ನು ಸಂದರ್ಶಿಸಿದಾಗ, ಅವನು ಹಿಂತಿರುವವರೆಗೂ ಸ್ವರ್ಗದ ಹಣ್ಣುಗಳ ಸುಗ್ಗಿಯಲ್ಲಿರುವನು”.

41. (ಸತ್ಕರ್ಮಗಳು) ಪ್ರವಾದಿಯವರ ಪತ್ನಿಯಾದ ಆಯಿಷಾರವರನ್ನು, ಪ್ರವಾದಿಯವರು ಅತ್ಯಂತ ಪ್ರೀತಿಸಿದ ಕೆಲಸವೇನು ಎಂದು ಕೇಳಲಾದಾಗ, ಅವರು ಹೇಳಿದರು: “ಸತತವಾಗಿ (ಎಡೆಬಿಡದೆ) ಮಾಡಲಾದ ಕೆಲಸ”.

42. (ದುಆ/ಬೇಡಿಕೆ) “ದುಆ/ಬೇಡಿಕೆ, ಒಬ್ಬ ಸತ್ಯವಿಶ್ವಾಸಿಯ ಅಸ್ತ್ರ”. “ಯಾರು ಕಷ್ಟದ ಸಮಯದಲ್ಲಿ ದೇವನ ವತಿಯಿಂದ ಉತ್ತರ ಬಯಸುವರೋ, ಅವರು ಒಳ್ಳೆ (ಸುಖದ) ಸಮಯದಲ್ಲಿ ದೇವನನ್ನು ಹೆಚ್ಚಾಗಿ ಬೇಡಬೇಕು”.

43. (ಸೇವಕರೊಂದಿಗಿನ ಒಳ್ಳೆ ನಡುವಳಿಕೆ) “ತಾನು ಉಣ್ಣುವ ಊಟದಂತೆಯೇ ಸೇವಕರಿಗೂ ಉಣಿಸಿ ಹಾಗು ತಾನು ಧರಿಸುವ ಉಡುಪಿನಂತೆಯೇ ಅವರಿಗೂ ಕೊಡಿ, ಅವರನ್ನು ಕೆಲಸದಲ್ಲಿ ಮುಳುಗಿಸಿ ನಾಶಮಾಡಬೇಡಿ ಹಾಗು ಅವರಿಗೆ (ಆ ರೀತಿಯ) ಕೆಲಸ ನೀಡಿದಲ್ಲಿ, ಅದರಲ್ಲಿ ಅವರಿಗೆ ಸಹಾಯ ಮಾಡಿ”.

44. (ನೆರೆಹೊರೆಯವರ ಹಕ್ಕು) ನೆರೆ ಹೊರೆಯಲ್ಲಿನ, ಒಬ್ಬರ ಮತ್ತೊಬ್ಬರ ಮೇಲಿರುವ ಹಕ್ಕುಗಳಲ್ಲಿ ಇವು ಸೇರಿವೆ, ವಂದಿಸುವುದರಲ್ಲಿ ಮುಂದಿರುವುದು, ಅನಾರೋಗ್ಯ ಎದುರಿಸಿದಲ್ಲಿ ಅವರನ್ನು ಭೇಟಿಮಾಡುವುದು, ಆಪತ್ತು ಬಂದೊದಗಿದರೆ ಸಾಂತ್ವನ ಹೇಳುವುದು, ಸಂತೋಷದ ಸಮಯದಲ್ಲಿ ಅಭಿನಂದಿಸುವುದು, ಅವರ ತಪ್ಪುಗಳನ್ನು ಅಲ್ಲಗಳೆಯುವುದು, ಅವರ ತಪ್ಪುಗಳನ್ನು ಮುಚ್ಚಿಡುವುದು, ಅವರ ಕಿರಿಕಿರಿಯನ್ನು ತಾಳ್ಮೆಯಿಂದ ಸಹಿಸುವುದು, ಅವರಿಗೆ ಉಡುಗೊರೆ ಕೊಡುವುದು, ಅವಶ್ಯತೆಯಿದ್ದಾಗ ಸಾಲ ಕೊಡುವುದು, ಅವರ ಹೆಂಗಸರತ್ತ ನೋಟ ಬೀರದಂತೆ ಕಾಪಾಡಿಕೊಳ್ಳುವುದು ಹಾಗು ಅವರ ಧಾರ್ಮಿಕ ಮತ್ತು ಲೌಕಿಕ ವಿಷಯಗಳಿಗೆ ಸಂಬಂಧಿಸಿದಂತೆ ಅವರ ಒಳಿತಿಗಾಗಿ ಮಾರ್ಗದರ್ಶನ ನೀಡುವುದು. ಪ್ರವಾದಿಯವರು ಹೇಳಿದ್ದಾರೆ: “ಯಾರು ತಮ್ಮ ಸಹವರ್ತಿಗಳೊಂದಿಗೆ ಉತ್ತಮರಾಗಿರುತ್ತಾರೋ, ಅವರು ದೇವನೊಂದಿಗಿನ ಸಹವರ್ತಿಗಳಲ್ಲಿ ಉತ್ತಮರು ಹಾಗು, ಯಾರು ತಮ್ಮ ನೆರೆಹೊರೆಯವರಿಗೆ ಉತ್ತಮರೋ ಅವರು ಅವನಲ್ಲಿನ (ದೇವನ) ನೆರೆಹೊರೆಯವಲ್ಲಿ ಉತ್ತಮರು”. ಹಾಗೆಯೇ ಪ್ರವಾದಿಯವರು ಹೇಳಿದ್ದಾರೆ: “ಯಾರ ಕೇಡಿನಿಂದ ಅವರ ನೆರೆಹೊರೆಯವರು ಸುರಕ್ಷಿತವಿಲ್ಲವೋ, ಅವರು ಸ್ವರ್ಗ ಪ್ರವೇಶಿಸುವುದಿಲ್ಲ”. “(ದೇವದೂತ)ಗೇಬ್ರಿಯಲ್ ನೆರೆಹೊರೆಯವರೊಂದಿಗಿನ ಉತ್ತಮ ನಡುವಳಿಕೆಯನ್ನು ಎಷ್ಟರ ಮಟ್ಟಿಗೆ ತಿಳಿಸುತ್ತಾ ಹೋದರು ಎಂದರೆ, ನೆರೆಹೊರೆಯವರನ್ನು ಉತ್ತರಾಧಿಕಾರಿಗಳಾಗಿಯೂ ಸೇರಿಸಬಹುದೆಂದು ನಾನು ತಿಳಿದೆ”.

