------------------------------------------------------------------------------------ ------------------------------------------------------------------------------------- --------------------------------------------------------------------------------------------- ---------------------------------------------------------------------------------------------
Want to Learn More(ಹೆಚ್ಚಿನ ಕಲಿಕೆಗಾಗಿ) ... Click Here or Subscribe
How Much I Love & Follow Jesus TEST!!! You Must Try It!

How Much I Love & Follow Jesus TEST!!! You Must Try It!

How Much I Love & Follow Jesus TEST!!! You Must Try It!

Christians - Can You Pass 'The Jesus Test'? Who Really Follows Jesus?
Christians Claim - Jesus is "Son of God"!!!!  Muslims Say - Jesus is a "Prophet of God"!!!!
But the Real Question is -  "Who Really Follows Jesus?"
Test Your Knowledge of Jesus' Teachings & Consider these 14 Interesting Questions
An Introduction to the Message of the Prophets of The "Lost" and "Last" Testaments

ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ? ಭಾಗ-7

ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ? ಭಾಗ-7

ಪ್ರವಾದಿ(ﷺ)ರವರ ಮತ್ತು ಇನ್ನಿತರ ಔಲಿಯಾಗಳ ಜನ್ಮ ದಿನಾಚರಣೆ

ಪ್ರವಾದಿ(ﷺ)ರವರಾಗಲಿ ಸ್ವಹಾಬಿಗಳಾಗಲಿ ಜನ್ಮದಿನಾಚರಣೆಯನ್ನು (ಮಿಲಾದುನ್ನಬಿಯನ್ನು) ಆಚರಿಸಲಿಲ್ಲ. ಪ್ರವಾದಿ(ﷺ) ರವರು ನುಡಿದರು:

(من أحدث في أمرنا ما ليس منه فهو ردٌ (متفق عليه

“ನಮ್ಮ ಕಾರ್ಯದಲ್ಲಿ, ಅದರಲ್ಲಿ ಇಲ್ಲದ್ದನ್ನು ಯಾರಾದರೂ ನೂತನವಾಗಿ ನಿರ್ಮಿಸಿದರೆ ಅದು ತಳ್ಳಬೇಕಾದುದಾಗಿದೆ.’’(ಬುಖಾರಿ, ಮುಸ್ಲಿಂ).ಅರ್ಥಾತ್:

ಅವರ ಚರ್ಯೆಗೆ ನೂತನವಾಗಿನಿರ್ಮಿಸಲ್ಪಟ್ಟವುಗಳು ನವೀನಾಚಾರವೂ ಬಿದ್‍ಅತೂ ಆಗಿದೆ. ಪ್ರವಾದಿ ಜನ್ಮದಿನಾಚರಣೆ ಕಾರ್ಯಕ್ರಗಳಲ್ಲಿ ಸಂಗೀತ ವಾದ್ಯಗಳು ಮತ್ತು ಪ್ರವಾದಿ(ﷺ)ರವರಲ್ಲಿ ನೇರವಾಗಿ ಪ್ರಾರ್ಥಿಸುವ ಶಿರ್ಕ್‍ಗಳಿವೆ.ಅವರಲ್ಲಿ ಸಹಾಯ ಅಪೇಕ್ಷಿಸುವ ಮತ್ತುಅವರ ಜನ್ಮದಿನಾಚರಣೆ ಆಚರಿಸುವ ಮೂಲಕ, ಕ್ರೈಸ್ತರು ಅವರ ಉತ್ಸವಗಳಲ್ಲಿ ಮಾಡುವಂತೆ ಅವರ ಅನುಕರಣೆ ಮಾಡಲಾಗುತ್ತಿದೆ.

ಅಚ್ಚರಿ: ಮೀಲಾದುನ್ನಬಿ ದಿನಾಚರಣೆಗಳಲ್ಲಿ ಒಟ್ಟು ಸೇರುವ ಕೆಲವರಲ್ಲಿ ನಾವು ಕೇಳಿದರೆ: ಅವರು ಹೇಳುತ್ತಾರೆ: ಮೌಲಿದ್‍ನಲ್ಲಿ ನಾವು ಪ್ರವಾದಿ(ﷺ)ರವರನ್ನು ಸ್ಮರಿಸುವುದು ಮತ್ತು ಅವರ ಸೀರತ್(ಚರಿತ್ರೆ) ಪಠಿಸುವುದಾಗಿದೆ. ಅವರಲ್ಲಿ ನನಗೆ ಹೇಳಲಿಕ್ಕಿರುವುದು: ನೀವು ಸಾರ್ವಜನಿಕ ಸಭೆಗಳಲ್ಲೂ, ವೇದಿಕೆಗಳನ್ನೂ ಅವರ ಚರಿತ್ರೆಯನ್ನು ಹೇಳಿರಿ. ವರ್ಷದಲ್ಲೊಮ್ಮೆ ಮಾತ್ರ ಅದಕ್ಕಾಗಿ ನಿಶ್ಚಿತ ಸಮಯವನ್ನು ಯಾಕಾಗಿ ನಿರ್ಧರಿಸುತ್ತೀರಿ.

  ಹಾಗೆಯೇ ರಮದಾನ್ 27ರಂದು ಪ್ರತ್ಯೇಕ ಆಚರಣೆಗಳನ್ನು ಏರ್ಪಡಿಸುವುದು ಬಿದ್‍ಅತಾಗಿದೆ. ಆ ದಿನದಲ್ಲಿ ಪ್ರವಾದಿ ಚರ್ಯೆಯು ಆಚರಣೆಗಳಿಲ್ಲದೆ ಆರಾಧನೆಗಳಾಗಿತ್ತು.ಹಾಗೆಯೇ ಇಸ್ರಾಅï-ಮಿಅïರಾಜ್‍ನ ದಿನವನ್ನು ಆಚರಿಸುವುದೂ ಅನುವದನೀಯವಲ್ಲ. ಅದಕ್ಕೆ ಬೆಂಬಲವಾಗಿ ಯಾವುದೇ ಸ್ವಹೀಹಾದ ಹದೀಸ್‍ಗಳು ವರದಿಯಾಗಿಲ್ಲ. ಹಾಗೆಯೇ ಶಅಬಾನ್ 15ನ್ನು ವೃತಾನುಷ್ಠಿಸುವುದಕ್ಕಾಗಿ ಪ್ರತ್ಯೇಕಿಸುವುದು ಕೂಡಾ ಬಿದ್‍ಅತಿನಲ್ಲೊಳಪಟ್ಟಿದೆ.

ಕೊನೆಯದಾಗಿ:ಮರಣ ಗೊಂಡಿರುವ ಮಯ್ಯತ್‍ನೊಂದಿಗೆ ಮತ್ತು ಖಬರ್‍ನೊಂದಿಗೆ ಪ್ರಾರ್ಥಿಸುವವರೇ, ಅಲ್ಲಾಹೇತರರಿಗೆ ಹರಕೆಗಳನ್ನು ಮತ್ತು ಬಲಿಗಳನ್ನು ಅರ್ಪಿಸುವವರೇ..ನೀೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ?ಎಂದು ನೀವು ನಿಮ್ಮ ಸ್ವಶರೀರದೊಡನೆ ಕೇಳಿರಿ.ನಿರಪೇಕ್ಷನಾದ ಅಲ್ಲಾಹನಿಗೆ ಉತ್ತರಿಸಿರಿ.ಅವನಿಗೆ ಇತರರನ್ನು ಸಹಭಾಗಿಯನ್ನಾಗಿ ಮಾಡುವುದನ್ನು ಅವನು ಇಷ್ಟಪಡುವುದಿಲ್ಲ.

ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ? ಭಾಗ-6

ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ? ಭಾಗ-6

ಸಿಹ್ರ್, ಮಾಟ, ಜೊತಿಷ್ಯ

ಅಲ್ಲಾಹನು ಹೇಳುತ್ತಾನೆ: وَلَا يُفْلِحُ السَّاحِرُ حَيْثُ أَتَىٰ“ಎಲ್ಲೇ ಹೋದರೂಮಾಂತ್ರಿಕನು ಯಶಸ್ಸು ಗೊಳ್ಳಲಾರು’’(ತ್ವಹಾ: 69). ಪ್ರವಾದಿ(ﷺ)ರವರು ಹೇಳಿದರು:

 الشِّرْكُ بِاللَّهِ  وَالسِّحْرُಹಿ: ವಿاجْتَنِبُواالسَّبْعَ الْمُوبِقَاتِ

“ಏಳು ಮಹಾ ಪಾಪಗಳನ್ನು ವರ್ಜಿಸಿರಿ, ಅವುಗಳು:ಒಂದುಶಿರ್ಕ್,ಎರಡು ಸಿಹ್ರ್…’’(ಬುಖಾರಿ)

ಒಮ್ಮೆ ಪಾರ್ಟಿಗಳಲ್ಲಿ ಜನರನ್ನು ತೃಪ್ತಿ ಗೊಳಿಸಲಿಕ್ಕಾಗಿಜಾದುಗಾರರು ಜಾದುಗಳನ್ನು ಮಾಡುತ್ತಿದ್ದರು.ಆ ಸಭೆಗೆ ಅಬೂ ದರ್ರ್(ರ)ರವರು ಪ್ರವೇಶಿಸಿದರು. ಆಗ ಸಾಹಿರ್ ಓರ್ವನ ತಲೆ ಕತ್ತರಿಸಿ ನಂತರ ಪುನಃ ಜೋಡಿಸಿದನು ! ಅಬೂ ದರ್ರ್(ರ) ರವರು ಅವರ ಬಳಿಗೆ ಹೋಗಿ ತಮ್ಮ ಖಡ್ಗದಿಂದ ಆ ಸಾಹಿರ್‍ನ(ಜಾದುಗಾರನ) ತಲೆ ವಿಚ್ಛೇದನ ಮಾಡಿದರು. ನಂತರ ಹೇಳಿದರು: ಈಗ ನೀನು ನಿನ್ನ ತಲೆಯನ್ನು ನಿನ್ನ ದೇಹಕ್ಕೆ ಹಿಂತಿರುಗಿಸಿ ಜೀವ ಗೊಳಿಸು! ನಂತರ ಹೇಳಿದರು:

ಪ್ರವಾದಿ(ﷺ)ರವರು ಹೇಳುವುದನ್ನು ನಾನು ಆಲಿಸಿದ್ದೇನೆ: حَدُّالسَّاحِرِ ضَرْبَةٌ بِالسَّيْفِ  ِ “ಸಾಹಿರ್‍ನ ಅಂತ್ಯವು ಖಡ್ಗದಿಂದ ಹೊಡೆಯುವ ಮೂಲಕವಾಗಿದೆ’’(ತಿರ್ಮಿದಿ, ದಾರಕುತ್ನೀ)

ಭಯೋತ್ಪಾದನೆಯ ಬಗ್ಗೆ ಇಸ್ಲಾಮ್ ಏನೆನ್ನುತ್ತದೆ? / ماذا يقول الإسلام عن الإرهاب؟

بِسْمِ اللهِ الرَّحْمـَنِ الرَّحِيم

ಭಯೋತ್ಪಾದನೆಯ ಬಗ್ಗೆ ಇಸ್ಲಾಮ್ ಏನೆನ್ನುತ್ತದೆ?

ಪೀಠಿಕೆ

ನಾವು ಬದುಕುತ್ತಿರುವ ಈ ಕಾಲಘಟ್ಟದ ವಿಶಿಷ್ಟ ಲಕ್ಷಣಗಳಲ್ಲೊಂದು ನಮ್ಮ ಸಮಾಜದಲ್ಲಿ ಭೀಮಾಕಾರವಾಗಿ ಬೆಳೆದು ನಿಂತಿರುವ ಸ್ವಚ್ಛಂದ ಹಿಂಸೆಯ ನಡುವೆ ನಾವು ಬದುಕುತ್ತಿದ್ದೇವೆ ಎಂಬುದಾಗಿದೆ. ಅದು ಮಾರುಕಟ್ಟೆಯಲ್ಲಿ ಸ್ಫೋಟಗೊಳ್ಳುವ ಒಂದು ಬಾಂಬ್ ಆಗಿರಲಿ, ಒಂದು ವಿಮಾನಾಪಹರಣವಾಗಿರಲಿ, ಜನಾಂಗೀಯ ಹತ್ಯೆಗಳಾಗಿರಲಿ, ಅಥವಾ ಇನ್ನಿತರ ಏನೇ ಆಗಿರಲಿ, ಅಲ್ಲೆಲ್ಲ ರಾಜಕೀಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವುದಕ್ಕಾಗಿ ನಿರಪರಾಧಿ ಜೀವಗಳನ್ನು ನಿರಂತರ ಬಲಿ ತೆಗೆಯಲಾಗುತ್ತಿದೆ. ಕೊಲೆಗಳು ಸಾಮಾನ್ಯವಾಗಿರುವ, ಮನುಷ್ಯ ಜೀವಕ್ಕೆ ಬೆಲೆಯೇ ಇಲ್ಲದ ಮತ್ತು ಹಿಂಸೆಯು ವಿಶ್ವವ್ಯಾಪಕವಾಗಿರುವ ಜಗತ್ತಿನಲ್ಲಿ ನಾವು ಬದುಕುತ್ತಿದ್ದೇವೆ. ಇವೆಲ್ಲವುಗಳ ಮಧ್ಯೆ ಜಾಗತಿಕವಾಗಿ ತಾಂಡವವಾಡುತ್ತಿರುವ ಭಯೋತ್ಪಾದನೆಯು ಸಮಾಜದ ಶಾಂತಿ ಮತ್ತು ಸುರಕ್ಷಿತತೆಗೆ ಪ್ರಮುಖ ಬೆದರಿಕೆಯಾಗಿ ನಿಂತಿದೆ.

ಭಯೋತ್ಪಾದನೆ ಎಂಬ ಪದವು ವ್ಯಾಪಕವಾಗಿ ಬಳಕೆಗೆ ಬಂದಿದ್ದು ಕೆಲವು ದಶಕಗಳ ಹಿಂದೆ. ಈ ಹೊಸ ಪಾರಿಭಾಷಿಕ ಪದದ ವಿಪರ್ಯಾಸಕರ ಫಲಿತಾಂಶ ಗಳಲ್ಲೊಂದು ಏನೆಂದರೆ ಇದು ಭಯೋತ್ಪಾದನೆಯನ್ನು ಕೇವಲ ಕೆಲವು ನಿರ್ದಿಷ್ಟ ಗುಂಪುಗಳು ಅಥವಾ ಕೆಲವು ನಿರ್ದಿಷ್ಟ ವ್ಯಕ್ತಿಗಳಿಗೆ ಮಾತ್ರ ಸೀಮಿತಗೊಳಿಸಿದೆ ಎಂಬುದಾಗಿದೆ. ವಾಸ್ತವವಾಗಿ ಭಯೋತ್ಪಾದನೆಯು ಜಗತ್ತಿನಾದ್ಯಂತ ಹಬ್ಬಿಕೊಂಡಿದೆ ಮತ್ತು ಹಲವಾರು ರೂಪಗಳಲ್ಲಿ ಪ್ರಕಟಗೊಳ್ಳುತ್ತಿದೆ ಎಂಬುದಾಗಿದೆ ಸತ್ಯ. ಭಯೋತ್ಪಾದಕರು ಭಯೋತ್ಪಾದನೆಯನ್ನು ಒಂದು ನಿರ್ದಿಷ್ಟ ವಿಧಾನಕ್ಕೆ ಮಾತ್ರ ಸೀಮಿತಗೊಳಿಸಿಲ್ಲ.

ಮನುಷ್ಯ ಜೀವವನ್ನು ತುಚ್ಛವಾಗಿ ಕಾಣುವವರು, ಜನರ ಮೇಲೆ ಅಧಿಕಾರವನ್ನು ಹೊಂದಿರುವವರು, ಮಾನವೀಯತೆಯನ್ನು ಕಳೆದುಕೊಂಡವರು ನಮ್ಮ ಸಮಾಜಗಳ ಮಧ್ಯೆ ಹಲವಾರು ರೂಪಗಳಲ್ಲಿ ಭಯೋತ್ಪಾದಕರಾಗಿ ಪ್ರತ್ಯಕ್ಷರಾಗುತ್ತಾರೆ. ಯಜಮಾನನ ಮೇಲಿರುವ ಕೋಪವನ್ನು ಸಹೋದ್ಯೋಗಿಗಳ ಸಂಹಾರದ ಮೂಲಕ ತೀರಿಸುವುದು, ಹಕ್ಕು ವಂಚಿತರು ಸರಕಾರದ ಗಮನ ಸೆಳೆಯುವುದಕ್ಕಾಗಿ ಸಾರ್ವಜನಿಕ ಸ್ಥಳಗಳಲ್ಲಿ ಬಾಂಬ್ ಸ್ಫೋಟಿಸುವುದು, ಇಷ್ಟಪಟ್ಟ ಹುಡುಗಿ ದಕ್ಕದೆ ಹೋದಾಗ ಆಕೆಯನ್ನು ಬರ್ಬರವಾಗಿ ಕೊಲೆಗೈಯ್ಯುವುದು ಇತ್ಯಾದಿಗಳೆಲ್ಲವೂ ಜನರಲ್ಲಿ ಭಯಭೀತಿಯನ್ನು ಸೃಷ್ಟಿಸುವ ಭಯೋತ್ಪಾದನೆಗಳಾಗಿವೆ.

ಆದರೆ ಅಧಿಕಾರ ಕುರ್ಚಿಯನ್ನು ಭದ್ರಪಡಿಸುವುದಕ್ಕಾಗಿ ಪ್ರಜೆಗಳ ಮಧ್ಯೆ ಒಡೆದು ಆಳುವ ನೀತಿಯನ್ನು ಪಾಲಿಸುವವರು, ಸ್ವಹಿತಾಸಕ್ತಿಗಳ ರಕ್ಷಣೆಗಾಗಿ ಜಾತಿ ಜಾತಿಗಳ ಮಧ್ಯೆ ಶೀತಲ ಸಮರಗಳನ್ನು ಹುರಿದುಂಬಿಸುವವರು, ಅಧಿಕಾರ ಪಡೆಯುವುದಕ್ಕಾಗಿ ಜನಾಂಗೀಯ ಹತ್ಯೆ ಮಾಡುವವರು ಮುಂತಾದವರು ಕೂಡ ಭಯೋತ್ಪಾದಕರೇ ಆಗಿದ್ದಾರೆ. ಆದರೆ ಇವರಿಗೆ ಶಿಕ್ಷೆ ಸಿಗುವುದು ಮಾತ್ರ ಅಪರೂಪ.

ಭಯೋತ್ಪಾದನೆಯನ್ನು ಕೇವಲ ಒಂದು ನಿರ್ದಿಷ್ಟ ಗುಂಪು ಅಥವಾ ನಿರ್ದಿಷ್ಟ ವ್ಯಕ್ತಿಗಳಿಗೆ ಸೀಮಿತಗೊಳಿಸುವ ಈ ಅರ್ಥ ನಿರೂಪಣೆ (Definition)ಯಿಂದಾಗಿ ಇಂದು ಜಾಗತಿಕವಾಗಿ ಭಯೋತ್ಪಾದನೆಯನ್ನು ಹೆಚ್ಚಾಗಿ ಮುಸ್ಲಿಮರೊಂದಿಗೆ ಥಳಕು ಹಾಕಲಾಗುತ್ತಿದೆ. ಇಂಗ್ಲೀಷಿನಲ್ಲಿ ಒಂದು ಗಾದೆಯಿದೆ. Give a dog a bad name and hang it (ಒಂದು ನಾಯಿಗೆ ಒಂದು ಕೆಟ್ಟ ಹೆಸರನ್ನಿಟ್ಟು ಅದನ್ನು ನೇಣಿಗೆ ಹಾಕು). ಜಗತ್ತಿನಲ್ಲಿ ಎಲ್ಲಾದರೂ ಯಾವುದಾದರೂ ಭಯೋತ್ಪಾದನಾ ಕೃತ್ಯ ಜರುಗಿದರೆ ಅದಕ್ಕೆ ಮುಸ್ಲಿಮರನ್ನು ಹೊಣೆಗಾರರನ್ನಾಗಿ ಮಾಡಿ ಅವರನ್ನು ಕಟಕಟೆಯಲ್ಲಿ ನಿಲ್ಲಿಸುವುದು ಸರ್ವೇಸಾಮಾನ್ಯವಾಗಿದೆ. ಕೆಲವೊಮ್ಮೆ ಯಾವುದಾದರೂ ನಿರಪರಾಧಿಯ ಮೇಲೆ ಈ ಕೃತ್ಯದ ಹೊಣೆಯನ್ನು ಹೊರಿಸಿ ಆತನಿಗೆ ಭಯೋ ತ್ಪಾದನೆಯ ಹಣೆಪಟ್ಟಿಯನ್ನು ಕಟ್ಟಿ ಆತನನ್ನು ಗಲ್ಲಿಗೇರಿಸುವುದೂ ಇದೆ. ಕೆಲವು ಮಂದಿ ಮುಸ್ಲಿಮರು ಅಥವಾ ಕೆಲವೊಮ್ಮೆ ಮುಸ್ಲಿಮೇತರರು ನಡೆಸುವ ಭಯೋ ತ್ಪಾದನಾ ಕೃತ್ಯಗಳಿಗೆ ಇಸ್ಲಾಮ್ ಮತ್ತು ಸರ್ವ ಮುಸ್ಲಿಮರನ್ನು ಹೊಣೆಯಾಗಿಸುವುದೂ ಇದೆ.

