------------------------------------------------------------------------------------ ------------------------------------------------------------------------------------- --------------------------------------------------------------------------------------------- ---------------------------------------------------------------------------------------------
Want to Learn More(ಹೆಚ್ಚಿನ ಕಲಿಕೆಗಾಗಿ) ... Click Here or Subscribe
ಅರಿಯಲೇಬೇಕಾದ ಮನುಕುಲದ ಪ್ರವಾದಿ(ﷺ)ರ ಜೀವನ ಮತ್ತು ಸಂದೇಶ – 2

ಅರಿಯಲೇಬೇಕಾದ ಮನುಕುಲದ ಪ್ರವಾದಿ(ﷺ)ರ ಜೀವನ ಮತ್ತು ಸಂದೇಶ – 2

ಪರಮದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಲ್ಲಿ
ಪ್ರವಾದಿ ಮುಹಮ್ಮದ್(ﷺ)ರವರನ್ನು ತಿಳಿಯಿರಿ

اعرف نبيك ﷺ

ಪ್ರವಾದಿ(ﷺ)ರವರ ಜನನ

ರಬೀಉಲ್ ಅವ್ವಲಿನ ಸೋಮವಾರ ದಿನ ಜನಿಸಿದರು. ಅಬೀಉಲ್ ಅವ್ವಲ್ 2ರಂದು, 8ರಂದು, 10ರಂದು, 12ರಂದು ಮುಂತಾದ ಅಭಿಪ್ರಾಯಗಳಿವೆ. ಇಮಾಮ್ ಇಬ್ನ್ ಕಥೀರ್(ರ) ಹೇಳಿದರು: ಪ್ರವಾದಿ(ﷺ)ರವರು ಆನೆ ಕಳಹ ವರ್ಷದಲ್ಲಿ ಜನಿಸಿದ್ದಾರೆಂಬುವುದು ದೃಢಪಟ್ಟಿರುವುದೂ ಸರಿಯಾದ ಅಭಿಪ್ರಾಯವೂ ಆಗಿದೆ. ಇದನ್ನೇ ಇಮಾಮ್ ಬುಖಾರಿಯವರ ಅಧ್ಯಾಪಕರಾಗಿರುವ ಇಬ್ರಾಹೀಮ್ ಇಬ್ನ್ ಮುಂದಿರುಲ್ ಇಸಾಮಿ ಮತ್ತು ಖಲೀಫತ್ ಇಬ್ನ್ ಖಯ್ಯಾತ್‍ರವರು ಹೇಳಿದ್ದಾರೆ. ಪ್ರವಾದಿ(ﷺ) ರವರ ಪಿತರು ಅವರ ಜನನಕ್ಕೆ ಮುಂಚೆಯೇ ಇಹಲೋಕಕ್ಕೆ ವಿದಾಯ ಹೇಳಿದ್ದರು.

ಪ್ರವಾದಿ(ﷺ)ರವರ ಸ್ತನಪಾನ

ಅಬೂ ಲಹಬನ ದಾಸಳಾಗಿದ್ದ `ಥುವೈಬ’ ಕೆಲವು ದಿನ ಪ್ರವಾದಿ(ﷺ)ರವರಿಗೆ ಹಾಲುಣಿಸಿದ್ದಾಳೆ. ನಂತರ ಬನೂ ಸಅದ್ ಗೋತ್ರಕ್ಕೆ ಸ್ತನಪಾನಕ್ಕಾಗಿ ಪ್ರವಾದಿ ಯವರನ್ನು ಕಳುಹಿಸಲಾಗಿತ್ತು. ಅಲ್ಲಿ `ಹಲೀಮ ಸಅದಿಯ್ಯ’ ಎಂಬ ಹೆಸರಿನ ಮಹಿಳೆಯು ಪ್ರವಾದಿ( ﷺ) ರವರಿಗೆ ಹಾಲುಣಿಸಿದರು. ಸರಿಸುಮಾರು 4 ವರ್ಷದಷ್ಟು ಕಾಲ ಪ್ರವಾದಿ(ﷺ)ರವರು ಸಅದ್ ಗೋತ್ರದಲ್ಲಿ ಹಲೀಮರೊಂದಿಗೆ ಕಳೆದರು. ಪ್ರವಾದಿ(ﷺ)ರವರ ಹೃದಯವನ್ನು ಸೀಳಲಾದ ಘಟನೆ ನಡೆದಿರುವುದೂ ಅಲ್ಲೇ ಆಗಿದೆ. ಆ ಮೂಲಕ ಹೃದಯದಲ್ಲಿ ಶೈತಾನನಿಗಿದ್ದ ಭಾಗವನ್ನು ಅವರ ಹೃದಯದಿಂದ ತೆಗೆಯಲಾಯಿತು. ಈ ಘಟನೆಯ ಬಳಿಕ ಹಲೀಮರು ಮಗುವನ್ನು ತಾಯಿ ಆಮೀನಾರಿಗೆ ಒಪ್ಪಿಸಿದರು. ಮಕ್ಕಾದೆಡೆಗೆ ಮರಳುವಾಗ ದಾರಿಯಲ್ಲಿ `ಅಬವಾಅï’ ಎಂಬ ಸ್ಥಳದಲ್ಲಿ ತಾಯಿ ಆಮಿನಾರು ಕೊನೆಯು ಸಿರೆಳೆದರು. ಅಂದು ಪ್ರವಾದಿಯವರಿಗೆ ಆರು ವಯಸ್ಸು ಪ್ರಾಯವಾಗಿತ್ತು. ಮಕ್ಕಾ ವಿಜಯಕ್ಕಾಗಿ ಪ್ರವಾದಿ(ﷺ) ರವರು ಮಕ್ಕಾದ ಕಡೆಗಿರುವ ಯಾತ್ರೆಯ ನಡುವೆ `ಅಬವಾಅï’ ಎಂಬ ಸ್ಥಳಕ್ಕೆ ತಲುಪಿದಾಗ ತಮ್ಮ ಪ್ರಭುವಿನಲ್ಲಿ ತಾಯಿಯ ಖಬರನ್ನು ಸಂದರ್ಶಿಸಲು ಅನುಮತಿ ಕೇಳಿದರು, ಅಲ್ಲಾಹನಿಂದ ಅನುಮತಿ ಲಭಿಸಿತು. ಈ ಘಟನೆಯು ಹದೀಸ್‍ನಲ್ಲಿ ಹೀಗಿದೆ:

ಅಬೂಹುರೈರಃ(ರ)ರವರಿಂದ ವರದಿ: ಪ್ರವಾದಿ (ﷺ)ರವರು ತಮ್ಮ ತಾಯಿಯ ಖಬರನ್ನು ಸಂದರ್ಶಿ ಸಿದರು, ಆಗ ಅವರು ಅತ್ತರು, ಅವರ ಸುತ್ತಲೂ ಇದ್ದವರೂ ಅತ್ತರು, ನಂತರ ಪ್ರವಾದಿ(ﷺ) ರವರು ಹೇಳಿದರು: “ನಾನು ನನ್ನ ತಾಯಿಗೆ ಇಸ್ತಿಗ್ಫಾರನ್ನು (ಪಾಪವಿಮೋಚನೆಯನ್ನು) ಕೇಳಲು ಅಲ್ಲಾಹನಲ್ಲಿ ಅನುಮತಿ ಕೇಳಿದೆ. ಆದರೆ ಅಲ್ಲಾಹನು ಅನುಮತಿ ಕೊಡಲಿಲ್ಲ. ನಾನು ನನ್ನ ತಾಯಿಯ ಖಬರನ್ನು ಸಂದರ್ಶಿಸಲು ಅನುಮತಿ ಕೇಳಿದಾಗ ಅಲ್ಲಾಹನು ಅನುಮತಿ ಕೊಟ್ಟನು. ನೀವು ಖಬರನ್ನು ಸಂದರ್ಶಿಸಿರಿ ಅದು ಮರಣವನ್ನು ನೆನಪಿಸುತ್ತದೆ’’ (ಮುಸ್ಲಿಂ). ಪ್ರವಾದಿವರ್ಯರ ಪಿತರಿಂದ ವಾರಿಸಾಗಿ ಲಭಿಸಿದ ಉಮ್ಮು ಐಮನ್ ಎಂಬ ದಾಸಿಯು ತಾಯಿಯ ಮರಣಾ ನಂತರ ಪ್ರವಾದಿ(ﷺ)ರವನ್ನು ಆರೈಸಿದರು. ಹಾಗೆಯೇ ಪ್ರವಾದಿ(ﷺ)ರವರ ಪಿತಾಮಹ ರಾದ ಅಬ್ದುಲ್ ಮುತ್ತಲಿಬರು ಪ್ರವಾದಿ(ﷺ)ರವರ ಪರಿಪಾಲನೆ ಯನ್ನು ವಹಿಸಿ ಕೊಂಡರು. ಪ್ರವಾದಿ(ﷺ) ರವರ 8 ವಯಸ್ಸು ಪ್ರಾಯದಲ್ಲಿ ಪಿತಾಮ ಹರಾದ ಅಬ್ದುಲ್ ಮುತ್ತಲಿಬರೂ ನಿಧನರಾದರು. ಅಬ್ದುಲ್ ಮತ್ತಲಿಬರ ವಸ್ವಿಯತಿನ ಪ್ರಕಾರ ಅನಂತರ ಪ್ರವಾದಿ( ﷺ)ರವರ ಆರೈಕೆಯನ್ನು ಚಿಕ್ಕಪ್ಪರಾದ ಅಬೂ ತ್ವಾಲಿಬರು ವಹಿಸಿಕೊಂಡರು. ಅಬೂ ತ್ವಾಲಿಬರು ಪ್ರವಾದಿ(ﷺ) ರವರನ್ನು ಅತ್ಯಧಿಕ ಪ್ರೀತಿಸಿದರು ಮತ್ತು ಸಂರಕ್ಷಿಸಿದರು. ಪ್ರವಾದಿ(ﷺ)ರವರು ಪ್ರವಾದಿಯಾಗಿ ನಿಯುಕ್ತರಾದಾಗ ಲೂಪ್ರವಾದಿ(ﷺ)ರವರನ್ನು ಶತ್ರುಗಳಿಂದ ಸಂರಕ್ಷಿಸಿದ ರು, ಪ್ರಯಾಸದ ಮತ್ತು ಸಂಕಷ್ಟದ ಸಂದರ್ಭದಲ್ಲಿ ಅವರು ಅವಿಶ್ವಾಸದಲ್ಲಿದ್ದು ಕೊಂಡೇ ಪ್ರವಾದಿವರ್ಯರಿಗೆ ಸಹಾಯದ ಹಸ್ತವನ್ನು ಚಾಚಿ ನೆರಳಾದರು. ಆದರೆ ಅವರು ಅವಿಶ್ವಾಸದಲ್ಲೇ ಮರಣ ಗೊಂಡರು.