45. (ರಾಜಿ ಮತ್ತು ಶಾಂತಿ) “(ಸ್ವಯಂಪ್ರೇರಿತ)ಉಪವಾಸ, (ಸ್ವಯಂಪ್ರೇರಿತ)ಪ್ರಾರ್ಥನೆ ಮತ್ತು (ಸ್ವಯಂಪ್ರೇರಿತ)ದಾನಕ್ಕಿಂತ ಉತ್ತಮವಾದದ್ದನ್ನು ನಾನು ತಿಳಿಸಲೇ?” ಅವರು (ಸಹವರ್ತಿಗಳು) ಹೇಳಿದರು: “ಹೌದು” ಪ್ರವಾದಿಯವರು ಹೇಳಿದರು: “ಇಬ್ಬರು ವಾದಿಸುತ್ತಿರುವ ಜನರ ಮಧ್ಯೆ ಶಾಂತಿ ಮೂಡಿಸುವುದು, ಏಕೆಂದರೆ ಇಬ್ಬರ ನಡುವಿನ ವಿವಾದ ಇಬ್ಬರಿಗೂ ಹಾನಿಕರ”.

46. (ಮನುಜಕುಲದೊಂದಿಗೆ ಉತ್ತಮ ಸಂಬಂಧವಿರಿಸುವುದು) “ಒಬ್ಬರನ್ನೊಬ್ಬರು ದ್ವೇಷಿಸಬೇಡಿ, ಒಬ್ಬರನ್ನೊಬ್ಬರು ಅಸೂಯೆಯಿಂದ ಕಾಣಬೇಡಿ, ಒಬ್ಬರಿಂದೊಬ್ಬರು ದೂರ ಹೋಗಬೇಡಿ. ಓ ದೇವನ ಗುಲಾಮರೇ, ಸೋದರರಾಗಿರಿ. ಮೂರು ದಿನಕ್ಕಿಂತ ಹೆಚ್ಚಾಗಿ ಒಬ್ಬ ಮುಸ್ಲಿಮ್ ತನ್ನ ಸೋದರನನ್ನು ದೂರವಿಡುವ ಅನುಮತಿಯಿಲ್ಲ”.

47. (ವಿವೇಕ) “ಯಾರು ತನ್ನನ್ನು ತಾನು ಪ್ರಶ್ನಿಸಿ ಕೊಂಡು, ತನ್ನ ಸಾವಿನ ನಂತರ ಉಪಯೋಗಕ್ಕೆ ಬರುವಂತಹ ಕೆಲಸಗಳನ್ನು ಮಾಡುತ್ತಾನೋ, ಅವನು ವಿವೇಕವುಳ್ಳವನು; ಹಾಗು ಯಾರು ತನ್ನ (ಲೌಕಿಕ) ಲೋಭಗಳಿಗೆ ಮತ್ತು ಆಸೆಗಳಿಗೆ ಮೊರೆಹೋಗಿ, ದೇವನಲ್ಲಿ ತನ್ನ ಬಯಕೆಗಳ ಪೂರೈಕೆಯನ್ನು ಬೇಡುವನೋ ಅವನೇ ಅವಿವೇಕಿ (ಮೂರ್ಖ)”.

48. (ಸರಿಯಾದ ಉದ್ದೇಶವಿರುವುದು) “ಕರ್ಮಗಳನ್ನು ಅದರ ಹಿಂದಿರುವ (ನಿಜ) ಉದ್ದೇಶದ ಆಧಾರದ ಮೇಲೆ (ದೇವನಿಂದ) ತೀರ್ಮಾನಿಸಲಾಗುವುದು (ಹಾಗಾಗಿ ಸರಿಯಾದ ಉದ್ದೇಶವಿರಲಿ)”.