ಆದರೆ ವಾಸ್ತವವಾಗಿ ಮಧ್ಯಯುಗದ ಕಾಲದಲ್ಲಿ ಯೂರೋಪಿನ ಅಂಧಕಾರ ಗಳನ್ನು ಒದ್ದೋಡಿಸಿ ಬೆಳಕನ್ನು ಬೆಳಗಿಸಿದ ಇಸ್ಲಾಮ್ ಭಯವನ್ನು ಪೋಷಿಸುವ ಒಂದು ಧರ್ಮವಾಗಿರಲು ಸಾಧ್ಯವೇ? ಜಗತ್ತಿನಾದ್ಯಂತ 1.2 ಬಿಲಿಯನ್ ಅನುಯಾಯಿ ಗಳನ್ನು ಹೊಂದಿರುವ, ಅಮೇರಿಕಾದಲ್ಲಿ 7 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಇಸ್ಲಾಮ್ ನಿರಪರಾಧಿಗಳನ್ನು ಹತ್ಯೆ ಮಾಡಲು ಬೋಧಿಸುವ ಧರ್ಮವಾಗಲು ಸಾಧ್ಯವೇ? ಇಸ್ಲಾಮಿನ ಹೆಸರೇ ಶಾಂತಿ ಮತ್ತು ಶರಣಾಗತಿ ಎಂದಾಗಿರುವಾಗ ಅದು ಕೊಲೆ ಮತ್ತು ನಿರ್ನಾಮಕ್ಕೆ ಕರೆ ನೀಡುವ ಧರ್ಮವಾಗಲು ಸಾಧ್ಯವೇ?

ನಾವು ಬಹಳ ಕಾಲದಿಂದ ಇಂತಹ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುತ್ತಿರುವುದು ಮಾಧ್ಯಮಗಳಲ್ಲಿ ಮತ್ತು ಹಾಲಿವುಡ್ ಸಿನಿಮಾಗಳಲ್ಲಾಗಿದೆ. ಆದರೆ ವಾಸ್ತವವಾಗಿ ಇಸ್ಲಾಮ್ ಹಿಂಸೆಯನ್ನು ಬೋಧಿಸುತ್ತದೆಯೇ ಎಂಬುದನ್ನು ಅರಿಯಲು ನಾವು ಉತ್ತರವನ್ನು ಹುಡುಕಬೇಕಾಗಿರುವುದು ಇಸ್ಲಾಮಿನ ಮೂಲಭೂತ ಆಧಾರ ಗ್ರಂಥಗಳನ್ನು ಮತ್ತು ಅದರ ಚರಿತ್ರೆಯನ್ನಾಗಿದೆ.

ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ? ಭಾಗ-5

ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ? ಭಾಗ-5

ಅದೃಶ್ಯ ಜ್ಞಾನ

ಅಲ್ಲಾಹನು ಹೇಳಿದರು:

   لَايَعْلَمُ مَنْ فِي السَّمَاوَاتِ وَالْأَرْضِ الْغَيْبَ إِلَّااللَّهُ

“(ಪ್ರವಾದಿಯವರೇ) ಹೇಳಿರಿ, ಭೂಮ್ಯಾಕಾಶದಲ್ಲಿ ಅಲ್ಲಾಹನ ಹೊರತು ಇನ್ನಾರಿಗೂ ಅದೃಶ್ಯ ಜ್ಞಾನವಿಲ್ಲ.’’ ಕೈಲಕ್ಷಣ ನೋಡುವ ಮೂಲಕ, ನಕ್ಷತ್ರದ ಮೂಲಕ ಯಾರಾದರೂ ಅವನಿಗೆ ಅದೃಶ್ಯ ಜ್ಞಾನ ತಿಳಿಯುತ್ತದೆಯೆನ್ನುವವನು ಸುಳ್ಳುಗಾರನೂ ಸತ್ಯನಿಷೇಧಿಯೂ ಆಗಿದ್ದಾನೆ. ಮಾಟಗಾರನು ಕೆಲವೊಮ್ಮೆ ಅದೃಶ್ಯ ಕಾರ್ಯಗಳನ್ನು ಹೇಳುವುದು ಶೈತಾನನ ಸಹಾಯದಿಂದಾಗಿದೆ. ಅದೃಶ್ಯ ವಿಷಯಗಳ ಜ್ಞಾನವಿದೆಯೆನ್ನುತ್ತಾ ಯಾರದಾರೂ ಅದೃಶ್ಯವನ್ನು ಹೇಳಿದರೆ ಮತ್ತು ಅವರು ಹೇಳುವುದರ ಮೇಲೆ ಯಾರಾದರೂ ವಿಶ್ವಸಿಸಿದರೆ ಅವರೆಲ್ಲರೂ ಪಥಭ್ರಷ್ಟರಾಗಿದ್ದಾರೆ.ಮ್ಯಾಗಝೀನ್‍ಗಳಲ್ಲಿ ಜೋತಿಷ್ಯರುಗಳು ಬರೆದ ಇಂತಹ ವಿಷಯಗಳನ್ನು ಓದುವುದು, ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ವಿಚಾರಿಸುವುದು ನಿಷಿದ್ಧವಾಗಿದೆ. ಪ್ರವಾದಿ(ﷺ)ರವರು ಹೇಳಿದರು:

مَنْ أَتَى كَاهِنًافَصَدَّقَهُ بِمَايَقُولُ فَقَدْكَفَرَ بِمَا أُنْزِلَ عَلَى مُحَمَّدٍصَلَّى اللَّهُ عَلَيْهِ وَسَلَّمَ.

“ಯಾರಾದರೂ ಜೊತಿಷ್ಯರನ್ನು ಭೇಟಿಯಾಗಿ ಅವನು ಹೇಳುವುದರ ಮೇಲೆ ವಿಶ್ವಸಿಸಿದರೆ ವಾಸ್ತವದಲ್ಲಿ ಅವನು ಪ್ರವಾದಿ ಮುಹಮ್ಮದ್(ﷺ)ರವರಿಗೆ ಅವತೀರ್ಣವಾಗಿರುವುದರ ಮೇಲೆ ಕುಫ್ರ್ ಕೈ ಗೊಂಡನು’’.

ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ? ಭಾಗ-4

ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ? ಭಾಗ-4

ಮಂತ್ರಿಸಿದ  ತಾಯಿತ ಮತ್ತು ನೂಲು ಕಟ್ಟುವುದು ಶಿರ್ಕ್‍ನಲ್ಲೊಳಪಟ್ಟಿದೆ.

ರೋಗ ಶಮನಕಾಗಿ ಅಥವಾ ಮನುಷ್ಯ ಶರೀರಕ್ಕೆ ಪ್ರವೇಶಿಸಿದ ಜಿನ್ನನ್ನು ಹೊರಗಟ್ಟಲು ತಾಯುತವನ್ನು ಕಟ್ಟುವುದು ಹರಾಮಾಗಿದೆ. ಅದರಲ್ಲಿ ಕುರ್‍ಆನಿನ ಆಯತ್ ಬರೆದಿರುವುದಾದರೂ ಇನ್ನಿತರ ಏನಾದರೂ ಬರೆದಿರುವುದಾದರೂ ಸಮಾನಾವಾಗಿದೆ.(ಉದಾ: ಜಿನ್ನ್‍ನ ಹೆಸರುಗಳು ಅಥವಾ ಮಾಟಗಾರನ ಚಿಹ್ನೆಗಳು).

ಹುದೈಫ(ರ)ರವರು ಒಬ್ಬರ ಕೈಯಲ್ಲಿ ಕಬ್ಬಿಣದ ಬಳೆಯನ್ನು ಕಂಡರು. ಆ ವ್ಯಕ್ತಿಯೊಡನೆ ಅವರು ಕೇಳಿದರು: ನಿನಗೆ ಏನಾಗಿದೆ…? ಇದು ನಿನ್ನರೋಗವನ್ನುವೃದ್ಧಿಸುವುದಲ್ಲದೆ ಇನ್ನೇನೂ ಮಾಡದು. ಇದು ನಿನ್ನ ಶರೀರದಲ್ಲಿರುವ ಸ್ಥಿತಿಯಲ್ಲಿ ನೀನು ಮರಣ ಗೊಂಡರೆ ನೀನು ಎಂದಿಗೂ ಯಶಸ್ಸು ಗೊಳ್ಳಲಾರೆ.ಖುರ್‍ಆನ್ ಆಯತ್‍ಗಳನ್ನು ದುಆಗಳನ್ನು ಚಿಕತ್ಸಾರ್ಥ(ರುಕಿಯ್ಯ) ರೋಗಿಯ ಮೇಲೆ ಓದುವುದು ಖುರ್‍ಆನ್ ಮತ್ತು ಹದೀಸ್‍ನಿಂದ ದೃಢೀಕರಿಸಲ್ಪಟ್ಟಿದೆ. (ಅನುವದನೀಯವಾಗಿದೆ) ಆದರೆ ಚಿಕಿತ್ಸಾರ್ಥ ಜಿನ್ನ್‍ಗಳ ಮತ್ತು ಸ್ವಾಲಿಹೀನ್‍ಗಳ ಹೆಸರುಗಳನ್ನುಬರೆದು ತಾಯಿತವಾಗಿ ಕಟ್ಟುವುದು ಮತ್ತು ರೋಗ ಶಮನಕ್ಕಾಗಿ ಅಲ್ಲಾಹೇತರರಲ್ಲಿ ಪ್ರಾರ್ಥಿಸುವುದು ಶಿರ್ಕಾಗಿದೆ.

ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ? ಭಾಗ-3

ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ? ಭಾಗ-3

ಖಬರ್‍ನೊಂದಿಗೆ ಅಂಟಿ ಕೊಂಡಿರುವವರಿಗೆ ನನಗೆ ಕೇಳಲಿಕ್ಕಿರುವುದು

  1. ಸ್ವಹಾಬಿಗಳು ಖಬರನ್ನು ಎತ್ತರಿಸಿ ಕಟ್ಟಿದ್ದರೇ ಅಥವಾ ಖಬರ್‍ನೊಳಗಿರುವವರೊಂದಿಗೆ ಪ್ರಾರ್ಥಿಸಿದ್ದರೇ ?
  2. ಅವರು ಪ್ರವಾದಿ(ﷺ)ರವರ ಖಬರಿನ ಬಳಿ ನಿಂತು ಪ್ರಾರ್ಥಿಸಿದ್ದರೇ ಅಥವಾ ಶಫಾಅತನ್ನು ಕೇಳಿದ್ದರೇ?
  3. ರಿಫಾಈ, ದಸೂಖೀ, ಜೀಲಾನೀ, ಬದವೀ ಮೊದಲಾದವರುಗಳ ಖಬರುಗಳು ಅಂಬಿಯಾಗಳ ಖಬರ್‍ಗಳಿಗಿಂತ ತವಸ್ಸುಲ್ ಮಾಡಲು ಶ್ರೇಷ್ಠತೆ ಮತ್ತು ಮಾನ್ಯತೆಯಿರುವುದೇ?

ಮದೀನಾದಲ್ಲಿ ಉಮರ್(ರ)ರವರ ಖಿಲಾಫತಿನ ಕಾಲದಲ್ಲಿ ಸ್ವಹಾಬಿಗಳ ವಿಶ್ವಾಸವನ್ನು ನೋಡಿರಿ: ಮಳೆ ಬರದೆ ಬರಗಾಲವುಂಟಾದಾಗ ಅವರು ಮಳೆಗಾಗಿರುವ ನಮಾಝ್ ನಿರ್ವಹಿಸಲು ಹೊರಟರು. ಉಮರ್(ರ)ರವರು ಪ್ರಾರ್ಥಿಸಿದರು: ಪ್ರವಾದಿ(ﷺ)ರವರ ಕಾಲದಲ್ಲಿ ಮಳೆ ಬರದೆ ಬರಗಾಲ ಉಂಟಾದರೆ ಪ್ರವಾದಿ(ﷺ)ರವರ ಪ್ರಾರ್ಥನೆಯ ಮೂಲಕ(ಪ್ರವಾದಿ(ﷺ)ರವರೊಂದಿಗೆ ಅಲ್ಲಾಹನಲ್ಲಿ ಪ್ರಾರ್ಥಿಸಲು ಹೇಳುವ ಮೂಲಕ) ನಾವು ತವಸ್ಸುಲ್ ಮಾಡುತ್ತಿದ್ದೆವು, ಆಗ ನೀನು ನಮಗೆ ಮಳೆ ಸುರಿಸುತ್ತಿದ್ದೆ. ಈಗ ನಾವು ಪ್ರವಾದಿ(ﷺ)ರವರ ನಿಕಟವರ್ತಿಯಾದ(ಅಮ್ಮ್) ಅಬ್ಬಾಸ್(ರ)ರವರ ಪ್ರಾರ್ಥನೆಯ ಮೂಲಕ ತವಸ್ಸುಲ್ ಮಾಡುತ್ತಿದ್ದೇವೆ. ಅದರ ಬಳಿಕ ಉಮರ್(ರ)ರವರು ಅಬ್ಬಾಸ್(ರ)ರವರೊಡನೆ ಏಳಿರಿ ಅಲ್ಲಾಹನಲ್ಲಿ ಮಳೆಗಾಗಿ ಪ್ರಾರ್ಥಿಸಿರಿ ಎಂದರು. ಅಬ್ಬಾಸ್(ರ)ರವರು ಎದ್ದು ಪ್ರಾರ್ಥಿಸಿದರು. ಆ ಪ್ರಾರ್ಥನೆಯ ಮೂಲಕವಾಗಿದೆ ಮಳೆ ಬಂದಿರುವುದೆಂದು ಅವರು ವಿಶ್ವಸಿಸಿದರು. ಅವರಿಗೇನಾದರೂ ಆವಶ್ಯಕತೆಯುಂಟಾದಾಗ ಬಳಿಯಲ್ಲೇ ಇದ್ದ ಪ್ರವಾದಿ(ﷺ)ರವರ ಖಬರಿನ ಬಳಿಗೆ ತೆರಳುತ್ತಿರಲಿಲ್ಲ. ಅಲ್ಲಾಹನ ರಸೂಲರೇ, ನಮಗೆ ಅಲ್ಲಾಹನ ಬಳಿ ಶಫಾಅತ್ ಮಾಡಿರಿ ಎಂದೂ ಅವರು ಪ್ರಾರ್ಥಿಸುತ್ತಿರಲಿಲ್ಲ. ಪ್ರವಾದಿ(ﷺ)ರವರ ಪವಿತ್ರ ಮೃತದೇಹವಾದರೂ ಸರಿಯೇ ಮಯ್ಯತ್‍ನೊಂದಿಗೆ ಪ್ರಾರ್ಥಿಸುವುದು ಅನುವದನೀಯವಲ್ಲ ಎಂದು ಅವರು ಸ್ಪಷ್ಟವಾಗಿ ತಿಳಿದಿದ್ದರು. ಅವರಿಗೇನಾದರೂ ಆವಶ್ಯಕತೆಗಳಿದ್ದರೆ ನೇರವಾಗಿ ಭೂಮ್ಯಾಕಾಶಗಳ ಪರಿಪಾಲಕನಾದ ಅಲ್ಲಾಹನಲ್ಲಿ ಕೇಳುತ್ತಿದ್ದರು.

ಹಲವು ಜನರ ದುರಾವಸ್ಥೇಯೇ, ಖಬರಿನೊಳಗಿರುವವರಿಂದ ಕಾರುಣ್ಯವನ್ನು ಕೇಳುತ್ತಾರೆ, ಅವರಲ್ಲಿ ಶಫಾಅತನ್ನು ಬೇಡಲಿಕ್ಕಾಗಿ ಅವರಿಗೆ ಅಲ್ಲಾಹನ ಬಳಿ ಜಾಹ್ ಇದೆ ಎನ್ನುತ್ತಾರೆ. ಅಲ್ಲಾಹನು ಅಂಬಿಯಾ ಔಲಿಯಾಗಳಿಗೆ,ಪರಲೋಕದಲ್ಲಿ ಶಫಾಅತ್ ಮಾಡಲು ಅನುಮತಿ ಕೊಡುವನು.ಆದರೆ ಅದಕ್ಕಾಗಿ ಅವರೊಂದಿಗೆ ಪ್ರಾರ್ಥಿಸುವುದನ್ನು ಮತ್ತು ಕೇಳುವುದನ್ನು ಇಸ್ಲಾಮ್ ವಿರೋಧಿಸಿದೆ.ಹಾಗೆಯೆ ಅವರ ಹೆಸರಿನಲ್ಲಾಗಲಿ ಅಥವಾ ಕಅಬಾದ ಹೆಸರಿನಲ್ಲಾಗಲಿ ಆಣೆ ಹಾಕುವುದನ್ನೂ ವಿರೋಧಿಸಿದೆ. ಅಮಾನತ್‍ನ ಹೆಸರಿನಲ್ಲಾಗಲಿ ಅಥವಾ ಜೀವಿಸುತ್ತಿರುವ ಯಾವುದಾದರೂ ವ್ಯಕ್ತಿಯ ಹೇಸರಿನಲ್ಲಾಗಲಿ ಪ್ರವಾದಿ(ﷺ)ರವರ ಜಾಹ್‍ನ ಹೆಸರಿನಲ್ಲಾಗಲಿ ಆಣೆ ಹಾಕುವುದು ಅನುವದನೀಯವಲ್ಲ. ಅಲ್ಲಾಹನ ಹೊರತು ಇತರ ಯಾರೊಬ್ಬರ ಹೆಸರಿನಲ್ಲಿ ಆಣೆ ಹಾಕಿದರೆ ಅದು ಸಹೀಹಾಗದು. ಪ್ರವಾದಿ(ﷺ)ರವರು ನುಡಿದರು:

 (ಅಬೂದಾವೂದ್) مَنْ حَلَف  بِغَيْرِاللَّهِ فَقَدْ أَشْرَكَ

“ಯಾರಾದರೂ ಅಲ್ಲಾಹೇತರರ ಹೆಸರಿನಲ್ಲಿ ಆಣೆ ಹಾಕಿದರೆ ಖಂಡಿತ ಅವನು ಶಿರ್ಕೆಸಗಿದನು’’ ಯಾರಾದರೂ ಮರೆತು ಅಲ್ಲಾಹೇತರರ ಹೆಸರಿನಲ್ಲಿ ಆಣೆ ಹಾಕಿದರೆ ಕೂಡಲೇ ಅವನು ಲಾ ಇಲಾಹ ಇಲ್ಲಲ್ಲಾಹ್ ಎಂದು ಹೇಳಬೇಕು.

ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ? ಭಾಗ-2

ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ? ಭಾಗ-2

ಶಿರ್ಕ್‍ನ ವಿವಿಧ ಮುಖಗಳು

1. ಖಬರ್‍ನಲ್ಲಿ ಧಫನ್ ಮಾಡಲ್ಪಟ್ಟವರಲ್ಲಿ ಪ್ರಾರ್ಥಿಸುವುದು.

2. ಖಬರ್‍ನಲ್ಲಿ ದಫನ್ ಮಾಡಲ್ಪಟ್ಟವರ ಹೆಸರಿನಲ್ಲಿ, ಜಿನ್ನಗಳ ಹೆಸರಿನಲ್ಲಿ ಮತ್ತು ಅಂಬಿಯಾಗಳ ಹೆಸರಿನಲ್ಲಿ ಬಲಿಯರ್ಪಿಸುವುದು.

3. ಅವರು ಉಪದ್ರವ ಮತ್ತು ರೋಗವನ್ನು ತರುವರು ಎಂದು ಅವರನ್ನು ಭಯಪಡುವುದು.ಖಬರ್ ಝಿಯಾರತ್ ಮಾಡಿದಾಗ ಖಬರಿನೊಳಗಿರುವವರಿಗಾಗಿ ಪ್ರಾರ್ಥಿಸಬೇಕು.

ಪ್ರವಾದಿ(ﷺ)ರವರು ಹೇಳಿದರು:زُورُواالْقُبُورَ؛فَإِنَّهَاتُذَكِّرُكُمُ،الآخِرَةَ.(ನೀವು ಖಬರ್ ಸಂದರ್ಶಿಸಿರಿ, ಅದು ನಿಮ್ಮಲ್ಲಿ ಪರಲೋಕದ ನೆನಪನ್ನುಂಟು ಮಾಡುತ್ತದೆ) ಖಬರಿನೊಳಗಿರುವವರಲ್ಲಿ ಪ್ರಾರ್ಥಿಸುವುದು, ಅವರ ಹೆಸರಿನಲ್ಲಿ ಬಲಿಯರ್ಪಿಸುವುದು, ಅವರಿಂದ ಬರ್ಕತನ್ನು ಆಗ್ರಹಿಸುವುದು ಶಿರ್ಕಾಗಿದೆ.ಅದು ಅಂಬಿಯಾಗಳ ಖಬರಾಗಿರಲಿ ಔಲಿಯಾಗಳ ಖಬರಾಗಿರಲಿ ಸಮಾನವಾಗಿದೆ. ಅವಿವೇಕಿಗಳು; ಹುಸೈನ್(ರ), ಬದವಿ ಮತ್ತು ಜೀಲಾನಿಯವರ ಖಬರ್‍ನ ಬಳಿಯಲ್ಲಿ ಪ್ರಾರ್ಥನೆ ಮತ್ತು ಇಸ್ತಿಗಾಸಗಳನ್ನು ಮಾಡುವಂತೆ. ಇವುಗಳೆಲ್ಲವೂ ಮಿಥ್ಯವಾಗಿದೆ.ಅವರಿಂದ ಯಾವುದೇ ಉಪಕಾರವನ್ನಾಗಲಿ ಉಪದ್ರವವನ್ನಾಗಲಿ ತರಲು ಸಾಧ್ಯವಿಲ್ಲ. ಖಬರಿನೊಳಗಿರುವ ಮರಣ ಗೊಂಡವರು ನಿಮಗೆ ಹೇಗೆ ಸಹಾಯ ಮಾಡಲು ಸಾಧ್ಯ?ಅವರಿಗೆ ಅವರ ಸ್ಥಿತಿಯನ್ನೇ ಬದಲಿಸಲು ಸಾಧ್ಯವಾಗುತ್ತಿಲ್ಲ. ಹಾಗಿರುವವರಲ್ಲಿ ನಿಮ್ಮ ಸ್ಥಿತಿಯನ್ನು ಬದಲಿಸಲುಕೇಳುತ್ತಿದ್ದೀರಾ?!!