 (ಮುಂದುವರೆಯುತ್ತದೆ إن شاء الله‎‎)

ಅರಿಯಲೇಬೇಕಾದ ಮನುಕುಲದ ಪ್ರವಾದಿ(ﷺ)ರ ಜೀವನ ಮತ್ತು ಸಂದೇಶ – 1

ಅರಿಯಲೇಬೇಕಾದ ಮನುಕುಲದ ಪ್ರವಾದಿ(ﷺ)ರ ಜೀವನ ಮತ್ತು ಸಂದೇಶ – 1

ಪರಮದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಲ್ಲಿ
ಪ್ರವಾದಿ ಮುಹಮ್ಮದ್(ﷺ)ರವರನ್ನು ತಿಳಿಯಿರಿ.

اعرف نبيك ﷺ

ಜಗತ್ತು ಕಂಡ ಅತ್ಯುನ್ನತರೂ, ಮಾನವರಲ್ಲಿ ಮಹೋನ್ನತರೂ ಆದ ಪ್ರವಾದಿ ಮುಹಮ್ಮದ್(ﷺ) ರವರ ಬಗ್ಗೆ ತಿಳಿದಿರಬೇಕಾದುದು ಪ್ರತಿಯೋರ್ವ ಮನುಷ್ಯನ ಮೇಲಿರುವ ಬಾಧ್ಯತೆಯಾಗಿದೆ. ಕಾರಣ, ಸತ್ಯದೆಡೆಗೂ ಒಳಿತುಗಳೆಡೆಗೂ ಮಾರ್ಗದರ್ಶನ ನೀಡಲು ಸೃಷ್ಟಿಕರ್ತನು ಕಳುಹಿಸಿದ ಅಂತ್ಯ ಪ್ರವಾದಿ ಯಾಗಿದ್ದಾರೆ ಪ್ರವಾದಿ ಮುಹಮ್ಮದ್(ﷺ). ಜಗತ್ತಿಗೆ ಕಾರುಣ್ಯವಾಗಿ ನಿಯೋಗಿಸಲ್ಪಟ್ಟ ಕೊನೆಯ ಸಂದೇಶ ವಾಹಕರು. ಅಂತ್ಯ ದಿನದವರೆಗಿರುವ ಸರ್ವ ಮನುಷ್ಯರು ಅನುಸರಿಸಬೇಕಾದ ಪ್ರವಾದಿ. ಪ್ರವಾದಿ(ﷺ) ರವರನ್ನು ತಿಳಿಯುವುದು ಮತ್ತು ಅನುಸರಿಸುವುದು ಪ್ರಪಂಚದಲ್ಲೇ ಲಭಿಸುವ ಅತೀ ದೊಡ್ಡ ಅನುಗ್ರಹ ವಾಗಿದೆ, ಅದಕ್ಕಾಗಿ ವ್ಯಯಿಸುವ ಸಮಯವು ಅನುಗ್ರಹೀತವಾಗಿದೆ.