49. (ನಡತೆ) “(ಕೇವಲ) ತನ್ನ ಸನ್ನಡತೆಯ ಆಧಾರದ ಮೇಲೆ ಒಬ್ಬ ಸತ್ಯ ವಿಶ್ವಾಸಿ, ರಾತ್ರಿಯಲ್ಲಿ ಪ್ರಾರ್ಥಿಸುವ ಹಾಗು ದಿನದಲ್ಲಿ ಉಪವಾಸವಿರುವವನ ದರ್ಜೆ ಪಡೆಯುತ್ತಾನೆ”.
50. (ಶ್ರೀಮಂತಿಕೆ) “ಶ್ರೀಮಂತನಾಗಿರುವುದೆಂದರೆ ಹೆಚ್ಚು ಸಂಪತ್ತಿರುವುದೆಂದಲ್ಲ, ಆದರೆ (ಅದು ತನ್ನ ಬಳಿ ಇರುವುದರೊಂದಿಗೆ) ತೃಪ್ತನಾಗಿರುವುದು”.

51. (ಸಾಲ ಮರುಪಾವತಿ) “ಯಾವಾಗ ಒಬ್ಬ ಮನುಷ್ಯ ಸಾಲದಲ್ಲಿರುವನೋ, ನುಡಿದಾಗ ಸುಳ್ಳು ಹೇಳುತ್ತಾನೆ ಮತ್ತು ಪ್ರಮಾಣ ಮಾಡಿದಾಗ ಅದನ್ನು ಮುರಿಯುತ್ತಾನೆ”. “ನಿಮ್ಮಲ್ಲಿ ಉತ್ತಮರು, ಯಾರು ತಮ್ಮ ಸಾಲಗಳನ್ನು ಉತ್ತಮ ರೀತಿಯಲ್ಲಿ ಮರುಪಾವತಿ ಮಾಡುತ್ತಾರೋ ಅವರು”. “ಸಾಲ ಮರುಪಾವತಿ ಮಾಡಲು ಶಕ್ತನು ಮರುಪಾವತಿಯಲ್ಲಿ ವಿಳಂಬ ಮಾಡಿದ್ದಲ್ಲಿ, ಅದು ಅನ್ಯಾಯವೆನಿಸಿಕೊಳ್ಳುವುದು”.

52. (ಅಸೂಯೆ) “ಅಸೂಯೆಯಿಂದ ಜಾಗೃತರಿರಿ, ಏಕೆಂದರೆ ಅಸೂಯೆ ಸದ್ಗುಣಗಳನ್ನು, ಬೆಂಕಿಯು ಸೌದೆಯನ್ನು ಸೇವಿಸುವಂತೆ (ನಾಶಮಾಡುವಂತೆ) ಸೇವಿಸುತ್ತದೆ”. “ಎರಡು ಸಂದರ್ಭಗಳ ಹೊರತಾಗಿ ಬೇರೆಲ್ಲೂ ಅಸೂಯೆ ಸರಿಯಲ್ಲ, ಅವು: ದೇವನು ಸಂಪತ್ತನ್ನು ಕೊಟ್ಟಿರುವನು ಮತ್ತು ಅದನ್ನು ಸರಿದಾರಿಯಲ್ಲಿ ಖರ್ಚುಮಾಡುವವನು ಹಾಗು ದೇವನು ವಿವೇಕ ಕೊಟ್ಟಿರುವನು ಮತ್ತು ಅವನು ಅದರ ಪ್ರಕಾರ ನಿರ್ಣಯ ಕೊಡುವನು ಮತ್ತು ಅದನ್ನು ಇತರರಿಗೂ ಕಲಿಸುವನು”.

53. (ಸಂಪತ್ತು ಮತ್ತು ಅನುಗ್ರಹ) “ಸಂಪತ್ತಿನಲ್ಲಿ ಹಲವು ಬಗೆಗಳಿವೆ ಹಾಗು ಆ ಎಲ್ಲಾ ಬಗೆಗಳಿಗೂ ಕೀಲಿಕೈ ಇದೆ. ದೇವನು ಯಾರನ್ನು ಒಳಿತಿನ ಕೀಲಿಕೈ ಮತ್ತು ಕೇಡಿನ ಬೀಗ(ಮುದ್ರೆ)ಯನ್ನಾಗಿ ಮಾಡಿದ್ದಾನೋ ಅವನು ನಿಜವಾಗಿಯೂ ದೇವನ ಅನುಗ್ರಹಕ್ಕೆ ಒಳಗಾದವನು”.

54. (ಕ್ಷಮಾ ಮನೋಭಾವ) “ಯಾರಾದರು ನೋವನ್ನು ಅನುಭವಿಸಿ ಆ ನಂತರ ಅದನ್ನು (ಯಾವುದೇ ರೀತಿಯ ಪರಿಹಾರವಿಲ್ಲದೆ) ಕ್ಷಮಿಸಿದಲ್ಲಿ, ದೇವನು ಅವರ ದರ್ಜೆಯನ್ನು ಏರಿಸುವನು ಹಾಗು ಅವರ ಪಾಪಗಳನ್ನು ಹೋಗಲಾಡಿಸುವನು”.

55. (ಮನುಷ್ಯರಲ್ಲಿ ಅತ್ಯುತ್ತಮ) “ನಿಮ್ಮಲ್ಲಿ ಅತ್ಯುತ್ತಮರು ಯಾರೆಂದು ತಿಳಿಸಲೇ?… ನಿಮ್ಮಲ್ಲಿ ಉತ್ತಮರು ಯಾರೆಂದರೆ, ಅವರನ್ನು ನೋಡಲು ದೇವನ ನೆನಪು ಮನಸ್ಸಿನಲ್ಲಿ ಮೂಡುವುದು”.