ಮರಣ ಹೊಂದಿದವರಲ್ಲಿ ಪ್ರಾರ್ಥಿಸುತ್ತಿರುವವರೊಡನೆ ನನ್ನ ಉಪದೇಶ: ಅವರ ಬಳಿಯಲ್ಲಿ ಅಳುವವರೇ ಮತ್ತುಅವರಿಂದ ಶಫಾಅತನ್ನುಆಗ್ರಹಿಸುವವರೇ,ಅವರು ನಿಮ್ಮಿಂದ ಮರಣ ಗೊಂಡವರು,ಅವರು ನಿಮ್ಮ ಪ್ರಾರ್ಥನೆಯನ್ನು ಆಲಿಸುವರೇ ಅಥವಾ ನಿಮಗೇನಾದರೂ ಉಪಕಾರವನ್ನು ಮಾಡುವರೇ? ಇಲ್ಲ, ಅವರು ನಿಮ್ಮ ಪ್ರಾರ್ಥನೆಯನ್ನು ಆಲಿಸಲಾರರು ಮತ್ತು ನಿಮಗೆ ಯಾವುದೇ ಉಪಕಾರವನ್ನೂ ಮಾಡಲಾರರು.

ಇಂದಿನ ಕಾಲದಲ್ಲಿ ದೇವಾಲಯಗಳು ಮತ್ತು ಕಟ್ಟಡಗಳುಕಟ್ಟಲ್ಪಟ್ಟ ಖಬರ್‍ಗಳು ಹರಡಿ ಕೊಂಡಿವೆ. ಕೆಲವರು ಅವುಗಳಿಗೆ ಹರಕೆಗಳನ್ನು ಅರ್ಪಿಸಿ ಅವುಗಳಿಂದ ಸಾಮಿಪ್ಯವನ್ನು ಆಗ್ರಹಿಸುತ್ತಾರೆ.ಇನ್ನು ಕೆಲವರು ಅವುಗಳಿಗೆ ತ್ವವಾಫ್ ಮಾಡುತ್ತಾರೆ ಮತ್ತು ಬೇಡಿಕೆಗಳನ್ನು ಅವುಗಳ ಮುಂದಿಡುತ್ತಾರೆ.

ಖೈರೋದಲ್ಲಿ ಸಯ್ಯದ್ ಹುಸೈನ್, ಸಯ್ಯಿದಃ ಝೈನಬ್, ಆಇಶಾ, ಸಕೀನಃ ಮತ್ತು ನಫೀಸರ ದರ್ಗಾಗಳಿವೆ ಹಾಗೂ ಇಮಾಮ್ ಶಾಫಿಈ, ದಸೂಖಿ, ಶಾದಿಲೀ, ಬದವಿ ಮೊದಲಾದವರ ಖಬರ್‍ನ ಮೇಲೆ ದರ್ಗಾಗಳನ್ನು ನಿರ್ಮಿಸಲಾಗಿದೆ.ಬದವಿಯವರ ದರ್ಗಾದಲ್ಲಿ ಕೆಲವೊಮ್ಮೆ ಹಜ್ಜ್‍ನ ಸಂದರ್ಭದಂತೆ ನೂಗು ನುಗ್ಗಲು ಉಂಟಾಗುತ್ತದೆ.ಜಲಾಲುದ್ದೀನ್ ರೂಮಿಯವರ ಖಬರಿನ ಮೇಲೆ ಈ ರೀತಿ ಬರೆದಿಡಲಾಗಿದೆ: صَالِح لِلْأدْيَان الثَّلاَثَة (ಮೂರು ಧರ್ಮದವರಿಗಾಗಿರುವ ಸಜ್ಜನರು) ಅರ್ಥಾತ್: ಮುಸ್ಲಿಮ್, ಯಹೂದಿ ಮತ್ತು ಕ್ರೈಸ್ತರು.

ದಮಸ್ಕಸ್‍ನ ಅಮವೀ ಮಸೀದಿಯಲ್ಲಿ ಯಹ್‍ಯಾ(ರ)ರವರ ದರ್ಗಾವಿದೆ. ಇನ್ನೊಂದು ಬದಿಯಲ್ಲಿ ಸ್ವಲಾಹುದ್ದೀನ್‍ರವರ ಮತ್ತು ಇಮಾದುದ್ದೀನ್ ಝಂಕಿರವರ ಖಬರಿದೆ.

ತುರ್ಕಿಯಲ್ಲಿ 481 ಜುಮುಅ ಮಸೀದಿಗಳಲ್ಲಿ ಹೆಚ್ಚಿನವುಗಳೊಂದಿಗೆ ಖಬರ್‍ಗಳು ಸೇರಿ ಕೊಂಡಿವೆ. ಅಲ್‍ಖಸ್ತಂತೀನಿಯಾದಲ್ಲಿ ಅಬೂ ಅಯ್ಯೂಬರ ಖಬರಿನ ಮೇಲೆ ಭದ್ರವಾದ ಆರಾಧನಾಲಯವನ್ನು ಕಟ್ಟಲಾಗಿದೆ.

ಬಗ್ದಾದ್‍ನಲ್ಲಿ 150 ಜುಮುಅ ಮಸೀದಿಗಳಲ್ಲಿ ಹೆಚ್ಚಿನವುಗಳೊಂದಿಗೆ ಖಬರ್‍ಗಳು ಸೇರಿ ಕೊಂಡಿವೆ.ಮೂಸ್ವಲ್‍ನಲ್ಲಿ (ಇರಾಕ್‍ನೊಂದು ಪಟ್ಟಣ) 76 ದರ್ಗಾಗಳು ಜುಮುಅ ಮಸೀದಿಗಳೊಳಗಿವೆ.

ಪ್ರವಾದಿ(ﷺ)ರವರು ಈ ವಿಷಯದಲ್ಲಿ ನುಡಿದ ನುಡಿಮುತ್ತನ್ನು ನೋಡಿರಿ:

لَعَنَاللَّهُ قَوْمًااتَّخَذُواقُبُورَأَنْبِيَائِهِمْ مَسَاجِدَ

“ಅವರ ಅಂಬಿಯಾಗಳ ಖಬರನ್ನು ಆರಾಧನಾಲಯವನ್ನಾಗಿಮಾಡಿದ ಜನತೆಯ ಮೇಲೆ ಅಲ್ಲಾಹನ ಶಾಪವಿದೆ.’’(ನಸಾಈ, ಅಹ್ಮದ್)

ಪ್ರವಾದಿ(ﷺ)ರವರು ಖಬರಿನ ಮೇಲೆ ಗಾರೆ ಹಚ್ಚುವುದನ್ನು, ಕುಳಿತು ಕೊಳ್ಳುವುದನ್ನು, ಕಟ್ಟಡ ಕಟ್ಟುವುದನ್ನು ಮತ್ತು ಬರೆಯುದನ್ನು ವಿರೋಧಿಸಿದ್ದಾರೆ. ಹಾಗೆಯೇ ಖಬರ್‍ನ ಮೇಲೆ ಮಸೀದಿ ಕಟ್ಟುವುದನ್ನು ಮತ್ತು ಅದರ ಮೇಲೆ ಬೆಳಕು ಇಡುವುದನ್ನೂ ಅವರು ವಿರೋಧಿಸಿದ್ದಾರೆ. ಸ್ವಹಾಬಿಗಳಾಗಲಿ ಅವರನ್ನು ಹಿಂಬಾಲಿಸಿದವರಾಗಲಿ ಖಬರ್‍ಗಳ ಮೇಲೆ ಮಸೀದಿಗಳನ್ನು ಕಟ್ಟಲೇ ಇಲ್ಲ. ಹೀಗಿರುವಾಗ ಆ ಮೂಲಕ ಜನರು ದಾರಿತಪ್ಪಿರುವುದು ಅಚ್ಚರಿ ಮೂಡಿಸುತ್ತಿದೆ.ಹೆಚ್ಚಿನ ದರ್ಗಾಗಳು(ಖಬರ್‍ಗಳು) ಸುಳ್ಳು ದರ್ಗಾಗಳಾಗಿವೆ. ಖೈರೋದಲ್ಲಿ ಹುಸೈನ(ರ)ರ ಹೆಸರಿನಲ್ಲಿ ಖಬರಿದೆ, ಅದರಿಂದ ಜನರು ಸಾಮಿಪ್ಯವನ್ನು ಆಗ್ರಹಿಸುತ್ತಿದ್ದಾರೆ. ಅವರ ಹೆಸರಿನಲ್ಲಿ ಅಸ್ಕಲಾನ್(ಫಲಸ್ತೀನಲ್ಲಿರುವೊಂದು ಊರು)ನಲ್ಲೂ, ಮದೀನಾ ಮುನವ್ವರದಲ್ಲೂ ಖಬರಿದೆ!! ಡಮಸ್ಕಸ್‍ನಲ್ಲಿ, ಇರಾಕ್‍ನಲ್ಲಿರುವ ಅಲ್‍ಹನ್ನಾನದಲ್ಲಿ, ಕರ್ಬಲಾದಲ್ಲಿ ಮತ್ತು ನಜ್‍ಫ್‍ನಲ್ಲಿ ಹುಸೈನ್(ರ)ರವರ ಹೆಸರಿನಲ್ಲಿ ಖಬರಿದೆ.(ಇಲ್ಲಿ ಇವರ ಪಿತರ ಖಬರ್ ಇದೆಯೆಂದೂ ಹೇಳಲಾಗುತ್ತಿದೆ). ಇರಾಖ್‍ನ ನಜ್‍ಫ್‍ನಲ್ಲಿ ಅಲೀ(ರ)ರವರ ಹೆಸರಿನಲ್ಲಿ ಅರಿಯಲ್ಪಡುವ ಗೋರಿ ಸುಳ್ಳು ಗೋರಿಯಾಗಿದೆ….ಬಸ್ವರ(ಇರಾಕಿನಲ್ಲಿರುವೊಂದು ಪಟ್ಟಣ)ದಲ್ಲಿ ಅಬ್ದುರ್ರಹ್ಮಾನ್ ಇಬ್ನ್ ಔಫ್(ﷺ)ರವರ ಹೆಸರಿನಲ್ಲಿ ಖಬರಿದೆ. ಆದರೆ ಅವರು ಮದೀನಾದಲ್ಲಿ ವಫಾತಾಗಿ ಅವರನ್ನು ಬಖೀಅದಲ್ಲಿ ದಫನ್ ಮಾಡಲ್ಪಟ್ಟಿದೆ ಎಂಬ ವಾದವೂ ಇದೆ.ಅಲೀರ ಮಗಳು ಝೈನಬ್‍ರವರು ಮದೀನಾದಲ್ಲಿ ವಫಾತಾಗಿ ಬಖೀಅದಲ್ಲಿ ದಫನ್ ಮಾಡಲ್ಪಟ್ಟಿದೆ, ಆದರೆ ಅವರ ಹೆಸರಿನಲ್ಲಿ ಶಿಯಾಗಳು ಡಮಸ್ಕಸ್‍ನಲ್ಲಿಖಬರ್ ನಿರ್ಮಿಸಿದ್ದಾರೆ.ಹಾಗೆಯೇ ಖೈರೋದಲ್ಲೂ ಅವರ ಹೆಸರಿನಲ್ಲಿ ಖಬರಿದೆ. ವಾಸ್ತವದಲ್ಲಿ ಅವರು ಈಜಿಪ್ಟ್‍ಗೆ ಪ್ರವೇಶಿಸಲೇ ಇಲ್ಲ!!

ಶಾಮ್‍ನಲ್ಲಿ ಪ್ರವಾದಿ(ﷺ)ರವರ ಹೆಣ್ಮಕ್ಕಳಾದ ಉಮ್ಮು ಕುಲ್ಸೂಮ್(ರ) ಮತ್ತು ರುಕಿಯ್ಯ(ರ)ರವರ ಹೆಸರಿನಲ್ಲಿ ಖಬರಿದೆ. ಅವರಿಬ್ಬರು ಉಸ್ಮಾನ್(ರ)ರವರ ಪತ್ನಿಯಂದಿರುಗಳು. ವಾಸ್ತವದಲ್ಲಿ ಅವರುಮದೀನಾದಲ್ಲಿ ವಫಾತಾಗಿ ಅವರನ್ನುಬಖೀಅದಲ್ಲಿ ದಫನ್ ಮಾಡಲ್ಪಟ್ಟಿದೆ. ಶಾಮ್(ಸಿರಿಯಾ)ನಲ್ಲಿ ದಿಮಶ್ಕ್ ಜುಮುಅ ಮಸೀದಿಯಲ್ಲಿ ಹೂದ್(ರ)ರವರಖಬರಿದೆ.

ಆದರೆ ಹೂದ್(ರ)ರವರು ಶಾಮಿಗೆ ಪ್ರವೇಶಿಸಲೇ ಇಲ್ಲ. ಅವರದೇ ಹೆಸರಿನಲ್ಲಿ ಯಮನಿನ ಹದರಮೌತ್‍ನಲ್ಲೂಖಬರಿದೆ ! ಹಾಗೆಯೇ ಹದರಮೌತ್‍ನಲ್ಲಿ ಸ್ವಾಲಿಹ್(ರ)ರವರ ಖಬರ್ ಇದೆಯೆಂದೂ ಅವರು ವಾದಿಸುತ್ತಾರೆ. ಆದರೆ ಅವರು ವಾಪಾತಾಗಿರುವುದು ಹಿಜಾಝ್‍ನಲ್ಲಾಗಿದೆ. ಅವರದೇ ಹೆಸರಿನಲ್ಲಿ ಫಲಸ್ತೀನ್‍ನ ಯಾಫಾದಲ್ಲೂ ಖಬರಿದೆ !

ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ? ಭಾಗ-1

ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ? ಭಾಗ-1

ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ?

بسم الله الرحمن الرحيم

ಇಸ್ಲಾಮಿನ ಪ್ರಾರಂಭ ಕಾಲದಲ್ಲಿ ಸತ್ಯ ನಿಷೇಧಿಗಳು ಪ್ರವಾದಿ(ﷺ)ರವರನ್ನು ದೀನ್‍ನಿಂದ ಹೊರ ತರಲು ಪ್ರಯತ್ನಿಸಿದರು.

ಅದಕ್ಕಾಗಿ ಅವರು ಹುಸೈನ್ ಇಬ್ನ್ ಮುಂದಿರ್‍ರವರನ್ನು ಪ್ರವಾದಿ(ﷺ)ರವರ ಬಳಿಗೆ ಕಳುಹಿಸಿದರು. ಹುಸೈನ್ ಪ್ರವಾದಿ(ﷺ)ರವರ ಬಳಿಗೆ ಪ್ರವೇಶಿಸಿ ಹೇಳಿದನು: ಓ ಮುಹಮ್ಮದ್.. ನೀವು ನಮ್ಮ ನಡುವೆ ಬಿಕ್ಕಟ್ಟು ಮತ್ತು ಬಿನ್ನತೆಯನ್ನುಂಟು ಮಾಡಿದ್ದೀರಿ.ನೀವು ಸಂಪತ್ತನ್ನು ಉದ್ದೇಶಿಸುವುದಾದರೆ ನಾವು ನಿಮಗೆ ಸಂಪತ್ತನ್ನು ನೀಡುವೆವು ಅಥವಾ ನಿಮಗೆ ರಾಜನಾಗ ಬೇಕೆಂದರೆ ನಾವು ನಿಮ್ಮನ್ನು ನಮ್ಮ ರಾಜನನ್ನಾಗಿ ಮಾಡುವೆವು. ಇಷ್ಟು ಹೇಳಿ ಸುಮ್ಮನಾದಾಗ ಪ್ರವಾದಿ(ﷺ)ರವರು ಹೇಳಿದರು: ಓ ಅಬೂ ಇಮ್ರಾನ್, ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ. ಆಗ ಅವರು ಹೇಳಿದರು: ಏಳು ಆರಾಧ್ಯರನ್ನು ಆರಾಧಿಸುತ್ತಿದ್ದೇವೆ! ಅವುಗಳಲ್ಲಿ ಆರು ಭೂಮಿಯಲ್ಲಿರುವ ಆರಾಧ್ಯರುಗಳು ಮತ್ತು ಒಂದು ಆಕಾಶದಲ್ಲಿರುವ ಆರಾಧ್ಯನು!! ಆಗ ಪ್ರವಾದಿ(ﷺ)ರವರು ಕೇಳಿದರು: ಸಂಪತ್ತುಗಳು ನಾಶ ಗೊಂಡರೆ ನೀವು ಯಾರಲ್ಲಿ ಪ್ರಾರ್ಥಿಸುತ್ತೀರಿ. ಆಗ ಅವರು ಹೇಳಿದರು: ಆಕಾಶದಲ್ಲಿರುವವನಲ್ಲಿ ಪ್ರಾರ್ಥಿಸುತ್ತೇನೆ. ಮಳೆ ಬರದಿದ್ದರೆ ಯಾರಲ್ಲಿ ಪ್ರಾರ್ಥಿಸುತ್ತೀರಿ? ಆಕಾಶದಲ್ಲಿರುವವನಲ್ಲಿ ಪ್ರಾರ್ಥಿಸುತ್ತೇನೆ. ಆಗ ಪ್ರವಾದಿ(ﷺ)ರವರು ಕೇಳಿದರು: ಆಗ ಆಕಾಶದಲ್ಲಿರುವವನು ಮಾತ್ರ ಉತ್ತರ ಕೊಡುತ್ತಾನೋ ಅಥವಾ ಎಲ್ಲಾ ಆರಾಧ್ಯರುಗಳು ಉತ್ತರಿಸುತ್ತಾರೋ ? ಆಗ ಅವರು ಆಕಾಶದಲ್ಲಿರುವವನು ಮಾತ್ರ ಉತ್ತರಿಸುತ್ತಾನೆಂದರು. ಆಗ ಪ್ರವಾದಿ(ﷺ)ರವರು ಕೇಳಿದರು:ಅವನೊಬ್ಬನೇ ನಿಮಗೆ ಉತ್ತರ ನೀಡುತ್ತಿರುವಾಗ, ನೀವು ಅವನಿಗೆ ಅವರನ್ನು ಸಹಭಾಗಿಯನ್ನಾಗಿಮಾಡುತ್ತಿದ್ದೀರಾ!…… ಆಗ ಪ್ರವಾದಿ(ﷺ)ರವರು ಅವರಲ್ಲಿ أَسْلِمْ ನೀವು ಮುಸ್ಲಿಮಾಗಿರಿ(ಶರಣಾಗಿರಿ) ಎಂದರು.

او كما قال رسول الله صلى الله عليه وسلم ))

ಹೌದು, ಅವರು ಸಜ್ಜನರುಗಳ ವಿಗ್ರಹ ಮತ್ತು ಚಿತ್ರಗಳನ್ನು ಆರಾಧಿಸುತ್ತಿದ್ದರು. ಅವುಗಳು ಅವರನ್ನು ಅಲ್ಲಾಹನಿಗೆ ನಿಕಟ ಗೊಳಿಸುತ್ತದೆ ಎಂದು ಅವರು ಭಾವಿಸುತ್ತಿದ್ದರು.ಅವುಗಳು ಅಲ್ಲಾಹನ ಬಳಿ ಅವರಿಗೆ ಶಿಫಾರಸ್ಸು ಮಾಡುತ್ತದೆ ಎಂಬ ಉದ್ದೇಶದಿಂದ ಅವುಗಳಿಗೆ ಮೃಗ ಬಲಿ, ಪ್ರಾರ್ಥನೆ, ತ್ವವಾಫ್ ಮೊದಲಾದ ಆರಾಧನೆಗಳನ್ನು ಅರ್ಪಿಸುತ್ತಿದ್ದರು. ಅವರು ಹೀಗೆ ಹೇಳುತ್ತಿದ್ದರು: مَانَعْبُدُهُمْ,إِلَّالِيُقَرِّبُونَاإِلَى،اللَّه,زُلْفَى“ಅವರು ನಮ್ಮನ್ನು ಅಲ್ಲಾಹನಿಗೆ ನಿಕಟ ಗೊಳಿಸುತ್ತಾರೆಂಬ (ಉದ್ದೇಶದಿಂದ)ಲ್ಲದೆ ನಾವು ಅವರನ್ನು ಆರಾಧಿಸುತ್ತಿಲ್ಲ.’’(ಝುಮರ್:3), ಇವರನ್ನು ಅಲ್ಲಾಹನು ಮುಶ್ರಿಕ್ ಎಂದು ಕರೆದನು. ಸೃಷ್ಟಿಕರ್ತನು ಮತ್ತು ಆಹಾರ ನೀಡುವವನು ಅಲ್ಲಾಹನು ಎಂಬ ವಿಶ್ವಾಸ ಅವರಿಗಿದ್ದರು ಕೂಡಾ ಅವರನ್ನು ಅಲ್ಲಾಹನು ಮುಶ್ರಿಕ್ ಎಂದು ಕರೆದನು. ಹೀಗಿರುವಾಗ ಅವರಿಗೂ ಇಂದಿನ ಕಾಲದಲ್ಲಿ ಖಬರಿನೊಳಗಿರುವ ಮಯ್ಯಿತ್‍ನ ಸಾಮಿಪ್ಯವನ್ನು ಆಗ್ರಹಿಸುವ ಮತ್ತು ಅವರು ಅಲ್ಲಾಹನ ಬಳಿ ನಮಗೆ ಶಿಫಾರಸ್ಸು ಮಾಡುವರು ಎಂಬ ವಿಶ್ವಾಸವನ್ನಿಡುವವರಿಗೂ ಮಧ್ಯೆ ಇರುವ ವ್ಯತ್ಯಾಸವೇನು?!ಭೂಮಿಯ ಮೇಲಿರುವ ಚಿತ್ರದಿಂದ ಸಾಮಿಪ್ಯವನ್ನು ಆಗ್ರಹಿಸುವುದಕ್ಕೂ ಭೂಮಿಯ ಒಳಗಿರುವ ಚಿತ್ರದಿಂದ ಸಾಮಿಪ್ಯವನ್ನು ಆಗ್ರಹಿಸುವುದಕ್ಕೂ ಮಧ್ಯೆ ಏನಾದರೂ ವ್ಯತ್ಯಾಸವಿದೆಯೇ?!!