ಪ್ರವಾದಿ( ﷺ )ರವರ ಪರಂಪರೆ

ಅದ್‍ನಾನರ ಮಗನು, ಮಅದ್ದರ ಮಗನು, ನಿಸಾರರ ಮಗನು, ಮುಳರಿನ ಮಗನು, ಇಲ್ಯಾಸರ ಮಗನು, ಮುದ್‍ರಿಕರ ಮಗನು, ಖುಸೈಮರ ಮಗನು, ಕಿನಾನರ ಮಗನು, ನಳ್‍ರಿನ ಮಗನು, ಮಾಲಿಕರ ಮಗನು, ಫಿಅïರಿನ ಮಗನು, ಗ್ವಾಲಿಬರ ಮಗನು, ಲುಹೈರ ಮಗನು, ಕಅಬರ ಮಗನು, ಮುರ್ರರ ಮಗನು, ಕಿಲಾಬರ ಮಗನು, ಕುಸೈರ ಮಗನು, ಅಬ್ದುಮನಾಫರ ಮಗನು, ಹಾಶಿಮರ ಮಗನು, ಅಬ್ದುಲ್ ಮತ್ತಲಿಬರ ಮಗನು ಹಾಗೂ ಅಬ್ದುಲ್ಲಾಹರ ಪುತ್ರರೂ ಖಾಸಿಮರ ಪಿತರೂ ಆಗಿರುವರು ಅಂತ್ಯ ಪ್ರವಾದಿ ಮುಹಮ್ಮದ್(ﷺ). ಇದು ಪಂಡಿತರುಗಳ ನಡುವೆ ಒಮ್ಮಾತಾಭಿಪ್ರಾಯವಿರುವ ಪ್ರವಾದಿ ಪರಂಪರೆಯಾಗಿದೆ.

ಪ್ರವಾದಿ(ﷺ)ರವರ_ನಾಮಗಳು ಪ್ರವಾದಿ(ﷺ)ರವರಿಗೆ ಅನೇಕ ನಾಮಗಳಿರುವುದಾಗಿ ಹದೀಸ್‍ಗಳಿಂದ ತಿಳಿಯಬಹುದು. ಜುಬೈರ್ ಇಬ್ನ್ ಮುತ್‍ಇಂ(ರ)ರವರಿಂದ ವರದಿ: ಪ್ರವಾದಿ(ﷺ)ರವರು ಹೇಳುವುದನ್ನು ನಾನು ಆಲಿಸಿದ್ದೇನೆ. “ಖಂಡಿತವಾ ಗಿಯೂ ನನಗೆ ತುಂಬಾ ನಾಮಗಳಿವೆ. ನಾನು ಮುಹಮ್ಮದ್ ಆಗಿರುವೆನು, ಅಹ್ಮದ್ ಆಗಿರುವೆನು, ನಾನು ಅವಿಶ್ವಾಸವನ್ನು ಅಳಿಸಿ ಬಿಡುವ ಅಲ್ ಮಾಹಿ ಆಗಿರುವೆನು. ನಾನು ನನ್ನ ಸುತ್ತಲೂ ಜನರನ್ನು ಒಟ್ಟು ಸೇರಿಸುವ ಅಲ್‍ಹಾಶಿರ್ ಆಗಿರುವೆನು. ನಾನು, ಇನ್ನು ಯಾರೂ ಬರಲಿಕ್ಕಿಲ್ಲದ ಅಂತ್ಯದವನು(ಪ್ರವಾದಿ) ಆಗಿರುವೆನು.’’(ಬುಖಾರಿ,ಮುಸ್ಲಿಂ)

ಇನ್ನೊಂದು ಹದೀಸ್‍ನಲ್ಲಿ: ಅಬೂ ಮೂಸಲ್ ಅಶ್‍ಅರಿ(ರ)ರವರಿಂದ ವರದಿ: ಪ್ರವಾದಿ(ﷺ)ರವರೇ ಸ್ವಯಂ ತನಗೆ ಕೆಲವು ನಾಮಗಳಿವೆಯೆಂದು ನಮ್ಮೊಡನೆ ಹೇಳುತ್ತಿದ್ದರು. “ನಾನು ಮುಹಮ್ಮದ್ ಆಗಿರುವೆನು, ಅಹ್ಮದ್ ಆಗಿರುವೆನು, ನಾನು ಮುಖಫ್ಫ್(ಹೆಚ್ಚು ಜನರಿಂದ ಅನುಸರಿಸಲ್ಪಡುವ ದೂತನು) ಆಗಿರುವೆನು. ಅಲ್ ಹಾಶಿರ್ ಆಗಿರುವೆನು, ತೌಬಾದ ದೂತನಾಗಿ ರುವೆನು, ಕಾರುಣ್ಯದ ದೂತನಾಗಿರುವೆನು.’’(ಮುಸ್ಲಿಂ)

 (ಮುಂದುವರೆಯುತ್ತದೆ إن شاء الله‎‎)

Pin It on Pinterest

error: Alert: Content is protected !!
body { font-family: “Poppins”, sans-serif; }