56. (ನ್ಯಾಯಯುತ ಯುದ್ಧ ಕಾದಾಡುವುದರ ನೀತಿ) “ಹೆಂಗಸರು, ಮಕ್ಕಳು, ವಯಸ್ಸಾದವರು ಮತ್ತು ಯೋಧರಲ್ಲದವರನ್ನು ಕೊಲ್ಲಬೇಡಿ, ಹಾಗು ಬೆಳೆ, ಮರಗಳಗೆ ಹಾನಿ ಉಂಟು ಮಾಡಬೇಡಿ”.

57. (ಮಾನವ ಹತ್ಯೆ) “ಘಳಿಗೆಯೊಂದು ಬರುವುದು, ಯಾವಾಗ ಕೊಲೆಗಾರನೊಬ್ಬನಿಗೆ ತಾನು ಏಕೆ ಕೊಲೆ ಮಾಡಿದೆನೆಂಬುದು ತಿಳಿದಿರುವುದಿಲ್ಲ, ಹಾಗು ಕೊಲೆಗೀಡಾದವನಿಗೆ ತಾನು ಏಕೆ ಕೊಲೆಗೀಡಾದೆನೆಂದು ತಿಳಿದಿರುವುದಿಲ್ಲ”.

58. (ದೇವರು ಮನುಷ್ಯರನ್ನು ಅಳೆಯುವ ರೀತಿ) “ದೇವನು ನಿಮ್ಮ ದೇಹ ಮತ್ತು ನೋಟದ ಆಧಾರದ ಮೇಲೆ ಅಳೆಯುವುದಿಲ್ಲ, ಆದರೆ ಅವನು ನಿಮ್ಮ ಹೃದಯದೊಳಕ್ಕೆ ನೋಡುವನು ಮತ್ತು ನಿಮ್ಮ ಕರ್ಮಗಳನ್ನು ಗಮನಿಸುವನು”.

59. (ಅಂತರಂಗದಲ್ಲಿಲ್ಲದ ಬಾಹ್ಯ ಪ್ರಾಮಾಣಿಕತೆ) “ಪುನರುತ್ಥಾನ ದಿನದಂದು ತೀವ್ರ ಶಿಕ್ಷೆಗೆ ಗುರಿಯಾದ ವ್ಯಕ್ತಿಯೊಬ್ಬ ಹೇಳುತ್ತಿರುತ್ತಾನೆ: ‘ನಾನು ಇತರರಿಗೆ ಒಳಿತು ಮಾಡಲು ತಿಳಿಸಿದೆ, ಆದರೆ ನಾನು ಸ್ವತಃ ಅದನ್ನು ಮಾಡಲಿಲ್ಲ, ಹಾಗು ನಾನು ಅವರನ್ನು ಕೇಡು ಮಾಡುವುದರಿಂದ ನಿಷೇಧಿಸಿದೆ, ಆದರೆ ಅದನ್ನು ನಾನೇ ಮಾಡಿದೆ”.

60. (ನರಕದ ಬೆಂಕಿ) “ಆದಮನ ಮಕ್ಕಳನ್ನು ಸುಡುವ ಬೆಂಕಿ (ಅಂದರೆ ಭೂಮಿಯಲ್ಲಿನ ಬೆಂಕಿ), ನರಕದ ಬೆಂಕಿಯ ಎಪ್ಪತ್ತರಲ್ಲಿ ಒಂದು ಭಾಗದಷ್ಟಿದೆ”. ಪ್ರವಾದಿಯವರ ಸಹವರ್ತಿಗಳು ಹೇಳಿದರು: ‘ಅಲ್ಲಾಹನ ಪ್ರಮಾಣವಾಗಿ, ಈ ಸಾಧಾರಣ ಬೆಂಕಿಯೇ (ಮನುಷ್ಯರನ್ನು ಸುಡಲು) ಸಾಕಾಗಿತ್ತು’. ಆಗ ಪ್ರವಾದಿಯವರು ಹೇಳಿದರು: ‘ಅದು (ನರಕದ ಬೆಂಕಿ) ಈ ಲೋಕದ ಬೆಂಕಿಗಿಂತ 69 ಪಟ್ಟು ಹೆಚ್ಚು ತೀವ್ರವಾಗಿರುತ್ತದೆ, ಪ್ರತಿ ಭಾಗವೂ ಅದರ (ಲೋಕದ ಬೆಂಕಿಯ) ಸಮಾನ ತಾಪ ಹೊಂದಿರುತ್ತದೆ”.