ಮುಆದ್(ﷺ)ರವರಲ್ಲಿ ಪ್ರವಾದಿ( ﷺ)ರವರು ಕೇಳಿದರು:
“ಓ ಮುಆದ್, ದಾಸರಿಗೆ ಅಲ್ಲಾಹನ ಮೇಲಿರುವ ಬಾಧ್ಯತೆ ಮತ್ತು ಅಲ್ಲಾಹನಿಗೆ ದಾಸರ ಮೇಲಿರುವ ಬಾಧ್ಯತೆಯೆನೆಂದು ನಿನಗೆ ಗೊತ್ತೇ?ಆಗ ಅವರು ಅಲ್ಲಾಹನಿಗೂ ಅವನ ರಸೂಲರಿಗೆ ಹೆಚ್ಚು ತಿಳಿದಿದೆ ಎಂದರು. ಆಗ ಪ್ರವಾದಿ(ﷺ)ರವರು ಹೇಳಿದರು: ದಾಸರಿಗೆ ಅಲ್ಲಾಹನ ಮೇಲಿರುವ ಬಾಧ್ಯತೆ: ಅವನನ್ನುಮಾತ್ರ ಆರಾಧಿಸುವುದು ಮತ್ತು ಅವನಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡದಿರುವುದಾಗಿದೆ. ಅಲ್ಲಾಹನಿಗೆ ದಾಸರ ಮೇಲಿರುವ ಬಾಧ್ಯತೆ: ಅಲ್ಲಾಹನಿಗೆ ಯಾರನ್ನೂ ಸಹಭಾಗಿಯನ್ನಾಗಿ ಸೇರಿಸದವರನ್ನು ಶಿಕ್ಷೆಸದೆಯಿರುವುದು….’’

ಪ್ರವಾದಿ(ﷺ)ರವರಲ್ಲಿ ವಿಚಾರಸಲಾಯಿತು: ಅಲ್ಲಾಹನ ಬಳಿ ಅತೀ ದೊಡ್ಡ ಪಾಪ ಯಾವುದು? ಆಗ ಅವರು ಹೇಳಿದರು: “ಅಲ್ಲಾಹನು ನಿನ್ನನ್ನು ಸೃಷ್ಟಿಸಿರುವಾಗ ಅವನಿಗೆ ಸಮಾನರನ್ನು ಕಲ್ಪಿಸುವುದು.’’ ಶಿರ್ಕ್ ಅಲ್ಲಾಹನು ಎಂದಿಗೂಕ್ಷಮಿಸದ ಅತೀ ದೊಡ್ಡ ಪಾಪವಾಗಿದೆ.ಶಿರ್ಕೆಸಗಿದವರಿಗೆ ಸ್ವರ್ಗ ಹರಾಮಾಗಿದೆ ಮತ್ತು ಅವರು ಶಾಶ್ವತವಾಗಿ ನರಕದಲ್ಲೇ ನರಳುವರು.ಅಲ್ಲಾಹನು ನುಡಿದನು: ಯಾರು ಅಲ್ಲಾಹುವಿನೊಂದಿಗೆ ಸಹಭಾಗಿತ್ವ ಮಾಡುವನೋ ಖಂಡಿತವಾಗಿಯೂ ಅಲ್ಲಾಹನು ಅವನಿಗೆ ಸ್ವರ್ಗವನ್ನು ನಿಷಿದ್ಧ ಗೊಳಿಸಿರುವನು ಮತ್ತು ನರಕಾಗ್ನಿಯು ಅವನ ವಾಸಸ್ಥಳವಾಗಿರುವುದು.’’(ಸೂರಃ ಅಲ್ ಮಾಇದಃ 72)

ಯಾರಾದರೂ ಅಲ್ಲಾಹನಿಗೆ ಶಿರ್ಕ್ ಎಸಗಿದರೆಅವನ ಸರ್ವ ಕರ್ಮಗಳೂ (ನಮಾಝ್, ಉಪವಾಸ, ಜಿಹಾದ್, ಸ್ವದಖ) ನಿಶ್ಫಲವಾಗಿ ಬಿಡುತ್ತದೆ. ಅಲ್ಲಾಹನು ಹೇಳಿದನು: “(ಪ್ರವಾದಿಯವರೇ, ನೀವು ಒಂದು ವೇಳೆ ಶಿರ್ಕ್ ಎಸಗಿದರೆ ನಿಮ್ಮ ಕರ್ಮಗಳು ನಿಶ್ಫಲವಾಗಿ ಬಿಡುವುದು ಮತ್ತು ನೀವು ಖಂಡಿತ ನಷ್ಟಗಾರಿಗಳಲ್ಲಿ ಸೇರಿ ಬಿಡುವಿರಿ.’’(ಖುರ್‍ಆನ್)

ಹಾಗೆಯೇ ಖಬರ್‍ನ ಮೇಲೆ ನಮಾಝ್ ನಿರ್ವಹಿಸುವುದೂ ಅದರ ಮೇಲೆ ಕಟ್ಟಡ ಕಟ್ಟುವುದೂ ನಿಷಿದ್ಧವಾಗಿದೆ.ಖಬರ್‍ನ ಬಳಿ ಖುರ್‍ಆನ್ ಪಾರಾಯಣ ಮಾಡುವ ಮೂಲಕ ಅಲ್ಲಾಹನ ಸಾಮಿಪ್ಯವನ್ನು ಆಗ್ರಹಿಸುವುದು ಕೂಡಾ ಅನುವದನೀಯವಲ್ಲ. ಖಬರ್‍ನ ಬಳಿ ಮಯ್ಯತ್‍ಗಾಗಿ ಮಾತ್ರ ಅಲ್ಲಾಹನಲ್ಲಿ ಪಾರ್ಥಿಸಬೇಕೇ ಹೊರತು (ಮಯ್ಯತ್‍ನೊಂದಿಗೆ ಪ್ರಾರ್ಥಿಸಕೂಡದು). ಹಾಗೆಯೇ ಪ್ರವಾದಿ(ﷺ)ರವರ ಜಾಹ್‍ನಿಂದಲೂ ಪ್ರಾರ್ಥಿಸಕೂಡದು. ಉದಾ: `ಅಲ್ಲಾಹನೇ ನಾನು ನಿನ್ನ ನಬಿಯವರ ಹಕ್ಕ್, ಜಾಹ್‍ನಿಂದ ಕೇಳುತ್ತೇನೆ ಎಂಬಿತ್ಯಾದಿ ವಿರೋಧಿಸಲ್ಪಟ್ಟ ತವಸ್ಸುಲ್ ಆಗಿದೆ. ಅನುಮತಿಸಲ್ಪಟ್ಟ ತವಸ್ಸುಲ್: 1.ಅಲ್ಲಾಹನ ಅಸ್ಮಾಅï ಸ್ವಿಫಾತ್‍ಗಳ ಮೂಲಕ ಪ್ರಾರ್ಥಿಸುವುದು. ಉದಾ:يَا رَحِيم ارْحَمْنِي… (ಕರುಣಾನಿಧಿಯಾದವನೇ ನೀನು ನನಗೆ ಕರುಣೆ ನೀಡು) 2. ವಿಶ್ವಾಸ ಮತ್ತು ಸತ್ಕರ್ಮಗಳ ಮೂಲಕವಿರುವ ತವಸ್ಸುಲ್. ಉದಾ: اللَّهُمَّ بِإِيمَانِي وَصَلاَتِي اغْفِرْلِي…(ಅಲ್ಲಾಹನೇ ನನ್ನ ವಿಶ್ವಾಸ ಮತ್ತು ನಮಾಝ್‍ನ ಮೂಲಕ ನಿನ್ನಲ್ಲಿ ಪಾಪವಿಮೋಚನೆಯನ್ನು ಬೇಡುತ್ತೇನೆ.)3. ಜೀವಿಸಿರುವ ಸಜ್ಜನರಲ್ಲಿ ತನಗಾಗಿ ಅಲ್ಲಾಹನಲ್ಲಿ ಪ್ರಾರ್ಥಿಸಲಿಕ್ಕಾಗಿ ಅಪೇಕ್ಷಿಸುವುದು.ಮುಸ್ಲಿಮನು ತನ್ನ ಸಹೋದರನಿಗಾಗಿ ಪ್ರಾರ್ಥಿಸುವ ಪ್ರಾರ್ಥನೆಗೆ ಉತ್ತರ ಲಭಿಸುವುದು.ಮರಣ ಹೊಂದಿದವರಲ್ಲಿ ಪ್ರಾರ್ಥಿಸುವುದರ ವಿಧಿ ನಿಷಿದ್ಧ (ಮತ್ತು ಅತೀ ದೊಡ್ಡ ಪಾಪವಾದ ಶಿರ್ಕಾಗಿದೆ.) ಹಾಗೆಯೇ ಕೆಲವರು ಮಾಡುವ ಸಾಮೂಹಿಕವಾಗಿ ಕುಳಿತು ದಿಕ್ರ್ ಹೇಳುವ ಸಂಪ್ರದಾಯ ಬಿದ್‍ಅತಾಗಿದೆ. (ಒಬ್ಬರು ಹೇಳಿ ಕೊಡುವುದು ನಂತರ ಅಲ್ಲಿ ಸೇರಿದವರು ಅದನ್ನು ವಹಿಸಿ ಹೇಳುವ ಸಂಪ್ರದಾಯ ಬಿದ್‍ಅತ್)

ಸ್ವರ್ಗದಲ್ಲಿ ಮಹಿಳೆಯರ ಸ್ಥಿತಿ / أحوال النساء في الجنة

بِسْمِ اللهِ الرَّحْمـَنِ الرَّحِيم

ಸ್ವರ್ಗದಲ್ಲಿ ಮಹಿಳೆಯರ ಸ್ಥಿತಿ ಹೇಗಿರುತ್ತದೆ? ಅಲ್ಲಿ ಅವರಿಗೋಸ್ಕರ ಏನೆಲ್ಲ ಸಿದ್ಧಗೊಂಡಿರುತ್ತದೆ?

ಜನರಲ್ಲಿ ಹೆಚ್ಚಿನವರು (ವಿಶೇಷವಾಗಿ ಮಹಿಳೆಯರು) ಇಂತಹ ಪ್ರಶ್ನೆಗಳನ್ನು ಪುನರಾವರ್ತಿಸಿ ಕೇಳುತ್ತಾರೆ. ಆದ್ದರಿಂದ ಇವರ ಪ್ರಶ್ನೆಗಳಿಗೆ ಉತ್ತರವಾಗಿ ಕುರ್‍ಆನ್ ಮತ್ತು ಸುನ್ನತ್ತಿನಿಂದ ಹಾಗೂ ಉಲಮಾಗಳ ಮಾತುಗಳಿಂದ ನಾನು ಈ ಕೆಳಗಿನದ್ದನ್ನು ಹೇಳಲು ಇಚ್ಛೆ ಪಡುತ್ತೇನೆ.

• ಸ್ವರ್ಗದಲ್ಲಿ ತಮಗೆ ಏನೆಲ್ಲ ಪ್ರತಿಫಲಗಳು ಮತ್ತು ಅನುಗ್ರಹಗಳು ಸಿಗಲಿವೆ ಎಂದು ಮಹಿಳೆಯರು ಪ್ರಶ್ನಿಸಬಾರದೆಂದು ಕೆಲವರು ಹೇಳುತ್ತಾರೆ. ಇದು ತಪ್ಪು. ಯಾಕೆಂದರೆ ಮನುಷ್ಯನು ಯಾವಾಗಲೂ ತನ್ನ ಭವಿಷ್ಯದ ಬಗ್ಗೆ ಮತ್ತು ಭಾವೀ ಜೀವನದ ಬಗ್ಗೆ ಚಿಂತಿತನಾಗಿರುತ್ತಾನೆ. ಸ್ವರ್ಗ ಜೀವನವು ಕೂಡ ಮನುಷ್ಯನ ಭಾವೀ ಜೀವನವಾಗಿದೆ.

ಮಾತ್ರವಲ್ಲ, ಸ್ವರ್ಗದ ಬಗ್ಗೆ ಮತ್ತು ಅಲ್ಲಿ ಲಭ್ಯವಾಗಲಿರುವ ಅನುಗ್ರಹಗಳ ಬಗ್ಗೆ ಸಹಾಬಾ ಕಿರಾಮ್ ಪ್ರವಾದಿ(ﷺ)ರೊಂದಿಗೆ ಕೇಳಿದ್ದರು. ಆಗ ಪ್ರವಾದಿ(ﷺ)ರವರು ಅದನ್ನು ವಿರೋಧಿಸಲಿಲ್ಲ. ಬದಲಾಗಿ ಅವರಿಗೆ ಅರ್ಥವಾಗುವ ರೀತಿಯಲ್ಲಿ ಉತ್ತರ ಕೊಟ್ಟಿದ್ದರು.

ಉದಾಹರಣೆಗೆ ಸಹಾಬಾಗಳು ಕೇಳಿದರು:

يَا رَسُولَ اللَّهِ، الْجَنَّةُ مَا بِنَاؤُهَا؟

“ಓ ಅಲ್ಲಾಹನ ರಸೂಲರೇ, ಸ್ವರ್ಗವನ್ನು ಯಾವುದರಿಂದ ನಿರ್ಮಿಸಲಾಗಿದೆ?”

ಆಗ ಪ್ರವಾದಿ(ﷺ)ರವರು ಹೇಳಿದರು:

 لَبِنَةٌ مِنْ ذَهَبٍ وَلَبِنَةٌ مِنْ فِضَّةٍ

“ಚಿನ್ನದ ಇಟ್ಟಿಗೆ ಮತ್ತು ಬೆಳ್ಳಿಯ ಇಟ್ಟಿಗೆಗಳು.” [ಅದ್ದಾರಿಮೀ]

ಇನ್ನೊಮ್ಮೆ ಅವರು ಕೇಳಿದರು:

يَا رَسُولَ اللَّهِ، هَلْ نَصِلُ إِلَى نِسَائِنَا فِي الْجَنَّةِ؟

“ಓ ಅಲ್ಲಾಹನ ರಸೂಲರೇ, ಸ್ವರ್ಗದಲ್ಲಿ ನಾವು ನಮ್ಮ ಪತ್ನಿಯರೊಂದಿಗೆ ಸೇರುವೆವೇ?”

ಆಗ ಪ್ರವಾದಿ(ﷺ)ರವರು ಹೌದೆಂದು ಹೇಳಿದರು. [ಸಿಲ್ಸಿಲತು ಸ್ಸಹೀಹಃ]

• ಸ್ವರ್ಗದ ಬಗ್ಗೆ ಮತ್ತು ಅದರಲ್ಲಿರುವ ಅನುಗ್ರಹಗಳ ಬಗ್ಗೆ ಕೇಳುವಾಗ ಸ್ವಾಭಾವಿಕವಾಗಿಯೂ ಮನುಷ್ಯನ ಮನಸ್ಸು -ಅವನು ಪುರುಷನಾಗಿದ್ದರೂ, ಮಹಿಳೆಯಾಗಿದ್ದರೂ- ಅದನ್ನು ಆಸೆಪಡುತ್ತದೆ. ಆದರೆ ಇದು ಕೇವಲ ಒಂದು ಆಸೆಪಡುವ ವಸ್ತುವಾಗಿ ಬಾಕಿಯಾಗಬಾರದು. ಬದಲಾಗಿ ಆ ಅಸೆಯನ್ನು ಈಡೇರಿಸುವುದಕ್ಕಾಗಿ ನಾವು ಸತ್ಕರ್ಮಗಳನ್ನು ಮಾಡಬೇಕಾಗಿದೆ.

ಅಲ್ಲಾಹು ತಆಲಾ ಹೇಳುತ್ತಾನೆ:

﴿ وَتِلْكَ الْجَنَّةُ الَّتِي أُورِثْتُمُوهَا بِمَا كُنْتُمْ تَعْمَلُونَ ﴾

“ನೀವು ಮಾಡಿರುವ ಕರ್ಮಗಳ ಕಾರಣದಿಂದಾಗಿ ನಿಮಗೆ ಆ ಸ್ವರ್ಗವನ್ನು ನೀಡಲಾಗಿದೆ.” [ಕುರ್‍ಆನ್ 43:72]

ಆದ್ದರಿಂದ ಸ್ವರ್ಗದ ಬಗ್ಗೆ ಆಸೆಪಡುವುದರ ಜೊತೆಗೆ ಅದನ್ನು ಕರ್ಮಗಳ ಮೂಲಕ ನಿಜಪಡಿಸಬೇಕಾಗಿದೆ.

• ಸ್ವರ್ಗದಲ್ಲಿರುವ ಅನುಗ್ರಹಗಳು ಪುರುಷರಿಗೆ ಮಾತ್ರ ಸೀಮಿತವಲ್ಲ. ಅದನ್ನು ಮುತ್ತಕೀಗಳಿಗಾಗಿ ಸಿದ್ಧಗೊಳಿಸಲಾಗಿದೆಯೆಂದು ಅಲ್ಲಾಹು ಹೇಳಿದ್ದಾನೆ. [ಕುರ್‍ಆನ್ 3:133]. ಮುತ್ತಕೀಗಳಲ್ಲಿ ಪುರುಷರು ಮತ್ತು ಮಹಿಳೆಯರು ಒಳಪಡುತ್ತಾರೆ.

ಅಲ್ಲಾಹು ತಆಲಾ ಹೇಳುತ್ತಾನೆ:

﴿ وَمَنْ يَعْمَلْ مِنَ الصَّالِحَاتِ مِنْ ذَكَرٍ أَوْ أُنْثَى وَهُوَ مُؤْمِنٌ فَأُولَئِكَ يَدْخُلُونَ الْجَنَّةَ وَلَا يُظْلَمُونَ نَقِيرًا ﴾

“ಗಂಡಾಗಲಿ, ಹೆಣ್ಣಾಗಲಿ, ಯಾರು ವಿಶ್ವಾಸಿಯಾಗಿರುತ್ತಾ ಸತ್ಕರ್ಮಗಳನ್ನು ಮಾಡುತ್ತಾರೋ ಅವರು ಸ್ವರ್ಗವನ್ನು ಪ್ರವೇಶಿಸುವರು. ಅವರೊಂದಿಗೆ ಸ್ವಲ್ಪವೂ ಅನ್ಯಾಯವೆಸಗಲಾಗದು.” [ಕುರ್‍ಆನ್ 4:124]

• ಸ್ವರ್ಗ ಪ್ರವೇಶದ ವಿವರಣಾತ್ಮಕ ಅಂಶಗಳನ್ನು ತಿಳಿದುಕೊಳ್ಳುವುದಕ್ಕಾಗಿ ಅಂದರೆ ಅಲ್ಲಿ ತನ್ನೊಂದಿಗೆ ಏನು ಮಾಡಲಾಗುವುದು? ಅಲ್ಲಿ ತಾನು ಎಲ್ಲಿಗೆ ಹೋಗುವೆನು? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುತ್ತಾ ಬಹುಶಃ ತಾನು ಹೋಗುತ್ತಿರು ವುದು ವಿನಾಶಕಾರಿಯಾದ ಒಂದು ಪ್ರದೇಶಕ್ಕಾಗಿದೆ ಎಂಬಂತೆ ಭಾವಿಸಿಕೊಳ್ಳುವುದು ಮಹಿಳೆಯರಿಗೆ ಯೋಗ್ಯವಾದುದಲ್ಲ. ತಮಗೆ ಸ್ವರ್ಗಪ್ರವೇಶವು ಲಭ್ಯವಾದರೆ ಅಲ್ಲಿರುವ ಎಲ್ಲ ಅನುಗ್ರಹಗಳೂ ಲಭ್ಯವಾಗುವುದು ಎಂಬುದನ್ನು ತಿಳಿದುಕೊಂಡು ಅದಕ್ಕಾಗಿ ಅಮಲ್ ಮಾಡಬೇಕಾದುದು ಉತ್ತಮವಾಗಿದೆ.

ಅಲ್ಲಾಹು ಹೇಳುತ್ತಾನೆ:

﴿ وَفِيهَا مَا تَشْتَهِيهِ الْأَنْفُسُ وَتَلَذُّ الْأَعْيُنُ وَأَنْتُمْ فِيهَا خَالِدُونَ ﴾

“ಮನಸ್ಸುಗಳು ಬಯಸುವುದೆಲ್ಲವೂ ಮತ್ತು ಕಣ್ಣುಗಳು ಆಸೆಪಡುವುದೆಲ್ಲವೂ ಅಲ್ಲಿದೆ. ನೀವು ಅಲ್ಲಿ ಶಾಶ್ವತವಾಗಿ ವಾಸಿಸುವಿರಿ.” [ಕುರ್‍ಆನ್ 43:71]

ಮಾತ್ರವಲ್ಲ, ಸ್ವರ್ಗದ ಜನರ ಬಗ್ಗೆ ಅಲ್ಲಾಹು ಹೇಳುತ್ತಾನೆ:

﴿ رَضِيَ اللَّهُ عَنْهُمْ وَرَضُوا عَنْهُ ﴾

“ಅವರ ಬಗ್ಗೆ ಅಲ್ಲಾಹು ಸಂತೃಪ್ತನಾಗಿರುವನು ಮತ್ತು ಅಲ್ಲಾಹನ ಬಗ್ಗೆ ಅವರೂ ಸಂತೃಪ್ತರಾಗಿರುವರು.” [ಕುರ್‍ಆನ್5:119]

• ಸ್ವರ್ಗದಲ್ಲಿ ಆಸೆ ಹುಟ್ಟಿಸುವಂತಹ ರೀತಿಯಲ್ಲಿರುವ ವಿವಿಧ ತಿನಿಸುಗಳು, ಸುಂದರವಾದ ದೃಶ್ಯಗಳು, ವಸತಿಗಳು, ಉಡುಪುಗಳು ಇತ್ಯಾದಿಗಳ ಬಗ್ಗೆ ಕುರ್‍ಆನ್ ಮತ್ತು ಸುನ್ನತ್ತಿನಲ್ಲಿ ಏನೆಲ್ಲ ಬಂದಿವೆಯೋ ಅವೆಲ್ಲವೂ ಪುರುಷರಿಗೂ ಮಹಿಳೆಯ ರಿಗೂ ಲಭ್ಯವಿರುವುದು. ಪುರುಷರು ಮತ್ತು ಮಹಿಳೆಯರೆಲ್ಲರೂ ಇವುಗಳನ್ನು ಅನುಭವಿಸುವರು.