61. (ನ್ಯಾಯ) “ನ್ಯಾಯವಂತರನ್ನು ಬೆಳಕಿನ ಆಸನಗಳ ಮೇಲೆ ದೇವನ ಎದುರು ಕುಳ್ಳರಿಸಲಾಗುವುದು. ಈ ಜನರು ತಮ್ಮ ಕುಟುಂಬಕ್ಕೆ ಸಂಬಂಧಪಟ್ಟಂತೆ ಮತ್ತು ಅವರಿಗೆ ನಿಯೋಜಿಸಲಾದ ಇತರೆ ವಿಷಯಗಳಲ್ಲಿ ನ್ಯಾಯಯುತವಾಗಿ ನಿರ್ಧರಿಸುವಂತವರು ಮತ್ತು ನ್ಯಾಯಯುತವಾಗಿ ನಡೆದುಕೊಳ್ಳುವಂತವರು”. “‘ನಿಮ್ಮ ಸೋದರನಿಗೆ, ದಬ್ಬಾಳಿಕೆ ಮಾಡುವವನಾಗಲಿ ಅಥವಾ ದಬ್ಬಾಳಿಕೆಗೆ ಒಳಗಾದವನಾಗಲಿ, ಸಹಾಯ ಮಾಡಿ.’ ಜನರು ಕೇಳಿದರು, ‘ಅವನು ದಬ್ಬಾಳಿಕೆಗೆ ಒಳಗಾದವನಾದರೆ ಸಹಾಯ ಮಾಡುವುದೇನೋ ಸರಿ, ಆದರೆ ನಾವು ಅವನು ದಬ್ಬಾಳಿಕೆ ಮಾಡುವವನಾದರೂ ಸಹಾಯ ಮಾಡಬೇಕೆ?’ ಆಗ ಪ್ರವಾದಿ ಹೇಳಿದರು, ‘ಇತರರನ್ನು ದಬ್ಬಾಳಿಕೆಗೆ ಒಳಪಡಿಸುವುದನ್ನು ತಡೆಯುವುದರ ಮೂಲಕ (ಸಹಾಯ ಮಾಡಿ)’”. ಹಾಗೆಯೇ, ಪ್ರವಾದಿಯವರು ಹೇಳಿದರು, ದೇವನು ಹೇಳಿದ್ದಾನೆ: ‘ಓ ನನ್ನ ಸೇವಕರೇ, ನಾನು ದಬ್ಬಾಳಿಕೆಯನ್ನು ನನ್ನ ಮೇಲೆ ನಿಷೇಧಿಸಿ ಕೊಂಡಿದ್ದೇನೆ ಮತ್ತು ನಿಮ್ಮಲ್ಲೂ ಅದನ್ನು ನಿಷೇಧಿಸಿದ್ದೇನೆ, ಆದ್ದರಿಂದ ಒಬ್ಬರನ್ನೊಬ್ಬರು ದಬ್ಬಾಳಿಕೆಗೆ ಒಳಮಾಡಬೇಡಿ”.

62. (ಸುಳ್ಳು ಹೇಳುವುದು) “ಸುಳ್ಳು ಹೇಳುವುದು ದುಷ್ಟತನಕ್ಕೆ ದಾರಿ ಮಾಡುತ್ತದೆ, ದುಷ್ಟತನ ನರಕದ ಬೆಂಕಿಗೆ ದಾರಿ ಮಾಡುತ್ತದೆ”.

63. (ರೋಗ ಮತ್ತು ಚಿಕಿತ್ಸೆ) “ದೇವನು ಯಾವುದೇ ರೋಗವನ್ನು ಅದರ ಚಿಕಿತ್ಸೆಯನ್ನು ಸೃಷ್ಟಿಸದೇ, ಸೃಷ್ಟಿಸಿಲ್ಲ”.

64. (ಧಾರ್ಮಿಕತೆಯಲ್ಲಿ ಮಿತಿಯನ್ನು ಅನುಸರಿಸುವುದು) “ಧರ್ಮವು(ಏಕೆ ದೈವನನ್ನು ಆರಾಧಿಸುವುದು) ಸುಲಭವಾಗಿದೆ ಮತ್ತು ಯಾರು ಧರ್ಮದಲ್ಲಿ ತನ್ನ ಮೇಲೆ ತಾನೇ ಅತಿಯಾದ ಹೊರೆ ಹೇರಿಕೊಳ್ಳುವನೋ, ಅದೇ ರೀತಿ ಮುಂದುವರಿಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನೀವು ಉಗ್ರವಾದಿಗಳಗಬಾರದು, ಆದರೆ ಪರಿಪೂರ್ಣತೆಯ ಸನಿಹತೆಯ ಪ್ರಯತ್ನ ಪಡಿರಿ ಮತ್ತು ನಿಮಗೆ ನೀಡಲಾಗುವ ಪ್ರತಿಫಲದ ಶುಭ ವಾರ್ತೆಯನ್ನು ಸ್ವೀಕರಿಸಿರಿ; ಹಾಗು ಬೆಳಿಗ್ಗೆ ಮತ್ತು ರಾತ್ರಿಗಳಲ್ಲಿ (ದೇವನ) ಆರಾಧನೆಯ ಮೂಲಕ (ಪ್ರಾಮಾಣಿಕವಾಗಿರಲು) ಸಾಮಥ್ರ್ಯ ಗಳಿಸಿರಿ”.

65. (ಪಶ್ಚಾತ್ತಾಪ/ದೇವನಿಂದ ಕ್ಷಮೆಯಾಚಿಸುವುದು) “ವಿಷಾದದ ಅನುಭವವಾಗುವುದು ಪಶ್ಚಾತ್ತಾಪ ಮತ್ತು ಯಾರು ಪಶ್ಚಾತ್ತಾಪ ಪಡುತ್ತಾರೋ ಅವರು ಯಾವುದೇ ಪಾಪವನ್ನು ಎಸಗದವರಂತೆ”. “ಓ ಜನರೇ, ಅಲ್ಲಾಹನೆಡೆಗೆ ತಿರುಗಿ, (ಪ್ರಾಮಾಣಿಕ) ಪಶ್ಚಾತ್ತಾಪ ಪಡಿರಿ ಮತ್ತು ಅವನ ಕ್ಷಮೆ ಯಾಚಿಸಿರಿ. ನಾನು ಸ್ವತಃ ಅಲ್ಲಾಹನಲ್ಲಿ ದಿನಾಲು ಒಂದು ನೂರು ಬಾರಿ ಪಶ್ಚಾತ್ತಾಪ ಪಡುತ್ತೇನೆ”. “ಸರ್ವಶಕ್ತ ಅಲ್ಲಾಹನು ಹೇಳಿದ್ದಾನೆ: ಓ ಆದಮನ ಮಗನೇ, ಎಲ್ಲಿಯವರಿಗೆ ನೀನು ನನ್ನನ್ನು ಕೂಗಿ ಕರೆಯುವೆಯೋ ಮತ್ತು ನನ್ನಿಂದ ಬೇಡುವೆಯೋ, ನೀನು ಮಾಡಿರುವುದೆಲ್ಲವನ್ನೂ ನಾನು ಕ್ಷಮಿಸುವೆನು. ಓ ಆದಮನ ಮಗನೇ, ನಿನ್ನ ಪಾಪಗಳು ಆಕಾಶದ ಮೋಡಗಳವರೆಗೆ ತಲುಪಿದರೂ, ನೀನು ನಂತರ ನನ್ನಲ್ಲಿ ಕ್ಷಮೆ ಯಾಚಿಸಿದಲ್ಲಿ, ನಾನು ನಿನ್ನನ್ನು ಕ್ಷಮಿಸುವೆನು; ಓ ಆದಮನ ಮಗನೇ, ನಿನ್ನ ಪಾಪಗಳು ಇಡೀ ಭೂಮಿಯಷ್ಟು ದೊಡ್ಡದಾಗಿದ್ದು, ನಂತರ ನೀನು ನನಗೆ ಯಾವ ಪಾಲುಗಾರನನ್ನೂ ಮೀಸಲಾಗಿಸದೆ ನನ್ನೆಡೆಗೆ ತಿರುಗಿದಲ್ಲಿ, ನಾನು ಅದರಷ್ಟೇ ದೊಡ್ಡ ಕ್ಷಮೆಯನ್ನು ಮುಂದಿಡುವೆ”.

66. (ತರಾತುರಿ) “ಶಾಂತ ರೀತಿಯಲ್ಲಿ ಕೆಲಸ ಕೈಗೊಳ್ಳುವುದು ಅಲ್ಲಾಹನಿಂದ (ಒಂದು ಅನುಗ್ರಹ), ಆದರೆ ತರಾತುರಿಯಲ್ಲಿ ಕೆಲಸ ಕೈಗೊಳ್ಳುವುದು ಶೈತಾನನನ್ನು ಅನುಸರಿಸಿದಂತೆ”.

67. (ಕಪಟಾಚಾರ) “ಜನರಲ್ಲಿ ಅತ್ಯಂತ ಕೆಟ್ಟವರು, ಎರಡು ಮುಖವುಳ್ಳವರು; ಇಲ್ಲಿಯವರಿಗೆ ಒಂದು ಮುಖದೊಂದಿಗೆ ಬರುತ್ತಾನೆ ಮತ್ತು ಅಲ್ಲಿಯವರಿಗೆ ಮತ್ತೊಂದು ಮುಖ”. “ಕಪಟಾಚಾರಿಗಳು ನರಕದ ಬೆಂಕಿಯ ಅತ್ಯಂತ ತಳಭಾಗದಲ್ಲಿರುವರು”. “ಯಾರು ಈ ನಾಲ್ಕು ಲಕ್ಷಣಗಳನ್ನು ಹೊಂದಿರುವರೋ ಅವರು ನಿಜವಾಗಿಯೂ (ಮುಸ್ಲಿಮರಲ್ಲಿ) ಕಪಟಾಚಾರಿಗಳು ಮತ್ತು ಯಾರು ಈ ಲಕ್ಷಣಗಳಲ್ಲಿ ಒಂದು ಹೊಂದಿರುತ್ತಾರೋ, ಅದನ್ನು ತೊರೆಯುವವರೆಗೂ ಅವರು ಕಪಟಾಚಾರಿಯ ಆ ಒಂದು ಲಕ್ಷಣವನ್ನು ಹೊಂದಿರುವರು: ಭರವಸೆ ಇರಿಸಿದಾಗ ಮೋಸ ಮಾಡುವನು; ಮಾತಾನಾಡಿದಾಗ ಸುಳ್ಳು ಹೇಳುವನು; ಪ್ರಮಾಣ ಮಾಡಿದಾಗ ಅದನ್ನು ಮುರಿಯುವನು; ಹಾಗು ವಿವಾದಕ್ಕಿಳಿದಾಗ, ನಿಂದನೆ ಮತ್ತು ಅಪನಿಂದೆ ಎಸಗುವನು”.