ಹಾಗಾದರೆ ಸ್ವರ್ಗದಲ್ಲಿ ಅಲ್‍ಹೂರುಲ್ ಈನ್ (ವಿಶಾಲ ಕಣ್ಣುಗಳುಳ್ಳ ಅಪ್ಸರೆಯರು) ಮತ್ತು ಸುರಸುಂದರಿಯರಾದ ತರುಣಿಯರು ಸಿಗುವರೆಂದು ಕೇವಲ ಪುರುಷರಿಗೆ ಮಾತ್ರ ಹೇಳಲು ಕಾರಣವೇನು? ಇಂತಹದ್ದು ಮಹಿಳೆಯರಿಗೂ ಲಭ್ಯವಾಗುವುದೆಂದು ಏಕೆ ಹೇಳಲಾಗಿಲ್ಲ?

ಇದಕ್ಕಿರುವ ಉತ್ತರ:

1. ಅಲ್ಲಾಹು ಹೇಳುತ್ತಾನೆ:

﴿ لَا يُسْأَلُ عَمَّا يَفْعَلُ وَهُمْ يُسْأَلُونَ ﴾

“ಅವನು (ಅಲ್ಲಾಹು) ಏನು ಮಾಡುತ್ತಾನೋ ಅದರ ಬಗ್ಗೆ ಪ್ರಶ್ನಿಸುವವರಾರೂ ಇಲ್ಲ. ಆದರೆ ಅವರು (ಮನುಷ್ಯರು) ಏನು ಮಾಡುತ್ತಾರೋ ಅದರ ಬಗ್ಗೆ ಪ್ರಶ್ನಿಸಲಾಗುವುದು.” [ಕುರ್‍ಆನ್ 21:23]

ಆದ್ದರಿಂದ ಇದರ ವಾಸ್ತವತೆಯ ಬಗ್ಗೆ ಕೇಳುವುದು ತಪ್ಪಾದರೂ ಇದರ ಹಿಂದಿರುವ ಹಿಕ್ಮತ್‍ನ ಬಗ್ಗೆ ಕೇಳುವುದು ತಪ್ಪಾಗಲಾರದು.

2. ನಾಚಿಕೆಯು ಮಹಿಳೆಯರ ನೈಸರ್ಗಿಕ ಗುಣಗಳಲ್ಲಿ ಸೇರಿದ್ದಾಗಿದೆಯೆಂಬುದು ಎಲ್ಲರೂ ತಿಳಿದಿರುವ ವಿಚಾರವಾಗಿದೆ. ಮಹಿಳೆಯರು ಯಾವುದರ ಬಗ್ಗೆ ನಾಚಿಕೆಪಡುತ್ತಾರೋ ಅದನ್ನು ಹೇಳಿ ಅವರಲ್ಲಿ ಸ್ವರ್ಗಕ್ಕಾಗಿ ಆಸೆ ಹುಟ್ಟಿಸುವುದನ್ನು ಅಲ್ಲಾಹು ಮಾಡಲಾರನು.

3. ಎಲ್ಲರೂ ತಿಳಿದಿರುವಂತೆ ಸ್ತ್ರೀಯರ ಬಗ್ಗೆಯಿರುವ ಪುರುಷರ ಆಸೆಯು ಪುರುಷರ ಬಗ್ಗೆಯಿರುವ ಸ್ತ್ರೀಯರ ಆಸೆಯಂತಲ್ಲ. ಆದ್ದರಿಂದ ಅಲ್ಲಾಹು ಸ್ವರ್ಗದ ಸ್ತ್ರೀಯರ ಬಗ್ಗೆ ಕೇವಲ ಪುರುಷರಿಗೆ ಮಾತ್ರ ಆಸೆ ಹುಟ್ಟಿಸಿದ್ದಾನೆ. ಪ್ರವಾದಿ(ﷺ)ರವರ ಈ ಕೆಳಗಿನ ವಚನವು ಕೂಡ ಇದಕ್ಕೆ ಆಧಾರವಾಗಿದೆ:

 مَا تَرَكْتُ بَعْدِي فِتْنَةً أَضَرَّ عَلَى الرِّجَالِ مِنَ النِّسَاءِ

“ಸ್ತ್ರೀಯರಿಗಿಂತಲೂ ಹೆಚ್ಚು ಹಾನಿಕರವಾದ ಒಂದು ಪರೀಕ್ಷೆಯನ್ನು ನಾನು ನನ್ನ ನಂತರ ಬಿಟ್ಟು ಹೋಗುತ್ತಿಲ್ಲ.” [ಅಲ್‍ಬುಖಾರೀ ಮತ್ತು ಮುಸ್ಲಿಮ್]
ಮಹಿಳೆಯರ ಬಗ್ಗೆಯಿರುವ ಪುರುಷರ ಆಸೆಯು ಅತ್ಯಂತ ತೀವ್ರವಾಗಿದೆ ಯೆಂದು ಈ ಹದೀಸಿನಿಂದ ಗ್ರಹಿಸಬಹುದಾಗಿದೆ.

ಮಹಿಳೆಯರ ಬಗ್ಗೆ ಹೇಳುವುದಾದರೆ ಉಡುಪು ಮತ್ತು ಆಭರಣಗಳನ್ನು ತೊಟ್ಟು ಅಲಂಕಾರಗೊಳ್ಳುವ ಬಗ್ಗೆ ಅವರಿಗಿರುವ ಆಸೆಯು ಪುರುಷರ ಬಗ್ಗೆಯಿರುವ ಆಸೆಗಿಂತಲೂ ಮಿಗಿಲಾಗಿದೆ.

4. ಅಶ್ಶೈಖ್ ಅಲ್‍ಉಸೈಮೀನ್ ಹೇಳುತ್ತಾರೆ:

لِأَنَّ الزَّوْجَ هُوَ الطَّالِبُ وَهُوَ الرَّاغِبُ فِي الْمَرْأَةِ، فَلِذَلِكَ ذُكِرَتِ الزَّوْجَاتُ للرِّجَالِ فِي الْجَنَّةِ وَسُكِتَ عَنِ الْأَزْوَاجِ لِلنِّسَاءِ، وَلَكِنْ لَيْسَ مُقْتَضَى ذَلِكَ أَنَّهُ لَيْسَ لَهُنَّ أَزْوَاجٌ… بَلْ لَهُنَّ أَزْوَاجٌ مِنْ بَنِي آدَمَ.

“ಯಾಕೆಂದರೆ ಮಹಿಳೆಯನ್ನು ಹುಡುಕುವವನು ಮತ್ತು ಮಹಿಳೆಗಾಗಿ ಆಸೆಪಡುವವನು ಪುರುಷನಾಗಿದ್ದಾನೆ. ಆದ್ದರಿಂದ ಸ್ವರ್ಗದಲ್ಲಿ ಪುರುಷರಿಗೆ ಪತ್ನಿಯರಿ ರುವರೆಂದು ಹೇಳಲಾಗಿದೆ ಮತ್ತು ಮಹಿಳೆಯರಿಗೆ ಪತಿಯಂದಿರು ಇರುವರೆಂಬುದರ ಬಗ್ಗೆ ಮೌನ ವಹಿಸಲಾಗಿದೆ. ಇದರ ಅರ್ಥ ಸ್ತ್ರೀಯರಿಗೆ ಪತಿಯಂದಿರು ಇರಲಾರರು ಎಂದಲ್ಲ… ಬದಲಾಗಿ ಅವರಿಗೆ ಮನುಷ್ಯರಲ್ಲಿ ಸೇರಿದ ಪತಿಯಂದಿರು ಇರುವರು.”

6. ಇಹಲೋಕದಲ್ಲಿ ಮಹಿಳೆಯರ ಸ್ಥಿತಿಯು ಈ ಕೆಳಗಿನ ಆರು ವಿಷಯಗಳಿಂದ ಹೊರಗಿರಲಾರದು:

1. ಒಂದೋ ಆಕೆ ವಿವಾಹಕ್ಕೆ ಮೊದಲೇ ಮರಣ ಹೊಂದುವಳು.
2. ಅಥವಾ ತಲಾಕ್‍ನ ನಂತರ ಇನ್ನೊಬ್ಬನನ್ನು ವಿವಾಹವಾಗುವುದಕ್ಕೆ ಮೊದಲೇ ಮರಣಹೊಂದುವಳು.
3. ಅಥವಾ ಆಕೆ ವಿವಾಹಿತಳಾಗಿರುತ್ತಾಳೆ. ಆದರೆ ಆಕೆಯ ಪತಿ ಸ್ವರ್ಗವಾಸಿ ಯಲ್ಲ. (ಅಲ್ಲಾಹು ಕಾಪಾಡಲಿ).
4. ಅಥವಾ ಆಕೆ ವಿವಾಹವಾದ ಬಳಿಕ ಮರಣಹೊಂದುವಳು.
5. ಅಥವಾ ಆಕೆಯ ಪತಿ ಮೃತಪಡುತ್ತಾನೆ ಮತ್ತು ಆಕೆ ತನ್ನ ಮರಣದ ತನಕ ಬೇರೊಂದು ವಿವಾಹವಾಗುವುದಿಲ್ಲ.
6. ಅಥವಾ ಆಕೆಯ ಪತಿ ಮೃತಪಡುತ್ತಾನೆ ಮತ್ತು ಆಕೆ ಬೇರೊಬ್ಬನನ್ನು ವಿವಾಹವಾಗುತ್ತಾಳೆ.

ಒಬ್ಬ ಮಹಿಳೆ ಮರಣಹೊಂದುವ ಸಂದರ್ಭದಲ್ಲಿ ಮೇಲೆ ಸೂಚಿಸಿದ ಆರು ಸ್ಥಿತಿಗಳಲ್ಲಿ ಯಾವುದಾದರೊಂದು ಸ್ಥಿತಿಯಲ್ಲಿರುತ್ತಾಳೆ.

1. ಆಕೆ ವಿವಾಹಕ್ಕೆ ಮೊದಲೇ ಮರಣಹೊಂದುವಳು. ಇಂತಹ ಮಹಿಳೆಗೆ ಅಲ್ಲಾಹು ಸ್ವರ್ಗದಲ್ಲಿ ಸ್ವರ್ಗವಾಸಿಗಳಲ್ಲಿ ಸೇರಿದ ಒಬ್ಬ ವ್ಯಕ್ತಿಯನ್ನು ವಿವಾಹ ಮಾಡಿಕೊಡುವನು. ಯಾಕೆಂದರೆ ಪ್ರವಾದಿ(ﷺ)ರವರು ಹೇಳುತ್ತಾರೆ:

 مَا فِي الْجَنَّةِ أَعْزَبُ

“ಸ್ವರ್ಗದಲ್ಲಿ ಅವಿವಾಹಿತರು ಇರಲಾರರು.” [ಮುಸ್ಲಿಮ್]

ಅಶ್ಶೈಖ್ ಅಲ್‍ಉಸೈಮೀನ್ ಹೇಳುತ್ತಾರೆ:

إِذَا لَمْ تَتَزَوَّجْ فِي الدُّنْيَا فَإِنَّ اللَّهَ تَعَالَى يُزَوِّجُهَا مَا تُقِرُّ بِهَا عَيْنُهَا فِي الْجَنَّةِ… فَالنَّعِيمُ فِي الْجَنَّةِ لَيْسَ مَقْصُورًا عَلَى الذُّكُورِ وَإِنَّمَا هُوَ لِلذُّكُورِ وَالْإِنَاثِ. وَمِنْ جُمْلَةِ النَّعِيمِ الزَّوَاجُ.

“ಆಕೆ ಇಹಲೋಕದಲ್ಲಿ ವಿವಾಹಿತಳಲ್ಲದಿದ್ದರೆ ಆಕೆಯ ಕಣ್ಣಿಗೆ ತಂಪು ನೀಡುವ (ಅಂದರೆ ಆಕೆ ತೃಪ್ತಿಪಡುವ) ವ್ಯಕ್ತಿಯನ್ನು ಅಲ್ಲಾಹು ಸ್ವರ್ಗದಲ್ಲಿ ಆಕೆಗೆ ವಿವಾಹ ಮಾಡಿಕೊಡುವನು…. ಸ್ವರ್ಗದ ಅನುಗ್ರಹಗಳು ಕೇವಲ ಪುರುಷರಿಗೆ ಮಾತ್ರ ಸೀಮಿತವಲ್ಲ. ಅವು ಪುರುಷರಿಗೂ ಸ್ತ್ರೀಯರಿಗೂ ಇರುವುದಾಗಿದೆ. ವಿವಾಹವು ಆ ಅನುಗ್ರಹಗಳಲ್ಲೊಂದಾಗಿದೆ.”

2. ತಲಾಕ್‍ನ ನಂತರ ಇನ್ನೊಬ್ಬನನ್ನು ವಿವಾಹವಾಗುವುದಕ್ಕೆ ಮೊದಲೇ ಮರಣ ಹೊಂದುವಳು. ಈಕೆಯ ಸ್ಥಿತಿ ಮೇಲೆ ಹೇಳಿದವಳ ಸ್ಥಿತಿಯಂತೆಯೇ ಆಗಿದೆ.

3. ಆಕೆ ವಿವಾಹಿತಳಾಗಿರುತ್ತಾಳೆ. ಆದರೆ ಆಕೆಯ ಪತಿ ಸ್ವರ್ಗವಾಸಿಯಲ್ಲ. ಈಕೆಯ ಸ್ಥಿತಿಯೂ ಮೇಲೆ ಹೇಳಿದವಳ ಸ್ಥಿತಿಯಂತೆಯೇ ಆಗಿದೆ.

ಅಶ್ಶೈಖ್ ಅಲ್‍ಉಸೈಮೀನ್ ಹೇಳುತ್ತಾರೆ:

فَالْمَرْأَةُ إِذَا كَانَتْ مِنْ أَهْلِ الْجَنَّةِ وَلَمْ تَتَزَوَّجْ أَوْ كَانَ زَوْجُهَا لَيْسَ مِنْ أَهْلِ الْجَنَّةِ، فَإِنَّهَا إِذَا دَخَلَتِ الْجَنَّةَ فَهُنَاكَ مِنْ أَهْلِ الْجَنَّةِ مَنْ لَمْ يَتَزَوَّجُوا مِنَ الرِّجَالِ. أَيْ فَيَتَزَوَّجُهَا أَحَدُهُمْ.

“ಮಹಿಳೆಯು ಸ್ವರ್ಗವಾಸಿಗಳಲ್ಲಿ ಸೇರಿದವಳಾಗಿದ್ದು ಆಕೆ ಅವಿವಾಹಿತೆಯಾಗಿದ್ದರೆ ಅಥವಾ ಆಕೆಯ ಪತಿ ಸ್ವರ್ಗವಾಸಿಗಳಲ್ಲಿ ಸೇರಿದವನಲ್ಲದಿದ್ದರೆ ಆಕೆ ಸ್ವರ್ಗವನ್ನು ಪ್ರವೇಶಿಸುವಾಗ ಸ್ವರ್ಗದ ಜನರಲ್ಲಿ ವಿವಾಹವಾಗದ ಪುರುಷರು ಕೂಡ ಇರುತ್ತಾರೆ. ಅಂದರೆ ಅವರಲ್ಲೊಬ್ಬರು ಈಕೆಯನ್ನು ವಿವಾಹವಾಗುವರು.”

4. ಆಕೆ ವಿವಾಹವಾದ ಬಳಿಕ ಮರಣಹೊಂದುವಳು. ಇಂತಹ ಮಹಿಳೆಗೆ ಇಹಲೋಕದಲ್ಲಿದ್ದ ಆಕೆಯ ಪತಿಯೇ ಸ್ವರ್ಗದಲ್ಲೂ ಪತಿಯಾಗಿರುತ್ತಾನೆ.

5. ಆಕೆಯ ಪತಿ ಮೃತಪಡುತ್ತಾನೆ ಮತ್ತು ಆಕೆ ತನ್ನ ಮರಣದ ತನಕ ಬೇರೊಂದು ವಿವಾಹವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಮೃತಪಟ್ಟ ಆ ಪತಿಯೇ ಸ್ವರ್ಗದಲ್ಲೂ ಆಕೆಯ ಪತಿಯಾಗಿರುತ್ತಾನೆ.

6. ಆಕೆಯ ಪತಿ ಮೃತಪಡುತ್ತಾನೆ ಮತ್ತು ಆಕೆ ಬೇರೊಬ್ಬನನ್ನು ವಿವಾಹ ವಾಗುತ್ತಾಳೆ. ಇಂತಹ ಸಂದರ್ಭದಲ್ಲಿ ಆಕೆಯ ಕೊನೆಯ ಪತಿ ಯಾರೋ ಆತನೇ ಸ್ವರ್ಗದಲ್ಲೂ ಆಕೆಯ ಪತಿಯಾಗಿರುತ್ತಾನೆ. ಯಾಕೆಂದರೆ ಪ್ರವಾದಿ(ﷺ)ರವರು ಹೇಳಿದರು:

 الْمَرْأَةُ لِآخِرِ أَزْوَاجِهَا

“ಸ್ತ್ರೀಯು ಆಕೆಯ ಪತಿಯಂದಿರಲ್ಲಿ ಕೊನೆಯವನಿಗೆ ಇರುವವಳಾಗಿದ್ದಾಳೆ.” [ಸಿಲ್ಸಿಲತು ಸ್ಸಹೀಹಃ]

ಹುದೈಫಃರವರು ತಮ್ಮ ಪತ್ನಿಯೊಂದಿಗೆ ಹೇಳುತ್ತಾರೆ:

إِنْ شِئْتِ أَنْ تَكُونِي زَوْجَتِي فِي الْجَنَّةِ فَلَا تَزَوَّجِي بَعْدِي، فَإِنَّ الْمَرْأَةَ فِي الْجَنَّةِ لِآخِرِ أَزْوَاجِهَا فِي الدُّنْيَا، فَلِذَلِكَ حَرَّمَ اللَّهُ عَلَى أَزْوَاجِ النَّبِيِّ أَنْ يَنْكِحْنَ بَعْدَهُ، لِأَنَّهُنَّ أَزْوَاجُهُ فِي الْجَنَّةِ.

“ಸ್ವರ್ಗದಲ್ಲೂ ನೀನು ನನಗೆ ಪತ್ನಿಯಾಗಿರಬೇಕೆಂದು ನೀನು ಇಚ್ಛಿಸುವುದಾದರೆ ನನ್ನ ಮರಣಾನಂತರ ನೀನು ಬೇರೆ ವಿವಾಹವಾಗಬಾರದು. ಯಾಕೆಂದರೆ ಒಬ್ಬ ಮಹಿಳೆಗೆ ಇಹಲೋಕದಲ್ಲಿ ಆಕೆಯ ಪತಿಯಂದಿರಲ್ಲಿ ಕೊನೆಯವನು ಯಾರೋ ಆತನೇ ಸ್ವರ್ಗದಲ್ಲೂ ಆಕೆಯ ಪತಿಯಾಗಿರುತ್ತಾನೆ. ಈ ಕಾರಣದಿಂದಲೇ ಪ್ರವಾದಿ(ﷺ)ರವರ ಪತ್ನಿಯರು ಅವರ ಮರಣಾನಂತರ ಬೇರೆ ವಿವಾಹವಾಗುವುದನ್ನು ಅಲ್ಲಾಹು ನಿಷಿದ್ಧಗೊಳಿಸಿದ್ದಾನೆ. ಯಾಕೆಂದರೆ ಸ್ವರ್ಗದಲ್ಲೂ ಅವರೇ ಪ್ರವಾದಿ(ﷺ)ರವರ ಪತ್ನಿಯರಾಗಿರುತ್ತಾರೆ.” [ಸಿಲ್ಸಿಲತು ಸ್ಸಹೀಹಃ]

• ಜನಾಝಃ ನಮಾಝ್‍ನಲ್ಲಿ ನಾವು ಹೀಗೆ ಪ್ರಾರ್ಥಿಸಬೇಕೆಂದು ಹೇಳಲಾಗಿದೆಯಲ್ಲವೇ?

 وَأَبْدِلْهَا زَوْجًا خَيْرًا مِنْ زَوْجِهَا

“ಆಕೆಗೆ ಆಕೆಯ ಪತಿಗಿಂತಲೂ ಉತ್ತಮನಾಗಿರುವ ಪತಿಯನ್ನು ಬದಲಾಯಿಸಿ ನೀಡು.” [ಮುಸ್ಲಿಮ್]

ಒಂದು ವೇಳೆ ಒಬ್ಬ ಮಹಿಳೆಗೆ ಇಹಲೋಕದಲ್ಲಿರುವ ಆಕೆಯ ಪತಿಯೇ ಸ್ವರ್ಗದಲ್ಲೂ ಆಕೆಯ ಪತಿಯಾಗುವುದಾದರೆ ಈ ಪ್ರಾರ್ಥನೆಯನ್ನು ನಾವು ಪ್ರಾರ್ಥಿಸುವುದಾದರೂ ಹೇಗೆ? ಅದೇ ರೀತಿ ಆಕೆ ಅವಿವಾಹಿತೆಯಾಗಿದ್ದರೆ ಈ ಪ್ರಾರ್ಥನೆಯನ್ನು ನಾವು ಪ್ರಾರ್ಥಿಸುವುದರಲ್ಲಿ ಅರ್ಥವೇನಿದೆ?