68. (ನಮ್ರತೆ/ಸಂಕೋಚ) “ಖಂಡಿತವಾಗಿಯೂ, ಪ್ರತಿ ಧರ್ಮದ ಒಂದು (ವಿಶೇಷ) ನೈತಿಕ ಅಂಶವಿರುತ್ತದೆ. ಹಾಗು ಇಸ್ಲಾಮಿನ (ವಿಶೇಷ) ನೈತಿಕ ಅಂಶ ಸಂಕೋಚವಾಗಿದೆ”. “ಖಂಡಿತವಾಗಿಯೂ, ಹಿಂದಿನ ಪ್ರವಾದಿಗಳ ನುಡಿಗಳಿಂದ ಜನರು ಪಡೆದಿರುವ ಮಾತುಗಳಲ್ಲೊಂದು, ನೀವು ಅಸಂಕೋಚಿಗಳಾಗಿದ್ದಲ್ಲಿ (ನಾಚಿಕೆಯಿಲ್ಲದವರು) ನಿಮಗಿಷ್ಟ ಬಂದದ್ದನ್ನು ಮಾಡಿ (ಅಂದರೆ, ಪರಿಸ್ಥಿತಿ ಎಷ್ಟು ಕೆಟ್ಟಿರುತ್ತದೆ ಎಂದರೆ, ನೀವು ಬೇರೆ ಯಾವ ಕೇಡು ಮಾಡಿದರೂ ಅದರ ಪ್ರಭಾವವಿಲ್ಲ)”. “ಸಂಕೋಚ ಈಮಾನ್‍ನ (ಸತ್ಯ ವಿಶ್ವಾಸದ) ಒಂದು ಭಾಗ ಮತ್ತು ಈಮಾನ್ ಸ್ವರ್ಗದಲ್ಲಿದೆ ಹಾಗು ಅಶ್ಲೀಲತೆ ಕಟು-ಹೃದಯದ ಒಂದು ಭಾಗ ಮತ್ತು ಅದು ನರಕದಲ್ಲಿದೆ”.

69. (ದಬ್ಬಾಳಿಕೆಗೆ ಒಳಗಾದವನ ಬೇಡಿಕೆ) “ದಬ್ಬಾಳಿಕೆಗೆ ಒಳಗಾದವನ ಪ್ರಾರ್ಥನೆಯ ಬಗ್ಗೆ ಎಚ್ಚರಿಕೆ ವಹಿಸಿರಿ, ಅವನ ಮತ್ತು ಅಲ್ಲಾಹನ ಮಧ್ಯೆ ಯಾವುದೇ ತಡೆಯಿಲ್ಲ”.