ಅಶ್ಶೈಖ್ ಅಲ್‍ಉಸೈಮೀನ್‍ರವರು ಹೇಳುವಂತೆ ಇದರ ಉತ್ತರವು ಹೀಗಿದೆ:

ಆಕೆ ಅವಿವಾಹಿತೆಯಾಗಿದ್ದರೆ ಆಕೆಯ ಪತಿಗಿಂತಲೂ ಉತ್ತಮವಾದ ಪತಿಯನ್ನು ಬದಲಾಯಿಸಿ ನೀಡು ಎಂದು ಹೇಳುವುದರ ಉದ್ದೇಶವು ಆಕೆ ಇನ್ನೂ ಬದುಕಿದ್ದರೆ ಆಕೆಗೆ ಯಾವ ಪುರುಷನನ್ನು ತಕ್ದೀರ್ ಮಾಡಲಾಗಿದೆಯೋ ಅವನಿಗಿಂತಲೂ ಉತ್ತಮ ಪತಿಯನ್ನು ನೀಡು ಎಂದಾಗಿದೆ.

ಇನ್ನು ಆಕೆ ವಿವಾಹಿತೆಯಾಗಿದ್ದರೆ ಆಕೆಯ ಪತಿಗಿಂತಲೂ ಉತ್ತಮವಾದ ಪತಿಯನ್ನು ಬದಲಾಯಿಸಿ ನೀಡು ಎಂದು ಹೇಳುವುದರ ಉದ್ದೇಶವು ಆಕೆಯ ಪತಿಗೆ ಇಹಲೋಕದಲ್ಲಿದ್ದ ಗುಣಗಳಿಗಿಂತಲೂ ಇನ್ನೂ ಉತ್ತಮವಾದ ಗುಣಗಳನ್ನು ಬದಲಾಯಿಸಿ ನೀಡು ಎಂದಾಗಿದೆ. ಯಾಕೆಂದರೆ ಬದಲಾಯಿಸಿ ನೀಡುವುದು ಒಂದೋ ವಸ್ತುವಿನ ರೂಪದಲ್ಲಾಗಿರಬಹುದು. ಅಂದರೆ ಉದಾಹರಣೆಗೆ ಒಂಟೆಗೆ ಬದಲಿಯಾಗಿ ಕುರಿಯನ್ನು ಮಾರುವುದು. ಹಾಗೆಯೇ ಬದಲಾಯಿಸಿ ನೀಡುವುದು ಗುಣಗಳ ರೂಪದಲ್ಲೂ ಆಗಿರಬಹುದು. ಉದಾಹರಣೆಗೆ ಹೀಗೆ ಹೇಳಲಾಗುತ್ತದೆ:

بَدَّلَ اللَّهُ كُفْرَ هَذَا الرَّجُلِ بِإِيمَانٍ.

“ಅಲ್ಲಾಹು ಈ ವ್ಯಕ್ತಿಯ ಕುಫ್ರನ್ನು ಈಮಾನ್ ಆಗಿ ಬದಲಾಯಿಸಿ ನೀಡಲಿ.”

ಅದೇ ರೀತಿ ಅಲ್ಲಾಹು ಹೇಳುತ್ತಾನೆ:

﴿ يَوْمَ تُبَدَّلُ الْأَرْضُ غَيْرَ الْأَرْضِ وَالسَّمَاوَاتُ ﴾

“ಈ ಭೂಮಿಯು ಇದಲ್ಲದ ಇನ್ನೊಂದು ಭೂಮಿಯಾಗಿ ಮತ್ತು ಆಕಾಶಗಳು ಕೂಡ ಬದಲಾಯಿಸಲಾಗುವ ದಿನದಂದು.” [ಕುರ್‍ಆನ್ 14:48]

ಅಂದರೆ ಈ ಭೂಮಿ ಹೋಗಿ ಬೇರೆಯೇ ಒಂದು ಭೂಮಿ ಉಂಟಾಗುವುದಲ್ಲ. ಬದಲಾಗಿ ಭೂಮಿಯ ಸ್ವರೂಪವನ್ನು ಬದಲಾಯಿಸಿ ವಿಶಾಲಗೊಳಿಸಲಾಗುವುದು ಎಂದರ್ಥ. ಹಾಗೆಯೇ ಆಕಾಶಗಳ ಸ್ವರೂಪವನ್ನು ಬದಲಾಯಿಸಿ ಅವುಗಳನ್ನು ಸೀಳಲಾಗುವುದು ಎಂದರ್ಥ.

• ಸಹೀಹಾದ ಹದೀಸೊಂದರಲ್ಲಿ ಪ್ರವಾದಿ(ﷺ)ರವರು ಹೀಗೆನ್ನುತ್ತಾರೆ:

 إِنِّي رَأَيْتُكُنَّ أَكْثَرَ أَهْلِ النَّارِ..

“ನಾನು ನಿಮ್ಮನ್ನು (ಮಹಿಳೆಯರನ್ನು) ನರಕವಾಸಿಗಳಲ್ಲಿ ಬಹುಸಂಖ್ಯಾತರನ್ನಾಗಿ ಕಂಡಿದ್ದೇನೆ.” [ಅಲ್‍ಬುಖಾರಿ ಮತ್ತು ಮುಸ್ಲಿಮ್]

ಇನ್ನೊಂದು ವರದಿಯಲ್ಲಿ ಹೀಗಿದೆ:

 إِنَّ أَقَلَّ سِاكِنِي الْجَنَّةِ النِّسَاءُ

“ಸ್ವರ್ಗವಾಸಿಗಳಲ್ಲಿ ಮಹಿಳೆಯರು ಅತಿಕಡಿಮೆ ಸಂಖ್ಯೆಯಲ್ಲಿರುವರು.” [ಅಲ್‍ಬುಖಾರಿ ಮತ್ತು ಮುಸ್ಲಿಮ್]

ಇನ್ನೊಂದು ಸಹೀಹ್ ಹದೀಸಿನಲ್ಲಿರುವಂತೆ ಸ್ವರ್ಗದಲ್ಲಿ ಪ್ರತಿಯೊಬ್ಬ ಪುರುಷನಿಗೂ ಇಹಲೋಕದ ಇಬ್ಬರು ಮಹಿಳೆಯರು ಪತ್ನಿಯರಾಗಿರುವರು ಎಂದು ಹೇಳಲಾಗಿದೆ.

 وَلِكُلِّ وَاحِدٍ مِنْهُمْ زَوْجَتَانِ

“ಅವರಲ್ಲಿ (ಸ್ವರ್ಗವಾಸಿಗಳಲ್ಲಿ) ಪ್ರತಿಯೊಬ್ಬರಿಗೂ ಇಬ್ಬರು ಪತ್ನಿಯರಿರುವರು.” [ಅಲ್‍ಬುಖಾರೀ ಮತ್ತು ಮುಸ್ಲಿಮ್]

ಮೊದಲನೆಯ ಹದೀಸಿನಲ್ಲಿ ಸ್ವರ್ಗದಲ್ಲಿ ಮಹಿಳೆಯರು ಕಡಿಮೆ ಸಂಖ್ಯೆಯಲ್ಲಿರುವರು ಎನ್ನಲಾಗಿದೆ. ಆದರೆ ಎರಡನೆ ಹದೀಸಿನ ಪ್ರಕಾರ ಸ್ವರ್ಗದಲ್ಲಿ ಮಹಿಳೆಯರ ಸಂಖ್ಯೆಯು ಪುರುಷರ ಎರಡು ಪಟ್ಟು ಇರುವುದು ಎಂದಾಗಿದೆ. ಇದು ವಿರೋಧಾಭಾಸವಲ್ಲವೇ?

ಈ ಎರಡು ಹದೀಸ್‍ಗಳ ಮಧ್ಯೆ ಹೊಂದಾಣಿಕೆ ಮಾಡುವ ವಿಷಯದಲ್ಲಿ, ಅಂದರೆ ಮಹಿಳೆಯರು ಹೆಚ್ಚಾಗಿರುವುದು ಸ್ವರ್ಗದಲ್ಲೋ ಅಥವಾ ನರಕದಲ್ಲೋ ಎಂಬ ವಿಷಯದಲ್ಲಿ ಉಲಮಾಗಳಲ್ಲಿ ಭಿನ್ನಾಭಿಪ್ರಾಯವಿದೆ.

ಉಲಮಾಗಳಲ್ಲಿ ಕೆಲವರು ಹೇಳುತ್ತಾರೆ: ಇಹಲೋಕದಲ್ಲಿ ಮಹಿಳೆಯರ ಸಂಖ್ಯೆಯು ಅಧಿಕವಾಗಿದೆ. ಆದೇ ರೀತಿ ನರಕದಲ್ಲೂ ಅವರ ಸಂಖ್ಯೆ ಅಧಿಕವಾಗಿದೆ.

ಅಲ್‍ಕಾದೀ ಇಯಾದ್ ಹೇಳುತ್ತಾರೆ:

“ಮನುಷ್ಯ ಸಂತತಿಗಳಲ್ಲಿ ಮಹಿಳೆಯರೇ ಅಧಿಕವಾಗಿದ್ದಾರೆ.”

ಅಂದರೆ ಇಹಲೋಕದಲ್ಲಿ ಮಹಿಳೆಯರು ಎಷ್ಟರ ಮಟ್ಟಿಗೆ ಪುರುಷರಿಗಿಂತ ಅಧಿಕವಾಗಿದ್ದಾರೆಂದರೆ ಸ್ವರ್ಗದಲ್ಲಿ ಪುರುಷರ ಎರಡು ಪಟ್ಟು ಇದ್ದೂ ಸಹ ನರಕದಲ್ಲೂ ಅವರೇ ಹೆಚ್ಚಾಗಿರುತ್ತಾರೆ.

ಇತರ ಕೆಲವು ಉಲಮಾಗಳು ಹೇಳುತ್ತಾರೆ: ಈ ಮೇಲಿನ ಹದೀಸ್‍ಗಳಲ್ಲಿರುವಂತೆ ನರಕವಾಸಿಗಳಲ್ಲಿ ಹೆಚ್ಚಿನವರೂ ಮಹಿಳೆಯರಾಗಿದ್ದಾರೆ. ಸ್ವರ್ಗದಲ್ಲಿರುವ ಅಪ್ಸರೆಗಳನ್ನು ಸೇರಿಸಿದರೆ ಸ್ವರ್ಗದಲ್ಲೂ ಅವರ ಸಂಖ್ಯೆಯು ಹೆಚ್ಚಾಗುತ್ತದೆ.

ಇತರ ಕೆಲವು ಉಲಮಾಗಳು ಹೇಳುತ್ತಾರೆ: ಆರಂಭಿಕ ಸ್ಥಿತಿಯಲ್ಲಿ ನರಕವಾಸಿಗಳಲ್ಲಿ ಹೆಚ್ಚಿನವರೂ ಮಹಿಳೆಯರಾಗಿರುತ್ತಾರೆ. ಆದರೆ ತರುವಾಯ ಅವರ ಪೈಕಿ ಮುಸ್ಲಿಮ್ ಸ್ತ್ರೀಯರು ಶಿಕ್ಷೆ ಮುಗಿದು ಸ್ವರ್ಗಕ್ಕೆ ಬರುವಾಗ ಸ್ವರ್ಗದಲ್ಲಿ ಅವರ ಸಂಖ್ಯೆಯು ಹೆಚ್ಚಾಗುತ್ತದೆ.

ಅಲ್‍ಕುರ್ತುಬೀ ಹೇಳುತ್ತಾರೆ:

يَحْتَمِلُ أَنْ يَكُونَ هَذَا فِي وَقْتِ كَوْنِ النِّسَاءِ فِي النَّارِ، وَأَمَّا بَعْدَ خُرُوجِهِنَّ فِي الشَّفَاعَةِ وَرَحْمَةِ اللَّهِ تَعَالَى حَتَّى لَا يَبْقَى فِيهَا أَحَدٌ مِمَّنْ قَالَ لَا إِلَهَ إِلَّا اللَّهُ، فَالنِّسَاءُ فِي الْجَنَّةِ أَكْثَرُ.

“ಬಹುಶಃ ಇದು ಮಹಿಳೆಯರು ನರಕದಲ್ಲಿರುವ ಸಂದರ್ಭದ ಬಗ್ಗೆಯಾಗಿರ ಬಹುದು. ಆದರೆ ಶಫಾಅತ್‍ನಿಂದಾಗಿ ಮತ್ತು ಅಲ್ಲಾಹನ ರಹ್ಮತ್‍ನಿಂದಾಗಿ ಲಾಇಲಾಹ ಇಲ್ಲಲ್ಲಾಹ್ ಉಚ್ಛರಿಸಿದ ಯಾರೊಬ್ಬರೂ ನರಕದಲ್ಲಿ ಬಾಕಿಯಾಗದೆ ಹೊರಬರುವ ಸಂದರ್ಭದ ಬಗ್ಗೆ ಹೇಳುವುದಾದರೆ ಆಗ ಸ್ವರ್ಗದಲ್ಲಿ ಮಹಿಳೆಯರ ಸಂಖ್ಯೆಯು ಅಧಿಕವಾಗಿರುವುದು.”

ಒಟ್ಟಿನಲ್ಲಿ, ಮಹಿಳೆಯು ತಾನು ನರಕ ವಾಸಿಗಳಲ್ಲಿ ಸೇರಿದವಳಾಗದಂತೆ ಎಚ್ಚರ ವಹಿಸುವುದು ಅತ್ಯಾವಶ್ಯಕವಾಗಿದೆ.

• ಮಹಿಳೆಯು ಸ್ವರ್ಗವನ್ನು ಪ್ರವೇಶಿಸಿದರೆ ಅಲ್ಲಾಹು ಆಕೆಗೆ ಆಕೆಯ ಯೌವನ ಮತ್ತು ಕನ್ಯತ್ವವನ್ನು ಮರಳಿ ಕೊಡುವನು. ಯಾಕೆಂದರೆ ಪ್ರವಾದಿ(ﷺ)ರವರು ಹೇಳಿದರು:

 إِنَّ الْجَنَّةَ لَا يَدْخُلُهَا عَجُوزٌ… إِنَّ اللَّهَ تَعَالَى إِذَا أَدْخَلَهُنَّ الْجَنَّةَ حَوَّلَهُنَّ أَبْكَارًا

“ಖಂಡಿತವಾಗಿಯೂ ವೃದ್ಧರು ಸ್ವರ್ಗವನ್ನು ಪ್ರವೇಶಿಸಲಾರರು… ಅಲ್ಲಾಹು ಮಹಿಳೆ ಯರನ್ನು ಸ್ವರ್ಗಕ್ಕೆ ಪ್ರವೇಶ ಮಾಡಿಸಿದರೆ ಅವರನ್ನು ಕನ್ಯೆಯರನ್ನಾಗಿ ಮಾರ್ಪಡಿಸುವನು.” [ಅಬೂ ನುಐಮ್]

• ಕೆಲವು ಅಸರ್‍ಗಳಲ್ಲಿ ವರದಿಯಾಗಿರುವಂತೆ ಸ್ವರ್ಗಪ್ರವೇಶ ಪಡೆದ ಮಹಿಳೆಯರು ಅವರ ಇಬಾದತ್‍ಗಳಿಗೆ ಅನುಗುಣವಾಗಿ ಅಪ್ಸರೆಯರಿಗಿಂತಲೂ ಅನೇಕ ಪಟ್ಟು ಸುಂದರಿಯರಾಗಿರುವರು.

• ಇಬ್ನುಲ್ ಕಯ್ಯಿಮ್‍ರವರು ಹೇಳುತ್ತಾರೆ: ಸ್ವರ್ಗದಲ್ಲಿ ಒಬ್ಬರು ಇನ್ನೊಬ್ಬರ ಪತ್ನಿಯರನ್ನು ಸಮೀಪಿಸುವುದನ್ನು ಸಂಪೂರ್ಣ ತಡೆಹಿಡಿಯಲಾಗಿದೆ.

• ಕೊನೆಯದಾಗಿ, ಮಹಿಳೆಯರಿಗೆ ನೀಡುವ ನಸೀಹತ್ ಏನೆಂದರೆ, ಸ್ವರ್ಗವು ಪುರುಷರಿಗೆ ಅಲಂಕಾರಗೊಂಡು ಸಿದ್ಧವಾಗಿರುವಂತೆಯೇ ನಿಮಗೂ ಅಲಂಕಾರ ಗೊಂಡು ಸಿದ್ಧವಾಗಿ ನಿಂತಿದೆ. ಆಯುಷ್ಯವು ಬಹಳ ಕಡಿಮೆಯಾಗಿದೆ. ಇಹಲೋಕ ಜೀವನದ ಬಳಿಕವಿರುವ ಪರಲೋಕ ಜೀವನವು ಶಾಶ್ವತವಾಗಿದೆ. ಆದ್ದರಿಂದ ನೀವು ಸ್ವರ್ಗದ ಶಾಶ್ವತವಾಸಿಗಳಾಗಲು ಪ್ರಯತ್ನಿಸಬೇಕಾಗಿದೆ.

ಸ್ವರ್ಗವನ್ನು ಪಡೆಯುವುದಕ್ಕಾಗಿ ನೀವು ನೀಡಬೇಕಾದ ದಕ್ಷಿಣೆಯು ಈಮಾನ್ ಮತ್ತು ಸತ್ಕರ್ಮಗಳಾಗಿವೆಯೇ ಹೊರತು ಮಿಥ್ಯ ಆಕಾಂಕ್ಷೆಗಳಲ್ಲ. ಪ್ರವಾದಿ(ﷺ)ರವರು ಹೇಳಿದ ಮಾತನ್ನು ಜ್ಞಾಪಿಸಿರಿ:

 إِذَا صَلَّتِ الْمَرْأَةُ خَمْسَهَا، وَصَامَتْ شَهْرَهَا، وَحَصَنَتْ فَرْجَهَا، وَأَطَاعَتْ زَوْجَهَا، قِيلَ لَهَا: ادْخُلِي الْجَنَّةَ مِنْ أَيِّ أَبْوَابٍ شِئْتِ

“ಒಬ್ಬಳು ಮಹಿಳೆ ಐದು ವೇಳೆಯ ನಮಾಝ್ ನಿರ್ವಹಿಸಿದರೆ, ರಮದಾನ್ ತಿಂಗಳ ಉಪವಾಸ ಆಚರಿಸಿದರೆ, ತನ್ನ ಗುಹ್ಯಾಂಗವನ್ನು ಸಂರಕ್ಷಿಸಿದರೆ ಮತ್ತು ತನ್ನ ಪತಿಯ ಆಜ್ಞಾಪಾಲನೆ ಮಾಡಿದರೆ ಆಕೆಯೊಂದಿಗೆ ಹೇಳಲಾಗುವುದು: ನೀನು ಇಚ್ಛಿಸುವ ಬಾಗಿಲಿನಿಂದ ಸ್ವರ್ಗವನ್ನು ಪ್ರವೇಶಿಸು.” [ಅಹ್ಮದ್ ಮತ್ತು ಇಬ್ನ್ ಹಿಬ್ಬಾನ್]

ಫಿತ್ನದೆಡೆಗೆ ಮತ್ತು ನಿಮ್ಮ ನಾಶದೆಡೆಗೆ ಆಹ್ವಾನಿಸುವವರ ಬಗ್ಗೆ ಸಂಪೂರ್ಣ ಎಚ್ಚರವಾಗಿರಿ. ಅವರು ಬಯಸುವುದು ನಿಮ್ಮ ನಾಶವನ್ನಾಗಿದೆ. ಸ್ವರ್ಗದಿಂದ ನಿಮ್ಮನ್ನು ತಿರುಗಿಸಿ ಬಿಡುವುದನ್ನಾಗಿದೆ. ಈ ವಿಮೋಚಕರ ಮತ್ತು ವಿಮೋಚಕಿಯರ ಬಣ್ಣದ ಮಾತುಗಳಿಗೆ ಮರುಳಾಗದಿರಿ. ಅವರು ನಿಮ್ಮನ್ನು ವಿಮೋಚನೆಗೊಳಿಸಬಯಸುವುದು ಸ್ವರ್ಗದಿಂದಾಗಿದೆ. ಅದೇ ರೀತಿ ಚಾನಲ್‍ಗಳಲ್ಲಿ ಪ್ರತ್ಯಕ್ಷರಾಗುವವರ ಬಗ್ಗೆಯೂ ಎಚ್ಚರವಾಗಿರಿ. ಅವರು ನಿಮ್ಮಿಂದ ಬಯಸುವುದು ನೀವೂ ಅವರಂತೆಯೇ ಆಗಬೇಕು ಎಂಬುದನ್ನಾಗಿದೆ.

ಮುಸ್ಲಿಮ್ ಸ್ತ್ರೀಯರು ಅನುಗ್ರಹಪೂರ್ಣವಾದ ಸ್ವರ್ಗಲೋಕವನ್ನು ಪ್ರವೇಶಿಸುವಂತೆ ಅಲ್ಲಾಹು ಮಾಡಲಿ. ಅಲ್ಲಾಹು ಅವರನ್ನು ಮಾರ್ಗದರ್ಶನ ನೀಡುವವರನ್ನಾಗಿಯೂ ಮಾರ್ಗದರ್ಶನ ಪಡೆದವರನ್ನಾಗಿಯೂ ಮಾಡಲಿ. ಸ್ತ್ರೀ ವಿಮೋಚನೆ (ಸ್ತ್ರೀ ನಾಶ)ಯೆಡೆಗೆ ಕರೆ ನೀಡುವ ಮನುಷ್ಯ ಶೈತಾನರ ಕೆಡುಕಿನಿಂದ ಅಲ್ಲಾಹು ಅವರನ್ನು ಕಾಪಾಡಲಿ. ಆಮೀನ್.

وَصَلَّى اللهُ وَسَلَّم عَلَى نَبِيِّنَا مُحَمَّدِِ وَعَلى آلِهِ وَصَحْبِهِ أجْمَعِين .

ಅರಿಯಲೇಬೇಕಾದ ಮನುಕುಲದ ಪ್ರವಾದಿ(ﷺ)ರ ಜೀವನ ಮತ್ತು ಸಂದೇಶ – 8

ಅರಿಯಲೇಬೇಕಾದ ಮನುಕುಲದ ಪ್ರವಾದಿ(ﷺ)ರ ಜೀವನ ಮತ್ತು ಸಂದೇಶ – 8

ಪರಮದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಲ್ಲಿ
ಪ್ರವಾದಿ ಮುಹಮ್ಮದ್(ﷺ)ರವರನ್ನು ತಿಳಿಯಿರಿ

اعرف نبيك ﷺ

ಪ್ರವಾದಿ(ﷺ)ರವರ ಆರಾಧನೆಗಳು ಮತ್ತು ಜೀವನ:

ಆಇಶಾ(ರ)ರವರುಹೇಳುತ್ತಾರೆ: “ಪ್ರವಾದಿ(ﷺ)ರ ವರು ತಮ್ಮ ಕಾಲು ಬಾತು ಹೋಗುವ ವರೆಗೆ ನಿಂತು ನಮಾಝ್ ನಿರ್ವಹಿಸುತ್ತಿದ್ದರು’’(ಬುಖಾರಿ). ಇಬ್ನ್ ಉಮರ್(ರ)ರವರು ಹೇಳುತ್ತಾರೆ: ಪ್ರವಾದಿ(ﷺ)ರವರಿ ಗೆ ಒಮ್ಮೆ ಹಸಿವನ್ನು ತಣಿಸಲು ಒಂದು ಒಣ ಖರ್ಜೂರ ಕೂಡಾ ಲಭಿಸಲಿಲ್ಲ.’’ ಜೀವಿಸುತ್ತಿದ್ದವರ ಮತ್ತು ಮರಣಗೊಂಡವರ ಮುಖಂಡರಾದ ಪ್ರವಾದಿ (ﷺ)ರವರು ಇಹಲೋಕದಲ್ಲಿ ಕಷ್ಟ-ನಷ್ಟವಾ ದವುಗಳ ಬಗ್ಗೆ ಯೋಚಿಸಿ ದುಃಖಪಡಲಿಲ್ಲ. ನಮಗೆ ಪ್ರವಾದಿ (ﷺ)ರವರ ಆದರ್ಶದೆಡೆಗೆ ಮಾರ್ಗದರ್ಶನ ನೀಡಿದ ಅಲ್ಲಾಹನಿಗೆ ಸರ್ವಸ್ತುತಿಗಳು. ಪ್ರವಾದಿ(ﷺ) ರವರನ್ನು ಅನುಸರಿಸಲು ಮತ್ತು ಹಿಂಬಾಲಿಸಲು ಅಲ್ಲಾಹನು ನಮಗೆ ತೌಫೀಖ್ ನೀಡಿ ಅನುಗ್ರಹಿಸಲಿ. ಆವಿೂನ್.

ಮುಖ್ಯ ಘಟನೆಗಳು:

• ಇಸ್ರಾಅï ಮತ್ತು ಮಿಅïರಾಜ್. ಮದೀನಾಗೆ ಹಿಜಿರ ಹೋಗುವುದಕ್ಕಿಂತ ಮೂರು ವರ್ಷ ಮುಂಚೆ ನಡೆಯಿತು. ಐದು ಹೊತ್ತಿನ ನಮಾಝ್ ಖಡ್ಡಾಯ ಗೊಳಿಸಿರುವುದು ಈ ಸಂದರ್ಭದಲ್ಲಾಗಿದೆ.

• ಹಿಜಿರದ ಒಂದನೆ ವರ್ಷ: ಮದೀನಾ ಮಸೀದಿ ನಿರ್ಮಾಣ.

• ಎರಡನೆ ವರ್ಷ : ಬದ್ರ್ ಯುದ್ಧ, ಈ ಯುದ್ಧ ದಲ್ಲಿ ಮುಸ್ಲಿಮರನ್ನು ಉನ್ನತಿಗೇರಿಸ ಲಾಯಿತು, ಸತ್ಯನಿಷೇಧಿಗಳಿಗೆ ವಿರುದ್ಧ ಸಹಾಯವು ಲಭಿಸಿತು.

• ಮೂರನೆ ವರ್ಷ: ಉಹ್ದ್ ಯುದ್ಧ, ಅನುಚರ ರಲ್ಲಿ ಕೆಲವರು ಪ್ರವಾದಿ(ﷺ)ರವರ ಆದೇಶ ವನ್ನು ಕಡೆಗಣಿಸಿ, ಗನೀಮತ್ ಸೊತ್ತನ್ನು ಆಗ್ರಹಿಸಿದ ಕಾರಣದಿಂದ ಮುಸ್ಲಿಮರಿಗೆ ಈ ಯುದ್ಧದಲ್ಲಿ ಸೋಲು ಅನುಭವಿಸ ಬೇಕಾಯಿತು.

• ನಾಲ್ಕನೆ ವರ್ಷ: ಬನೂ ನಳೀರ್ ಯುದ್ಧ, ಮುಸ್ಲಿಮರ ಮತ್ತು ಬನೂ ನಳೀರ್ ಗೋತ್ರದ ನಡುವೆ ಮಾಡಲಾದ ಒಪ್ಪಂದವನ್ನು ಬನೂ ನಳೀರ್ ಗೋತ್ರದವರು ಉಲ್ಲಂಘಿಸಿದ ಕಾರಣ ದಿಂದ ಪ್ರವಾದಿ(ﷺ)ರವರು ಯಹೂದಿ ಗಳನ್ನು ಅಲ್ಲಿಂದ ಹೊರಹಾಕಿದರು.

• ಐದನೆ ವರ್ಷ: ಬನೂ ಮುಝ್‍ತಲಕ್, ಅಹ್‍ಝಾಬ್, ಬನೂ ಖುರೈಳ ಮುಂತಾದ ಯುದ್ಧಗಳು.

• ಆರನೆ ವರ್ಷ: ಹುದೈಬಿಯಾ ಒಪ್ಪಂದ, ಮದ್ಯಪಾನವನ್ನು ಪೂರ್ಣವಾಗಿ ವಿರೋಧಿಸ ಲ್ಪಟ್ಟದ್ದೂ ಈ ವರ್ಷವೇ ಆಗಿದೆ.

• ಏಳನೆ ವರ್ಷ: ಖೈಬರ್ ಯುದ್ಧ. ಪ್ರವಾದಿ(ﷺ)ರವರು ಮತ್ತು ಸ್ವಹಾಬಿಗಳು ಮಕ್ಕಾಗೆ ತೆರಳಿ ಉಮ್ರಾ ನಿರ್ವಹಿಸಿರುವುದು ಇದೇ ವರ್ಷ. ಹುಯಯಿರ ಮಗಳು ಸ್ವಫಿಯ್ಯಾ (ರ)ರವರನ್ನು ಪ್ರವಾದಿ(ﷺ)ರವರು ವಿವಾಹ ವಾಗಿರುವುದೂ ಇದೇ ವರ್ಷ.

• ಎಂಟನೆ ವರ್ಷ: ಮುಸ್ಲಿಮರ ಮತ್ತು ರೋಮರ ಮಧ್ಯೆ ನಡೆದ ಮುತ್‍ಅಃ ಯುದ್ಧ, ಮಕ್ಕಾ ವಿಜಯ. ಥಖೀಫ್, ಹವಾಸಿಲ್ ಮುಂತಾದ ಗೊತ್ರಗಳಿಗೆ ವಿರುದ್ಧವಾಗಿ ಹುನೈನ್ ಯುದ್ಧ ನಡೆದಿರುವುದೂ ಈ ವರ್ಷವೇ.

• ಒಂಬತ್ತನೆ ವರ್ಷ: ಪ್ರವಾದಿ(ﷺ)ರವರ ಕೊನೆಯ ಯುದ್ಧವಾದ ತ್ವಬೂಕ್ ಯುದ್ಧ. ಈ ವರ್ಷದ ಲ್ಲಿ ಪ್ರವಾದಿ(ﷺ)ರವರ ಬಳಿಗೆ ಅನೇಕ ಗುಂಪು ಗಳು ಬಂದು ತಂಡೋಪತಂಡವಾಗಿ ಇಸ್ಲಾಮ್ ಸ್ವೀಕರಿಸಿದರು. ಆದುದರಿಂದ ಈ ವರ್ಷಕ್ಕೆ ತಂಡಗಳ(ಸಂಘಗಳ) ವರ್ಷ ಎಂಬ ಹೆಸರು ಬಂದಿದೆ.

• ಹತ್ತನೆ ವರ್ಷ: ಪ್ರವಾದಿ(ﷺ)ರವರ ವಿದಾಯ ಹಜ್ಜ್(ಹಜ್ಜತುಲ್ ವಿದಾಅï). ಈ ವರ್ಷ ಪ್ರವಾದಿ(ﷺ)ರವರ ಜೊತೆಯಲ್ಲಿ ಒಂದು ಲಕ್ಷ ಮಂದಿ ಹಜ್ಜ್ ನಿರ್ವಹಿಸಿದರು.

• ಹನ್ನೊಂದನೆ ವರ್ಷ: ಪ್ರವಾದಿ(ﷺ)ರವರ ಮರಣ. ಅದು ರಬೀಉಲ್ ಅವ್ವಲ್ ತಿಂಗಳ ಸೋಮವಾರ ದಿನವಾಗಿತ್ತು. ಆದರೆ ರಬೀಉಲ್ ಅವ್ವಲ್ ಎಷ್ಟರಂದು ಎಂಬ ವಿಷಯದಲ್ಲಿ ಭಿನ್ನಾಭಿಪ್ರಾಯವಿದೆ.

• ಪ್ರವಾದಿ(ﷺ)ರವರಿಗೆ ಅಂದು 63 ವರ್ಷ ಪ್ರಾಯವಾಗಿತ್ತು. ಪ್ರವಾದಿತ್ವಕ್ಕೆ ಮುಂಚೆ 40 ವರ್ಷ ಪ್ರಾಯ, ಪ್ರವಾದಿತ್ವದ ನಂತರ ಹದಿಮೂರು ವರ್ಷ ಮಕ್ಕಾದಲ್ಲೂ ಹತ್ತು ವರ್ಷ ಮದೀನಾದಲ್ಲೂ ಜೀವಿಸಿದರು. ಪ್ರವಾದಿ (ﷺ)ರವರ ಮೇಲೆ ಶಾಂತಿ ಮತ್ತು ಸಮಾಧಾನ ಸದಾ ವರ್ಷಿಸುತ್ತಿರಲಿ. ಆಮೀನ್.

وصلى الله وسلم على رسول الله وعلى آله وصحبه أجمعين

ದೇವ ಪರಿಕಲ್ಪನೆ ಪ್ರಮುಖ ಧರ್ಮಗಳಲ್ಲಿ ಭಾಗ-7 (ಕ್ರೈಸ್ತ ಧರ್ಮದಲ್ಲಿ)

ದೇವ ಪರಿಕಲ್ಪನೆ ಪ್ರಮುಖ ಧರ್ಮಗಳಲ್ಲಿ ಭಾಗ-7 (ಕ್ರೈಸ್ತ ಧರ್ಮದಲ್ಲಿ)

ದೇವ ಪರಿಕಲ್ಪನೆ ಕ್ರೈಸ್ತ ಧರ್ಮದಲ್ಲಿ

ಕ್ರೈಸ್ತ ಧರ್ಮವು ಒಂದು ಸೆಮಿಟಿಕ್ ಧರ್ಮವಾಗಿದೆ. ಜಾಗತಿಕವಾಗಿ ತನಗೆ ಎರಡು ಬಿಲಿಯಗಿಂತಲೂ ಹೆಚ್ಚು ಅನುಯಾಯಿಗಳಿದ್ದಾರೆಂದು ಅದು ವಾದಿಸುತ್ತದೆ. ಕ್ರೈಸ್ತ ಧರ್ಮವು ತನ್ನನ್ನು ಯೇಸು ಕ್ರಿಸ್ತ [ಈಸಾ(ರ)]ರವರ ಹೆಸರಿನೊಂದಿಗೆ ಸೇರಿಸುತ್ತದೆ. ಯೇಸು [ಈಸಾ(ರ)] ಇಸ್ಲಾಮಿನಲ್ಲಿ ಓರ್ವ ಗೌರವಾನ್ವಿತ ಪ್ರವಾದಿಯಾಗಿದ್ದಾರೆ. ಯೇಸು [ಈಸಾ(ರ)] ರವರನ್ನು ನಂಬುವ ಕ್ರೈಸ್ತೇತರ ಧರ್ಮವೊಂದಿದ್ದರೆ ಅದು ಇಸ್ಲಾಮ್ ಮಾತ್ರ.

ಕ್ರೈಸ್ತ ಧರ್ಮದಲ್ಲಿ ದೇವ ಪರಿಕಲ್ಪನೆಯನ್ನು ಚರ್ಚಿಸುವುದಕ್ಕೆ ಮೊದಲು ನಾವು ಇಸ್ಲಾಮಿನಲ್ಲಿ ಯೇಸು [ಈಸಾ(ರ)]ರಿಗಿರುವ ಪದವಿಯನ್ನು ಕಂಡುಕೊಳ್ಳೋಣ:
  1. ಯೇಸು [ಈಸಾ(ರ)]ರವರ ಮೇಲೆ ನಂಬಿಕೆಯಿಡುವುದನ್ನು ಕಡ್ಡಾಯಗೊಳಿಸಿದ ಏಕೈಕ ಕ್ರೈಸ್ತೇತರ ಧರ್ಮ ಇಸ್ಲಾಮ್ ಆಗಿದೆ. ಯೇಸು [ಈಸಾ(ರ)]ರವರ ಮೇಲೆ ನಂಬಿಕೆಯಿಡದ ಮುಸ್ಲಿಮನು ಎಂದಿಗೂ ಮುಸ್ಲಿಮನಾಗಲು ಸಾಧ್ಯವಿಲ್ಲ.

  2. ಅಲ್ಲಾಹನ ಪ್ರಮುಖ ಸಂದೇಶವಾಹಕರುಗಳಲ್ಲಿ ಅವರು ಒಬ್ಬರಾಗಿದ್ದಾರೆಂದು (ಮುಸ್ಲಿಮರಾದ) ನಾವು ನಂಬುತ್ತೇವೆ.

  3. ಅವರು ಯಾವೊಬ್ಬ ಗಂಡಿನ ದೈಹಿಕ ಸಂಪರ್ಕವೂ ಇಲ್ಲದೆ ಅದ್ಭುತವಾಗಿ ಜನಿಸಿದರೆಂದು ನಾವು ನಂಬುತ್ತೇವೆ. ಇದನ್ನು ಆಧುನಿಕ ಕ್ರೈಸ್ತರಲ್ಲಿ ಹೆಚ್ಚಿನವರು ನಂಬುವುದಿಲ್ಲ.

  4. ಅವರು ದೇವನ ಅನುಮತಿಯೊಂದಿಗೆ ಸತ್ತವರನ್ನು ಜೀವಂತಗೊಳಿಸಿ ದರೆಂದು ನಾವು ನಂಬುತ್ತೇವೆ.

  5. ಅವರು ದೇವನ ಅಪ್ಪಣೆಯೊಂದಿಗೆ ಹುಟ್ಟು ಕುರುಡನನ್ನು ಮತ್ತು ಕುಷ್ಠರೋಗಿಯನ್ನು ಗುಣಪಡಿಸಿದರೆಂದು ನಾವು ನಂಬುತ್ತೇವೆ.

ಮುಸ್ಲಿಮರು ಮತ್ತು ಕ್ರೈಸ್ತರು ಇಬ್ಬರೂ ಯೇಸು [ಈಸಾ(ರ)]ರವರನ್ನು ಪ್ರೀತಿಸುತ್ತಾರೆ ಮತ್ತು ಗೌರವಿಸುತ್ತಾರೆ ಎಂದಾದರೆ ಅವರನ್ನು ಪರಸ್ಪರ ಭಿನ್ನಗೊಳಿಸುವ ವಿಷಯವು ಯಾವುದೆಂದು ಯಾರಾದರೂ ಕೇಳಬಹುದು? ಇಸ್ಲಾಮ್ ಮತ್ತು ಕ್ರೈಸ್ತ ಧರ್ಮದ ಮಧ್ಯೆಯಿರುವ ಪ್ರಮುಖ ವ್ಯತ್ಯಾಸವೇನೆಂದರೆ ಕ್ರೈಸ್ತರು ಯೇಸು [ಈಸಾ(ರ)]ರಿಗೆ ‘ದೈವಿಕತೆ’ಯನ್ನು ಆರೋಪಿಸುತ್ತಾರೆ. ಆದರೆ ಕ್ರೈಸ್ತ ಧರ್ಮಗ್ರಂಥಗಳನ್ನು ಅಧ್ಯಯನ ಮಾಡಿದರೆ ಖಂಡಿತವಾಗಿಯೂ ಯೇಸು [ಈಸಾ(ರ)]ರವರು ಎಂದೂ ‘ದೈವತ್ವ’ವನ್ನು ವಾದಿಸಿರಲಿಲ್ಲವೆಂದು ಕಂಡುಬರುತ್ತದೆ. ‘ನಾನು ದೇವನಾಗಿದ್ದೇನೆ ಅಥವಾ ನನ್ನನ್ನು ಆರಾಧಿಸಿರಿ’ ಎಂದು ಯೇಸು [ಈಸಾ(ರ)]ರವರು ಹೇಳಿದಂತಹ ಒಂದೇ ಒಂದು ಸ್ಪಷ್ಟವಾದ ವಚನವು ಸಂಪೂರ್ಣ ಬೈಬಲ್‍ನಲ್ಲಿ ಎಲ್ಲೂ ಇಲ್ಲ. ಆದರೆ ಯೇಸು [ಈಸಾ(ರ)]ರವರು ಇದಕ್ಕೆ ವಿರುದ್ಧವಾಗಿರುವುದನ್ನು ಬೋಧಿಸಿದ್ದರು ಎಂದು ಸೂಚಿಸುವ ಅನೇಕ ವಚನಗಳು ಬೈಬಲ್‍ನಲ್ಲಿವೆ. ಅವುಗಳಲ್ಲಿ ಕೆಲವನ್ನು ನೋಡಿರಿ:

“ತಂದೆಯು ನನಗಿಂತ ದೊಡ್ಡವನು.” (ಯೋಹಾನ 14/28)

“ನಾನು ದೇವರ ಆತ್ಮನ ಬಲದಿಂದಲೇ ದೆವ್ವಗಳನ್ನು ಬಿಡಿಸುವದಾದರೆ…” (ಮತ್ತಾಯ 12/28)

“ನಾನು ದೇವರ ಬಲದಿಂದಲೇ ದೆವ್ವಗಳನ್ನು ಬಿಡಿಸುವದಾದರೆ…” (ಲೂಕ 11/20)

“ನನ್ನಷ್ಟಕ್ಕೆ ನಾನೇ ಏನೂ ಮಾಡಲಾರೆನು; ತಂದೆ ಹೇಳಿದ್ದನ್ನು ಕೇಳಿ ನ್ಯಾಯ ತೀರಿಸುತ್ತೇನೆ; ಮತ್ತು ಸ್ವಂತ ಚಿತ್ತ ನೆರವೇರಬೇಕೆಂದು ಅಪೇಕ್ಷಿಸದೆ ನನ್ನನ್ನು ಕಳುಹಿಸಿದಾತನ ಚಿತ್ತ ನೆರವೇರಬೇಕೆಂದು ಅಪೇಕ್ಷಿಸುವದರಿಂದ ನಾನು ಮಾಡುವ ತೀರ್ಪು ನ್ಯಾಯವಾಗಿದೆ.” (ಯೋಹಾನ 5/30)

ಯೇಸು ಕ್ರಿಸ್ತ [ಈಸಾ(ರ)]ರವರ ದೌತ್ಯ – ಅವರು ಧರ್ಮಶಾಸ್ತ್ರವನ್ನು ನೆರವೇರಿಸಲು ಬಂದವರಾಗಿದ್ದರು.