70. (ಕಡೆಯ/ಪುನರುತ್ಥಾನ ದಿನದ ಕೆಲವು ಚಿಹ್ನೆಗಳು) “ಸಮಯ ಕಡಿಮೆಯಾಗುವವರೆಗೂ – ಒಂದು ವರ್ಷ ಒಂದು ತಿಂಗಳಂತೆ, ಒಂದು ತಿಂಗಳು ಒಂದು ವಾರದಂತೆ, ಒಂದು ವಾರ ಒಂದು ದಿನದಂತೆ, ಒಂದು ದಿನ ಒಂದು ಘಂಟೆಯಂತೆ ಮತ್ತು ಒಂದು ಘಂಟೆ ಬೆಂಕಿಯ ಒಂದು ಕಿಡಿಯಂತೆ – ಕಡೆಯ ದಿನ ಬರದು”. “‘ಪ್ರಾಮಾಣಿಕತೆ ಕಳೆದು ಹೋದಾಗ ಕಡೆಯ ದಿನವನ್ನು ನಿರೀಕ್ಷಿಸಿ’, ಆಗ ಒಬ್ಬ ಬದೂಇನ್ (ಅರಬಿಯ ಅಲೆಮಾರಿ ಜನಾಂಗ) ಕೇಳಿದ, ‘ಅದು ಹೇಗೆ ಕಳೆದು ಹೋಗುತ್ತದೆ?’ ಪ್ರವಾದಿ ಉತ್ತರಿಸಿದರು, ‘ಯಾವಾಗ ಅಧಿಕಾರ, ಸೂಕ್ತವಲ್ಲದ ನಾಯಕರ ಕೈ ಸೇರುತ್ತದೋ, ಆಗ ಕಡೆಯ ಘಳಿಗೆಯನ್ನು ನಿರೀಕ್ಷಿಸಿ’”. “ಕಡೆಯ ಘಂಟೆಯ ಚಿಹ್ನೆಗಳು… (ವಿದ್ವಾಂಸರ ನಿಧನದೊಂದಿಗೆ) ಧಾರ್ಮಿಕ ಜ್ಞಾನವನ್ನು ಹಿಂತೆಗೆದು ಕೊಳ್ಳಲಾಗುವುದು, ಧಾರ್ಮಿಕ ನಿರ್ಲಕ್ಷೆ ಕಂಡುಬರುವುದು, ಮದ್ಯಪಾನ (ಅತಿರೇಕಕ್ಕೆ ಏರುವುದು), ಮುಕ್ತ ಲೈಂಗಿಕ ಸಂಭೋಗ ಕಂಡುಬರುವುದು, ಮಹಿಳೆಯರು ಸಂಖ್ಯೆಯಲ್ಲಿ ಹೆಚ್ಚುವರು ಮತ್ತು ಗಂಡಸರು ಸಂಖ್ಯೆಯಲ್ಲಿ ಕ್ಷೀಣಿಸುವರು, ಎಷ್ಟರ ಮಟ್ಟಿಗೆಂದರೆ, ಐವತ್ತು ಮಹಿಳೆಯರನ್ನು ಒಬ್ಬ ಗಂಡಸು ನೋಡಿಕೊಳ್ಳುವಂತಾಗುತ್ತದೆ. ನಿಮ್ಮಲ್ಲಿ (ಅರಬರಲ್ಲಿ) ಹಣ ಉಕ್ಕಿ ಹರಿಯುವುದು”. “ಕಡೆಯ ಘಳಿಗೆಯ ಮೊದಲು, ದೊಡ್ಡ ಸುಳ್ಳುಕೋರರು ಬರಲಿದ್ದಾರೆ, ಅವರಿಂದ ಎಚ್ಚರ ವಹಿಸಿ; ಮಹಿಳೆಯರು ಗಂಡಸರಂತೆ ವಸ್ತ್ರ ಧರಿಸುವರು, ಗಂಡಸರು ಮಹಿಳೆಯರಂತೆ ವಸ್ತ್ರ ಧರಿಸುವರು; ಮಹಿಳೆಯರು ವಸ್ತ್ರ ಧರಿಸಿದ್ದರೂ ಬೆತ್ತಲೆಯಾಗಿರುವರು (ಬೆತ್ತಲೆಯಂತೆ ಕಂಡುಬರುವರು); ಸಲಿಂಗಕಾಮ ಸರ್ವೇಸಾಮಾನ್ಯವಾಗುವುದು (ಹಾಗೂ ಮುಕ್ತ ರೂಢಿಯಲ್ಲಿರುವುದು); ಒಬ್ಬ ಗುಲಾಮ ಮಹಿಳೆ ತನ್ನ ಒಡೆಯನಿಗೆ ಜನ್ಮ ನೀಡುವಳು (ಅಂದರೆ, ತಂದೆ ತಾಯಿ ತಮ್ಮ ಸ್ವಂತ ಮಕ್ಕಳಿಗೆ ಗುಲಾಮರಾಗುವರು ಅಥವಾ ಬಾಡಿಗೆ/ಪರ್ಯಾಯ ತಾಯಿತನ ಸಾಮಾನ್ಯವಾಗುವುದು); ಬರೆಗಾಲಿನ ಕುರುಬರು (ಅರಬರು) ಎತ್ತರ ಕಟ್ಟಡಗಳನ್ನು ಕಟ್ಟಿಸುವುದರಲ್ಲಿ ಪರಸ್ಪರ ಸ್ಪರ್ಧಿಸುವರು”. “(ಈ) ಹತ್ತು (ಪ್ರಮುಖ) ಚಿಹ್ನೆಗಳನ್ನು ಕಾಣುವ ತನಕ ಕಡೆಯ ದಿನ ಬರುವುದಿಲ್ಲ, ಅವುಗಳಲ್ಲಿ, (ಪ್ರಾಕೃತಿಕ ವಿಪ್ಪತ್ತಿನಿಂದಾಗಿ) ಹೊಗೆ, ಕ್ರೈಸ್ತ-ವಿರೋಧಿಯ (ಒಗ್ಗಣ್ಣಿನ ಧಾರ್ಮಿಕ ನಾಯಕ) ಬರುವಿಕೆ, (ಭೂಮಿಯೊಳಗಿನಿಂದ ಬರುವ) ‘ಪಶು’, ಪಶ್ಚಿಮದಿಂದ ಸೂರ್ಯೋದಯ, ಮರ್ಯಮರ ಪುತ್ರ ಈಸಾ (ಕ್ರೈಸ್ತ)ರು ಭೂಮಿಗೆ ಹಿಂದಿರುಗುವುದು, ಗಾಗ್(ಯಾಜೂಜ್) ಮತ್ತು ಮಾಗೋಗ್ (ಮಾಜೂಜ್) (ಹೊರಹೊಮ್ಮುವುದು), ಭೂಮಿಯು ಮೂರು ಸ್ಥಳಗಳಲ್ಲಿ ಕುಸಿಯುವುದು, ಒಂದು ಪೂರ್ವದಲ್ಲಿ, ಒಂದು ಪಶ್ಚಿಮದಲ್ಲಿ ಮತ್ತು ಒಂದು ಅರೇಬಿಯಾದಲ್ಲಿ, ಇದರ ಕೊನೆಯಲ್ಲಿ ಬೆಂಕಿಯೊಂದು ಯಮನ್‍ನಿಂದ ಸುಡುತ್ತಾ ಮುಂದುವರೆಯುತ್ತದೆ ಮತ್ತು ಜನರನ್ನು, ಅವರನ್ನು ಒಟ್ಟುಗೂಡಿಸುವ ಸ್ಥಳಕ್ಕೆ (ಅಂದರೆ, ಅಂತಿಮ ನ್ಯಾಯ ತೀರ್ಮಾನಕ್ಕಾಗಿ ಸಕಲ ಮನುಜ ಕುಲವನ್ನು ಒಂದುಗೂಡಿಸಲಾಗುವ ಮತ್ತು ಅಲ್ಲಿಯವರಿಗೆ ಸತ್ತಿದ್ದವರನ್ನೂ ಪುನರುತ್ಥಾನಗೊಳಿಸಲಾಗುವ ಭೂಮಿಯ ಮೇಲಿನ ಸ್ಥಳಕ್ಕೆ) ಓಡಿಸುತ್ತದೆ”.

ಮೂಲ: ಅಲ್-ಬುಖಾರಿ, ಮುಸ್ಲಿಮ್, ಅತ್ತಿರ್ಮಿದಿ, ಅಬೂ ದಾವೂದ್, ಅನ್ನಸಾಯಿ, (ಮುಸ್ನದ್) ಅಹ್ಮದ್, ಬೈಹಕಿರವರಿಂದ ಸಂಗ್ರಹಿತ ಪ್ರವಾದಿಯವರ ಹದೀತ್‍ಗಳು.

Pin It on Pinterest

error: Alert: Content is protected !!
body { font-family: “Poppins”, sans-serif; }