ಯೇಸು [ಈಸಾ(ರ)] ಎಂದೂ ದೈವಿಕತೆಯನ್ನು ವಾದಿಸಿದವರಾಗಿರಲಿಲ್ಲ. ಅವರು ತನ್ನ ದೌತ್ಯದ ಪ್ರಾಮುಖ್ಯತೆಯನ್ನು ವಿವರಿಸಿದ್ದರು. ಅವರು ಚಾಲ್ತಿಯಲ್ಲಿದ್ದ ಮೋಶೆಯ ಧರ್ಮಶಾಸ್ತ್ರವನ್ನು ದೃಢೀಕರಿಸಲು ಬಂದವರಾಗಿದ್ದರು. ಮತ್ತಾಯನ ಸುವಾರ್ತೆಯಲ್ಲಿರುವ ಈ ಕೆಳಗಿನ ವಚನದಿಂದ ಇದು ಸ್ಪಷ್ಟವಾಗಿ ತಿಳಿದುಬರುತ್ತದೆ:

“ಮೋಶೆಯ ಧರ್ಮಶಾಸ್ತ್ರವನ್ನಾಗಲಿ ಪ್ರವಾದಿಗಳ ವಚನಗಳನ್ನಾಗಲಿ ತೆಗೆದುಹಾಕುವದಕ್ಕೆ ನಾನು ಬಂದೆನೆಂದು ನೆನಸಬೇಡಿರಿ. ತೆಗೆದುಹಾಕುವದಕ್ಕೆ ಬಂದಿಲ್ಲ; ನೆರವೇರಿಸುವದಕ್ಕೆ ಬಂದಿದ್ದೇನೆ. ನಿಮಗೆ ಸತ್ಯವಾಗಿ ಹೇಳುತ್ತೇನೆ- ಆಕಾಶವೂ ಭೂಮಿಯೂ ಅಳಿದು ಹೋಗುವ ತನಕ ಧರ್ಮಶಾಸ್ತ್ರವೆಲ್ಲಾ ನೆರವೇರಿದ ಹೊರತು ಅದರೊಳಗಿಂದ ಒಂದು ಸೊನ್ನೆಯಾದರೂ ಒಂದು ಗುಡುಸಾದರೂ ಅಳಿದುಹೋಗಲಾರದು. ಆದದರಿಂದ ಈ ಸಣ್ಣ ಸಣ್ಣ ಆಜ್ಞೆಗಳಲ್ಲಿಯಾದರೂ ಒಂದನ್ನು ಮೀರಿ ಜನರಿಗೂ ಹಾಗೆ ಮೀರುವದಕ್ಕೆ ಬೋಧಿಸುವವನು ಪರಲೋಕರಾಜ್ಯದಲ್ಲಿ ಬಹಳ ಚಿಕ್ಕವನೆನಿಸಿಕೊಳ್ಳುವನು; ಆದರೆ ತಾನೇ ಆ ಆಜ್ಞೆಗಳಂತೆ ನಡೆದುಕೊಂಡು ಜನರಿಗೂ ಹಾಗೆ ನಡೆಯ ಬೇಕೆಂದು ಬೋಧಿಸುವವನು ಪರಲೋಕರಾಜ್ಯದಲ್ಲಿ ದೊಡ್ಡವನೆನಿಸಿಕೊಳ್ಳುವನು.” (ಮತ್ತಾಯ 5/17-19)

ಯೇಸು [ಈಸಾ(ರ)] ರನ್ನು ಕಳುಹಿಸಿದ್ದು ದೇವನಾಗಿದ್ದನು

ಯೇಸು [ಈಸಾ(ರ)]ರವರ ದೌತ್ಯದಲ್ಲಿದ್ದ ‘ಪ್ರವಾದಿತ್ವ’ದ ಗುಣವನ್ನು ಈ ಕೆಳಗಿನ ವಚನಗಳಲ್ಲಿ ಕಾಣಬಹುದಾಗಿದೆ:

“ನೀವು ಆಲಿಸುವ ಮಾತು ನನ್ನದಲ್ಲ, ನನ್ನನ್ನು ಕಳುಹಿಸಿದ ತಂದೆಯ ಮಾತೇ.” (ಯೋಹಾನ 14/24)

“ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವುದೇ ನಿತ್ಯಜೀವವು.” (ಯೋಹಾನ 17/3)

ತನ್ನ ಕುರಿತಾಗಿರುವ ಅತ್ಯಂತ ಚಿಕ್ಕ ದೈವಿಕತೆಯನ್ನೂ ಯೇಸು [ಈಸಾ(ರ)]ರವರು ನಿರಾಕರಿಸಿದ್ದರು. ಈ ಕೆಳಗಿನ ವಚನವನ್ನು ನೋಡಿರಿ:

“ಆತನು ಹೊರಟು ದಾರಿಹಿಡಿದು ಹೋಗುವಾಗ ಒಬ್ಬನು ಈಡುತ್ತಾ ಆತನ ಎದುರಿಗೆ ಬಂದು ಮೊಣಕಾಲೂರಿ- ಒಳ್ಳೇ ಭೋಧಕನೇ, ನಾನು ನಿತ್ಯಜೀವಕ್ಕೆ ಬಾಧ್ಯಸ್ಥನಾಗಬೇಕಾದರೆ ಏನು ಮಾಡಬೇಕೆಂದು ಆತನನ್ನು ಕೇಳಲಾಗಿ ಯೇಸು ಅವನಿಗೆ- ನನ್ನನ್ನು ಒಳ್ಳೆಯವನೆಂದು ಯಾಕೆ ಹೇಳುತ್ತೀ? ದೇವರೊಬ್ಬನೇ ಹೊರತು ಮತ್ತಾವನೂ ಒಳ್ಳೆಯವನಲ್ಲ.” (ಮಾರ್ಕ 10/17, 18)

ಯೇಸುವಿನ ದೈವಿಕತೆ ಮತ್ತು ಯೇಸುವಿನ ತ್ಯಾಗದ ಮೂಲಕ ಮೋಕ್ಷ ಎಂಬ ಕ್ರೈಸ್ತ ಸಿದ್ಧಾಂತವನ್ನು ಈ ಮೇಲಿನ ಬೈಬಲ್ ವಚನಗಳು ಖಂಡಿಸುತ್ತವೆ. ಮತ್ತಾಯ 5/17-20ರಲ್ಲಿರುವ ಪ್ರಕಾರ ಮೋಶೆಯ ಧರ್ಮಶಾಸ್ತ್ರವನ್ನು ನೆರವೇರಿಸುವವನು ಮೋಕ್ಷವನ್ನು ಪಡೆಯುವನು ಎಂದು ಯೇಸು [ಈಸಾ(ರ)]ರವರು ಹೇಳಿದ್ದಾರೆ.

ನಜರೇತದ ಯೇಸು – ದೇವನು ಅನುಮೋದಿಸಿದ ವ್ಯಕ್ತಿ

ಯೇಸು [ಈಸಾ(ರ)] ರವರು ಪ್ರವಾದಿಯಾಗಿದ್ದರೆಂಬ ಇಸ್ಲಾಮಿನ ದೃಷ್ಟಿಕೋನವನ್ನು ಈ ಕೆಳಗಿನ ವಚನವು ಬೆಂಬಲಿಸುತ್ತದೆ:

“ಇಸ್ರಾಯೇಲ್ ಜನರೇ, ನನ್ನ ಮಾತುಗಳನ್ನು ಲಾಲಿಸಿರಿ- ನಜರೇತಿನ ಯೇಸು ಇದ್ದನಲ್ಲಾ, ದೇವರು ನಿಮಗೂ ತಿಳಿದಿರುವಂತೆ ಆತನ ಕೈಯಿಂದ ಮಹತ್ತುಗಳನ್ನೂ ಅದ್ಭುತಗಳನ್ನೂ ಸೂಚಕಕಾರ್ಯಗಳನ್ನೂ ನಿಮ್ಮಲ್ಲಿ ನಡಿಸಿ ಆತನನ್ನು ತನಗೆ ಮೆಚ್ಚಿಕೆಯಾದವನೆಂದು ನಿಮಗೆ ತೋರಿಸಿಕೊಟ್ಟನು.” (ಅಪೋಸ್ತಲರ ಕೃತ್ಯಗಳು 2/22)

ಮೊಟ್ಟಮೊದಲನೆಯ ಆಜ್ಞೆಯು ದೇವನು ಏಕೈಕನು ಎಂದಾಗಿದೆ

‘ತ್ರಿಯೇಕತ್ವ’ ಎಂಬ ಕ್ರೈಸ್ತ ನಂಬಿಕೆಯನ್ನು ಬೈಬಲ್ ಬೆಂಬಲಿಸುವುದಿಲ್ಲ. ಎಲ್ಲಾ ಆಜ್ಞೆಗಳಲ್ಲಿ ಮೊದಲನೆಯದು ಯಾವುದೆಂದು ಓರ್ವ ಶಾಸ್ತ್ರಿಯು ಯೇಸುವಿನೊಂದಿಗೆ ಕೇಳಿದಾಗ ಅವರು ಮೋಶೆ ಹೇಳಿದ ಅದೇ ಉತ್ತರವನ್ನು ನೀಡಿದರು:

“Shama Israelu adonai ila hayno adna ikhad”

 “ಇಸ್ರಾಯೇಲ್ ಜನವೇ ಕೇಳು, ನಮ್ಮ ದೇವರಾದ ಕರ್ತನು ಒಬ್ಬನೇ ದೇವರು.” (ಮಾರ್ಕ 12/29)

ಅರಿಯಲೇಬೇಕಾದ ಮನುಕುಲದ ಪ್ರವಾದಿ(ﷺ)ರ ಜೀವನ ಮತ್ತು ಸಂದೇಶ – 7

ಅರಿಯಲೇಬೇಕಾದ ಮನುಕುಲದ ಪ್ರವಾದಿ(ﷺ)ರ ಜೀವನ ಮತ್ತು ಸಂದೇಶ – 7

ಪರಮದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಲ್ಲಿ
ಪ್ರವಾದಿ ಮುಹಮ್ಮದ್(ﷺ)ರವರನ್ನು ತಿಳಿಯಿರಿ

اعرف نبيك ﷺ

ಪ್ರವಾದಿ(ﷺ)ರವರ ಸ್ವಭಾವಗಳು:

ಪ್ರವಾದಿ(ﷺ)ವರು ಜನರಲ್ಲಿ ಅತ್ಯಂತ ಔದಾರ್ಯ ವಂತರಾಗಿದ್ದರು. ನಡತೆÉ ಮತ್ತು ಮಾತಿನಲ್ಲಿ ಸೌಮ್ಯತೆ, ಸತ್ಯಸಂಧತೆ ಹಾಗೂ ಕುಟುಂಬ ಮತ್ತು ಇತರರೊಂದಿಗೆ ಅತ್ಯಂತ ಮಾನ್ಯವಾಗಿ ವರ್ತಿಸುತ್ತಿದ್ದರು. ಪ್ರವಾದಿ (ﷺ)ರವರ ಸ್ವಭಾವದ ಬಗ್ಗೆ ಪವಿತ್ರ ಖುರ್‍ಆನ್ ಹೇಳುತ್ತದೆ:

وَإِنَّكَ لَعَلَى خُلُقٍ عَظِيمٍ

“ಖಂಡಿತವಾಗಿಯೂ ತಾವು ಸರ್ವಶ್ರೇಷ್ಠ ಸ್ವಭಾವ ದವರಾಗಿರುವಿರಿ’’(ಖಲಮ್:4).ಪ್ರವಾದಿ(ﷺ)ರವರು ಅತ್ಯ ಧಿಕ ದೈರ್ಯ ಶಾಲಿ ಹಾಗೂ ಮದುಮಗಳಿಗಿಂತ ಲಜ್ಜೆಯಿರುವವರಾಗಿದ್ದರು. ಉಡುಗೊರೆಗಳನ್ನು ಪಡೆಯು ತ್ತಲೂ ಕೊಡುತ್ತಲೂ ಇದ್ದರು. ಝಕಾತನ್ನು ಸ್ವೀಕರಿಸು ತ್ತಿರಲಿಲ್ಲ ಮತ್ತು ಅದರಿಂದ ತಿನ್ನುತ್ತಿರಲಿಲ್ಲ. ಸ್ವಂತಕ್ಕಾಗಿ ಒಮ್ಮೆಯೂ ಕೋಪ ಗೊಂಡಿಲ್ಲ. ಆದರೆ ಅಲ್ಲಾಹನಿಗಾಗಿ ಕೋಪಿಸುತ್ತಿದ್ದರು. ತನಗೆ ಲಭಿಸುವುದನ್ನು ತಿನ್ನುತ್ತಿದ್ದರು ಮತ್ತು ಕೊಡಲಾಗುವ ಯಾವೊಂದನ್ನೂ ಹಿಂತಿರುಗಿ ಸುತ್ತಿರಲಿಲ್ಲ. ಪ್ರವಾದಿ(ﷺ)ರವರು ಒರಗಿ ಕುಳಿತು ಆಹಾರ ಸೇವಿಸುತ್ತಿರಲಿಲ್ಲ. ಪ್ರವಾದಿ(ﷺ)ರವರ ಮನೆಯ ಲ್ಲಿ ಹಲವು ಬಾರಿ ಮೂರು ತಿಂಗಳ ವರೆಗೆ ಅಡುಗೆ ಮನೆಯ ಒಲೆಯು ಬೆಂಕಿ ಕಂಡಿರಲಿಲ್ಲ. ಪ್ರವಾದಿ(ﷺ) ರವರ ಮನೆಯಲ್ಲಿ ಅಷ್ಟು ಮಾತ್ರಕ್ಕೂ ದಾರಿದ್ರ್ಯವಾಗಿತ್ತು. ಪ್ರವಾದಿ(ﷺ)ರವರು ಬಡವರ ಜೊತೆಯಲ್ಲೂ, ರೋಗಿಗ ಳನ್ನು ಸಂದರ್ಶಿಸುತ್ತಲೂ, ಮಯ್ಯತನ್ನು ಅನುಗಮಿಸುತ್ತಲೂ ಇದ್ದರು.

ಪ್ರವಾದಿ(ﷺ)ರವರು ಸತ್ಯವನ್ನಲ್ಲದೆ ಹೇಳುತ್ತಿರಲಿಲ್ಲ. ತಮಾಷೆಗೂ ಸುಳ್ಳನ್ನು ಹೇಳುತ್ತಿರಲಿಲ್ಲ. ನಗುತ್ತಿದ್ದರು ಆದರೆ ಗಟ್ಟಿಯಾಗಿ ನಗುತ್ತಿರಲಿಲ್ಲ. ತನ್ನ ಕುಟುಂಬ ದೊಂದಿಗೆ ಕೆಲಸದಲ್ಲಿ ಸಹಕರಿಸುತ್ತಿದ್ದರು. ತಿರ್ಮಿದಿ ವರದಿ ಮಾಡಿದ ಹದೀಸ್‍ನಲ್ಲಿ ಹೀಗಿದೆ:

((عن عائشة قالت : قال رسول الله صلى الله عليه و سلم خيركم خيركم لأهله وأنا خيركم لأهلي)) (ترمذي)

ಆಇಶಾ(ರ)ರವರು ಹೇಳುತ್ತಾರೆ. ಪ್ರವಾದಿ(ﷺ) ರವರು ಹೇಳಿದರು: “ನಿಮ್ಮಲ್ಲಿ ಅತ್ಯುತ್ತಮರು ತಮ್ಮ ಕುಟುಂಬದವರೊಂದಿಗೆ ಅತ್ಯುತ್ತಮವಾದ ನಡತೆ ಹೊಂ ದಿದವರಾಗಿದ್ದಾರೆ. ನಾನು ನನ್ನ ಕುಟುಂಬದೊಂ ದಿಗೆ ಅತ್ಯುತ್ತಮವಾದ ನಡತೆ ಹೊಂದಿದವನಾ ಗಿದ್ದೇನೆ.’’ (ತಿರ್ಮಿದಿ)

((عَنْ أَنَسِ بْنِ مَالِكٍ قَالَ خَدَمْتُ رَسُولَ اللَّهِ -صلى الله عليه وسلم- عَشْرَ سِنِينَ وَاللَّهِ مَا قَالَ لِى أُفًّا قَطُّ وَلاَ قَالَ لِى لِشَىْءٍ لِمَ فَعَلْتَ كَذَا وَهَلاَّ فَعَلْتَ كَذَا)) (مسلم)

ಅನಸ್ ಬಿನ್ ಮಾಲಿಕ್()ರವರು ಹೇಳುತ್ತಾರೆ: “ನಾನು ಹತ್ತು ವರ್ಷ ಪ್ರವಾದಿ(ﷺ)ರವರಿಗೆ ಸೇವೆ ಸಲ್ಲಿಸಿದ್ದೇನೆ. ಆದರೆ ಒಮ್ಮೆಯೂ ನನ್ನಲ್ಲಿ ಛೇ ಎಂಬೊಂದು ಮಾತು ಹೇಳಿಲ್ಲ ಹಾಗೂ ನೀನ್ಯಾಕೆ ಹೀಗೆ ಮಾಡಿದೆ? ನೀನ್ಯಾಕೆ ಹಾಗೆ ಮಾಡಿದೆ? ನೀನ್ಯಾಕೆ ಹಾಗೆ ಮಾಡಿಲ್ಲ ? ಎಂದು ಕೇಳಿರಲಿಲ್ಲ!!!’’(ಮುಸ್ಲಿಂ) (ಸುಬ್ಹಾನಲ್ಲಾಹ್)

ಪ್ರವಾದಿ(ﷺ)ರವರು ಅನುಚರರೊಂದಿಗೆ ಅತ್ಯಧಿಕ ಅನುಕಂಪ ತೋರುವವರಾಗಿದ್ದರು. ತಮ್ಮ ಮೂಲಕ ಅಲ್ಲಾಹನು ಪ್ರಕಟಿಸಿದ ದೃಷ್ಟಾಂತಗಳನ್ನು ಜನತೆಗೆ ತೋರಿಸಿ ಕೊಟ್ಟರು. ಚಂದ್ರನನ್ನು ಸೀಳಲ್ಪಟ್ಟಿತು. ಬೆರಳುಗಳ ಮಧ್ಯೆದಿಂದ ನೀರು ಚಿಮ್ಮಿತು. ಖರ್ಜೂರದ ಮರ ಪ್ರವಾದಿ(ﷺ)ರವರೊಂದಿಗೆ ಬಿಕ್ಕಿ ಬಿಕ್ಕಿ ಅತ್ತಿದೆ. ಒಂಟೆ ಪ್ರವಾದಿ(ﷺ)ರವರಲ್ಲಿ ಆರೋಪ ಹೇಳಿದೆ. ಅಲ್ಲಾಹನು ತಿಳಿಸಿ ಕೊಟ್ಟ ಅದೃಶ್ಯ ವಿಷಯಗಳನ್ನು ಪ್ರವಾದಿ(ﷺ)ರವರು ಜನತೆಯ ಮುಂದಿಟ್ಟಾಗ ಅವುಗಳು ಹಾಗೆಯೇ ರುಜುವಾತಾಗಿದೆ.

ಪ್ರವಾದಿ(ﷺ)ರವರ ಶ್ರೇಷ್ಠತೆಗಳು:

ಜಾಬಿರ್(ರ)ರವರು ಹೇಳುತ್ತಾರೆ: ಪ್ರವಾದಿ(ﷺ) ರವರು ಹೇಳಿದರು: “ನನಗೆ ಐದು ಕಾರ್ಯಗಳನ್ನು ನೀಡಲಾಗಿದೆ. ನನಗಿಂತ ಮುಂಚೆ ಅದನ್ನು ಇನ್ಯಾರಿಗೂ ನೀಡಲಾಗಿಲ್ಲ. ನನ್ನ ಮತ್ತು ಶತ್ರುಗಳ ಮಧ್ಯೆ ಒಂದು ತಿಂಗಳ ಸಂಚಾರ ದೂರವಿದ್ದರೂ ಶತ್ರುಗಳಿಗೆ ಭಯ ನೀಡಿ ಅಲ್ಲಾಹನು ನನಗೆ ಸಹಾಯ ಮಾಡುವನು, ಭೂಮಿಯನ್ನು ನನಗೆ ಮಸೀದಿಯನ್ನಾಗಿಯೂ,ಶುದ್ಧೀಕರಿಸಲಿಕ್ಕಿರುವ ವಸ್ತುವಾಗಿಯೂ ಮಾಡಿ ಕೊಟ್ಟನು. ಆದುದರಿಂದ ನನ್ನ ಸಮುದಾಯದಲ್ಲಿ ಯಾರಿಗಾದರೂ ನಮಾಝಿನ ಸಮಯವಾದರೆ ಅವನು ನಮಾಝ್ ನಿರ್ವಹಿಸಲಿ. ಯುದ್ಧಾರ್ಜಿತ ಸೊತ್ತನ್ನು ಅಲ್ಲಾಹನು ನನಗೆ ಅನುವದನೀಯ ಗೊಳಿಸಿದನು. ನನಗೆ ಮುಂಚೆ ಯಾರಿಗೂ ಅದನ್ನು ಅನವದನೀಯ ಗೊಳಿಸಲಾಗಿಲ್ಲ. ಶಫಾಅತಿ(ಪರಲೋಕದಲ್ಲಿ ಶಿಫಾರಸ್ಸಿ) ಗಿರುವ ಅಧಿಕಾರ ವನ್ನೂ ನೀಡಿದನು. ಪ್ರತಿಯೊಂದು ಪ್ರವಾದಿಗಳನ್ನು ತಂತಮ್ಮ ಸಮುದಾಯದ ಕಡೆಗೆ ನಿಯೋಗಿಸಲಾಗಿದೆ. ಆದರೆ ನನ್ನನ್ನು ಸರ್ವ ಮನುಷ್ಯರಿ ಗಾಗಿ ನಿಯೋಗಿ ಸಲಾಗಿದೆ’’(ಬುಖಾರಿ).

ಅನಸ್(ರ)ರವರಿಂದ ವರದಿ: ಪ್ರವಾದಿ(ﷺ)ರವರು ನುಡಿದರು: “ಅಂತ್ಯ ದಿನದಂದು ಅತ್ಯಧಿಕ ಅನುಚರ ರಿರುವ ಪ್ರವಾದಿ ನಾನಾಗಿರುವೆನು, ಖಬರಿನಿಂದ ಪ್ರಥಮವಾಗಿ ಎದ್ದೇಳಿಸಲ್ಪಡುವುದೂ ನಾನಾಗಿರುವೆನು, ಮೊಟ್ಟಮೊದಲು ಶಫಾಅತ್ ಹೇಳುವವನು ನಾನು ಮತ್ತು ಮೊಟ್ಟಮೊದಲು ಶಫಾಅತ್ ಸ್ವೀಕರಿಸಲ್ಪಡುವುದೂ ನನ್ನದೇ’’(ಮುಸ್ಲಿಂ).

 (ಮುಂದುವರೆಯುತ್ತದೆ إن شاء الله‎‎)

Pin It on Pinterest

Share This

Please Share This

Share this post with your family & friends! ನಿಮ್ಮ ಕುಟುಂಬ ಹಾಗೂ ಗೆಳೆಯರೊಟ್ಟಿಗೆ ಈ ಸಂದೇಶವನ್ನು ಓದಲಿ!!

error: Alert: Content is protected !!
body { font-family: “Poppins”, sans-serif; }